tejaswi surya – Peepal Media

ನಗರ್ತಪೇಟೆ ಗಲಭೆಯಲ್ಲಿ ಹೊಸ ತಿರುವು : ವ್ಯಾವಹಾರಿಕ ಗಲಾಟೆಗೆ ಬಿಜೆಪಿಯ ಕೋಮು ಬಣ್ಣ – ವಿಡಿಯೋ ಸಾಕ್ಷಿ?
ಬೆಂಗಳೂರಿನ ನಗರ್ತ ಪೇಟೆಯ ಗಲ್ಲಿಯಲ್ಲಿ ನಡೆದ ಒಂದು ಸಣ್ಣ ವ್ಯಾವಹಾರಿಕ ಗಲಾಟೆ ಈಗ ಬಿಜೆಪಿ ಪಕ್ಷದ ನಾಯಕರ ಆಗಮನದಿಂದ ರಾಜಕೀಯ ಮತ್ತು ಕೋಮು ವಿವಾದಕ್ಕೆ ಕಾರಣವಾಗಿದೆ. ಸಧ್ಯ ಈ ವಿವಾದಕ್ಕೆ ಸಂಬಂಧಿಸಿದಂತೆ ಈಗ ವಿಡಿಯೋ ಸಾಕ್ಷಿ ಸಿಕ್ಕಿದ್ದು, ಬಿಜೆಪಿ ರಾಜಕೀಯ ಉದ್ದೇಶಿತ ಗಲಭೆ ಎಂಬ ಆರೋಪಕ್ಕೆ ಸಾಕ್ಷ್ಯ ಸಿಕ್ಕಂತಾಗಿದೆ.

ನಗರ್ತಪೇಟೆಯಲ್ಲಿ ನಡೆದಿರುವ ಕೋಮು ಗಲಭೆ ವಿಚಾರವಾಗಿ ಈಗ ಬಿಜೆಪಿ ಪಕ್ಷದ ಚಿಕ್ಕಪೇಟೆ ಶಾಸಕರೇ ಆಗಿರುವ ಉದಯ್ ಗರುಡಾಚಾರ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಒಂದು ಸಣ್ಣ ಗಲಾಟೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಶೋಭಾ ಕರಂದ್ಲಾಜೆಯಂತಹ ನಾಯಕರು ಈ ಮಟ್ಟಕ್ಕೆ ಬಿಂಬಿಸಬಾರದಿತ್ತು. ಇದು ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೇ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ಬಹಿರಂಗವಾಗಿ ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಚುನಾವಣಾ ನೀತಿ ಸಂಹಿತೆ ಇದ್ದರೂ ಕೋಮು ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ನೀತಿ ಸಂಹಿತೆಯನ್ನೂ ಉಲ್ಲಂಘನೆ ಮಾಡಿದ್ದಾರೆ ಸಂಸದ ತೇಜಸ್ವಿ ಸೂರ್ಯ. ಹೀಗಿರುವಾಗ ಸಾಮಾಜಿಕ ಸಂಘಟನೆಯೊಂದು ಚುನಾವಣಾ ಆಯೋಗದ ಮೆಟ್ಟಿಲೇರಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಹನುಮಾನ್ ಚಾಲಿಸ ಪಠಣಕ್ಕೆ ಕರೆ ನೀಡಿರುವುದು, ಗುಂಪು ಘರ್ಷಣೆಗೆ ಪ್ರಚೋದಿಸಿರುವುದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ.

ಇನ್ನು ಕಾಂಗ್ರೆಸ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿ ‘ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ. ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಬೇಡ ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದರೂ ಕೋಮು ಸಂಘರ್ಷ ಉಂಟುಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಕಣ್ಮರೆಯಾಗಿದ್ದ ತೇಜಸ್ವಿ ಸೂರ್ಯನಿಗೆ ತನ್ನ ಸಾಧನೆ ಹೇಳಿ ಮತ ಕೇಳುವ ಯೋಗ್ಯತೆ ಅರ್ಹತೆ ಇಲ್ಲದಿರುವುದೇ ಈ ಎಲ್ಲಾ ನಾಟಕಗಳ ಮೂಲ ಕಾರಣ!’ ಎಂದು ಟ್ವೀಟ್ ಮಾಡಿದೆ.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ನಗರ್ತಪೇಟೆಯ ಶಾಸಕರು ಬಿಜೆಪಿಯವರೇ,

ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು @BJP4Karnataka ಪ್ರಾಪಗಾಂಡಾಗಳಿಗೆ ತಪರಾಕಿ ನೀಡಿದ್ದಾರೆ,

ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ.@Tejasvi_Surya ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ… pic.twitter.com/xH0XEpsnNO
— Karnataka Congress (@INCKarnataka) March 20, 2024

ಅಸಲಿಗೆ ಗಲಭೆ ನಡೆದ ಅಂಗಡಿಯಲ್ಲಿ ಸಿಕ್ಕಿದ್ದು ಎನ್ನಲಾದ ವಿಡಿಯೋ ಕ್ಲಿಪ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಂಗಡಿಯಲ್ಲಿ ಇರುವ ವ್ಯಕ್ತಿಗೆ ಅಂಗಡಿಗೆ ಬಂದ ಗಿರಾಕಿಗಳು ಯಾವುದೋ ವಸ್ತುವನ್ನು ತೋರಿಸಿ ಪ್ರಶ್ನಿಸಿರುತ್ತಾರೆ. ಆಗ ಅಂಗಡಿಯವ ಹಾಗೂ ಗಿರಾಕಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಈ ಸಂದರ್ಭದಲ್ಲಿ ಉದ್ರೇಕಕ್ಕೆ ಒಳಗಾದ ಗಿರಾಕಿ ಅಂಗಡಿಯವನಿಗೆ ಹೊಡೆಯಲು ಮುಂದಾಗುತ್ತಾನೆ.. ಇಷ್ಟು ಚಿತ್ರಣ ವಿಡಿಯೋದಲ್ಲಿದೆ. ಆದರೆ ಇಲ್ಲೆಲ್ಲೂ ಹನುಮಾನ್ ಚಾಲಿಸ ಪಠಣದ ಬಗ್ಗೆಯಾಗಲಿ, ಅಥವಾ ಧರ್ಮಾಧಾರಿತ ಮಾತುಗಳಾಗಲಿ ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೊಂದು ಸ್ಪಷ್ಟವಾಗಿ ವ್ಯವಹಾರಕ್ಕೆ ಸಂಬಂಧಿಸಿದ ಗಲಾಟೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುವಂತಿದೆ.

ಮಾಡಿದ ತಪ್ಪಿಗೆ ಶಿಕ್ಷೆ ಆಗಬೇಕು ಎಂಬುದು ಎಲ್ಲರ ಒತ್ತಾಯ. ಆದರೆ ಅದಕ್ಕೆ ಕೋಮು ಬಣ್ಣ ಬಳಿಯುವುದು, ಅನವಶ್ಯಕ ಗಲಭೆ ಸೃಷ್ಟಿಸುವ ಬಗ್ಗೆ ತನಿಖೆ ಚುರುಕುಗೊಳ್ಳಬೇಕಿದೆ. ಅಷ್ಟಕ್ಕೂ ಗಲಭೆಯಲ್ಲಿನ ಆರೋಪಿಗಳಲ್ಲಿ ಹಿಂದೂಗಳು ಇರುವ ಬಗ್ಗೆ ಮಾಧ್ಯಮಗಳು ಸ್ಪಷ್ಟಪಡಿಸಿವೆ.

