Transparency – Peepal Media

ನ್ಯಾಯಮೂರ್ತಿ ವರ್ಮಾ ವಿರುದ್ಧದ ವರದಿ: ಐದು ಪ್ರಮುಖ ಪ್ರಶ್ನೆಗಳಿಗೆ ಉತ್ತರವಿಲ್ಲ!
ಬೆಂಕಿ ಹೇಗೆ ಹೊತ್ತಿಕೊಂಡಿತು, ಎಷ್ಟು ಹಣ ಸಿಕ್ಕಿತು, ಹಣ ಎಲ್ಲಿಂದ ಬಂತು ಮತ್ತು ಈಗ ಅದು ಎಲ್ಲಿದೆ - ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯು ಈ ಪ್ರಶ್ನೆಗಳಿಗೆ ಉತ್ತರಿಸಿಲ್ಲ - ವಿನೀತ್ ಭಲ್ಲಾ & ಆಯುಷ್ ತಿವಾರಿ

ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಮಾಡಲಾಗಿರುವ ಆರೋಪಗಳ ತನಿಖೆ ನಡೆಸಲು ಭಾರತದ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಚಿಸಿದ್ದ ಮೂವರು ಸದಸ್ಯರ ಸಮಿತಿಯು ಮಾಡಿರುವ ಆರೋಪಗಳಲ್ಲಿ “ಸಾಕಷ್ಟು ಸತ್ಯಾಂಶ”ವಿದೆ ಎಂದು ತೀರ್ಮಾನಿಸಲಾಗಿದೆ.

ಮಾರ್ಚ್ 14 ರಂದು, ದೆಹಲಿಯಲ್ಲಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಬೆಂಕಿ ಹತ್ತಿಕೊಂಡಾಗ ಅಗ್ನಿಶಾಮಕ ಸೇವೆಗಳು ಕೆಲಸ ಮಾಡಿದ್ದವು. ಆ ಸಂದರ್ಭದಲ್ಲಿ ಅವರ ಅಧಿಕೃತ ನಿವಾಸದ ಸ್ಟೋರ್‌ ರೂಮ್‌ನಲ್ಲಿ ಅರ್ಧ ಸುಟ್ಟ ನೋಟುಗಳು ಪತ್ತೆಯಾಗಿದ್ದವು ಎಂಬ ಆರೋಪ ಮಾಡಲಾಗಿತ್ತು.

ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರೂ , ಈ ಪ್ರಕರಣದಲ್ಲಿ ಇದುವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ .

ಮಾರ್ಚ್ 22 ರಂದು, ಸುಪ್ರೀಂ ಕೋರ್ಟ್- ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅನು ಶಿವರಾಮನ್ ಅವರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿತು.

ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಆರೋಪಗಳ ತನಿಖೆಗಾಗಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ರಚಿಸಿದ ಸಮಿತಿಯಲ್ಲಿ ಇರುವ (ಎಡದಿಂದ ಬಲಕ್ಕೆ:) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು, ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಿ.ಎಸ್. ಸಂಧವಾಲಿಯಾ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಅನು ಶಿವರಾಮನ್

ಮೇ 3 ರಂದು ಬಿಡುಗಡೆಯಾದ ತನ್ನ ವರದಿಯಲ್ಲಿ ಸಮಿತಿಯು, ವರ್ಮಾ ಅವರ ದುಷ್ಕೃತ್ಯವು ಅವರನ್ನು ಹುದ್ದೆಯಿಂದ “ತೆಗೆದುಹಾಕಲು ಬೇಕಾದ ಕ್ರಮಗಳನ್ನು ಪ್ರಾರಂಭಿಸಲು ಕರೆ ನೀಡುವಷ್ಟು ಗಂಭೀರವಾಗಿದೆ” ಎಂದು ಅಭಿಪ್ರಾಯಪಟ್ಟಿದೆ.

ಕಳೆದ ವಾರ, ದಿ ಲೀಫ್ಲೆಟ್ ಮತ್ತು ಬಾರ್ ಮತ್ತು ಬೆಂಚ್ ಈ ವರದಿಯನ್ನು ಪ್ರಕಟಿಸಿತ್ತು. ವರ್ಮಾ ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದಾಗ ದೆಹಲಿಯಲ್ಲಿರುವ ತಮ್ಮ ಅಧಿಕೃತ ಬಂಗಲೆಯ ಸ್ಟೋರ್‌ ರೂಮ್‌ನಲ್ಲಿ ಪತ್ತೆಯಾದ ಕರೆನ್ಸಿ ನೋಟುಗಳ ರಾಶಿಯ ಬಗ್ಗೆ ವಿಚಾರಣೆ ನಡೆಸಿ ಅವರು ತಮ್ಮ ಮೇಲಿರುವ ಮೇಲಿರುವ ಸಾರ್ವಜನಿಕ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಎಂಬ ತೀರ್ಪು ನೀಡಲಾಗಿತ್ತು.

