tulunadu – Peepal Media

ತುಳುನಾಡು ಪರಶುರಾಮ ಸೃಷ್ಟಿ ಅಲ್ಲ…ಬೆರ್ಮೆರೆ ಸೃಷ್ಟಿ..!
ತುಳುವರ ಆದಿಮೂಲದ ದೈವ ಬೆರ್ಮೆರ್‌ ಯಾರು?

ದೇವರು ಹಾಗೂ ದೇವೆರ್ ಎಂಬ ಎರಡೂ ಪದಗಳೂ ಸಂಸ್ಕೃತಜನ್ಯ. ಹಾಗಿದ್ದರೆ ತುಳುವರು ದೇವ ಅಥವಾ ದೇವರು ಎಂಬ ಪದಕ್ಕೆ ಸಂವಾದಿಯಾಗಿ ಯಾವ ಪದವನ್ನು ಬಳಸುತ್ತಿದ್ದರು? ಮತ್ತು ಅದ್ಯಾಕೆ ದಿನಬಳಕೆಯಲ್ಲಿ ಇಲ್ಲ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಎಂದರೆ ತುಳುನಾಡಿನ ಅದಿಮೂಲದ ದೈವ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುವುದೇ ಆಗಿದೆ.

ನನ್ನ ಊರು ಐವರ್ನಾಡಿನಲ್ಲಿ ಇರುವ ಎರಡು ಪ್ರದೇಶಗಳ ಹೆಸರು ಸ್ಥಳನಾಮೆಗಳ ಬಗ್ಗೆ ಓದುವಾಗ ಕುತೂಹಲವನ್ನು ಮೂಡಿಸಿದ್ದವು. ಬಿರ್ಮುಕಜೆ ಮತ್ತು ಬೆಮ್ಮಿತ್ತಿಕಂಡ. ಈ ಎರಡೂ ಪದಗಳನ್ನು ಸರಳವಾಗಿ ನಾವು ಬಿಡಿಸಬಹುದು.

ಬಿರ್ಮುಕಜೆ – ಬಿರ್ಮರೆ ಕಜೆ

ಬೆಮ್ಮಿತ್ತಿಕಂಡ – ಬೆರ್ಮೆರ್ ಇತ್ತಿ ಕಂಡ

ಈ ಎರಡೂ ಪ್ರದೇಶಗಳೂ ಬೆರ್ಮೆರ್ ಎಂಬ ದೈವದ ನೆಲೆಗಳೇ ಅಗಿವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಎರಡೂ ಪ್ರದೇಶಗಳಲ್ಲಿ ಈಗ ಬೆರ್ಮೆರ್ ಗೆ ಸಂಬಂಧಿಸಿದ ಆಚರಣೆಗಳು ನಡೆಯುತ್ತಿಲ್ಲ. ಹಾಗಾದರೆ ಈ ಬೆರ್ಮೆರ್ ಎಲ್ಲಿ ಹೋದರು?

ಬೆರ್ಮೆರ್ ಅಥವಾ ಬಿರ್ಮೆರ್ ಎಂಬ ಎರಡೂ ಬಳಕೆಗಳು ಜಾನಪದರಲ್ಲಿ ಇವೆ. ಬೆರ್ಮೆರ್ ವೇದಗಳ ಚತುರ್ಮುಖ ಬ್ರಹ್ಮನಲ್ಲ. ಅಲ್ಲದೇ ಸಂಸ್ಕೃತದ ಬ್ರಹ್ಮ ಎಂಬ ಪದದಿಂದ. ಬೆರ್ಮೆರ್ ಪದ ಹುಟ್ಟಿಲ್ಲ. ಕಾಲಾಂತರದಲ್ಲಿ ಬೆರ್ಮೆರ್ ಅನ್ನು ವೈದಿಕ ಬ್ರಹ್ಮನೊಂದಿಗೆ ಸಮೀಕರಿಸಿ, ನಾಗ ಹಾಗೂ ಬೆರ್ಮೆರ್ ಇಬ್ಬರ ಅಬೇಧ್ಯ ಸಂಬಂಧವನ್ನು ವೈದಿಕ ಪುರಾಣಗಳ ಜೊತೆಗೆ ಜೋಡಿಸಿ ಬೆರ್ಮೆರ ಎಲ್ಲಾ  ನೆಲೆಗಳನ್ನೂ ಸ್ಥಿತ್ಯಂತರಗೊಳಿಸಲಾಗಿದೆ. ಹೀಗಾಗಿ ಬರ್ಮೇರ ಅಲಡೆಗಳು ಬ್ರಹ್ಮಸ್ಥಾನಗಳಾಗಿಸಲಾಗಿದೆ. ಶಿವಾಲಯಗಳಾಗಿ ಮಾರ್ಪಟ್ಟ ನೆಲೆಗಳು ಬ್ರಹ್ಮಲಿಂಗೇಶ್ವರ ದೇವಾಲಯಗಳಾಗಿವೆ. ಆರಂಭದಲ್ಲಿಯೇ ನಾವು ವೈದಿಕ ಬ್ರಹ್ಮ ಹಾಗೂ ಬೆರ್ಮೆರ್ ಗೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

“ಕೆಲವೊಂದು ತುಳುಶಾಸನಗಳಲ್ಲಿ ಬ್ರಹ್ಮನನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರ ಎನ್ನುವಂತೆ ಅವನನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ಸಂಗಡಿಸಲಾಗಿದೆ. ನಾಗ ಹಾಗೂ ಬ್ರಹ್ಮನಿಗೆ ಹಾಲು ನೈವೇದ್ಯ ಮಾಡಿದ ಪ್ರಸಂಗದ ವಿವರಣೆ ಶಾಸನವೊಂದರಲ್ಲಿ ಸಿಗುತ್ತದೆ”(ಪಾದೂರು ಗುರುರಾಜ ಭಟ್ಟ, 1975)

ಹಾಗಾದರೆ ಈ ಬೆರ್ಮೆರ್ ಯಾರು? ಬೆರ್ಮೆರ್ ಎಂಬ ಪದ ಹೇಗೆ ಹುಟ್ಟಿತು?

ತಮಿಳಿನಲ್ಲಿ ಸಾಮಾನ್ಯವಾಗಿ ಎಲ್ಲಾ ದೇವರ ಹೆಸರಿನ ಜೊತೆಗೆ ಪೆರುಮಾಳ್ ಎಂಬ ಹೆಸರೂ ಇರುತ್ತದೆ. ವರದರಾಜ ಪೆರುಮಾಳ್ ಕೋಯಿಲ್, ವೈಕುಂದ ಪೆರುಮಾಳ್ ದೇವಸ್ಥಾನ, ಚೆನ್ರಾಯ ಪೆರುಮಾಳ್ ದೇವಸ್ಥಾನ, ಗೋವಿಂದರಾಜ ಪೆರುಮಾಳ್, ಕರಕಾಟು ಪೆರುಮಾಳ್, ನಿರಕಾಟು ಪೆರುಮಾಳ್,  ಇತ್ಯಾದಿ. ಇಲ್ಲಿ ಪೆರುಮಾಳ್ ಎಂಬ ಹೆಸರು ದೇವರು ಎಂಬ ಅರ್ಥದಲ್ಲಿ ಬಳಕೆಯಾಗಿದೆ.

ಅನೇಕ ಬಾರಿ ಪೆರುಮಾಳ್ ಎಂಬ ಹೆಸರು ವೈಷ್ಣವ ದೇವತೆಗಳನ್ನು ಪ್ರತಿನಿಧಿಸುತ್ತವೆ. ತಮಿಳು ಸಂತ, ಕವಿ ಕೌಮಾರಂ ಪರಂಪರೆಯ ಅರುಣಗಿರಿನಾಥರ್ (ಸಾ.ಶ 1370- 1450) ತನ್ನ ತಿರುಪ್ಪುಗಳ್ ಭಕ್ತಿ ಕಾವ್ಯದಲ್ಲಿ ಮುರುಗನ್ ಅಂದರೆ ಸ್ಕಂದನನ್ನು ಪೆರುಮಾಳ್ ಎಂದು ಕರೆದಿದ್ದಾನೆ.

