Thirthahalli – Peepal Media

ಚುನಾವಣೆ ಬಹಿಷ್ಕಾರ : ಹೋರಾಟ ಹತ್ತಿಕ್ಕಲು ಪೊಲೀಸ್ ಬಲಪ್ರಯೋಗ, ಹೋರಾಟಗಾರರ ಖಂಡನೆ
ತೀರ್ಥಹಳ್ಳಿ ತಾಲ್ಲೂಕಿನ ಉದ್ದೇಶಿತ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯು ಅವೈಜ್ಞಾನಿಕ. ಮತ್ತು ನದಿಗಳೂ ಸೇರಿದಂತೆ ಜಲಮೂಲಗಳ ನೀರಿನ ಮೇಲಿನ ಜನಸಾಮಾನ್ಯರ ಹಕ್ಕನ್ನು ಕಸಿದು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಒತ್ತೆ ಇಡುವ ಕೇಂದ್ರೀಕೃತ ಯೋಜನೆಗಳನ್ನು ರೂಪಿಸಬಾರದೆಂದು ರೈತರು ಮತ್ತು ನದಿ ದಡಗಳ ಜನತೆ ಕಳೆದ ಆರು ತಿಂಗಳಿನಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟವನ್ನು ಹತ್ತಿಕ್ಕಲು ಬಲ ಪ್ರಯೋಗ ಬಳಸಿದ ಸರ್ಕಾರ ಮತ್ತು ರಾಜಕಾರಣಿಗಳು ಹಣದ ಮೂಟೆ ಎಣಿಸುವ ಯೋಜನೆಯ ಜಾರಿಗಾಗಿ ಪಕ್ಷಾತೀತವಾಗಿ ಅಸಹ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಭೀಮೇಶಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಸ್ಥಳೀಯ ಆಡಳಿತವನ್ನು ದೂರಿದೆ.

ತಾಲ್ಲೂಕಿನ ಇಂತಹ ಚಿಕ್ಕ ಹೋರಾಟವನ್ನು ಹತ್ತಿಕ್ಕಲು ಅಪವಿತ್ರ ಮೈತ್ರಿ ಮಾಡಿಕೊಂಡ ರಾಜಕಾರಣಿಗಳು ನಮ್ಮ ಊರುಗಳಿಗೆ ಬರುವುದು ಬೇಡ ಎಂದು ಚಳುವಳಿಗಾರರು ಬೋರ್ಡ್ ಹಾಕಿದ್ದನ್ನು ಪೋಲೀಸ್ ಬಲ ಬಳಸಿಕೊಂಡು ಕಿತ್ತು ಹಾಕುತ್ತಿದ್ದಾರೆ. ಹೀಗಾಗಿ ನಾವು ಇಂತಹವರಿಗೆ ಮತ ನೀಡದಿರಲು ಚುನಾವಣೆಯಿಂದ ದೂರ ಉಳಿಯಲು ಬಯಸುತ್ತೇವೆ ಎಂದು ಹೋರಾಟಗಾರರು ಮತ್ತೊಮ್ಮೆ ಸಾರಿ ಹೇಳಿದ್ದಾರೆ‌.

ನಾಜುಕಯ್ಯ ರಾಜಕಾರಣಿಗಳಿಗೆ ಜನಸಾಮಾನ್ಯರು ಎಂದರೆ ತಮ್ಮ ಮೋಸದ ಮಾತು ನಂಬಿ ಮತ ನೀಡುವ ಮೂರ್ಖರು ಎಂಬ ನಂಬಿಕೆ ಗಾಢವಾಗಿಬಿಟ್ಟಿದೆ. ಇದೇ ಭಂಡ ಧೈರ್ಯದಿಂದ ಈ ಸಲದ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಮತ ಹಾಕಿಸಲು ಪೋಲೀಸ್ ಅಥವಾ ಮಿಲಿಟರಿ ಬಲದಿಂದ ಮತಗಟ್ಟೆಗಳಿಗೆ ಎಳೆದುಕೊಂಡು ಹೋಗುತ್ತಾರೆಯೇ ಎಂದು ಕಾಯುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ಜನತಂತ್ರದಲ್ಲಿ ನಾವು ಸರ್ಕಾರಗಳಿಗಾಗಲಿ, ಸರ್ಕಾರಿ ಯಂತ್ರಗಳಿಗಾಗಲಿ, ಚುನಾವಣಾ ಆಯೋಗಕ್ಕಾಗಲಿ ಕರ್ತವ್ಯದ ಹೊಣೆ ನೀಡಿದ್ದೇವೆಯೇ ಹೊರತು ಅಧಿಕಾರ ನೀಡಿಲ್ಲ. ಅಧಿಕಾರವನ್ನು ಜನರೇ ಉಳಿಸಿಕೊಂಡಿರುತ್ತಾರೆ ಎಂಬ ಎಚ್ಚರವನ್ನು ಸಂಬಂಧಪಟ್ಟವರು ಅರಿತುಕೊಂಡರೆ ಒಳಿತು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಭೀಮೇಶ್ವರ ಸಂಗಮ ಉಳಿಸಿ ಹೋರಾಟ ಸಮಿತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತವನ್ನು ಎಚ್ಚರಿಸುತ್ತಿದ್ದರೂ ತಾಲ್ಲೂಕಿನಾದ್ಯಂತ ಇದರ ಕೆಲಸ ಭರದಿಂದ ಸಾಗಿದೆ. ಈ ಹಿಂದೆಯೇ ನಿರ್ಮಿಸಲಾದ ಡ್ಯಾಂ ಮೂಲಕ ನೀರೆತ್ತಲು ಎಲ್ಲಾ ಅವಕಾಶಗಳಿದ್ದರೂ ತುಂಗಾ ಹಾಗೂ ಮಾಲತಿ ನದಿ ಸಂಗಮದಲ್ಲೇ ನೀರು ತಗೆದುಕೊಳ್ಳುವ ಬಗ್ಗೆ ಸ್ಥಳೀಯ ರಾಜಕಾರಣಿಗಳು ಹಾಗೂ ಗುತ್ತಿಗೆದಾರರು ಹಠ ಹಿಡಿದು ಕೂತಿರುವುದು ಇಲ್ಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇಲ್ಲಿ ನೀರು ಎತ್ತುವುದರಿಂದ ಆಗುವ ದುಷ್ಪರಿಣಾಮದ ಬಗ್ಗೆ ಪೀಪಲ್ ಮೀಡಿಯಾ ಈಗಾಗಲೆ ವರದಿ ಮಾಡಿದೆ‌.

ತೀರ್ಥಹಳ್ಳಿಯಲ್ಲಿ ಚುನಾವಣೆ ಬಹಿಷ್ಕಾರ : ರಾಜಕಾರಣಿಗಳು ಗ್ರಾಮ ಪ್ರವೇಶಿಸಿದರೆ ಪೊರಕೆ ಸೇವೆಯ ಎಚ್ಚರಿಕೆ
ಮಾಜಿ ಗೃಹ ಸಚಿವರು ಹಾಗೂ ಮಾಜಿ ಶಿಕ್ಷಣ ಸಚಿವರು ಇಬ್ಬರು ಘಟಾನುಘಟಿ ನಾಯಕರ ಸ್ವಕ್ಷೇತ್ರ ತೀರ್ಥಹಳ್ಳಿ ಈ ಬಾರಿ ವಿಶೇಷ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗ ಹಲವು ಗ್ರಾಮಗಳ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಾಕುವ ಹಂತಕ್ಕೆ ಬಂದು ನಿಂತಿದೆ.

ಆಗಿದ್ದೇನು?
ಜಲ ಜೀವನ್ ಮಿಷನ್ ಅಡಿಯಲ್ಲಿ 36 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವಂತೆ ₹348 ಕೋಟಿ ವೆಚ್ಚದಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅನುಮೋದಿತ ಯೋಜನೆಯಂತೆ ತುಂಗಾ ಮತ್ತು ಮಾಲತಿ ನದಿಗಳು ಸೇರುವ ಭೀಮನಕಟ್ಟೆಯಲ್ಲಿ ನೀರನ್ನು ಲಿಫ್ಟ್ ಮಾಡಲಾಗುವುದು. ಅಲ್ಲಿಂದ ಪೈಪ್‌ಲೈನ್ ಮೂಲಕ 36 ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಮಾಡುವಂತಹ ಬೃಹತ್ ಯೋಜನೆ ಇದು.

ಆದರೆ ಈ ನದಿ ತೀರದ ಜನರ ಅಭಿಪ್ರಾಯದಂತೆ ಈ ಯೋಜನೆಯೇ ಅವೈಜ್ಞಾನಿಕ ಎನ್ನಲಾಗಿದೆ. ತುಂಗಾ ಮತ್ತು ಮಾಲತಿ ನದಿಗಳು ಮಾರ್ಚ್ ಮತ್ತು ಜೂನ್ ನಡುವೆ ಒಣಗುತ್ತವೆ. ತಾಲ್ಲೂಕಿನ ಸಂಪೂರ್ಣ ಜನತೆ ಕೇಂದ್ರೀಕೃತ ಪಂಪಿಂಗ್ ಸ್ಟೇಷನ್ ಅವಲಂಬಿತವಾಗುವಂತೆ ಮಾಡಿದರೆ ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಅದಲ್ಲದೆ ನದಿಯ ಎರಡೂ ಬದಿಯಲ್ಲಿ ನೂರಾರು ರೈತರು ನದಿ ನೀರನ್ನು ನಂಬಿ ಕೃಷಿ ಮಾಡುತ್ತಿದ್ದಾರೆ. ಕುಡಿಯುವ ನೀರು ಸರಬರಾಜು ಯೋಜನೆಯು ಬೇಸಿಗೆಯ ತಿಂಗಳುಗಳಲ್ಲಿ ತಮ್ಮ ನೀರಿನ ಮೂಲವನ್ನು ಕಸಿದುಕೊಳ್ಳಬಹುದು ಎಂಬ ಆತಂಕ ಸುತ್ತಲಿನ ಗ್ರಾಮಸ್ತರಲ್ಲಿದೆ. ಅಡಿಕೆ ಬೆಳೆಯೇ ಇಲ್ಲಿನ ಜನರ ಮೂಲ ಕಸುಬಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೆತ್ತುಕೊಂಡದ್ದೇ ಆದರೆ ಇಲ್ಲಿನ ನೂರಾರು ಗ್ರಾಮಸ್ಥರ ಬದುಕೇ ಬೀದಿ ಪಾಲಾಗಲಿದೆ ಎಂಬ ಆತಂಕ ಎದುರಾಗಿದೆ.

