tulu – Peepal Media

ಕಾದಂಬರಿ ದಿಗ್ಗಜ, ಶಿಕ್ಷಣ ತಜ್ಞ ಕೆಟಿ ಗಟ್ಟಿ ನಿರ್ಗಮನ
ಮಂಗಳೂರು: ಶಿಕ್ಷಣ ತಜ್ಞ, ಕಾದಂಬರಿ ಲೋಕದ ದಿಗ್ಗಜ, ಭಾಷಾ ತಜ್ಞ ಕೆಟಿ ಗಟ್ಟಿ ಎಂದೇ ಖ್ಯಾತರಾಗಿರುವ ಕೂಡ್ಲು ತಿಮ್ಮಪ್ಪ ಗಟ್ಟಿಯವರು ಇಂದು (ಫೆಬ್ರವರಿ 19, ಸೋಮವಾರ) ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಪತ್ನಿ, ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕದ ಪರಿಸರ ವಿಜ್ಞಾನಿ ಪ್ರಿಯದರ್ಶಿನಿ, ಆಸ್ಟ್ರಿಯಾದಲ್ಲಿ ಮಾನವಶಾಸ್ತ್ರಜ್ಞೆಯಾಗಿರುವ ಆಗಿರುವ ಚಿತ್ ಪ್ರಭಾರನ್ನು ಅಗಲಿದ್ದಾರೆ.

ವಿದ್ಯಾರ್ಥಿಪ್ರಿಯ ಪ್ರಾಧ್ಯಾಪಕರೆನಿಸಿದ ಕೆಟಿ ಗಟ್ಟಿಯವರು 1938 ಜುಲೈ ೨೨ ರಂದು ಕಾಸರಗೋಡು ಸಮೀಪದ ಕೂಡ್ಲುವಿನಲ್ಲಿ ಜನಿಸಿದರು. ತಂದೆ ಧೂಮಪ್ಪ ಗಟ್ಟಿಯವರು ಕೃಷಿಕರೂ, ಯಕ್ಷಗಾನದ ಅಭಿಮಾನಿಗಳೂ ಕೂಡ. ಇವರ ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಹಾಡಬಲ್ಲವರಾಗಿದ್ದರು.

ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಎಂಟನೆಯ ತರಗತಿಯವರೆಗೆ ಕಲಿತು, ಎಸ್‌.ಎಸ್‌.ಎಲ್‌.ಸಿ.ಯಲ್ಲಿ ಉತ್ತೀರ್ಣರಾದ ನಂತರ ಕಾಸರಗೋಡಿನ ಚಳುವಳಿಯಲ್ಲಿ ಬಾಗಿಯಾದರು. ನಂತರ ಪಿಯು ಹಾಗೂ ಬಿಎ ಪದವಿಗಳನ್ನು ಕೇರಳ ವಿಶ್ವವಿದ್ಯಾಲಯದಿಂದ ಪಡೆದರು. ಮಾಯಿಪ್ಪಾಡಿಯ ಸರಕಾರಿ ಬೇಸಿಕ್‌ ಟ್ರೈನಿಂಗ್‌ ಶಾಲೆಯಲ್ಲಿ ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದರು. ತಲಚೇರಿಯ ಸರಕಾರಿ ಟ್ರೈನಿಂಗ್‌ ಕಾಲೇಜಿನಿಂದ ಒಂದು ವರ್ಷದ ಬಿಎಡ್‌ ಪದವಿ ಪಡೆದು, ಕಾಸರಗೋಡಿದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.

ಖಾಸಗಿಯಾಗಿ ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಪಡೆದ ಗಟ್ಟಿಯವರು, 1968ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಯಲ್ಲಿ ಆರು ವರ್ಷಗಳ ಕಾಲ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. ನಂತರ ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲೂ ಅಧ್ಯಾಪಕರಾಗಿ ಸೇವೆಸಲ್ಲಿಸಿದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್‌ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್‌ಫರ್ಡಿನ ಕಾಲೇಜ್‌ ಆಫ್‌ ಪ್ರಿಸೆಪ್ಟರ್ಸ್‌ನಿಂದ ಪಡೆದ ಡಿಪ್ಲೊಮ ಪಡೆದರು.