ಆದರೆ ಚುನಾವಣೆ ಸಂದರ್ಭದಲ್ಲಿ ಇಂತಹ ಒಂದು ಸಣ್ಣ ಗಲಭೆಯನ್ನು ರಾಜ್ಯದ ಜ್ವಲಂತ ಸಮಸ್ಯೆ ಎಂಬಂತೆ ಗುಂಪು ಸೇರಿಸಿದ ಬಗ್ಗೆ ಈಗ ಎಲ್ಲೆಡೆ ಚರ್ಚೆ ಶುರುವಾಗಿದೆ. ತೇಜಸ್ವಿ ಸೂರ್ಯ ಉದ್ದೇಶಪೂರ್ವಕವಾಗಿ ಈ ಗಲಭೆಗೆ ಪ್ರಚೋದನೆ ನೀಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್ ಬಿಗ್ ಆಪರೇಷನ್ : ಆರ್ ಅಶೋಕ್ ಕೈತಪ್ಪಲಿರುವ ಪದ್ಮನಾಭನಗರ ; ‘ಲೋಕ’ ಸಮರಕ್ಕೆ ಬಿಜೆಪಿಗೆ ದೊಡ್ಡ ಖೆಡ್ಡಾ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಪಕ್ಷಕ್ಕೆ ಅತಂತ್ರ ಸ್ಥಿತಿ ಎದುರಾಗಿದೆ. ಪಕ್ಷಕ್ಕೆ ಬರುವವವರಿಗಿಂತ ಪಕ್ಷದಿಂದ ದಂಡು ದಂಡಾಗಿಯೇ ಕಾಲ್ಕೀಳುವವರ ಸಂಖ್ಯೆಯೇ ಜಾಸ್ತಿಯಾಗಿದೆ. ಸಧ್ಯ ಈಗ ಬಿಜೆಪಿ ಪಕ್ಷದ ಭದ್ರಕೋಟೆಯಂತಿದ್ದ, ಆರ್.ಅಶೋಕ್ ‘ಸಾಮ್ರಾಟ’ನಂತೆ ಮೆರೆಯುತ್ತಿದ್ದ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಘಟಕದ ಆಧಾರ ಸ್ಥಂಭಗಳೇ ಈಗ ಕಾಂಗ್ರೆಸ್ ಸೇರ್ಪಡೆಯಾಗಲು ಹೊರಟಿದ್ದಾರೆ.

ಪದ್ಮನಾಭನಗರ ಬಿಜೆಪಿ ಅಸಲಿ ಕಥೆ ಇದು
ಬಿಜೆಪಿ ಪಕ್ಷದಲ್ಲಿ ಆರ್.ಅಶೋಕ್ ‘ಸಾಮ್ರಾಟ’ ಎಂಬ ಬಿರುದು ಪಡೆದುಕೊಂಡರೂ ಪದ್ಮನಾಭನಗರ ಮಾತ್ರ ನೇರವಾಗಿ ಆರ್.ಅಶೋಕ್ ಹಿಡಿತದಲ್ಲಿ ಇಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಇಲ್ಲಿ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಪ್ರತಿಯೊಬ್ಬ ಮುಖಂಡರೂ ತನ್ನದೇ ಆದ ವಯಕ್ತಿಕ ಹಿಡಿತ ಇಟ್ಟುಕೊಂಡವರೇ ಆಗಿದ್ದಾರೆ.

ಒಕ್ಕಲಿಗರ ಪ್ರಾಬಲ್ಯವೇ ಹೆಚ್ಚಿರುವ ಪದ್ಮನಾಭನಗರದ ಪ್ರಮುಖ ಬಿಜೆಪಿ ಮುಖಂಡ, ಆರ್.ಅಶೋಕ್ ಬಂಟನಂತಿದ್ದ ಎಲ್.ಶ್ರೀನಿವಾಸ್ ವಯಕ್ತಿಕವಾಗಿ ಪ್ರಭಾವಿ ನಾಯಕ‌. ಅವರ ರಾಜಕೀಯ ಬೆಳವಣಿಗೆ ಹಿಂದೆ ಯಾವ ಬಿಜೆಪಿ ನಾಯಕರ ಕೊಡುಗೆಯೂ ಇಲ್ಲ ಎಂಬುದು ಸ್ಪಷ್ಟ. ಅಷ್ಟೆ ಅಲ್ಲದೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಹಾಗೂ ಬಿಬಿಎಂಪಿ ಉಪ ಮೇಯರ್ ಕೂಡಾ ಆಗಿದ್ದಂತಹ ಎಲ್.ಶ್ರೀನಿವಾಸ್ ಅವರದ್ದು ಪದ್ಮನಾಭನಗರದಲ್ಲಿ ವಿಶೇಷವಾದ ಪ್ರಭಾವವಿದೆ. ಇಂತಹ ಪ್ರಭಾವಿ ನಾಯಕ ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಎಲ್.ಶ್ರೀನಿವಾಸ್ ಜೊತೆ ಜೊತೆಗೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಇನ್ನೊಬ್ಬ ಪ್ರಭಾವಿ ಜೆಡಿಎಸ್ ಮುಖಂಡರೆಂದರೆ ಕಬಡ್ಡಿ ಬಾಬು ಎಂದೇ ಜನಪ್ರಿಯರಾದ ಪ್ರಸಾದ್ ಬಾಬು. ಇವರೂ ಸಹ ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ಪಕ್ಷದ ವಲಯದಲ್ಲಿ ಪ್ರಭಾವಿ ನಾಯಕರೆನಿಸಿಕೊಂಡವರು. ವಯಕ್ತಿಕವವಾಗಿ ಆರ್.ಅಶೋಕ್ ಗೆ ಕಬಡ್ಡಿ ಬಾಬು ಕಾಂಗ್ರೆಸ್ ಸೇರ್ಪಡೆ ಅಷ್ಟು ಹೊಡೆತ ಅಲ್ಲದಿದ್ದರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಲು ದೊಡ್ಡ ಕೊಡುಗೆ ಸಿಗಲಿದೆ. ಇದೂ ಸಹ ಬಿಜೆಪಿಗೆ ಪರೋಕ್ಷವಾಗಿ ದುಷ್ಪರಿಣಾಮ ಬೀರುವ ಸೇರ್ಪಡೆಯಾಗಿದೆ.

