TRS – Peepal Media

ಶಾಸಕರ ಕಳ್ಳತನದ ಆರೋಪ ; ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್!
ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್ ನೀಡುವಂತೆ ತೆಲಂಗಾಣ ಹೈಕೋರ್ಟ್ SIT ಗೆ ಸೂಚಿಸಿದೆ. ಬಿ.ಎಲ್.ಸಂತೋಷ್ SIT ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗದೇ ಇರುವುದಕ್ಕೆ SIT ಗರಂ ಆಗಿದೆ.

ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ನೋಟೀಸ್ ನ ಅಡಿಯಲ್ಲಿ ನವೆಂಬರ್ 21 ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬಿ.ಎಲ್.ಸಂತೋಷ್ ವಿಚಾರಣೆ ಎದುರಿಸಲು ಆಗದೇ SIT ನೋಟಿಸ್ ನ್ನು ನಿರ್ಲಕ್ಷಿಸಿ ದೂರವೇ ಉಳಿದಿದ್ದರು.

ಈ ಹಿನ್ನೆಲೆಯಲ್ಲಿ SIT ನ್ಯಾಯಾಲಯದ ಮೊರೆ ಹೋಗಿದ್ದು, ಬಿ.ಎಲ್.ಸಂತೋಷ್ ಅವರನ್ನು ಬಂಧಿಸಲು ಅವಕಾಶ ನೀಡುವಂತೆ ಮನವಿ ಮಾಡಿತ್ತು. ಈಗಾಗಲೇ ಬಿ.ಎಲ್.ಸಂತೋಷ್ ಬಂಧನದಿಂದ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ತನಗೆ ಏನು ಸೂಕ್ತ ಭದ್ರತೆ ಬೇಕೋ ಅದನ್ನು ಮಾಡಿಕೊಂಡಿದ್ದರಿಂದ ಬಂಧಿಸುವ ಪ್ರಕ್ರಿಯೆಯಿಂದ ದೂರ ಇರುವಂತೆ SIT ಅಧಿಕಾರಿಗಳಿಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ.

ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಎಸ್‌ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿರುವುದರಿಂದ ಬಿ.ಎಲ್.ಸಂತೋಷ್ ರನ್ನು ಬಂಧಿಸಬಾರದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಸಂತೋಷ್ ಬಂಧನಕ್ಕೆ ಒಳಗಾಗಬಾರದು ಎಂದು ಹೇಳಿದ ನ್ಯಾಯಾಧೀಶರು, ಎಸ್‌ಐಟಿ ನೋಟಿಸ್‌ನಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದರು.

ಕಳೆದ ತಿಂಗಳು ಟಿಆರ್‌ಎಸ್‌ ಪಕ್ಷದ ಫೈಲಟ್ ರೋಹಿತ್ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಸಾಕ್ಷ್ಯ ಸಮೇತ ಮೂವರು ಬಿಜೆಪಿ ಏಜೆಂಟ್ ಗಳನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಮೂವರು ಬಿಜೆಪಿ ಏಜೆಂಟ್‌ಗಳ ನಡುವಿನ ಸಂಭಾಷಣೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಪ್ರಮುಖವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕರ ಕಳ್ಳತನದ ಪ್ರಮುಖ ಆರೋಪದ ಅಡಿಯಲ್ಲಿ ತೆಲಂಗಾಣ SIT ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಎಸ್‌ಐಟಿ ಅಧಿಕಾರಿಗಳು ಮತ್ತಿಬ್ಬರಿಗೆ ನೋಟಿಸ್ ನೀಡಿದೆ. ಹೈದರಾಬಾದ್‌ನ ಅಂಬರ್‌ಪೇಟ್ ಪ್ರದೇಶದ ವಕೀಲ ಪ್ರತಾಪ್ ಗೌಡ್ ಮತ್ತು ಪ್ರಕರಣದಲ್ಲಿ ಶಾಸಕರನ್ನು ಕುದುರಿಸಲು ಬಂದಿದ್ದ ಆರೋಪಿಗಳಲ್ಲಿ ಒಬ್ಬರಾದ ನಂದಕುಮಾರ್ ಅವರ ಪತ್ನಿ ಚಿತ್ರಲೇಖಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ.

TRS ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಖದೀಮರ ಬಂಧನವಾಗಿದೆ. ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗಿದೆ.