1957ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ಹತ್ತವರೇ ಪ್ರೇರಣೆಯಾದರು. ಯಕ್ಷಗಾನ ಪ್ರಿಯರಾದ ತಂದೆ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಲಿ (ಮಂಗಳೂರು)ಯೊಡನೆ ಊರೂರು ಸುತ್ತುತ್ತಾ, ಮನೆಗೆ ತರುತ್ತಿದ್ದ ಪುಸ್ತಕಗಳನ್ನು ಕೆಟಿ ಗಟ್ಟಿಯವರು ಓದುತ್ತಿದ್ದರು.

ಇವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ಸುಧಾವಾರ ಪತ್ರಿಕೆಯಲ್ಲಿ 1976ರಲ್ಲಿ ಪ್ರಕಟವಾಯಿತು. ಇದು ಸುಧಾ ವಾರಪತ್ರಿಕೆಯ ಸರ್ಕ್ಯುಲೇಷನ್‌ ಹೆಚ್ಚು ಮಾಡಿತ್ತು. ನಾಲ್ಕು ಮುದ್ರಣಗಳನ್ನೂ ಕಂಡಿತು.

1978ರಲ್ಲಿ ಗಟ್ಟಿಯವರು ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ 2004ರ ವರೆಗೆ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯೊಂದರಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಒಂದೇ ಪತ್ರಿಕೆಯಲ್ಲಿ ಇಷ್ಟು ಕಾದಂಬರಿಗಳನ್ನು ಪ್ರಕಟಿಸಿದ್ದು ಲೇಖಕನಾಗಿ ಕೆಟಿ ಗಟ್ಟಿಯವರ ಸಾಧನೆ.

ಇದಲ್ಲದೆ ತುಷಾರ ಮಾಸ ಪತ್ರಿಕೆಯಲ್ಲಿ ‘ಮನೆ’, ಕಾಮಯಜ್ಞ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರ ಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ 10’, ಕರ್ಮವೀರ ವಾರಪತ್ರಿಕೆಯಲ್ಲಿ ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಮುಂತಾದವುಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದೂ ಸೇರಿ ಬರೆದ ಕಾದಂಬರಿಗಳು ಸುಮಾರು 46.

ಇಥಿಯೋಪಿಯಾದಲ್ಲಿದ್ದಾಗ ಒಮ್ಮೆ ನಡೆದ ಘಟನೆ ಇವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆಗಿಡವನ್ನೂ ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರೆಗೆ ಕಾಡಿದ ಪ್ರಶ್ನೆ: ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ-ನಾನು ಓಡಿಸಿದ್ದು ಸರಿಯಾ? ಅನುಭವಿಸಿದ ಈ ಪ್ರಶ್ನೆಗೆ ಉತ್ತರವಾಗಿ ಬಂದದ್ದೇ ‘ಅರಗಿನ ಅರಮನೆ’ ಕಾದಂಬರಿ.

ಭಾರತಕ್ಕೆ ಮರಳಿ ಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡರು. ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’,‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳನ್ನು ಪ್ರಕಟಿಸಿದರು.

ಶಿಕ್ಷಣ, ಸಾಹಿತ್ಯ, ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ಅನೇಕ ಲೇಖನಗಳನ್ನು ಇವರು ಪ್ರಕಟಿಸಿದ್ದಾರೆ. ‘ಮೂರನೆಯ ಧ್ವನಿ’ (ಸಾಹಿತ್ಯ ಚಿಂತನ), ‘ನಿನ್ನೆ ನಾಳೆಗಳ ನಡುವೆ’ (ಸಾಮಾಜಿಕ ಚಿಂತನ), ‘ನಮ್ಮ ಬದುಕಿನ ಪುಟಗಳು’, ನಮ್ಮೊಳಗಿನ ಆಕಾಶ, ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ (ವೈಚಾರಿಕ ಲೇಖನಗಳ ಕೃತಿಗಳು) ಪ್ರಕಟಗೊಂಡಿವೆ. ‘ಝೇಂಕಾರದ ಹಕ್ಕಿ’ ಎಂಬ ಇವರ ಕವನ ಸಂಕಲನ 1994 ರಲ್ಲಿ, 2001ರಲ್ಲಿ ಇಂಗ್ಲಿಷ್‌ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’ ಪ್ರಕಟವಾಗಿದೆ.

