Trending – Peepal Media

ಸಿಎಎ: ಕೇಂದ್ರ ಹೇಳಿದ ಎಂಟು ಅಪ್ಪಟ ಸುಳ್ಳುಗಳು!
ನಿನ್ನೆ, ಮಾರ್ಚ್‌ 12, 2024 ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಬಗ್ಗೆ ಎರಡು ಪುಟಗಳ ಒಂದು ಸಕಾರಾತ್ಮಕ ನಿರೂಪಣೆಯೊಂದನ್ನು ಪ್ರಕಟ ಮಾಡಿತ್ತು. ಇದರಲ್ಲಿ ಸಿಎಎ ಬಗ್ಗೆ ಅನೇಕ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಲಾಗಿದ್ದು, ಅತ್ಯಂತ ಕಳಪೆಯಾಗಿ ಇದ್ದನ್ನು ಡ್ರಾಫ್ಟ್‌ ಮಾಡಲಾಗಿದೆ.

ಇದನ್ನು ತನ್ನ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೋ (Press Information Bureau – PIB) ವೆಬ್‌ಸೈಟಿನಲ್ಲಿ ಪ್ರಕಟ ಮಾಡಿತ್ತು, ಅದರ X ನಲ್ಲಿಯೂ ಪ್ರಕಟ ಮಾಡಲಾಗಿತ್ತು. ಆದರೆ ಈಗ ಇದರ ಅಧಿಕೃತ ಪ್ರತಿಗಳನ್ನು ಅಲ್ಲಿಂದ ಡಿಲಿಟ್‌ ಮಾಡಲಾಗಿದ್ದು, ಎಲ್ಲಿಯೂ ಲಭ್ಯವಿಲ್ಲ!

ಇದನ್ನು ಮಂಗಳವಾರ ಸಂಜೆ 6:43 ಕ್ಕೆ ಪಿಐಬಿ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿ, ಆ ನಂತರ ಡಿಲಿಟ್‌ ಮಾಡಲಾಗಿದೆ. ತನ್ನ X ಖಾತೆಯಲ್ಲಿ CAA Myth Busters ಎಂದು ಪೋಸ್ಟ್‌ ಮಾಡಿತ್ತು, ಅಲ್ಲಿಂದಲೂ ಅದು ಕಾಣೆಯಾಗಿದೆ. Positive Narrative on Citizenship Amendment Act-2019 ಎಂಬ ಈ ಪ್ರಕಟಣೆಯನ್ನು ಯಾಕೆ ಎಲ್ಲಾ ಕಡೆಗಳಿಂದಲೂ ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಈ ಎರಡು ಪುಟಗಳ ಪ್ರಕಟಣೆಯಲ್ಲಿ ಒಟ್ಟು ಎಂಟು ಪ್ರಶ್ನೆಗಳನ್ನು ಹಾಕಿ, ಅವುಗಳಿಗೆ ಉತ್ತರವನ್ನು ನೀಡಲಾಗಿದೆ. ಇದರ ತುಂಬಾ ಮೋದಿಯವರು ತಮ್ಮ ʼಮೇರೆ ಪ್ಯಾರೆ ದೇಶವಾಸಿಯೋ ..ʼಗಳ ತಲೆಗೆ ಸುಳ್ಳುಗಳನ್ನು ತುಂಬಲು ಯತ್ನಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಸಿ ಹಸಿ ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಹೇಳಿದೆ. ಒಟ್ಟಾರೆ ಸಿಎಎ ಬಗ್ಗೆ ಪಾಸಿಟಿವ್‌ ಎಂದು ಕಳಪೆ ನಿರೂಪಣೆಗಳನ್ನು ನೀಡಲಾಗಿದೆ.

ಇಲ್ಲಿ, ಗೃಹ ಸಚಿವಾಲಯದ ಈ ಸುಳ್ಳು ಪ್ರಶ್ನೋತ್ತರಗಳನ್ನು ಭಾಷಾಂತರ ಮಾಡಿ, ವಿಶ್ಲೇಷಣೆ ನಡೆಸಲಾಗಿದ್ದು, ಒಂದೊಂದು ಪ್ರಶ್ನೆಗಳನ್ನೂ ʼಪ್ರಶ್ನಿಸಲಾಗಿದೆʼ. ಈ ಪ್ರಕಟಣೆಯ ಪಿಡಿಎಫ್‌ ಸಂಗ್ರಹಿಸಲಾಗಿದ್ದು ಇಲ್ಲಿ ಓದಿ: Positive Narrative on Citizenship Amendment Act-2019

ಸಿಎಎ-2019 ರ ಬಗ್ಗೆ ಧನಾತ್ಮಕ ನಿರೂಪಣೆ

ಪ್ರಕಟಣೆ: 12  ಮಾರ್ಚ್‌ 2024 6:43PM, ಪಿಐಬಿ ದೆಹಲಿ

ಸ್ವತಂತ್ರ ನಂತರ ಇತರ ಧರ್ಮದ ಭಾರತೀಯ ನಾಗರಿಕರಂತೆ ತಮ್ಮ ಆಚರಣೆಗಳನ್ನು ನಡೆಸುತ್ತಾ, ಆನಂದದಿಂದ ಬದುಕುತ್ತಿರುವ ಭಾರತೀಯ ಮುಸ್ಲೀಮರು ತಮ್ಮ ಹಕ್ಕುಗಳನ್ನು ಸಂಭ್ರಮಿಸಲು ಅವರ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಮೊಟಕುಗೊಳಿಸದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿ ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ ಫಲಾನುಭವಿಗಳಿಗಾಗಿ, ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ CAA (ಪೌರತ್ವ ತಿದ್ದುಪಡಿ ಕಾಯ್ದೆ) 2019 ರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತಾ ಅವಧಿಯನ್ನು 11 ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ.

ಸತ್ಯ ಏನು? ಇಲ್ಲಿ ಉಲ್ಲೇಖ ಮಾಡಲಾಗಿರುವ  “compensation for appeasing their persecution – ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ ” ಎಂದರೆ ಎನು ಎಂಬುದು ಸ್ಪಷ್ಟವಾಗಿಲ್ಲ. ಈ ಹೇಳಿಕೆಯೇ ಆಪ್ರಾಮಾಣಿಕತೆಯಿಂದ ಕೂಡಿದೆ. ಈ ಮೂರು ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರಿಗೆ ಪರಿಹಾರ ನೀಡುತ್ತೇವೆ, “generous treatment – ಉದಾರತೆಯಿಂದ ನಡೆಸಿಕೊಳ್ಳುತ್ತೇವೆ” ಎಂದು ಹೇಳುವ ಕೇಂದ್ರದ ಮುಂದೆ ಕೆಲವು ಪ್ರಶ್ನೆಗಳಿವೆ:

ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ- ಈ ಮೂರು ದೇಶಗಳಿಂದ ಬಂದವರಿಗೆ ಮಾತ್ರ ಯಾಕೆ ಈ ಸೌಲಭ್ಯ?

ಧಾರ್ಮಿಕ ಕಿರುಕುಳ ಮಾತ್ರ ಯಾಕೆ? ಲಿಂಗಾಧಾರಿತ ಕಿರುಕುಳ, ಜನಾಂಗೀಯ ಕಿರುಕುಳ ಅಥವಾ ರಾಜಕೀಯ ಕಿರುಕುಳ, ವರ್ಣಬೇಧದ ಕಿರುಕುಳ, ಇತ್ಯಾದಿ ಕಿರುಕುಳದಿಂದ ಆ ದೇಶಗಳನ್ನು ಬಿಟ್ಟು ಬಂದವರನ್ನು ಯಾಕೆ ಪರಿಗಣಿಸಿಲ್ಲ?

ಈ ದೇಶಗಳಲ್ಲಿ ಮುಸ್ಲೀಂ ಸಮುದಾಯಕ್ಕೆ ಸೇರಿದ ಕೆಲ ಪಂಗಡಗಳೂ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿವೆ. ಅವುಗಳನ್ನು ಯಾಕೆ ಇಲ್ಲಿ ಸೇರಿಸಿಲ್ಲ?

ಡಿಸೆಂಬರ್ 31, 2014ರಂದು ಮತ್ತು ಅದಕ್ಕೆ ಮೊದಲು ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಸ್ಲೀಮರು ಬಿಡಿ, ಆಮೇಲೆ ಸಕಾರಣಗಳನ್ನು ಇಟ್ಟುಕೊಂಡು ಭಾರತಕ್ಕೆ ಬಂದಿರುವ ʼಮುಸ್ಲೀಮೇತರರʼ ಕಥೆ ಏನು? ಅವರನ್ನು ಏನು ಮಾಡುತ್ತೀರಿ? ಮತ್ತು ಅದೇ ದಿನಾಂಕವನ್ನು ಯಾಕೆ ಪರಿಗಣಿಸಲಾಗಿದೆ?

ಕೇಂದ್ರದ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ!

ಪ್ರಶ್ನೋತ್ತರಗಳ ವಿಶ್ಲೇಷಣೆ:

1. ಪ್ರಶ್ನೆ: ಭಾರತೀಯ ಮುಸ್ಲಿಮರ ಮೇಲೆ ಕಾಯಿದೆ ಬೀರುವ ಪರಿಣಾಮಗಳೇನು?

ಗೃಹ ಸಚಿವಾಲಯದ ಉತ್ತರ: ಭಾರತೀಯ ಮುಸ್ಲಿಮರು ಈ ಬಗ್ಗೆ ಚಿಂತೆ ಮಾಡಬೇಕಿಲ್ಲ, ಏಕೆಂದರೆ ಸಿಎಎ ಅವರ ಪೌರತ್ವದ ಮೇಲೆ ಪರಿಣಾಮ ಬೀರಬಲ್ಲ ಯಾವುದೇ ನಿಬಂಧನೆಯನ್ನು ಹೊಂದಿಲ್ಲ ಮತ್ತು ಇದು ಪ್ರಸ್ತುತ ದೇಶದಲ್ಲಿರುವ 18 ಕೋಟಿ ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧ ಪಟ್ಟಿಲ್ಲ. ಅವರು ತಮ್ಮ ಹಿಂದೂ ಸಹ-ನಾಗರಿಕರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಈ ಕಾಯಿದೆ ಯಾವುದೇ ಭಾರತೀಯ ನಾಗರಿಕನೂ ತನ್ನ ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಯನ್ನು ನೀಡಬೇಕೆಂದು ಹೇಳುವುದಿಲ್ಲ.

ನಿಜ ಏನು? ನಿರಾಶ್ರಿತರು ಮತ್ತು ನುಸುಳುಕೋರರ ಬಗೆಗಿನ ಮೋದಿ ಸರ್ಕಾರದ ನೀತಿಗಳ ವಿಚಾರದಲ್ಲಿ ಒಂದು ‘ಕ್ರೊನೋಲಜಿʼ  ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಅನೇಕ ಬಾರಿ ಹೇಳಿದ್ದರು. 2019ರ ಎಪ್ರಿಲ್‌ನಲ್ಲಿ, “ಮೊದಲು ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ತರುತ್ತೇವೆ, ಪ್ರತಿಯೊಬ್ಬ ನಿರಾಶ್ರಿತರಿಗೂ ಪೌರತ್ವ ಸಿಗುತ್ತದೆ ಮತ್ತು ಅದರ ನಂತರ ನಾವು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ತರುತ್ತೇವೆ. ಆದ್ದರಿಂದ ನಿರಾಶ್ರಿತರು ಚಿಂತಿಸಲು ಯಾವುದೇ ಕಾರಣವಿಲ್ಲ. ಆದರೆ ನುಸುಳುಕೋರರು ಖಂಡಿತವಾಗಿಯೂ ಚಿಂತೆಯಾಬೇಕು, ಅವರಲ್ಲಿ ಒಂದು ಕಾರಣವಿದೆ. ಆದ್ದರಿಂದ ಕ್ರೊನೋಲಜಿಯನ್ನು ಅರ್ಥಮಾಡಿಕೊಳ್ಳಿ,” ಎಂದು ಹೇಳಿದ್ದರು. “ಕ್ರೊನೋಲಜಿ ಸಮಜಿಯೇ” ಎಂಬ ಶಾ ಭಾಷಣದ ಈ ವಿಡಿಯೋ ತುಂಬಾ ವೈರಲ್‌ ಆಗಿತ್ತು. “ಎನ್‌ಆರ್‌ಸಿ ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಇರುತ್ತದೆ, ಏಕೆಂದರೆ “ಎಲ್ಲೆಡೆ ನುಸುಳುಕೋರರು ತುಂಬಿದ್ದಾರೆ,” ಎಂದು ಅವರು ಹೇಳಿದ್ದರು. ಡಿಸೆಂಬರ್ 10, 2019 ರಂದು ಸಂಸತ್ತಿನಲ್ಲಿ NRC ಖಂಡಿತವಾಗಿಯೂ ಬರಲಿದೆ ಮತ್ತು ಅದನ್ನು ಜಾರಿಗೆ ತಂದಾಗ “ಒಬ್ಬ ನುಸುಳುಕೋರನಿಗೂ ಉಳಿಗಾಲವಿಲ್ಲ,” ಎಂದು ಅಮಿತ್‌ ಶಾ ಹೇಳಿದ್ದರು.

ಅಂದರೆ, ಶಾ ಹೇಳಿದ್ದು, ಎನ್‌ಆರ್‌ಸಿ ಒಂದು ಪ್ರಕ್ರಿಯೆ,  ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪೌರತ್ವವನ್ನು ಅವರು ಒದಗಿಸುವ ದಾಖಲೆಗಳ ಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ. ಎನ್‌ಆರ್‌ಸಿಯನ್ನು ಮೊದಲು ಜಾರಿಗೆ ತಂದ ಅಸ್ಸಾಂನಲ್ಲಿ ಅದು ಉಂಟುಮಾಡಿದ ಅಪಾಯಗಳು ನಮ್ಮ ಕಣ್ಣ ಮುಂದೆ ಇವೆ. ಅಸ್ಸಾಮಿನಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಸಾಬೀತು ಮಾಡಲಾಗದ ಸುಮಾರು 19 ಲಕ್ಷ ಜನರನ್ನು ಭಾರತೀಯ ನಾಗರಿಕರೆಂದು ಪರಿಗಣಿಸದೆ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಹಿಂದೂಗಳು.

ಸಿಎಎ ಹಿಂದಿನ ಉದ್ದೇಶವೆಂದರೆ, ಎನ್‌ಆರ್‌ಸಿಯಲ್ಲಿ ದಾಖಲೆ ನೀಡಲಾಗದೆ ಪೌರತ್ವದಿಂದ ಹೊರಗಿಡಲ್ಪಟ್ಟ ಹಿಂದೂಗಳಿಗೆ ಸಿಎಎ ಪೌರತ್ವ ನೀಡುತ್ತದೆ. ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ವಿಫಲರಾದ ಮುಸ್ಲಿಮರಿಗೆ ಯಾವುದೇ ಮಾರ್ಗವಿಲ್ಲ. ಅವರನ್ನು ‘ನುಸುಳುಕೋರರು’ ಎಂದು ಬ್ರಾಂಡ್ ಮಾಡಿ ಹಿಂಸಿಸುವ ಸಾಧ್ಯತೆಗಳಿವೆ.

