trump – Peepal Media

ಅಮೇರಿಕ ಚುನಾವಣೆ: ಪತ್ನಿ ಬೆಂಬಲಿಸಿ ಹೇಳಿಕೆ ನೀಡಿದ ಕಮಲಾ ಹ್ಯಾರಿಸ್‌ ಪತಿ
ಚಿಕಾಗೊ: ಕಮಲಾ ಹ್ಯಾರಿಸ್‌ ಶ್ರೇಷ್ಠ ಅಧ್ಯಕ್ಷೆಯಾಗುತ್ತಾರೆ, ಜತೆಗೆ ಇಡೀ ಅಮೆರಿಕ ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ಕಮಲಾ ಪತಿ ಡೌಗ್ಲಾಸ್ ಎಮ್ಹಾಫ್‌ ಹೇಳಿದ್ದಾರೆ.

ಮಂಗಳವಾರ ರಾತ್ರಿ ಡೆಮಾಕ್ರೆಟಿಕ್‌ ನ್ಯಾಷನಲ್‌ ಕನ್ವೆಷನ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಡೌಗ್ಲಾಸ್, ‘ ಕುಟುಂಬಕ್ಕಾಗಿ ಕಮಲಾ ಎಲ್ಲವನ್ನೂ ಮಾಡಿದ್ದಾರೆ, ಈಗ ದೇಶಕ್ಕೆ ಅವರ ಅಗತ್ಯವಿದೆ, ನಮಗೆ ತಿಳಿದಿರುವ ಕಮಲಾ ನಿಮ್ಮೆದುರು ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕತ್ವವನ್ನು ನಿಭಾಯಿಸಲು ಅವರು ಸಿದ್ಧರಿದ್ದಾರೆ’ ಎಂದರು.

‘ಕಮಲಾ ಉತ್ತಮ ಅಧ್ಯಕ್ಷೆಯಾಗಲಿದ್ದಾರೆ. ದೇಶವೇ ಹೆಮ್ಮೆಪಡುವಂತಹ ನಾಯಕತ್ವವಹಿಸಲಿದ್ದಾರೆ ಎನ್ನುವ ಭರವಸೆಯಿದೆ. ದೇಶಕ್ಕಿರುವ ಬೆದರಿಕೆಯ ವಿರುದ್ಧ ಧ್ವನಿಯೆತ್ತಲಿದ್ದಾರೆ. ಜನರು ಉತ್ತಮವಾಗಿರುವುದನ್ನು ಕಾಣಲು ಅವರು ಬಯಸುತ್ತಾರೆ. ಆದರೆ ಅನ್ಯಾಯವಾಗಿ ನಡೆಸಿಕೊಂಡಾಗ ದ್ವೇಷಿಸುತ್ತಾರೆ. ಅವರ ಸಹಾನುಭೂತಿಯೇ ಅವರ ಶಕ್ತಿ’ ಎಂದು ಪತ್ನಿ ಕಮಲಾ ಬಗ್ಗೆ ಬಣ್ಣಿಸಿದರು.

ಅಮೆರಿಕದಲ್ಲಿ ನ.5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್‌, ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸ್ಪರ್ಧಿಸಿದ್ದಾರೆ.

ಅಮೆರಿಕ: ಚುನಾವಣೆ ಪ್ರತಿಸ್ಪರ್ಧಿಗಳಾದ ಕಮಲಾ -ಟ್ರಂಪ್ ಸೆ.4ರಂದು ಟಿವಿ ಚರ್ಚೆಯೊಂದರಲ್ಲಿ ಮುಖಾಮುಖಿ
ವಾಷಿಂಗ್ಟನ್‌: ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರು ಸೆಪ್ಟೆಂಬರ್‌ 4ರಂದು ‘ಫಾಕ್ಸ್‌ ನ್ಯೂಸ್‌’ ಸುದ್ದಿಸಂಸ್ಥೆಯ ಚರ್ಚಾ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಲಿದ್ದಾರೆ.

‘ಸೆಪ್ಟೆಂಬರ್ 4ರಂದು ಕಮಲಾ ಹ್ಯಾರಿಸ್‌ ಅವರಿಗೆ ಯಾವುದೇ ಕಾರಣಕ್ಕೂ ಚರ್ಚೆ ನಡೆಸಲು ಇಷ್ಟವಿಲ್ಲದಿದ್ದರೆ ಅಥವಾ ಸಾಧ್ಯವಾಗದಿದ್ದರೆ ತಿಳಿಸಲಿ, ಅವರು ಬರಲಿ ಬಿಡಲಿ, ನಾನು ಆದೇ ದಿನ ಸಂಜೆ ‘ಫಾಕ್ಸ್‌ ನ್ಯೂಸ್‌’ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಅಧಿಕೃತವಾಗಿ ತಾನು ಆಕಾಂಕ್ಷಿ ಎಂದು ಪ್ರಕಟಿಸಿದ್ದರು. ಇದೀಗ ಕಮಲಾ ಅಭ್ಯರ್ಥಿ ಎಂದು ಪಕ್ಷ ಅಧಿಕೃತವಾಗಿ ಘೋಷಿಸಿದೆ.