ರಂಗಭೂಮಿಯ ಬಗ್ಗೆ ವಿಶೇಷ ಒಲವಿದ್ದ ಗಟ್ಟಿಯವರು ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಸೇರಿದಂತೆ 18 ನಾಟಕ ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಕೆಲವು ಆಕಾಶವಾಣಿಯಲ್ಲೂ ರೇಡಿಯೋ ನಾಟಕಗಳಾಗಿ ಪ್ರಸಾರವಾಗಿವೆ. ಪ್ರೌಢರಿಗಷ್ಟೇ ಅಲ್ಲದೆ ಮಕ್ಕಳಿಗಾಗಿಯೂ 30 ನಾಟಕಗಳನ್ನು ರಚಿಸಿದ್ದು ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಪಂಜಾಬಿ ಮುಂತಾದ ಭಾಷೆಗಳಿಗೂ ಅನುವಾದಗೊಂಡಿವೆ.

ಗುರುಗಳಾದ ಅಮೃತರು ಇನ್ನಿಲ್ಲ: ಬಿಳಿಮಲೆ ನುಡಿನಮನ
ಕಳೆದ ನವಂಬರ ತಿಂಗಳಲ್ಲಿ ಗುರುಗಳಾದ ಅಮೃತ ಸೋಮೇಶ್ವರರನ್ನು ಅವರ ಮನೆಯಲ್ಲಿ ಕಂಡು ಮಾತಾಡಿಸಿ ಬಂದಿದ್ದೆ. ಹಾಸಿಗೆಯಲ್ಲಿ ಮಲಗಿದ್ದ ಅವರು ನನ್ನ ಕಂಡೊಡನೆ ಮುಗುಳ್ನಕ್ಕು ಕೈಯನ್ನು ಸುಮಾರು ಅರ್ಧ ಗಂಟೆಯವರೆಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನಾವು ಮಾತಾಡುತ್ತಿದ್ದುದಕ್ಕೆಲ್ಲ ಸಣ್ಣದಾಗಿ ಪ್ರತಿಕ್ರಿಯಿಸುತ್ತಿದ್ದರು. ಅಮೃತರೇ ಹಾಗೆ, ತನ್ನ ಸುತ್ತ ನಡೆಯುತ್ತಿದ್ದ ಯಾವುದೇ ಘಟನೆಗಳಿಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಲೇ ಇದ್ದರು. ಇನ್ನು ನಾವದನ್ನು ಕಾಣಲಾರೆವು.

ನಿಜವಾದ ಅರ್ಥದಲ್ಲಿ ಅವರು ನನ್ನ ಗುರುಗಳು. ಹಳಗನ್ನಡ, ನಡುಗನ್ನಡ, ಹೊಸಗನ್ನಡ, ತುಳು ಭಾಷೆ, ಯಕ್ಷಗಾನ, ಹರಿಕತೆ, ನಾಟಕ, ಸಂಘಟನೆ, ಪ್ರೀತಿ, ವಾತ್ಸಲ್ಯ, ಪ್ರೇಮ, ಕಡಲು, ಮೀನು, ಭಗವತಿಗಳು, ಭಾಷಣ, ಪಯಣ, ಕ್ಷೇತ್ರ ಕಾರ್ಯ, ಶೋಷಣೆ, ತಮಾಷೆ.. ಹೀಗೆ ಅವರಿಂದ ಕಲಿತದ್ದು ಅಪಾರ. ಪುತ್ತೂರಿನ ವಿವೇಕಾನಂದ ಕಾಲೇಜಲ್ಲಿ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳಾದ ನಮ್ಮನ್ನು ಅವರು ವಾರಾಂತ್ಯದಲ್ಲಿ ಪುತ್ತೂರಿನಿಂದ ಅವರ ಮನೆಯಿದ್ದ ಕೋಟೆಕಾರಿಗೆ ಕರೆದುಕೊಂಡು ಹೋಗುತ್ತಿದ್ದರು. ಮಧ್ಯಾಹ್ನದ ಊಟ ಅವರ ಮನೆಯಲ್ಲಿ.

ಸಾಯಂಕಾಲ ಅವರೊಂದಿಗೆ ಸೋಮೇಶ್ವರದ ಕಡಲ ತೀರಕ್ಕೆ. ಅಲ್ಲಿ ಕಡಲಿನೊಳಗೆ ಚಾಚಿಯೂ ಚಾಚದಂತೆ ತಲೆ ಎತ್ತಿ ನಿಂತಿರುವ ರುದ್ರಶಿಲೆಯ ಮೇಲೆ ನಮ್ಮ ಚೌಕಟ್ಟುಗಳಿಲ್ಲದ ಪಟ್ಟಾಂಗ. ಅಮೃತರ ಕವನ ಸಂಕಲನಗಳಾದ ವನಮಾಲೆ ಮತ್ತು ಭ್ರಮಣಗಳನ್ನು ನಾವಾಗಲೇ ಓದಿದ್ದು. ಸಣ್ಣ ಕತೆಗಳ ಸಂಕಲನ ಎಲೆಗಿಳಿ ಮತ್ತು ರುದ್ರಶಿಲೆ ಸಾಕ್ಷಿಗಳನ್ನು ನಾವು ಹಲವರು ಓದಿದ್ದು ರುದ್ರ ಶಿಲೆಯ ಮೇಲೆಯೇ. ತರಗತಿಯ ಒಳಗೆ ಸಾಹಿತ್ಯದ ಪಠ್ಯಗಳನ್ನು ಬಗೆದು ತೋರಿಸುವ ಅವರು ಹೊರಗಡೆಗೆ ಜಾನಪದದ ಬಗೆಗೆ ಹೆಚ್ಚು ಒತ್ತು ನೀಡುತ್ತಿದ್ದರು. ಇದರಿಂದಾಗಿ ನಮಗೆ ಸಂಸ್ಕೃತಿಯ ಭಿನ್ನ ಮುಖಗಳ ದರ್ಶನವಾಗುತ್ತಿತ್ತು. ನಾವೆಲ್ಲಾ ತುಳುನಾಡಿನ ನಿವಾಸಿಗಳೇ ಹೌದಾದರೂ ನಮ್ಮ ಕಣ್ಣಿಗೆ ಬೀಳದ ಅನೇಕ ಸಂಗತಿಗಳನ್ನು ಅವರು ಆಗಾಗ ತೆರೆದು ತೋರಿಸುತ್ತಲೇ ಬರುತ್ತಿದ್ದರು.

ಕಲ್ಕುಡ ಪಾಡ್ದನವನ್ನು ಆಧರಿಸಿ ವೀರ ಕಲ್ಕುಡ ಎಂಬ ನಾಟಕವನ್ನು ಅವರು ಬರೆದು, ನಾನು ಅದರಲ್ಲಿ ಪಾತ್ರ ಮಾಡುವಂತೆ ಪ್ರಚೋದಿಸಿದ್ದರು. ಕಾಲೇಜಿನ ವಾರ್ಷಿಕೋತ್ಸವಕ್ಕೆ ತರಬೇತಿ ನೀಡಿ ಯಕ್ಷಗಾನ ಮಾಡಿಸಿದ್ದರು. ಪಂಜೆ ಮಂಗೇಶರಾಯ, ಗೋವಿಂದ ಪೈ, ಕಡೆಂಗೊಡ್ಲು ಶಂಕರ ಭಟ್ಟ, ಸೇಡಿಯಾಪು ಕೃಷ್ಣ ಭಟ್ಟ, ಮುಳಿಯ ತಿಮ್ಮಪ್ಪಯ್ಯ, ಪಾರ್ತಿಸುಬ್ಬ , ಶಿವರಾಮ ಕಾರಂತ, ಮೊದಲಾದವರ ಬಗ್ಗೆ ನನಗೆ ಪ್ರಾಥಮಿಕ ತಿಳಿವಳಿಕೆ ದೊರೆತದ್ದು ಪುತ್ತೂರಿನಲ್ಲಿದ್ದ ಅಮೃತರ ಪುಟ್ಟ ಕೊಠಡಿಯಲ್ಲಿ.