ಆದ್ದರಿಂದ ಸದ್ಯ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಈ ‌ʼಪಾಸಿಟಿವ್ ನರೇಟಿವ್‌ʼ ಪ್ರಕಟಣೆಯಲ್ಲಿ ಹೇಳಿರುವುದಕ್ಕೆ ಅರ್ಥವಿಲ್ಲ, ಅದೊಂದು ಸುಳ್ಳು. ಸದ್ಯ ಎನ್‌ಆರ್‌ಸಿಯನ್ನು ಜಾರಿಗೆ ತರುವ ತನ್ನ ಯೋಜನೆಗಳನ್ನು ಮೋದಿ ಸರ್ಕಾರ ಕೈಬಿಟ್ಟಿದ್ದರೂ, ಭಾರತೀಯ ಮುಸ್ಲಿಮರು ತಮ್ಮ ಪೌರತ್ವದ ಮೇಲೆ ಸಿಎಎ ಪರಿಣಾಮ ಬೀರುತ್ತದೆ ಎಂದು ಚಿಂತೆ ಮಾಡಬೇಡಿ ಎಂದಿರುವುದರಲ್ಲಿ ಸತ್ಯವೇ ಇಲ್ಲ.

ಈಗ, ಭಾರತದ ಮುಸ್ಲೀಂ ಮತ್ತು ಹಿಂದೂ ಮಹಿಳೆಯರಿಬ್ಬರು ದಾಖಲೆ ಇಲ್ಲದ ಎಂದೋ ಹಿಂದೆ ಬಾಂಗ್ಲಾದಿಂದ ಬಂದಿರುವ ಅವರದೇ ಧರ್ಮದ ಪುರುಷರನ್ನು ಮದುವೆ ಆಗಿತ್ತಾರೆ ಎಂದುಕೊಳ್ಳಿ. ತಿದ್ದುಪಡಿ ಮಾಡದ ಪೌರತ್ವ ಕಾಯ್ದೆಯಡಿಯಲ್ಲಿ ತಾಯಂದಿರು ಭಾರತೀಯರಾದರೂ ಅವರ ಮಕ್ಕಳನ್ನು ‘ಅಕ್ರಮ ವಲಸಿಗರು’ ಎಂದು ಪರಿಗಣಿಸಲಾಗುತ್ತದೆ ಮತ್ತು ಮಕ್ಕಳನ್ನು ಅವರ ತಂದೆಯೊಂದಿಗೆ ಗಡೀಪಾರು ಮಾಡಬೇಕಾಗುತ್ತದೆ. ಒಂದು ವೇಳೆ CAA ಈ ಹಿಂದೂ ಕುಟುಂಬಕ್ಕೆ ಭಾರತದಲ್ಲಿ ಬದುಕಲು ಅವಕಾಶ ನೀಡಿದರೂ, ಮುಸ್ಲೀಂ ಮಹಿಳೆ ಮಾತ್ರ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಾಕ್ಕೆ ಕಳಿಸಬೇಕಾಗುತ್ತದೆ. ಆಕೆಗೆ ಇರುವ ಎರಡು ಅವಕಾಶಗಳೆಂದರೆ: ಒಂದೋ ತನ್ನ ಕುಟುಂಬದ ಜೊತೆಗೆ ಭಾರತವನ್ನು ಬಿಡಬೇಕು, ಇಲ್ಲವೇ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಕ್ಕೆ ಕಳುಹಿಸಿ ಒಂಟಿಯಾಗಿ ಭಾರತದಲ್ಲೇ ಬದುಕಬೇಕು.

2. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಈ ಅಕ್ರಮ ಮುಸ್ಲಿಂ ವಲಸಿಗರನ್ನು ವಾಪಸು ಕಳುಹಿಸಲು ಯಾವುದೇ ನಿಬಂಧನೆ ಅಥವಾ ಒಪ್ಪಂದವಿದೆಯೇ?

ಗೃಹ ಸಚಿವಾಲಯದ ಉತ್ತರ: ಮುಸ್ಲೀಂ ವಲಸಿಗರನ್ನು ಈ ದೇಶಗಳಿಗೆ ಮರಳಿ ಕಳುಹಿಸಲು ಭಾರತ ಈ ದೇಶಗಳೊಂದಿಗೆ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ. ಈ ಪೌರತ್ವ ಕಾಯ್ದೆಗೂ ಅಕ್ರಮ ವಲಸಿಗರ ಗಡೀಪಾರಿಗೂ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಸಿಎಎ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಹಾಗೂ ಒಂದು ವರ್ಗದ ಜನರ ವಾದಕ್ಕೆ ಅರ್ಥವಿಲ್ಲ.

ನಿಜ ಏನು? ಇದೊಂದು ಭಯಂಕರ ಮೋಸ ಮತ್ತು ಹಸಿಹಸಿ ಸುಳ್ಳು. ಭಾರತದಲ್ಲಿ ವಿದೇಶಿಯರ ಕಾಯಿದೆ (ವಿಭಾಗ 3) – Foreigners Act (Section 3)  ಮತ್ತು ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ (ವಿಭಾಗ 5) – Passport (Entry into India) Act (Section 5) ಎಂಬ ಎರಡು ಕಾಯಿದೆಗಳಿವೆ. ಇವು ಭಾರತದಲ್ಲಿ ಅಕ್ರಮವಾಗಿ ವಾಸಿಸುವವರನ್ನು ಗಡಿಪಾಡು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡಿವೆ. ಈಗಾಗಲೇ ದೇಶದಲ್ಲಿ ಅಕ್ರಮವಾಗಿ ತಂಗಿದ್ದಾರೆ ಎಂದು ಕಂಡುಬಂದಿರುವ ವ್ಯಕ್ತಿಗಳನ್ನು ಗಡೀಪಾರು ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

ಆ ವ್ಯಕ್ತಿಯನ್ನು ಆತನ ದೇಶಕ್ಕೆ ಗಡಿಪಾರು ಮಾಡಲು ಯಾವುದೇ ಒಪ್ಪಂದಗಳು ಇಲ್ಲದೇ ಇದ್ದಾಗ, ಆತನಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಅಥವಾ ಡಿಟೆನ್ಷನ್‌ ಕ್ಯಾಂಪ್‌ಗೆ ಹಾಕಲಾಗುತ್ತದೆ. ಈ ಎರಡು ಕಾಯಿದೆಗಳನ್ನು ಬಳಸುವುದಿಲ್ಲ ಎಂಬುದು ಯಾವ ಗ್ಯಾರಂಟಿ? ಒಂದು ವೇಳೆ ʼಅಕ್ರಮ ವಲಸಿಗ ಮುಸ್ಲೀಮರನ್ನುʼ ಜೈಲು ಅಥವಾ ಡಿಟೆನ್ಸಷನ್‌ ಕ್ಯಾಂಪಿಗೆ ಹಾಕದೇ ಇದ್ದರೂ, ಅವರ ಮತದಾನದ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ.

3. ಅಕ್ರಮ ವಲಸಿಗ ಎಂದರೆ ಯಾರು?

ಗೃಹ ಸಚಿವಾಲಯದ ಉತ್ತರ: ಪೌರತ್ವ ಕಾಯ್ದೆ, 1955 ರಂತೆ, ಈ ಸಿಎಎ ಕೂಡ ಕಾನೂನುಬಾಹಿರ ವಲಸಿಗರನ್ನು ಮಾನ್ಯತೆ ಇರುವ ಯಾವುದೇ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಎಂದು ಪರಿಗಣಿಸುತ್ತದೆ.

ನಿಜ ಏನು? 2003 ರಲ್ಲಿ ವಾಜಪೇಯಿ ಸರ್ಕಾರವು ‘ಅಕ್ರಮ ವಲಸಿಗರು’ ನ್ಯಾಚುರಲೈಸೇಷನ್ ಅಥವಾ ಮದುವೆಯ ಮೂಲಕ ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸಲು ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು . 2016 ರಲ್ಲಿ ಮೋದಿ ಸರ್ಕಾರವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಮೇತರ ‘ಅಕ್ರಮ ವಲಸಿಗರನ್ನು’ ಈ ಕಾನೂನಿನಿಂದ ಹೊರಗಿಡಲು ಕಾಯಿದೆಯಲ್ಲಿ ತಿದ್ದುಪಡಿಯನ್ನು ಮಾಡಿತು. ಇದು ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರುವ ʼಅಕ್ರಮ ವಲಸಿಗ ಹಿಂದೂಗಳಿಗೆʼ ವಿನಾಯಿತಿಯನ್ನು ನೀಡಿದೆ. CAA-2019 ಈಗ ಇದನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ, ಅವರ ಪೌರತ್ವದ ಟ್ರ್ಯಾಕಿಂಗ್ ಮಾಡುವ ಪ್ರಕ್ರಿಯೆಗೆ ವೇಗವನ್ನು ನೀಡಿದೆ.

ಸರಳವಾಗಿ ಹೇಳುವುದಾದರೆ, ಡಿಸೆಂಬರ್ 31, 2014 ರವರೆಗೆ ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತಕ್ಕೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದ ಮುಸ್ಲೀಮರನ್ನು ಮಾತ್ರ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ, ಮುಸ್ಲೀಮೇತರರನ್ನು ಅಲ್ಲ! ಧರ್ಮದ ಆಧಾರದ ಮೇಲೆ ಮಾಡುವ ಈ ತಾರತಮ್ಯ ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನದ ಆರ್ಟಿಕಲ್‌ 26ವನ್ನು ಉಲ್ಲಂಘಿಸುತ್ತದೆ.

4. ಇಸ್ಲಾಂ ಮೇಲೆ ಈ ಕಾಯಿದೆ ಬೀರುವ ಪ್ರಭಾವವೇನು?

ಗೃಹ ಸಚಿವಾಲಯದ ಉತ್ತರ: ಆ ಮೂರು ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ (ಮುಸ್ಲೀಮೇತರ) ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದಾಗಿ ಇಸ್ಲಾಂ ಧರ್ಮಕ್ಕೆ ಪ್ರಪಂಚದಾದ್ಯಂತ ಕೆಟ್ಟ ಕಳಂಕ ಬಂದಿದೆ. ಎಷ್ಟೇ ಆದರೂ ಇಸ್ಲಾಂ ಒಂದು ಶಾಂತಿಯುತ ಧರ್ಮ, ಧಾರ್ಮಿಕತೆಯ ಆಧಾರದಲ್ಲಿ ದ್ವೇಷ/ಹಿಂಸೆ/ ಕಿರುಕುಳ ನೀಡುವುದನ್ನು ಅದು ಎಂದಿಗೂ ಬೋಧಿಸುವುದಿಲ್ಲ. ಈ ಶೋಷಣೆಗೆ ಸಹಾನುಭೂತಿ ಮತ್ತು ಪರಿಹಾರವನ್ನು ನೀಡಲು ತಂದಿರುವ ಈ ಕಾಯಿದೆ ಇಸ್ಲಾಂ ಧರ್ಮವನ್ನು ಈ ಕಳಂಕದಿಂದ ರಕ್ಷಿಸುತ್ತದೆ.

ನಿಜ ಏನು? ಧಾರ್ಮಿಕತೆಯ ಕಾರಣಕ್ಕೆ ಕಿರುಕುಳಕ್ಕೆ ಒಳಗಾದವರನ್ನು ಮುಸ್ಲೀಂ ರಾಷ್ಟ್ರಗಳಿಂದ ಮಾತ್ರ ಯಾಕೆ ಎತ್ತಿಕೊಳ್ಳಲಾಗಿದೆ ಎಂಬುದು ಅರ್ಥವಾಗಿಲ್ಲ. ಇಲ್ಲಿ ಮುಸ್ಲಿಮೇತರ ನೆರೆಯ ರಾಷ್ಟ್ರಗಳಾದ ಮ್ಯಾನ್ಮಾರ್, ಚೀನಾ ಮತ್ತು ಶ್ರೀಲಂಕಾದಲ್ಲಿ ದೌರ್ಜನ್ಯಕ್ಕೆ ಒಳಗಾದ ಮುಸ್ಲೀಮೇತರರಿಗೆ ಅವಕಾಶ ಇಲ್ಲವೇ? ಮುಸ್ಲಿಂ ರಾಷ್ಟ್ರಗಳಲ್ಲಿ ನಡೆದ ಶೋಷಣೆಯಲ್ಲಿ ಮಾತ್ರ ಏನು ಸ್ಪೆಷಾಲಿಟಿ ಇದೆ ಎಂಬುದನ್ನು ಕೇಂದ್ರ ವಿವರಿಸಿಲ್ಲ. ಈಗ ಚೀನಾದಲ್ಲಿ ಓರ್ವ ಹಿಂದೂವಿನ ಮೇಲೆ ದೌರ್ಜನ್ಯವಾದರೆ ಆತ ಏನು ಮಾಡಬೇಕು? ಇದಕ್ಕಾಗಿ ಕೇಂದ್ರ ಬೇರೆಯದೇ ಕಾನೂನನ್ನು ತರುತ್ತದೆಯೇ?  ತಾನು ಕಳಂಕದಿಂದ ರಕ್ಷಿಸಲು ಹೊರಟಿರುವ ʼಇಸ್ಲಾಂʼನಿಂದ ಮುಸ್ಲೀಮರನ್ನು ಬೇರೆಯಾಗಿ ಕೇಂದ್ರ ಹೇಗೆ ನೋಡುತ್ತದೆ?

ಸಿಎಎ ಇಸ್ಲಾಂ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಟ್ಟುಕೊಳ್ಳೋಣ, ಆದರೆ ಇದು ನಮ್ಮ ʼಐಡಿಯಾ ಆಫ್‌ ಇಂಡಿಯಾʼ, ಭಾರತದ ಎಲ್ಲರನ್ನೂ ಒಳಗೊಂಡು ಬೆಳೆಯುವ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ದವಾಗಿದೆ. ಭಾರತ ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ಲೆಕ್ಕವಿಲ್ಲದಷ್ಟು ಜನಾಂಗಗಳಿಗೆ ನೆಲೆಯನ್ನು ನೀಡಿದೆ. ಆದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಮನುಷ್ಯನ ಪೌರತ್ವವನ್ನು, ಬದುಕುವ ಹಕ್ಕನ್ನು ಹತ್ತಿಕ್ಕಲು ಧರ್ಮವನ್ನು ಮಾನದಂಡವಾಗಿ ಬಳಸಿದೆ, ಇದು ಭಾರತದ ಸಂಸ್ಕೃತಿ, ಮೌಲ್ಯಗಳಿಗೆ ಬಗೆದ ದ್ರೋಹ.

