theater – Peepal Media

ನಾಳೆ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ
ನವದೆಹಲಿ:  ಕೇಂದ್ರ ಸರ್ಕಾರದ ಮಹತ್ವದ ಮಸೂದೆಯಾದ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ‘ಒಂದು ದೇಶ ಒಂದು ಚುನಾವಣೆ’ಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಡಿ. 17ರಂದು ಲೋಕಸಭೆಯಲ್ಲಿ ಮಂಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

‘ಸಂವಿಧಾನ (19ನೇ ತಿದ್ದುಪಡಿ) ಮಸೂದೆ 2024’ ಅನ್ನು ಡಿ. 17ರಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಡಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಸೂದೆ ಮಂಡನೆ ಬಳಿಕ ಅದನ್ನು ಜಂಟಿ ಸಂಸದೀಯ ಸಮಿತಿಗೆ ವಹಿಸಲು ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೇಘವಾಲ್ ಮನವಿ ಮಾಡಲಿದ್ದಾರೆ.

ವಿವಿಧ ಪಕ್ಷಗಳ ಸಂಸದರ ಸಂಖ್ಯಾಬಲದ ಆಧಾರದ ಮೇಲೆ ಅನುಪಾತದ ಆಧಾರದಲ್ಲಿ ಜಂಟಿ ಸಮಿತಿಯನ್ನು (ಜೆಪಿಸಿ) ರಚಿಸಲಾಗುತ್ತದೆ. ದೊಡ್ಡ ಪಕ್ಷ ಬಿಜೆಪಿಗೆ ಅಧ್ಯಕ್ಷ ಸ್ಥಾನ ಸಿಗಲಿದ್ದು, ಪ್ರಾತಿನಿಧ್ಯವೂ ಹೆಚ್ಚು ಸಿಗಲಿದೆ. ಕಳೆದ ವಾರ ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ರಚಿಸಿದ ಉನ್ನತ ಮಟ್ಟದ ಸಮಿತಿ ಈ ಬಗ್ಗೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವಿಸ್ತೃತ ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಎಪ್ಪತ್ತರ ದಶಕದ ಗ್ರಾಮೀಣ ಬದುಕನ್ನು ಜೀವಿಸುವ “ಗೋರೂರು”(ನಾಟಕ ವಿಮರ್ಶೆ)
(ಇತ್ತೀಚೆಗಷ್ಟೇ ಮೈಸೂರಿನಲ್ಲಿ ಪ್ರಯೋಗಗೊಂಡಿರುವ ನಾಟಕದ ವಿಮರ್ಶೆ ಇದು. ಇದೇ ನಾಟಕ ಬೆಂಗಳೂರಿನ ರಂಗಶಂಕರದಲ್ಲಿ ಆಗಸ್ಟ್ 13 ರಂದು ಸಂಜೆ 7.30 ಕ್ಕೆ ಪ್ರದರ್ಶನಗೊಳ್ಳಲಿದೆ.)

ದಿಯಾ

ಕನ್ನಡ ರಂಗಭೂಮಿಯ ಇತ್ತೀಚಿನ ಮೂರು ರಂಗ ಪ್ರಯೋಗಗಳಿಂದ ಮಾತು ಪ್ರಾರಂಭ ಮಾಡೋಣ. ಒಂದನೆಯದು ಕೆ.ಬಿ.ಸಿದ್ದಯ್ಯ ಅವರ ದಕ್ಲಕಥಾ ದೇವಿ, ನಂತರ ರಾಮಸ್ವಾಮಿ ಅಯ್ಯಂಗಾರ್ ಅವರ ಗೊರೂರು ಮತ್ತು ಲಂಕೇಶರ ಮುಟ್ಟಿಸಿಕೊಂಡವನು.

