Top companies – Peepal Media

ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ : ಭಾರತದತ್ತ ಮುಖ ಮಾಡಬಹುದೇ ಜಗತ್ತಿನ ಟಾಪ್ ಕಂಪನಿಗಳು!?
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನ ಹಮಾಸ್ ಉಗ್ರರ ನಡುವಿನ ಯುದ್ಧವು ಮತ್ತಷ್ಟು ಉಲ್ಬಣಗೊಂಡರೆ ಇಸ್ರೇಲ್‌ನಲ್ಲಿನ ಜಾಗತಿಕ ಐಟಿ ಕಂಪನಿಗಳು ತಮ್ಮ ವ್ಯಾಪಾರ ಕಾರ್ಯಾಚರಣೆಗಳನ್ನು ಭಾರತಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ವರದಿಯ ಪ್ರಕಾರ ಮೈಕ್ರೋಸಾಫ್ಟ್, ಇಂಟೆಲ್ ಮತ್ತು ಗೂಗಲ್ ಸೇರಿದಂತೆ ಇಸ್ರೇಲ್‌ನಲ್ಲಿ 500 ಕ್ಕೂ ಹೆಚ್ಚು ಜಾಗತಿಕ ಕಂಪನಿಗಳಿವೆ. ವಿಪ್ರೋ ಮತ್ತು ಟಿಸಿಎಸ್‌ನಂತಹ ಭಾರತೀಯ ಸಂಸ್ಥೆಗಳು ಸಹ ಅಲ್ಲಿ ವ್ಯವಹಾರಗಳನ್ನು ಹೊಂದಿವೆ. ಸಧ್ಯ ಇಸ್ರೇಲ್ ನಲ್ಲಿ ಯುದ್ಧದ ವಾತಾವರಣದ ಕಾರಣ ಈ ಜಾಗತಿಕ ಕಂಪನಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂಪನಿಗಳು ಹೇಳಿಕೊಂಡಿವೆ.

ಸಧ್ಯಕ್ಕೆ ಯುದ್ಧ ಮುಂದುವರೆಯುವ ಬಗ್ಗೆ ಸೂಚನೆ ಸಿಕ್ಕಿದರೆ, ಭಾರತ ಅಥವಾ ಮಧ್ಯಪ್ರಾಚ್ಯ ಅಥವಾ ಪೂರ್ವ ಯುರೋಪಿನಂತಹ ರಾಷ್ಟ್ರಗಳು ಅವಕಾಶ ಕಲ್ಪಿಸಿದರೆ ಈ ರಾಷ್ಟ್ರಗಳತ್ತ ಇತರ ಸ್ಥಳಗಳಿಗೆ ತಮ್ಮ ಕಂಪನಿಗಳನ್ನು ಸ್ಥಳಾಂತರಿಸಬಹುದು ಎಂದು ತಿಳಿದು ಬಂದಿದೆ.

ಜಗತ್ತಿನ ಹೈಟೆಕ್ ಕೈಗಾರಿಕೆಗಳು ಇಸ್ರೇಲ್‌ನಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದರೂ, ಇಸ್ರೇಲಿ ಮಿಲಿಟರಿಯು ಯುದ್ಧದ ಹಂತಕ್ಕೆ ಸ್ಥಳಾಂತರಗೊಂಡಿದ್ದರಿಂದ ಆ ಕಂಪನಿಗಳು ಭಾರಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದು ಗಾಜಾ ಪಟ್ಟಿಯ ಪೂರ್ಣ ಪ್ರಮಾಣದ ಆಕ್ರಮಣವನ್ನು ಒಳಗೊಂಡಿರುತ್ತದೆ ಎಂದು ಹೂಡಿಕೆದಾರರು ಮತ್ತು ವಿಶ್ಲೇಷಕರನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇಸ್ರೇಲ್‌ನ ಅತಿದೊಡ್ಡ ಖಾಸಗಿ ಮತ್ತು ರಫ್ತುದಾರ ಚಿಪ್‌ಮೇಕರ್ ಇಂಟೆಲ್ ಸಂಸ್ಥೆಯ ವಕ್ತಾರರು ಇಸ್ರೇಲ್‌ನಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು ಮತ್ತು ತಮ್ಮ ಉದ್ಯೋಗಿಗಳನ್ನು ರಕ್ಷಿಸಲು ಮತ್ತು ಬೆಂಬಲಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಸಧ್ಯ ಈ ಒಂದು ಬೆಳವಣಿಗೆ ಭಾರತಕ್ಕೆ ವರದಾನ ಆಗಬಹುದು ಎಂದೇ ನಿರೀಕ್ಷೆ ಮಾಡಲಾಗುತ್ತಿದೆ. ಭಾರತ ಸೇರಿದಂತೆ ಮಧ್ಯಪ್ರಾಚ್ಯ ಅಥವಾ ಐರೋಪ್ಯ ರಾಷ್ಟ್ರಗಳತ್ತ ಗಮನ ಹರಿಸಿರುವ ಕಂಪೆನಿಗಳು ಇನ್ನು ಈ ರಾಷ್ಟ್ರಗಳತ್ತ ಮುಖ ಮಾಡಿದರೂ ಆಶ್ಚರ್ಯವಿಲ್ಲ.