theatre – Peepal Media

ರಂಗಪಯಣದಿಂದ ಹೊಸ ನಾಟಕ: ಹೆಸರೇ ಇಲ್ಲದವರು
ರಂಗಪಯಣ ನಾಟಕ ತಂಡದ ಹೊಸ ನಾಟಕ ʼ ಹೆಸರೇ ಇಲ್ಲದವರುʼ ಮೇ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ರಾಜಗುರು ಹೊಸಕೋಟೆ ಅವರು ರಚಿಸಿ ನಿರ್ದೇಶಿಸಿದ್ದಾರೆ.

“ಸದಾ ಧ್ವನಿ ಕಳೆದುಕೊಂಡವರ ಧ್ವನಿಯಾಗಿ ಅವರ ಬದಕನ್ನೆ ಕಥೆಯಾಗಿಸಿ ಜೀವ ತುಂಬುವ ರಂಗಪಯಣ ತಂಡವು ಸಾಂಸ್ಕೃತಿಕವಾಗಿ ಅಲೆಮಾರಿಗಳಾಗಿ ತಮ್ಮದೇ ಬದುಕು ಕಟ್ಟಿಕೊಂಡವರ ಕಥೆಯನ್ನು ಹೇಳಲು ವೇದಿಕೆ ಹತ್ತುತ್ತಿದ್ದೆ. ಹೆಸರಿಲ್ಲದೇ ಆಧುನಿಕ ಜಂಜಡಗಳ‌ ನಡುವೆ ಕಳೆದುಹೋಗುತ್ತಿರುವ ಅಲೆಮಾರಿ ಸಮುದಾಯದ ನೋವನ್ನು, ಸಂಕಟವನ್ನು ಕಣ್ಣುಮುಂದೆ ತರುತ್ತಲೇ, ಭಾರತದ ಬಹುತ್ವವನ್ನು, ಜ್ಞಾನ ದ ಮೌಲ್ಯತೆಯನ್ನು ಮತ್ತೆ ನೆನಪಿಸುವ ಹೊಸ ನಾಟಕ ಪ್ರಯೋಗ ‘ಹೆಸರೇ ಇಲ್ಲದವರು’. ಸಮಾಜದ ಕಟ್ಟಲೆಗಳು ಒಂದು ಕಡೆ ನೋವಿನ ಕೂಪಕ್ಕೆ ತಳ್ಳಿದರೆ ಕುಲಕಸುಬುಗಳನ್ನೆ ನಂಬಿದ ಸಮುದಾಯಗಳು ಆಧುನಿಕತೆಯ ಬಾರುಕೋಲಿಗೆ ಸಿಲುಕಿ ನಲುಗಿದ ಕಥನವೇ ಹೆಸರೇ ಇಲ್ಲದವರು,” ರಂಗಪಯಣವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

“ಕೊಳಕು ರಾಜಕೀಯದಲ್ಲಿ ಸಿಲುಕಿ ನಲುಗುವ, ನೆಲವಿಲ್ಲದ ಅಲೆಮಾರಿಗಳು ಸಾಂಸ್ಕೃತಿಕ ಐಡೆಂಟಿಟಿ ಗೆ ಪರಿತಪಿಸುತ್ತಿರುವಾಗ ವ್ಯವಸ್ಥೆಯ ವ್ಯೂಹ ಅವರನ್ನು ಬಲಿ ತೆಗೆದುಕೊಳ್ಳವ ಹುನ್ನರಕ್ಕೆ ಸತ್ಯದ ರುಚಿ ತೋರಿಸಿದವರ ಕಥನವಾಗಿದೆ.”

ನಾಟಕ ಪ್ರದರ್ಶನ ಎಲ್ಲಿ? ಯಾವಾಗ?