ಪುರುಷೋತ್ತಮ ಬಳಿಮಲೆಯವರ ʼಕಾಗೆ ಮುಟ್ಟಿದ ನೀರುʼ ಕೃತಿಯನ್ನು ಸಂಸಾರ ಸಮೇತ ಸಂಭ್ರಮಿಸುತ್ತಿರುವ ಪ್ರೊ.ಅಮೃತ ಸೋಮೇಶ್ವರ. ʼಇಂಥ ಮನಸ್ಸುಗಳು ಈಗೆಲ್ಲಿ?ʼ – ಪ್ರೊ.ಬಿಳಿಮಲೆ

೧೯೭೦ರ ದಶಕದ ಕೊನೆಯ ಹೊತ್ತಿಗೆ ಯಕ್ಷಗಾನ ಕ್ಷೇತ್ರವು ತನ್ನ ಸಾಧ್ಯತೆಗಳನ್ನೆಲ್ಲಾ ತೀರಿಸಿಕೊಂಡು ಜಡವಾಗುತ್ತಿರುವ ಹೊತ್ತಿಗೆ ಎರಡು ಘಟನೆಗಳು ಒಟ್ಟೊಟ್ಟಾಗಿ ಸಂಭವಿಸಿದವು. ಮೊದಲನೆಯದು ತುಳು ಯಕ್ಷಗಾನಗಳ ಉಗಮ ಮತ್ತು ಎರಡನೆಯದು ಪಾರಂಪರಿಕ ಯಕ್ಷಗಾನಕ್ಕೆ ಮರು ಜೀವ ಕೊಡುವ ಪ್ರಯತ್ನ. ಈ ಎರಡೂ ಘಟನೆಗಳ ಮುಂಚೂಣಿಯಲ್ಲಿ ಅಮೃತ ಸೋಮೇಶ್ವರರು ಇದ್ದರೆಂಬುದು ಗಮನಾರ್ಹ ವಿಚಾರವಾಗಿದೆ. ಕನ್ನಡ ಯಕ್ಷಗಾನವು ತುಳುವಿನ ಕಡೆಗೆ ಹೊರಳಿಕೊಳ್ಳುವ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಅಮೃತರು ಕನ್ನಡದಲ್ಲಿ ಆರಂಭವಾಗಿ ತುಳುವಿನಲ್ಲಿ ಮುಕ್ತಾಯವಾಗುವ ಅಮರ ಶಿಲ್ಪಿ ವೀರ ಕಲ್ಕುಡ ಪ್ರಸಂಗವನ್ನು ಬರೆದರು. ವೈದಿಕ ಪುರಾಣದ ಕತೆಯೊಂದನ್ನು ತುಳು ಸಂಸ್ಕೃತಿಗೆ ಜೋಡಿಸಿದ ಈ ಪ್ರಸಂಗವನ್ನು ಅಗರಿ, ಶೇಣಿ, ಸಾಮಗ, ಮೊದಲಾದ ಅಗಾಧ ಪ್ರತಿಭೆಯ ಕಲಾವಿದರುಗಳಿದ್ದ ಸುರತ್ಕಲ್ ಮೇಳದ ಕಲಾವಿದರು ಅದ್ಭುತವಾಗಿ ಪ್ರದರ್ಶಿಸಿದ್ದರು. ಮುಂದೆ ಅಮೃತರು ಧರ್ಮಸ್ಥಳ ಮೇಳಕ್ಕೆ ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಮಹಾಶೂರ ಭೌಮಾಸುರ, ಮಹಾಕಲಿ ಮಗಧೇಂದ್ರ, ತ್ರಿಪುರ ಮಥನ, ಗಂಗಾವತರಣ, ವಂಶವಾಹಿನಿ, ಮೊದಲಾದ ಅತ್ಯಧ್ಭುತ ಪ್ರಸಂಗಗಳನ್ನು ಬರೆದರು.