5. ಭಾರತದ ಪೌರತ್ವ ಪಡೆಯಲು ಮುಸ್ಲಿಮರಿಗೆ ನಿರ್ಬಂಧವಿದೆಯೇ?

ಗೃಹ ಸಚಿವಾಲಯದ ಉತ್ತರ: ಇಲ್ಲ, ಪೌರತ್ವ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಭಾರತದ ಪೌರತ್ವವನ್ನು ಪಡೆಯಲು ಜಗತ್ತಿನ ಯಾವ ಮೂಲೆಯಿಂದಾದ ಮುಸ್ಲೀಮರು ಬಂದರೂ, ಅವರಿಗೆ ಯಾವುದೇ ನಿರ್ಬಂಧವಿಲ್ಲ, ಪೌರತ್ವವನ್ನು ನ್ಯಾಚುರಲೈಸೇಷನ್‌ ಆಧಾರದಲ್ಲಿ ನೀಡಲಾಗುತ್ತದೆ.

ನಿಜ ಏನು? 2003 ರಿಂದ ಪೌರತ್ವ ಕಾಯಿದೆಯು ಅಕ್ರಮ ವಲಸಿಗರಾಗಿರುವ ಯಾರೇ ಆದರೂ ಭಾರತದ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಆದರೆ, ಈ ಸಿಎಎ ಮಾತ್ರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ʼಮುಸ್ಲಿಮೇತರ ಅಕ್ರಮ ವಲಸಿಗರಿಗೆʼ ಮತ್ತು ಅವರಿಗೆ ಭಾರತದಲ್ಲಿ ಹುಟ್ಟಿದ ಅವರ ಮಕ್ಕಳಿಗೆ ಭಾರತದ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತದೆ. ಆದರೆ ಅಕ್ರಮ ವಲಸಿಗರು ಮುಸ್ಲೀಮರಾದರೆ, ಅವರಿಗೆ ಇದು ಸಾಧ್ಯವಿಲ್ಲ.

6. ಈ ತಿದ್ದುಪಡಿಯ ಅಗತ್ಯವೇನು?

ಗೃಹ ಸಚಿವಾಲಯದ ಉತ್ತರ: ಆ ಮೂರು ದೇಶಗಳಲ್ಲಿ ಕಿರುಕುಳಕ್ಕೊಳಗಾಗಿರುವ (ಮುಸ್ಲೀಮೇತರ) ಅಲ್ಪಸಂಖ್ಯಾತರಿಗೆ ಕರುಣೆ ತೋರಿಸಲು, ಈ ಕಾಯಿದೆಯು ಭಾರತದ ಉದಾರ ಸಂಸ್ಕೃತಿಯ ಪ್ರಕಾರ ಅವರ ಸಂತೋಷ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತೀಯ ಪೌರತ್ವವನ್ನು ಪಡೆಯಲು ಅವರಿಗೆ ಅವಕಾಶವನ್ನು ನೀಡುತ್ತದೆ. ಪೌರತ್ವ ವ್ಯವಸ್ಥೆಯನ್ನು ಕಸ್ಟಮೈಸ್ ಮಾಡಲು ಮತ್ತು ಅಕ್ರಮ ವಲಸಿಗರನ್ನು ನಿಯಂತ್ರಿಸಲು ಈ ಕಾಯಿದೆಯ ಅಗತ್ಯವಿದೆ.

ನಿಜ ಏನು? ಕಿರುಕುಳಕ್ಕೊಳಗಾದ ಜನರಿಗೆ ಈ ಮಟ್ಟಿಗೆ ಔದಾರ್ಯ ತೋರಿಸಲು ಧರ್ಮ ಆಧಾರಿತ ವಿನಾಯಿತಿಯನ್ನು ನೀಡುವ ಅಗತ್ಯವಿರಲಿಲ್ಲ. ತಮ್ಮ ಮೂಲದ ದೇಶದಲ್ಲಿ ಶೋಷಣೆಗೆ ಒಳಗಾಗುವ ಭಯವನ್ನು ಹೊಂದಿರುವ ಯಾವುದೇ ಅಕ್ರಮ ವಲಸಿಗರಿಗೆ ಭಾರತದಲ್ಲಿ ಅನಿರ್ದಿಷ್ಟಾವಧಿಯ ವರೆಗೆ ಉಳಿಯಲು ಅನುಮತಿ ನೀಡಲಾಗುವುದು ಮತ್ತು ಸರಿಯಾದ ಸಮಯ ಸಂದರ್ಭದಲ್ಲಿ ಅವರು ಭಾರತೀಯ ಪೌರತ್ವಕ್ಕೆ ಅರ್ಹರಾಗುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಬೇಕಾಗಿತ್ತು. ಈ ರೀತಿಯೇ ಬೇರೆಲ್ಲಾ ದೇಶಗಳು ತಮ್ಮಲ್ಲಿ ಇರುವ ನಿರಾಶ್ರಿತರನ್ನು ʼನ್ಯಾಚುರಲೈಸ್‌ʼ ಮಾಡುವುದು, ಇದಕ್ಕೆ ನಿರಾಶ್ರಿತನ ಧರ್ಮವನ್ನು ನೀಡುವ ಅಗತ್ಯವಿಲ್ಲ.

7. ಸರ್ಕಾರ ತೆಗೆದುಕೊಂಡಿರುವ ಹಿಂದಿನ ಕ್ರಮಗಳೇನು?

ಗೃಹ ಸಚಿವಾಲಯದ ಉತ್ತರ: 2016 ರಲ್ಲಿ ಕೇಂದ್ರ ಸರ್ಕಾರ ಆ ಮೂರು ದೇಶಗಳ ಅಲ್ಪಸಂಖ್ಯಾತರನ್ನು ಭಾರತದಲ್ಲಿ ಉಳಿಯಲು ಬೇಕಾದ ದೀರ್ಘಾವಧಿ ವೀಸಾವನ್ನು ಪಡೆಯಲು ಅರ್ಹರನ್ನಾಗಿ ಮಾಡಿದೆ.

ಸತ್ಯ ಏನು?  ಆದರೆ ಕೇಂದ್ರ ಕೆಲವು ವಿಚಾರಗಳನ್ನು ಮರೆತಂತಿದೆ. ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಆಡಳಿತದಿಂದ ಪಲಾಯನ ಮಾಡಿ ಭಾರತಕ್ಕೆ ಬರಲು ಬಯಸಿದ ಸಿಖ್‌ಗಳಿಗೆ ಭಾರತದ ವೀಸಾ ಸಿಗುವುದು ಸುಲಭವಿರಲಿಲ್ಲ. ಕಾಬೂಲ್‌ನಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಸಿಖ್ ವ್ಯಕ್ತಿಗೆ ಭಾರತ ವೀಸಾವನ್ನೇ ನೀಡಿರಲಿಲ್ಲ. 2021-22ರಲ್ಲಿ ಭಾರತದಲ್ಲಿ ಉಳಿಯಲು ಬಯಸಿದ 1500 ಪಾಕಿಸ್ತಾನಿ ಹಿಂದೂಗಳು ಭಾರತ ಸರ್ಕಾರ ಉಂಟು ಮಾಡಿದ ಒತ್ತಡ ಮತ್ತು ಅನೇಕ ಅಡೆತಡೆಗಳಿಂದಾಗಿ ಮರಳಿ ಪಾಕಿಸ್ತಾನಕ್ಕೆ ಹೋಗಬೇಕಾಯ್ತು. ಮ್ಯಾನ್ಮಾರ್‌ನಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳನ್ನು ಭಾರತ ಸರ್ಕಾರ ಗಡಿಪಾರು ಮಾಡಿದೆ.

8. ಯಾವುದೇ ವಿದೇಶಿ ದೇಶದಿಂದ ಬರುವ ಮುಸ್ಲಿಂ ವಲಸಿಗರಿಗೆ ಯಾವುದಾದರೂ ನಿರ್ಬಂಧವಿದೆಯೇ?

ಗೃಹ ಸಚಿವಾಲಯದ ಉತ್ತರ: ಸಿಎಎ ನ್ಯಾಚುರಲೈಸೇಷನ್‌ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ. ಆದ್ದರಿಂದ, ಯಾವುದೇ ದೇಶದಿಂದ ವಲಸೆ ಬಂದಿರುವ ಮುಸಲ್ಮಾನ ಸೇರಿದಂತೆ ಯಾವುದೇ ವ್ಯಕ್ತಿ ಭಾರತೀಯ ಪ್ರಜೆಯಾಗಲು ಬಯಸಿದರೆ, ಆತ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಕಾಯಿದೆಯು ಆ ಮೂರು ಇಸ್ಲಾಮಿಕ್ ದೇಶಗಳಲ್ಲಿ ತಮ್ಮ ರೀತಿಯ ಇಸ್ಲಾಂ ಪದ್ದತಿಗಳನ್ನು ಅನುಸರಿಸಿದ ಕಾರಣಕ್ಕೆ ಕಿರುಕುಳಕ್ಕೊಳಗಾದ ಯಾವುದೇ ಮುಸಲ್ಮಾನನ್ನು ಸದ್ಯ ಇರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ.

ನಿಜ ಏನು?  ಈ ಉತ್ತರವನ್ನು ನೋಡಿ, ಕೇಂದ್ರಕ್ಕೆ ಒಂದು ವಿಚಾರ ಚೆನ್ನಾಗಿ ತಿಳಿದಂತಿದೆ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮರು ತಮ್ಮದೇ ಆದ ಭಿನ್ನ ಇಸ್ಲಾಂ ಸಂಸ್ಕೃತಿಯನ್ನು (ಡಿಫರೆಂಟ್‌ ವರ್ಷನ್‌ ಆಫ್‌ ಇಸ್ಲಾಂ) ಅನುಸರಿಸಿದ ಕಾರಣಕ್ಕೆ ಅಲ್ಲಿ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು. ಆದರೆ ಅವರು ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದರೆ ಅಥವಾ ವೀಸಾದ ಅವಧಿಯನ್ನು ಮೀರಿದರೆ ಅವರು ಸಹಜವಾಗಿಯೇ  ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಡುತ್ತಾರೆ. ಹೀಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅವರು ಅನರ್ಹರಾಗುತ್ತಾರೆ. ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವರಿಗೆ ಸಾಧ್ಯವಿಲ್ಲ.

ಇವಿಷ್ಟು ಕೇಂದ್ರ ಸರ್ಕಾರದ ಅರೆಬೆಂದ ಸುಳ್ಳುಗಳಿಂದ ತುಂಬಿರುವ, ಜನರ ದಿಕ್ಕು ತಪ್ಪಿಸಲೆಂದೇ ಪ್ರಕಟ ಮಾಡಿರುವ ಸಿಎಎಯ ಬಗ್ಗೆ ಧನಾತ್ಮಕ ನಿರೂಪಣೆ. ಆದರೆ, ಇದನ್ನು ಪ್ರಕಟಿಸಿ ದಿನ ಒಂದು ಕಳೆಯುವ ಮೊದಲೇ ತೆಗೆದು ಹಾಕಿದ್ದಾರೆ. ಇದರಲ್ಲಿ ಇರುವ ಸುಳ್ಳು ಕೇಂದ್ರಕ್ಕೆ ಗೊತ್ತಿದೆ. ಜನ ಬುದ್ದಿವಂತರಾಗಿ, ಈ ಸುಳ್ಳು ಪ್ರಶ್ನೋತ್ತರಾವಳಿಯನ್ನು ವಿಶ್ಲೇಷಣೆ ಮಾಡಿದರೆ ಕೇಂದ್ರದ ಕಪಟ ತಂತ್ರ ಹೊರಗೆ ಬರುತ್ತದೆ ಎಂಬುದು ಅದಕ್ಕೆ ಗೊತ್ತಾಗಿದೆ, ಹಾಗಾಗಿ ಡಿಲಿಟ್‌ ಮಾಡಿದ್ದಾರೆ…ಅಷ್ಟೇ!

ಪ್ರಪಂಚದಲ್ಲಿ ಅತೀ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವ ದೇಶ ಭಾರತ!
ಬೆಂಗಳೂರು: ಜಾಗತಿಕ ಶಸ್ತ್ರಾಸ್ತ್ರ ವ್ಯಾಪಾರದಲ್ಲಿ 9.8% ರಷ್ಟು ಪಾಲನ್ನು ಹೊಂದಿರುವ ಭಾರತವು ವಿಶ್ವದ ಅಗ್ರ ಶಸ್ತ್ರಾಸ್ತ್ರ ಆಮದು ದೇಶವಾಗಿದೆ ಎಂದು ಜಾಗತಿಕ ಶಸ್ತ್ರಾಸ್ತ್ರ ಮಾರಾಟವನ್ನು ಪತ್ತೆಹಚ್ಚುವ ಯುರೋಪಿಯನ್ ಥಿಂಕ್ ಟ್ಯಾಂಕ್ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟಿನ (ಎಸ್‌ಐಪಿಆರ್‌ಐ) ಇತ್ತೀಚಿನ ವರದಿ ಹೇಳಿದೆ.

SIPRI ವರದಿಯಂತೆ, ರಷ್ಯಾವು ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರ ದೇಶವಾಗಿದ್ದು, ಭಾರತ 36% ಶಸ್ತ್ರಾಸ್ತ್ರಗಳನ್ನು ದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಆದರೂ ಭಾರತವು ಮಿಲಿಟರಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಾಗಿ ಪಾಶ್ಚಿಮಾತ್ಯ ದೇಶಗಳು ಮತ್ತು ಸ್ಥಳೀಯ ಪೂರೈಕೆದಾರರನ್ನು ಹೆಚ್ಚಾಗಿ ಅವಲಂಬಿಸಿರುವುದರಿಂದ ರಷ್ಯಾದ ಜೊತೆಗಿನ ಒಟ್ಟಾರೆ ಆಮದಿನ ಪಾಲು ಕಡಿಮೆಯಾಗುತ್ತಿದೆ.  ರಷ್ಯಾದ ನಂತರ ಫ್ರಾನ್ಸ್ (33%) ಭಾರತದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ದೇಶ ಮತ್ತು ಅಮೇರಿಕಾ (13%) ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮೂರನೇ ಅತಿದೊಡ್ಡ ದೇಶ.

2018-22ರ ನಡುವಿನ ಜಾಗತಿಕ ಶಸ್ತ್ರಾಸ್ತ್ರ ಮಾರಾಟದಲ್ಲಿ ಭಾರತದ ಶಸ್ತ್ರಾಸ್ತ್ರ ಆಮದು 11% ರಷ್ಟಿತ್ತು. 2019-2023 ಅವಧಿಯಲ್ಲಿ ಇದು ಸ್ವಲ್ಪ ಕುಸಿದಿದ್ದು – ಜಾಗತಿಕ ಮಾರಾಟದ 9.8% ಆಮದು ಮಾಡಿಕೊಳ್ಳುತ್ತದೆ ಎಂದು ವರದಿ ಹೇಳಿದೆ.