ನಾಟಕ-ಹೆಸರೇ ಇಲ್ಲದವರು
ರಚನೆ – ವಿನ್ಯಾಸ – ಸಂಗೀತ – ನಿರ್ದೇಶನ — ರಾಜಗುರು ಹೊಸಕೋಟೆ
ಪ್ರಸಾದನ – ಜಯರಾಜ್ ಹುಸ್ಕೂರು
ಬೆಳಕು – ಎಂ ಜಿ ನವೀನ್
ನಿರ್ವಹಣೆ – ನಯನ ಸೂಡ

ದಿನಾಂಕ: ಮೇ 27, ಮಂಗಳವಾರ
ಸಮಯ : 7:30 ಕ್ಕೆ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ
ಬೆಂಗಳೂರು

ಈ ಓಟಿಟಿ ಸೂಪರ್ ಸ್ಟಾರ್ ಗಳ ಸಂಭಾವನೆ ಎಷ್ಟು ಗೊತ್ತೇ?
ಇತ್ತೀಚಿನ ದಿನಗಳಲ್ಲಿ ಸಿನಿಮಾ ಅನ್ನೋದು ಕೇವಲ ಥಿಯೇಟರ್ ಗಳಿಗೆ ಸೀಮಿತವಾಗಿ ಉಳಿದಿಲ್ಲ. ಅದು ಈಗ ನಮ್ಮ ಮನೆಯ ಹೋಮ್ ಥಿಯೇಟರ್ ಅಷ್ಟೇ ಅಲ್ಲದೆ, ನಮ್ಮ ಕೈಯಲ್ಲಿರುವ ಮೊಬೈಲ್ ಗಳಲ್ಲೂ ಲಭ್ಯವಿದೆ. ಇದಕ್ಕೆ ಕಾಣರ ಓಟಿಟಿ ಎಂಬ ಮಾಯಾಲೋಕ. ಕಳೆದ ಕೆಲವು ವರ್ಷಗಳಲ್ಲಿ ಓಟಿಟಿ ವೀಕ್ಷಕರ ಸಂಖ್ಯೆಯಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಬಂದಿದೆ. ರಾಧಿಕಾ ಆಪ್ಟೆ ಮತ್ತು ಜಿತೇಂದ್ರ ಕುಮಾರ್ ಅವರಂತಹ ನಟರು, ಮನರಂಜನಾ ಪ್ರಪಂಚದ ಬದಲಾಗುತ್ತಿರುವ ವ್ಯಾಕರಣವನ್ನು ಬಹಳ ಬೇಗ ಅರ್ಥ ಮಾಡಿಕೊಂಡರು.  ಹಾಗಾಗಿ ಅವರು ಇಂದಿನ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ನಿರ್ಮಿಸಿದ ಅನೇಕ ಕಂಟೆಂಟ್‌ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಮುಖ್ಯವಾಹಿನಿಯ ನಟರಿಗಿಂತ ಒಂದು ಕೈ ಹೆಚ್ಚೇ ಎನ್ನುವಂತೆ ಅವರ ಬೆಳವಣಿಗೆ ಕಾಣುತ್ತಿದೆ. ಅದನ್ನು ನೋಡಿದ ನಂತರ, ಒಂದು ಕಾಲದಲ್ಲಿ ಬೆಳ್ಳಿತೆರೆಗೆ ಸೀಮಿತವಾಗಿದ್ದ ಪ್ರಮುಖ ಚಲನಚಿತ್ರ ನಟರು ಸಹ ಓಟಿಟಿಯ ಶೋಗಳು, ವೆಬ್ ಸೀರೀಸ್ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ದಾರಿ ಮಾಡಿಕೊಂಡಿದ್ದಾರೆ.

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ZEE5 ಮತ್ತು SonyLIV ನಂತಹ ಓಟಿಟಿ ಪ್ಲಾಟ್‌ಫಾರ್ಮ್‌ಗಳು, ಪ್ರತಿಯೊಂದು ರೀತಿಯ ವೀಕ್ಷಕರನ್ನು ತೃಪ್ತಿ ಪಡಿಸುವ ವೈವಿಧ್ಯಮಯ ಕಂಟೆಂಟ್ ಗಳನ್ನು ಕೊಡುವಲ್ಲಿ ಯಶಸ್ವಿಯಾಗಿವೆ. ಹೊಸ ಚಲನಚಿತ್ರಗಳ ಹಕ್ಕುಗಳನ್ನು ಖರೀದಿಸುವುದರಿಂದ ಹಿಡಿದು ತಾವೇ ನಿರ್ಮಾಣ ಮಾಡುವುದರೊಂದಿಗೆ ಈ ವೇದಿಕೆಗಳು ಮನರಂಜನಾ ಉದ್ಯಮ ಕಾರ್ಯನಿರ್ವಹಿಸುವ ವಿಧಾನವನ್ನು ಬದಲಾಯಿಸಿವೆ.