ತಮಿಳಿನಲ್ಲಿ ಪೆರುಮಾಳ್ ಎಂದರೆ ಯಾವುದೇ ನಿರ್ಧಿಷ್ಟ ದೇವತೆಯಾಗಿರದೆ ಎಲ್ಲಾ ದೇವರನ್ನೂ ಪೆರುಮಾಳ್ ಎಂದೇ ಕರೆಯಲಾಗಿದೆ. ಆದರೆ ಬೇರೆ ಬೇರೆ ಕಾಲಘಟ್ಟದಲ್ಲಿ ಉಚ್ಛ್ರಾಯದಲ್ಲಿ ಇದ್ದ ದೇವತೆಗಳು ಪೆರುಮಾಳ್ ಎಂದೇ ಕರೆಸಿಕೊಂಡಿದ್ದಾರೆ. ಆಯಾಯ ಪಂಥಗಳ, ಮತಗಳ ಮೂಲ ದೇವರು ಅವರಿಗೆ ಪೆರುಮಾಳ್ ಆಗಿದ್ದಾರೆ.

ಪೆರುಮ+ ಆಳ್ – ಪೆರುಮಾಳ್

ಪೆರುಮ , ಪೆರಿಯ ಇವೆಲ್ಲವೂ ಹಿರಿಯ, ದೊಡ್ಡ, ಶ್ರೇಷ್ಠವಾದ ಎಂಬ ಅರ್ಥದಲ್ಲಿ ಬಳಕೆಯಾಗಿವೆ. ಅಳ್ ಎಂದರೆ ವ್ಯಕ್ತಿ ಎಂದರ್ಥ. ಹಿರಿಯ ವ್ಯಕ್ತಿಯೇ ಪೆರುಮಾಳ್. ಅದು ದೇವರೇ ಇರಬಹದು, ರಾಜನಿರಬಹುದು ಅಥವಾ ಕುಟುಂಬದ ಹಿರಿಯ ವ್ಯಕ್ತಿ ಇರಬಹುದು. ಯಾರು ನಮ್ಮೆಲ್ಲರಿಗೂ ಹಿರಿಯನೋ ಅವನು ಪೆರುಮಾಳ್.

ಇದೇ ಅರ್ಥ, ಭಾವವನ್ನು ತುಳುನಾಡಿನ ಬೆರ್ಮೆರ್ ಗೆ ಕೂಡ ಸಲ್ಲುತ್ತದೆ. ಬೆರ್ಮೆ+ ಆರ್- ಬೆರ್ಮೆರ್, ಬೆರ್ಮ ಎಂದರೆ ಹಿರಿಯ ಎಂದು ಅರ್ಥ.

ಹೀಗಾಗಿ ಬೆರ್ಮೆರ್, ಪೆರುಮಾಳ್ ಇವು ದ್ರಾವಿಡ ಭಾಷಾ ವರ್ಗದಲ್ಲಿ ದೇವರು ಎಂದೇ ಅರ್ಥ. ಬೆರ್ಮೆರ್ ಎಂದರೆ ಅದಿ ಮೂಲದ ದೇವರಾದರೆ ನಂತರ ಹುಟ್ಟಿಕೊಂಡ ದೈವಗಳಿಗೆ ಬೇರೆ ಬೇರೆ ಹೆಸರು ಇಡಲಾಗಿದೆ. ಇವೆಲ್ಲವನ್ನೂ ಬೆರ್ಮೆರ್ ಎಂದು ಕರೆಯಲಾಗಿಲ್ಲ. ತಮಿಳಿನಲ್ಲಿ ಮುರುಗನ್ ಪೆರುಮಾಳ್ ಇದ್ದಂತೆ ತುಳುವರು ಪಂಜುರ್ಲಿ ಬೆರ್ಮೆರ್ ಎಂದು ಕರೆಯುವುದಿಲ್ಲ. ಹಾಗಾಗಿ ಬೆರ್ಮೆರ್ ಎಂದರೆ ಅದಿಯಲ್ಲಿ ಇದ್ದ ದೇವರು.

ತುಳುನಾಡಿನ ಪೂರ್ವಕ್ಕೆ ಇರುವ ಪಶ್ಚಿಮ ಘಟ್ಟದ ಸಾಲುಗಳು ಮತ್ತು ಸಮೃದ್ಧವಾದ ಹಸಿರು ಹಾವುಗಳ ವಾಸಕ್ಕೆ ಪೂರಕವಾಗಿದೆ. ಸರ್ಪಗಳು ವಿಷಕಾರಿ ಮಾತ್ರವಲ್ಲ, ಪಾದಗಳಿಲ್ಲದೆ ನೀರಿನ ತೊರೆಗಳಂತೆ ಹರಿದುಹೋಗುವುದು ಭಯಾನಕತೆಯನ್ನು ಸೃಷ್ಟಿಸಿದಂತೆ ತೋರುತ್ತದೆ. ಹೀಗಾಗಿ ನಾಗನನ್ನು ಆರಾಧಿಸಲು ಆರಂಭಿಸಿದರು. ಜಗತ್ತಿನ ಬಹುತೇಕ ನಾಗಾರಾಧನೆ ಇದೇ ಹಿನ್ನಲೆಯನ್ನು ಹೊಂದಿವೆ. ಸರ್ಪಗಳ ಕಡಿತದಿಂದ ಸಂಭವಿಸುವ ಸಾವು ಭಯಾನಕ. ಹೀಗಾಗಿ ಸರ್ಪಗಳನ್ನು ಸಂತೈಸಲು ಅವುಗಳನ್ನು ಅರಾಧಿಸಲಾಯಿತು.

ಬಹುಶಃ ಆರಂಭದಲ್ಲಿ ನೀರು ಮತ್ತು ಸರ್ಪಗಳನ್ನು ಆರಾಧಿಸುತ್ತಿದ್ದರು ಎಂದು ತೋರುತ್ತದೆ. ಕಾಶ್ಮೀರವನ್ನು  ಕರ್ಕೊಟಕ ನಾಗಾ ವಂಶವು ಕ್ರಿ.ಶ ೭-೮ ನೇ ಶತಮಾನದಲ್ಲಿ ಆಳಿದ್ದಾರೆ. ಉತ್ತರ ಪ್ರದೇಶದಲ್ಲಿ ಇರುವ ಅಹಿಚ್ಛತ್ರ ನಾಗ ಜನರ ಪ್ರದೇಶ. ಇವರನ್ನು ಸಮುದ್ರಗುಪ್ತ ಸೋಲಿಸಿದ. ಚುಟು ವಂಶೀಯರು ಆಳಿದ ನಾಗರಖಂಡ ಬನವಾಸಿಯಲ್ಲಿದೆ. ಇಲ್ಲಿ ನಾಗ ಎಂದರೆ ಸರ್ಪವಲ್ಲ. ನಾಗ ಎಂದರೆ ಒಂದು ಜನಾಂಗ.

ತುಳುನಾಡನ್ನು ನಾಗರ ಲೋಕ ಎಂದೂ ಕರೆಯುತ್ತಾರೆ. ತುಳುನಾಡಿನಲ್ಲಿ ನಾಗಾರಾಧನೆ ಮುಖ್ಯವಾದ ಆಚರಣೆ. ಅದಿ ತುಳುವರಲ್ಲಿ ನಾಗನೇ ಮೂಲ ದೇವತೆಗಳಲ್ಲಿ ಒಬ್ಬ ಇರಬೇಕು. ಹೀಗಾಗಿ ನಾಗನೂ ಬೆರ್ಮೆರ್ ಆಗಿರುವುದರಿಂದ ಬೆರ್ಮೆರ ಸ್ಥಾನಗಳು ನಾಗ ಸಾನಿಧ್ಯಗಳೇ ಆಗಿವೆ. ಹೀಗಾಗಿ ಬೆರ್ಮೆರ್ ಜೊತೆ ನಾಗ ಹೆಚ್ಚಿನ ಸಂದರ್ಭಗಳಲ್ಲಿ ತಲುಕುಹಾಕಿಕೊಂಡಿದ್ದಾನೆ. ಹೀಗಾಗಿ ತುಳುನಾಡಿನಾದ್ಯಂತ ನಾಗಬ್ರಹ್ಮರ (ವೈದಿಕರಿಂದ ಮರುನಾಮಕರಣಗೊಂಡು) ಸಾನಿಧ್ಯಗಳನ್ನು ಕಾಣಬಹುದು.