ಮೂರೂ ನಾಟಕಗಳ ದನಿ “ಜಾತಿ ವ್ಯವಸ್ಥೆಯ ಕರಾಳತೆ”‌. ಮನುಷ್ಯನ ನರ- ನಾಡಿ ಸೇರಿದಂತೆ ಕಚ್ಚಿ ಎಸೆದ ಉಗುರಿನಲ್ಲೂ ಹುದುಗಿರುವ ಜಾತಿ ಎನ್ನುವ ಹೊಲಸಿನ ಬಗ್ಗೆ ಮಾತನಾಡುತ್ತವೆ. ಈ ಜಾತಿ ಹಿನ್ನೆಲೆಯ ಕಥೆ ಅಥವಾ ಈಗ ರಂಗರೂಪಕ್ಕೆ ಇಳಿದಿರುವ ಪ್ರಯೋಗಗಳ ಬಗ್ಗೆ ಹೇಳುವಾಗ ಲೇಖಕರ ಜಾತಿಗಳನ್ನು ಹೇಳುವುದು ಅನಿವಾರ್ಯ.

ಕೆ.ಬಿ.ಸಿದ್ದಯ್ಯ ನೋವು ಉಣ್ಣುತ್ತಲೇ ಬೆಳೆದವರು. ಆ ನೋವುಗಳನ್ನೇ ಕಾವ್ಯವಾಗಿಸಿದವರು. ಇನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಲಂಕೇಶರು ಮೇಲ್ಜಾತಿ ಎಂದು ಕರೆಸಿಕೊಳ್ಳುವವರು.

ಮೇಲೆ ಹೇಳಿದ ಈ ಮೂರು ರಂಗಪ್ರಯೋಗಗಳನ್ನು ನೋಡಿದಾಗ ಕನ್ನಡ ರಂಗಭೂಮಿಯ ಹೆಚ್ಚಿನ ನಾಟಕಗಳು “ಜಾತಿ ವ್ಯವಸ್ಥೆ” ಯ ಬಗ್ಗೆ “ಇಕ್ಕುಲ್ರ, ವದಿರ್ಲಾ” ಎಂದೇ ಹೇಳುತ್ತವೆ. ಮರಾಠಿ ರಂಗಭೂಮಿಯ ಪ್ರಭಾವ ಎಂಬುದನ್ನು ನಾನು ಒಪ್ಪಲಾರೆ. ಭಾರತ ಜನನಿಯ ತನುಜಾತೆ ನೆಲದ ಶೋಷಣೆ ಬೇರೆಯದೇ ಸ್ವರೂಪದ್ದು ಹಾಗೂ ಅದಕ್ಕೆ ಪ್ರತಿರೋಧ ಇಲ್ಲಿಯೇ ಹುಟ್ಟಿರುವುದು.

ನನ್ನ ಕಣ್ಣಳತೆಯ ಓದಿನ ವಿಸ್ತಾರದಲ್ಲಿ ಜಾತಿ, ಧರ್ಮ ವ್ಯವಸ್ಥೆ ಪ್ರಶ್ನಿಸುವ ಈ ನೆಲದ ಲೇಖಕರ ಒಂದಷ್ಟು ನಾಟಕಗಳನ್ನು ಹೆಸರಿಸುತ್ತೇನೆ. ಕುವೆಂಪು ಅವರ ಶೂದ್ರ ತಪಸ್ವಿ, ಜಲಗಾರ, ಸಂಕ್ರಾಂತಿ, ಶಿವರಾತ್ರಿ, ಮಹಾಚೈತ್ರ, ಕುಸುಮಬಾಲೆ, ಒಡಲಾಳ, ಊರು ಸುಟ್ಟರೂ ಹನುಮಪ್ಪ ಹೊರಗೆ (ನಿಮಗೆ ತಿಳಿದದ್ದು ಸೇರಿಸಬಹುದು).

ಇಷ್ಟೊಂದು ವಿಚಾರಗಳು ಏಕೆ ಬಂದವು ಎಂದರೆ ಪ್ರಸ್ತುತ ಕನ್ನಡ ರಂಗಭೂಮಿ ಹೋಟೆಲಿನ ರುಬ್ಬುವ ಕಲ್ಲಿನಂತಾಗಿದೆ. ಅದೇ ಇಡ್ಲಿ, ದೋಸೆ, ಚಟ್ನಿಗಳನ್ನೇ ರುಬ್ಬುತ್ತಾ, ಪುಳಿಯೋಗರೆ, ಪೊಂಗಲ್ ತಿನ್ನಿಸುತ್ತಿವೆ. ಇಂತಹ ಹೊತ್ತಿನಲ್ಲಿ ದಕ್ಲಕಥಾ ಹಾಗೂ ಗೊರೂರು ಎನ್ನುವ ಈ ಎರಡು ಪ್ರಮುಖ ಪ್ರಯೋಗಗಳು ಸಾಕಷ್ಟು ಚರ್ಚೆಗೆ ದಾರಿ ಮಾಡಿಕೊಟ್ಟಿವೆ.