ಇದಲ್ಲದೆ, ವರ್ಷವಿಡೀ ನೀರು ಲಭ್ಯವಿರುವ ಮೂಲವನ್ನು ಇಟ್ಟುಕೊಂಡು ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಯೋಜಿಸುವುದು ಉತ್ತಮ. ಹೀಗಾಗಿ ಈ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ನೂರಾರು ರೈತರ ಬದುಕು ಮುಳುಗಿಸಿ ತಾಲ್ಲೂಕಿಗೆ ಕುಡಿಯುವ ನೀರು ಕೊಡುತ್ತೇವೆ ಎಂಬುದು ಎಷ್ಟು ವೈಜ್ಞಾನಿಕ ಎಂಬುದು ಇಲ್ಲಿ ಗ್ರಾಮಸ್ಥರ ಗಂಭೀರ ಪ್ರಶ್ನೆ.

ಈಗಾಗಲೇ ಐದು ಗ್ರಾಮ ಪಂಚಾಯಿತಿಗಳು ಈ ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸಿವೆ. ಅಷ್ಟೆ ಅಲ್ಲದೆ ಯೋಜನೆ ವಿರೋಧಿಸಿ ಹಲವು ಬಾರಿ ಪ್ರತಿಭಟನೆಗಳಾಗಿವೆ. ಹಲವು ಮಾತುಕತೆ ಮೂಲಕ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಕೆ ಮಾಡಲು ಬಂದೂ ವಿಫಲವಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೂ ಕೂಡ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ಗ್ರಾಮಸ್ಥರು ತಮ್ಮ ಬದುಕನ್ನೇ ಅಡವಿಟ್ಟು ಇನ್ನೊಬ್ಬರಿಗೆ ನೀರು ಕೊಡಲು ನಮ್ಮ ಸಮ್ಮತಿ ಇಲ್ಲ ಎಂದು ಸ್ಪಷ್ಟವಾಗಿ ತಮ್ಮ ಸಂದೇಶ ರವಾನಿಸಿದ್ದಾರೆ.

ಈ ನಡುವೆ ಯೋಜನೆಯನ್ನು ಮಾಡಿಯೇ ತೀರುತ್ತೇವೆ ಎಂದು ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಕೂಡಾ ಹಠ ಹಿಡಿದು ಕೂತಂತಿದೆ. ಯೋಜನೆಯ ಗುತ್ತಿಗೆದಾರರು ಈ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಂಡ ದಿನದಿಂದ ಗ್ರಾಮದಲ್ಲಿ ನೂರಾರು ಪೊಲೀಸರ ಬೆಂಗಾವಲಾಗಿ ಇಟ್ಟುಕೊಂಡು ಕೆಲಸ ಮಾಡಿಸಲಾಗುತ್ತಿದೆ. ಗ್ರಾಮಸ್ಥರು/ಪ್ರತಿಭಟನಾಕಾರರು ಈ ಜಾಗಕ್ಕೆ ಕಾಲೂ ಇಡದಂತೆ ದೊಡ್ಡ ತಡೆಗೋಡೆ ಕೂಡಾ ನಿರ್ಮಾಣವಾಗಿದೆ. 5 ಗ್ರಾಮ ಪಂಚಾಯಿತಿಗಳು ಹೊರತುಪಡಿಸಿ ಗ್ರಾಮ ಪಂಚಾಯಿತಿಗಳ ಒಕ್ಕೂಟವೂ ರೈತರ ಪ್ರತಿಭಟನೆಯನ್ನು ಗಣನೆಗೆ ತಗೆದುಕೊಳ್ಳುತ್ತಿಲ್ಲ.

ಸಧ್ಯ ಈ ಒಂದು ಬೆಳವಣಿಗೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಗ್ರಾಮದ ಹಲವು ಗ್ರಾಮ ಪಂಚಾಯಿತಿಗಳು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿವೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜನರಿಗೆ ಈ ಹೋರಾಟದ ಬಗ್ಗೆ ಅರಿವು ಮೂಡಿಸಿ, ಮುಂದಿನ ದಿನಗಳಲ್ಲಿ ನಾವು ಬೀದಿಗಿಳಿಯದೇ ಇದ್ದರೆ ನಮ್ಮ ಬದುಕು ಬೀದಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸಿದರೆ ಮಹಿಳೆಯರಿಂದ ಹಿಡಿಕುಂಟೆ (ಪೊರಕೆ) ಸೇವೆ ನೀಡುವುದಾಗಿ ಬ್ಯಾನ‌ರ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣಿಗಳು ತೀರ್ಥಹಳ್ಳಿ ತಾಲ್ಲೂಕಿನ ಆಲಗೇರಿ, ಹೆಗ್ಗೋಡು ಗ್ರಾಮಕ್ಕೆ ಬರುವ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ ಮುಳುಬಾಗಿಲು, ಹೊಸಹಳ್ಳಿ, ತೀರ್ಥಮುತ್ತೂರು ಸೇರಿದಂತೆ ತುಂಗಾ ಹಾಗೂ ಮಾಲತಿ ನದಿ ತೀರದ 15 ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಪ್ರವೇಶ ನಿರ್ಬಂಧಕ್ಕೆ ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿಯ ರೈತ ಮುಖಂಡ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೋಡ್ಲು ವೆಂಕಟೇಶ್ ತಿಳಿಸಿದ್ದಾರೆ.

ತೀರ್ಥಹಳ್ಳಿ : ಈಜಲು ಹೋದ ಯುವಕ ನಾಪತ್ತೆ ; ಮುಂದುವರಿದ ಶೋಧ ಕಾರ್ಯ
ಜಾತ್ರೆಯ ವ್ಯಾಪಾರಕ್ಕೆ ಬಂದಿದ್ದ ಬಿಹಾರ ಮೂಲದ ಯುವಕನೊಬ್ಬ ತುಂಗಾನದಿಗೆ ಬಿದ್ದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ನದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆ ಈ ಯುವಕ ನಾಪತ್ತೆಯಾಗಿದ್ದಾನೆ.

ಜನವರಿ 11, 12 ಹಾಗೂ 13 ರ ಮೂರು ದಿನಗಳ ಕಾಲ ಜರುಗುವ ತೀರ್ಥಹಳ್ಳಿಯಲ್ಲಿ ಎಳ್ಳಮವಾಸ್ಯೆ ಜಾತ್ರೆಗೆ ನೂರಾರು ಅಂಗಡಿಗಳು ನಾನಾ ಮೂಲೆಗಳಿಂದ ಬಂದಿವೆ. ಈ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಪಟ್ಟಣಕ್ಕೆ ಎರಡು ದಿನಗಳ ಹಿಂದೆ ಬಂದಿದ್ದ ಬಿಹಾರ ಮೂಲದ ಯುವಕ ನದಿಯಲ್ಲಿ ಈಜುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಯುವಕ ನಾಪತ್ತೆಯಾಗಿರುವ ಜಾಗ ಕೂಡಾ ತೀರಾ ಅಪಾಯಕಾರಿ ಜಾಗವಾಗಿರುವ ಹಿನ್ನೆಲೆಯಲ್ಲಿ ಇಷ್ಟು ಹೊತ್ತಿಗಾಗಲೇ ಆತನ ಜೀವ ಹೋಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಮುಳುಗು ತಜ್ಞರು ಹಾಗೂ ಅಗ್ನಿಶಾಮಕ ದಳ ಸೇರಿ ದೇಹದ ಶೋಧ ಕಾರ್ಯ ನಡೆಯುತ್ತಿದೆ.

ಠೇವಣಿದಾರರೇ ಹುಷಾರ್ : ಬ್ಯಾಂಕ್ ನೌಕರನಿಂದಲೇ ಕೋಟಿಗಟ್ಟಲೆ ಹಣ ಲೂಟಿ Peepal TV Exclusive
ನಮ್ಮ ಜನ ಸಾಮಾನ್ಯವಾಗಿ ಬ್ಯಾಂಕ್ ಗಳ ಮೂಲಕ ವ್ಯವಹರಿಸುವುದೇ ಜೀವನದಲ್ಲಿ ಕಷ್ಟ ಪಟ್ಟು ದುಡಿದ ಹಣವನ್ನು ಎಲ್ಲಾದರೂ ಸುರಕ್ಷಿತ ಜಾಗದಲ್ಲಿ ಜೋಪಾನವಾಗಿ ಇಡಲು. ಆ ಮೂಲಕ ಕಷ್ಟ ಕಾಲದಲ್ಲಿ ಆ ಹಣ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ. ಅದರಲ್ಲೂ ಬ್ಯಾಂಕ್ ವ್ಯವಹಾರ ಎಂದರೆ ಅದೊಂದು ನಂಬಿಕೆಯ ಮೂಲಕ ನಡೆಯುವಂತದ್ದು. ನಾವು ಇಟ್ಟ ಠೇವಣಿ ಮತ್ತು ಉಳಿತಾಯದ ಹಣ ದುರುಪಯೋಗ ಆಗದಿರಲಿ ಎಂಬ ಏಕೈಕ ಉದ್ದೇಶದಿಂದ ಸಾಮಾನ್ಯ ಜನರು ಬ್ಯಾಂಕ್ ಮೂಲಕವೇ ಎಲ್ಲಾ ವ್ಯವಹಾರ ನಡೆಸುತ್ತಿದ್ದಾರೆ.

ಆದರೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಹಾಗೂ ಹೊಸನಗರ ತಾಲ್ಲೂಕಿನ ಕೆನರಾ ಬ್ಯಾಂಕ್ ಗಳಲ್ಲಿ ಬ್ಯಾಂಕಿನ ಅಧಿಕಾರಿಯೇ ಕೋಟಿಗಟ್ಟಲೆ ಲೂಟಿ ಹೊಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಗ್ರಾಹಕರ ಠೇವಣಿ ಇಟ್ಟ ಹಾಗೂ ಉಳಿತಾಯದ ಖಾತೆಯಿಂದ ಹಣ ದುರುಪಯೋಗ ಆಗಿದ್ದು, ಮೇಲ್ನೋಟದ ತನಿಖೆಯಿಂದ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಕಡೆಯಿಂದಲೇ ಹಣ ದುರುಪಯೋಗ ಆಗಿರುವ ಬಗ್ಗೆ ಠೇವಣಿದಾರರು ಹಾಗೂ ಉಳಿತಾಯ ಖಾತೆದಾರರು ದೂರಿದ್ದಾರೆ.

ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ಠೇವಣಿದಾರರೊಬ್ಬರು, ತೀರ್ಥಹಳ್ಳಿ, ಕೋಣಂದೂರು ಹಾಗೂ ಹೊಸನಗರ ತಾಲ್ಲೂಕಿನ ಯಡೂರು.. ಈ ಮೂರೂ ಬ್ರಾಂಚ್ ಗಳಲ್ಲಿ ದೊಡ್ಡ ಮೊತ್ತದ ಅವ್ಯವಹಾರ ನಡೆದಿದೆ. ಅವರ ಸ್ನೇಹಿತರೊಬ್ಬರ ಬ್ಯಾಂಕ್ ಖಾತೆಯಿಂದ 49 ಲಕ್ಷ ಒಂದೇ ಬಾರಿಗೆ NEFT ಮಾಡಿದ ಮೇಲೆ ಅನುಮಾನ ಹುಟ್ಟಿದೆ. ಹೇಳಿದರೆ, ಪ್ರಕರಣದ ಆರೋಪಿ ಆಗಿರುವ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಸುನೀಲ್ ರನ್ನು ವಿಚಾರಿಸಿದಾಗ ಮೀನಾಮೇಷ ಎಣಿಸುತ್ತಿರುವುದು ಕಂಡುಬಂದಿದೆ. ಕೆಲವು ದಿನಗಳ ನಂತರ ಕೇಳಿದರೆ NEFT ಆಗಿದೆ ಎಂಬ ಉತ್ತರ ಬಂದಿದೆ.

ಇನ್ನೊಂದು ಪ್ರಕರಣದಲ್ಲಿ ಹಲವು ವರ್ಷಗಳ ಕಾಲ ಠೇವಣಿ ಇಟ್ಟ ಹಣ ಕೂಡಾ ಇದೇ ಅಧಿಕಾರಿ ಕಡೆಯಿಂದ ದುರುಪಯೋಗ ಆದ ಬಗ್ಗೆ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಒಟ್ಟಾರೆ ಪ್ರಕರಣ ಈ ಮೂಲಕವೇ ಬೆಳಕಿಗೆ ಬಂದಿದ್ದು, ಒಬ್ಬರಿಂದ ಒಬ್ಬರಿಗೆ ಮಾಹಿತಿ ಹೋಗಿ, ಕೆನರಾ ಬ್ಯಾಂಕ್ ನ ಒಟ್ಟು ಮೂರು ಬ್ರಾಂಚ್ ಗಳಲ್ಲಿ ದೊಡ್ಡ ಮೊತ್ತದ ಅವ್ಯವಹಾರ ಹೊರಬಿದ್ದಿದೆ.

ವಿಚಾರ ಸ್ವಲ್ಪ ಗುಲ್ಲು ಎದ್ದ ನಂತರ ಬ್ಯಾಂಕ್ ಖಾತೆದಾರರು ಆತಂಕಗೊಂಡು ಮೇಲಧಿಕಾರಿಗಳಿಗೆ ದೂರು ನೀಡಲು, ಮೇಲಧಿಕಾರಿಗಳು ಪರಿಶೀಲನೆ ನಡೆಸಿ, ಅವ್ಯವಹಾರ ನಡೆದ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಆತಂಕಕಾರಿ ವಿಚಾರ ಎಂದರೆ ವಂಚನೆ ಮಾಡಿದ ಆರೋಪಿ ತಂದೆಯ ಬ್ಯಾಂಕ್ ಖಾತೆಗೆ ಅಕ್ರಮವಾಗಿ 10 ರಿಂದ 11 ಕೋಟಿ ಹಣ ವರ್ಗಾವಣೆ ಆಗಿರುವ ಬಗ್ಗೆಯೂ ಬ್ಯಾಂಕ್ ಮೇಲಧಿಕಾರಿಗಳು ತಿಳಿಸಿದ್ದಾರೆ.

ನೇರವಾಗಿ ಅವ್ಯವಹಾರ ಆಗಿರುವುದು ನಿಜ, ಈ ಬಗ್ಗೆ ಬ್ಯಾಂಕ್ ಉನ್ನತಾಧಿಕಾರಿಗಳ ಕಡೆಗೆ ತಿಳಿಸಲಾಗುವುದು ಎಂದಷ್ಟೇ ಅಧಿಕಾರಿಗಳು ಹೇಳಿದ್ದಾರೆ. ಆದರೆ ತಮ್ಮ ಖಾತೆಯಿಂದ ಹಣ ಕಳೆದುಕೊಂಡ ಖಾತೆದಾರರು ಮುಂದೇನು ಎಂದು ದಿಕ್ಕು ನೋಡುವಂತಾಗಿದೆ.

ಇತ್ತ ಹಗರಣ ಹೊರ ಬೀಳುತ್ತಿದ್ದಂತೆ, ಆರೋಪಿ ಸುನಿಲ್ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆತನನ್ನು ಪೊಲೀಸರ ಸರ್ಪಗಾವಲಿನಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪೀಪಲ್ ಮೀಡಿಯಾ ಖಾತೆದಾರರನ್ನು ಸಂಪರ್ಕಿಸಿದಾಗ, ಈಗಾಗಲೇ ಬ್ಯಾಂಕ್ ಗೆ ಸಂಬಂಧಿಸಿದವರ ಸಂಪರ್ಕಿಸಿ, ಮಂಗಳವಾರದಿಂದ ಅನಿರ್ದಿಷ್ಟಾವಧಿ ಧರಣಿ ಕೂರುವಂತೆ ತಿಳಿಸಿದ್ದಾರೆ. ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಖಾತೆದಾರರು ಸೇರುವ ಬಗ್ಗೆ ಪೀಪಲ್ ಮೀಡಿಯಾಗೆ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಮತ್ತು ದಾಖಲೆಗಳನ್ನು ಮಂಗಳವಾರದ ಧರಣಿ ಸಮಯದಲ್ಲಿ ಒದಗಿಸುವುದಾಗಿ ಠೇವಣಿದಾರರೊಬ್ಬರು ತಿಳಿಸಿದ್ದಾರೆ.

ತೀರ್ಥಹಳ್ಳಿ ಸಜೀವ ದಹನ ಪ್ರಕರಣ : ಮೂವರ ವಿರುದ್ಧ ಎಫ್ಐಆರ್ ದಾಖಲು
ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಎಂಬಲ್ಲಿ ಒಂದೇ ಕುಟುಂಬದ ಮೂವರ ಸಜೀವ ದಹನ ಹಾಗೂ ಇನ್ನೊಬ್ಬರ ಸಾವಿನ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಾಯಾದಿ ಕಲಹದ ಹಿನ್ನೆಲೆಯಲ್ಲಿ ಈ ಪ್ರಕರಣ ನಡೆದಿದೆ ಎಂದು ಹೇಳಲಾಗಿದೆ.

ಘಟನೆ ಹಿನ್ನೆಲೆ
ಅ. 8 ರಂದು ರಾಘವೇಂದ್ರ ಕೇಕುಡ, ಅವರ ಪತ್ನಿ ನಾಗರತ್ನ, ಮಗ ಶ್ರೀರಾಮ್ ಮತ್ತು ಎರಡನೆಯ ಮಗ ಭರತ್ ಎಂಬ ಒಂದೇ ಕುಟುಂಬದ ನಾಲ್ವರು ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನಕ್ಕೆ ಮುಂದಾಗಿದ್ದರು. ತಂದೆ, ತಾಯಿ ಹಾಗೂ ಮಗ ಶ್ರೀರಾಮ್ ಮನೆಯ ಒಳಗಡೆಯೇ ಸಾವಿಗೀಡಾದರೆ ಇನ್ನೊಬ್ಬ ಮಗ ಭರತ್ ಬೆಂಕಿಯಲ್ಲಿ ಅರೆಬರೆ ಸುಟ್ಟು ನಂತರ ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಮಗ ಭರತ್ ಮೊದಲು ತೀರ್ಥಹಳ್ಳಿ ಆಸ್ಪತ್ರೆಗೆ ನಂತರ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಂಕಿಯಲ್ಲಿ ಸುಟ್ಟ ಪರಿಣಾಮ ಹೆಚ್ಚೇ ಇದ್ದುದರಿಂದ ಮಗ ಭರತ್ ಕೂಡಾ ಸಾವಿಗೆ ಶರಣಾಗಬೇಕಾಯಿತು. ಈ ನಡುವೆ ಪೊಲೀಸರು ಭರತ್ ನ ಕೆಲವು ಹೇಳಿಕೆಗಳನ್ನು ಸಾಕ್ಷಿಯ ರೂಪದಲ್ಲಿ ಪಡೆದುಕೊಂಡಿದ್ದರು.

ಭರತ್ ಸಾವಿನ ನಂತರ ಪ್ರಕರಣವನ್ನು ಯುಡಿಆರ್ (ಅಸಹಜ ಸಾವಿನ ವರದಿ) ಎಂದು ದಾಖಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ರಾಘವೇಂದ್ರ ಅವರ ಪತ್ನಿಯ ಸಹೋದರನ ಹೇಳಿಕೆಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಅದರಲ್ಲಿ ಮೃತ ರಾಘವೇಂದ್ರ ಅವರ ಸಹೋದರ ಡಾ.ಸುಧೀಂದ್ರ, ಪಾ.ರಾ ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಅವರ ನಾದನಿ ವಿನೋದರವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಘವೇಂದ್ರ ಕೇಕುಡರಿಗೆ, ಕೃಷ್ಣಮೂರ್ತಿ, ಮಂಜುನಾಥ, ರಾಮಕೃಷ್ಣ ಹಾಗೂ ಡಾ, ಸುಧೀಂದ್ರ ಎಂಬ ನಾಲ್ವರು ಸಹೋದರರಿದ್ದು ಇವರ ಪೈಕಿ ಮಂಜುನಾಥ ಈಗಾಗಲೇ ವಿಧಿವಶರಾಗಿದ್ದಾರೆ.

