tippu jayanthi – Peepal Media

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿಗೆ ನಿಷೇಧಾಜ್ಞೆ: ಸೆಕ್ಷನ್‌ 144 ಜಾರಿಗೊಳಿಸಿದ ಸರ್ಕಾರ
ಮೈಸೂರು: ದಿನಾಂಕ 10-09-2023ರಂದು ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಕ್ಫ್‌ ಎಸ್ಟೇಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಟಿಪ್ಪು ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ  ರಾಜ್ಯ ಸರ್ಕಾರವು ನಿಷೇದಾಜ್ಞೆ ವಿಧಿಸಿ  ದಿನಾಂಕ 09-11-2023ರಂದು ಆದೇಶ ಹೊರಡಿಸಿದೆ. ಶ್ರೀರಂಗಪಟ್ಟಣ ತಾಲ್ಲೂಕು ಕಾರ್ಯನಿರ್ವಾಹಕ ದಂಡಾದಿಕಾರಿ ಮತ್ತು ತಹಶಿಲ್ದಾರರಾದ ಪರಶುರಾಮ  ಸತ್ತಿಗೇರಿಯವರು ಹೊರಡಿಸಿರುವ ಆದೇಶದಂತೆ ಶುಕ್ರವಾರ CRPC ಕಲಂ 144 ಅನ್ವಯ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಶ್ರೀರಂಗಪಟ್ಟಣ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಮೆರವಣಿಗೆ ನಡೆಸುವಂತಿಲ್ಲ; ಪ್ರತಿಭಟನೆ, ಮೆರವಣಿಗೆ, ಬ್ಯಾನರ್‌, ಬಂಟಿಂಗ್ಸ್‌, ಮೈಕ್‌, ಪಟಾಕಿ ಯಾವುದಕ್ಕೂ ಅವಕಾಶವಿಲ್ಲ, ಡಿಜೆ ಹಾಕುವಂತಿಲ್ಲ, ರಸ್ತೆ ರಡೆ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಈ ಹಿಂದೆ ನವೆಂಬರ್‌ 11ರಂದು ರಾಜ್ಯ ಸರ್ಕಾರವೇ ಟಿಪ್ಪು ಜಯಂತಿ ಆಚರಿಸುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಲಾಗಿತ್ತು. ಈ ನಡುವೆ ಟಿಪ್ಪು ಹುಟ್ಟಿದ ದಿನಾಂಕವು ಡಿಸೆಂಬರ್‌ 1 ಎಂದು ಸಂಶೋಧಕರು ಪತ್ತೆ ಮಾಡಿದ್ದ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯ ದಿನವೂ ಬದಲಾಗಿದೆ. ಆದರೆ ಈ ಸಲ ಸರ್ಕಾರವು ಟಿಪ್ಪು ಜಯಂತಿ ಆಚರಿಸುವ ಸೂಚನೆ ಇಲ್ಲ. ಕೆಲವು ಖಾಸಗಿ ಸಂಘ ಸಂಸ್ಥೆಗಳು ಹಲವಾರು ವರ್ಷಗಳಿಂದ ಟಿಪ್ಪು ಜಯಂತಿ ಮತ್ತು ಟಿಪ್ಪು ಹುತಾತ್ಮ ದಿನಾಚರಣೆ ನಡೆಸುತ್ತಾ ಬಂದಿದ್ದಾರೆ. ಕೆಲವರು ನವೆಂವರ್‌ 10ಕ್ಕೆ ಆಚರಿಸುತ್ತಾರೆ. ಈ ಸಲ ಮಂಡ್ಯ-ಮೈಸೂರು ಸಮಾನ ಮನಸ್ಕರ ವೇದಿಕೆ ವತಿಯಿಂದ ಡಿಸೆಂಬರ್‌ 1 ರಂದು ಶ್ರೀರಂಗಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ ಟಿಪ್ಪು ಜಯಂತಿ ಹಮ್ಮಿಕೊಂಡಿದೆ.  ಆದರೆ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಇಂತಹ ಖಾಸಗಿ ಟಿಪ್ಪು ಜಯಂತಿ ಆಚರಣೆಗೂ ತಡೆಯೊಡ್ಡುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. ಬ್ರಿಟಿಷರ ವಿರುದ್ಧ ಕೆಚ್ಚೆದ ಹೋರಾಟ ಮಾಡಿ, ಬ್ರಿಟಿಷರ ಎದೆ ನಡುಗಿಸಿದ್ದ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನ್‌ ಅವರ ಹಿರಿಮೆ ಲೋಕಕ್ಕೇ ತಿಳಿದ ಸಂಗತಿ. ಇಂತಹ ಮಹಾನ್‌ ಪರಾಕ್ರಮಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಯಾರೇ ಆಚರಿಸಿದರೂ ಸೂಕ್ತ ರಕ್ಷಣೆ ನೀಡಬೇಕಾಗಿರುವ ಸರ್ಕಾರವೇ ಟಿಪ್ಪು ಜಯಂತಿಯ ಮೇಲೆ ನಿಷೇಧ ಹೇರಿರುವುದು ಎಷ್ಟು ಸರಿ ಎಂಬ ಚರ್ಚೆಗೆ ಈ ಆದೇಶ ಕಾರಣವಾಗಿದೆ.