ಹೀಗಾಗಿ ಬೆರ್ಮೆರ್ ಮತ್ತು ನಾಗ ಇವೆರಡೂ ಅವೈದಿಕ ದೇವತೆಗಳು. “ನಾಗ ಎಂಬ ಶಬ್ದವಾಗಲೀ, ನಾಗ (ಸರ್ಪ) ಪೂಜೆಯಾಗಲೀ ವೇದಗಳಲ್ಲಿ ಅಥವಾ ಬ್ರಾಹ್ಮಣದಲ್ಲಿ ಹೇಳಿಲ್ಲ”(ಗೋವಿಂದ ಪೈ, 570, ೧೯೪೭)

ತುಳುನಾಡಿನ ಪ್ರಪ್ರಥಮ ಅರಸರು ಅಲುಪರು. ಸಿರಿ ಪಾಡ್ದನದಲ್ಲಿ ಬರುವ ಸಿರಿಯ ಅಜ್ಜ ಬೆರ್ಮ ಆಳ್ವೆರ್ ಎಂಬುದು ಹಿರಿಯ ಅರಸ (ಬೆರ್ – ಪೆರ್= ಹಿರಿಯ ಆಳ್ವೆರ್ = ಅರಸ) ಎಂದೇ ಆಗಿದೆ. “ಬೆಳ್ಮಣ್ ನ ತಾಮ್ರ ಶಾಸನ (8 ನೇ ಶತಮಾನ) ಸಿರಿ ಆರಾಧನೆಯ ಪರಿಸರಕ್ಕೆ ಸಮೀಪವಾಗಿದೆ. ಈ ಶಾಸನದಲ್ಲಿ ಹೀಗೆ ಬರೆಯಲಾಗಿದೆ – ‘ ಬ್ರಹ್ಮನಿಂದ ರಕ್ಷಿತವಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ…..’ (ಪಾದೂರು ಗುರುರಾಜ ಭಟ್ಟ, 1975) ಈ ಪ್ರದೇಶಗಳ ಆಳುಪ ಅರಸರು ಕ್ರಿ.ಶ. 14 ನೇ ಶತಮಾನದ ವರೆಗೆ ಆಳಿದ್ದಾರೆ. ಸಿರಿ ಪಾಡ್ದನದಲ್ಲಿ ಬರುವ ಬೆರ್ಮ ಆಳ್ವೆರ್ ಒಂದು ಸಾಹಿತ್ಯಿಕ ಅರ್ಥ ಇರುವ ಹೆಸರು (ಪೀಟರ್ ಜೇ ಕ್ಲಾಸ್, 525, ೨೦೦೭)

ಬೆರ್ಮ ಆಳ್ವೆರ್ ಎಂಬುದು ಸಾಂಕೇತಿಕವಾಗಿ ಮೂಲ ಪುರುಷ ಅಥವಾ ಅರಸನ್ನೇ ಸಂಕೇತಿಸಿಲಾಗಿದೆ. ಬೆರ್ಮೆರ್ ಎಂಬವ ಒಬ್ಬ ಕುಲದ ಮೂಲ ಪುರುಷ, ಒಡೆಯ, ಅರಸನೇ ಆಗಿರಬೇಕು.

ಬೆರ್ಮೆರ್ ಅರಸನೇ?

ಬೆರ್ಮೆರ್ ಸ್ಥಾನವನ್ನು ಆಲಡೆ, ಅಥವಾ ಸಿಂಗ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಅಲಡೆಗಳು ಸಮೃದ್ಧ ನೀರು ಇರುವ ಜಾಗಗಳಲ್ಲಿ ಇರುತ್ತವೆ.

“ಪ್ರಾಯಶಃ ಇದೇ ‘ಆರ್’ ಸಂಬಂಧಿಸಿದ ಪದಗಳಾಗಿರಬೇಕು – ಆಲುಪ, ಆಳ್ವ, ಅನೂಪ (ಸಂ.ಜಲಭರಿತವಾದ ಭೂಮಿ) ಆಳುಪ ಮುಂತಾದ ರೂಪಗಳು…….. ಆಲಂಪುರ ಹಳೆಯ ಹೈದರಾಬಾದ್ ಸಂಸ್ಥಾನದ ರಾಯಚೂರು ಜಿಲ್ಲೆಯ ನಂದಿಕೋಟಿಕೂರು ತಾಲೂಕಿನಲ್ಲಿದ್ದ ಊರು. ಇಲ್ಲಿ ನವಬ್ರಹ್ಮಶ್ವರ ಮಂದಿರ ಸಮೂಹವೇ ಇಲ್ಲಿಯ ಪ್ರಮುಖ ಇಲ್ಲಿಯ ಮಧ್ಯಭಾಗದಲ್ಲಿರುವ ಬಾಲಬ್ರಹೇಶ್ವರನ ಮಂದಿರ ಪ್ರಮುಖವಾಗಿದೆ. ಉಳಿದ ಅಪ್ಪ ಶಿವಮಂದಿರಗಳೆಂದರೆ ‘ಕುಮಾರ ಬ್ರಹ್ಮ, ಅರ್ಕ ಬ್ರಹ್ಮ, ವೀರ ಬ್ರಹ್ಮ, ವಿಶ್ವ ಬ್ರಹ್ಮ, ತಾರಕ ಬ್ರಹ್ಮ, ಗರುಡ ಬ್ರಹ್ಮ, ಸ್ವರ್ಗ ಬ್ರಹ್ಮ, ಮತ್ತು ಪದ್ಮ ಬ್ರಹ್ಮ ಬಾಲ, ಬ್ರಹ್ಮಶ್ವರನನ್ನು ಬರಿಯ ಬ್ರಹ್ಮಶ್ವರ ಎಂದೂ ಕರೆಯಲಾಗುತ್ತದೆ. ಈ ಶಿವ ಮಂದಿರದಿಂದಾಗಿ ಆಲಂಪುರಕ್ಕೆ ಬ್ರಹ್ಮಶ್ವರ ಕ್ಷೇತ್ರ ಅಥವಾ ನವಬ್ರಹೇಶ್ವರ ಕ್ಷೇತ್ರ ಎಂಬ ಮತ್ತೊಂದು ಅಭಿದಾನವೂ ಪ್ರಾಪ್ತವಾಗಿದೆ.” (ಕೆಮ್ತೂರು ರಘುಪತಿ ಭಟ್ಟ, ೩೯)