ಮಂಜುನಾಥ್ ಅವರ ಪತ್ನಿ ವಿನೋದ ಇವರಿಗೆ ಜಮೀನುಗಳಿಗೆ ಸಂಬಂಧಿಸಿದಂತೆ ಆಸ್ತಿ ಬಾಬ್ತು 10 ಲಕ್ಷ ರೂಪಾಯಿ ಕೊಡಲಾಗಿತ್ತು. ಆದರೆ ಯಾವುದೇ ಪತ್ರ ವ್ಯವಹಾರ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಇವರ ಇನ್ನೊಬ್ಬ ಸಹೋದರ ರಾಮಕೃಷ್ಣ ಕೇಕುಡ ಇವರು ಆಸ್ತಿಯಲ್ಲಿ ಭಾಗ ತೆಗೆದುಕೊಂಡು ಬೇರೆ ವಾಸವಾಗಿದ್ದರು ಎನ್ನಲಾಗಿದೆ.

ಉಳಿದ ಸಹೋದರರಾದ ಡಾ.ಸುಧೀಂದ್ರ, ಮತ್ತು ಪಾರಾ ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಪಿಎ ಮಾಡಿಕೊಂಡಿದ್ದರು. ಜಿಪಿಎ ಮಾಡಿಕೊಂಡ ಹಿನ್ನೆಲೆಯಲ್ಲಿ ರಾಘವೇಂದ್ರ ಕೇಕುಡ ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು.

ಸುಮಾರು 2 ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ ಡಾ, ಸುದೀಂದ್ರ, ಪಾರಾ ಕೃಷ್ಣ ಮೂರ್ತಿ ಹಾಗೂ ಮಂಜುನಾಥ್ ಪತ್ನಿ ವಿನೋದ ರಾಘವೇಂದ್ರರ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಧ್ಯ ಜಮೀನಿನ ಮೇಲೆ ಮಾಡಿದ ಕೃಷಿ ಅಭಿವೃದ್ಧಿ ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ ಶಿವಮೊಗ್ಗದಿಂದ ಗೂಂಡಾಗಳನ್ನು ಕರೆಸಿ ಮನೆಯಿಂದ ಹೊರ ಹಾಕಿಸುವುದಾಗಿಯೂ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು.

ಈ ವಿಚಾರದಲ್ಲಿ ರಾಘವೇಂದ್ರ ಕುಟುಂಬ ಅವರುಗಳ ಬೆದರಿಕೆಗೆ ಮನನೊಂದು ಮಾನಸಿಕ ಹಿಂಸೆ ತಡೆಯಲಾಗದೇ ದೇಹ ತ್ಯಾಗವಾಗಿರುತ್ತದೆ ಎಂದು ಮೃತ ನಾಗರತ್ನ ಅವರ ಸಹೋದರ ತೇಜ್ ಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಅದ್ದರಿಂದ ರಾಘವೇಂದ್ರ ಕುಟುಂಬ ವರ್ಗದವರ ದುರ್ಮರಣಕ್ಕೆ ಕಾರಣರಾದ ಡಾ, ಸುದೀಂದ್ರ, ಪಾ.ರಾ ಕೃಷ್ಣಮೂರ್ತಿ, ವಿನೋದ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಾ.ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ನಲ್ಲಿ ವೈದ್ಯರಾಗಿದ್ದಾರೆ. ಪಾರಾ ಕೃಷ್ಣಮೂರ್ತಿ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ವ್ಯಕ್ತಿಯಾಗಿದ್ದಾರೆ.

ತೀರ್ಥಹಳ್ಳಿ : ಒಂದೇ ಕುಟುಂಬದ ಮೂವರ ಸಜೀವ ದಹನ ; ಆತ್ಮಹತ್ಯೆ ಶಂಕೆ!
ತೀರ್ಥಹಳ್ಳಿ :  ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಸಮೀಪ ಕೇಕೋಡ್ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾದ ದುರ್ಘಟನೆ ಸುತ್ತಲಿನ ಗ್ರಾಮಸ್ಥರನ್ನು ಕಂಗೆಡಿಸಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿರಬಹುದು ಎಂದು ಸ್ಥಳೀಯರು ಊಹಿಸಿದ್ದಾರೆ.

ತೀರ್ಥಹಳ್ಳಿಯ ಕೇಕೋಡ್ ಗ್ರಾಮದ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದು, ಇದು ಸ್ಪಷ್ಟವಾಗಿ ಪೂರ್ವನಿಯೋಜಿತ ಘಟನೆ, ಹಾಗಾಗಿ ಇದನ್ನು ಆತ್ಮಹತ್ಯೆ ಇರಬಹುದು ಎಂದೇ ಶಂಕಿಸಲಾಗಿದೆ. ಕುಟುಂಬದ ಇನ್ನೋರ್ವ ಅಗ್ನಿ ದುರಂತಕ್ಕೆ ಒಳಗಾಗಿದ್ದು, ಅರೆಬರೆ ಸುಟ್ಟ ಸ್ಥಿತಿಯಲ್ಲಿ ಇರುವ ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇಲ್ನೋಟಕ್ಕೆ ಮನೆಯ ಒಳಗಿನ ಕೋಣೆಯೊಳಗೆ ಕಟ್ಟಿಗೆಗಳನ್ನು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಬೆಂಕಿ ದುರಂತದಲ್ಲಿ ಕುಟುಂಬದ ಹಿರಿಯರಾದ ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (65), ಪತ್ನಿ ನಾಗರತ್ನಾ (55), ಹಿರಿಯ ಪುತ್ರ ಶ್ರೀರಾಮ್ (30) ಸಜೀವವಾಗಿ ಬೆಂಕಿಗೆ ಆಹುತಿಯಾಗಿದ್ದಾರೆ. ಇನ್ನೋರ್ವ ಪುತ್ರ ಭರತ್ (28) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ತೀರ್ಥಹಳ್ಳಿ ಹೊಸನಗರ ಮಾರ್ಗ ಮಧ್ಯೆ ಬರುವ ಕೋಕೋಡ್ ಗ್ರಾಮದಲ್ಲಿ ಗ್ರಾಮಸ್ಥರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಒಂದೇ ಕುಟುಂಬದ ಮೂವರ ಸಜೀವ ದಹನ ಘಟನೆ ಇಡೀ ಗ್ರಾಮವನ್ನೇ ಕಂಗೆಡಿಸಿದೆ. ಘಟನೆಗೆ ನಿಖರವಾದ ಕಾರಣ ಏನು ಎಂದು ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಇದು ಮನೆಯ ಆರ್ಥಿಕ ಬಿಕ್ಕಟ್ಟು ಈ ಮಟ್ಟಕ್ಕೆ ಆತ್ಮಹತ್ಯೆಗೆ ಇಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆಗಳು ನಡೆಯಬೇಕಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಉಡುಪಿ ಪ್ರಕರಣದ ಪ್ರಾಮುಖ್ಯತೆ, ತೀರ್ಥಹಳ್ಳಿ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಯಾಕಿಲ್ಲ : ದಿನೇಶ್ ಗುಂಡೂರಾವ್ ಪ್ರಶ್ನೆ
ಉಡುಪಿ ಕಾಲೇಜಿನ ವಿಡಿಯೋ ಪ್ರಕರಣದ ಬೆನ್ನಲ್ಲೇ ಈಗ ತೀರ್ಥಹಳ್ಳಿ ಎಬಿವಿಪಿ ಮುಖ್ಯಸ್ಥನ ಅಶ್ಲೀಲ ವಿಡಿಯೋ ಪ್ರಕರಣ ಕೂಡಾ ಮತ್ತೆ ಸುದ್ದಿಗೆ ಬಂದಿದೆ. ಉಡುಪಿ ಮತ್ತು ತೀರ್ಥಹಳ್ಳಿ ಎರಡೂ ಪ್ರಕರಣವನ್ನು ಸಮೀಕರಿಸಿ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣದಲ್ಲಿ ಮುತುವರ್ಜಿ ವಹಿಸಿರುವ ಬಿಜೆಪಿ ಮಂದಿ, ತೀರ್ಥಹಳ್ಳಿ ಎಬಿವಿಪಿ ಮುಖ್ಯಸ್ಥ ಕಾಲೇಜಿನ ಯುವತಿಯರ ಜೊತೆಗೆ ನಡೆಸಿದ ಅಶ್ಲೀಲ ವಿಡಿಯೋ ವಿಚಾರದಲ್ಲಿ ಮೌನ ವಹಿಸಿದ ಬಗ್ಗೆ ಕಿಡಿಕಾರಿದ್ದಾರೆ.

“ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಉಡುಪಿ ಶೌಚಾಲಯದ ವಿಡಿಯೋ ಪ್ರಕರಣದಲ್ಲಿ ಇಲಿ ಹೋಗಿದ್ದನ್ನು ಹುಲಿ ಹೋಯ್ತು ಎಂಬಂತೆ ಬಿಂಬಿಸುತ್ತಿದ್ದಾರೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿ ಎಬಿವಿಪಿ ಘಟಕದ ಅಧ್ಯಕ್ಷ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ಎಲ್ಲಿ ಹೋಗಿದ್ರಿ?” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

“ಈಗ ಧರ್ಮ ರಕ್ಷಕರ ಸೋಗು ತೊಟ್ಟು ಅಖಾಡಕ್ಕೆ ಇಳಿದಿದ್ದೀರಿ. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಚಿತ್ರಿಸಿ ಅದನ್ನು ಹರಿಬಿಟ್ಟ ‘ಪ್ರತೀಕ್’ ಜಾಗದಲ್ಲಿ ‘ಅಥೀಕ್’ ಇದ್ದಿದ್ದರೆ ಮಾತ್ರ ನಿಮ್ಮ ಹೋರಾಟವೇ?” ಎಂದು ಬಿಜೆಪಿ ನಾಯಕರನ್ನು ದಿನೇಶ್ ಗುಂಡೂರಾವ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಉಡುಪಿ ವಿಡಿಯೋ ಪ್ರಕರಣದಲ್ಲಿ ಆಸ್ಥೆಯಿಂದ ಮುಂದೆ ನಿಂತ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಉಲ್ಲೇಖಿಸಿ “ಬೊಮ್ಮಾಯಿಯವರೇ, ಪೊಲೀಸರು ನಿಮ್ಮ ಆಡಳಿತದಲ್ಲಿ ರಾಜಕೀಯದ ಒತ್ತಡಕ್ಕೆ ಮಣಿದಿರಬಹುದು. ಆದರೆ ನಾವು ಪೋಲಿಸರಿಗೆ ಫ್ರೀ ಹ್ಯಾಂಡ್ ಕೊಟ್ಟಿದ್ದೇವೆ. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರತೀಕ್ ಗೌಡ ಎಂಬಾತನನ್ನು ನಮ್ಮ ಪೊಲೀಸರು ಒದ್ದು ಒಳಗಾಕ್ಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದ್ದೇ ಜಾಸ್ತಿ ಇದೆಯಲ್ಲವೇ?” ಎಂದು ಬೊಮ್ಮಾಯಿಯವರಿಗೆ ಟಾಂಗ್ ಕೊಟ್ಟಿದ್ದಾರೆ.

ಅವಶ್ಯಕವೋ ಅನಾವಶ್ಯಕವೋ.. ಬಿಜೆಪಿ ಪಕ್ಷ ಉಡುಪಿ ಪ್ರಕರಣಕ್ಕೆ ಬಿಜೆಪಿ ತೋರಿಸಿರುವ ಆಸ್ಥೆಯನ್ನು ತೀರ್ಥಹಳ್ಳಿ ಪ್ರಕರಣಕ್ಕೆ ತೋರಿಸಿಲ್ಲ ಎಂಬುದಂತೂ ಸತ್ಯ. ತೀರ್ಥಹಳ್ಳಿ ಅಶ್ಲೀಲ ವಿಡಿಯೋದಲ್ಲಿ ಹರಿದಾಡಿದ್ದು ಹಿಂದೂ ಹೆಣ್ಣು ಮಕ್ಕಳದ್ದೇ. ಆ ಕೃತ್ಯ ಮಾಡಿದ್ದು ಹಿಂದೂ, ಅದರಲ್ಲೂ ಎಬಿವಿಪಿ ಅಧ್ಯಕ್ಷ ಆದ ಕಾರಣಕ್ಕೆ ಬಿಜೆಪಿ ಆ ಪ್ರಕರಣದ ಬಗ್ಗೆ ದನಿ ಎತ್ತಲಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಸರಿಯಾಗಿ ಬಿಜೆಪಿ ನಡೆದುಕೊಂಡದ್ದಂತೂ ಸುಳ್ಳಲ್ಲ.

ಪಿಡಿಓ ಉದ್ದಟತನ; ಕಾಮಗಾರಿಯೇ ನಡೆಯದೇ ಹಣ ವರ್ಗಾವಣೆ ; ಸಚಿವ ಪ್ರಿಯಾಂಕ್ ಖರ್ಗೆಯವರೆ ತೀರ್ಥಹಳ್ಳಿ ತಾಲೂಕಿನ ಅವ್ಯವಸ್ಥೆ ಬಗ್ಗೆ ನಿಮಗೊಂದು ಮಾಹಿತಿ
ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದು, ಯಾವುದಕ್ಕೋ ಇಟ್ಟ ಹಣವನ್ನು ಇನ್ಯಾವುದಕ್ಕೋ ದುರ್ಬಳಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಸಧ್ಯ ಸ್ಥಳೀಯ ಮಟ್ಟದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ದೂರೊಂದು ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಕಛೇರಿ ತಲುಪಿದೆ.

ತೀರ್ಥಹಳ್ಳಿ ತಾಲ್ಲೂಕಿನ ಹೆಚ್ಚು ಉತ್ಪತ್ತಿ ಬರುವ ಮತ್ತು ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ತಾಲ್ಲೂಕಿನ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲೊಂದು. ಇಲ್ಲಿ ಅಧಿಕಾರ ಹಿಡಿಯಲು ಸ್ಥಳಿಯ ಮಟ್ಟದಲ್ಲಿ ಅದೆಷ್ಟು ಲಾಭಿ ನಡೆಯುತ್ತದೆ ಎಂದರೆ ಗ್ರಾಮ ಪಂಚಾಯಿತಿಯ ವಾರ್ಡ್ ಮಟ್ಟದ ಚುನಾವಣೆಯಲ್ಲೇ ವಿಧಾನಸಭಾ ಚುನಾವಣೆಯನ್ನೂ ನಾಚುವಂತೆ ಲಕ್ಷಗಟ್ಟಲೆ ಹಣವನ್ನು ನೀರಿನಂತೆ ಸುರಿದು ಅಧಿಕಾರ ಹಿಡಿಯುವವರು ಇಲ್ಲಿದ್ದಾರೆ.

ಅನುಧಾನದ ವಿಚಾರಕ್ಕೆ ಬಂದರೂ ಬೆಜ್ಜವಳ್ಳಿ ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುಧಾನಗಳನ್ನೂ ಪಡೆಯುವ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಇದಕ್ಕಿದೆ. ಇಂತಿಪ್ಪ ಈ ಪಂಚಾಯಿತಿಯ ಆಡಳಿತದ ಬಗ್ಗೆ ಹಿಂದಿನಿಂದಲೂ ದೂರುಗಳು ಕೇಳಿ ಬರುತ್ತಿತ್ತು. ಆದರೆ ಈಗ ಇಲ್ಲಿನ ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ ನಾಯ್ಕ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ.

ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಗೆ 2022-23 ನೇ ಸಾಲಿನ ಹಣಕಾಸು ವರ್ಷದಲ್ಲಿ ನೈರ್ಮಲ್ಯ ಕಾಮಗಾರಿಗಳಿಗೆ ಬಿಡುಗಡೆಯಾಗಿ ಮೀಸಲಿಟ್ಟ ಹಣವನ್ನು ಖಾಸಗಿ ವ್ಯಕ್ತಿಗಳ ಖಾತೆಗೆ ವರ್ಗಾವಣೆ ಮಾಡಿದ ಬಗ್ಗೆ ಆರೋಪ ಕೇಳಿ ಬಂದಿದೆ. ಅದರಲ್ಲೂ ಯಾವುದೇ ಕಾಮಗಾರಿ ನಡೆಸದೇ ಸುಮಾರು ₹2.61 ಲಕ್ಷ ಹಣವನ್ನು ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ್ ನಾಯ್ಕ್ ಕಡೆಯಿಂದ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

₹2.61 ಲಕ್ಷ ಹಣವನ್ನು ಕ್ರಮವಾಗಿ ₹1.86 ಲಕ್ಷ, ₹50,000 ಮತ್ತು ₹25,000 ಹಣವನ್ನು ಖಾಸಗಿ ವ್ಯಕ್ತಿಗಳಿಗೆ ದಿನಾಂಕ 8.06.23 ರಂದು ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿರುತ್ತಾರೆ. ಇಲ್ಲಿ ಬಿಡುಗಡೆಯಾದ ಹಣ ಯಾವುದೇ ಕಾಮಗಾರಿ ಉದ್ದೇಶದಿಂದಲೋ ಅಥವಾ ಕಾಮಗಾರಿ ಪೂರ್ಣಗೊಳಿಸಿದ ಕಾರಣಕ್ಕೋ ವರ್ಗಾವಣೆ ಆಗಿಲ್ಲ ಎಂಬುದು ಸ್ಥಳೀಯ ಗ್ರಾಮಸ್ಥರ ಆರೋಪವಾಗಿದೆ. ನಿಯಮಗಳಂತೆ ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ಎಂ.ಬಿ.ದಾಖಲಿಸದೇ ಹಣ ಬಿಡುಗಡೆ ಮಾಡುವ ಅವಕಾಶ ಇರುವುದಿಲ್ಲ. ಆದರೆ ಇಲ್ಲಿ ಭರ್ತಿ ₹2.61 ಲಕ್ಷ ಹಣ ಸಂಪೂರ್ಣ ದುರುಪಯೋಗವಾಗಿದೆ, ಖಾಸಗಿ ವ್ಯಕ್ತಿಗಳ ಖಾತೆಗೆ ಹಣ ವರ್ಗಾವಣೆ ಮಾಡಿ ಸರ್ಕಾರದ ಹಣ ದುರ್ಬಳಕೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ತೀರ್ಥಹಳ್ಳಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಂಪರ್ಕಿಸಿದಾಗ, ಪಂಚಾಯತ್ ಆಡಳಿತಾಧಿಕಾರಿ ಗಂಗಾಧರ್ ನಾಯ್ಕ್ ಮೇಲೆ ಈ ಹಿಂದೆಯೂ ಆರೋಪ ಕೇಳಿ ಬಂದಿತ್ತು. ಅನುಮತಿ ಇಲ್ಲದೇ ಸಂಬಂಧಪಡದ ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾಯಿಸುವುದು ಕಾನೂನು ಬಾಹಿರ. ಮುಂದಿನ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕ ಅಭಿಪ್ರಾಯ ಬದಿಗಿರಲಿ, ಈ ವ್ಯಕ್ತಿ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರುಗಳನ್ನೂ ವಿಶ್ವಾಸಕ್ಕೆ ತಗೆದುಕೊಳ್ಳದೇ ಉದ್ದಟತನ ತೋರುತ್ತಾರೆ ಎಂಬುದು ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಅಭಿಪ್ರಾಯ. ಒಂದು ರೀತಿ ತಾನು ಆಡಿದ್ದೇ ಆಟ ಎಂಬಂತೆ ಗಂಗಾಧರ್ ನಾಯ್ಕ್ ಅವರ ನಡೆ ಎಂಬ ದೂರು ಎಲ್ಲೆಡೆಯಿಂದ ಕೇಳಿ ಬಂದಿದೆ.