ಇದನ್ನೂ ಓದಿ:

ಟಿಪ್ಪೂ ಸುಲ್ತಾನ್‌ ಹುಟ್ಟಿದ ನಿಖರವಾದ ದಿನಾಂಕ ಡಿಸೆಂಬರ್‌ 01 : ಸಂಶೋಧನೆ

ಟಿಪ್ಪು ಸುಲ್ತಾನನ್ನು ಯಾರು ಯಾರು ಏಕೆ ನೆನೆಯಬೇಕು?
ಆಧುನಿಕ ಪ್ರಜಾಪ್ರಭುತ್ವವಾದಿ ಟಿಪ್ಪು ಸುಲ್ತಾನನನ್ನು ಅಖಂಡ ಕನ್ನಡಿಗರು ಬೇರೆ ಬೇರೆ ಕಾರಣಕ್ಕೆ ನೆನೆಯ ಬೇಕಾಗಿದೆ. ಯಾರು ಯಾರು ಏಕೆ ನೆನೆಯಬೇಕೆಂದು ಸಣ್ಣದೊಂದು ಪಟ್ಟಿಯನ್ನು ಸಂಶೋಧಕ ಅರುಣ್ ಜೋಳದಕೂಡ್ಲಿಗಿಯವರು ಮಾಡಿದ್ದಾರೆ. ಗಮನಿಸಿ.

ಟಿಪ್ಪುವನ್ನು ಮಹಿಳೆಯರೇಕೆ ನೆನೆಯಬೇಕು?

ಸಾಮಾಜಿಕ‌ ಪಿಡುಗನ್ನು ನಿಶೇಧಿಸಿದ.

ಮನೆಗೆಲಸಕ್ಕೆ ಗುಲಾಮ ಮಹಿಳೆಯರನ್ನು ನೇಮಿಸಿ ಕೊಳ್ಳುವುದನ್ನು ನಿಶೇಧಿಸಿದ.

ಮಲಬಾರ್ ಪ್ರಾಂತದಲ್ಲಿದ್ದ ಬಹುಪತ್ನಿತ್ವ ಪದ್ಧತಿಯನ್ನು‌ ನಿಶೇಧಿಸಿದ.

ಮಲಬಾರಿನ ಬುಡಕಟ್ಟು ಮಹಿಳೆಯರು ಸೊಂಟದ ಮೇಲೆ ಉಡುಪು ಧರಿಸುವಂತಿರದ ಅಮಾನವೀಯ ಕ್ರೌರ್ಯವನ್ನು ನಿಶೇಧಿಸಿ ಉಡುಪು ಧರಿಸುವಂತೆ ನಿಯಮ ಜಾರಿಗೊಳಿಸಿದ.

ಮದುವೆಯ ದುಂದು ವೆಚ್ಚವನ್ನು ನಿಯಂತ್ರಿಸಿ ಸರಳ ಮದುವೆಗಳನ್ನು ಬೆಂಬಲಿಸಿದ.

ಟಿಪ್ಪುವನ್ನು ರೈತರೇಕೆ ನೆನೆಯಬೇಕು?

ರೈತರ ಜೀವ ಹಿಂಡುತ್ತಿದ್ದ ಸ್ಥಳೀಯ ಪಾಳೆಯಗಾರರನ್ನು ಮಟ್ಟಹಾಕಿನು.

ಮಧ್ಯವರ್ತಿ ದಲ್ಲಾಳಿಗಳನ್ನು ನಿಯಂತ್ರಿಸಿ ರೈತ ಮತ್ತು ಸರಕಾರದ ನೇರ ಸಂಪರ್ಕಕ್ಕೆ ಕ್ರಮ ಕೈಗೊಂಡನು.