ಬೆಂಕಿ ಅವಘಡ ಸಂಭವಿಸಿದಾಗ ವರ್ಮಾ ಅವರು ದೆಹಲಿಯಲ್ಲಿ ಇರಲಿಲ್ಲ. ಇಡೀ ಘಟನೆಯನ್ನು ತನ್ನ ಮೇಲೆ ಆರೋಪ ಹೊರಿಸಲು ನಡೆಸಲಾದ ಪಿತೂರಿ ಎಂದು ಆರೋಪಿಸಿದ್ದರು. ಸ್ಟೋರ್ ರೂಮ್‌ ತಮ್ಮ ಮುಖ್ಯ ನಿವಾಸದ ಭಾಗವಾಗಿರಲಿಲ್ಲ ಮತ್ತು ತನ್ನ ಸಿಬ್ಬಂದಿಗೆ ಅದರ ಒಳಗೆ ಹೋಗಲು ಅವಕಾಶವಿತ್ತು ಎಂದು ಅವರು ಹೇಳಿಕೊಂಡಿದ್ದರು. ಮಾರ್ಚ್ 14 ರಂದು, ಬೆಂಕಿಯನ್ನು ನಂದಿಸಿದ ನಂತರ ಅವರ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿಗೆ ಸ್ಟೋರ್ ರೂಂನಲ್ಲಿ ಯಾವುದೇ ನಗದು ಕಂಡುಬಂದಿರಲಿಲ್ಲ ಎಂದು ಅವರು ಹೇಳಿದ್ದರು.

ಮತ್ತೊಂದೆಡೆ, ಮೂವರು ಸದಸ್ಯರ ಸಮಿತಿಯು ಬೆಂಕಿ ನಂದಿಸಿದ ನಂತರ ಸ್ಥಳದಲ್ಲಿ ಅರ್ಧ ಸುಟ್ಟ ನಗದು ಪತ್ತೆಯಾಗಿದ್ದು ಮಾತ್ರವಲ್ಲದೆ, ಅದನ್ನು ವರ್ಮಾ ಅವರ ಸಿಬ್ಬಂದಿ ತೆಗೆದುಹಾಕಿದ್ದಾರೆ ಎಂದು ತೀರ್ಮಾನಿಸಲು ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಮತ್ತು ಎಲೆಕ್ಟ್ರಾನಿಕ್ ಪುರಾವೆಗಳನ್ನು ನೀಡಿದೆ. ವರ್ಮಾ ಮತ್ತು ಅವರ ಕುಟುಂಬವು ಸ್ಟೋರ್ ರೂಮ್ ಮೇಲೆ “ರಹಸ್ಯ ಅಥವಾ ಸಕ್ರಿಯ ನಿಯಂತ್ರಣ” ಹೊಂದಿದೆ ಎಂದು ಸಾಕ್ಷ್ಯಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳಿಂದ ಸಮಿತಿ ಊಹಿಸಿದೆ.

ವರ್ಮಾ ಅವರನ್ನು ಪದಚ್ಯುತಗೊಳಿಸುವ ಕ್ರಮಗಳನ್ನು ಪ್ರಾರಂಭಿಸಲು ಸಮಿತಿಯ ಶಿಫಾರಸು ಸಂಸತ್ತಿನಲ್ಲಿ ಸಂಭಾವ್ಯ ದೋಷಾರೋಪಣೆ ನಿರ್ಣಯಕ್ಕೆ ವೇದಿಕೆಯನ್ನು ಸಿದ್ಧಪಡಿಸುತ್ತದೆ, ಇದು ಹೈಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಏಕೈಕ ಸಾಂವಿಧಾನಿಕ ಮಾರ್ಗವಾಗಿದೆ.

ಹಾಗಿದ್ದೂ, ವರದಿಯನ್ನು ಸೂಕ್ಷ್ಮವಾಗಿ ಓದಿದಾಗ ಆಪಾದಿತ ನಗದು ರಾಶಿಯ ಕುರಿತು ಎದ್ದಿರುವ ಅತ್ಯಂತ ಮೂಲಭೂತ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂಬುದು ತಿಳಿದುಬರುತ್ತದೆ.

1 ಹಣ ಎಲ್ಲಿಂದ ಬಂತು?

ಇದು ಬಗೆಹರಿಯದ ಮುಖ್ಯ ರಹಸ್ಯವಾಗಿದೆ. ದೆಹಲಿ ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಕನಿಷ್ಠ 10 ಪ್ರತ್ಯಕ್ಷದರ್ಶಿಗಳ ಸಾಕ್ಷ್ಯದ ಮೂಲಕ ಸಮಿತಿ ತಯಾರಿಸಿದ ವರದಿಯು, ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಅಂಗಡಿ ಕೋಣೆಯಲ್ಲಿ ಅರ್ಧ ಸುಟ್ಟ 500 ರುಪಾಯಿಗಳ ನೋಟುಗಳ ರಾಶಿಗಳು ಕಂಡುಬಂದಿದೆ ಎಂದು ಉಲ್ಲೇಖಿಸಿದೆ.