ಮೂಲಗಳ ಪ್ರಕಾರ ಸುಮಾರು 1 ಲಕ್ಷ ಪುಟಗಳ ಸಾಕ್ಷ್ಯವನ್ನು SIT ಅಧಿಕಾರಿಗಳು ಸಿದ್ದಪಡಿಸಿದ್ದು, ಬಿ.ಎಲ್.ಸಂತೋಷ್ ರನ್ನು ವಿಚಾರಣೆ ನಂತರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಆದ ಶಾಸಕರ ಕಳ್ಳತನದ ಆರೋಪ ಕೂಡಾ ಸಂತೋಷ್ ಮೇಲೆ ಕೇಳಿ ಬರುತ್ತಿದೆ. ಅಂತೆಯೇ ತೆಲಂಗಾಣದಲ್ಲಿ ಶಾಸಕರ ಕಳ್ಳತನ ಮಾಡಲು ಹೋಗಿದ್ದ ವ್ಯಕ್ತಿಗಳೇ ವಿವಿಧ ರಾಜ್ಯಗಳಲ್ಲಿ ವ್ಯವಹಾರ ಕುದುರಿಸಲು ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕದ ಕರಾವಳಿ ಮೂಲದವರಾಗಿದ್ದು, ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯಲ್ಲೂ ಬಿ.ಎಲ್.ಸಂತೋಷ್ ಗೆ ಬಂಧನ ಸಾಧ್ಯತೆ ದಟ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ಹಲವಷ್ಟು ಶಾಸಕರ ಕಳ್ಳತನದ ಪ್ರಕರಣದಲ್ಲಿ ಬಿ.ಎಲ್.ಸಂತೋಷ್ ಹೆಸರು ಮುಂಚೂಣಿಯಲ್ಲಿ ಇದ್ದರೂ ಸಾಕ್ಷ್ಯದ ಕೊರತೆ ಇತ್ತು. ಆದರೆ ಇಲ್ಲಿ ತೆಲಂಗಾಣ ಸರ್ಕಾರ ಆರೋಪಿಗಳ ಬಂಧನಕ್ಕೂ ಮೊದಲೇ ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಹಾಗಾಗಿ ಬಿಎಲ್ ಸಂತೋಷ್ ರನ್ನು ವಿಚಾರಣೆ ನಂತರವೇ ಬಂಧಿಸುವ ಬಗ್ಗೆಯೂ ತೆಲಂಗಾಣ SIT ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.

ಬಿಜೆಪಿ ಮತ್ತು ಟಿಆರ್‌ಎಸ್‌ ಪಕ್ಷ ಒಂದೇ ನಾಣ್ಯದ ಎರಡು ಮುಖಗಳು: ರಾಹುಲ್‌ ಗಾಂಧಿ
ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎರಡೂ ಪಕ್ಷಗಳು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಮತ್ತು ಹಣದ ರಾಜಕೀಯದಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.

ದೀಪಾವಳಿಗೆ ನಾಲ್ಕು ದಿನಗಳ ವಿರಾಮದ ನಂತರ ಭಾರತ್ ಜೋಡೋ ಯಾತ್ರೆಯನ್ನು ಪುನರಾರಂಭಿಸಿದ ರಾಹುಲ್‌ ಗಾಂಧಿಯವರು, ಸಂಸತ್ತಿನಲ್ಲಿ ಅಂಗೀಕಾರಕ್ಕಾಗಿ ಕೇಂದ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಮಂಡಿಸಿದ ಮಸೂದೆಗಳನ್ನು ಟಿಆರ್‌ಎಸ್ ಬೆಂಬಲಿಸುತ್ತದೆ ಎಂದು ಹೇಳಿದರು.

ಗುರುವಾರ ಸಂಜೆ, ನಾರಾಯಣಪೇಟೆ ಜಿಲ್ಲೆಯ ಗುನ್‌ಮುಕ್ಲಾ, ಮರಿಕಲ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಮೂರು ರೈತ ವಿರೋಧಿ ಕಾನೂನುಗಳಿಗೆ ಟಿಆರ್‌ಎಸ್ ಸಂಪೂರ್ಣ ಬೆಂಬಲವನ್ನು ನೀಡಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಕಾನೂನು ವಿರುದ್ಧ ನಿರ್ಣಯವನ್ನು ತಂದಿತು ಆದರೆ, ಟಿಆರ್‌ಎಸ್ ಅದನ್ನು ಬೆಂಬಲಿಸಲಿಲ್ಲ ಎಂದು ಹೇಳಿದರು.