ಜಮೀನ್ದಾರಿ ಪದ್ಧತಿಯನ್ನು ನಿಯಂತ್ರಿಸಿ, ತಕಾವಿ ಕಿರುಸಾಲ ಯೋಜನೆಯನ್ನು ಜಾರಿಗೆ ತಂದನು.

ರೈತರಿಗಾಗಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದನು.

ತೆರಿಗೆಯಲ್ಲಿ ದೊಡ್ಡ ಸುಧಾರಣೆ ತರಲಾಯಿತು. ಹೊಲ ಬೆಳೆ ಎಲ್ಲವನ್ನು ಸರ್ವೆಮಾಡಿ ನ್ಯಾಯಯುತ ತೆರಿಗೆ ವಿಧಿಸತೊಡಗಿದ.

ಬಂಗಾಳದಿಂದ ರೇಶ್ಮೆಹುಳು ತರಿಸಿ ರೇಶ್ಮೆ ಕೃಷಿ ಯನ್ನು ಆರಂಭಿಸಿದ.

ನೀರಾವರಿಗಾಗಿ 39,000 ಕೆರೆಕಟ್ಟೆಗಳನ್ನು ಕಟ್ಟಿಸಿದ, 16,000 ಬಾವಿಗಳನ್ನು ತೋಡಿಸಿದ. 24 ಕಡೆ ನದಿ ಆಣೆಕಟ್ಟೆಗಳನ್ನು ಕಟ್ಟಿಸಿ ನೀರಾವರಿ ಕೃಷಿಯನ್ನು ಅಭಿವೃದ್ಧಿಗೊಳಿಸಿದ. 1803-04 ರ ಹೊತ್ತಲ್ಲಿ 30 ಲಕ್ಷ ಎಕರೆ ಜಮೀನಿನಲ್ಲಿ 8 ಲಕ್ಷ ಎಕರೆ ಜಮೀನು ಅಂದರೆ ಶೇ 35 ರಷ್ಟು ನೀರಾವರಿಯಾಯಿತು.

1798 ರಲ್ಲಿ KRS ಇರುವ ಜಾಗದಲ್ಲಿ ಕಾವೇರಿ ನದಿಗೆ ಬೃಹತ್ ಆಣೆಕಟ್ಟು ಕಟ್ಟಿಸುವ ಅಡಿಗಲ್ಲು ಹಾಕಿಸಿದ.

ಕಬೀರ್ ಕಾಸರ್ ಗುರುತಿಸುವಂತೆ, ರೈತನ ಜಾತಿ, ಮತ, ಪಂಥ, ಧರ್ಮ ಏನೇ ಇದ್ದರೂ ಉಳುವವನೆ ಭೂಒಡೆಯ ಎಂಬ ಕ್ರಾಂತಿಕಾರಿ ಯೋಜನೆಯನ್ನು ತಂದನು.

ಜೀತ ಪದ್ಧತಿ ಮುಕ್ತಗೊಳಿಸಿ ದಿನಕೂಲಿ ಪದ್ಧತಿಯನ್ನು‌ ಜಾರಿಗೊಳಿಸಿದನು.

ರೈತರ ಆರೋಗ್ಯ  ಹಿತದೃಷ್ಟಿಯಿಂದ ಗಾಂಜಾ ಮತ್ತು ಮದ್ಯಪಾನ ನಿಶೇಧ ಜಾರಿಗೆ ತರುತ್ತಾನೆ.

ಟಿಪ್ಪುವನ್ನು ಈ ನಾಡಿನ ದಲಿತರೇಕೆ ನೆನೆಯಬೇಕು?

ತನ್ನ ರಾಜ್ಯದಲ್ಲಿ ಅಸ್ಷೃಶ್ಯತೆಯ ಆಚರಣೆಯನ್ನು ನಿಶೇಧ ಮಾಡುತ್ತಾನೆ.

2.ಟಿಪ್ಪು ಕಟ್ಟಿಸಿದ ಕೆರೆ ಬಾವಿಗಳಿಗೆ ದಲಿತರನ್ನು ನೀರಗಂಟಿ ಗಳನ್ನಾಗಿ ನೇಮಿಸುತ್ತಾರೆ.

3.ನಂಜನಗೂಡಿನಲ್ಲಿ 500 ಬ್ರಾಹ್ಮಣರಿಗಿದ್ದ 14,000 ಎಕರೆ ಜಮೀನನ್ನು ಹೊಲವಿಲ್ಲದ 700 ದಲಿತ ಶೂದ್ರರಿಗೆ ಹಂಚುತ್ತಾನೆ.