ಟಾಪ್ 10 ಶಸ್ತ್ರಾಸ್ತ್ರ ಆಮದುದಾರರಲ್ಲಿ, ಸೌದಿ ಅರೇಬಿಯಾ (8.4%), ಕತಾರ್ (7.6%), ಉಕ್ರೇನ್ (4.9%), ಪಾಕಿಸ್ತಾನ (4.3%), ಜಪಾನ್ (4.1%), ಈಜಿಪ್ಟ್ (4%), ಆಸ್ಟ್ರೇಲಿಯಾ (4%) 3.7%), ದಕ್ಷಿಣ ಕೊರಿಯಾ (3.1%) ಮತ್ತು ಚೀನಾ (2.9%). ಅಗ್ರ ಐದು ದೇಶಗಳು 2019-2023ರ ಅವಧಿಯಲ್ಲಿ ಎಲ್ಲಾ ಶಸ್ತ್ರಾಸ್ತ್ರಗಳ ಆಮದುಗಳಲ್ಲಿ 35% ಪಾಲನ್ನು ಹೊಂದಿವೆ.

ಇದಲ್ಲದೆ, 2019-23 ರ ನಡುವೆ ಪಾಕಿಸ್ತಾನದ ಶಸ್ತ್ರಾಸ್ತ್ರ ಆಮದಿನಲ್ಲಿ 43% ಏರಿಕೆ ಕಂಡಿದ್ದು, ಈ ದೇಶ 82% ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ ಎಂದು ವರದಿ ತಿಳಿಸಿದೆ.

ಬಲವಾದ ರಕ್ಷಣಾ-ಕೈಗಾರಿಕಾ ನೆಲೆಯನ್ನು ನಿರ್ಮಿಸಲು ನರೇಂದ್ರ ಮೋದಿ ಸರ್ಕಾರ ಒತ್ತಡ ಹಾಕುತ್ತಿದ್ದರೂ ಭಾರತವು ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಅಗ್ರ 25 ದೇಶಗಳಲ್ಲಿ ತನ್ನ ಸ್ಥಾನವನ್ನು ಪಡೆದಿಲ್ಲ. ಟಾಪ್ 10 ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳು ಅಮೇರಿಕಾ00000 (42%), ಫ್ರಾನ್ಸ್ (11%), ರಷ್ಯಾ (11%), ಚೀನಾ (5.8%), ಜರ್ಮನ್ (5.6%), ಇಟಲಿ (4.3%), ಯುಕೆ (3.7%), ಸ್ಪೇನ್ (2.7%), ಇಸ್ರೇಲ್ (2.4%) ಮತ್ತು ದಕ್ಷಿಣ ಕೊರಿಯಾ (2%).

ವಿವಿಗಳಲ್ಲಿ ಮೋದಿ ಭಾಷಣ-ವಿಕಸಿತ್ ಭಾರತ್‌ ಪೋಸ್ಟರ್!‌ ಶಿಕ್ಷಣ ಸಂಸ್ಥೆಗಳಲ್ಲಿ ಚುನಾವಣಾ ಪ್ರಚಾರ?
ಗುಜರಾತ್ ಮತ್ತು ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಸೌಲಭ್ಯಗಳಿಗೆ ನಾಳೆ, ಮಾರ್ಚ್ 13, ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನಡೆಸಲಿದ್ದು, ಅವರ ಭಾಷಣವನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ (ಎಚ್‌ಇಐ) ಸೂಚಿಸಿದೆ.

ಟೆಲಿಗ್ರಾಫ್ ವರದಿ ಮಾಡಿದಂತೆ, 2024 ರ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ (Model Code of Conduct) ಜಾರಿಗೆ ಬರುವ ಮೊದಲೇ ಮತದಾರರನ್ನು ತಲುಪಲು ಮೋದಿ ಸರ್ಕಾರ ಈ ಪ್ರಯತ್ನವನ್ನು ಮಾಡಿದೆ.

ಗುಜರಾತ್‌ನ ಧೋಲೇರಾ ಮತ್ತು ಸನಂದ್ ಹಾಗೂ ಅಸ್ಸಾಂನ ಮೋರಿಗಾಂವ್‌ನಲ್ಲಿ ಸೆಮಿಕಂಡಕ್ಟರ್ ಸೌಲಭ್ಯಗಳನ್ನು ಸ್ಥಾಪಿಸಲಾಗುತ್ತಿದೆ. ಇದನ್ನು ಒಂದು “ಚುನಾವಣಾ ಪ್ರಚಾರ ಕಾರ್ಯಕ್ರಮ” ಎಂದು ಹಲವು ಶಿಕ್ಷಣತಜ್ಞರು ಟೀಕಿಸಿದ್ದು, ಸರ್ಕಾರವು ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಮಧ್ಯೆ ಹಸ್ತಕ್ಷೇಪ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಶಿಕ್ಷಣ ಸಂಸ್ಥೆಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದೆ ಮೋದಿ ಸರ್ಕಾರ!

ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಮೋದಿಯವರ ಫೋಟೋಗಳಿರುವ ‘ವಿಕಸಿತ್ ಭಾರತ್’ ಪೋಸ್ಟರ್‌ಗಳನ್ನು ಹಾಕುವಂತೆ ಶಿಕ್ಷಣ ಸಚಿವಾಲಯ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. ಕಾರ್ಯಕ್ರಮದ ನಂತರ ತನ್ನ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ವರದಿಗಳನ್ನು ಕಳುಹಿಸಬೇಕೆಂದು ಸಚಿವಾಲಯ ಸೂಚನೆ ನೀಡಿದೆ.

ಸಚಿವಾಲಯ ಮತ್ತು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ರಾಜ್ಯ ಮಟ್ಟದ ವಿಶ್ವವಿದ್ಯಾನಿಲಯಗಳು ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಈ ಕಾರ್ಯಕ್ರಮವನ್ನು ಪ್ರಮಾಣಿತ ಕಾರ್ಯ ವಿಧಾನ (SOP) ಮತ್ತು ಕಾರ್ಯಕ್ರಮದ ಟಿಪ್ಪಣಿಯನ್ನು ನೀಡಿದೆ.

ಈ ಸಂಸ್ಥೆಗಳ ಉಪಕುಲಪತಿಗಳಿಗೆ ಪತ್ರಗಳನ್ನು ಬರೆದಿದ್ದು, ಅದರಲ್ಲಿ ಯುಜಿಸಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ತಿಳಿಸಿರುವ ಐದು ಪೋಸ್ಟರ್‌ಗಳನ್ನು ಲಗತ್ತಿಸಿದೆ. ಪೋಸ್ಟರ್‌ಗಳಲ್ಲಿ “India’s Techade: Chips for Viksit Bharat” ಎಂದು ಉಲ್ಲೇಖಿಸಲಾಗಿದ್ದು, ಸೆಮಿಕಂಡಕ್ಟರ್ ಸೌಲಭ್ಯಗಳಿಗೆ ಮೋದಿ ಅಡಿಗಲ್ಲು ಹಾಕುತ್ತಿರುವ ಫೋಟೋಗಳನ್ನು ಹೊಂದಿದೆ. ಎಲ್ಲಾ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಒತ್ತಡ ಹೇರಳಾಗಿದೆ.

ಇದೇನು ಮೊದಲ ಬಾರಿ ಬಿಜೆಪಿ ಮಾಡುತ್ತಿಲ್ಲ!

2024ರ ಆರಂಭದಲ್ಲಿ, ಯುಜಿಸಿ ದೇಶದ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಮೋದಿ ಸರ್ಕಾರದ ಬೇಟಿ ಬಚಾವೋ ಬೇಟಿ ಪಢಾವೋ (BBBP) ಲಾಂಛನವನ್ನು ತಮ್ಮ ಆವರಣದಲ್ಲಿ ಸ್ಥಾಪಿಸಲು ‘ಹೆಣ್ಣು ಮಗುವಿನ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸಲು’ ಸೂಚನೆ ನೀಡಿತ್ತು.

ಈ ಹಿನ್ನಲೆಯಲ್ಲಿ ಮೋದಿ ಅವರೊಂದಿಗೆ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಿಯಂತ್ರಣ ಸಂಸ್ಥೆ ದೇಶಾದ್ಯಂತದ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿತ್ತು . “ವಿವಿಧ ಕ್ಷೇತ್ರಗಳಲ್ಲಿ ಭಾರತದ ಸಾಧನೆಗಳ” ಬಗ್ಗೆ “ಸಾಮೂಹಿಕ ಹೆಮ್ಮೆ” ಪ್ರಜ್ಞೆಯನ್ನು ಮೂಡಿಸಲು ಕ್ಯಾಂಪಸ್ ಅಧಿಕಾರಿಗಳು ಈ ಹಂತಗಳಲ್ಲಿ ಮೋದಿಯವರ  3D  ಕಟೌಟ್‌ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾರ್ಥಿಗಳು ಮತ್ತು ಸಂದರ್ಶಕರನ್ನು ಪ್ರೋತ್ಸಾಹಿಸಬೇಕು ಎಂದು ಅದು ಸೂಚಿಸಿತ್ತು.

ಈ ಸೂಚನೆ ಹೊರಡಿಸುವ ಕೆಲವು ದಿನಗಳ ಮೊದಲು, ಯುಜಿಸಿಯು ನವೆಂಬರ್, 2023 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಾಯಕ ದತ್ತಾಜಿ ದಿದೋಲ್ಕರ್ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲು ಮಹಾರಾಷ್ಟ್ರದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದಿತ್ತು.

ಕೇರಳ ಸರ್ಕಾರದಿಂದ ದೇಶದಲ್ಲೇ ಮೊದಲ ಸರ್ಕಾರಿ ಓಟಿಟಿ ʼಸಿಸ್ಪೇಸ್‌ʼ ಆರಂಭ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾರ್ಚ್ 7, ಗುರುವಾರದಂದು ಕೈರಾಲಿ ಥಿಯೇಟರ್‌ನಲ್ಲಿ ರಾಜ್ಯ ಸರ್ಕಾರದ್ದೇ ಆದ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ಉದ್ಘಾಟಿಸಿದರು.

CSpace ಎಂದು ಕರೆಯಲ್ಪಡುವ ಪ್ಲಾಟ್‌ಫಾರ್ಮ್ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಓಟಿಟಿ ಪ್ಲಾಟ್‌ಫಾರ್ಮ್ ಆಗಿದೆ. OTT ವಲಯದಲ್ಲಿನ ಸವಾಲುಗಳು ಮತ್ತು ಹೆಚ್ಚುತ್ತಿರುವ ಅಸಮತೋಲನಗಳನ್ನು ಪರಿಹರಿಸಲು CSpace ಅನ್ನು ಪ್ರಾರಂಭಿಸಲಾಗಿದೆ.

ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (KSFDC) ಅಧ್ಯಕ್ಷರಾದ ಶಾಜಿ ಎನ್. ಕರುಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಸವಾಲುಗಳನ್ನು ಎದುರಿಸುವಲ್ಲಿ ಪ್ಲಾಟ್‌ಫಾರ್ಮ್‌ ಪಾತ್ರವನ್ನು ಒತ್ತಿ ಹೇಳಿದರು.

OTT ಪ್ಲಾಟ್‌ಫಾರ್ಮ್ ಅನ್ನು KSFDC ನಿರ್ವಹಿಸುತ್ತದೆ, ಇದು ಮಲಯಾಳಂ ಸಿನಿಮಾದ ಪ್ರಚಾರವನ್ನು ವಹಿಸಿಕೊಡುವ ಸರ್ಕಾರಿ ಸ್ವಾಮ್ಯದ ಘಟಕವಾಗಿದೆ. ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಿಎಸ್‌ಸ್ಪೇಸ್ ರಾಜ್ಯದ ಖ್ಯಾತ ಸಾಂಸ್ಕೃತಿಕ ವ್ಯಕ್ತಿಗಳು ಸೇರಿದಂತೆ 60 ಸದಸ್ಯರನ್ನು ಒಳಗೊಂಡ ಕ್ಯುರೇಟರ್ ಪ್ಯಾನೆಲ್ ಅನ್ನು ಸ್ಥಾಪಿಸಿದೆ.

ಸಾಂಸ್ಕೃತಿಕ ವ್ಯಕ್ತಿಗಳಾದ ಬೆನ್ಯಾಮಿನ್, ಒ.ವಿ. ಉಷಾ, ಸಂತೋಷ್ ಶಿವನ್, ಶ್ಯಾಮಪ್ರಸಾದ್, ಸನ್ನಿ ಜೋಸೆಫ್ ಮತ್ತು ಜಿಯೋ ಬೇಬಿ ಕ್ಯುರೇಟರ್ ಪ್ಯಾನೆಲ್‌ನ ಭಾಗವಾಗಿದ್ದಾರೆ. ಪ್ಲಾಟ್‌ಫಾರ್ಮ್‌ಗೆ ಸಲ್ಲಿಸಲಾಗುವ ಪ್ರತೀ ಕಂಟೆಂಟ್ ಈ ಪ್ಯಾನೆಲ್‌ನ ಮೂರು ಕ್ಯುರೇಟರ್‌ಗಳಿಂದ ಮೌಲ್ಯಮಾಪನಕ್ಕೆ ಒಳಗಾಗುತ್ತದೆ, ಅದರ ಕಲಾತ್ಮಕ, ಸಾಂಸ್ಕೃತಿಕ ಮತ್ತು ಇನ್ಫೋಟೈನ್‌ಮೆಂಟ್ ಅರ್ಹತೆಯನ್ನು ನಿರ್ಣಯಿಸುತ್ತದೆ.

ವೇದಿಕೆಯು ಪ್ರಸ್ತುತ 35 ಚಲನಚಿತ್ರಗಳು, ಆರು ಸಾಕ್ಷ್ಯಚಿತ್ರಗಳು ಮತ್ತು ಒಂದು ಕಿರುಚಿತ್ರ ಸೇರಿದಂತೆ 42 ಚಲನಚಿತ್ರಗಳನ್ನು ಹೊಂದಿದೆ ಮತ್ತು Android ಮತ್ತು iOS ಸಾಧನಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪ್ಲಾಟ್‌ಫಾರ್ಮ್‌ನ ಪೇ-ಪರ್-ವ್ಯೂ ಮಾದರಿಯ ಭಾಗವಾಗಿ ಬಳಕೆದಾರರು ಪ್ರತಿ ಚಲನಚಿತ್ರಕ್ಕೆ ರೂ 75 ಪಾವತಿಸಬೇಕಾಗುತ್ತದೆ.