ʼನಮಗೆ ಬಿಜೆಪಿ ಮತ್ತು ಟಿಆರ್‌ಎಸ್ ಒಂದೇ ಎಂದು ನಾನು ಇಲ್ಲಿ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, ಅವು ಒಂದೇ ನಾಣ್ಯದ ಎರಡು ಭಾಗಗಳು. ಅವರು ಒಟ್ಟಿಗೆ ಕೆಲಸ ಮಾಡುತ್ತಾರೆ. ನೀವು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರು ಪರಸ್ಪರ ಬೆಂಬಲಿಸುತ್ತಾರೆ. ಟಿಆರ್‌ಎಸ್ ಬಿಜೆಪಿಯವರನ್ನು ದೆಹಲಿಯಲ್ಲಿ ಬೆಂಬಲಿಸುತ್ತದೆ. ಮತ್ತು ತೆಲಂಗಾಣದಲ್ಲಿ ಬಿಜೆಪಿ ಟಿಆರ್‌ಎಸ್ ಬೆಂಬಲಿಸುತ್ತದೆ ಎಂದು ಹೇಳಿದರು.

ಟಿಆರ್‌ಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಣದ ರಾಜಕೀಯದಲ್ಲಿ ತೊಡಗಿವೆ, ಅಧಿಕಾರ ಹಿಡಿಯಲು ಮತ್ತು ಸರ್ಕಾರಗಳನ್ನು ಉರುಳಿಸಲು ಕುದುರೆ ವ್ಯಾಪಾರ ಮಾಡುತ್ತಿವೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಟಿಆರ್‌ಎಸ್ ಸರ್ಕಾರ ಬಹುಶಃ ದೇಶದ ಅತ್ಯಂತ ಭ್ರಷ್ಟ ಸರ್ಕಾರ ಎಂದು ಬಣ್ಣಿಸಿದ ರಾಹುಲ್ ಗಾಂಧಿ, ₹ 15,000 ಕೋಟಿ ಆಪಾದಿತ ‘ಮಿಯಾಪುರ್ ಭೂ ಹಗರಣʼ ಮತ್ತು ತೆಲಂಗಾಣದ ಕಾಳೇಶ್ವರಂ ನೀರಾವರಿ ಯೋಜನೆಯನ್ನು ಉಲ್ಲೇಖಿಸಿದರು.

ಟಿಆರ್‌ಎಸ್ ಮತ್ತು ಬಿಜೆಪಿ ರಾಜಕೀಯ ಪಕ್ಷಗಳಲ್ಲ, ಆದರೆ ಜನರಿಗಾಗಿ ಕೆಲಸ ಮಾಡದೆ ಸಾರ್ವಜನಿಕ ಹಣವನ್ನು ಲೂಟಿ ಮಾಡುವ ಉದ್ದೇಶ ಹೊಂದಿರುವ ವ್ಯಾಪಾರ ಸಂಸ್ಥೆಗಳು ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೋಟು ಅಮಾನ್ಯೀಕರಣವು ದೇಶದ ಆರ್ಥಿಕತೆಯ ಬೆನ್ನೆಲುಬನ್ನು ಮುರಿದಿದೆ. ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಉದ್ಯೋಗ ಸೃಷ್ಟಿಯಾಗಿದೆ. ಆದರೆ 2016 ರ ನೋಟು ನಿಷೇಧ ಮತ್ತು ಜಿಎಸ್‌ಟಿ ಆಡಳಿತವು ಲಕ್ಷಾಂತರ ವ್ಯವಹಾರಗಳನ್ನು ಮುಚ್ಚಿದೆ ಎಂದು ಹೇಳಿದರು.

ದೇಶ ಅಥವಾ ತೆಲಂಗಾಣದಲ್ಲಿ  ಉದ್ಯೊಗ ನೀಡಲು ಬಯಸಿದರೂ ಅದು ಸಾಧ್ಯವಾಗದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ ಎಂದರು.

ಅಡುಗೆ ಅನಿಲದ ಬೆಲೆ ಏರಿಕೆ ಬಗ್ಗೆ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷರು, ಯುಪಿಎ ಆಡಳಿತದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 400 ಇದ್ದಾಗ ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರು ದೂರು ನೀಡುತ್ತಿದ್ದರು, ಆದರೆ ಅವರು ಈಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

ದೇಶದಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆಯ ಸಮಸ್ಯೆಗಳನ್ನು ಎತ್ತುವ ಉದ್ದೇಶದಿಂದ ಯಾತ್ರೆಯನ್ನು ಪ್ರಾರಂಭಿಸಲಾಗಿದೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

ಯಾತ್ರೆಯ ಭಾಗವಾಗಿ 3,500 ಕಿ.ಮೀ ನಡೆಯುವುದು ಸುಲಭವಲ್ಲದಿದ್ದರೂ, ಜನರು ತೋರುವ ಪ್ರೀತಿ ಮತ್ತು ವಾತ್ಸಲ್ಯವು ಅದನ್ನು ಸಾಧ್ಯವಾಗಿಸಿತು ಎಂದು ಹೇಳಿದರು.