” ಕ್ಷೇತ್ರದ ಬಳಿ ಸಮೀಪ ‘ಬೀಡು’ ಎನ್ನುವ ಆಲಡೆ ಮನೆಗಳಿವೆ. ಇಲ್ಲಿ ಪಟ್ಟಾಭಿಷೇಕ ಆಗುವ ಪದ್ಧತಿ ಇದೆ. ಈ ಪಟ್ಟಾಭಿಷೇಕದಲ್ಲಿ ಅಜಲಿನ ಎಲ್ಲಾ ಜಾತಿಗಳು ಹಾಜರಿರುತ್ತಾರೆ. ಹೀಗೆ ಈ ಕ್ಷೇತ್ರ ಆಳುವ ಎಡೆಯೂ ಆಗಿದೆ. ಮಾನವ ಶಾಸ್ತ್ರಜ್ಞರ ಪ್ರಕಾರ ಬುಡಗಟ್ಟು ಒಂದು ರಾಜಕೀಯ ಘಟಕವೂ ಆಗಿದೆ. ಬೀಡು ಎಂಬುದು ಆಲಡೆಯ ರಾಜಕೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಿರ್ದೇಶಿಸುವ ನಾಯಕನ ಮನೆ, ಆಲಡೆ, ಮನೆಯ ಆಳುವ ವ್ಯಕ್ತಿಯ ಪಟ್ಟಾಭಿಷೇಕದಲ್ಲಿ ಪಡೆಯುವ ಹೆಸರು ಅರ್ಥಾತ್ ಪಟ್ಟದ ಆಳುವ ನಾಮ ಪರಂಪರೆಯಿಂದ ಬದಲಾಗದೆ ಮುಂದುವರಿದಿದೆ ಎಂಬ ಗ್ರಹಿಕೆ ಇದೆ. ಈ ಹೆಸರನ್ನು ಆಲಯದ ಪುದರ್ ಎನ್ನುತ್ತಾರೆ. ನೀರು ಇರುವ ಎಡೆಯನ್ನು ಜನರು ವಾಸದ ಎಡೆಯನ್ನಾಗಿ ಆರಿಸಿದ, ಯಾವುದೇ ಬುಡಕಟ್ಟುಗಳ ಆಳ್ವಿಕೆಯಲ್ಲೂ ಆಳುವ ನಾಯಕ ಇರುತ್ತಾನೆ” (ಇಂದಿರಾ ಹೆಗ್ಡೆ,೪೦, ೨೦೧೨)

ಬೆರ್ಮೆರ್ ಸ್ಥಾನವನ್ನು ಆಲಡೆ ಹಾಗೂ ಸಿಂಗ ಎಂದು ಕರೆಯುತ್ತಾರೆ. ತುಳುವರು ತಮ್ಮ ಪಿತೃ ಪೂಜೆ ಮಾಡಲು ತಮ್ಮ ಮೂಲತಾನಕ್ಕೆ ಬರುತ್ತಾರೆ. ಇಲ್ಲಿ ಬೆರ್ಮೆರ್ ಜೊತೆಗೆ ಪ್ರದೇಶದ ರಕ್ಷಕ ದೈವ ಕ್ಷೇತ್ರಪಾಲ, ನಾಗ, ನಂಡಿಗೋಣ, ಪಂಜುರ್ಲಿ, ಲೆಕ್ಕೆಸಿರಿ, ಚಿಕ್ಕು, ಅಬ್ಬಾಗ – ದಾರಗ ಇನ್ನಿತರ ದೈವಗಳು ಇರುತ್ತವೆ. ವರ್ಷಾವರ್ತಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಕುಟುಂಬದ ಒಬ್ಬನಾದರೂ ಆ ಮೂಲತಾನಕ್ಕೆ ಸಂಬಂಧಿಸಿದವರು ಇರಲೇ ಬೇಕು. ಹೀಗೆ ಹೋಗದೆ ಇದ್ದಲ್ಲಿ ಕುಟುಂಬದಲ್ಲಿ ಸಂದಿ ಹೋದವರು ಉಪದ್ರ ಕೊಡುತ್ತಾರೆ ಎಂಬ ನಂಬಿಕೆ ಇದೆ.

ಇಲ್ಲಿ ಎರಡು ಪದಗಳ ಬಗ್ಗೆ ನನ್ನ ಚರ್ಚೆಯನ್ನು ಹೇಳುತ್ತೇನೆ.

1. ಆಲಡೆ

ಆಲಡೆ ಎಂಬ ಪದದ ವ್ಯುತ್ಪತ್ತಿ ಬಗ್ಗೆ ಅನೇಕ ಚರ್ಚೆಗಳು ಇವೆ. ಇವುಗಳಲ್ಲಿ ಭಿನ್ನತೆಗಳು ಇವೆ. ಆಲಡೆ ಎಂದರೆ ಆಳುವ ಎಡೆ, ಆಡಳಿತ ನಡೆಸುವ ಮೂಲ ಸ್ಥಳ.

2. ಸಿಂಗ

ದೈವಗಳ ಪರಿಕರಗಳನ್ನು ಇಡುವ ವ್ಯವಸ್ತೆಯನ್ನು ಸಿಂಗದನ ಎಂದು ಕರೆಯುತ್ತಾರೆ. ಸಿಂಗದನ ಎಂದರೆ ಸಿಂಹಾಸನ. ಇಲ್ಲಿ ಸಿಂಗ ಎಂದರೆ ಸಿಂಹಾಸನವೇ ಇರಬೇಕು.

ಬೆರ್ಮೆರೆ ಗುಂಡ – ಮುಡಿಂಜಿ – ಕೊಟ್ರಪ್ಪಾಡಿ (ಕೃಪೆ:ಇಂದಿರಾ ಹೆಗ್ಗಡೆ)

ತುಳುವರು ಬೆರ್ಮೆರ್ ಅನ್ನು ಕುದುರೆಯ ಮೇಲೆ ಕೂತ, ಖಡ್ಗದಾರಿ, ಸತ್ತಿಗೆ (ಕೊಡೆ) ಹಿಡಿದಿರುವ ಒಬ್ಬ ಯೋಧನಂತೆ ಚಿತ್ರಿಸಿದ್ದಾರೆ. ಇದನ್ನು ಗುರುರಾಜ ಭಟ್ಟರು ಜೈನರ ಪ್ರಭಾವ ಎಂದು ಹೇಳಿದ್ದಾರೆ. ಆದರೆ ಅದಕ್ಕೂ ಹಿಂದೆ ಈ ಪರಿಕಲ್ಪನೆ ಇರಲ್ಲಿಲ್ಲ ಎಂದು ಹೇಳಲು ನಮ್ಮಲ್ಲಿ ಆಧಾರಗಳು ಇಲ್ಲ.  ಕೋಟಿ ಚೆನ್ನಯರ ಪಾಡ್ದನದಲ್ಲಿ ಕೆಮ್ಮಲೆಯ ಬೆರ್ಮಾ ಬಿಳಿ ಕುದುರೆ ಏರಿ ಬೆಳ್ಗೊಡೆ ಹಿಡಿದಿರುತ್ತಾನೆ.

1623ರಲ್ಲಿ ತುಳುನಾಡಿಗೆ ಬಂದ ಇಟಲಿಯ ಪ್ರವಾಸಿ ಪಿಯೊತ್ರೋದೆಲ್ಲಾವೆಲ್ಲೆ ಉಳ್ಳಾಲದ ರಾಣಿ ಕಟ್ಟಿಸಿದ ಒಂದು ಗುಡಿಸಿ ಒಳಗೆ ಹೋಗುತ್ತಾನೆ. ಅಲ್ಲಿ ಇರುವ Brimore ಎಂಬ  ವಿಗ್ರಹವನ್ನು ನೋಡುತ್ತಾನೆ.