ಬಿಜೆಪಿ ಸಂಸದ ಗೌತಮ್ ಗಂಭೀರ್ ರಾಜಕೀಯ ನಿವೃತ್ತಿ
ನವದೆಹಲಿ: ಅಲ್ಪಾವಧಿಯ ರಾಜಕೀಯ ಜೀವನದಿಂದ ಬೇಸತ್ತಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು, ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಬಿಡುಗಡೆಗೊಳಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಪೂರ್ವ ದೆಹಲಿಯ ಸಂಸದರಾಗಿರುವ ಗಂಭೀರ್, ತಮ್ಮ X ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಜನರ ಸೇವೆ ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಸಿದ್ದಾರೆ.

“ನನ್ನ ಮೇಲೆ ಬೇಕಾದಷ್ಟು ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳಿವೆ. ನಾನು ಆ ಕಡೆಗೆ ಗಮನ ನೀಡಬೇಕಿದೆ. ಹಾಗಾಗಿ ನನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ, ಜೈ ಹಿಂದ್,” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತೀಯ ಕ್ರಿಕೇಟ್ ತಂಡದ ಮಾಜಿ ಕ್ರಿಕೆಟಿಗರಾಗಿರುವ‌ ಗೌತಮ್ ಗಂಭೀರ್, 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ‌ ಪಂದ್ಯದಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಪರ 147 ಏಕದಿನ, 58 ಟೆಸ್ಟ್ ಹಾಗೂ 37 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 5,238 ರನ್, 4,154 ರನ್ ಮತ್ತು 932 ರನ್. ಅವರು 154 ಐಪಿಎಲ್ ಪಂದ್ಯಗಳಿಂದ 4,218 ರನ್ ಭಾರಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಚಾಂಪಿಯನ್‌ಶಿಪ್ ಗೆದ್ದಿತ್ತು. ಕಳೆದ ಎರಡು ಎಡಿಷನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಇವರು, ಈಗ ಮತ್ತೊಮ್ಮೆ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವುದನ್ನು ನಾವು ನೆನಪಿಸಿಕೊಳ್ಳಬಹುದು.

ಕೋಮುವಾದಿ ಶೋ: ಟೈಮ್ಸ್ ನೌ ನವಭಾರತ್, ನ್ಯೂಸ್ 18 ಇಂಡಿಯಾ, ಆಜ್ ತಕ್‌ಗೆ ದಂಡ
ಬೆಂಗಳೂರು: ದ್ವೇಷ ಹರಡುವ ಮತ್ತು   ಕೋಮು ಸೌಹಾರ್ದತೆಯನ್ನು ಕೆಡಿಸುವ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವ ಟಿವಿ ಚಾನೆಲ್‌ಗಳಿಗೆ ಈ ಕಾರ್ಯಕ್ರಮಗಳನ್ನು ತೆಗೆದುಹಾಕಲು ಮತ್ತು ದಂಡ ಪಾವತಿಸಲು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (The News Broadcasting & Digital Standards Authority – NBDSA ) ಕರೆ ನೀಡಿದೆ. ಎನ್‌ಬಿಡಿಎಸ್‌ಎ ಪ್ರಸ್ತುತ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಎಕೆ ಸಿಕ್ರಿ ಅವರ ನೇತೃತ್ವದಲ್ಲಿದೆ.

ಟೈಮ್ಸ್ ನೌ ನವಭಾರತ್ ಗೆ 1 ಲಕ್ಷ ರೂಪಾಯಿ ದಂಡ ಹಾಗೂ ನ್ಯೂಸ್ 18 ಇಂಡಿಯಾಗೆ 50,000 ರೂಪಾಯಿ ದಂಡ ವಿಧಿಸಲಾಗಿದ್ದು, ಆಜ್ ತಕ್ ಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಮೂರು ಚಾನೆಲ್‌ಗಳು ಕಾರ್ಯಕ್ರಮಗಳ ಆನ್‌ಲೈನ್ ಆವೃತ್ತಿಗಳನ್ನು ಏಳು ದಿನಗಳಲ್ಲಿ ತೆಗೆದುಹಾಕಲು ಆದೇಶ ನೀಡಲಾಗಿದೆ ಎಂದು ಲೈವ್‌ಲಾ ವರದಿ ಮಾಡಿದೆ .

ಕಾರ್ಯಕರ್ತ ಇಂದ್ರಜೀತ್ ಘೋರ್ಪಡೆ ಅವರು ಕೋಮು ಪ್ರಚೋದಕ ಟಿವಿ ಕಾರ್ಯಕ್ರಮಗಳ ವಿರುದ್ಧ ದೂರು ದಾಖಲಿಸಿದ ನಂತರ ಇದು ನಡೆದಿದೆ. ಟೈಮ್ಸ್ ನೌ ನವಭಾರತ್ ಮೆಗಾ ಟೈಮ್ಸ್ ಗುಂಪಿನ ಭಾಗವಾಗಿದ್ದು, ಆಂಕರ್ ಹಿಮಾಂಶು ದೀಕ್ಷಿತ್ ಅವರು ಮುಸ್ಲಿಮರನ್ನು ಗುರಿಯಾಗಿಸಿ ಮಾತನಾಡಿದ್ದಾರೆ ಮತ್ತು ಅಂತರ-ಧರ್ಮೀಯ ಸಂಬಂಧಗಳನ್ನು “ಲವ್ ಜಿಹಾದ್” ಎಂದು ಕರೆದಿದ್ದಾರೆ ಎಂದು ಆರೋಪಿಸಲಾಗಿದೆ.

ಮುಖೇಶ್ ಅಂಬಾನಿ ಒಡೆತನದ ನ್ಯೂಸ್ 18 ಇಂಡಿಯಾ ಪ್ರಸಾರ ಮಾಡಿರುವ ಮೂರು ಟಿವಿ ಶೋಗಳಿಗೆ ದಂಡ ವಿಧಿಸಲಾಗಿದ್ದು, ಅದರಲ್ಲಿ ಎರಡು ಶೋಗಳಲ್ಲಿ ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಡೆಸಿಕೊಟ್ಟಿದ್ದಾರೆ. ಈ ಶೋಗಳಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು “ಲವ್ ಜಿಹಾದ್” ಎಂದು ಕರೆಯುವ ಮೂಲಕ ಕೋಮುವಾದ ಹರಡುವ ಪ್ರಯತ್ನ ಮಾಡಲಾಗಿದೆ.

ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್‌ನಲ್ಲಿ ಕೋಮು ಪ್ರಚೋದಕ ಶೋ ನಡೆಸಿರುವ ಆಂಕರ್ ಸುಧೀರ್ ಚೌಧರಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಚೌದರಿ ರಾಮನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ವರದಿಯಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿದ್ದರು.

ದೂರುದಾರರು ಸುದ್ದಿಗೆ ಇರಬೇಕಾದ ನಿಷ್ಪಕ್ಷಪಾತ, ವಸ್ತುನಿಷ್ಠತೆ, ತಟಸ್ಥತೆ ಮತ್ತು ನಿಖರತೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಈ ಟಿವಿ ಚಾನೆಲ್‌ಗಳು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿದ್ದಾರೆ. NBDSA ದ್ವೇಷದ ಭಾಷಣ ತಡೆಗಟ್ಟುವಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಘಟನೆಗಳನ್ನು ವರದಿ ಮಾಡುವಲ್ಲಿ ಕೋಮುವಾದಿ ನಿರೂಪಣೆಗಳನ್ನು ನಿಯಂತ್ರಿಸುತ್ತದೆ.

“ಲವ್ ಜಿಹಾದ್” ಕುರಿತು ಟೈಮ್ಸ್ ನವಭಾರತ್ ಕಾರ್ಯಕ್ರಮದಲ್ಲಿ, “ಇಂಪ್ಯೂನ್ಡ್ ಬ್ರಾಡ್‌ಕಾಸ್ಟ್ ಅನ್ನು ಅವಲೋಕಿಸಿದಾಗ, ಪ್ರಸಾರದ ಪ್ರಾರಂಭದಲ್ಲಿಯೇ ನಿರ್ದಿಷ್ಟ ಸಮುದಾಯದ ಪುರುಷರು ಮತ್ತೊಂದು ಸಮುದಾಯದ ಮಹಿಳೆಯರಿಗೆ ಆಮಿಷ ಒಡ್ಡಿದ್ದಾರೆ ಎಂದು ಆಂಕರ್ ತೀರ್ಪು ಕೊಟ್ಟಿದ್ದಾನೆ. ತಮ್ಮ ಧಾರ್ಮಿಕ ಗುರುತನ್ನು ಮರೆಮಾಚಿ, ಅಂತಹ ಮಹಿಳೆಯರ ವಿರುದ್ಧ ಹಿಂಸಾಚಾರ ಅಥವಾ ಕೊಲೆಗಳನ್ನು ಮಾಡಿದ್ದಾರೆ ಹಾಗೂ ಲವ್ ಜಿಹಾದ್‌ಗೆ ಸಂಬಂಧಿಸಿದ ನಿರ್ದಿಷ್ಟ ಸಮುದಾಯದ ಮಹಿಳೆಯರ ಮೇಲೆ ಹಿಂಸೆ ಅಥವಾ ಕೊಲೆಗಳು ನಡೆದಿವೆ ಎಂದು ಆಂಕರ್‌ ಹೇಳಿದ್ದಾನೆ,” ಎಂದು NBDSA ತಿಳಿಸಿದೆ.

“ಇದು ಆಂಕರ್‌ನಿಂದ ಕೇಳಿದ ಪ್ರಶ್ನೆಗಳು ಮತ್ತು ಆಕ್ಷೇಪಾರ್ಹ ಶೋನಲ್ಲಿ ನೀಡಿದ ಹೇಳಿಕೆಗಳಿಂದ ಸ್ಪಷ್ಟವಾಗಿದೆ. ಅಂತಹ ಆಪಾದಿತ ಘಟನೆಗಳಿಗೆ ಕೋಮುವಾದಿ ದೃಷ್ಟಿಕೋನವನ್ನು ನೀಡಲಾಗುತ್ತಿದೆ ಮತ್ತು ಅಪರಾಧಿ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲಿನ ಆಯ್ದ ದೌರ್ಜನ್ಯದ ಪ್ರಕರಣಗಳ ಬಗ್ಗೆ ಕೆಲವು ಪ್ಯಾನೆಲಿಸ್ಟ್‌ಗಳು ತಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ, ಆಂಕರ್ ಕಿರುಚಾಡುತ್ತಾ ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಿಲ್ಲ.,” ಎಂದು NBDSA ತೀರ್ಪು ನೀಡಿದೆ.

“ಪ್ರತಿಯೊಬ್ಬ ನಾಗರಿಕನು, ಯಾವ ಧರ್ಮದವನಾಗಿದ್ದರೂ, ಅವನು/ಅವಳು ಯಾವ ಧರ್ಮಕ್ಕೆ ಸೇರಿದ್ದರೂ, ಅವನ/ಅವಳ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಹೊಂದಿರುತ್ತಾನೆ. ಹಿಂದೂ ಹುಡುಗಿ ಬೇರೆ ಧರ್ಮದ ಹುಡುಗನನ್ನು ಮದುವೆಯಾದ ಮಾತ್ರಕ್ಕೆ ಅಂತಹ ಹಿಂದೂ ಹುಡುಗಿಯನ್ನು ವಂಚಿಸಲಾಗಿದೆ ಅಥವಾ ಮದುವೆಗೆ ಒತ್ತಾಯಿಸಲಾಗಿದೆ ಎಂದು ಸಾಬೀತು ಮಾಡದ ಹೊರತು ಲವ್ ಜಿಹಾದ್‌ ಆಗುವುದಿಲ್ಲ. ಇದಲ್ಲದೆ, ಇಂತಹ ಬಲವಂತದ ವಿವಾಹಗಳ ಕೆಲವು ಘಟನೆಗಳನ್ನು ಬಳಸಿ ಇಡೀ ಸಮುದಾಯವನ್ನು ಬ್ರ್ಯಾಂಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ, “ಲವ್ ತೋ ಬಹಾನಾ ಹೇ … ಹಿಂದೂ ಬೇಟಿಯಾಂ ನಿಶಾನ ಹೈಂ ” ಜಿಹಾದಿಯೋಂ ಸೇ ಬೇಟಿ ಬಚಾವೋ” ಎಂಬಂತಹ ಟಿಕ್ಕರ್‌ಗಳೊಂದಿಗೆ ಘಟನೆಗಳನ್ನು ತಳುಕುಹಾಕುವುದು ಸೂಕ್ತವಲ್ಲ.”

“ಲವ್ ಜಿಹಾದ್” ಎಂಬ ಪದವನ್ನು “ಮುಂದೆ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ಗಂಭೀರ ಆತ್ಮಾವಲೋಕನದೊಂದಿಗೆ ಬಳಸಬೇಕು, ಧಾರ್ಮಿಕ ಸ್ಟೀರಿಯೊಟೈಪಿಂಗ್ ರಾಷ್ಟ್ರದ ಜಾತ್ಯತೀತ ಸಂರಚನೆಯನ್ನು ನಾಶಪಡಿಸುತ್ತದೆ” ಎಂದು NBDSA ಹೇಳಿದೆ.

ಫೆಬ್ರವರಿ 4, 2020 ರಂದು, ಗೃಹ ವ್ಯವಹಾರಗಳ ಸಚಿವಾಲಯವು ಸಂಸತ್ತಿಗೆ ಲಿಖಿತ ಪ್ರತಿಕ್ರಿಯೆಯಲ್ಲಿ, ಲವ್ ಜಿಹಾದ್’ ಪದವನ್ನು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ಹೇಳಿದೆ. ಲವ್ ಜಿಹಾದ್‌ನಂತಹ ಯಾವುದೇ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಉತ್ತರಿಸಿತ್ತು.

“ಸಂವಿಧಾನದ 25 ನೇ ವಿಧಿಯು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆಗೆ ಒಳಪಟ್ಟು ಧರ್ಮವನ್ನು ಪ್ರತಿಪಾದಿಸಲು, ಪಾಲಿಸಲು ಮತ್ತು ಪ್ರಚಾರ ಮಾಡಲು ಸ್ವಾತಂತ್ರ್ಯವನ್ನು ನೀಡುತ್ತದೆ. ಕೇರಳ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ದೃಷ್ಟಿಕೋನವನ್ನು ಎತ್ತಿ ಹಿಡಿದಿವೆ. ಅಂತರ್-ಧರ್ಮೀಯ ವಿವಾಹಗಳ ಕೇರಳದ ಎರಡು ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಮಾಡಿದೆ,” ಎಂದು ಕೇಂದ್ರ ಸಚಿವಾಲಯ ಹೇಳಿದೆ.