ನನ್ನ ಪ್ರಕಾರ ಅದು ಯಕ್ಷಗಾನದ ಸುವರ್ಣಯುಗ. ಈ ಪ್ರಸಂಗಗಳ ವಸ್ತು ಪೌರಾಣಿಕವಾಗಿದ್ದರೂ ಅದು ರಂಗದಲ್ಲಿ ಕಾಣಿಸಿಕೊಂಡಾಗ ಅತ್ಯಾಧುನಿಕವಾದ ಅನುಭವಗಳನ್ನು ಕೊಡುತ್ತಿತ್ತು. ಗಿರೀಶ್ ಕಾರ್ನಾಡರ ನಾಟಕಗಳು ನೀಡುತ್ತಿದ್ದ ರೋಮಾಂಚನವನ್ನು ಕರ್ಣ, ಅಶ್ವಿನಿ ದೇವತೆಗಳು, ಚಾರ್ವಾಕ, ಭೌಮಾಸುರ, ಭಗೀರಥ, ಮಗಧ ಮೊದಲಾದ ಪಾತ್ರಗಳೂ ನೀಡುತ್ತಿದ್ದುವು. ಕಳೆಗುಂದುತ್ತಿದ್ದ ಪೌರಾಣಿಕ ಯಕ್ಷಗಾನಗಳಿಗೆ ಹೊಸ ಜೀವ ಕೊಟ್ಟವರಲ್ಲಿ ಅಮೃತರು ಪ್ರಮುಖರು. ʼ ಅಮೃತರ ಹಾಗೆ ಪದ್ತ ಬರೆದರೆ ನಮಗೆ ಹಾಡಲೂ ಖುಷಿಯಾಗುತ್ತದೆ’ ಎಂದು ಕಡತೋಕರು ಒಮ್ಮೆ ನನ್ನೊಡನೆ ಹೇಳಿದ್ದರು. ಭಾಷೆ, ಕಥನ ತಂತ್ರ, ವಸ್ತುವಿನ ಆಧುನಿಕತೆ ಮತ್ತು ಬಳಸುವ ಉಪಮೆ – ರೂಪಕಗಳು ಅಮೃತರನ್ನು ಆಧುನಿಕ ಪಾರ್ತಿ ಸುಬ್ಬ ಎಂಬ ಬಿರುದಿಗೆ ಅನ್ವರ್ಥಕಗೊಳಿಸಿದುವು. ಕನ್ನಡ ಸಾಹಿತ್ಯದ ವಿಸ್ತಾರವಾದ ಓದು ಅಮೃತರನ್ನು ಇತರ ಪ್ರಸಂಗ ಕರ್ತರಿಂದ ಬೇರೆಯಾಗಿಸಿತು

ನಾಲ್ಕು ಸಣ್ಣ ಕಥಾ ಸಂಕಲನಗಳು, ಐದು ಕವನ ಸಂಕಲನಗಳು, ಒಂದು ಕಾದಂಬರಿ, ೧೩ ನಾಟಕಗಳು, ೯ ನೃತ್ಯ ರೂಪಕಗಳು, ಎರಡು ವ್ಯಕ್ತಿ ಚಿತ್ರಗಳು, ಎರಡು ಪಾಡ್ದನ ಸಂಕಲನಗಳು, ೧೨ ಸಂಶೋಧನಾ ಕೃತಿಗಳು, ಎಂಟು ಸಂಪಾದಿತ ಕೃತಿಗಳು, ೨೨ ಯಕ್ಷಗಾನ ಪ್ರಸಂಗಗಳು, ೨೦ಕ್ಕೂ ಹೆಚ್ಚು ಧ್ವನಿಸುರುಳಿಗಳು ಇತ್ಯಾದಿಗಳನ್ನು ಅವರು ನಮಗೆ ಬಿಟ್ಟು ತೆರಳಿದ್ದಾರೆ.

(ಪ್ರೊ. ಪುರುಷೋತ್ತಮ ಬಳಿಮಲೆಯವರ ಫೇಸ್ಬುಕ್‌ನಿಂದ ಈ ಬರಹವನ್ನು ತೆಗೆದುಕೊಳ್ಳಲಾಗಿದೆ)

ಜಾನಪದ ವಿದ್ವಾಂಸ ಪ್ರೊ ಅಮೃತ ಸೋಮೇಶ್ವರ ಇನ್ನಿಲ್ಲ!
ತುಳು ಜಾಪದ ವಿದ್ವಾಂಸ, ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರ (89) ಇಂದು ಬೆಳಗ್ಗೆ 9 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ತುಳುನಾಡಿನ ಜಾನಪದ ಸಂಶೋಧನೆಯ ಹಿರಿಯ ಕೊಂಡಿಯೊಂದು ಕಳಚಿತು. ಅಮೃತರ ಅಂತ್ಯಕ್ರಿಯೆಯು ನಾಳೆ ಅವರ ಸ್ವಗೃಹದಲ್ಲಿ ನಡೆಯಲಿದೆ