ಇವರ ಜೊತೆ ಜೊತೆಗೆ ಬಿಜೆಪಿ ಮುಖಂಡರಾದ ಅಂಜನಪ್ಪ, ಶೋಭಾ ಅಂಜನಪ್ಪ, ಕುಮಾರಸ್ವಾಮಿ ಲೇಔಟ್ ನ ಹೆಚ್.ಸುರೇಶ್, ಗಣೇಶ ಮಂದಿರ ವಾರ್ಡ್ ನ ಗೋವಿಂದರಾಜ್, ಪದ್ಮನಾಭನಗರದ ಯುವ ಮುಖಂಡ ಭರತ್, ರಂಗರಾಮೇಗೌಡ, ಚಿಕ್ಕಲಸಂದ್ರ ವಾರ್ಡ್ ನ ಸುಪ್ರಿಯಾ ಶೇಖರ್, ವೆಂಕಟಸ್ವಾಮಿ ನಾಯ್ಡು, ಹೊಸಕೆರೆಹಳ್ಳಿ ಭಾಗದ ಹೆಚ್.ನಾರಾಯಣ್ ಸೇರಿದಂತೆ ಅವರ ಎಲ್ಲಾ ಅನುಯಾಯಿಗಳು, ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಇದು ಪದ್ಮನಾಭನಗರದಲ್ಲಿ ಬಿಜೆಪಿ ಪಕ್ಷದ ಅಸ್ತಿತ್ವ ಕುಸಿಯಲು ದೊಡ್ಡ ಹೊಡೆತ ಎಂದರೆ ತಪ್ಪಾಗಲಾರದು.

ಇಷ್ಟು ಮಂದಿಯ ಆಪರೇಷನ್ ಹಿಂದೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಕೈ ಇದೆ ಎಂಬುದು ಸ್ಪಷ್ಟ. ಚುನಾವಣೆಗೂ ಮುಂಚೆ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ ಎಂಬ ಮಾತು ಕೇಳಿ ಬಂದಿತ್ತು. ಅಕಸ್ಮಾತ್ ಡಿ.ಕೆ.ಸುರೇಶ್ ಅಭ್ಯರ್ಥಿ ಆಗಿದ್ದರೆ ಆ ಸಂದರ್ಭದಲ್ಲೇ ಆರ್.ಅಶೋಕ್ ಸೋಲು ಕಟ್ಟಿಟ್ಟ ಬುತ್ತಿ ಆಗುತ್ತಿತ್ತು ಎಂಬುದು ಸಹ ಅಷ್ಟೆ ಸ್ಪಷ್ಟ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ಇರುವ ಹಿಂದುತ್ವದ ಐಡಿಯಾಲಜಿಯಾಗಲಿ, ಬಿಜೆಪಿ ಅಥವಾ ಮೋದಿ ಪ್ರಭಾವಾಗಲಿ ಯಾವುದೂ ಈ ಕ್ಷೇತ್ರದಲ್ಲಿ ಇಲ್ಲ. ಎಲ್ಲವೂ ಸ್ಥಳೀಯ ಮುಖಂಡರ ಪ್ರಭಾವವೇ ಇಲ್ಲಿಯವವರೆಗೂ ಆರ್.ಅಶೋಕ್ ಗೆಲುವಿಗೆ ಕಾರಣವಾಗಿತ್ತು. ಹಾಗೆಯೇ ಜಾತಿ ಪ್ರಾಬಲ್ಯ ಕೂಡಾ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಒಕ್ಕಲಿಗ, ನಾಯ್ಡು ಹಾಗೂ ‌ಸ್ವಲ್ಪ ಮಟ್ಟಿಗಿನ ಲಿಂಗಾಯತರ ಪ್ರಭಾವ ಇಲ್ಲಿ ಹೆಚ್ಚೇ ಇದೆ ಎಂದರೆ ತಪ್ಪಿಲ್ಲ.