ದಕ್ಲಕಥಾ ನಾಟಕವನ್ನ ನಿರ್ದೇಶಕ ಬೇಕಂತಲೇ ಜನಪ್ರಿಯ ಶೈಲಿಯಲ್ಲಿ ಮಾಡಿದ್ದಾರೆ ಎನಿಸದಿರದು. ಇದು ಕಟು ವಾಕ್ಯಗಳು ಎನಿಸಬಹುದು. ತಳವರ್ಗದವರ ನೋವನ್ನು ಹೀಗಾದರೂ ಪ್ರೇಕ್ಷಕರಿಗೆ “ಇಂಜೆಕ್ಷನ್” ಕೊಡಲೇ ಬೇಕು ಎನ್ನುವ ಸಿಟ್ಟೇ? ಗೊತ್ತಿಲ್ಲ.

ಕಾವ್ಯವನ್ನು ಓದುವುದು ಅನುಭವಕ್ಕಾಗಿ, ಒಂದು ಜನಾಂಗೀಯ, ಕುಲದ ಕಥೆಯನ್ನು ರವಷ್ಟು ದಾಟಿಸುತ್ತದೆ. ಇಡೀ ನಾಟಕದಲ್ಲಿ ಹೆಚ್ಚು ತಟ್ಟುವುದು ತಮಟೆ ಹಾಗೂ ಅರೆಯ ಸದ್ದು, ಹಾಗೂ ಸಿದ್ದಯ್ಯ ಅವರ ಬಾಳಕಥೆ. ಮಾತುಗಳು ದೀರ್ಘವಾಗುವುದು ಬೇಡ. ಗೊರೂರಿನ ವಿಚಾರಕ್ಕೆ ಬರೋಣ.

“ಗೊರೂರು” ಲೇಖಕರ ಊರಿನ ಹೆಸರನ್ನೆ ನಾಟಕ ಇಟ್ಟುಕೊಂಡಿದೆ. ರಾಮಸ್ವಾಮಿ ಅವರ ಬರಹಗಳು ಇದೇ ಮೊದಲ ಬಾರಿಗೆ ರಂಗದ ಮೇಲೆ ಬಂದಿದೆ ಎಂದು ತಿಳಿದು ಆಶ್ಚರ್ಯವಾಯಿತು. ರಂಗಭೂಮಿಯವರ ಕಣ್ಣಿನಿಂದ ಇಷ್ಟು ವರ್ಷ ಅಯ್ಯಂಗಾರ್ ತಪ್ಪಿಸಿಕೊಂಡಿದ್ದಾದರೂ ಏಕೆ? ಹೇಗೆ ಎಂದು.

ರಂಗರೂಪಕ್ಕೆ ಇಳಿಸುವಾಗಲೇ ನಿರ್ದೇಶಕರಾದ ಮಂಜುನಾಥ್ ಬಡಿಗೇರ ಗೆದ್ದಿದ್ದಾರೆ. ಹೆಣಿಗೆಯನ್ನು ಚೆನ್ನಾಗಿ ಮಾಡಿಕೊಂಡಿದ್ದಾರೆ. ಗೊರೂರರ ಬದುಕಿನ ಒಳಗೆ ಕೊಂಚ ಇಳಿಯಬಹುದಿತ್ತು. ಅವರ ಸ್ವಾತಂತ್ರ್ಯ ಹೋರಾಟ, ಗಾಂಧಿ ಆಶ್ರಮದ ಅನುಭವ, ಗುಂಡೇಟಿಗೆ ಬಲಿಯಾದ ಮಗ ಹೀಗೆ..

ಅಯ್ಯಂಗಾರಿ ಹೆಣ್ಣು ಮಕ್ಕಳು ಹೀಗೆ ಬಂದು ಹಾಗೆ ಹೋಗುತ್ತಾರೆ. ಎಮ್ಮೆ (ಮಹಿಷನ) ಸುತ್ತಾ ನಡೆಯುತ್ತಿರುವ ರಾಜಕಾರಣಕ್ಕೆ ಎಮ್ಮೆ ಹೂಳುವ ದೃಶ್ಯ ಒಳ್ಳೆಯ ರೂಪಕವಾಗಿ ಒಳೇಟು ನೀಡುತ್ತದೆ.