ಆದರೆ ಇದನ್ನು ಸಾಬೀತು ಮಾಡಿದ ನಂತರ, ವರದಿಯು ಆ ಹಣ ಎಲ್ಲಿಂದ ಬಂತು ಎಂಬುದನ್ನು ಹೇಳಿಲ್ಲ- ಸಮಿತಿಯು ಉತ್ತರಿಸಲು ನಿಗದಿಪಡಿಸಿದ ಮೂರು ಪ್ರಶ್ನೆಗಳಲ್ಲಿ ಇದೂ ಒಂದಾಗಿದೆ.

ಜಸ್ಟಿಸ್‌ ಸಂಜೀವ್‌ ಖನ್ನಾ ಮತ್ತು ಡಿಕೆ ಉಪಾಧ್ಯಾಯ

ಸಮಿತಿಯು, ನಗದು ಅವರ “ರಹಸ್ಯ ಅಥವಾ ಸಕ್ರಿಯ ನಿಯಂತ್ರಣ” ದಲ್ಲಿರುವ ಆವರಣದಲ್ಲಿ ಕಂಡುಬಂದಿರುವುದರಿಂದ, ಅದರ ಮೂಲದ ಬಗ್ಗೆ ವರ್ಮಾ ಅವರೇ ಹೊಣೆ ಹೊರಬೇಕು ಎಂದು ಹೇಳಿದೆ. ವರ್ಮಾ ಅವರು “ಸತ್ಯ ನಿರಾಕರಣೆ ಮತ್ತು ಪಿತೂರಿಯ ಸ್ಪಷ್ಟ ವಾದ” ಮಂಡಿಸಿದಾಗ, ಸಮಿತಿಯು ಅವರ ವಿವರಣೆಯನ್ನು ಬಯಸಲಿಲ್ಲ ಎಂದು ಕಂಡುಕೊಂಡಿತು.

ಮೂಲಭೂತವಾಗಿ, ವಿಚಾರಣೆಯು ವರ್ಮಾ ಅವರು ಆ ಹಣವು ತನ್ನದಲ್ಲ ಎಂದು ಸಾಬೀತುಪಡಿಸಲು ಅಥವಾ ಪಿತೂರಿಯನ್ನು ವಿವರಿಸಲು ಸಾಧ್ಯವಾಗದ ಕಾರಣ, ಅದಕ್ಕೆ ಅವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ತೀರ್ಮಾನಿಸಿತು.

“ಸ್ಟೋರ್ ರೂಮಿನಲ್ಲಿ ಸುಟ್ಟ ನಗದು ಇರುವುದು ದೃಢಪಟ್ಟಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ಸ್ಟೋರ್‌ ರೂಮಿನಲ್ಲಿ ನಗದು ಇಟ್ಟಿದ್ದಕ್ಕೆ ಯಶಸ್ವಿಯಾಗಿ ಸಮರ್ಥನೆಯನ್ನು ಎತ್ತುವ ಮೂಲಕ ಅಥವಾ ಹಣ/ನಗದು ತನಗೆ ಸೇರಿದ್ದಲ್ಲ, ಬದಲಾಗಿ ಬೇರೆಯವರಿಗೆ ಸೇರಿದ್ದೆಂದು ಪುರಾವೆ/ಸಾಮಗ್ರಿಗಳನ್ನು ಒದಗಿಸಿ ನಗದು ಹಣದ ನಿಜವಾದ ಮಾಲೀಕರ ಗುರುತನ್ನು ಬಹಿರಂಗಪಡಿಸುವ ಮೂಲಕ ಪಿತೂರಿ ಸಿದ್ಧಾಂತದ ಸಮರ್ಥನೆಯನ್ನು ಸಾಬೀತುಪಡಿಸುವ ಮೂಲಕ ಅದಕ್ಕೆ ಕಾರಣರಾಗಿದ್ದಾರೆ. ಹಾಗೆ ಮಾಡದಿದ್ದರೆ, ನ್ಯಾಯಮೂರ್ತಿ ವರ್ಮಾ ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ…” ಎಂದು ವರದಿ ವಿವರಿಸಿದೆ.

2 ಈಗ ಹಣ ಎಲ್ಲಿದೆ? ಮತ್ತು ಅದನ್ನು ಇನ್ನೂ ಏಕೆ ಎಣಿಸಲಾಗಿಲ್ಲ?