ಬಿಜೆಪಿಗೆ ಭ್ರಷ್ಟ ಹಣದ ಮದವೇರಿದೆ: ಕಾಂಗ್ರೆಸ್
ಬೆಂಗಳೂರು : ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಕುದುರೆ ವ್ಯಾಪಾರವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ  ವಿರುದ್ದ ರಾಜ್ಯ ಕಾಂಗ್ರೆಸ್‌ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ʼತೆಲಂಗಾಣದಲ್ಲಿ ಬಿಜೆಪಿಯ ಕುದುರೆ ವ್ಯಾಪಾರದ ಬಣ್ಣ ಬಯಲಾಗಿದೆ. ಬಿಜೆಪಿಗೆ ಈಗ ಭ್ರಷ್ಟ ಹಣದ ಮದವೇರಿದೆ, ಪ್ರಜಾಪ್ರಭುತ್ವವನ್ನೇ ಖರೀದಿಸಲು ಹೊರಟಿದೆ. ತೆಲಂಗಾಣದ ಆಪರೇಷನ್ ಕಮಲದ ವ್ಯವಹಾರದಲ್ಲಿ ಶಾಸಕರ ಮುಖಂಡತ್ವ ವಹಿಸುವವರಿಗೆ ₹100 ಕೋಟಿ. ಬರುವ ಪ್ರತಿ ಶಾಸಕರಿಗೆ ₹50 ಕೋಟಿ. ಈ ಮೊತ್ತದ ಹಣ ಬಂದಿದ್ದು ಹೇಗೆ?ʼ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ʼಕರ್ನಾಟಕದಲ್ಲಿ ಶುರುವಾದ ಆಪರೇಷನ್ ಕಮಲ ಎಂಬ ಸೋಂಕು ದೇಶದಾದ್ಯಂತ ಹರಡಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ. ದೇಶಾದ್ಯಂತ ಶಾಸಕರನ್ನು ಖರೀದಿಸಲು ಏಳರಿಂದ ಎಂಟು ಸಾವಿರ ಕೋಟಿ ಖರ್ಚು ಮಾಡಿರುವ ಆರೋಪ ಬಿಜೆಪಿ ಮೇಲಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದ ನಂತರ ಈಗ ತೆಲಂಗಾಣಕ್ಕೆ ಭ್ರಷ್ಟ ಹಣ ತಲುಪಿದೆʼ ಎಂದು ಹೇಳಿದೆ.

ʼಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಸಿಕ್ಕವರ ತುಳಿಯುತಲಿತ್ತು ಎಂಬ ಬೇಂದ್ರೆಯವರ ಸಾಲಿನಂತೆ ಭ್ರಷ್ಟ ಕಾಂಚಾಣದಿಂದ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ಹಾಕಿಕೊಂಡು ತುಳಿಯುತ್ತಿದೆ. ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿರುವ ಆಪರೇಷನ್ ಕಮಲ ಎಂಬ ಸೋಂಕು ಕರೋನಾಗಿಂತಲೂ ಅಪಾಯಕಾರಿʼ ಎಂದು ಬಿಜೆಪಿ ವಿರುದ್ದ ಕಿಡಿಕಾರಿದೆ.

ಆಪರೇಶನ್‌ ಕಮಲ : TRS ಶಾಸಕರನ್ನು ಖರೀದಿಸುವ ಯತ್ನ : ಮೂವರ ಬಂಧನ
ತೆಲಂಗಾಣ: ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ಖರೀದಿಸಲು ಆಪರೇಶನ್‌ ಕಮಲ ನಡೆಸುತ್ತಿರುವ ಆರೋಪದಡಿ ಹೈದರಾಬಾದ್‌ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರನ್ನು ಬಂಧಿಸುದ್ದಾರೆ.

ಗುವಾಲ ಬಾಲರಾಜ್‌, ಭೀರಮ್‌ ಹರ್ಷವರ್ಧನ್‌ ರೆಡ್ಡಿ, ಪೈಲೆಟ್‌ ಹರ್ಷವರ್ಧನ್‌ ರೆಡ್ಡಿ ಮತ್ತು ರೇಗಾಕಾಂತ್‌ ರಾವ್‌ ಈ  ನಾಲ್ವರನ್ನು ಬಿಜೆಪಿ ಪಕ್ಷ ಸೇರಿಕೊಳ್ಳುವ ನೂರು ಕೋಟಿ ಆಫರ್‌ ಕೊಟ್ಟು ಖರೀದಿಸುವ ಪ್ರಯತ್ನ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಪೊಲೀಸರು ನೇರದಾಳಿ ಮಾಡಿದ್ದಾರೆ. ಹರಿಯಾಣ, ತಿರುಪತಿ ಮೂಲದ ಸ್ವಾಮಿಗಳು ಮತ್ತು ಹೈದರಾಬಾದ್‌ ಮೂಲದ ಒಬ್ಬ ಹೋಟೆಲ್‌ನ ಉದ್ಯಮಿ ಆಪರೇಶನ್‌ ಕಮಲ ನಡೆಸುತ್ತಿದ್ದು ದೆಹಲಿಯಿಂದ 15 ಕೋಟಿ ಹಣ ತಂದು ನಾಲ್ವರನ್ನು ಬಿಜೆಪಿಗೆ ಖರೀದಿಸುವ ಪ್ರಯತ್ನ ಮಾಡಿದ್ದಾರೆ.

ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಕುದುರೆ ವ್ಯಾಪಾರವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.  ಪೋಲಿಸರು ಆಪರೇಶನ್‌ ಕಮಲ ಮಾತುಕತೆ ನಡೆಸುತ್ತಿರುವಾಗಲೇ ಪೊಲೀಸರು ಹೈದರಾಬಾದ್‌ ಫಾರ್ಮ್‌ಹೌಸ್‌  ನೇರ ದಾಳಿ ಮಾಡಿದ್ದು, ಮೂವರನ್ನು ಬಂಧಿಸಿ 15 ಕೋಟಿ ರೂಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಹತಾಶ ಬಿಜೆಪಿಯಿಂದ ತೆಲಂಗಾಣದಲ್ಲಿ ಆಪರೇಷನ್ ಕಮಲ! ಸಿಕ್ಕಿಬಿದ್ದ ಖದೀಮರು
ತೆಲಂಗಾಣದಲ್ಲಿ ಸಾಲು ಸಾಲು ಬಿಜೆಪಿ ನಾಯಕರು ಪಕ್ಷ ಬಿಟ್ಟು ಬೇರೆ ಪಕ್ಷಗಳನ್ನು ಸೇರುತ್ತಿರುವ ಹಿನ್ನೆಲೆಯಲ್ಲಿ ಹತಾಶೆಗೆ ಬಿದ್ದ ತೆಲಂಗಾಣ ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಕೈ ಇಟ್ಟು ಸಿಕ್ಕಿಹಾಕಿಕೊಂಡಿದೆ. ಅಕ್ಟೋಬರ್26 ರ ಬುಧವಾರ ಹೈದರಾಬಾದ್ ನ ಫಾರ್ಮ್ ಹೌಸ್ ಒಂದರಲ್ಲಿ ಶಾಸಕರ ಖರೀದಿಗೆಂದು ತಂದಿದ್ದಾರೆ ಎನ್ನಲಾದ 15 ಕೋಟಿ ಹಣದ ಜೊತೆಗೇ ಬಿಜೆಪಿ ನಾಯಕರನ್ನು ತೆಲಂಗಾಣ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

ಪಕ್ಷ ತೊರೆದ ತೆಲಂಗಾಣ ಬಿಜೆಪಿ ಪ್ರಮುಖ ನಾಯಕ :