“ಊರಿನ ಕೊನೆಯಲ್ಲಿ ಗುಡ್ಡದ ಮೇಲಿದ್ದ ‘ನಾರಾಯಣ’ ಎಂಬ ದೇವಸ್ಥಾನ ನೋಡಲು ಹೋದೆ. ಮಾಡಿಗೆ ತೆಂಗಿನ ಸೋಗೆ ಹೊದಿಸಿದ್ದರು. ಮರದ ಹಲಗೆಗಳನ್ನು ಜೋಡಿಸಿ ಕಟ್ಟಿದ ಗುಡಿ ಇದು. ಇದನ್ನು ರಾಣಿ ಕಟ್ಟಿಸಿದಳಂತೆ. ಇದರ ಒಳಗೆ ಭೂತ (devil) ವಿಗ್ರಹವಿತ್ತು…. ಬ್ರಾಹ್ಮಣ ದುಬಾಶಿ ಭೂತಕ್ಕೆ ಹೆದರಿ ದೂರ ನಿಂತುಬಿಟ್ಟ… ನಾನು ಜೀಸಸ್ ಕ್ರೈಸ್ತನ ಧ್ಯಾನ ಮಾಡುತ್ತಾ ಗುಡಿಯ ಬಾಗಿಲು ತೆಗೆದು ಒಳಕ್ಕೆ ಹೋದೆ. ವಿಗ್ರಹ ಬಿಳಿಯ ಕಲ್ಲಿನದು. ಒಂದು ಆಳು ಪ್ರಮಾಣಕ್ಕಿಂತ ಬೆರ್ಮರ ದೊಡ್ಡದು. ಅದಕ್ಕೆ ಬಣ್ಣ ಹಚ್ಚಿ ಸುಂದರ ಯುವಕನಂತೆ ಕಾಣುವ ಹಾಗೆ ಮಾಡಿದ್ದರು. ತಲೆಯ ಮೇಲೆ ಕಿರೀಟವಿತ್ತು. ನಾಲ್ಕು ಕೈಗಳಿದ್ದು ವಿಗ್ರಹದ ಜಾಡಿನ ಕಾಲುಗಳ ಮಧ್ಯೆ ಉದ್ದನೆಯ ಗಡ್ಡ ಬಿಟ್ಟ ಬೆತ್ತಲೆಯ ಮನುಷ್ಯನ ವಿಗ್ರಹವಿತ್ತು. ಅದರ ಕೈಗಳು ನೆಲಕ್ಕೆ ಊರಿದ್ದುವು ಪ್ರಾಣಿಯೊಂದು ನಡೆಯುವ ರೀತಿಯಲ್ಲಿ. ದೈವಗ ಇದರ ಮೇಲೆ ಭೂತ ಕುಳಿತು ಸವಾರಿ ಮಾಡುತ್ತಿರುವಂತೆ ಕಾಣುತ್ತಿತ್ತು. ರಾಣಿ ಇಲ್ಲಿ ಗುಡಿ ಕಟ್ಟಿಸಿ Brimore ಎಂಬ ವಿಗ್ರಹವನ್ನು ಸ್ಥಾಪನೆ ಮಾಡಿದ್ದಾಳೆ. Brimore ಎಂಬ ಭೂತ ಬಹಳ ದೊಡ್ಡ ಭೂತವಂತೆ, ಸಾವಿರ ಭೂತಗಳಿಗೆ ಒಡೆಯನಂತೆ. ನನ್ನ ಈ ಊಹೆ ಸರಿ ಎಂದು ಆಮೇಲೆ ಇಲ್ಲಿಯವರು ಹೇಳಿದರು. ಈ ವಿಗ್ರಹಕ್ಕೆ  “ಬುತೋ” (Buto – ಭೂತ) ಎಂದು ಹೆಸರು'” (ಪ್ರವಾಸಿ ಕಂಡ ದಕ್ಷಿಣ – ಎಸ್.ಎಲ್. ನಾಗೇಗೌಡ)

ಹುಟ್ಟಿನ ಚಿತ್ತೇರಿಯ ಬೆರ್ಮ – ಯೆಡ್ತಾಡಿ (ಕೃಪೆ: ಇಂದಿರಾ ಹೆಗ್ಗಡೆ)

ಸ್ವತಃ ಜೈನಳಾಗಿದ್ದ ಉಳ್ಳಾಲದ ರಾಣಿ ಕಟ್ಟಿದ ಈ ಗುಡಿ ಜೈನ ಬ್ರಹ್ಮನ ಗುಡಿ ಅಲ್ಲ. ಯಾಕೆಂದರೆ ಪಿಯೊತ್ರೋದೆಲ್ಲಾವೆಲ್ಲೆ ಈ ವಿಗ್ರಹವನ್ನು ಭೂತ ಎಂದು ದಾಖಲಿಸಿದ್ದಾನೆ ಮಾತ್ರವಲ್ಲ ಬ್ರಿಮೋರ್ ಎಂದು ಕರೆದಿದ್ದಾನೆ.

ಬ್ರಹ್ಮ ಯಕ್ಷನ ಮೂರ್ತಿಯ ಲಕ್ಷಣಗಳ ಬಗ್ಗೆ ಹಂ ಪ ನಾಗರಾಜಯ್ಯ ಅವರ ಚರ್ಚೆಯನ್ನು ಗಮನಿಸೋಣ.  ಬ್ರಹ್ಮ ಯಕ್ಷ ತುರಗವಾಹನ, ಅಷ್ಟಬಾಹು, ಚತುರ್ಮುಖ ಎಂದು ಶಾಸ್ತ್ರ ಕೃತಿಗಳಲ್ಲಿ ವರ್ಣಿತನಾಗಿದ್ದರೂ ದ್ವಿಬಾಹು ಹಾಗೂ ಏಕವಕ್ತ ಮೂರ್ತಿಗಳೇ ದಕ್ಷಿಣ ಕನ್ನಡದಲ್ಲಿ ಕಂಡು ಬರುತ್ತವೆ. ಮಾತುಲಂಗ ಸಂತಾನ ಭಾಗ್ಯ ಸೂಚಕ, ಶ್ವೇತಾಂಬರ, ದಿಗಂಬರ ಎರಡೂ ಪಂಥಗಳ ಚತುರ್ಮುಖ, ಅಷ್ಟಭುಜ ಮತ್ತು ಹಲವು ಆಯುಧ ವಿಕೋಪಗಳು ಧರಿಸಿದ ಬ್ರಹ್ಮನ ವಿಕೋಪಗಳು ಜೈನಶಾಸ್ತ್ರದ ಗ್ರಂಥಗಳಲ್ಲಿವೆ. (Ref. ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ʼಆದಿ ಆಲಡೆʼ)

ಆದರೆ ತುಳುವರು ಬೆರ್ಮೆರನ್ನು ಅವ್ಯಕ್ತ, ನಿರಾಕಾರವಾಗಿ ನಂಬುತ್ತಲೇ ಕಲ್ಲುಗಳಲ್ಲಿ ಕೂಡ ಅರೋಪಿಸಿಕೊಂಡು ನಂಬಿದ್ದಾರೆ.

“ತಂದೆ ಮುದ್ದು ನರಯನ, ತಾಯಿ ಮುಂಗುಲಿ ಹೆಂಗುಸು. ಒಂದನೇ ಬೇನೆಗೆ ಒಂದು ಮಾಲೆ ತತ್ತಿ, ಎರಡನೆಯ ಬೇನೆಗೆ ಎರಡು ಮಾಲೆ ತತ್ತಿ, ಮೂರನೆಯ ಬೇನೆಗೆ ಮೂರು ಮಾಲೆ ತತ್ತಿ – ಹೀಗೆ ಪ್ರತಿ ಬೇರೆಯಲ್ಲೂ ಬೇರೆ ಬೇರೆ ಜಾತಿಯ ಹಾವುಗಳ ಮೊಟ್ಟೆ ಇಡುತ್ತಾಳೆ. ಆರನೆಯ ಬೇನೆಯಲ್ಲಿ ಕೇರೆ ಮಾರಾಜೆ ಹಾವುಗಳು, ಏಳನೆಯ ಬೇನೆಯಲ್ಲಿ ಕರಿಯ ಸಂಕಪಾಲೆ ಮತ್ತು ಬೆಳಿಯ (ಬಿಳಿಯ) ಸಂಕಪಾಲೆ (ಕಾಳಿಂಗ ಸರ್ಪ) ಹುಟ್ಟುತ್ತದೆ……” (ಇಂದಿರಾ ಹೆಗ್ಗಡೆ, 78, ೨೦೧೨)