ಭಾರತೀಯ ಟಿವಿ ಸುದ್ದಿ ವಾಹಿನಿಗಳು ದ್ವೇಷವನ್ನು ಹರಡುತ್ತಿರುವುದು ಕೆಲವು ವರ್ಷಗಳಿಂದ ನಡೆಯುತ್ತಿರುವ ಕಳವಳಕಾರಿ ಸಂಗತಿಯಾಗಿದೆ. ಸುಪ್ರೀಂ ಕೋರ್ಟ್ 2022 ರಲ್ಲಿ, ಭಾರತೀಯ ಮಾಧ್ಯಮಗಳಲ್ಲಿ ದ್ವೇಷ ಹರಡುವ ಬಗ್ಗೆ ವಿಚಾರಣೆ ನಡೆಸುವಾಗ, “ದ್ವೇಷವು TRP ತರುತ್ತದೆ, ಲಾಭವನ್ನು ಹೆಚ್ಚಿಸುತ್ತದೆ,” ಎಂದು ಒಬ್ಬರು ನ್ಯಾಯಾಧೀಶರು ಹೇಳಿದ್ದರು.

“ಇದು ಇಡೀ ಸಮುದಾಯವನ್ನು ಗುರಿಯಾಗಿಸುವ ಮೂಲಕ ಈ ಘಟನೆಗಳನ್ನು ಸಾಮಾನ್ಯೀಕರಿಸಲಾಗಿದೆ. ಇದು ನೀತಿ ಸಂಹಿತೆ ಮತ್ತು ಬ್ರಾಡ್ಕಾಸ್ಟಿಂಗ್ ಮಾನದಂಡಗಳ ಅಡಿಯಲ್ಲಿ ಬರುವ ನಿಷ್ಪಕ್ಷಪಾತ, ವಸ್ತುನಿಷ್ಠತೆ ಮತ್ತು ತಟಸ್ಥತೆಯ ತತ್ವಗಳ ಉಲ್ಲಂಘನೆಯಾಗಿದೆ. ಮತ್ತು ವರದಿಯಲ್ಲಿರುವ ನಿರ್ದಿಷ್ಟ ಮಾರ್ಗಸೂಚಿಗಳು ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಸಂಬಂಧಿಸಿವೆ. ಆಕ್ಷೇಪಾರ್ಹ ಕಾರ್ಯಕ್ರಮ ಪ್ರಸಾರದಲ್ಲಿ, ಆಂಕರ್‌ ನಡೆಸಿರುವ ಚರ್ಚೆಗಳಲ್ಲಿ ಆಂಕರ್‌ಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾರ್ಗಸೂಚಿಗಳ ಷರತ್ತು (ಎಫ್) ಮತ್ತು (ಎಚ್) ಅನ್ನು ಉಲ್ಲಂಘಿಸಲಾಗಿದೆ,” ಎಂದು  ಎನ್‌ಬಿಡಿಎಸ್‌ಎ ತನ್ನ ಆದೇಶದಲ್ಲಿ ತಿಳಿಸಿದೆ.

ಮಾರ್ಚ್ 2, 2023 ರಂದು, NBDSA ಮೂರು ಟಿವಿ ಸುದ್ದಿ ವಾಹಿನಿಗಳಿಗೆ ಅವು ಪ್ರಸಾರ ಮಾಡಿರುವ ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶಿಸಿತ್ತು. ಅವರಲ್ಲಿ ನ್ಯೂಸ್ 18 ಇಂಡಿಯಾ ಮತ್ತು ಟೈಮ್ಸ್ ನೌ, ಜೀ ಟಿವಿ ಹೊರತುಪಡಿಸಿ ಉಳಿದಂತೆ ಮೂರು ಅಪರಾಧಿಗಳು ಮತ್ತೆ ತಮ್ಮ ಅಪರಾಧವನ್ನು ಮುಂದುವರಿಸಿದ್ದಾರೆ. ನೀತಿ ಸಂಹಿತೆ ಮತ್ತು ಬ್ರಾಡ್‌ಕಾಸ್ಟಿಂಗ್ ಮಾನದಂಡಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅವರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಮತ್ತು ಯೂಟ್ಯೂಬ್‌ನಿಂದ ಅವರು ಪ್ರಸಾರ ಮಾಡಿದ ಏಳು ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶ ನೀಡಲಾಗಿತ್ತು.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ & ಡಿಜಿಟಲ್ ಅಸೋಸಿಯೇಷನ್ ​​(ಎನ್‌ಬಿಡಿಎ) [ಹಿಂದೆ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ​​(ಎನ್‌ಬಿಎ) ಎಂದು ಕರೆಯಲಾಗುತ್ತಿತ್ತು] ಒಂದು ಸರಕಾರೇತರ ಸಂಸ್ಥೆ. ಇದು ಖಾಸಗಿ ದೂರದರ್ಶನ ಸುದ್ದಿ, ಅವುಗಳ ವ್ಯವಹಾರಗಳು ಮತ್ತು ಡಿಜಿಟಲ್ ಮಾಧ್ಯಮಗಳನ್ನು ಪ್ರತಿನಿಧಿಸುತ್ತದೆ. ಇದು ತನ್ನನ್ನು ತಾನು “ಭಾರತದಲ್ಲಿ ಸುದ್ದಿ, ಪ್ರಸ್ತುತ ವ್ಯವಹಾರಗಳು ಮತ್ತು ಡಿಜಿಟಲ್ ಪ್ರಸಾರಕರ ಸಾಮೂಹಿಕ ಧ್ವನಿ” ಎಂದು ಕರೆದುಕೊಂಡಿದೆ. ಇದು ಸಂಪೂರ್ಣವಾಗಿ ಅದರ ಸದಸ್ಯರಿಂದ ಸಿಗುವ ಧನಸಹಾಯದಿಂದ ನಡೆಯುವ ಸಂಸ್ಥೆಯಾಗಿದೆ.

ಐಟಿ ಕಾಯ್ದೆ ಬಳಸಿ ಕೇಂದ್ರದಿಂದ ಪತ್ರಿಕಾ ಸ್ವಾತಂತ್ರ್ಯದ ಹರಣ:‌ ವರದಿ ತೆಗೆಯಲು ಕ್ಯಾರವನ್‌ಗೆ ಆದೇಶ
ವಿವಾದಾತ್ಮಕ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ 2021 ಮತ್ತು 2023 ರಲ್ಲಿ ತಿದ್ದುಪಡಿ ತಂದು, ಈ ಕಾಯ್ದೆಯನ್ನು ಮಾಧ್ಯಮ ಸಂಸ್ಥೆಗಳ ವಿರುದ್ಧ ಬಳಸಲಾಗುತ್ತಿದೆ. ದಿ ಕ್ಯಾರವಾನ್ ನಿಯತಕಾಲಿಕೆಯಲ್ಲಿ ಪ್ರಕಟವಾದ  ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆ ವಿರುದ್ಧ ಮಾಡಲಾಗಿರುವ ಚಿತ್ರಹಿಂಸೆ ಮತ್ತು ಕೊಲೆಯ ಆರೋಪಗಳ ಬಗೆಗಿನ ಲೇಖನವನ್ನು ತೆಗೆದುಹಾಕಲು ಆದೇಶಿಸಲಾಗಿದೆ.

ಐಟಿ ಕಾಯಿದೆಯ ಸೆಕ್ಷನ್ 69 ಎ ಅಡಿಯಲ್ಲಿ ತಮಗೆ ನೋಟಿಸ್ ಕಳುಹಿಸಿದ್ದು. ಈ ಆದೇಶವನ್ನು ಪ್ರಶ್ನಿಸುವುದಾಗಿ ದಿ ಕ್ಯಾರವಾನ್ ತನ್ನ ಎಕ್ಸ್‌ನಲ್ಲಿ ಪ್ರಕಟಿಸಿತು. “ಆದೇಶದ ವಿಷಯವು ಗೌಪ್ಯವಾಗಿದೆ” ಎಂದು ಮ್ಯಾಗಝೈನ್ ಹೇಳಿದೆ.

This is to inform readers we have received an order from the Ministry of Information & Broadcasting under Section 69A of the IT Act, directing us to take down this story in 24 hrs:https://t.co/wbaEfoZsJ8.

The order’s content is confidential. We will be challenging this order.
— The Caravan (@thecaravanindia) February 13, 2024

24 ಗಂಟೆಗಳ ಒಳಗೆ ತನ್ನ ವೆಬ್‌ಸೈಟ್‌ನಿಂದ‌ ಈ ಲೇಖನವನ್ನು ತೆಗೆದುಹಾಕದಿದ್ದರೆ, ಇಡೀ ವೆಬ್‌ಸೈಟ್ ಅನ್ನು ನಾಶಮಾಡಲಾಗುವುದು ಎಂದು ದಿ ಕ್ಯಾರವಾನ್‌ಗೆ ಎಚ್ಚರಿಕೆ ನೀಡಲಾಗಿದೆ. ಲೇಖನವನ್ನು ಚಂದಾದಾರರಿಗೆ ಕಳುಹಿಸುವ ಮತ್ತು ಮುದ್ರಿತ ಪತ್ರಿಕೆಯಲ್ಲಿಯೂ ಸೇರಿಸಲಾಗಿದೆ.

ನಿಯತಕಾಲಿಕದ ಫೆಬ್ರವರಿ ಸಂಚಿಕೆಯಲ್ಲಿ ಪ್ರಕಟವಾದ ಪತ್ರಕರ್ತೆ ಜತೀಂದರ್ ಕೌರ್ ತೂರ್ ಅವರು ಬರೆದಿರುವ ಲೇಖನ ‘Screams from the Army Post’’ ಒಂದು ವಿಸ್ತೃತ ವರದಿಯಾಗಿದೆ. ಇದರಲ್ಲಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರವಾದ ಡಿಸೆಂಬರ್ 22, 2023 ರಂದು ಅಪರಿಚಿತ ಸೈನಿಕರಿಂದ ನಡೆದ ಮೂವರು ನಾಗರಿಕರ ಹತ್ಯೆಯ ಸುತ್ತ ವರದಿ ಮಾಡಲಾಗಿದೆ. ಸೇನಾ ಕಸ್ಟಡಿಯಲ್ಲಿ ನಾಗರಿಕರನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದು, ಈ ಚಿತ್ರಹಿಂಸೆ ನೀಡುತ್ತಿರುವ ವೀಡಿಯೊಗಳು ಕೂಡ ವೈರಲ್ ಆಗಿತ್ತು. ಆ ಸಂದರ್ಭದಲ್ಲಿ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿತ್ತು.

ಅಪರಿಚಿತ ಸೈನಿಕರಿಂದ ನಾಗೆರಿಕರಿಗೆ ಹಿಂಸೆ, ವಿಡಿಯೋ ಸ್ಕ್ರೀನ್‌ಶಾಟ್

ದಿ ಕ್ಯಾರವಾನ್‌ನ ಈ ವರದಿಯಲ್ಲಿ ಮೃತರ ಕುಟುಂಬಗಳನ್ನು ಮಾತನಾಡಿಸಲಾಗಿದ್ದು, ಸಾವಿನ ನಂತರ ಸೈನ್ಯವು ಇವುಗಳಲ್ಲಿ ಒಂದು ಕುಟುಂಬಕ್ಕೆ  10 ಲಕ್ಷ ಪರಿಹಾರ ನೀಡಿತ್ತು. 25 ಮಂದಿಗೆ ಸೈನ್ಯ “ಚಿತ್ರಹಿಂಸೆ” ನೀಡಿದ್ದು, ಇವರಲ್ಲಿ ಮೂವರು ಹತರಾಗಿದ್ದಾರೆ ಎಂದು ವರದಿ ಹೇಳಿದೆ. ಈ ಹಿಂಸೆಗೆ ಆದೇಶ ನೀಡಿದ ಬ್ರಿಗೇಡಿಯರ್ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದಿ ಕಾರವಾನ್  ಪೊಲೀಸ್, ಸೇನೆ ಮತ್ತು ಜಿಲ್ಲಾಡಳಿತ ಸೇರಿದಂತೆ ಅನೇಕ ಅಧಿಕಾರಿಗಳನ್ನು ಈ ಘಟನೆಯ ಬಗ್ಗೆ ಹೇಳಿಕೆ ನೀಡಲು ಸಂಪರ್ಕಿಸಿದೆ. ಆದರೆ ಈ ಯಾವುದೇ ಅಧಿಕಾರಿಗಳು ಪತ್ರಿಕೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿರಲಿಲ್ಲ.

ವಿವಾದಾತ್ಮಕ ಐಟಿ ನಿಯಮಗಳು ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ಸುದ್ದಿ ವೆಬ್‌ಸೈಟ್‌ಗಳು ಸೇರಿದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ವರದಿಗಳನ್ನು, ಮಾಹಿತಿಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತುರ್ತು ಅಧಿಕಾರವನ್ನು ನೀಡುತ್ತದೆ. ಹಲವಾರು ಮಾಧ್ಯಮ ಸಂಸ್ಥೆಗಳು ಮತ್ತು ನಾಗರಿಕ ಸಂಸ್ಥೆಗಳು ನ್ಯಾಯಾಲಯದಲ್ಲಿ ಈ ನಿಯಮಗಳನ್ನು ಪ್ರಶ್ನಿಸಿ ವಿಚಾರಣೆಗಾಗಿ ಅರ್ಜಿಗಳನ್ನು ಸಲ್ಲಿಸಿವೆ.