ಜೀತಪದ್ಧತಿಗೆ ಬಲಿಯಾಗಿದ್ದ ಬಹುಸಂಖ್ಯಾತ ದಲಿತರನ್ನು ಜೀತಪದ್ಧತಿ‌ ನಿಶೇಧ ಕಾಯ್ದೆ ಬಿಡುಗಡೆಗೊಳಿಸುತ್ತದೆ.

6.’ಉಳುವವನೆ ಭೂ ಒಡೆಯ’ ಕಾನೂನಿನಡಿ  ಉಳುವ ಭೂಮಿಗೆ ಒಡೆಯರಾದವರಲ್ಲಿ ದಲಿತರ ಪಾಲು ದೊಡ್ಡದಿದೆ.

ಟಿಪ್ಪುವನ್ನು ಹಿಂದುಗಳೇಕೆ‌ ನೆನೆಯಬೇಕು?

ಬಹುಸಂಖ್ಯಾತ ಹಿಂದುಗಳಿರುವ ತನ್ನ ರಾಜ್ಯದಲ್ಲಿ ಆತ ಮುಸ್ಲಿಮರಿಗಿಂತ ಹಿಂದುಗಳಿಗೆ ಹೆಚ್ಚು ಕೆಲಸ ಮಾಡಿದ್ದಾನೆ.

ಟಿಪ್ಪುವಿನ ರಾಜ್ಯನೀತಿಯ ಮುಖ್ಯ ಅಂಶ ಜಾತ್ಯತೀತತೆ

1916 ರಲ್ಲಿ ಆರ್.ನರಸಿಂಹಾಚಾರ್ಯರು ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳನ್ನು ಪತ್ತೆಹಚ್ಚಿದ್ದಾರೆ. ಈ ಪತ್ರಗಳನ್ನು ಓದಿದರೆ ಟಿಪ್ಪುವಿನ ಧರ್ಮಾತೀತ ಗುಣ ತಿಳಿಯುತ್ತದೆ. ಮರಾಠರ ಪರುಶುರಾಮ ಭಾವು ಶೃಂಗರಿಯ ಮಠವನ್ನು ದಾಳಿ ಮಾಡಿದಾಗ ಶಾರದಾ ಮಠವನ್ನು ಮತ್ತೆ ಜೀರ್ಣೋದ್ಧಾರ ಮಾಡಿದವನು ಟಿಪ್ಪು.

ನಂಜನಗೂಡಿನ ಕಳಲೆಯ ಲಕ್ಷ್ಮಿಕಾಂತ ದೇವಸ್ಥಾನಕ್ಕೆ ನಾಲ್ಕು ಬೆಳ್ಳಿಬಟ್ಟಲು, ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನಕ್ಕೆ ಆನೆ, ಬೆಳ್ಳಿ ಪಾತ್ರೆಗಳನ್ನು ಕೊಟ್ಟಿದ್ದಾನೆ. ನಂಜನಗೂಡಿನ ಶ್ರೀಕಂಠೇಶ್ವರ ದೇಗುಲಕ್ಕೆ ಅಪೂರ್ವ ಪಚ್ಚೆಲಿಂಗ ಕೊಡಿಸಿದ್ದಾನೆ. ಈ ಪಟ್ಟಿ ದೊಡ್ಡದಿದೆ. ಒಟ್ಟು 154 ದೇವಾಲಯಗಳಿಗೆ ದತ್ತಿ ಕಾಣಿಕೆ ನೀಡಿದ್ದಾನೆ.

ಆಡಳಿತದ ಪ್ರಮುಖ ಹುದ್ದೆಗಳಲ್ಲಿ ಹಿಂದೂಗಳನ್ನು ನೇಮಿಸಿದ್ದ.

ದಿವಾನ್ ಪೂರ್ಣಯ್ಯ-ಕಂದಾಯ, ಹಣಕಾಸು ಸಚಿವ

ಕೃಷ್ಣಾರಾವ್- ಕೋಶಾಧಿಕಾರಿ.

ಶ್ಯಾಮ್ ಅಯ್ಯಂಗಾರ್-ಅಂಚೆ ಸಚಿವರು.

ಹರಿಸಿಂಗ್- ಅಶ್ವದಳದ ಮುಖ್ಯಸ್ಥ

ಶಿವಾಜಿ ಎಂಬ ಮರಾಠಿ ಸೈನಿಕ 3,000 ಅಶ್ವದಳದ ಮುಖ್ಯಸ್ಥನಾಗಿದ್ದ.

ನರಸಿಂಗ ರಾವ್, ಶ್ರೀನಿವಾಸರಾವ್, ಅಪ್ಪಾಜಿರಾವ್ ಟಿಪ್ಪುಗೆ ಮುತ್ಸದ್ದಿ ಸಲಹೆಗಾರರಾಗಿದ್ದರು.