ಬಿಜೆಪಿ ಪಕ್ಷದ ಹತಾಶ ಸ್ಥಿತಿಗೆ ಪ್ರಮುಖ ಕಾರಣ ಹುಡುಕುತ್ತಾ ಹೋದರೆ, ಅಕ್ಟೋಬರ್ 26 ರಂದು ತೆಲಂಗಾಣದ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಆನಂದ ಭಾಸ್ಕರ್ ರಾಪೋಲು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ತಮ್ಮನ್ನು ಕಡೆಗಣಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಠಾಗೆ ಬರೆದ ಪತ್ರದಲ್ಲಿ  “ಸಾಮಾಜಿಕ ರಕ್ಷಣೆ, ಸಾಮಾಜಿಕ ನ್ಯಾಯ, ಮತ್ತು ಸಾಮಾಜಿಕ ಸಬಲೀಕರಣವು ಬಿಜೆಪಿ ಪಕ್ಷದ ದೃಷ್ಟಿಗೆ ದೂರವಾಗಿದೆ. ಜಾತಿ ಆಧಾರಿತ ಜನಗಣತಿಗೆ ಸಹ, ಪಕ್ಷ ಮತ್ತು ಕೇಂದ್ರ ಸರ್ಕಾರವು ವಿರುದ್ಧವಾಗಿದೆ. ಆಗಿನಿಂದ ನನಗೆ ಭಯವಾಗಿದೆ. ಪ್ರಾದೇಶಿಕ ಅಸ್ಮಿತೆ ಮತ್ತು ಪ್ರಾದೇಶಿಕ ಭಾಷಾ ಭಾವನೆಗಳು ತೆಲಂಗಾಣ ಪ್ರತಿಬಿಂಬವಾದ ಕಾರಣದಿಂದ ಬಿಜೆಪಿ ಪಕ್ಷದ ಸಮರ್ಥನೆ ಮಾಡಲು ಇದು ಖಂಡಿತಾ ಸಕಾಲವಲ್ಲ. ಬಿಜೆಪಿ ಪಕ್ಷ ಏಕ ಭಾಷೆಯ ಪ್ರಾಬಲ್ಯವನ್ನು ಪ್ರೋತ್ಸಾಹಿಸಿದೆ” ಎಂದು ಆನಂದ ಭಾಸ್ಕರ್ ರಾಪೋಲು ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಆಪರೇಷನ್ ಕಮಲಕ್ಕೆ ಸ್ಕೆಚ್ ; ಸಿಕ್ಕಿ ಬಿದ್ದ ಖದೀಮರು
ಬಿಜೆಪಿ ನಾಯಕ ಆನಂದ ಭಾಸ್ಕರ್ ರಾಪೋಲು ಪ್ರಾದೇಶಿಕ ಅಸ್ಮಿತೆ, ಏಕಭಾಷೆ ಹೇರಿಕೆ ಮತ್ತು ಕೆಲವು ಪ್ರಮುಖ ಕಾರಣಗಳಿಟ್ಟು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣದಲ್ಲಿ ಪ್ರಮುಖ ನಾಯಕರೊಬ್ಬರನ್ನು ಕಳೆದುಕೊಳ್ಳುವ ಮುನ್ಸೂಚನೆ ಇದ್ದ ಬಿಜೆಪಿ, “ಜಾಗೃತಗೊಂಡು” TRS(ಭಾರತ ರಾಷ್ಟ್ರ ಸಮಿತಿ) ಪಕ್ಷದ ಶಾಸಕರ ‘ಆಪರೇಷನ್ ಕಮಲ’ಕ್ಕೆ ಮುಂದಾಗಿದೆ. ತೆಲಂಗಾಣದ ಸೈಬರಾಬಾದ್  ಪೊಲೀಸರು ಅಝಿಜ್ ನಗರದ ಫಾರ್ಮ್ ಹೌಸ್ ಒಂದರ ಮೇಲೆ‌ ದಾಳಿ ಮಾಡಿದ್ದು, ಬರೋಬ್ಬರಿ 15 ಕೋಟಿ ರೂ. ಹಣ ಮತ್ತು ಹಣದ ವಾರಸುದಾರರು ಎನ್ನಲಾದ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಮೂವರೂ ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಎನ್ನಲಾಗಿದೆ.

Two Swami jee and one hotelier of #Hyderabad were detained by Cyberabad who were trying to buy #TRS MLAs. Pink party legislators only tipped off yeh police about the ‘deal’. #TRSVsBJP #Telangana https://t.co/46G1xEPP4o pic.twitter.com/5QbsA2MXl9
— Ashish (@KP_Aashish) October 26, 2022

ಬಂಧಿತ ಆರೋಪಿಗಳು ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸಿದ್ದಾರೆ. ಮುಖ್ಯವಾದ ವಿಚಾರ ಎಂದರೆ ಸೆರೆ ಸಿಕ್ಕ ಆರೋಪಿಗಳು ಇದ್ದ ಫಾರಂ ಹೌಸ್ ಶಾಸಕ ಪೈಲಟ್ ರೋಹಿತ್‌ ರೆಡ್ಡಿಗೆ ಸೇರಿದ್ದು, ಶಾಸಕ ರೋಹಿತ್‌ ರೆಡ್ಡಿಯನ್ನೂ ಖರೀದಿಸಲು ಯತ್ನಿಸಲಾಗಿದೆಯಂತೆ. ಅಲ್ಲದೇ TRS ಶಾಸಕರಾದ ಹರ್ಷವರ್ಧನ್‌ ರೆಡ್ಡಿ, ರೇಗ ಕಾಂತಾರಾವ್‌, ಗುವ್ವಲ ಬಾಲರಾಜ್‌ರನ್ನು ಖರೀದಿಸುವ ಯೋಜನೆ ಕೂಡ ಇತ್ತು ಎನ್ನಲಾಗಿದೆ. ಜೊತೆಗೆ ಒಬ್ಬೊಬ್ಬ ಶಾಸಕರಿಗೂ ತಲಾ 100 ಕೋಟಿ ರೂ. ಆಫರ್ ನೀಡಲಾಗಿದೆ ಎನ್ನುವ ಆರೋಪ ಕೂಡಾ ಕೇಳಿಬಂದಿದೆ.