ಅದು ಕಥಾಹಂದರದ ವಿಷಯ ಇರಲಿ ಅಥವಾ ನಟ, ನಟಿಯರನ್ನು ತೋರಿಸುವ ರೀತಿ ಇರಲಿ, ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲ್ಲವೂ ಬದಲಾಗಿದೆ. ಒಂದು ಕಾಲದಲ್ಲಿ ಹಿರಿತೆರೆಯಲ್ಲಿ ಮಿಂಚಲು ಹೆಣಗಾಡುತ್ತಿದ್ದ ಪ್ರತಿಭಾವಂತ ನಟರು ತಮ್ಮ ಕಲೆಯನ್ನು ಗೌರವಿಸುವ ಮತ್ತು ತಕ್ಕ ಬೆಲೆ ಕೊಡುವ ಮಾಧ್ಯಮವನ್ನು ಕಂಡುಕೊಂಡಿದ್ದಾರೆ. ಹಾಗಾಗಿ, ಮುಖ್ಯವಾಹಿನಿಯ ಸಿನಿಮಾ  ನಟರಂತೆ, ಇಂದು ಓಟಿಟಿ ನಟರು ತಮ್ಮ ಪಾತ್ರಗಳಿಗಾಗಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಗಳಿಸುತ್ತಿದ್ದಾರೆ. ಓಟಿಟಿ ಉದ್ಯಮವನ್ನು ಆಳುತ್ತಿರುವ ಮತ್ತು ತಮ್ಮ ವಿಭಿನ್ನ ಅಭಿನಯದ ಮೂಲಕ ವೀಕ್ಷಕರನ್ನು ರಂಜಿಸುವ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಓಟಿಟಿ ನಟ, ನಟಿಯರ ಪಟ್ಟಿ ಇಲ್ಲಿದೆ ನೋಡಿ.

1. ಸೈಫ್ ಅಲಿ ಖಾನ್

ನೆಟ್‌ಫ್ಲಿಕ್ಸ್‌ನ ಸೇಕ್ರೆಡ್ ಗೇಮ್ಸ್‌ನೊಂದಿಗೆ ಓಟಿಟಿ ಪ್ರವೇಶ ಮಾಡಿದ ಸೈಫ್

ಸಿಯಾಸತ್‌ ಸರಣಿಯಲ್ಲಿ ಸರ್ತಾಜ್ ಸಿಂಗ್ ಅವರ ಪಾತ್ರಕ್ಕಾಗಿ 15 ಕೋಟಿ ರೂ. ಪಡೆದರು. ಯಶಸ್ವಿ ಮೊದಲ ಸೀಸನ್‌ನ ನಂತರ, ನೆಟ್‌ಫ್ಲಿಕ್ಸ್  ಎರಡನೇ ಸೀಸನ್ ತಯಾರಿಕೆಗಾಗಿ 100 ಕೋಟಿ ರೂ. ಹೂಡಿಕೆ ಮಾಡಿತ್ತು.

2. ಮನೋಜ್ ಬಾಜಪೇಯಿ

ಭಾರೀ ಅಭಿಮಾನಿಗಳನ್ನು ಹೊಂದಿರುವ ಫ್ಯಾಮಿಲಿ ಮ್ಯಾನ್ ಥ್ರಿಲ್ಲರ್‌ನಲ್ಲಿ ಮನೋಜ್ ಬಾಜ್‌ಪೇಯಿ ಶ್ರೀಕಾಂತ್ ತಿವಾರಿ ಎಂಬ ಮಧ್ಯಮ ವರ್ಗದ ವ್ಯಕ್ತಿಯಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಗುಪ್ತಚರ ಅಧಿಕಾರಿಯಾಗಿ ರಹಸ್ಯವಾಗಿ ಕಾಣಿಸಿಕೊಂಡಿದ್ದರು. ಏಷ್ಯಾನೆಟ್ ಪ್ರಕಾರ, ದಿ ಫ್ಯಾಮಿಲಿ ಮ್ಯಾನ್ 2 ಗಾಗಿ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟನಿಗೆ 10 ಕೋಟಿ ರೂ. ನೀಡಲಾಗಿತ್ತು.