ಜೊತೆಗೆ ಕ್ಷೇತ್ರದಲ್ಲಿ ಆರ್.ಅಶೋಕ್ ಸರ್ವಾಧಿಕಾರಿ ಧೋರಣೆ, ಮೇಲೆತ್ತಿದವನ್ನೇ ಕಡೆಗಣಿಸುವುದು ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಚುನಾವಣೆಯನ್ನು ತಡೆಹಿಡಿಯಲು ಮುಂದಾಗಿದ್ದು ಸಹ ಸ್ಥಳೀಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಆರ್.ಅಶೋಕ್ ಈ ಹಿಂದಿನಿಂದಲೂ ಬಿಬಿಎಂಪಿ ಟಿಕೆಟ್ ವಿಚಾರದಲ್ಲಿ ಸುಳ್ಳು ಭರವಸೆ ನೀಡುತ್ತಾ ಬಂದಿರುವ ಆರೋಪ ಎದುರಿಸುತ್ತಿದ್ದಾರೆ. ಇವೆಲ್ಲವೂ ಒಟ್ಟಾಗಿ ಅಶೋಕ್ ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ಕಳೆದುಕೊಳ್ಳಲು ಕಾರಣ ಎಂದೇ ಮಾತುಗಳು ಕೇಳಿ ಬಂದಿವೆ.

ಲೋಕಸಭೆ ಚುನಾವಣೆಗೆ ಬಿಜೆಪಿಗೆ ದೊಡ್ಡ ಖೆಡ್ಡಾ
ಎಲ್ಲಕ್ಕಿಂತ ಗಮನಾರ್ಹ ವಿಚಾರ ಏನೆಂದರೆ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಅತಿ ಹೆಚ್ಚು ಅಂತರದ ಮತ ಗಳಿಕೆಗೆ ಕಾರಣವಾಗಿದ್ದ ಕ್ಷೇತ್ರ ಪದ್ಮನಾಭನಗರ. ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಈ ಕ್ಷೇತ್ರದಲ್ಲಿ ಆರ್.ಅಶೋಕ್ ಅವರನ್ನೇ ಹೆಚ್ಚು ನಂಬಿಕೊಂಡಿದ್ದ ಕಾರಣ ಈ ಭಾಗದಿಂದಲೇ ಹೆಚ್ಚು ಲೀಡ್ ಬಂದು ಸಂಸದರಾಗುವಂತೆ ಕಾರಣವಾಗಿತ್ತು. ಆದರೆ ಈಗ ಆರ್.ಅಶೋಕ್ ಗೂ ಸಿಗದಂತೆ ಈ ಕ್ಷೇತ್ರ ಕೈ ತಪ್ಪುವ ಹಂತದಲ್ಲಿದೆ.

ಸ್ಥಳೀಯವಾಗಿ ಘಟಾನುಘಟಿ ನಾಯಕರೇ ಬಿಜೆಪಿ ಬಿಟ್ಟಿರುವ ಹಂತದಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ತಿಪ್ಪರಲಾಗ ಹಾಕಿದರೂ ತೇಜಸ್ವಿ ಸೂರ್ಯ ಅಥವಾ ಇನ್ನಾವುದೇ ಬಿಜೆಪಿ ಅಭ್ಯರ್ಥಿ ಗೆಲ್ಲಲು ಸಾಧ್ಯವಿಲ್ಲ ಎಂದೇ ಸ್ಥಳೀಯ ಜನರ ಅಭಿಪ್ರಾಯವಾಗಿದೆ.