ಈಚೆಗೆ ಕಮಲಾ ಹ್ಯಾರಿಸ್ ಅವರ ವಿರುದ್ಧ ಡೊನಾಲ್ಡ್ ಟ್ರಂಪ್ ಜನಾಂಗೀಯ ಮಾತಿನ ದಾಳಿ ನಡೆಸಿದ್ದರು. ‘ಕಮಲಾ ಹ್ಯಾರಿಸ್ ಕಪ್ಪು ವರ್ಣೀಯರೋ ಅಥವಾ ಭಾರತೀಯರೋ’ ಎಂದು ಟ್ರಂಪ್ ಪ್ರಶ್ನಿಸಿದ್ದರು.

ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಗಲು ಬಯಸುವವರೆಗೆ ಭಾರತ–ಅಮೆರಿಕ ಮೂಲದ ಕುರಿತು ಒತ್ತಿ ಹೇಳುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಕಪ್ಪು ವರ್ಣೀಯರೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಷಿಕಾಗೊದಲ್ಲಿ ಕಪ್ಪುವರ್ಣೀಯ ಪತ್ರಿಕೋದ್ಯಮಿಗಳ ರಾಷ್ಟ್ರೀಯ ಸಂಘದ ಸಮ್ಮೇಳನದಲ್ಲಿ ಟ್ರಂಪ್ ವ್ಯಂಗ್ಯವಾಡಿದ್ದರು.

ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 78 ವರ್ಷದ ಡೊನಾಲ್ಡ್ ಟ್ರಂಪ್ ಅವರು 59 ವರ್ಷದ ಕಮಲಾ ಹ್ಯಾರಿಸ್ ಅವರನ್ನು ಎದುರಿಸಲಿದ್ದಾರೆ.

ಜಗನ್ನಾಥ ದೇವರ ಆಶಿರ್ವಾದದಿಂದ ಟ್ರಂಪ್‌ ಜೀವ ಉಳಿದಿದೆ: ಇಸ್ಕಾನ್‌ ಉಪಾಧ್ಯಕ್ಷ
ನವದೆಹಲಿ:  ನ್ಯೂಯಾರ್ಕ್‌ನಲ್ಲಿರುವ ಜಗನ್ನಾಥ ದೇವರ ಆಶಿರ್ವಾದದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರ ಜೀವ ಉಳಿದಿದೆ ಎಂದು ಇಸ್ಕಾನ್‌ನ ಉಪಾಧ್ಯಕ್ಷ ರಾಧಾರಮಣ ದಾಸ್ ಹೇಳಿದ್ದಾರೆ.

ಟ್ರಂಪ್‌ ಮೇಲಿನ ದಾಳಿ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಿಖರವಾಗಿ 48 ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಜಗನ್ನಾಥ ರಥಯಾತ್ರೆ ಆಯೋಜಿಸಲು ದೇವಸ್ಥಾನದ ಕಮೀಟಿಗೆ ಸಹಾಯ ಮಾಡಿದ್ದರು. ಇಂದು ಇಡೀ ಜಗತ್ತು ಮತ್ತೆ ಜಗನ್ನಾಥ ರಥಯಾತ್ರೆ ಉತ್ಸವವನ್ನು ಆಚರಿಸುತ್ತಿರುವಾಗ ಟ್ರಂಪ್ ದಾಳಿಗೆ ಒಳಗಾಗಿದ್ದಾರೆ. ಆದರೆ, ಜಗನ್ನಾಥ ದೇವರ ಕೃಪೆಯಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ’ ಎಂದು ದಾಸ್‌ ಹೇಳಿದ್ದಾರೆ.

1976ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಜಗನ್ನಾಥ ದೇವರ ಮೊದಲ ರಥಯಾತ್ರೆ ಸಂದರ್ಭದಲ್ಲಿ ಮೆರವಣಿಗೆಗೆ ಅನುಮತಿ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಿರುವ ದಾಸ್‌,.‘ಅಧ್ಯಕ್ಷ ಟ್ರಂಪ್‌ಗೆ ದೇವರು ಒಳಿತು ಮಾಡಲಿ’ ಎಂದಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್‌ ಪಕ್ಷದ ಅಭ್ಯರ್ಥಿಯಾಗಿರುವ ಟ್ರಂಪ್‌ ಅವರ ಮೇಲೆ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಸಂಜೆ ದಾಳಿ ನಡೆದಿತ್ತು. ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ಟ್ರಂಪ್‌ ಅವರತ್ತ ಹಲವು ಬಾರಿ ಗುಂಡು ಹಾರಿಸಲಾಗಿತ್ತು. ಈ ವೇಳೆ ಟ್ರಂಪ್‌ ಅವರ ಕಿವಿಗೆ ಗಾಯವಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಬಂದೂಕುಧಾರಿಯನ್ನು 20 ವರ್ಷದ ಥಾಮಸ್‌ ಮ್ಯಾಥ್ಯೂ ಕ್ರೂಕ್ಸ್‌ ಎಂದು ಗುರುತಿಸಲಾಗಿದೆ.  ದಾಳಿ ಬೆನ್ನಲ್ಲೇ ಅಮೆರಿಕದ ಸೀಕ್ರೆಟ್‌ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಆತನನ್ನು ಹತ್ಯೆಗೈದಿದ್ದಾರೆ.

ನವೆಂಬರ್ 5ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಜೋ ಬೈಡನ್ ಮತ್ತು ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿಯಾಗಿ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ.