The Week – Peepal Media

ದಿ ವೀಕ್ ನಿಯತಕಾಲಿಕೆಯ ಮಾಜಿ ಸಂಪಾದಕ ಟಿ.ಆರ್.ಗೋಪಾಲಕೃಷ್ಣನ್ ನಿಧನ
ಪತ್ರಿಕಾ ಬಳಗದಲ್ಲಿ ಟಿ.ಆರ್.ಜಿ ಎಂದೇ ಖ್ಯಾತಿ ಪಡೆದಿದ್ದ ಟಿ ಆರ್ ಗೋಪಾಲಕೃಷ್ಣನ್ ಅವರು ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಅವರು 1983 ರಿಂದ ಫೆಬ್ರವರಿ 2018 ರಲ್ಲಿ ನಿವೃತ್ತಿಯಾಗುವವರೆಗೆ ದಿ ವೀಕ್‌ ಪತ್ರಿಕೆಯ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದರು.

ದಿ ವೀಕ್ ನಿಯತಕಾಲಿಕೆಯಲ್ಲಿ ಇದ್ದ ತಮ್ಮ 34 ವರ್ಷಗಳ ಸೇವೆಯಲ್ಲಿ, ಸಂಪಾದಕರಾಗಿ 29 ವರ್ಷಗಳನ್ನು ಕಳೆದರು. ಹಾಗೂ ದಿ ವೀಕ್ ನಿಯತಕಾಲಿಕವನ್ನು ಭಾರತದ ಅತಿ ಹೆಚ್ಚು ಮಾರಾಟವಾಗುವ ಇಂಗ್ಲಿಷ್ ಸುದ್ದಿಪತ್ರಿಕೆಯಾಗಿ ಅಗ್ರಸ್ಥಾನಕ್ಕೆ ಟಿ.ಆರ್.ಜಿ ತಂದಿದ್ದು ಅವರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.

ದೆಹಲಿ ಮೂಲದವರಾದ TRG ಐಐಟಿ ಕಾನ್ಪುರದಲ್ಲಿ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅಂತಿಮವಾಗಿ 1974 ರಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಅವರ ಮೊದಲ ನಿಯೋಜನೆಯು ಹಿಂದಿನ ಜನಸಂಘ ಪಕ್ಷವು ನಡೆಸುತ್ತಿದ್ದ ‘ಮದರ್‌ಲ್ಯಾಂಡ್‌’ನಲ್ಲಿ ವರದಿಗಾರರಾಗಿದ್ದರು.

ಆ ನಂತರದ ದಿನಗಳಲ್ಲಿ ದಿಸ್ ಫೋರ್ಟ್‌ನೈಟ್ ಮತ್ತು ರಿಯಲ್ ಇಂಡಿಯಾದಂತಹ ಪ್ರಕಟಣೆಗಳಿಗಾಗಿ ಕೆಲಸ ಮಾಡಿದರು. ಟಿಜಿಆರ್ ಅವರು ಪತ್ರಿಕೋದ್ಯಮ ಸಂಬಂಧ ಹೊಂದಿರುವ ಕುಟುಂಬದಿಂದ ಬಂದವರು. ಅವರ ತಂದೆ ಟಿವಿ ರಾಜಗೋಪಾಲನ್ ಪತ್ರಕರ್ತರಾಗಿದ್ದರು ಮತ್ತು ಅವರ ತಾಯಿ ವಿಜಯಲಕ್ಷ್ಮಿ ದೆಹಲಿಯ ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ (UNI) ನಲ್ಲಿ ಗ್ರಂಥಪಾಲಕರಾಗಿದ್ದರು.

ಸೆಪ್ಟೆಂಬರ್ 2023 ರಲ್ಲಿ ನಿಧನರಾದ ಅವರ ಪತ್ನಿ ಗೀತಾ ಶ್ರೀನಿವಾಸನ್ ಅವರ ಮರಣದ 72 ದಿನಗಳ ನಂತರ ಟಿಆರ್ಜಿ ನಿಧನರಾಗಿದ್ದಾರೆ.