“ಅಣ್ಣಪ್ಪ ರಾಜ್ಯದ ನಾರಾಯಣ ದೇವರು ಮತ್ತು ಮುಂಗುಡೆ ದೆಯ್ಯಾರು ಗಂಡ ಹೆಂಡತಿ, ಮುಂಗುಡೆ, ದೆಯ್ಯಾರು ಇಟ್ಟ ಮೊಟ್ಟೆ, ಒಂದನೇ ಬೇನೆಗೆ ಒಂದು ಮಾಲೆ ತತ್ತಿ ಎರಡನೆಯ ಬೇನೆಗೆ ಎರಡು ಮಾಲೆ ಹಾವಿನ ಮೊಟ್ಟೆ, ಮೂರನೆಯ ಬೇನೆಗೆ ಮೂರು ಮಾಲೆ ಹಾವಿನ ಮೊಟ್ಟೆ – ಹೀಗೆ ಮೊಟ್ಟೆಯಿಡುತ್ತಾ ಹೋಗುತ್ತಾಳೆ. ಆರನೆಯ ಬೇನೆಯಲ್ಲಿ ಅರುವತ್ತಾರು ಕೋಟಿ ಹೆಡೆಯ ಬೊಳ್ಯ (ಬಿಳಿ) ಸಂಕಪಾಲೆ ‘ಸರ್ಪ’ ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಎಪ್ಪತ್ತೇಳು ಕೋಟಿ ಹೆಡೆಯುಳ್ಳ ‘ಕರಿಯ ಸಂಕಪಾಲೆ’ – ಹುಟ್ಟುತ್ತದೆ. ನಾರಾಯಣ ದೇವರು(ಸೂರ್ಯ) ಕರಿಯ ಸಂಕಪಾಲನನ್ನು ಕರೆದು “ನೀನು ಭೂಲೋಕಕ್ಕೆ ಹೋಗಿ ಭೂಲೋಕ ಪಾತಾಳ ಲೋಕಗಳ ಅಧಿಪತಿಯಾಗಿ ನಾಗರಾಜನೆಂಬ ಖ್ಯಾತಿಯಿಂದ ಜೀವಿಸು’ ಎಂದು ಹರಸುತ್ತಾರೆ.” ಭೂಲೋಕ, ಪಾತಾಳ ಲೋಕಗಳ ಅಧಿಪತಿ ‘ಬೆರ್ಮೆರ್’ ಎಂದು ಕರೆಸಿಕೊಂಡ ಎಂಬುದನ್ನು ಇಲ್ಲಿಯ ಪಾಡ್ಡನಗಳು ಸ್ಪಷ್ಟಪಡಿಸುತ್ತವೆ. (ಇಂದಿರಾ ಹೆಗ್ಗಡೆ, 64, ೨೦೧೨)

ಬೆರ್ಮೆರ್ ವೀಳ್ಯದೆಲೆಯಷ್ಟು ತೆಳ್ಳಗೆ, ಅಡಿಕೆಯಷ್ಟು ಉರುಟಾಗಿ, ತಾಳೆ ಮರದಷ್ಟು ಎತ್ತರಕ್ಕೆ, ಅಲದ ಮರದಷ್ಟು ವಿಶಾಲವಾಗಿ ಉದಿಸಿದರು, ಅವರ ಎಡಭಾಗದಲ್ಲಿ ನಾಗರ ಹುತ್ತ ಬಲ ಭಾಗದಲ್ಲಿ ನಗರಹುತ್ತ, ಮಧ್ಯದಲ್ಲಿ ಜಯವುಳ್ಳ ಬೆರ್ಮೆರ್ ಉದಿಸಿದರು…….(ಇಂದಿರಾ ಹೆಗ್ಗಡೆ, 79, ೨೦೧೨)

ಹುಟ್ಟಿನ ಚಿತ್ತೇರಿ – ಯೆಡ್ತಾಡಿ (ಕೃಪೆ: ಇಂದಿರಾ ಹೆಗ್ಗಡೆ)

“ಬೆರ್ಮೆರ್ ಹುಟ್ಟಿದ ನಾಡು ಬಲವಾದ ದೇಶ, ಮಣಿ, ಗಂಗೆ, ನೀರು, ಗಂಗೆ, ಮೊಸರು ಗಂಗೆ, ಉಪ್ಪು ನೀರು ಗಂಗೆ, ನೆತ್ತರು ಗಂಗೆಗಳಲ್ಲಿ ಉತ್ತರ ಉರಿಕಂಚಿ, ಪಾತಾಳ ಪಣಿಕಂಚಿ, ಏಳು ಕಂಚಿ ಕಡಂಗದ ಅರಮನೆಯಲ್ಲಿ ಜಗ ಮಗುಚಿತು. (ನಸುಕಿನಲ್ಲಿ) ಜಂಬು ಉಡೆಂಡ್ (ಬಿರಿಯಿತು) ಕತ್ತಲೆ ಬೆಳಕಾಯಿತು, ಎಡದಲ್ಲಿ ಬೆಳ್ಳಿಯ ಪೂ ಮುಡಿ, (ಹೂ ಅಣಿ), ಪೂ ಪುಂಚ (ಹುತ್ತ) ಬಲದಲ್ಲಿ ಬಂಗಾರದ ಪೂ ಮುಡಿ, ಪೂ ಪುಂಜೆ ಆಗ ಕೆಮ್ಮಲೆಯ ಬಿರ್ಮೆರಿಗೆ ಎಡ ಭುಜದಲ್ಲಿ ಬೆಳ್ಳಿಯ ಜನಿವಾರ, ಬಲ ಭುಜದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಏಳು ನಿಲೆ (ಅಂಕಣ)ಯ ಬೆಳ್ಳಿಯ ಸತ್ತಿಗೆ, (ಛತ್ರ) ಬಲಭಾಗದಲ್ಲಿ ಒಂಬತ್ತು ನೆಲೆಯ ಬಂಗಾರದ ಸತ್ತಿಗೆ, ಅಳಿನಷ್ಟು ಉದ್ದಕ್ಕೆ ಜಲ್ಲಿ ಕೀಳೂದ್ದ ಬೀಸಣಿಕೆ, ಮೈರೆ ರೆಕ್ಕೆಯ ಸರ್ವಶಾಸ್ತ್ರ ಬೇಧಗಳೊಂದಿಗೆ ಉದ್ಭವವಾದವರು ಕೆಮ್ಮಲೆಯ ಬೆರ್ಮೆರು……(ಇಂದಿರಾ ಹೆಗ್ಗಡೆ, 80, ೨೦೧೨)

ಪುರಾತನ ನಾಗ ಬೆರ್ಮ – ಆದ್ಯಪ್ಪಾಡಿ (ಕೃಪೆ: ಇಂದಿರಾ ಹೆಗ್ಗಡೆ)

ಇಂದಿರಾ ಹೆಗ್ಗಡೆಯವರ ತುಳುವರ ಮೂಲತಾನ ಆಲಡೆ ಕೃತಿಯಲ್ಲಿ ಇರುವ ಬೆರ್ಮೆರ ಉಪಿದಿಪ ಕಥನಗಳನ್ನಷ್ಟೇ ಗಮನಿಸಿದರೆ, ಬೆರ್ಮೆರ್ ಹುಟ್ಟಿದ್ದು ನೀರಿನಲ್ಲಿ….ಏಳು ಗಂಗೆಗಳ  ನಡುವಿನ ಅರಮನೆಯಲ್ಲಿ. ಬೆರ್ಮೆರ್ ಜೊತೆಗೆ ಸರ್ಪಗಳು, ಹಾವುಗಳು ಕೂಡ ಹುಟ್ಟುತ್ತವೆ. ಹಾಗಾಗಿ ಸರ್ಪಗಳು ಕೂಡ ಬೆರ್ಮೆರ್ ಆಗಿದ್ದಾವೆ.