ಪೀಪಲ್ ಟಿವಿ ಪಿಡಿಒ ಸಂಪರ್ಕಿಸಿ ಮಾತನಾಡಲಾಗಿ, ಈ ರೀತಿಯ ಹಣ ದುರ್ಬಳಕೆ ಆಗಿದೆ ಎಂಬ ಪ್ರಶ್ನೆಗೆ, “ಅಂತಹ ಯಾವುದೇ ದುರ್ಬಳಕೆ ಆಗಿಲ್ಲ‌. ಬಂದ ಹಣ ವಾಪಸ್ ಹೋಗಬಾರದು ಎಂಬ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ. ಅದೂ ವಯಕ್ತಿಕವಾಗಿ ಕಳಿಸಿದ್ದಲ್ಲ. ಕಂಪನಿ ಹೆಸರಿಗೆ ವರ್ಗಾವಣೆ ಮಾಡಿದ್ದು” ಎಂಬ ಉತ್ತರ ಬಂದಿದೆ. ಆದರೆ ಯಾವುದೇ ಕೆಲಸವೇ ಆಗದೇ ಹಣ ವರ್ಗಾವಣೆ ಮಾಡುವ ಕಾನೂನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಇದೆಯೇ ಎಂಬುದು ಈಗ ಎದ್ದಿರುವ ಪ್ರಶ್ನೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಕೆಲವೇ ದಿನಗಳ ಹಿಂದೆ ತಮ್ಮ ಪ್ರೋಗ್ರೆಸ್ ಪಟ್ಟಿ ಬಿಡುಗಡೆ ಮಾಡಿದ್ದರು. ಇಂತಹ ಪ್ರಕರಣಗಳು ಇದೊಂದು ಪಂಚಾಯಿತಿ ಅಂತಲ್ಲ.. ರಾಜ್ಯದ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ಇಂತಹ ಅವಾಂತರಗಳು ಪ್ರತಿ ದಿನದಂತೆ ನಡೆಯುತ್ತಿವೆ. ಈ ಪ್ರಕರಣವೂ ಸೇರಿದಂತೆ ಮುಂದೆ ಆಗುವಂತಹ ಅವ್ಯವಸ್ಥೆಗೆ ಸಚಿವಾಲಯ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವುದೇ ಎಂಬುದನ್ನು ಕಾದು ನೋಡಬೇಕು.

ತೀರ್ಥಹಳ್ಳಿ ABVP ಮುಖ್ಯಸ್ಥನ ಬಂಧನ ; ಪ್ರಕರಣದಲ್ಲಿ ಸಂಘಪರಿವಾರದ ಮೌನದ ಹಿಂದಿನ ಕಾರಣವೇನು?
ಅಶ್ಲೀಲ ವಿಡಿಯೋ ಹರಿಬಿಟ್ಟು ಅಮಾಯಕ ಹೆಣ್ಣು ಮಕ್ಕಳ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ABVP ಘಟಕದ ಮುಖ್ಯಸ್ಥ ಪ್ರತೀಕ್ ಗೌಡ ಬಂಧನವಾಗಿದೆ. ನಿನ್ನೆಯ ದಿನ NSUI ತೀರ್ಥಹಳ್ಳಿ ಘಟಕ ಆತನ ಮೇಲೆ ದೂರು ದಾಖಲಿಸಿದ ಬೆನ್ನಲ್ಲೇ ತೀರ್ಥಹಳ್ಳಿ ಪೊಲೀಸರು ಪ್ರತೀಕ್ ಗೌಡನನ್ನು ಬಂಧಿಸಿದ್ದಾರೆ.

ಈ ಬಗ್ಗೆ ಪೀಪಲ್ ಟಿವಿ ವಿಸ್ತೃತ ವರದಿ ಮಾಡಿತ್ತು. ವರದಿಯ ಬೆನ್ನಲ್ಲೇ ಶನಿವಾರ ಪ್ರತೀಕ್ ಗೌಡನ ಬಂಧನವಾಗಿದೆ. ABVP ಸಂಘಟನೆಯ ಸದಸ್ಯತ್ವ ಮತ್ತು ಸಂಘಟನೆಯಲ್ಲಿನ ಘಟಕಗಳಿಗೆ ಸ್ಥಾನಮಾನ ಕೊಡುವ ಬಗ್ಗೆ ವಿಧ್ಯಾರ್ಥಿನಿಯರಿಗೆ ನಾನಾ ರೀತಿಯಲ್ಲಿ ಆಮಿಷವೊಡ್ಡಿ ಅವರಿಂದ ನಗ್ನ ಚಿತ್ರಗಳನ್ನ ಆರೋಪಿ ಪ್ರತೀಕ್ ಗೌಡ ಚಿತ್ರಿಸಿದ್ದನು. ನಂತರ ವಿಧ್ಯಾರ್ಥಿನಿಯರಿಗೆ ವಿಡಿಯೋ ತೋರಿಸಿ ಹಣ ಮತ್ತು ನಿರಂತರ ಲೈಂಗಿಕ ಕ್ರಿಯೆಗೆ ಬಳಸಿದ್ದ ಎಂದೂ ಆರೋಪಿಸಲಾಗಿದೆ.

ನಂತರ ಈತನ ಬ್ಲಾಕ್ಮೇಲ್ ತಂತ್ರಕ್ಕೆ ಮಣಿಯದೇ ಹೋದಾಗ ವಿದ್ಯಾರ್ಥಿನಿಯರ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ಹರಿಬಿಟ್ಟು ಹೆಣ್ಣು ಮಕ್ಕಳ ಮಾನಹಾನಿ ಮಾಡಿದ್ದಾನೆ. ಸಧ್ಯ ಆರೋಪಿ ಈಗ ತೀರ್ಥಹಳ್ಳಿ ಪೊಲೀಸರ ಅತಿಥಿಯಾಗಿದ್ದಾನೆ.

ಆತ ನಮ್ಮವನಲ್ಲ ಎಂದ ABVP

ಇನ್ನೊಂದು ಕಡೆ ಈತನ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಈತ ಮುಖ್ಯಸ್ಥನಾಗಿದ್ದ ತೀರ್ಥಹಳ್ಳಿ ABVP ಘಟಕ, ಪ್ರತೀಕ್ ಗೌಡ ನಮ್ಮ ಸಂಘಟನೆಯಲ್ಲೇ ಇಲ್ಲ. ಈತನಿಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಪ್ಪೆ ಸಾರಿಸೋಕೆ ಹೊರಟಿದೆ. ಆದರೆ ಇದು ಸಂಘ ಪರಿವಾರದ ಎಸ್ಕೇಪ್ ಮಾರ್ಗ ಅನ್ನೋ ಸತ್ಯ ಈಗ ಗುಟ್ಟಾಗಿ ಉಳಿದಿಲ್ಲ. ಸಂಘ ಪರಿವಾರದ ಹಿನ್ನೆಲೆಯ ಕಾರ್ಯಕರ್ತರು ಏನೇ ಕಾನೂನು ಬಾಹಿರ ಚಟುವಟಿಕೆ ನಡೆಸಿದರೂ ಪರಿವಾರ ಇದೇ ರೀತಿಯ ಮಾರ್ಗ ಉಪಯೋಗಿಸಿ ತಪ್ಪಿಸಿಕೊಳ್ಳುತ್ತೆ. ಇಲ್ಲಿ ಪ್ರತೀಕ್ ಗೌಡನ ವಿಷಯದಲ್ಲಿ ಆಗಿರೋದೂ ಇದೇ.

ಇದೇ ಪ್ರತೀಕ್ ಗೌಡ ABVP ಸಂಘಟನೆಯ ತಾಲ್ಲೂಕು ಮುಖ್ಯಸ್ಥ ಎಂಬುದು ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲೇ ದಾಖಲಾಗಿದೆ. ಮತ್ತು ಈತ ಗುರುತಿಸಿಕೊಂಡಿರುವ ಸಂಘಟನೆ ಹಿನ್ನಲೆಯ ಪ್ರತಿಯೊಬ್ಬರೂ ಹೇಳುವ ಮಾತು. ಕೇವಲ ಎರಡು ತಿಂಗಳ ಹಿಂದೆ ನಡೆದ ABVP ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ವೇದಿಕೆಯನ್ನೇ ಹಂಚಿಕೊಂಡ ಫೋಟೋಗಳೇ ಈತ ಆ ಸಂಘಟನೆ ಪದಾಧಿಕಾರಿ ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತಿದೆ.

ಇನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈತ ತೀರ್ಥಹಳ್ಳಿಯಲ್ಲಿ ಹಿಜಾಬ್ ಘಟನೆಯ ನೇತೃತ್ವ ಕೂಡಾ ವಹಿಸಿದ್ದ. ಅದೂ ABVP ಸಂಘಟನೆಯ ಅಡಿಯಲ್ಲೇ ನಡೆದ ಗಲಭೆಗಳಲ್ಲಿ ಪ್ರತೀಕ್ ಗೌಡ ಮುಂಚೂಣಿ ಜವಾಬ್ದಾರಿ ವಹಿಸಿದ್ದ ಎಂಬ ಮಾಹಿತಿಗಳೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂಘ ಪರಿವಾರದ ಮೌನವೇಕೆ?

‘ಒಂದು ಕಡೆ ಸಂಘ ಪರಿವಾರ ತನ್ನ ಅಂಗಸಂಸ್ಥೆಗಳ ಮೂಲಕ ಹಿಜಾಬ್, ಲವ್ ಜಿಹಾದ್ ನಂತಹ ಅನಗತ್ಯ ವಿಚಾರಗಳನ್ನು ಇಟ್ಟು ಹಿಂದೂ ಹೆಣ್ಣು ಮಕ್ಕಳಿಗೆ ಉಳಿಗಾಲವಿಲ್ಲ ಅನ್ನೋದು. ಇನ್ನೊಂದು ಕಡೆ ಅವರದೇ ಸಂಘಟನೆಯ ಪದಾಧಿಕಾರಿಗಳು ಈ ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳನ್ನೇ ಅಶ್ಲೀಲ ಕೃತ್ಯಗಳಿಗೆ ಬಳಸಿಕೊಳ್ಳೋದು. ಹಾಗಾದರೆ ಹಿಂದೂ ಹೆಣ್ಣು ಮಕ್ಕಳು ಅಪಾಯದಲ್ಲಿ ಇರೋದು ಯಾರಿಂದ? ಹಿಂದೂವಾಗಿ ಹಿಂದೂ ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದಾ? ಇಲ್ಲಿ ಮಾನಹಾನಿ ಆಗಿದ್ದು ಒಬ್ಬ ಹಿಂದೂ ಯುವಕನಿಂದ‌. ಮೇಲಾಗಿ ಸಂಘ ಪರಿವಾರದ ಹಿನ್ನೆಲೆಯ ವ್ಯಕ್ತಿಯಿಂದ ಅನ್ನೋದು ಗಮನಾರ್ಹ.