ನವೋದ್ಯಮಿಗಳಿಗೆ ತೆರಿಗೆ ವಿನಾಯತಿ: ಹರ್ಷ ವ್ಯಕ್ತಪಡಿಸಿದ ಮೋದಿ
ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ಮುಂದಕ್ಕೆ ಹೆಜ್ಜೆ ಇಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿರುವುದಾಗಿ ಎಂದು ndtv.com ವರದಿ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ ಒದಗಿಸುತ್ತಿಲ್ಲ. ಅಗಣಿತ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ. ನವೋದ್ಯಮಿಗಳಿಗೆ ತೆರಿಗೆ ವಿನಾಯತಿ ನೀಡಿರುವುದರಿಂದ ಭಾರತ ಹೊಸ ಹೆಜ್ಜೆ ಇಡಲಿದೆ ಎಂದಿದ್ದಾರೆ.
ಬಜೆಟ್ ಯುವ ಭಾರತವನ್ನು ಪ್ರತಿಫಲಿಸಿದೆ. ಯುವ ಭಾರತದಲ್ಲಿ ಉದ್ಯೋಗ ಮತ್ತು ಉದ್ದಿಮೆಗಳನ್ನು ಸ್ಥಾಪನೆಯ ಉದ್ದೇಶಕ್ಕಾಗಿ ಸಂಶೋಧನೆಗಾಗಿ ರೂ. ಒಂದು ಲಕ್ಷ ಕೋಟಿ ನಿಧಿಯನ್ನು ತೆಗೆದಿಟ್ಟಿರುವುದು ಮತ್ತು ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿರುವುದು; ಈ ಎರಡು ಪ್ರಮುಖ ನಿರ್ಧಾರಗಳು ಭಾರತದ ದಿಕ್ಕನ್ನು ಬದಲಿಸಲಿವೆ ಎಂದಿದ್ದಾರೆ

ಬಾಬರಿ ಮಸೀದಿಯಂತೆ ಮತ್ತೊಂದು ಮಸೀದಿ ಬಿಟ್ಟುಕೊಡಲ್ಲ : ಓವೈಸಿ
ಲಖನೌ: ಈಗಾಗಲೇ ಬಾಬರಿ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಅದೇ ರೀತಿ ಜ್ಞಾನವಾಪಿ ಮಸೀದಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲವೆಂದು ಕುರಿತಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ವಾರಾಣಸಿಯ ಜಿಲ್ಲಾ ಕೋರ್ಟ್‌ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಇದು ಪೂಜಾ ಸ್ಥಳಗಳ ಕಾಯ್ದೆ–1991ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಂಪೂರ್ಣ ತಪ್ಪು ನಿರ್ಧಾರ.ಈ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿಗಳ ಸಮಿತಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿವೆ ಎಂದು ಅವರು ಎಎನ್‌ಐಗೆ ತಿಳಿಸಿದ್ದಾರೆ.
ಇದೇ ರೀತಿ, ಸಮೀಕ್ಷೆಗಳು ಮುಂದುವರೆದರೆ ಮತ್ತು ಪ್ರಚೋದಿಸುವ ಕೆಲಸಗಳು ಹೆಚ್ಚಾದರೆ ಬಾಬರಿ ಮಸೀದಿಗೂ ಮುನ್ನ ಮತ್ತು ನಂತರದ ಘಟನೆಗಳು ಪುನರಾವರ್ತಿತವಾಗುತ್ತವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳ ಸ್ಥಿತಿ ಬದಲಿಸಲು ಯತ್ನಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಬದಲಾವಣೆ ಮಾಡುವುದನ್ನು ಬಿಟ್ಟು ಆಗಸ್ಟ್ 15, 1947ರ ಯಥಾಸ್ಥಿತಿಯನ್ನು ಅನುಸರಿಸಬೇಕು ಎಂದು ಪೂಜಾ ಸ್ಥಳಗಳ ಕಾಯ್ದೆ –1991 ಹೇಳುತ್ತದೆ. ಅದನ್ನು ಮೀರಿದ್ದು ಕಂಡುಬಂದರೆ ನ್ಯಾಯಾಲಯ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಕ್ರಮವನ್ನು ಯೋಗಿ ಆದಿತ್ಯನಾಥ ದಿಟ್ಟತನದಿಂದ ತೆಗೆದುಕೊಳ್ಳಲು ಎಂದು ಅವರು ಸೂಚಿಸಿದ್ದಾರೆ.

ಕಾಗೆ ಕೂರುವುದಕ್ಕೂ… ಕೊಂಬೆ ಮುರಿಯುವುದಕ್ಕೂ…
ಬೊಗಸೆಗೆ ದಕ್ಕಿದ್ದು – 7

ನಿಖಿಲ್ ಕೋಲ್ಪೆ

ಕಾಕತಾಳೀಯ! ಒಂದಕ್ಕೊಂದು ಸಂಬಂಧವೇ ಇಲ್ಲದ ಎರಡು ಘಟನೆಗಳು ಅವಿನಾಭಾವ ಸಂಬಂಧ ಇವೆಯೋ ಎಂಬಂತೆ ಭ್ರಮೆ ಹುಟ್ಟಿಸುವ ರೀತಿಯಲ್ಲಿ ನಡೆದರೆ ಅದನ್ನು ಕಾಕತಾಳೀಯ ಎನ್ನುತ್ತೇವೆ. ಅದೊಂದು ಮ್ಯಾಜಿಕಲ್ ಕ್ಷಣ! “ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಹೋಯ್ತು” ಎಂದೋ “ಕಾಗೆ ಕೂರುವುದಕ್ಕೂ ಹಣ್ಣು ಉದುರುವುದಕ್ಕೂ ಸರಿಹೋಯ್ತು” ಎಂದೋ ಹೇಳುತ್ತಾರೆ. ವಾಸ್ತವದಲ್ಲಿ ಎರಡಕ್ಕೂ ಸಂಬಂಧ ಒಂದು ಚೂರೂ ಇಲ್ಲದಿದ್ದರೂ ಕಾಗೆ ಕೂತದ್ದೇ ಕೊಂಬೆ ಮುರಿದದ್ದಕ್ಕೋ, ಹಣ್ಣು ಉದುರಿದ್ದಕ್ಕೋ ಕಾರಣ ಎಂಬ ಭ್ರಮೆ ನಮ್ಮನ್ನು ಆವರಿಸುತ್ತದೆ.

ಕೆಟ್ಟು ಹೋದ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ ಎಂಬುದು ಹಳೆಯ ಮಾತು. ಬಹಳಷ್ಟು ಜನರಿಗೆ ಇದನ್ನು ಹೇಳಿದರೆ, ಅದು ಹೇಗೆ ಎಂದು ಕೇಳುತ್ತಾರೆ! “ಗಡಿಯಾರದ ಮುಳ್ಳು ೬.೦೦ ಗಂಟೆಯ ಹೊತ್ತು ತೋರಿಸುವ ಹೊತ್ತಿಗೇ ಕೆಟ್ಟು ನಿಂತಿತು ಎಂದಿಟ್ಟುಕೊಳ್ಳಿ. ನಂತರವೂ ಪ್ರತೀ ದಿನ ನೀವು ಬೆಳಗ್ಗೆ ಮತ್ತು ಸಂಜೆ ೬.೦೦ ಗಂಟೆ ಹೊತ್ತಿಗೆ ಗಡಿಯಾರ ನೋಡಿದರೆ ಅದು ಸರಿಯಾದ ಸಮಯವನ್ನೇ ತೋರಿಸುತ್ತದಲ್ಲ?” ಎಂದೆಲ್ಲಾ ಅಂತವರಿಗೆ ವಿವರಿಸಬೇಕಾಗುತ್ತದೆ.

ಬಹುಶಃ ಇಂತಹ “ಬುದ್ಧಿವಂತ” ಜನರೇ ಪ್ರಪಂಚದಲ್ಲಿ ತುಂಬಿರುವಂತಿದೆ. ಇಲ್ಲವಾದಲ್ಲಿ ಯಾವುದೇ ಒಬ್ಬ ಜ್ಯೋತಿಷಿ ಹೇಳಿದ್ದು ನಿಜವಾಗುತ್ತದೆ ಎಂದೋ, ಅಸ್ತಿತ್ವದಲ್ಲಿಯೇ ಇಲ್ಲದ ರಾಹು- ಕೇತುಗಳು ನಮ್ಮ ಜೀವನ, ಭವಿಷ್ಯದ ಮೇಲೆ ಪ್ರಭಾವ ಬೀರುತ್ತವೆ ಎಂದು ಯಾರಾದರೂ ನಂಬುತ್ತಾರೆಯೇ? ಮಂತ್ರಿಸಿದ ನೂಲಿನಿಂದ, ಅಥವಾ ನೀರಿನಿಂದ ರೋಗ ಗುಣವಾಗುತ್ತದೆ ಎಂದರೆ ಯಾರಾದರೂ ನಂಬುತ್ತಾರೆಯೇ? ಇವುಗಳಿಗೆ ದೇವರ, ನಂಬಿಕೆಯ, ಡೋಂಗಿ ವಿಜ್ಞಾನದ ಬಣ್ಣ ನೀಡಿ ನಂಬಿಸಲಾಗುತ್ತದೆ. ವಿಜ್ಞಾನಿಗಳೇ ಇಂತವುಗಳನ್ನು ನಂಬುವಾಗ ಸಾಮಾನ್ಯ ಜನರ ಪಾಡೇನು? ಮಂತ್ರದಿಂದ ಆಥವಾ ಪಾಯಸದಿಂದ ಮಕ್ಕಳಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಿದ್ದರೂ, ಹಾಗೆಂದು ಈಗ ಯಾರಾದರೂ ಯಾರಾದರೂ ನಂಬುತ್ತಾರೆಯೆ? ಅದೂ ಮಕ್ಕಳಾಗುವುದು ಹೇಗೆ ಎಂದು ಸ್ವಲ್ಪ ದೊಡ್ಡ ಮಕ್ಕಳಿಗೂ ಗೊತ್ತಿರುವಾಗ?! ಅಥವಾ ನಂಬುವುದಿಲ್ಲ ಎಂದು ನಂಬುವುದಾದರೂ ಹೇಗೆ?- ನವಿಲಿಗೆ ಕಣ್ಣೀರಿನಿಂದ ಮಕ್ಕಳಾಗುತ್ತವೆ ಎಂದೊಬ್ಬ ಬೃಹಸ್ಪತಿ ನ್ಯಾಯಾಧೀಶನೇ ಹೇಳಿರುವಾಗ!?

ಅದಿರಲಿ, ನಾನೀಗ ನನ್ನ ಬಾಲ್ಯದಲ್ಲಿ ನಡೆದ, ನಿಮಗೆ ನಂಬಲು ಕಷ್ಟವಾಗಬಹುದಾದ ಎರಡು ಕಾಕತಾಳೀಯ ಘಟನೆಗಳನ್ನು ನಿಮಗೆ ಹೇಳುತ್ತೇನೆ.

ನಾಲ್ಕು ದಶಕಗಳಿಗೂ ಹಿಂದಿನ ಕತೆಯಿದು. ನಾನಾಗ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಒಂದು ದಿನ ಸಂಜೆ ಹೈಸ್ಕೂಲಿನಿಂದ ಮನೆಗೆ ಬರುತ್ತಿದ್ದಂತೆ ಹಿತ್ತಿಲಲ್ಲಿ ಆರನೇ ಕ್ಲಾಸಿನಲ್ಲಿ ಕಲಿಯುತ್ತಿದ್ದ ತಮ್ಮನೂ, ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದ ದೊಡ್ಡ ತಂಗಿಯೂ ಹಿತ್ತಿಲಲ್ಲಿ ಬಹಳ ತನ್ಮಯತೆಯಿಂದ ಏನೋ ಮಹಾನ್ ಕೆಲಸದಲ್ಲಿ ತೊಡಗಿದ್ದಾರೆ. ಕುತೂಹಲ ತಾಳದೆ ಹೋಗಿ ಏನೆಂದು ನೋಡಿದರೆ ಇಬ್ಬರೂ ಹಳೆಯ ನೇಗಿಲ ಮೊನೆಯಲ್ಲಿ ಗುಂಡಿ ತೋಡಿ ತುಳಸಿ ಗಿಡ ನೆಡಲು ಸಿದ್ಧತೆ ನಡೆಸುತ್ತಿದ್ದಾರೆ. ಬದಿಯಲ್ಲಿ ಒಂದು ಚಿಕ್ಕ ಬುಟ್ಟಿಯಲ್ಲಿ ಬೂದಿ, ಬಳೆಚೂರುಗಳು, ಅದೂ ಇದೂ ಮಣಿ ಸರಕುಗಳೆಲ್ಲಾ ಇದ್ದವು!

ಇದೇನಿದೆಂದು ಕೇಳಿದರೆ, ಯಾರೋ ಶಾಲೆಯಲ್ಲಿ ಹೇಳಿದ್ದಂತೆ: ಹಿತ್ತಿಲಲ್ಲಿ ಗುಂಡಿ ತೋಡಿ, ಬೂದಿ, ಬಳೆಚೂರು ಮಣ್ಣು ಮಸಣ ಎಲ್ಲಾ ಹಾಕಿ ತುಳಸಿ ಗಿಡ ನೆಡಬೇಕಂತೆ. ಪ್ರತಿದಿನ ಬೆಳಿಗ್ಗೆ, ಸಂಜೆ ನೀರು ಹಾಕಬೇಕಂತೆ! ಒಂದು ವಾರ ಬಿಟ್ಟು ಗಿಡ ಅಗೆದರೆ ಅಡಿಯಲ್ಲಿ ಚಿನ್ನ ಸಿಗುತ್ತದಂತೆ! ನಾನು ನಕ್ಕು ಮನೆಗೆ ಹೋದೆ. ಇವರ ಚಿನ್ನದ ಬೇಸಾಯ ಮುಂದುವರಿದಿತ್ತು. ಪ್ರತೀ ನಿತ್ಯ ಬೆಳಿಗ್ಗೆ ಬೇಗನೇ ಎದ್ದು ನೀರು ಹಾಕುವುದು ನಡೆದೇ ಇತ್ತು.

ಒಂದು ವಾರ ಕಳೆಯಿತು. ನಾನು ಸಂಜೆ ಮನೆಗೆ ಬಂದು ನೋಡುತ್ತೇನೆ: ತಮ್ಮ, ತಂಗಿ, ತಂದೆ, ತಾಯಿ, ಅಜ್ಜಿಯಂದಿರು, ಎಲ್ಲಾ ಭಾರೀ ಖುಷಿಯಲ್ಲಿ ಇದ್ದಾರೆ! ಹಾಗೆ ಹೀಗೆ ಮಾತುಗಳು! ಏನೆಂದು ಕೇಳಿದರೆ, “ಚಿನ್ನ ಸಿಕ್ಕಿತು! ಮಕ್ಕಳಿಗೆ ಚಿನ್ನ ಸಿಕ್ಕಿತು!” ಎಂದರು ತಂದೆ! ಹೌದು! ಗಿಡವನ್ನು ಅಗೆದು ತೆಗೆದಾಗ ಮಕ್ಕಳಿಗೆ ಚಿನ್ನದ ಬೆಂಡೋಲೆಯೊಂದು ಸಿಕ್ಕಿತ್ತು. ಆದರೆ, ಅದು ಸ್ವಲ್ಪ ಕರಕಲಾಗಿತ್ತು. ಸಹಜವಾಗಿಯೇ ಅದು ಗಿಡದಲ್ಲಿ ಬೆಳೆದ ಚಿನ್ನವಾಗಿರದೆ, ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಚಿನ್ನದ ಬೆಂಡೋಲೆಗಳಲ್ಲಿ ಒಂದಾಗಿತ್ತು. ತಾಯಿಯ ಬಳಿ ಇದ್ದ ಎರಡು ಜೊತೆ ಬೆಂಡೋಲೆಗಳಲ್ಲಿ ಒಂದು ಜೊತೆ ಕಪಾಟಿನಲ್ಲಿ ಇತ್ತು. ಅದನ್ನವರು ಕಾಗದದಲ್ಲಿ ಸುತ್ತಿ ಇಟ್ಟಿದ್ದರಂತೆ. ಅದನ್ನು ಎಷ್ಟು ಹುಡುಕಿದರೂ, ಮನೆಯ ಬೂತಗಳಿಗೆ ಹರಕೆ ಹೊತ್ತರೂ ಅವು ಸಿಕ್ಕಿರಲಿಲ್ಲ. ಕಪಾಟಿನಿಂದ ಅದನ್ನು ಯಾರೂ ಕದ್ದೊಯ್ಯುವಂತೆಯೂ ಇರಲಿಲ್ಲ.