ಯಕ್ಷಗಾನ ಪ್ರಸಂಗ ಕರ್ತೃ, ಸಂಶೋಧಕ, ಅನುವಾದಕ, ವಿಮರ್ಶಕ, ಜಾನಪದ ತಜ್ಞ, ಕವಿ, ಕಥೆಗಾರ ಹೀಗೆ ಬಹುರೂಪಿ ವ್ಯಕ್ತಿತ್ವದ ಅಮೃತ ಸೋಮೇಶ್ವರರವರು 1953 ಸೆಪ್ಟಂಬರ್ 27 ರಂದು ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಕೋಟೆಕಾರು ಸಮೀಪದ ಅಡ್ಕ ಇವರ ಜನನ ಸ್ಥಳ. ತಂದೆ ಚಿರಿಯಂಡ ಮತ್ತು ತಾಯಿ ಅಮುಣಿ.  ಮಲಯಾಳಂ ಮಾತೃಭಾಷೆಯ ಅಮೃತರ ಸಾಹಿತ್ಯ ಕೃಷಿ ನಡೆದ್ದು ತುಳು ಹಾಗೂ ಕನ್ನಡದಲ್ಲಿ.

ತಮ್ಮ ಪ್ರಾರಂಭಿಕ ಶಿಕ್ಷಣ ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನ ಆನಂದಾಶ್ರಮದಲ್ಲಿ ಪೂರೈಸಿದರು. ಆನಂತರ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ಪಡೆದು, ಮದರಾಸು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದರು.

ಶಿಕ್ಷಣದ ನಂತರ ತಾವು ಓದಿದ ಅಲೋಷಿಯಸ್ ಕಾಲೇಜಿನಲ್ಲಿಯೇ ಅಧ್ಯಾಪಕರಾಗಿ ಕೆಲಸ ಆರಂಭಿಸಿದ ಅಮೃತರು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ.ಪದವಿ ಪಡೆದು, ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, 1993ರಲ್ಲಿ ನಿವೃತ್ತಿ ಹೊಂದಿದರು.

ನಿವೃತ್ತಿಯ ನಂತರ ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಮಾಹಿತಿ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು.

ಇವರು ರಚಿಸಿದ ಯಕ್ಷಗಾನ ಪ್ರಸಂಗಗಳು: ಅಮರ ಶಿಲ್ಪಿ ವೀರ ಕಲ್ಕುಡ, ಘೋರ ಮಾರಕ, ಸಹಸ್ರ ಕವಚ ಮೋಕ್ಷ, ಕಾಯಕಲ್ಪ, ಅಮರ ವಾಹಿನಿ, ತ್ರಿಪುರ ಮಥನ, ಆದಿಕವಿ ವಾಲ್ಮೀಕಿ, ಚಾಲುಕ್ಯ ಚಕ್ರೇಶ್ವರ ಮುಂತಾದ ಮೂವತ್ತಕ್ಕೂ ಹೆಚ್ಚು ಕೃತಿಗಳು.  ‘ಯಕ್ಷಗಾನ ಕೃತಿ ಸಂಪುಟ’ ಇವರ ಜಾನಪದ ಯಕ್ಷಗಾನ ಸಂಶೋಧನೆಯ ಫಲವಾಗಿ ಮೂಡಿಬಂದ ಬಹು ಮೌಲಿಕ ಕೃತಿ.