This is a conspiracy against KCR ji's Government by BJP's big leaders 👇🏾#TelanganaNotForSale pic.twitter.com/8x9tPn1TM9
— krishanKTRS (@krishanKTRS) October 26, 2022

ತನ್ನದೇ ಪಕ್ಷದಲ್ಲಿ ನಾಯಕರನ್ನು ಸೃಷ್ಟಿಸಿಕೊಳ್ಳಲಾಗದ ಬಿಜೆಪಿ, ಇತರೆ ಪಕ್ಷದ ನಾಯಕರಿಗೆ ಹಣದ ಆಮಿಷ ಒಡ್ಡಿ ‘ಆಪರೇಷನ್ ಕಮಲ’ದ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಡೆಗೆ ತೆಲಂಗಾಣ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಾಲತಾಣಗಳಲ್ಲಿ ಈಗಾಗಲೇ #TelanganaNotForSale ಅಭಿಯಾನ ಶುರುವಾಗಿದ್ದು, TRS (ಭಾರತ ರಾಷ್ಟ್ರ ಸಮಿತಿ) ಪಕ್ಷದ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಹೊರತುಪಡಿಸಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನೇ ಸ್ಥಾಪಿಸಿಲ್ಲ. ಆಂದ್ರ ಮತ್ತು ತೆಲಂಗಾಣದಲ್ಲಿ ಒಂದೊಂದಾಗಿ ಬಿಜೆಪಿ ಪಕ್ಷದಿಂದ ಪ್ರಮುಖ ನಾಯಕರು ಶಾಸಕರನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲೂ ರಾಜಕೀಯ ಅಸ್ತಿರತೆ ಇದ್ದು, ಅಲ್ಲಿನ ಪ್ರಮುಖ ಪಕ್ಷ ಶಿವಸೇನೆಯೊಂದಿಗಿನ ವೈರತ್ವ ದಿನೇ ದಿನೇ ಹೆಚ್ಚಾಗುತ್ತಿದೆ. ಏಕನಾಥ ಶಿಂಧೆ ನೇತೃತ್ವದಲ್ಲಿ ಸರ್ಕಾರ ರಚಿಸಿದ ಬಿಜೆಪಿ ಬಗ್ಗೆ ಶಿವಸೇನೆಗೆ ಅಸಮಾಧಾನವಿದೆ. ಹಾಗಾಗಿ ಸಧ್ಯಕ್ಕಂತೂ ಶಿವಸೇನೆಯೊಂದಿಗೆ ಬಿಜೆಪಿ ಸೇರುವ ಮಾತೇ ಇಲ್ಲ. ಇನ್ನು ಸಮೀಕ್ಷೆ ಮತ್ತು ಬಿಜೆಪಿ ಮೇಲಿನ ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳೂ ಕಂಡುಬಂದಿದೆ. ಹಾಗೊಂದು ವೇಳೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ಆಗದೇ ಹೋದರೆ, ಮುಂದಿನ ದಿನಗಳಲ್ಲಿ ಇಡೀ ದಕ್ಷಿಣ ಭಾರತ ಬಿಜೆಪಿ ಮುಕ್ತ ಪ್ರದೇಶವಾಗಲಿದೆ.

ಕಳೆದ 2019 ರಿಂದ ಬಿಜೆಪಿಯು ತೆಲಂಗಾಣದಲ್ಲಿ “ಆಪರೇಷನ್ ಕಮಲ” ವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಪಕ್ಷವು ಇನ್ನೂ ಬಲವನ್ನು ಕಂಡುಕೊಳ್ಳದ ಮತ್ತೊಂದು ದಕ್ಷಿಣ ರಾಜ್ಯವಾಗಿದೆ. ಈ ವರ್ಷದ ಆರಂಭದಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮತ್ತು ಬೆಂಬಲಿಗರ ನೇತೃತ್ವದಲ್ಲಿ ಸರ್ಕಾರ ರಚಿಸಿದಷ್ಟೇ ಸಲೀಸಾಗಿ ಎಲ್ಲಾ ರಾಜ್ಯಗಳಲ್ಲೂ ಸರ್ಕಾರ ರಚಿಸಬಹುದು ಎಂಬ ಬಿಜೆಪಿ ಕನಸಿಗೆ ತಣ್ಣೀರು ಎರಚಿದಂತಾಗಿದೆ. ತೆಲಂಗಾಣದ TRS ಶಾಸಕರ ಕಡೆಯಿಂದಲೇ ಬಂದ ಮಾಹಿತಿಯಂತೆ ಒಬ್ಬೊಬ್ಬ ಶಾಸಕರಿಗೆ 100 ಕೋಟಿಯ ಆಮಿಷ ಎಂದರೆ ಸಾಮಾನ್ಯ ಮಾತಲ್ಲ. ಆ ಮಟ್ಟಿಗೆ ಬಿಜೆಪಿ ಇತರೆ ಪಕ್ಷದ ಶಾಸಕರ ಕೊಳ್ಳಲು ಸಾವಿರಾರು ಕೋಟಿ ವ್ಯಯಕ್ಕೂ ಸಿದ್ದವಾಗಿದೆ ಎಂದರೆ ಬಿಜೆಪಿ ತನ್ನೊಳಗೆ ಅದೆಷ್ಟು ಭ್ರಷ್ಟ ಹಣ ಇಟ್ಟುಕೊಂಡಿರಬಹುದು ಎಂಬುದು ಸಧ್ಯದ ಪ್ರಶ್ನೆ.