ಆದಿಯಲ್ಲಿ ನೀರು, ಸರ್ಪಗಳೇ ದೇವರು. ಹೀಗಾಗಿ ನಾಗ. ಬೆರ್ಮನ ಆರಾಧನೆ ಮಾಡಿದರು. ಹೀಗಾಗಿ ಒಂದು ಕಡೆಯಲ್ಲಿ ರಾಜನಂತೆ ಬೆರ್ಮೆರನ್ನು ಕಂಡು ಇನ್ನೊಂದು ನಾಗರೂಪಿಯಾಗಿ ನೋಡಿದ್ದರಲ್ಲಿ ವೈರುಧ್ಯ ಇಲ್ಲ. ನಾಗ ಶಿಲ್ಪಗಳಲ್ಲಿ ರಾಜದಂಡ ಹಿಡಿದುಕೊಂಡ ಮಾನವಾಕಾರ ಸೊಂಟದ ಕೆಳಗಡೆ ನಾಗರ ರೂಪ ಇರುವುದನ್ನು ನಾವು ಕಾಣಬಹುದು.

ಬೆರ್ಮೆರ್ ಅನ್ನು ಅರಸು ಎಂದೇ ಭಾವಿಸಿದರೂ ಲೌಕಿಕ ರಾಜ್ಯವನ್ನು ಅಳಲು ಒಬ್ಬ ಅರಸು ಇರುತ್ತಾನೆ. ಆದರೆ ಈ ಅರಸು ಬೆರ್ಮೆರ್ ಗೆ ನಡೆದುಕೊಳ್ಳುತ್ತಾನೆ. ಬೆರ್ಮೆರ್ ವನಾಧಿಪತಿ. ಕಾಡೇ ಅವನ ವಾಸಸ್ಥಾನ. ಕಾಡು ಲೌಕಿಕವಾಗಿ ಕಂಡರೂ ತನ್ನೊಳಗೆ ಅನೇಕ ನಿಗೂಢತೆಗಳನ್ನು ಕಾಯ್ದುಕೊಂಡಿರುತ್ತದೆ. ಕಾಡನ್ನು ಬೆರ್ಮೆರ್ ನಿಯಂತ್ರಿಸುತ್ತಾ ಕಾಡಿನಿಂದ ಹೊರಡುವ ಎಲ್ಲಾ ಎಲ್ಲಾ ನೀಚ ಶಕ್ತಿಗಳನ್ನೂ ಬೆರ್ಮೆರ್ ನಿಯಂತ್ರಿಸುತ್ತಾನೆ.

ಏಕಕಾಲಕ್ಕೆ ಬೆರ್ಮೆರ್ ನಾಗನಾಗಿ, ಅರಸನಾಗಿ, ಕುಟುಂಬದ ಮೂಲಪುರುಷನಾಗಿ, ಫಲವಂತಿಕೆಯ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ಬೆರ್ಮೆರ್ ಎಂದರೆ ನಿರಾಕರವಾದ ಒಂದು ಶಕ್ತಿ. ಮೂಲದಲ್ಲಿ ಇದ್ದದ್ದು ಬೆರ್ಮೆರ್ ಮಾತ್ರ.

ಆಕರಸೂಚಿ:

1.            ಗೋವಿಂದ ಪೈ, ತುಳುನಾಡು ಪೂರ್ವಸ್ಮೃತಿ, ತೆಂಕನಾಡು, ಕಾಸರಗೋಡು ಸಾಹಿತ್ಯ ಸಮ್ಮೇಳನ ನೆನಪಿನ ಸಂಪುಟ, ಕಾಸರಗೋಡು, ೧೯೪೭

2.            ಇಂದಿರಾ ಹೆಗ್ಗಡೆ, ತುಳುವರ ಮೂಲತಾನ ʼಆದಿ ಆಲಡೆʼ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು, ೨೦೧೨

3.            ಕೆಮ್ತೂರು ರಘುಪತಿ ಭಟ್ಟ, ತುಳುನಾಡಿನ ಸ್ಥಳನಾಮೆಗಳು, ೨೦೦೮

4.            ಮೌಖಿಕ ಸಂಪ್ರದಾಯಗಳು, ಅರಸು ಆರಾಧನೆ, ದಕ್ಷಿಣ ಭಾರತದ ಜಾತಿವ್ಯವಸ್ಥೆಯ ಮರುಪರಿಶೀಲನೆಗೆ ತಕ್ಕ ಸಾಮಗ್ರಿಗಳು; ಪೀಟರ್‌ ಜೆ ಕ್ಲಾಸ್, ತುಳು ಸಾಹಿತ್ಯ ಚರಿತ್ರೆ, ಪ್ರಸರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ೨೦೦೭

5.            Prof. P Paduru Gururaja Bhatt; Studies in Tuluva History and Culture, Dr. Paduru Gururaja Bhat Memorial Trust, Udupi, 2014

ಚರಣ್‌ ಐವರ್ನಾಡು

ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ!
‘ಕಟ್ಟಿಂಗರು’ 2000ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಬಂದಿದ್ದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು. ದ್ರಾವಿಡರ ಮೇಲೆ ಆರ್ಯರ ಆಕ್ರಮಣ ಅಂದರೆ ಹೀಗೆ…ಎಂದು ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ  ನೋವಿನಿಂದ ಹೇಳುತ್ತಾರೆ.

ಸರಸ್ವತಿ, ಕಸ್ತೂರಿ ನಾನು ಅ ದಿನ  ಹೊರಟಿದ್ದು ಶಿರ್ವ ಕಟ್ಟಿಂಗೇರಿ ಎಂಬಲ್ಲಿಗೆ. ಉಡುಪಿಯ ಪ್ರೇಮಕ್ಕ ಎಂದಿನಂತೆ ಹೊಟ್ಟೆ ತುಂಬಾ ತಿನ್ನಿಸಿ ನಮ್ಮನ್ನು ಬೀಳ್ಕೊಟ್ಟರು. ಉಡುಪಿ ಪರಿಸರದಲ್ಲಿ ಯಾವ ಮನೆಗೆ ಅಧ್ಯಯನಕ್ಕಾಗಿ ಹೋಗಬಹುದು ಎಂಬ ಬಗ್ಗೆ ನಮಗೆ ಅರಿವು ನೀಡಿದ್ದು ಸರಸ್ವತಿ ಹೆಗ್ಗಡಿತಿ. ಆ ದಿನ ನಾವು ಶಿರ್ವ ಕಟ್ಟಿಂಗೇರ್ ಆಲಡೆಗೇ ನೇರವಾಗಿ ಹೋದೆವು. ದಂತ ಕಥೆಯ ಪ್ರಕಾರ ‘ಬಾಲು ಮಾಡೆದಿ’  ಹೆಸರಿನ ಮಹಿಳೆ ಇಲ್ಲಿಯ ಕಟ್ಟೆಯಲ್ಲಿ ಕುಳಿತು ಪಂಚಾಯಿತಿ ಮಾಡುತ್ತಿದ್ದರಂತೆ. ಬಾಲು ಮಾಡೆದಿಯ ವಂಶಕ್ಕೆ ಸೇರಿದವರು ಸರಸ್ವತಿ. ಬಾಲು ಮಾಡೆದಿಯ ಸುಳಿವು ಸಿಗಬಹುದೇನೋ ಎಂಬ ಕುತೂಹಲ ಆಕೆಗೆ.

“ಈರ್ ಇಂದ್ರಕ್ಯ ಅತ್ತೆ?”