3. ನವಾಜುದ್ದೀನ್ ಸಿದ್ದಿಕಿ

ಸೇಕ್ರೆಡ್ ಗೇಮ್ಸ್ ಸೀಸನ್ 1 ರ ಯಶಸ್ಸಿನ ನಂತರ, ನವಾಜುದ್ದೀನ್ ಸಿದ್ದಿಕಿ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡರು. ಎರಡನೇ ಸೀಸನ್‌ಗೆ ನವಾಜುದ್ದೀನ್ ಪಡೆದಿದ್ದು 10 ಕೋಟಿ ರೂ.

4. ರಾಧಿಕಾ ಆಪ್ಟೆ

ಸೇಕ್ರೆಡ್ ಗೇಮ್ಸ್‌ನ ಭಾಗವಾಗಿದ್ದ ರಾಧಿಕಾ ಆಪ್ಟೆ ಓಟಿಟಿ  ಸ್ಟಾರ್ ಎಂದೇ ಎಲ್ಲರಿಗೂ ಪರಿಚಿತ. ಇಂಡಿಯಾಟೈಮ್ಸ್ ಪ್ರಕಾರ, ಸರಣಿಯಲ್ಲಿ ರಾ ಏಜೆಂಟ್ ಅಂಜಲಿ ಮಾಥುರ್ ಪಾತ್ರಕ್ಕಾಗಿ ಅವರು 4 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದರು.

5. ಪಂಕಜ್ ತ್ರಿಪಾಠಿ

ಇಂದಿನ ಕಾಲದಲ್ಲಿ ಅತ್ಯಂತ ನಂಬಿಕಸ್ಥ ನಟರಲ್ಲಿ ಒಬ್ಬರು, ಪಂಕಜ್ ತ್ರಿಪಾಠಿ. ಅಸಾಧಾರಣ ಪ್ರತಿಭಾವಂತ ನಟ. ಅವರು ಓಟಿಟಿ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿ ಅರ್ಹವಾದ ಮನ್ನಣೆ ಪಡೆದಿದ್ದಾರೆ.  ಮಿರ್ಜಾಪುರ್ ಗಾಗಿ  10 ಕೋಟಿ ಮತ್ತು ಸೇಕ್ರೆಡ್ ಗೇಮ್ಸ್ 2 ಗೆ ರೂ 12 ಕೋಟಿ ಸಂಭಾವನೆ ಪಡೆದಿದ್ದಾರೆ ಪಂಕಜ್.

6. ಅಲಿ ಫಜಲ್

ಲಕ್ನೋ ಮೂಲದ ನಟ ಅಲಿ ಫಜಲ್ ಅವರು ಭಾರತ ಮತ್ತು ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಕೊನೆಯದಾಗಿ ಡೆತ್ ಆನ್ ದಿ ನೈಲ್ ಚಿತ್ರದಲ್ಲಿ ಗಾಲ್ ಗಡೋಟ್ ಮತ್ತು ಕೆನ್ನೆತ್ ಬ್ರನಾಗ್ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಅಲಿ,  ಗುಡ್ಡು ಭಯ್ಯಾ ಅವತಾರಕ್ಕಾಗಿ  ಪ್ರತಿ ಸಂಚಿಕೆಗೆ 12 ಲಕ್ಷ ರೂ. ಪಡೆದಿದ್ದಾರೆ.

7. ಸಮಂತಾ ಪ್ರಭು

ದಕ್ಷಿಣ ಭಾರತದ ಚಲನಚಿತ್ರರಂಗದ ದೊಡ್ಡ ನಟಿಯರಲ್ಲಿ ಒಬ್ಬರಾದ ಸಮಂತಾ ಬಹಳ ಕಡಿಮೆ ಸಮಯದಲ್ಲಿ ಪ್ಯಾನ್-ಇಂಡಿಯಾ ಸ್ಟಾರ್ ಆಗಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ಅವರು ಕಾಣಿಸಿಕೊಂಡಿರುವ ಪುಷ್ಪಾ ಚಿತ್ರದ ‘ಊ ಅಂಟಾವಾ’ ಹಾಡು ಅವರನ್ನು ದೇಶದಲ್ಲಿ ರಾತ್ರೋರಾತ್ರಿ ಫೇಮಸ್ ಮಾಡಿತು. ಈಕೆ ದಿ ಫ್ಯಾಮಿಲಿ ಮ್ಯಾನ್‌ ಮೂಲಕ ಓಟಿಟಿ ಪ್ರವೇಶ ಮಾಡಿದ್ದರು. ಏಷ್ಯಾನೆಟ್ ಪ್ರಕಾರ, ಈ ನಟಿ ತನ್ನ ಪಾತ್ರಕ್ಕಾಗಿ 4 ಕೋಟಿ ರೂ. ಪಡೆದಿದ್ದಾರೆ.