ಟಿಆರ್‌ಎಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಭಾರತ್ ರಾಷ್ಟ್ರ ಸಮಿತಿಯೊಂದಿಗೆ ವಿಲೀನ
ರಾಷ್ಟ್ರೀಯ ಪಕ್ಷ ಘೋಷಣೆ ಮಾಡಲು ಹೊರಟಿರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಮುಖ್ಯಸ್ಥ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಆಹ್ವಾನದ ಮೇರೆಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲು ಕರ್ನಾಟಕದಿಂದ ಜೆಡಿಎಸ್ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಮುಖ ಮುಖಂಡರ ಜೊತೆಗೂಡಿ ಹೈದರಾಬಾದ್ ನ ತೆಲಂಗಾಣ ಭವನಕ್ಕೆ ಭೇಟಿ ನೀಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಬುಧವಾರ ಮಧ್ಯಾಹ್ನ 1:19 ಕ್ಕೆ ಪಕ್ಷದ ಮುಖಂಡರು, ಸಚಿವರು, ಸಂಸದರು, ಶಾಸಕರು, ಎಂಎಲ್‌ಸಿಗಳು ಮತ್ತು ಜಿಲ್ಲಾ ಮಟ್ಟದ ಸಂಯೋಜಕರ ಸಮಾವೇಶದಲ್ಲಿ ರಾಷ್ಟ್ರೀಯ ಪಕ್ಷ ‘ಭಾರತ್ ರಾಷ್ಟ್ರ ಸಮಿತಿ’ ಪಕ್ಷವನ್ನು ಘೋಷಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ಪಕ್ಷದ ಪ್ರಧಾನ ಕಛೇರಿ ತೆಲಂಗಾಣ ಭವನದಲ್ಲಿ ಭಾರತದ ವಿವಿಧ ಪ್ರಾದೇಶಿಕ ಪಕ್ಷಗಳ ಪ್ರಮುಖ ಮುಖಂಡರನ್ನು ಈ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.

ಈ ಸಂದರ್ಭದಲ್ಲಿ, 280 ಕ್ಕೂ ಹೆಚ್ಚು TRS ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್‌ಎಸ್ ಅನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಯೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದರು. ಪಕ್ಷದ ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ ಶೀಘ್ರದಲ್ಲೇ ತಮ್ಮ ಭವಿಷ್ಯದ ಯೋಜನೆಗಳು ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅವರು ವಹಿಸಲು ಉದ್ದೇಶಿಸಿರುವ ಪಾತ್ರದ ಬಗ್ಗೆ ಮಾಹಿತಿ ತಿಳಿಸಲಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ತೃತೀಯ ರಂಗದ ರಚನೆ, ಮಹಾಘಟಬಂಧನ್ ಬಗ್ಗೆ ಹೆಚ್ಚು ಚರ್ಚಿತವಾಗುತ್ತಿರುವ ಈ ಸಂದರ್ಭದಲ್ಲಿ ಹೊಸ ರಾಷ್ಟ್ರೀಯ ಪಕ್ಷ ಭಾರತ್ ರಾಷ್ಟ್ರ ಸಮಿತಿ ರಚನೆ ಹೆಚ್ಚು ಚರ್ಚಿತವಾಗುತ್ತಿದೆ. ಇದರ ಜೊತೆಗೆ ಕರ್ನಾಟಕ ಹಿನ್ನಲೆಯ ಜೆಡಿಎಸ್ ಕೂಡಾ ಕೆಸಿಆರ್ ಜೊತೆ ಕೈ ಜೋಡಿಸಿರುವುದು ಮುಂದಿನ ದಿನಗಳಲ್ಲಿ ಜೆಡಿಎಸ್ ವಿಲೀನದ ಬಗ್ಗೆಯೂ ಪಕ್ಷದ ವಲಯದಲ್ಲಿ ಅನುಮಾನ ಸೃಷ್ಟಿಯಾಗಿದೆ