ಹಿಂದೆ ಇದೇ ತೀರ್ಥಹಳ್ಳಿಯಲ್ಲಿ ನಂದಿತಾ ಎಂಬ ವಿದ್ಯಾರ್ಥಿನಿಯ ಸಾವಿನ ನಂತರ ಬಿಜೆಪಿ ಪಕ್ಷ ಇಡೀ ತೀರ್ಥಹಳ್ಳಿ ಹೊತ್ತಿ ಉರಿಯುವಂತಹ ಪ್ರತಿಭಟನೆ ಮಾಡಿತ್ತು. ಲಕ್ಷಾಂತರ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿತ್ತು. ಸತ್ಯಾಸತ್ಯತೆಯ ಅರಿವಿಲ್ಲದೆ ನೂರಾರು ಅಮಾಯಕ ಯುವಜನರನ್ನು ಅಡ್ಡದಾರಿಗೆ ತಗೆದುಕೊಂಡು ಹೋಗಿ, ಅವರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ನಂದಿತಾ ಸಾವಿನ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿತ್ತು. ಪ್ರಕರಣದ ತೀರ್ಪು ಹೊರಬರಲೂ ಅವಕಾಶ ಕೊಡದೇ ತೀರ್ಥಹಳ್ಳಿಯಲ್ಲಿ ಹಿಂದೆಂದೂ ಕಾಣದಂತಹ ಗಲಭೆ ಎಬ್ಬಿಸಿತ್ತು ಸಂಘ ಪರಿವಾರ.

ಆದರೆ ABVP ಮುಖ್ಯಸ್ಥ ಪ್ರತೀಕ್ ಗೌಡನ ಪ್ರಕರಣದಲ್ಲಿ ಈ ವರೆಗೂ ಯಾವೊಬ್ಬ ಸಂಘ ಪರಿವಾರದ ಮುಖಂಡನಾಗಲಿ, ಬಿಜೆಪಿ ನಾಯಕರಾಗಲಿ ಆ ಹೆಣ್ಣು ಮಕ್ಕಳಿಗಾದ ಅನ್ಯಾಯದ ವಿರುದ್ಧ ದನಿಗೂಡಿಸದೇ ಇರೋದು ಹಿಂದೂ ಹೆಣ್ಣು ಮಕ್ಕಳ ಮೇಲಿನ ಇವರ ಕಾಳಜಿ ಕೇವಲ ಬೂಟಾಟಿಕೆ ಎಂಬುದನ್ನು ತೋರಿಸುತ್ತಿದೆ. ಹೀಗೆಂದು ಸ್ಥಳೀಯ ಪ್ರಜ್ಞಾವಂತರು ಮಾತಾಡಿಕೊಳ್ಳುತ್ತಿದ್ದಾರೆ.

ಏನೇ ಆಗಲಿ ತೀರ್ಥಹಳ್ಳಿ ABVP ಮುಖ್ಯಸ್ಥ ಪ್ರತೀಕ್ ಗೌಡನ ಬಂಧನವಾಗಿದೆ. ಆರೋಪ ಸಾಭೀತಾಗಿ ತಕ್ಕ ಶಿಕ್ಷೆ ಆಗಲಿದೆ ಎಂಬ ಭರವಸೆ ಕೂಡಾ ಇದೆ. ಇನ್ನೂ ಸ್ವಲ್ಪ ಧೈರ್ಯ ಮಾಡಿ ಅನ್ಯಾಯಕ್ಕೆ ಒಳಗಾದ ಹೆಣ್ಣು ಮಕ್ಕಳು ಆತನ ಮೇಲೆ ದೂರು ದಾಖಲಿಸಿದರೆ ಮುಂದೆ ಇಂತಹ ತಪ್ಪು ಮಾಡುವವರು ನೂರು ಬಾರಿ ಯೋಚಿಸುವಂತಾಗಬೇಕು. ಅಮಾಯಕ ಹೆಣ್ಣು ಮಕ್ಕಳು ಅನ್ಯಾಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು.

ಹಿಂದೂ ಯುವತಿಯರೇ ಎಚ್ಚರ! ಇದು ಮೀಸೆ ಚಿಗುರದ ಬಲಪಂಥೀಯ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್!
ಎಚ್ಚರ! ಎಚ್ಚರ!! ಎಚ್ಚರ!!!
ಕಾಲೇಜು ಕಲಿಕೆಯ ಹಂತದ ವಿದ್ಯಾರ್ಥಿ ದಿಸೆಯಲ್ಲಿ ಸಂಘಟನೆ ಕಟ್ಟಿ ತಮ್ಮ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ಆದರೆ ಅದು ಯಾವಾಗ ಧರ್ಮ, ಸಂಸ್ಕೃತಿ ಉಳಿಸುವ ವಿದ್ಯಾರ್ಥಿ ಸಂಘಟನೆಯಾಗೋಕೆ ಹೊರಟಿತೋ ಆಗಲೇ ವಿದ್ಯೆಯ ಮತ್ತು ಸಂಘಟನೆಯ ಮೂಲ ಆಶಯವೇ ಹಳ್ಳ ಹಿಡಿಯಲು ಪ್ರಾರಂಭವಾಯಿತು. ಅಂದಹಾಗೆ ಇದು ಧರ್ಮ ಮತ್ತು ಸಂಸ್ಕೃತಿ ಉಳಿಸಲು ಹೊರಟು ತನ್ನ ನೈಜ ಸಂಸ್ಕೃತಿ ಹೊರಹಾಕಿದ  ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನ ಕಥೆಯಿದು.

ಸಧ್ಯ ಈಗ ನಾವು ಹೇಳೋಕೆ ಹೊರಟಿರೋದು ತೀರ್ಥಹಳ್ಳಿ ಭಾಗದಲ್ಲಿ ಧರ್ಮ ಮತ್ತು ಸಂಸ್ಕೃತಿಯನ್ನು ವಿಧ್ಯಾರ್ಥಿ ಘಟ್ಟದಿಂದಲೇ ಉಳಿಸ ಹೊರಟಿರುವ ಬಲಪಂಥೀಯ ವಿಧ್ಯಾರ್ಥಿ ಸಂಘಟನೆಯ ಪ್ರತೀಕ್‌ ಗೌಡ ಎಂಬ ಅಧ್ಯಕ್ಷನ ಸೆಕ್ಸ್ ಸ್ಕ್ಯಾಂಡಲ್ ಬಗ್ಗೆ. ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವ ಸ್ಥಾಪಿಸಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳೋದು ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ. ತೀರ್ಥಹಳ್ಳಿ ತಾಲ್ಲೂಕಿನ ಈ ಸಂಘಟನೆಯ ಮುಂಚೂಣಿ ಯುವನಾಯಕನ ಕಾಮದಾಟ ಈಗ ಇಲ್ಲಿನ ಪಡ್ಡೆ ಹೈಕಳ ಮೊಬೈಲ್ ಗಳಲ್ಲಿ ಗುಪ್ತ್ ಗುಪ್ತಾಗಿ ಹರಿದಾಡುತ್ತಿದೆ.

‘ಕಠೋರ ಹಿಂದೂ ಹುಲಿ’ಯೊಂದರ ಸೆಕ್ಸ್ ಸ್ಕ್ಯಾಂಡಲ್ ಬ್ಲಾಕ್ಮೇಲ್ ದಂಧೆ.!
ಬಿಜೆಪಿ ಪಕ್ಷ ಮತ್ತು ಬಲಪಂಥೀಯ ಸಂಘಟನೆ ಹಾಗೂ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡು ಎಲ್ಲಾ ವೇದಿಕೆಗಳಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ತೀರ್ಥಹಳ್ಳಿ ಘಟಕದ ಅಧ್ಯಕ್ಷ, ‘ಕಠೋರ ಹಿಂದೂ’ ಪ್ರತೀಕ್‌ ಗೌಡನೇ ಈ ಸ್ಟೋರಿಯ ಹೀರೋ ಕಂ ವಿಲನ್.

ಈತ ಮಾಡಿರೋ ಅಯೋಗ್ಯ ಕೆಲಸಕ್ಕೆ ಇಡೀ ತೀರ್ಥಹಳ್ಳಿಯ ಜನತೆ ಮುಜುಗರಕ್ಕೆ ಸಿಕ್ಕಿದಂತಾಗಿದೆ. ಹೇಳಿಕೊಳ್ಳೋಕೆ ತಾನೊಬ್ಬ ದೊಡ್ಡ ಸಂಸ್ಕೃತಿಯ ವಕ್ತಾರ ಎಂಬಂತೆ ಇಲ್ಲಿಯವರೆಗೆ ಪೋಸು ಕೊಡುತ್ತಿದ್ದಾತ ಈಗ ಈತನ ಕಾಮಕೇಳಿ ಹೊರಬೀಳುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ. ಅಷ್ಟಕ್ಕೂ ಈತ ಮಾಡಿದ ಕೆಟ್ಟ ಕೆಲಸ ಕ್ಷಮಿಸಲಾರದ್ದು.