ಸ್ಥಳೀಯವಾಗಿ ಆರ್.ಅಶೋಕ್ ಹಿಂದೆ ಮುಖ್ಯವಾಗಿ ನಿಂತಿದ್ದಂತಹ ಇಡೀ ಬಿಜೆಪಿ ಟೀಮ್ ಈಗ ಕಾಂಗ್ರೆಸ್ ಗೆ ಹೈಜಂಪ್ ಆಗಿರುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ಯಾವುದೇ ಅಭ್ಯರ್ಥಿಯ ಗೆಲುವು ತೀರಾ ಕಷ್ಟ ಎಂಬುದು ಸ್ಪಷ್ಟ. ಮೇಲಾಗಿ ಇಲ್ಲಿ ಯಾವುದೇ ಹಿಂದುತ್ವದ ಗಾಳಿಯಾಗಲಿ, ಮೋದಿ ಅಲೆಯಾಗಲಿ ಇಲ್ಲವೇ ಇಲ್ಲ. ಅಶೋಕ್ ಕೂಡಾ ಈ ನಾಯಕರ ಮೇಲೆಯೇ ಹೆಚ್ಚು ಅವಲಂಬಿತರಾಗಿದ್ದ ಹಿನ್ನೆಲೆಯಲ್ಲಿ ಈ ಕ್ಷಣದಲ್ಲಿ ಯಾವುದೇ ಚುನಾವಣೆ ನಡೆದರೂ ಬಿಜೆಪಿ ಸೋಲು ಶತಃಸಿದ್ದ ಎಂಬುದು ಸ್ಪಷ್ಟವಾಗಿದೆ. ಆ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ತಪ್ಪುವ ಕ್ಷೇತ್ರಗಳಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮೊದಲನೆಯದಾಗಿ ನಿಲ್ಲಲಿದೆ.

ತುಳುನಾಡಿನ ದೈವಾರಾಧನೆಗೆ ಸಂಸದ ತೇಜಸ್ವಿ ಸೂರ್ಯ ಅವರಿಂದ ಅವಮಾನ
ಬೆಂಗಳೂರು: ಇತ್ತೀಚೆಗೆ ಎಲ್ಲೆಂದರಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನಗಳು ಹೆಚ್ಚಾಗುತ್ತಿದ್ದು, ದೈವಗಳ ಹೆಸರಿನಲ್ಲಿ ದುಡ್ಡು ಮಾಡುತ್ತಿವೆ. ಈ ವಿರುದ್ಧ ದೈವಾರಾಧಕರು ಸಿಡಿದೇಳುತ್ತಿರುವ ಬೆನ್ನಲ್ಲೇ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಂದಲೂ ದೈವಾರಾಧನೆಗೆ ಅವಮಾನವಾಗಿರುವ ಘಟನೆ ನಡೆದಿದೆ.

ಶುಕ್ರವಾರದಂದು ಬೆಂಗಳೂರಿನ ತಣಿಸಂದ್ರ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರೇರಿತ ರಾಷ್ಟ್ರೋತ್ಥನ ಪರಿಷತ್‌ನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಾರ್ಷಿಕೋತ್ಸವದ ವೇದಿಕೆಯಲ್ಲಿ ತುಳುನಾಡಿನ ದೈವಾರಾಧನೆ ಪ್ರದರ್ಶನ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ವಿ ಅವರು ತನ್ನ ಕಾಲಿಗೆ ಹಾಕಿದ್ದ ಶೂ ತೆಗೆಯದೇ ದೈವ ನರ್ತನದಲ್ಲಿ ಬಳಸುವ ಜೀಟಿಗೆಯನ್ನು ಕೈಯಲ್ಲಿ ಹಿಡಿದಿದ್ದು, ದೈವಾರಾಧನೆಗೆ, ದೈವ ನರ್ತಕರಿಗೆ  ಅವಮಾನವಾಗುವಂತೆ ವರ್ತಿಸಿದ್ದಾರೆ.

ತೇಜಸ್ವಿ ಸೂರ್ಯ ಅವರ ಈ ವರ್ತನೆಯ ವಿರುದ್ಧ ದೈವಾರಾಧಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇಷ್ಟೆಲ್ಲಾ ಬೆಳವಣಿಗೆಗಳು ಮುಂದುವರೆಯುತ್ತಿದ್ದರೂ, ತುಳುನಾಡಿನ ಶಾಸಕರುಗಳು ಸಂಸದರು ಮೌನವಾಗಿರುವುದರ ಬಗ್ಗೆಯೂ ಕಿಡಿಕಾರಿದ್ದಾರೆ.