ಪ್ರತ್ಯಕ್ಷದರ್ಶಿಗಳು “ಹಣದ ದೊಡ್ಡ ರಾಶಿ” ಎಂದು ಕರೆದರೂ, ಪೊಲೀಸರು ಘಟನಾ ಸ್ಥಳದಲ್ಲಿ ಅದನ್ನು ವಶಪಡಿಸಿಕೊಂಡ ಬಗ್ಗೆ ಯಾವುದೇ ಅಧಿಕೃತ ಜ್ಞಾಪಕ ದಾಖಲೆಯನ್ನು ಸಿದ್ಧಪಡಿಸಿಲ್ಲ ಮತ್ತು ಪಂಚನಾಮವನ್ನು ರಚಿಸಿಲ್ಲ ಎಂದು ಸಮಿತಿ ಹೇಳಿದೆ.

ಘಟನಾ ಸ್ಥಳವನ್ನು ಅಧಿಕೃತವಾಗಿ ನಿರ್ವಹಿಸಿದ ರೀತಿಯನ್ನು “ಅಜಾಗರೂಕ” ಎಂದು ಸಮಿತಿ ಕರೆದಿದೆ.

ಆದರೆ ಇದಕ್ಕೆ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿಲ್ಲ, ಏಕೆಂದರೆ ಅದರ ಉದ್ದೇಶ “ಅಗ್ನಿಶಾಮಕ ದಳದ ಸಿಬ್ಬಂದಿ ಅಥವಾ ಪೊಲೀಸ್ ಸಿಬ್ಬಂದಿಯ ಕ್ರಮ ಅಥವಾ ನಿಷ್ಕ್ರಿಯತೆಯಲ್ಲಿ ತಪ್ಪು ಹುಡುಕುವುದು ಅಲ್ಲ” ಎಂದು ಸಮಿತಿ ಹೇಳಿದೆ.

“ಸಾಕ್ಷಿಗಳ ಹೇಳಿಕೆಗಳು ಮತ್ತು ವೀಡಿಯೊ ರೆಕಾರ್ಡಿಂಗ್‌ಗಳಿಂದ ಸ್ಟೋರ್‌ ರೂಮಿನಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಕರೆನ್ಸಿ ಇತ್ತು ಎಂಬುದು ಕಂಡು ಬಂದಿರುವುದರಿಂದ ಎಷ್ಟು ಹಣ ಇತ್ತು ಎಂದು ಕರೆನ್ಸಿಯ ಪ್ರಮಾಣವನ್ನು ಪ್ರಮಾಣೀಕರಿಸುವುದು ಯಾವುದೇ ಮಹತ್ವದ್ದಾಗಿಲ್ಲ” ಎಂದು ಸಮಿತಿಯು ಹೇಳಿದೆ.

ಹಣವನ್ನು ಎಂದಿಗೂ ವಶಪಡಿಸಿಕೊಳ್ಳಲಾಗಿಲ್ಲ ಅಥವಾ ಅಧಿಕೃತವಾಗಿ ಎಣಿಸಲಾಗಿಲ್ಲವಾದ್ದರಿಂದ, ಅದು ಎಲ್ಲಿದೆ ಎಂಬುದು ಕೂಡ ಇದು ವರೆಗೆ ತಿಳಿದಿಲ್ಲ.

ಸಮಿತಿಯ ವರದಿಯು ಮಾರ್ಚ್ 15 ರ ಮುಂಜಾನೆ ವರ್ಮಾ ಅವರ “ಅತ್ಯಂತ ವಿಶ್ವಾಸಾರ್ಹ ಸಿಬ್ಬಂದಿ” – ಅವರ ಖಾಸಗಿ ಕಾರ್ಯದರ್ಶಿ ರಾಜಿಂದರ್ ಸಿಂಗ್ ಕರ್ಕಿ ಮತ್ತು ಅವರ ವೈಯಕ್ತಿಕ ಸಿಬ್ಬಂದಿ ಹನುಮಾನ್ ಪ್ರಶಾದ್ ಶರ್ಮಾ ಮತ್ತು ಮೊಹಮ್ಮದ್ ರಹಿಲ್ – ಘಟನೆ ನಡೆದ ಸ್ಥಳದಿಂದ ಹಣವನ್ನು ಹೊರತೆಗೆದಿದ್ದಾರೆ ಎಂದು ತೀರ್ಮಾನಿಸಲು “ಬಲವಾದ ತಾರ್ಕಿಕ ಪುರಾವೆಗಳನ್ನು” ಅವಲಂಬಿಸಿದೆ. ಮಾರ್ಚ್ 14 ರ ರಾತ್ರಿ ಬೆಂಕಿ ಕಾಣಿಸಿಕೊಂಡ ಸಮಯದಿಂದ ಆ ಸ್ಥಳದಲ್ಲಿ ಅವರ ಉಪಸ್ಥಿತಿ ಮತ್ತು ಅವರ ಸಾಕ್ಷ್ಯಗಳಲ್ಲಿನ ವಿರೋಧಾಭಾಸಗಳನ್ನು ಸಮಿತಿಯ ಈ ತೀರ್ಮಾನ ಆಧರಿಸಿದೆ.