8. ಜಿತೇಂದ್ರ ಕುಮಾರ್

ಓಟಿಟಿಯಲ್ಲಿ ಭರ್ಜರಿ ಹೆಸರು ಮಾಡಿದ ಇನ್ನೊಂದು ಸೀರೀಸ್ ಎಂದರೆ ಅದು ಪಂಚಾಯತ್.  ಪಂಚಾಯತ್ ಅತ್ಯಂತ ಜನಪ್ರಿಯ ಭಾರತೀಯ ವೆಬ್ ಸೀರೀಸ್ ಗಳಲ್ಲಿ ಒಂದಾಗಿದೆ.  ಉತ್ತರ ಪ್ರದೇಶದ ಫುಲೇರಾ ಎಂಬ ದೂರದ ಹಳ್ಳಿಯಲ್ಲಿ ಪಂಚಾಯತ್ ಕಾರ್ಯದರ್ಶಿಯಾಗಿ ಸೇರುವ ಎಂಜಿನಿಯರಿಂಗ್ ಪದವೀಧರರ ಜೀವನವನ್ನು ತೋರಿಸುವ ಈ ಸರಣಿಯ ಮೂಲಕ ಜಿತೇಂದ್ರ ಕುಮಾರ್ ಫೇಮಸ್ ಆದರು. ಇವರ ಸಂಭಾವನೆ ಕೂಡ ದೊಡ್ಡ ಮಟ್ಟದಲ್ಲೇ ಇದೆ ಎಂದು ಹೇಳಲಾಗುತ್ತಿದೆ.

9. ಪ್ರತೀಕ್ ಗಾಂಧಿ

ಅಮೆಜಾನ್ ಪ್ರೈಮ್ ವೀಡಿಯೊದ ಮಾಡರ್ನ್ ಲವ್, ಮುಂಬೈನಲ್ಲಿ ಸಲಿಂಗಕಾಮಿ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರತೀಕ್ ಗಾಂಧಿ ಸ್ಕ್ಯಾಮ್ 1992 ನ ನಂತರ ರಾತ್ರೋರಾತ್ರಿ ಸ್ಟಾರ್ ಆದರು. ಈ ನಟ ಪ್ರತಿ ಸಂಚಿಕೆಗೆ 5 ಲಕ್ಷ ರೂ. ಪಡೆಯುತ್ತಾರೆ ಎನ್ನುತ್ತವೆ ವರದಿಗಳು.

10. ಸುನಿಲ್ ಗ್ರೋವರ್

ಸುನಿಲ್ ಗ್ರೋವರ್ ವಿಭಿನ್ನ ರೀತಿಯ ಪ್ರತಿಭೆಗಳಿರುವ ನಟ. ಈತ ತನ್ನ ಕಾಮಿಕ್ ಟೈಮಿಂಗ್‌ ನಿಂದ ನಗಿಸುವುದಷ್ಟೇ ಅಲ್ಲದೆ, ತನ್ನ ತೀವ್ರವಾದ ನಟನೆಯಿಂದ  ಬೆರಗುಗೊಳಿಸುತ್ತಾರೆ ಕೂಡ. ಥ್ರಿಲ್ಲರ್ ವೆಬ್ ಸರಣಿ ತಾಂಡವ್‌ನಲ್ಲಿ ಕಾಣಿಸಿಕೊಂಡಿರುವ ಗ್ರೋವರ್ ಪ್ರತಿ ಸಂಚಿಕೆಗೆ 5 ಲಕ್ಷ ರೂ ಪಡೆಯುತ್ತಾರೆ ಎನ್ನಲಾಗಿದೆ.