ಸಂಸದ ತೇಜಸ್ವಿಯವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದ ಬಗ್ಗೆ ಹಂಚಿಕೊಂಡಿದ್ದು, ಕೈಯಲ್ಲಿ ಜೀಟಿಕೆ ಹಿಡಿದು ಕಾಲಲ್ಲಿ ಶೂ ಹಾಕಿಕೊಂಡೇ ದೈವದ ಪಕ್ಕ ಫೋಟೋ ತೆಗೆಸಿಕೊಂಡಿರುವುದನ್ನು ಅದನ್ನು ತಮ್ಮ ಪೇಜ್‌ ಅಲ್ಲಿ ಹಾಕಿಕೊಂಡಿದ್ದರು. ಆದರೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ರಾತ್ರೋರಾತ್ರಿ ಆ ಫೋಟೋವನ್ನು ಡಿಲೀಟ್‌ ಮಾಡಿದ್ದು, ಅನುಮಾನಕ್ಕೆ ಕಾರಣವಾಗಿದೆ. ಆದರೆ ಅದೇ ದಿನ ಅವರು ಶೂ ಹಾಕಿಕೊಂಡಿದ್ದ ಬೇರೆ ಫೋಟೋ ಅವರ ಫೇಸ್ಬುಕ್‌ ಪುಟದಲ್ಲಿ ಕಾಣಬಹುದು.

ತೇಜಸ್ವಿಯವರ ಈ ನಡೆಯ ವಿರುದ್ಧ ಅಖಿಲ ಭಾರತ ಹಿಂದೂ ಮಹಾ ಸಭಾ ಆಕ್ರೋಶ ವ್ಯಕ್ತ ಪಡಿಸಿದ್ದು,

ಜೈ ಹಿಂದೂ ರಾಷ್ಟ್ರ…

ಇದೇನಾ ಸಂಸ್ಕೃತಿ???

ಇದೇನಾ ಪದ್ಧತಿ ???

ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ/  ದೈವರಾದನೆಯ ಬಗ್ಗೆ/ ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ….

ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ…

ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ???

ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕಿಡಿಕಾರಿದೆ.

ಜೈ ಹಿಂದೂ ರಾಷ್ಟ್ರ…

ಇದೇನಾ ಸಂಸ್ಕೃತಿ ???

ಇದೇನ ಪದ್ಧತಿ ???

ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕೃತಿಯ ಬಗ್ಗೆ /ದೈವರಾದನೆಯ ಬಗ್ಗೆ /ಹಿಂದೂ ಸಮುದಾಯದ ಬಗ್ಗೆ, ಇರುವಂತಹ ಗೌರವವನ್ನು ನೋಡಿ ….

ಆಡಳಿತದಲ್ಲಿರುವಂತಹ ಡಬಲ್ ಇಂಜಿನ್ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರು ಚಪ್ಪಲಿಯನ್ನ ಧರಿಸಿ ನಿಂತಿರುವುದನ್ನ ಕಣ್ಣಾರೆ ನೋಡಿ…

ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ???

ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದು ಕಿಡಿಕಾರಿದೆ.

ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದಿತ್ತು: ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು: ಪ್ರವೀಣ್ ಕೊಲೆಯಿಂದ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆ ಬಿಜೆಪಿಯಲ್ಲಿ ಸರಣಿ ರಾಜೀನಾಮೆ ನಡೆಯುತ್ತಿದೆ. ಬಿಜೆಪಿ ಪಾಳಯದಲ್ಲಿ ಕಾರ್ಯಕರ್ತ ಆಕ್ರೋಶವನ್ನು ತಣಿಸುವಯತ್ನ ನಡೆಯುತ್ತಿದೆ.

ಈ ಹಿನ್ನೆಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಅರವಿನಗಂಡಿ ಯವರೊಂದಿಗೆ ಫೋನ್ ಮುಖಾಂತರ ಮಾತಾಡಿರುವ ಮಾತುಕತೆ ಬಯಲಾಗಿದೆ. ರಾಜೀನಾಮೆ ನೀಡದಂತೆ ಒತ್ತಾಯಿಸುತ್ತಾ “ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ರಸ್ತೆಗಿಳಿದು ಕಲ್ಲು ಹೊಡೆಯಬಹುದಿತ್ತು” ಎಂದು ತೇಜಸ್ವಿ ಸೂರ್ಯ ಹೇಳುತ್ತಾರೆ.

ಬಿಜೆಪಿ ನಾಯಕರ ಇಂತಹ ನಡವಳಿಕೆಗಳು ಮತ್ತೆ ಮತ್ತೆ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗುತ್ತಿದೆ!