ಹಾಗಿದ್ದೂ, ಇದು ಕೇವಲ ಒಂದು ತೀರ್ಮಾನವಾಗಿಯೇ ಉಳಿದಿದೆ. ಹಣದ ಚೀಲಗಳನ್ನು ಭೌತಿಕವಾಗಿ ತೆಗೆದುಹಾಕುವ ಯಾವುದೇ ನೇರ ಪುರಾವೆಗಳಿಲ್ಲ – ಸಾಕ್ಷಿಗಳಿಲ್ಲ, ವೀಡಿಯೊಗಳಿಲ್ಲ. ಪ್ರಕರಣದ ಮುಖ್ಯ ಅಂಶವಾಗಿರುವ ಸಾಕ್ಷ್ಯವನ್ನು ಅಧಿಕಾರಿಗಳು ಎಂದಿಗೂ ಪಡೆದುಕೊಳ್ಳಲಿಲ್ಲ, ಇದರಿಂದಾಗಿ ಎಷ್ಟು ಹಣ ಇತ್ತು ಮತ್ತು ಅದು ಈಗ ಎಲ್ಲಿದೆ ಎಂಬುದು ಊಹಾಪೋಹದ ಸಂಗತಿಯಾಗಿದೆ.

3 ಬೆಂಕಿ ಹೇಗೆ ಪ್ರಾರಂಭವಾಯಿತು?

ಮಾರ್ಚ್ 14 ರ ರಾತ್ರಿ ವರ್ಮಾ ಅವರ ನಿವಾಸದ ಸ್ಟೋರ್ ರೂಂಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದರ ಬಗ್ಗೆ ವರದಿ ಏನನ್ನೂ ಹೇಳುವುದಿಲ್ಲ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಟೋರ್ ರೂಮ್‌ ಒಳಗೆ ಅರ್ಧ ಸುಟ್ಟ 500 ರುಪಾಯಿ ನೋಟುಗಳನ್ನು ಕಂಡುಕೊಂಡ ನಂತರ ಸಂಭವಿಸುವ ಘಟನೆಗಳ ಸರಣಿಯೊಂದಿಗೆ ವರದಿಯು ಆರಂಭವಾಗುತ್ತದೆ.

ಆದರೆ ಬೆಂಕಿ ಹೊತ್ತಿಕೊಳ್ಳುವ ಒಂದು ಅಥವಾ ಎರಡು ಗಂಟೆಗಳ ಮೊದಲು ಏನಾಯಿತು?

ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರು ತಮ್ಮ ನಿವಾಸದಲ್ಲಿ “ಬೆಂಕಿ ಹಚ್ಚಿದ – arson” ಘಟನೆಯ ಬಗ್ಗೆ – ಅಂದರೆ ಕೋಣೆಗೆ ಬೆಂಕಿ ಹಚ್ಚುವ ಉದ್ದೇಶಪೂರ್ವಕ ಪ್ರಯತ್ನದ ಬಗ್ಗೆ – ತಿಳಿಸಿದರು ವರ್ಮಾ ಅವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ.

ಬೆಂಕಿ ಬಿದ್ದ ಸುದ್ದಿ ಅವರನ್ನು ಆಘಾತಗೊಳಿಸಿತು, “ಅದು ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿ ಎಂದು ವರ್ಮಾ ನಂಬಿದ್ದರು” ಎಂದು ಸಮಿತಿಯ ವರದಿ ಹೇಳುತ್ತದೆ.

ಮಾರ್ಚ್ 15 ರ ಮಧ್ಯಾಹ್ನ ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಉಪಾಧ್ಯಾಯ ಅವರಿಗೆ ದೂರವಾಣಿ ಮೂಲಕ ಬೆಂಕಿಯ ಬಗ್ಗೆ ಮಾಹಿತಿ ನೀಡಿದ್ದರು ಎಂದು ಸಮಿತಿ ವರದಿ ತಿಳಿಸಿದೆ.

ಕರೆನ್ಸಿ ನೋಟುಗಳ ಪತ್ತೆಯ ಬಗ್ಗೆ ಮಾಹಿತಿಯನ್ನು ಒಳಗೊಂಡ ಘಟನೆಯ ವರದಿಯನ್ನು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅರೋರಾ ಉಪಾಧ್ಯಾಯ ಅವರಿಗೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಾರ್ಚ್ 21 ರಂದು ಭಾರತದ ಮುಖ್ಯ ನ್ಯಾಯಮೂರ್ತಿಗಾಗಿ ನ್ಯಾಯಮೂರ್ತಿ ಉಪಾಧ್ಯಾಯ ಅವರು ಸಿದ್ಧಪಡಿಸಿದ ಪ್ರತ್ಯೇಕ ವರದಿಯಲ್ಲಿ , ಸ್ಟೋರ್ ರೂಂನಲ್ಲಿ “ಬೆಂಕಿ ಅವಘಡ ಸಂಭವಿಸಿದೆ” ಎಂದು ಅರೋರಾ ತಮಗೆ ತಿಳಿಸಿದ್ದರು ಎಂದು ಹೇಳಿದ್ದಾರೆ. ಮಾರ್ಚ್ 22 ರಂದು ಸುಪ್ರೀಂ ಕೋರ್ಟ್ ಇದನ್ನು ಸಾರ್ವಜನಿಕಗೊಳಿಸಿದಾಗ ಈ ಭಾಗದ ನಂತರದ ಪ್ಯಾರಾಗಳನ್ನು ತಿದ್ದಿ ಬರೆಯಲಾಗಿದೆ.