ದೆವ್ವಗಳೊಟ್ಟಿಗೆ ನಮ್ಮ ಜನ ಸಹಬಾಳ್ವೆ ಮಾಡುತ್ತಾರೆ, ಆದರೆ ಜಾತಿ- ಧರ್ಮಗಳ ಭೂತ ನಮ್ಮ ಊರಿಗೆ ಕಾಲಿಟ್ಟಿಲ್ಲ ಎಂದು ರಾಮಸ್ವಾಮಿ ಹೇಳುತ್ತಾರೆ. ಗೊರೂರಿನ ಮಟ್ಟಿಗೆ ಮಾತು ನಿಜ ಇರಬಹುದೇ? ಎಲ್ಲ ಊರುಗಳಿಗೂ ಇದು ಅನ್ವಯಿಸುತ್ತದೆಯೇ?

ದನ ಕಾಯುವ ಹೊಲೆಯ ತೂರ, ಶಾಲು ಸಾಬಿ, ನಿಂಗನ ಮಗ, ಬಯಲಾಟದ ಎಲ್ಲಾ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ. ಆದರೂ ಒಂದಷ್ಟು ಪ್ರಶ್ನೆಗಳನ್ನು ಉಳಿಸಿಬಿಡುತ್ತದೆ.

ಇಡೀ ನಾಟಕ ಒಂದು ಗೆರೆ ಆಚೆ ನಿಂತರೇ ಹಾಸ್ಯ ನಾಟಕ ಈ ಕಡೆ ನಿಂತರೇ ಗೊರೂರ ಆಶಯ ಹಾಗೂ ಅವರಿಗೆ ಹಾಸ್ಯಪ್ರಜ್ಞೆ ಎರಡೂ ದಕ್ಕುತ್ತದೆ. “ಈ ಬಾರಿ ನಾಟಕದಲ್ಲಿ ಕುಣಿತ ಬೇಡ ಎಂದು ಸೀನಪ್ಪ ಹೇಳುತ್ತಾನೆ”. ಅದಕ್ಕೆ ರಾಮಸ್ವಾಮಿ ” ಬೇಡ ಒಂದಷ್ಟು ಪರಿಷ್ಕರಣೆ ಮಾಡೋಣ” ನಾಟಕದಲ್ಲಿ ಇರುವ ಮಾತಿನಂತೆ ಈಗಲೂ ನಿರ್ದೇಶಕರಿಗೆ ಹಾಗೂ ನಿರಂತರ ತಂಡಕ್ಕೆ ನಾಟಕದಲ್ಲಿ ಒಂದಷ್ಟು ಪರಿಷ್ಕರಣೆ ಮಾಡುವ ಅವಕಾಶವಿದೆ.

ಬಯಲಾಟದ ಉಸ್ತುವಾರಿ ಶಾಲು ಸಾಬಿಯದು “ರಾಮನ ಪಾತ್ರಧಾರಿಗೆ ರಾಮರಸ ಕುಡಿಸುವ, ಪಾತ್ರಧಾರಿ ವಿಶ್ರಾಂತಿ ಪಡೆಯವಾಗ ತಾನೇ ಬಾಣ ಬಿಡುವವನಾಗುತ್ತಾನೆ.

ಬಯಲಾಟದಲ್ಲಿ ಸರ್ವ ಸಮುದಾಯಗಳು ಪಾತ್ರಗಳಾಗುತ್ತವೆ. ಪಾತ್ರ ಕಳಚಿದ ನಿಜ ಪಾತ್ರದಲ್ಲಿ ಅವುಗಳ ಸ್ಥಿತಿ ಏನು? ಗೊರೂರು ಈಗ ಹೇಗಿದೆ. ನಮ್ಮ ದೇಶದ ಎಲ್ಲ ಹಳ್ಳಿಗಳು ಗೊರೂರುಗಳಾಗಿ ಇವೆಯೇ? ಗಾಂಧಿ ಮಾರ್ಗ ಸಮ ಸಮಾಜಕ್ಕೆ ಕರೆದುಕೊಂಡು ಹೋಗುವ ಮಾರ್ಗವೇ? ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಾಟಕ ಇನ್ನಷ್ಟು ಸಮರ್ಥವಾಗಿ ಹೇಳಬೇಕಾಗಿತ್ತು.

