telugu actor – Peepal Media

ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ
● ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ..ಈ ಕೀರ್ತಿಗೆ ಭಾಜನರಾದ ದಕ್ಷಿಣದ ಭಾರತದ ಮೊದಲ ನಟ
● ತಗ್ಗೋದೇ ಇಲ್ಲ.. ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ.
● ರೀಲ್ ಜೊತೆ ರಿಯಲ್..ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ…

ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 21 ವರ್ಷ ಕಳೆದಿದೆ. 2003 ಮಾರ್ಚ್ 28ರಂದು ಗಂಗೋತ್ರಿ ಸಿನಿಮಾ ಮೂಲಕ ಬನ್ನಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲು ಸಿನಿಪಯಣಕ್ಕೆ 21 ವರ್ಷ ಪೂರೈಸಿದೆ. ಈ ಖುಷಿ ಕ್ಷಣ ನಡುವೆಯೇ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣಗೊಂಡಿದೆ.

ದುಬೈನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಕ್ ನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಲೋಕಾರ್ಪಣೆಗೊಂಡಿದೆ. ‘ಅಲವೈಕುಂಠಪುರಂಲೋ’ ಚಿತ್ರದ ಅಲ್ಲು ಅರ್ಜುನ್ ಲುಕ್ ನ ಮೇಣದ ಪ್ರತಿಮೆಯನ್ನು ಮಾರ್ಚ್ 28 ರ ರಾತ್ರಿ ಅನಾವರಣ ಮಾಡಲಾಯ್ತು. ತಮ್ಮದೇ ಮೇಣದ ಪ್ರತಿಮೆ ಲುಕ್ ನಲ್ಲಿ ಕೆಂಪು ಬಣ್ಣದ ಸೂಟ್ ಧರಿಸಿ ಬನ್ನಿ ಕಾಣಿಸಿಕೊಂಡಿದ್ದಾರೆ. ಡೂಡ್ಲಿಕೇಟ್ ಪಕ್ಕ ನಿಂತು ತಗ್ಗೋದೇ ಇಲ್ಲ ಅಂತಾ ಪುಷ್ಪ ಸ್ಟೈಲ್ ನಲ್ಲಿ ಪೋಸ್ ಕೊಟ್ಟಿದ್ದಾರೆ.

ಮೇಣದ ಪ್ರತಿಮೆ ಲೋಕಾರ್ಪಣೆ ವೇಳೆ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ, ಸಂಭ್ರಮ ಮುಗಿಲು ಮುಟ್ಟಿತ್ತು. ಅಪ್ಪನ ಪ್ರತಿಮೆಯ ಪಕ್ಕದಲ್ಲಿ ನಿಂತು ಅರ್ಹಾ ತಗ್ಗೊದೇ ಇಲ್ಲ ಎಂದು ಪೋಸ್ ಕೊಟ್ಟಿದ್ದಾಳೆ. ಇನ್ನು ಸ್ಟೈಲಿಶ್ ಸ್ಟಾರ್ ಕೂಡ ತಮ್ಮದೇ ತಮ್ಮದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಗ್ಗೊದೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬನ್ನಿಗೆ ಫ್ಯಾನ್ಸ್ ವಿಷ್ ಮಾಡುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳು ಲಂಡನ್ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿವೆ. ಆದ್ರೆ ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ. ದುಬೈನಲ್ಲಿ ಮೇಣದ ಪ್ರತಿಭೆಗೆ ಭಾಜನರಾಗಿರುವ ದಕ್ಷಿಣ ಭಾರತದ ಮೊದಲ ನಟ ಎಂಬ ಖ್ಯಾತಿ ಅಲ್ಲು ಅರ್ಜುನ್ ತಮ್ಮದಾಗಿಸಿಕೊಂಡಿದ್ದಾರೆ. ಅಂದಹಾಗೇ ಲಂಡನ್ ಮ್ಯೂಸಿಯಂನಲ್ಲಿ ಪ್ರಭಾಸ್, ಮಹೇಶ್ ಬಾಬು, ಹಾಗೂ ಕಾಜಲ್ ಮೇಣದ ಪ್ರತಿಮೆಗಳಿವೆ.

‘ಪುಷ್ಪ: ದಿ ರೈಸ್’ನಲ್ಲಿ ಮೂಲಕ ಅಲ್ಲು ಅರ್ಜುನ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ, ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಈಗ ‘ಪುಷ್ಪಾ 2: ದಿ ರೂಲ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಸ್ಟ್ 15 ರಿಂದ ಚಿತ್ರ ತೆರೆಗೆ ಬರಲಿದೆ.

ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ
ಹೈದರಾಬಾದ್: ತೆಲುಗು ಚಿತ್ರರಂಗವನ್ನು 70-80 ದಶಕಗಳಲ್ಲಿ ತನ್ನದೇ ಆದ ವಿಶಿಷ್ಟ ನಟನೆಯ ಮೂಲಕ ಆಳಿದಂತಹ ಸೂಪರ್ ಸ್ಟಾರ್ ಕೃಷ್ಣ ಇಂದು ಬೆಳಿಗ್ಗೆ 4:10 ಸಮಯಕ್ಕೆ ಸರಿಯಾಗಿ ಹೈದರಾಬಾದ್ ನಗರದ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅಗಲಿರುವುದು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಎನ್‌ಟಿಆರ್ ಏಎನ್ಆರ್ ಅವರ ಕಾಲದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣ ಈ ಇಬ್ಬರು ಮೇರು ನಟರೊಂದಿಗೆ ಸೆಡ್ಡು ಹೊಡೆದು ಚಿತ್ರರಂಗದಲ್ಲಿ ನೆಲೆಯೂರಿದ್ದು ಸಾಮಾನ್ಯ ವಿಷಯವಲ್ಲ. ಹಾಗಾಗಿ ಇವರಿಗೆ ಸೂಪರ್ ಸ್ಟಾರ್ ಎಂಬ ಬಿರುದು ಮಾತ್ರವಲ್ಲದೆ ಛಲಗಾರ ಎಂಬುದೂ ಸಹ ಇವರ ಮನೆಯ ಹೆಸರಾದಂತೆ ಆಗಿತ್ತು.

ಸರಿ ಸುಮಾರು 55 ವರ್ಷಗಳು ತೆಲುಗು ಚಿತ್ರರಂಗದ ಸೇವೆ ಸಲ್ಲಿಸಿರುವ ಸೂಪರ್ ಸ್ಟಾರ್ ಕೃಷ್ಣ 350 ಸಿನಿಮಾಗಳಲ್ಲಿ ನಟಿಸಿದ್ದು, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ.

2022 ರ ಇದೇ ಜನವರಿಯಂದು ತಮ್ಮ‌ ಮೊದಲ ಮಗನಾದ ರಮೇಶ್ ಬಾಬು ಅವರು ಮೃತರಾಗಿದ್ದರು. ಇತ್ತೀಚೆಗೆಷ್ಟೇ ತಮ್ಮ ಮೊದಲ ಪತ್ನಿಯಾದ ಇಂದಿರಾ ದೇವಿ ಅವರನ್ನು ಕಳೆದುಕೊಂಡಿದ್ದರು. ಈ ಹಿಂದೆ 2019 ರಲ್ಲಿ ತಮ್ಮ ಎರಡನೇ ಪತ್ನಿಯಾದ ವಿಜಯ ನಿರ್ಮಲರನ್ನು ಕಳೆದುಕೊಂಡಿದ್ದರು.

ಇದೀಗ ತಾವೇ ಕಾಲದ ಕರೆಗೆ ಓಗೊಟ್ಟು ಹೊರಟಿರುವುದು ಮಹೇಶ್ ಬಾಬು ಅವರಿಗೆ ದಿಕ್ಕು ತೋಚದಂತಾಗಿದೆ.

ಇಂದು ಕೃಷ್ಣ ಅವರ ಪಾರ್ಥೀವ ಶರೀರ ಅಭಿಮಾನಿಗಳ ವೀಕ್ಷಣೆಗಾಗಿ ಇರಿಸಿ ನಾಳೆಯ ದಿನ ಅಂತ್ಯಸಂಸ್ಕಾರ ಮಾಡುವುದಾಗಿ ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ‌.

ಕೃಷ್ಣ ಅವರ ಅಗಲಿಕೆಗೆ ರಾಷ್ಟ್ರದ ಬಹುತೇಕ ಸ್ಟಾರ್ ನಟರು ವಿಷಾದ ವ್ಯಕ್ತಪಡಿಸಿದ್ದು, ತೆಲುಗು ಚಿತ್ರರಂಗದ ನಟ ನಟಿಯರು ಮಹೇಶ್ ಬಾಬು ಅವರಿಗೆ ಸಾಂತ್ವನ ತಿಳಿಸುತ್ತಿದ್ದಾರೆ.