ಸಮಿತಿಯು ದೆಹಲಿ ಪೊಲೀಸ್ ಆಯುಕ್ತರನ್ನು ವಿಚಾರಣೆ ನಡೆಸಿತು, ಆದರೆ ಬೆಂಕಿಯ ಕಾರಣದ ಬಗ್ಗೆ ಉಪಾಧ್ಯಾಯ ಅವರಿಗೆ ನಿಖರವಾಗಿ ಏನು ಹೇಳಿದರು ಎಂದು ಅದು ತನ್ನ ಬ್ರೀಫಿಂಗ್‌ನಲ್ಲಿ ತಿಳಿಸಿಲ್ಲ. ಉಪಾಧ್ಯಾಯ ಅವರನ್ನು ಸಮಿತಿಯು ವಿಚಾರಣೆ ನಡೆಸಲಿಲ್ಲ.

ದೆಹಲಿ ಅಗ್ನಿಶಾಮಕ ಸೇವೆಗಳ ಠಾಣಾಧಿಕಾರಿ ಮನೋಜ್ ಮೆಹ್ಲಾವತ್ ಅವರು ಸಮಿತಿಗೆ, ಶಾರ್ಟ್ ಸರ್ಕ್ಯೂಟ್ ಥಿಯೆರಿಯ ಬಗ್ಗೆ ತಮಗೆ ಖಚಿತವಿಲ್ಲ ಎಂದು ಹೇಳಿದರು. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದಿದೆ ಎಂಬುದು ವರ್ಮಾ ಅವರ ಆರಂಭಿಕ ಊಹೆಯಾಗಿತ್ತು. “ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿದೆಯೇ ಎಂದು ನನಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಕೋಣೆಯಲ್ಲಿ ವಿದ್ಯುತ್ ಹೀಟರ್ ಇಲ್ಲ” ಎಂದು ವರದಿಯಲ್ಲಿ ಮೆಹ್ಲಾವತ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ದೆಹಲಿ ಅಗ್ನಿಶಾಮಕ ಸೇವೆಗಳ ಸಹಾಯಕ ವಿಭಾಗೀಯ ಅಧಿಕಾರಿ ಸುಮಾರ್ ಕುಮಾರ್, ಬೆಂಕಿಯನ್ನು ನಂದಿಸುವುದು ಮತ್ತು ಪ್ರಾಣ ಹಾನಿಯಾಗುವುದನ್ನು ತಡೆಯುವುದು ಅವರ ಕೆಲಸವಾಗಿರುವುದರಿಂದ ಬೆಂಕಿಯ ಕಾರಣವನ್ನು ಪರಿಶೀಲಿಸಲಿಲ್ಲ ಎಂದು ಹೇಳಿದರು. “ಘಟನೆಯನ್ನು ನೋಡಿ ನನಗೆ ಸ್ವಲ್ಪ ಗಾಬರಿ ಆಯ್ತು, ನನ್ನ ಹಿರಿಯ ಅಧಿಕಾರಿಯು ಇದರಲ್ಲಿ ಉನ್ನತ ಅಧಿಕಾರಿಗಳು ಭಾಗಿಯಾಗಿರುವುದರಿಂದ ನೀವು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ನನಗೆ ತಿಳಿಸಿದ್ದರು” ಎಂದು ಕುಮಾರ್ ಸಮಿತಿಗೆ ತಿಳಿಸಿದ್ದರು.

ನಂತರ, ವರ್ಮಾ ಅವರು ಸಮಿತಿಯ ಮುಂದೆ ತನ್ನ ಪ್ರತಿವಾದದಲ್ಲಿ, ಸ್ಟೋರ್ ರೂಂನಲ್ಲಿ ಸ್ಫೋಟ ಸಂಭವಿಸಿದೆ ಎಂದು “ಯಾರೂ ಅದನ್ನು ಪರಿಶೀಲಿಸುತ್ತಿಲ್ಲ” ಎಂದು ಹೇಳಿದರು. ವರ್ಮಾ ಅದರ ಮೇಲೆ “ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಹೇಳುವ ಮೂಲಕ ಸಮಿತಿಯು ಅದನ್ನು ತಳ್ಳಿಹಾಕಿತು.