ಕಥಾಸಂಕಲನ ‘ಎಲೆಗಿಳಿ’, ನಂತರ ಬಂದ ಕಥಾ ಸಂಕಲನಗಳು ಕೆಂಪುನೆನಪು, ರುದ್ರಶಿಲೆ ಸಾಕ್ಷಿ, ಮಾನವತೆ ಗೆದ್ದಾಗ ಮುಂತಾದವುಗಳು. ವನಮಾಲೆ, ಭ್ರಮಣ, ಉಪ್ಪುಗಳ್ಳಿ, ಜ್ಯೋತಿದರ್ಶನವಾಯಿತು-ಕವನ ಸಂಕಲನಗಳು. ತೀರದ ತೆರೆ (ಕಾದಂಬರಿ), ಕೋಟಿಚನ್ನಯ್ಯ, ವಿಶ್ವರೂಪ (ನಾಟಕ),ನಂದಳಿಕೆ ನಂದಾದೀಪ ಹಾಗೂ ರಾಜರತ್ನಂ ಕವಿತೆಗಳು (ವಿಮರ್ಶಾಕೃತಿಗಳು). ಕನ್ನಡದಷ್ಟೇ ತುಳುವಿನಲ್ಲಿಯೂ ಕೃತಿ ರಚಿಸಿದ್ದು ತಂಬಿಲ, ರಂಗೀತ (ತುಳು ಕವನ ಸಂಕಲನಗಳು); ತುಳು ಪಾಡ್ದನ ಕತೆಗಳು, ಅವಿಲು (ತುಳು ಜಾನಪದ ಕತೆಗಳು); ಅಪಾರ್ಥಿನಿ-ಕುಚೋದ್ಯದ ಶಬ್ದಕೋಶವಲ್ಲದೆ ಫಿನ್ಲೆಂಡಿನ ಜಾನಪದ ಮಹಾಕಾವ್ಯವಾದ ‘ಕಾಲೇವಾಲ’ ವನ್ನೂ ತುಳುಭಾಷೆಗೆ ಅನುವಾದಿಸಿದ್ದಾರೆ.

ಇವಲ್ಲದೆ ತುಳುವಿಲ್ಲಿ ರೇಡಿಯೋ ನಾಟಕಗಳು, ನೃತ್ಯ ರೂಪಕಗಳು, ಗಾದೆಗಳನ್ನೂ ರಚಿಸಿದ್ದಾರೆ. ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕವನ್ನೂ ತುಳು ಭಾಷೆಗೂ ಅನುವಾದಿಸಿದ್ದರು. ಸುಮಾರು ಮೂವತ್ತಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳ  ಧ್ವನಿಸುರುಳಿಗಳನ್ನೂ ತುಳು ಹಾಗೂ ಕನ್ನಡ ಭಾಷೆಗಳಲ್ಲಿ ತಂದಿದ್ದಾರೆ. ಯಕ್ಷಗಾನ ಕಲಾ ತಂಡವನ್ನೂ ಬಹರೈನ್‌, ದುಬಾಯ್‌ ದೇಶಗಳಿಗೆ ತೆಗೆದುಕೊಂಡು ಹೋಗಿದ್ದಾರೆ.

‘ತುಳುನಾಡ ಕಲ್ಕುಡೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಯಕ್ಷಗಾನ ಕೃತಿ ಸಂಪುಟ’ಕ್ಕೆ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ‘ತುಳುಪಾಡ್ದನ ಕಥೆಗಳು’ ಕೃತಿಗೆ ಕೇಂದ್ರವಿದ್ಯಾ ಇಲಾಖೆಯ ಪ್ರಶಸ್ತಿ, ‘ತುಳುಪಾಡ್ದನ ಸಂಪುಟ’ಕ್ಕೆ ಕು.ಶಿ. ಹರಿವಾಸಭಟ್ಟ ಜಾನಪದ ಪ್ರಶಸ್ತಿ, ‘ಅಪಾರ್ಥಿನಿ’ ಕುಚೋದ್ಯ ಶಬ್ದ ಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನದ ಕೊಡುಗೆಗಾಗಿ ‘ಪಾರ್ತಿಸುಬ್ಬ ಪ್ರಶಸ್ತಿ’ ಆಕಾಶವಾಣಿ ಬಹುಮಾನ, ತುಳು ಅಕಾಡಮಿ ಪ್ರಶಸ್ತಿ, ಕುಕ್ಕಿಲ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಕಾರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಮುಲ್ಕಿಯಲ್ಲಿ ನಡೆದ ಅಖಿಲ ಭಾರತ ತುಳುಸಮ್ಮೇಳನದ ಅಧ್ಯಕ್ಷತೆ, ಮುಂಬಯಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಪುಸ್ತಕ ಪ್ರಾಧಿಕಾರ ಕೊಡಮಾಡುವ 2019ನೇ ಸಾಲಿನ ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ ಮುಂತಾದ ಗೌರವಗಳಿಗೂ ಪಾತ್ರರಾಗಿದ್ದಾರೆ.