ನಾಟಕ ತುಂಬಾ ಚೆನ್ನಾಗಿ ನೋಡಿಸಿಕೊಂಡು ಹೋಗುತ್ತದೆ. ಸ್ವಾತಂತ್ರ ಬರುವ ಮುಂಚಿತವಾಗಿನ ಒಂದು ಬದುಕನ್ನು ಎಲ್ಲ ನಟರು ಅದ್ಭುತವಾಗಿ ರಂಗದ ಮೇಲೆ ಜೀವಿಸಿದ್ದಾರೆ. ಹಲವಾರು ಅದ್ಭುತ ನಾಟಕಗಳ ಮೂಲಕ ರಂಗ ಪ್ರೇಕ್ಷಕರಿಗೆ ಪರಿಚಯವಿರುವ ಮಂಜುನಾಥ ಬಡಿಗೇರ ಅವರು ಮತ್ತೊಮ್ಮೆ ಗೆದ್ದಿದ್ದಾರೆ. ಬೆಂಗಳೂರಿನ ಪ್ರೇಕ್ಷಕರು ಇದೇ ಆಗಸ್ಟ್ 13 ರಂದು ಸಂಜೆ 7.30 ಕ್ಕೆ ರಂಗಶಂಕರದಲ್ಲಿ ತಪ್ಪದೇ ನಾಟಕ ನೋಡಿ.

ಪ್ರೇಕ್ಷಕರನ್ನೂ ವಿಮರ್ಶಿಸುವ ದಾಷ್ಟ್ಯಕ್ಕೆ ಕೈ ಹಾಕುತ್ತಿದ್ದೇನೆ..!
ಇತ್ತೀಚೆಗೆ ರಂಗಭೂಮಿಯ ಪ್ರೇಕ್ಷಕರು ತುಸು ಹೆಚ್ಚಾಗಿಯೇ ಪ್ರತಿ ದೃಶ್ಯದ ನಂತರ ಚಪ್ಪಾಳೆ ಹೊಡೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ, ಇದು ಯಾವ ಕಾಲಘಟ್ಟದಲ್ಲಿ ಪ್ರಾರಂಭ ಆಯಿತು ಎನ್ನುವುನ್ನ ಸಂಶೋಧನೆ ಮಾಡಬೇಕು. ನಟರಿಗೆ ಹುರುಪು ಬರುತ್ತದೆ ಎಂಥಲೋ ಅಥವಾ ಸಿನಿಮಾ ರೀತಿ ಸಿಳ್ಳೆ ಹೊಡೆಯಲು ಆಗುವುದಿಲ್ಲ ಎಂದು ಚಪ್ಪಾಳೆ ರೂಡಿಸಿಕೊಂಡಿರುವನೊ ಗೊತ್ತಿಲ್ಲ. ತಳವರ್ಗದ ಪಾತ್ರಧಾರಿಗಳು ರಂಗದ ಮೇಲೆ ಬಂದಾಗ ಜನ ಏಕೆ ಚಪ್ಪಾಳೆ ಹೊಡೆದರು ತಿಳಿಯಲಿಲ್ಲ. ಪಾತ್ರಧಾರಿ ಚೆನ್ನಾಗಿ ಅಭಿನಯಿಸಿದ ಎಂಥಲೋ ಅಥವಾ ಇಂತಹ ಅವಸ್ಥೆಗೆ ಮರುಕಪಟ್ಟೊ?
ಪ್ರೇಕ್ಷಕರೇ ಉತ್ತರಿಸಬೇಕು…

ಶ್ರೀಪಾದಭಟ್‌ ಅವರಿಗೆ ರಂಗಭೂಪತಿ ಪ್ರಶಸ್ತಿ: ಗೋಪಾಲ ವಾಜಪೇಯಿಯವರ ರಂಗಗೀತೆಗಳ ರಂಗಸಂಜೆ
ಧಾರವಾಡ: ಗೋವಾ ರಂಗ-ಸಂಗ ತಂಡ, ಆಟ-ಮಾಟ ಧಾರವಾಡ ಮತ್ತು ಬಹುರೂಪಿ ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ಹಿರಿಯ ರಂಗ ನಿರ್ದೇಶಕ ಶ್ರೀಪಾದಭಟ್‌ ಅವರಿಗೆ 2024ರ ಸಾಲಿನ ರಂಗಭೂಪತಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕವಿ ರಾಜಕುಮಾರ್‌ ಮಡಿವಾಳರ ತಿಳಿಸಿದ್ದಾರೆ.