ಮೂಲಭೂತವಾಗಿ, ವರ್ಮಾ ತನ್ನ ನಿವಾಸದಲ್ಲಿ ಬೆಂಕಿ ಹಚ್ಚಲಾಗಿದೆ ಎಂದು ಆರೋಪಿಸಿ ಪೊಲೀಸರನ್ನು ಸಂಪರ್ಕಿಸದ ಕಾರಣ, ಅದು ಆಳವಾದ ಪರಿಶೀಲನೆಗೆ ಅರ್ಹವಾಗಿರಲಿಲ್ಲ.

ಹಾಗಾದರೆ ಬೆಂಕಿಗೆ ನಿಖರವಾಗಿ ಕಾರಣವೇನು? ವರದಿಯಲ್ಲಿ ಯಾವುದೇ ಉತ್ತರಗಳಿಲ್ಲ.

4 ಸಿಸಿಟಿವಿ ದೃಶ್ಯಾವಳಿಗಳು ಏನಾದವು?

ವರ್ಮಾ ಅವರ ನಿವಾಸದಲ್ಲಿ ಅಳವಡಿಸಲಾದ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ ಕ್ಯಾಮೆರಾಗಳು ಬೆಂಕಿಯ ಕಾರಣವನ್ನು ತೋರಿಸಬಹುದಿತ್ತು, ಅದರಲ್ಲೂ ಸ್ಟೋರ್ ರೂಂನ ಬಾಗಿಲನ್ನು ತೋರಿಸುವ ಒಂದು ಕ್ಯಾಮೆರಾದ ದೃಶ್ಯಗಳು. ಆದರೆ ಕ್ಯಾಮೆರಾದ ಡೇಟಾ ಕಳೆದುಹೋಗಿದ್ದರಿಂದ ಸಮಿತಿಯು ಅದನ್ನು ಬಳಸಿಕೊಳ್ಳಲಿಲ್ಲ – ತನಿಖೆಯಲ್ಲಿ ಇದೊಂದು ಸ್ಪಷ್ಟ ದೋಷ.

ಈ ನಿರ್ಣಾಯಕ ಅಂಶವನ್ನು ವರದಿಯಲ್ಲಿ ನೇರವಾಗಿ ಹೇಳಲಾಗಿಲ್ಲ. ವರದಿಯು ವರ್ಮಾ ಅವರ ಪ್ರತಿವಾದವನ್ನು ಉಲ್ಲೇಖಿಸಿದಾಗ, ಅದು ಏಪ್ರಿಲ್ 27, 2025 ರ ಕೇಂದ್ರ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಉಲ್ಲೇಖಿಸಿ, “[ಅವರ ನಿವಾಸದಲ್ಲಿ] ಹೇಳಲಾದ ಕ್ಯಾಮೆರಾಗಳ ಹಾರ್ಡ್ ಡಿಸ್ಕ್ ಅನ್ನು ತೆರೆಯಲು ಸಾಧ್ಯವಿಲ್ಲ ಎಂದು ಕಂಡುಬಂದಿದೆ” ಮತ್ತು “ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದು ಅವರ ತಪ್ಪಲ್ಲ” ಎಂದು ಹೇಳಿದೆ.

“ಸಿಸಿಟಿವಿ ಹಾರ್ಡ್‌ವೇರ್ ಅನ್ನು ಹೇಗೆ ರಿಕವರ್‌ ಮಾಡಲಾಯಿತು ಎಂಬುದರ ಬಗ್ಗೆಯೂ ಅವರು ಪ್ರಶ್ನಿಸಿದ್ದಾರೆ” ಎಂದು ಸಮಿತಿ ಹೇಳಿದೆ. ಸಿಸಿಟಿವಿ ದೃಶ್ಯಗಳನ್ನು ಯಾರು ರಿಟ್ರೈವ್‌ ಮಾಡಿದ್ದಾರೆ ಎಂಬುದನ್ನು ವರದಿಯಲ್ಲಿ ಹೇಳಲಾಗಿಲ್ಲ.

ಹಾಗಿದ್ದೂ, ಸಮಿತಿಯ ಸೂಚನೆಯ ಮೇರೆಗೆ ದೆಹಲಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡರು.