ನನ್ನ ತಂದೆ ಶೆರ್ಲಾಕ್ ಹೋಮ್ಸ್ ತರ ಲೆಕ್ಕಾಚಾರ ಹಾಕಿ ಒಂದು ವಿಶ್ಲೇಷಣೆ ಮಾಡಿದರು. ತಾಯಿ ಕಪಾಟು ತೆರೆದಾಗ ಅದು ಹೇಗೋ ಬೆಂಡೋಲೆ ಇದ್ದ ಕಾಗದದ ಪೊಟ್ಟಣ ಕೆಳಗೆ ಬಿದ್ದಿರಬೇಕು. ಗುಡಿಸುವಾಗ ಕಸದ ಜೊತೆಗೆ ಮನೆಯ ಒಲೆ ಸೇರಿರಬೇಕು. ಕೃಷಿಕರಾದ ನಮ್ಮ ಬಚ್ಚಲ ಪಕ್ಕದಲ್ಲೇ ದೊಡ್ಡ ಬೂದಿ ಗುಂಡಿ ಇತ್ತು. ಮನೆ ಒಲೆಗಳ ಬೂದಿ, ಬಚ್ಚಲು ಒಲೆಯ ಬೂದಿ, ಭತ್ತ ಬೇಯಿಸುವ ಒಲೆಗಳ ಬೂದಿ, ಎಮ್ಮೆ ದನ ಕೋಣಗಳಿಗೆ ಕಲಗಚ್ಚು ಕಾಯಿಸುವ ಒಲೆಯ ಬೂದಿ ಬಂದು ಸೇರುವುದು ಈ ಬೂದಿ ಗುಂಡಿಯನ್ನೇ. ಮಕ್ಕಳು ಗಿಡ ನೆಡುವಾಗ ಅಲ್ಲಿಂದ ತೆಗೆದು ಹಾಕಿದ ಬೂದಿಯಲ್ಲಿ ಈ ಬೆಂಡೋಲೆಯೂ ಇತ್ತು. ಇದು ಸರಿಯಾದ ವಿಶ್ಲೇಷಣೆ.

ಆದರೆ, ಅಗಾಧವಾದ ಬೂದಿ ರಾಶಿಯೊಳಗಿನಿಂದ ಮಕ್ಕಳು ತೆಗೆದ ಒಂದು ಚಿಕ್ಕ ಬುಟ್ಟಿ ಬೂದಿಯಲ್ಲೇ ಬೆಂಡೋಲೆ ಬರುವ ಸಾಧ್ಯತೆ ತೀರಾ ತೀರಾ ಕಡಿಮೆಯಾದುದರಿಂದ ಮುದುಕರೆಲ್ಲಾ ಅದರಲ್ಲೂ ಬೂತದ ಕಾರಣಿಕ ಹುಡುಕಿ, ಅದನ್ನೇ ನಂಬಿದರು. ನನ್ನ ದೊಡ್ಡ ಅಜ್ಜಿ ಹೋದದ್ದು ಹೋಯ್ತು, ಬಂದದ್ದು ಬಂತು ಎಂಬಂತೆ ಸಮಾಧಾನದಿಂದ ಇದ್ದರೂ, ಅಸಾಧ್ಯ ಪಿಟ್ಟಾಸಿಯಾದ ಚಿಕ್ಕ ಅಜ್ಜಿ ಆ ಬೂದಿ ಗುಂಡಿ ಜಾಲಾಡಿದರೂ ಇನ್ನೊಂದು ಬೆಂಡೋಲೆ ಸಿಗಲಿಲ್ಲ! ಮಕ್ಕಳು ಮತ್ತೆ ಗಿಡ ನೆಟ್ಟರೂ ಸಿಗಲಿಲ್ಲ.

ಮತ್ತೊಂದು ಘಟನೆ ಅದಕ್ಕಿಂತಲೂ ಮೊದಲು, ನಾನೇ ಮೂರನೆಯೋ, ನಾಲ್ಕನೆಯೋ ಕ್ಲಾಸಿನಲ್ಲಿ ಇದ್ದಾಗ ನಡೆದದ್ದು. ಒಂದು ಸಂಜೆ ನಾನು ಅಂಗಳದಲ್ಲಿ ಆಟವಾಡುತ್ತಾ ಇದ್ದೆ. ಅಲ್ಲೇ ಅಡುಗೆ ಮನೆ ಬಾಗಿಲ ಹೊರಗೆ ಇದ್ದ ತೆರೆದ ಜಾಗದಲ್ಲಿ ದೊಡ್ಡದೊಂದು ಅರೆಯುವ ಕಲ್ಲಿನಲ್ಲಿ ಅಕ್ಕಿ ಕಡೆಯುತ್ತಾ ತಾಯಿ ಮತ್ತು ಮೀನ್‌ದ ಅಬ್ಬ (ಮೀನಿನ ಅಜ್ಜಿ) ಪಟ್ಟಾಂಗದಲ್ಲಿ ತೊಡಗಿದ್ದರು. ಆಗ ಗದ್ದೆ ಕೆಲಸಕ್ಕೆ ತುಂಬಾ ಜನ ಬರುತ್ತಿದ್ದರಿಂದ ತುಂಬಾ ಅಕ್ಕಿ ಕಡೆಯಬೇಕಾಗಿತ್ತು.

ಇಲ್ಲಿ ಮೀನಿನ ಅಬ್ಬನ ಬಗ್ಗೆ ಕರಾವಳಿಯಲ್ಲಿ ಇದ್ದ ಒಂದು ರೀತಿಯ ಸೌಹಾರ್ದಕ್ಕೆ ಸಾಕ್ಷಿಯಾಗಿ ಎರಡು ಮಾತುಗಳನ್ನು ಬರೆಯಬೇಕು. ಅವರು ನಮ್ಮ ಸಂಬಂಧಿ ಅಲ್ಲ. ಉಪ್ಪಳ, ಮಂಜೇಶ್ವರ ಕಡೆಯ ಮೊಗವೀರರು. ತನಿಯಾರು ಎಂದವರ ಹೆಸರು. ಒಣ ಮೀನಿನ ಮಾರಾಟಕ್ಕೆ ಈ ಕಡೆ ಬಂದರೆ, ವಾರಗಳ ತನಕ ನಮ್ಮ ಮನೆಯಲ್ಲೇ ವಾಸ. ಬೆಳಗಾತ ಎದ್ದು ಸುತ್ತಲಿನ ಒಂದೊಂದೇ ಊರು ತಿರುಗಿ ಮೀನು ಮಾರಿ ಸಂಜೆ ಬರುತ್ತಿದ್ದರು. ಅವರು ಪಡೆದ ಅಕ್ಕಿ, ಮುಡಿಯಾಗಿ ನಮ್ಮ ಅಟ್ಟದಲ್ಲೇ ದಾಸ್ತಾನು. ಅದನ್ನು ನಂತರ ಪೇಟೆಯಲ್ಲಿ ಮಾರುತ್ತಿದ್ದರು. ಗಂಡ ಸತ್ತಿದ್ದರೂ ಬಾಯಿ ಬರದ ಮಗಳನ್ನು ಒಬ್ಬಂಟಿಯಾಗಿ ಸಾಕಿದ ಗಟ್ಟಿಗಿತ್ತಿ. ಬಹಳ ವಯಸ್ಸಾಗುವ ವರೆಗೂ ಬರುತ್ತಿದ್ದರು.

ಇರಲಿ, ಅಕ್ಕಿ ಕಡೆಯುತ್ತಿದ್ದ ತಾಯಿ ಮತ್ತು ಅವರ ಪಟ್ಟಾಂಗ ಕೇರೆ ಹಾವಿನ ಕಡೆ ಹರಿಯಿತು. ನನ್ನ ಕಿವಿ ನೆಟ್ಟಗಾಯಿತು. ಅವರ ಸಂಭಾಷಣೆ ಹೆಚ್ಚು ಕಡಿಮೆ ಹೀಗಿತ್ತು.

ತಾಯಿ: ಕೇರೆ ಹಾವನ್ನು ಮೊರಜ (ಬತ್ತದ ಹುಲ್ಲಿನ ಹಗ್ಗ), ಮಹಾರಾಜ ಎಂದೆಲ್ಲಾ ಕರೆಯುವುದು ಯಾಕೆ?

ಅಬ್ಬ: ಹಾಗೆಲ್ಲಾ ಹೆಸರು ಹಿಡಿದು ಕರೆದರೆ ಅದಕ್ಕೆ ಅವಮಾನವಾಗಿ ಹೋಗಿಬಿಡುತ್ತದೆ.

(ಆಗೆಲ್ಲಾ ಕೇರೆ ಮನೆಗೆ ಬಂದರೆ, ಜನರಿಗೆ ಕುಶಿ. ಇಲಿ ಕಾಟ ಕಡಿಮೆ ಆಗುತ್ತದೆ ಎಂದು. ನಿರುಪದ್ರವಿ ಕೇರೆಯನ್ನು ಯಾರು “ಕ್ಯಾರೆ?” ಎನ್ನುತ್ತಿರಲಿಲ್ಲ. ಆದರೆ ಕೇರೆ ಎಂದು ಹೆಸರು ಹೇಳಿ ಕರೆಯುತ್ತಿರಲಿಲ್ಲ!)

ತಾಯಿ: ಕೇರೆ ರಾತ್ರಿ ಹೊತ್ತು ಮನೆಯಲ್ಲಿ ನಿಲ್ಲುವುದಿಲ್ಲ ಅಲ್ಲವಾ?

ಅಬ್ಬ: ಅದಕ್ಕೆ ಮರ್ಯಾದೆ ಇಲ್ಲವಾ? ದಿನಕ್ಕೆ ಒಂದು ಮುಡಿ ಉಪ್ಪು ಖರ್ಚಾಗುವ ದೊಡ್ಡ ದೊಡ್ಡ ಮಹಾರಾಜ ಮನೆಯಲ್ಲಿ ಮಾತ್ರ ಅದು ರಾತ್ರಿ ನಿಲ್ಲುವುದು!

ತಾಯಿ: ಕೇರೆಗೆ ಹೆದರುವುದು ಯಾಕೆ ಅಲ್ವಾ? ಅದೇನೂ ಕಚ್ಚುವುದಿಲ್ಲ. ಕಚ್ಚಿದರೂ ವಿಷವೇನೂ ಇಲ್ಲ!

ಅಬ್ಬ: ಏನು?! ವಿಷ ಇಲ್ಲವ?! ಅದು ಕಚ್ಚುವುದಿಲ್ಲವ?! ಕಚ್ಚಿದರೆ ಮನುಷ್ಯ ಬದುಕುತ್ತಾನ?! ಕೇರೆ ಅಂದರೆ….

ಅವರು ಮಾತು ಮುಗಿಸುವ ಮೊದಲೇ ದೊಡ್ಡದೊಂದು ಕೇರೆ ಹಾವು ಮೇಲೆ ಮಾಡಿನಲ್ಲಿ ಓಡಾಡುತ್ತಿದ್ದದ್ದು ದೊಪ್ಪನೇ ಇವರ ಪಕ್ಕದಲ್ಲಿ ಬಿತ್ತು. ಕೇರೆ, ತಾಯಿ, ಅಬ್ಬ ಮೂವರೂ ಬದುಕಿದರೆ ಬೇಡಿ ತಿಂದೇವು ಎಂದು ಮೂರು ದಿಕ್ಕಿಗೆ ಓಡಿದರು. ನಾನು ಬಿದ್ದು ಬಿದ್ದು ನಕ್ಕು, ನಂತರ ಸರಿಯಾಗಿ ಬೈಗುಳ ತಿಂದೆ!

ಇವರು ಕೇರೆ ಹಾವಿನ ಬಗ್ಗೆ ಮಾತನಾಡುತ್ತಿರುವಾಗಲೇ ಅದು ಅವರ ಪಕ್ಕದಲ್ಲೇ ಉದುರಿ ಬೀಳುವುದು ಕಡಿಮೆ ಕಾಕತಾಳೀಯವೇ!?

ನಮ್ಮ ನಿತ್ಯ ಜೀವನದಲ್ಲಿ ನೂರಾರು ಕಾಕತಾಳೀಯಗಳು ನಡೆಯುತ್ತಿರುತ್ತವೆ. ನೀವು ಯಾವುದಾದರೂ ಒಂದು ವಿಷಯದ ಬಗ್ಗೆ ಮಾತಾಡುತ್ತಲೋ, ಯೋಚಿಸುತ್ತಲೋ ಇರುತ್ತೀರಿ. ಟಿವಿಯಲ್ಲಿ ಪಕ್ಕನೇ ಅದುವೇ ಮಾತು ಬರುತ್ತದೆ! ಆದರೂ ನಾವು ಅದನ್ನು ಗಮನಿಸುವುದಿಲ್ಲ. ಹಾಳಾದ ಗಡಿಯಾರದಂತೆ ಯಾವುದೋ ಜ್ಯೋತಿಷಿ ಹೇಳಿದ್ದು ಒಂದೆರಡು ಸಲ ನಿಜವಾದರೆ ಅದನ್ನೇ ಪ್ರಚಾರ ಮಾಡುತ್ತೇವೆ. ನೂರು ಬಾರಿ ಸುಳ್ಳಾದರೂ ಪಾಠ ಕಲಿಯುವುದಿಲ್ಲ. ಒಂದು ವೇಳೆ ಕಲಿಯುತ್ತಿದ್ದರೆ ಟಿವಿಯಲ್ಲಿ ಬರುವ ಬ್ರಹ್ಮಾಂಡ ಜ್ಯೋತಿಷಿಗಳ ಒಂದು ಅಂಡವಾದರೂ ಉಳಿದಿರುತ್ತಿತ್ತೆ!? ಸುಳ್ಳುಗಳನ್ನು ನಂಬುವುದು ನಮಗೆ ಅಭ್ಯಾಸವಾಗಿದೆ, ರಕ್ತಗತವಾಗಿದೆ. ಹಾಗಾಗಿಯೇ ದೇಶದಲ್ಲಿ ಸುಳ್ಳರದ್ದೇ ಕಾರುಬಾರು ನಡೆಯುತ್ತಿದೆ. ಸತ್ಯ ನಮಗೆ ಬೇಕಾಗಿಲ್ಲ! ವಿಜ್ಞಾನದ ಲಾಭಗಳು ಬೇಕು, ವಿಜ್ಞಾನ ಬೇಕಾಗಿಲ್ಲ. ನಮಗೆ ಆಜ್ಞಾನದ ಕೊಳಚೆ ಗುಂಡಿಯೇ ಇಷ್ಟ!