ಹೀಗೆ ಪಟ್ಟಿ ಬೆಳೆಯುತ್ತದೆ.

ಅರುಣ್ ಜೋಳದಕೂಡ್ಲಿಗಿ

ಟಿಪ್ಪು ಜಯಂತಿಗೆ ಅನುಮತಿ ನೀಡಿರುವುದು ಬಿಜೆಪಿ ರಾಜಕೀಯ ಲಾಭಕ್ಕಾಗಿ ಮಾಡಿರುವ ತಂತ್ರ : ಪ್ರಮೋದ್‌ ಮುತಾಲಿಕ್
ಹುಬ್ಬಳ್ಳಿ : ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಇಂದು  ಎಐಎಂಐಎಂ ಪಕ್ಷದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುತ್ತಿದ್ದರು. ಇದನ್ನು ಖಂಡಿಸಿ, ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದಕ್ಕಾಗಿ ಎಐಎಂಐಎಂ ಹಾಗೂ ಕೆಲವು ದಲಿತ ಸಂಘಟನೆಗಳಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ಕೇಳಿದ್ದು, ಇದರ ಬಗ್ಗೆ ಸುದೀರ್ಘ ಸಭೆ ನಡೆಸಿದ ಪಾಲಿಕೆ, ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಸೇರಿದಂತೆ ಎಲ್ಲಾ ಮಹನೀಯರ ಜಯಂತಿ ಆಚರಣೆಗೆ ಪಾಲಿಕೆ ಅನುಮತಿ ನೀಡಿತ್ತು.

ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿದ್ದು, ʼ ಐಎಂಐಎಂ ಒಂದು ದೇಶದ್ರೋಹಿ ಪಕ್ಷ. ಇಂತ ಪಕ್ಷಕ್ಕೆ ಮನ್ನಣೆ ಕೊಡುತ್ತೀರಿ ಎಂದರೆ ಯಾವ ಮಟ್ಟಕ್ಕೆ ಬಂದಿದ್ದೀರಿ, ಇದನ್ನು ಕನ್ನಡ ದ್ರೋಹಿ, ಮತಾಂಧ, ದೇವಸ್ಥಾನ ದ್ವಂಸ ಮಾಡಿದ ಟಿಪ್ಪು ಸುಲ್ತಾನ್ ಜಯಂತಿ ಅನುಮತಿ ನೀಡಿರುವುದಕ್ಕೆ ಕನ್ನಡಿಗರು ಕ್ಷಮೆ ಮಾಡಲು ಸಾಧ್ಯವಿಲ್ಲ. ನೀವು ಅನುಮತಿ ಕೊಟ್ಟು ಬಹಳ ದೊಡ್ಡ ತಪ್ಪು ಮಾಡಿದ್ದೀರಿ, ಕನ್ನಡಿಗರು ತಮಗೆ ಎಂದು ಕ್ಷಮೆ ಮಾಡಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಈದ್ಗಾ ಮೈದಾನದಲ್ಲಿ ಆಚರಿಸುತ್ತಿದ್ದ ಟಿಪ್ಪು ಜಯಂತಿಯ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಮತ್ತು ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಟಿಪ್ಪು ಜಯಂತಿ ಆಚರಿಸುವದನ್ನು ಬಿಜೆಪಿ ತಡೆಯಬಹುದಿತ್ತು. ಆದರೆ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ತಂತ್ರಗಾರಿಕೆ ಮಾಡುತ್ತಿದ್ದಾರೆ. ಎಐಎಂಐಎಂ ದೇಶದ್ರೋಹಿ ಪಕ್ಷವಾಗಿದ್ದು, ಭಯೋತ್ಪಾದನೆಯನ್ನು ಉಂಟು ಮಾಡುತ್ತದೆ. ಇದು ಸರಿಯಲ್ಲ. ಟಿಪ್ಪು ಜಯಂತಿಯನ್ನು ರಾಜ್ಯದ ಎಲ್ಲಿಯೂ ಆಚರಣೆ ಮಾಡಬಾರದು. ಟಿಪ್ಪು ಜಯಂತಿಗೆ ಅನುಮತಿ ಕೊಟ್ಟರೆ ಹೈಕೋರ್ಟ್‌ಗೆ ಪಿಐಎಲ್‌ ಹಾಕುತ್ತೇನೆ ಎಂದು ಕಿಡಿಕಾರಿದ್ದಾರೆ.