ದೃಶ್ಯಾವಳಿಗಳು ಕಳೆದುಹೋಗಿವೆಯೇ ಮತ್ತು ಏಕೆ ಕಳೆದುಹೋಗಿವೆ ಎಂಬುದನ್ನು ಸಮಿತಿಯು ವಿವರಿಸಲಿಲ್ಲ. “ಸಮಿತಿಯು ಸದರಿ ಹಾರ್ಡ್‌ವೇರ್‌ಗಾಗಿ ಕರೆ ನೀಡಿದ್ದರಿಂದ ಸಿಸಿಟಿವಿ ಕ್ಯಾಮೆರಾವನ್ನು ಸೀಲ್ ಮಾಡಲಾಗಿತ್ತು ಎಂಬ ಕಾರಣದಿಂದಾಗಿ ಡೇಟಾ ಏಕೆ ಕಳೆದುಹೋಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ” ಎಂದು ಅದು ಹೇಳಿದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಕರಣವನ್ನು ತನಿಖೆ ಮಾಡಲು ಸಮಿತಿಯು ಸಿಸಿಟಿವಿ ದೃಶ್ಯಾವಳಿಗಳನ್ನು ಅಧ್ಯಯನ ಮಾಡಲು ಸಾಧ್ಯವಾಗಲಿಲ್ಲ. ಕ್ಯಾಮೆರಾ ಹಾರ್ಡ್‌ವೇರ್ ಅನ್ನು “ಸರಿಯಾಗಿ ಸೀಲ್‌ ಮಾಡಲಾಗಿದೆಯೇ” ಎಂದು ವರ್ಮಾ ಕೂಡ ಪ್ರಶ್ನಿಸಿದರು. ಏಕೆಂದರೆ ಆ ದೃಶ್ಯಾವಳಿ ಇಲ್ಲದೆ, ಅವರಿಗೆ ತಮ್ಮ ಪರವಾದ ವಾದವನ್ನು ಮಂಡಿಸಲು ಸಾಧ್ಯವಿಲ್ಲ. ಬೆಂಕಿ ಅವಘಡ ಮತ್ತು ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳುವ ನಡುವೆ ವರ್ಮಾ ಅವರಿಗೆ ದೃಶ್ಯಾವಳಿಗಳನ್ನು “ಸಂರಕ್ಷಿಸಲು, ವಿಶ್ಲೇಷಿಸಲು ಮತ್ತು ಪರಿಶೀಲಿಸಲು” 10 ದಿನಗಳ ಸಮಯವಿತ್ತು, ಅವರು ಹಾಗೆ ಮಾಡಲಿಲ್ಲ ಎಂದು ನಂಬಿದ್ದರಿಂದ ಸಮಿತಿಯು ಈ ಅಭಿಪ್ರಾಯವನ್ನು ತಿರಸ್ಕರಿಸಿತು.

5 ಸಮಿತಿಗೆ ವರ್ಮಾ ಅವರ ಫೋನ್‌ನಲ್ಲಿ ಕಂಡದ್ದೇನು?

ಸಮಿತಿಯ ವರದಿಯು ವರ್ಮಾ, ಅವರ ಸಿಬ್ಬಂದಿ ಮತ್ತು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೇರಿದ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ದೃಢಪಡಿಸಿದೆ. ವರದಿಯು ಫೋನ್‌ಗಳ ಕಾಲ್‌ ಡೇಟಾವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದೆ. ಉದಾಹರಣೆಗೆ, ಬೆಂಕಿಯ ರಾತ್ರಿ 1.23 ಕ್ಕೆ ವರ್ಮಾ ಮತ್ತು ಕರ್ಕಿ ನಡುವೆ 230 ಸೆಕೆಂಡುಗಳ ಪೋನ್‌ ಮಾತುಕತೆ ನಡೆದಿತ್ತು. ವರ್ಮಾ ತಮ್ಮ ಸಿಬ್ಬಂದಿಯೊಂದಿಗೆ ನಿಕಟವಾದ ಮಾತುಕತೆ ನಡೆಸುತ್ತಿದ್ದರು ಎಂದು ಸಾಬೀತು ಮಾಡಲು ಇದನ್ನು ಬಳಸಲಾಗುತ್ತದೆ.

ಆದರೆ ಯಾವುದೇ ಫೋನ್‌ ಮಾತುಕತೆಗೆ ಸಂಬಂಧಿಸಿದ ವಿಷಯದ ಬಗ್ಗೆ ವರದಿ ಮೌನವಾಗಿದೆ. ವರ್ಮಾ ಅವರ ವೈಯಕ್ತಿಕ ಫೋನ್‌ನಿಂದ ವಶಪಡಿಸಿಕೊಂಡ ಯಾವುದೇ ಅಪರಾಧ ಸಂದೇಶ, ಫೋಟೋ ಅಥವಾ ಡೇಟಾದ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಅದು ಅವರನ್ನು ನಗದು ಅಥವಾ ಮುಚ್ಚಿಹಾಕುವಿಕೆಗೆ ನೇರವಾಗಿ ಸಂಬಂಧ ಕಲ್ಪಿಸುತ್ತದೆ.

ಲೇಖನ: ವಿನೀತ್ ಭಲ್ಲಾ & ಆಯುಷ್ ತಿವಾರಿ

(ಸ್ಕ್ರಾಲ್‌.ಇನ್‌ ಪ್ರಕಟಿಸಿದ Five crucial questions the report indicting Justice Varma does not answer ನ ಕನ್ನಡಾನುವಾದ)