ಧಾರವಾಡ ರಂಗಾಯಣ ಆವರಣದಲ್ಲಿರುವ ಪಂ.ಬಸವರಾಜ ರಾಜಗುರು ಬಯಲುರಂಗಮಂದಿರದಲ್ಲಿ ಮಾ.30ರಂದು ಸಂಜೆ 6ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ʼಪ್ರಶಸ್ತಿ ಪ್ರಧಾನದ ಜೊತೆಗೆ ಸಾಹಿತಿ ಗೋಪಾಲ ವಾಜಪೇಯಿ ಅವರ ನೆನಪಿನ ರಂಗಗೀತೆಗಳ “ರಂಗಸಂಜೆ” ಕಾರ್ಯಕ್ರಮವು ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಪಾಲ್‌ ವಾಜಪೇಯಿಯವರು ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದವರು. ಜೊತೆಗೆ ಜಕವಿ, ನಾಟಕಕಾರ, ನಟ, ನಿರ್ದೇಶಕರಾಗಿ, ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ  ಮೂರು ದಶಕಗಳಿಗೂ ಹೆಚ್ಚು ಕಾಲ ಒಂದಿಡಿ ತಲೆಮಾರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದವರು. ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು, ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅದೇನೋ ಕಾರಣಕ್ಕೆ ಅವರು ಅಜ್ಞಾತರಾಗಿಯೇ ಉಳಿದರು. ಮುಖ್ಯವಾಹಿನಿಗೆ ಬರಲಿಲ್ಲ. ಅವರಿಗೆ ದಕ್ಕಬೇಕಾದ ಗೌರವವೂ ದೊರೆಯಲಿಲ್ಲ.

ಅಂಥ ಅಪರೂಪದ ಸಾಧಕನನ್ನು ನೆನಪಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ, ಕೊಡುಗೆ ನೀಡಿರುವ ಪ್ರತಿಭಾವಂತರೊಬ್ಬರಿಗೆ “ರಂಗಭೂಪತಿ” ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ರಾಜಕುಮಾರ್‌ ತಿಳಿಸಿದ್ದಾರೆ,

ಪ್ರಸಕ್ತ ಸಾಲಿನ ಮೊದಲ ಪ್ರಶಸ್ತಿಯನ್ನು ಪ್ರತಿಭಾವಂತ ನಿರ್ದೇಶಕ ಶ್ರೀ ಶ್ರೀಪಾದ ಭಟ್ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ 5 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ವಿಶ್ವರಂಗ ಭೂಮಿ ದಿನದ ಪ್ರಯುಕ್ತ, ಈ ಕಾರ್ಯಕ್ರಮದಲ್ಲಿ ಗೋಪಾಲ ವಾಜಪೇಯಿ ಅವರು ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದೆ.

ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಮ್, ರವಿ ಯಲ್ಲಪ್ಪನವರ್,  ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಹಿರಿಯ ಸಾಹಿತಿ, ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಶ್ರೀ ಗೋಪಾಲ ವಾಜಪೇಯಿ ಕುಟುಂಬಸ್ತರು, ರಂಗಕರ್ಮಿ ಧನಂಜಯ ಕುಲಕರ್ಣಿ, “ಅವಧಿ ಈ-ಮ್ಯಾಗಜಿನ್” ಸಂಪಾದಕ ಶ್ರೀ ಜಿ,ಎನ್. ಮೋಹನ, ರವಿ ಕುಲಕರ್ಣಿ ಉಪಸ್ಥಿತರಿರುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡ ರಂಗಭೂಮಿಯಲ್ಲೊಂದು ಹೊಸ ಪ್ರಯತ್ನ ಇಮ್ಮೆರ್ಸಿವ್ ಥಿಯೇಟರ್ ಪ್ರೊಡಕ್ಷನ್ – IC47
ಇಮ್ಮರ್ಸಿವ್ ಥಿಯೇಟರ್ ಎನ್ನುವುದು ಪಶ್ಚಿಮದಲ್ಲಿ ಜನಪ್ರಿಯ ರಂಗ ಪ್ರಕಾರವಾಗಿದೆ. ಕನ್ನಡ ರಂಗಭೂಮಿಯಲ್ಲಿ ಈ ಪ್ರಕಾರದ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ಥೆಮಾ ಥಿಯೇಟರ್ ಕಂಪನಿಯ IC 47 ನಾಟಕವು  ಕನ್ನಡ ರಂಗಭೂಮಿಯಲ್ಲಿ ಈ ಪ್ರಕಾರದ ಹೊಸ ಪ್ರಯತ್ನವಾಗಿದೆ.

ಪ್ರೇಕ್ಷಕರು ಮತ್ತು ಕಲಾವಿದರನ್ನು  ಬೇರ್ಪಡಿಸುವ “ನಾಲ್ಕನೇ ಗೋಡೆ” ಯನ್ನು ಒಡೆಯುವ  ಮೂಲಕ ವಿನೂತನ ಅನುಭವವನ್ನು ನೀಡುತ್ತದೆ.

ಪ್ರೇಕ್ಷಕರು ನಾಟಕದಲ್ಲಿ ಸಕ್ರಿಯವಾಗಿ ಪಾಲ್ಗೊಂಡು , ಕಥೆ ಮತ್ತು ಭಾವನೆಗಳನ್ನು ಹೆಚ್ಚಾಗಿ ಅರ್ಥೈಸಿಕೊಳ್ಳುವಂತೆ ಮಾಡುವುದು ಈ ಪ್ರಕಾರದ ಮೂಲ ಉದ್ದೇಶ.

ಇದೇ ನಾಟಕದ ಹಿಂದಿನ ಪ್ರದರ್ಶನಗಳಿಗೆ  ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು. ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ಇದು ಅತ್ಯಂತ ಧೈರ್ಯಶಾಲಿ ಪ್ರಯತ್ನಗಳಲ್ಲಿ ಒಂದಾಗಿದೆ ಎಂಬುದು ರಂಗಪ್ರಿಯರ ಅಭಿಪ್ರಾಯ.

75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಥೆಮಾ ಥಿಯೇಟರ್ ಕಂಪನಿಯು ಆಗಸ್ಟ್ 12, 13 ಮತ್ತು 14 ರಂದು ಆರು ಹೊಸ ಪ್ರದರ್ಶನಗಳನ್ನು ಹಮ್ಮಿಕೊಂಡಿದೆ.

ಈ ನಾಟಕವನ್ನು ಕನ್ನಡ ರಂಗಭೂಮಿಯ ಖ್ಯಾತ ನಿರ್ದೇಶಕಿ ಹಾಗೂ ವಿಜಯನಗರ ಬಿಂಬದ ಪ್ರಾಂಶುಪಾಲರಾದ ಡಾಕ್ಟರ್ ಸುಷ್ಮಾ ಎಸ್ ವಿ ಅವರು ನಿರ್ದೇಶಿಸಿದ್ದಾರೆ  ಮತ್ತು ವಿಜಯನಗರ ಬಿಂಬದ ವಿದ್ಯಾರ್ಥಿ ಹಾಗು ಯುವ ಬರಹಗಾರ ಕೌಶಿಕ್ ಎಚ್ ಎ ಬರೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಭೀಮಸೇನ್ , ಬಾಬು ಹಿರಣಯ್ಯ, ಗುಂಡಣ್ಣ, ವಿಜಯಮ್ಮ, ಸುಚೇಂದ್ರ ಪ್ರಸಾದ್ ಮತ್ತು ಅಭಿಷೇಕ್ ಅಯ್ಯಂಗಾರ್ ಸೇರಿದಂತೆ ಜನಪ್ರಿಯ ರಂಗಕರ್ಮಿಗಳು ಭಾಗಿಯಾಗಲಿದ್ದಾರೆ.