ತೀರ್ಥಹಳ್ಳಿ ಸಮಜವಾದದ ತವರು. ಒಬ್ಬ ಮುಖ್ಯಮಂತ್ರಿ, ಒಬ್ಬ ಪ್ರಖರ ಸಮಾಜವಾದಿ ಮತ್ತು ಎರಡು ಜ್ಞಾನಪೀಠವನ್ನು ತನ್ನ ಮಡಿಲಿಗೆ ಹಾಕಿಕೊಂಡ ಅಪ್ಪಟ ಜಾತ್ಯತೀತ ನೆಲೆಗಟ್ಟಿನ ನೆಲ. ಅಂತರಾಷ್ಟ್ರೀಯ ಮಟ್ಟದಲ್ಲಿ ತೀರ್ಥಹಳ್ಳಿ ಅಂದಾಕ್ಷಣ ಮೊದಲ ಪಂಕ್ತಿಯಲ್ಲಿ ಬರುವ ಹೆಸರುಗಳೇ ಕುವೆಂಪು, ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪನವರು, ಅನಂತಮೂರ್ತಿ, ಹಾಮಾ ನಾಯಕ್ ರಂತಹ ಮಹಾನುಭಾವರು. ಆದರೆ ಇಂತಹ ತೀರ್ಥಹಳ್ಳಿಗಳು ಇಲ್ಲಿ ನಡೆಯುವ ಕುಕೃತ್ಯಗಳು ಈಗ ತಲೆ ತಗ್ಗಿಸುವಂಥ ಅವಮಾನಕ್ಕೆ ಗುರಿಯಾಗ್ತಿದೆ.

ತನ್ನದೇ ನೇತೃತ್ವದ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾದ ವಿದ್ಯಾರ್ಥಿನಿಯರನ್ನು ಸಂಘಟನೆ ಹೆಸರಿನಲ್ಲಿ ಪರಿಚಯಮಾಡಿಕೊಂಡು, ಆತ್ಮೀಯನಾಗಿ, ಹಿಂದುತ್ವದ ಕೊಮುದ್ವೇಷದ ಅಮಲೇರಿಸಿ ನಂತರ ಅವರನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸುತ್ತಿದ್ದ. ಈತನ ‘ಹೀರೋಯಿಸಂ’ ನೋಡಿ ಮರುಳಾದ ಒಂದಷ್ಟು ವಿಧ್ಯಾರ್ಥಿನಿಯರು ಈತನ ಬ್ಲಾಕ್ಮೇಲ್ ಬಲೆಗೆ ಬಿದ್ದು ಈಗ ತಾವು ಮಾಡಿದ ತಪ್ಪಿಗೆ ಕೊರಗುತ್ತಿದ್ದಾರೆ.

ಈ ಕೃತ್ಯ ಕೇವಲ ಅವರವರ ನಡುವೆ ನಡೆದು ಮುಗಿದು ಹೋಗುವಂತದ್ದಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ ಪ್ರತೀಕ್‌ ಗೌಡ ಕೆಲವು ಹೆಣ್ಣು ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ, ನಗ್ನವಾಗಿಸಿ ಅದನ್ನು ರೆಕಾರ್ಡ್ ಮಾಡಿ ಬ್ಲಾಕ್ಮೇಲ್ ಮಾಡಲು ಶುರುವಿಟ್ಟುಕೊಂಡದ್ದೇ ಈಗ ದೊಡ್ಡ ಸುದ್ದಿಯಾಗಿ ತೀರ್ಥಹಳ್ಳಿ ಭಾಗದ ಜನ ಬಾಯಿ ಮೇಲೆ ಬೆರಳಿಡುವಂತಹ ಕೆಲಸವಾಗಿದೆ.

ಈಗಾಗಲೇ ಈ ‘ಕಠೋರ ಹಿಂದೂ ಹುಲಿ’ಯ ಬ್ಲಾಕ್ಮೇಲ್ ಮಾದರಿಯ ಹಲವಾರು ವಿಡಿಯೋಗಳು ಇದ್ದು, ಸಧ್ಯ ಇದೀಗ 2 ವಿಡಿಯೋಗಳು ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್ ಆಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ. ಆಘಾತಕಾರಿ ವಿಚಾರವೆಂದರೆ ತನ್ನ ನೇತೃತ್ವದ ಸಂಘಟನೆಯಲ್ಲೇ ಗುರುತಿಸಿಕೊಂಡ ಹತ್ತಾರು ಯುವತಿಯರ ಜೊತೆಗೆ ಈತ ಈ ರೀತಿಯ ಕೃತ್ಯ ನಡೆಸಿ ನಂತರ ಹಣಕ್ಕೆ ಮತ್ತು ಮಂಚಕ್ಕೆ ಕರೆದು ಬ್ಲಾಕ್ಮೇಲ್ ಮಾಡಲು ಶುರು ಮಾಡಿಕೊಂಡಿದ್ದ ಎಂಬುದು ಈ ಭಾಗದ ಜನ ಮಾತಾಡುತ್ತಿದ್ದಾರೆ. ತನ್ನ ಬಲೆಗೆ ಬಿದ್ದ ಪ್ರತೀ ಹೆಣ್ಣು ಮಕ್ಕಳ ಬಳಿಯೂ ಹತ್ತು, ಇಪ್ಪತ್ತು ಮೂವತ್ತು ಸಾವಿರಕ್ಕೆ ಈತ ಬ್ಲಾಕ್ಮೇಲ್ ಮಾಡುತ್ತಿದ್ದ ಬಗ್ಗೆಯೂ ವಂಚನೆಗೊಳಗಾದ ಯುವತಿಯರು ಈಗ ಕಣ್ಣೀರಿಡುತ್ತಿದ್ದಾರಂತೆ. ಜೊತೆಗೆ ಆತನ ನೇತೃತ್ವದ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ತಮ್ಮ ಬಗ್ಗೆ ತಾವೇ ಶಪಿಸಿಕೊಳ್ಳುತ್ತಿದ್ದಾರೆ.

ಸಧ್ಯ ಈ ‘ಕಠೋರ ಹುಲಿ’ಯದು ಹೊರ ಬಿದ್ದಿರುವುದು ಎರಡು ವೀಡಿಯೊ. ಆದರೆ ಈ ರೀತಿಯ ಹತ್ತಾರು ವಿಡಿಯೋ ಇಟ್ಟುಕೊಂಡು ಹತ್ತಾರು ಹೆಣ್ಣು ಮಕ್ಕಳ ಬಳಿಯೂ ಈತ ಬ್ಲಾಕ್ಮೇಲ್ ದಂಧೆ ನಡೆಸುತ್ತಿದ್ದ ಎಂಬ ಗುಮಾನಿಯಿದೆ. ಈ ಬಗ್ಗೆ ಈಗ ತೀರ್ಥಹಳ್ಳಿ ವಿದ್ಯಾರ್ಥಿಗಳು ಮತ್ತು ಯುವ ಜನತೆ ಆ ವಿಧ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಯುವತಿಯರ ಬಗ್ಗೆ ಅನುಮಾನದ ಕಣ್ಣಿಂದ ನೋಡುವ ದುಸ್ಥಿತಿ ಬಂದಿದೆ ಎಂದರೆ ತಪ್ಪಿಲ್ಲ.

ಈಗಾಗಲೇ ಸಮಾಜದ, ತಾಲ್ಲೂಕಿನ ಮತ್ತು ವಿಧ್ಯಾರ್ಥಿಗಳ ವಲಯದಲ್ಲಿ ಸ್ವಾಸ್ಥ್ಯ ಕೆಡುವಂತೆ ಮಾಡಿದ ಈತನ ಮೇಲೆ NSUI ಸಂಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಹಾಗೆಯೇ ಈತನ ವಂಚನೆಯ ಜಾಲಕ್ಕೆ ಬಿದ್ದ ಹೆಣ್ಣು ಮಕ್ಕಳೂ ಸಹ ಈತನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಕೂಡಾ ಹೊರಬರುತ್ತಿದೆ. ಆದರೆ ಸ್ಟೋರಿಯ ‘ಹೀರೋ ಕಂ ವಿಲನ್’ ಪ್ರತೀಕ್‌ ಗೌಡ ಈಗ ತಲೆಮರೆಸಿಕೊಂಡಿದ್ದಾನೆ. ಆತ ಸಿಕ್ಕಿದ ನಂತರ ಆತನ ಬಳಿ ಎಷ್ಟು ವಿಡಿಯೋಗಳಿವೆ, ಎಷ್ಟು ಯುವತಿಯರ ಜೊತೆಗೆ ಈ ರೀತಿ ಬ್ಲಾಕ್ಮೇಲ್ ದಂಧೆ ಮಾಡಿಕೊಂಡು ಬಂದಿದ್ದ, ವಂಚನೆಗೊಳಗಾದ ಹೆಣ್ಣು ಮಕ್ಕಳು ಎಷ್ಟು ಮಂದಿ ಎಂಬುದು ಹೊರಬರಬೇಕಿದೆ.

ಒಟ್ಟಾರೆ ಹೇಳುವುದಾದರೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಗುರುತಿಸಿಕೊಂಡವವರು ಹೆಚ್ಚಾಗಿ ಇಂತಹ ಕೃತ್ಯಗಳಲ್ಲಿ ಗುರುತಿಸಿಕೊಂಡು ವಿರೋಧಿಗಳ ಕಡೆಯಿಂದ ‘ಬ್ಲೂಜೆಪಿ’ ಅನ್ನಿಸಿಕೊಳ್ಳುತ್ತಿರುವುದಕ್ಕೆ ಈ ಸ್ಟೋರಿ ಕೂಡಾ ಒಂದು ಹೊಸ ಸೇರ್ಪಡೆ. ಎಚ್ಚರಿಕೆ ವಹಿಸಬೇಕಾದ ಒಂದು ಪ್ರಮುಖ ಅಂಶವೆಂದರೆ ಕಾಲೇಜು ಯುವತಿಯರು ಇಂತವರ ನೇತೃತ್ವದ ಸಂಘಟನೆಗಳಲ್ಲಿ ಗುರುತಿಸಿಕೊಂಡರೂ, ತಾವು ಗುರುತಿಸಿಕೊಳ್ಳುವ ಸಂಘಟನೆ ಮತ್ತು ಅದರ ಮುಖ್ಯಸ್ಥರು ಎಷ್ಟು ಸಾಚಾ ಇದ್ದಾರೆ, ಅಲ್ಲಿ ಗುರುತಿಸಿಕೊಂಡರೆ ತಮ್ಮ ಹೆಸರು ಮತ್ತು ಬೆಲೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಬಹುದು ಎಂಬುದನ್ನು ಮನನ ಮಾಡಿಕೊಳ್ಳಬೇಕಿದೆ.