ಈಗ ಇದು ಸಿರಿ ಆಲಡೆಯಾಗಿ ಉಳಿದಿಲ್ಲ. ಬ್ರಹ್ಮಸ್ಥಾನವಾಗಿ ಮಾತ್ರ ಇದೆ. ಆದರೆ ಸಿರಿ ಆಲಡೆಯ ಕುರುಹುಗಳು ಇವೆ. ನಾವು ಬ್ರಹ್ಮಸ್ಥಾನದ ಒಳಗೆ ಹೋದೆವು. ಅಲ್ಲಿ ಮಾಹಿತಿದಾರರು ಇರಲಿಲ್ಲ. ಮಾಹಿತಿದಾರರನ್ನು ಕೇಳಿದಾಗ ಬ್ರಹ್ಮಸ್ಥಾನದ ಹಿಂಭಾಗದ ಮನೆಯನ್ನು ತೋರಿಸಿದರು. ಅಲ್ಲಿ ಬೆರ್ಮೆರ ಉಯ್ಯಾಲೆ ಇದೆಯೆಂದರು. ಬ್ರಹ್ಮಸ್ಥಾನದ ಸೇವಾ ಕರ್ತರು!  ಬೆರ್ಮರ ಉಯ್ಯಾಲೆ ಅಲ್ಲಿದ್ದರೆ ಅದು ಆಲಡೆ ಮನೆ. ನಾವು ಆ ಮನೆಗೆ ಹೋದೆವು. ಒಂದು ಗದ್ದೆಯಾಚೆ ಆ ಮನೆ ಇತ್ತು. ಚಾವಡಿಯ ಮೆಟ್ಟಲ ಬಳಿ ಎದುರಾದ ಹರೆಯದ ಹೆಣ್ಣು ಮಗಳು, “ಈರ್ ಇಂದ್ರಕ್ಯ ಅತ್ತೆ?” (ನೀವು ಇಂದ್ರಕ್ಕ ಅಲ್ಲವೆ?) ಎಂದು ಮುಗುಳ್ನಗುತ್ತಾ ಕೇಳಿದಳು. ನಾನು ಅಚ್ಚರಿಯಿಂದ ಕಣ್ಣಗಲಿಸಿ ನಿಂತೆ.

ನಮ್ಮೂರ ಜಾತಿ ರಹಿತ ಬಾಂಧವ್ಯ ಹೀಗಿತ್ತು…

“ಇದು ನನ್ನ ಗಂಡನ ಮನೆ. ನೀವು ಫೋನ್ ಮಾಡಿ ಬಂದಿದ್ದರೆ ನಾನು ಹೆಬ್ಬಾರ್ (ಇಲ್ಲಿಯ ಈಗಿನ ಆಡಳಿತ ಮೊಕ್ತೇಸರ)  ಅವರನ್ನು ಇವತ್ತು ಇರಿ ಎನ್ನುತ್ತಿದ್ದೆ” ಎಂದ  ಆಕೆ ಅಷ್ಟಕ್ಕೆ ಮುಗಿಸದೆ, ಕೂಡಲೇ ದೂರವಾಣಿ ಕರೆ ಮಾಡಿ ಮುಗಿಸಿ, ʼಈಗ ಬರುತ್ತಾರಂತೆ’ ಎಂದಾಗ ನಾವು ಸಂತೋಷಪಟ್ಟೆವು. ಆಗಲೇ ಶರಬತ್ ಕುಡಿಸಿ ನಮ್ಮ ಅಸರ್ ತಣಿಸಿದರು.

ಲೋಟ ಕವಚಿ ಹಾಕಿಡಿ!

ಈಗ ಆಕೆಯ ಗಂಡನೂ ಬಂದರು. ಅವರಿಗೂ ಈ ಹುಡುಗಿಯ ಕರೆ ಹೋಗಿರಬೇಕು. ಅವರೂ ಸಡಗರಪಟ್ಟರು. ಆಕೆಗೆ ತವರೂರ ಮೋಹ! ಆದರೆ ಆಕೆಯ ಗಂಡ ಮತ್ತು ಅತ್ತೆಯ ಸಡಗರ? ನನಗೆ ನನ್ನ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಬ್ರಾಹ್ಮಣ ಕುಟುಂಬದ ಮನೆಗೆ ಮಲಗಲೆಂದು ಹೋಗಿ ಅವರು ಬೆಳಿಗ್ಗೆ ಚಾಪೆ ಒಗೆದು ಹಾಕಿ ಹೋಗಲು ಹೇಳಿದ್ದು ನೆನಪಾಯಿತು. ನಾನು ಅಂದು ದುರು ದುರು ಎಂದು ಆ ಕತ್ತಲೆಯಲ್ಲಿ ನನ್ನ ಹಳ್ಳಿ ಮನೆಯತ್ತ ಹೆಜ್ಜೆ ಹಾಕಿದ್ದೂ ನೆನಪಾಯಿತು. ನಾವು ಅವರ ಮನೆಯಲ್ಲಿ ಕುಡಿದ ನೀರಿನ ಲೋಟವನ್ನು ‘ಕವಚಿ’ ಹಾಕಿಡಿ ಎಂದುದು ನೆನಪಾಯಿತು. ಮತ್ತೊಂದು ಮನೆಯ ಬ್ರಾಹ್ಮಣರು, ‘ಅವರು ಕವಚಿ ಹಾಕಲು ಹೇಳಿದ್ದಾರ? ಅದು ಅವಲಕ್ಷಣ! ಎಂದುದೂ ನೆನಪಾಯಿತು. ಒಟ್ಟಿನಲ್ಲಿ ಈ ಮನೆಯ ಸತ್ಕಾರ ಹಳೆಯದನ್ನು ನೆನಪಿಸಿತು.

‘ಬೆರ್ಮರೆ ಉಜ್ಜಾಲ್’

ಮನೆಯ ಪ್ರವೇಶ ದ್ವಾರದ ಎಡಭಾಗದಲ್ಲಿ ವಿಶಾಲ ಚಾವಡಿ ಇತ್ತು. ಆ ಚಾವಡಿಯಲ್ಲಿ ಒಂದು ತೂಗು ಉಯ್ಯಾಲೆ ಇತ್ತು. ಉಯ್ಯಾಲೆಯಲ್ಲಿ ಯಾವ ವಸ್ತುವೂ ಇರಲಿಲ್ಲ. ಆದರೆ ಅದನ್ನು ‘ಬೆರ್ಮರೆ ಉಜ್ಜಾಲ್’ ಎಂದು ಪರಿಚಯಿಸಿದರು. ಬೆರ್ಮೆರೆ ನಿರಾಕಾರ ರೂಪ ಇಲ್ಲಿಯೂ ಇತ್ತು. ಸಾಮಾನ್ಯವಾಗಿ ಬ್ರಾಹ್ಮಣರು ಆರಾಧನೆ, ಉಪಾಸನೆಯ ವಿಷಯದಲ್ಲಿ ಆಡಂಬರ ಮಾಡರು.

ಕಟ್ಟಿಂಗೇರಿ…

ಕಟ್ಟಿಂಗೇರಿ ಬ್ರಹ್ಮಸ್ಥಾನ ಸಿರಿ ಆಲಡೆ ಆಗಿದ್ದರೂ ಇತ್ತೀಚೆಗೆ ಸಿರಿ ಆಲಡೆಯ ರೀತಿ ನಡೆಯುತ್ತಿಲ್ಲ ಎಂದಳು ವಾಣಿ.

ಎಲ್ಲಾ ಬ್ರಹ್ಮಸ್ಥಾನಗಳು, ಸಿರಿ ಆಲಡೆಗಳು ಕಾಡಿನ ನಡುವೆಯೇ ಇದ್ದವುಗಳು. ಹಾಗೆಯೇ ಈ ಊರು ಕೂಡಾ ಕಾಡಾಗಿತ್ತು. ಈಗಲೂ ಹೆಚ್ಚಿನ ಭಾಗ ಕಾಡು ಆಗಿ ಉಳಿದಿದೆ. ಇಲ್ಲಿ ರಸ್ತೆ ಅಗಲೀಕರಣ ಆದಾಗ ಈ ಕಾಡಲ್ಲಿ ಬದುಕು ಕಟ್ಟಿರುವ ಜನರ ಅವಶೇಷಗಳು ದೊರಕಿವೆ ಎಂದವರು ಮೊಕ್ತೇಸರರಾದ ಹೆಬ್ಬಾರರು. ಆ ಜನರು ‘ಕಟ್ಟಿಂಗ’ ಎಂಬ ದಲಿತ ಜನಾಂಗದವರು ಎಂದರು. ಇವರ ಜನಾಂಗದ ಗುರಿಕಾರನನ್ನು ‘ಕಟ್ಟಿಂಗ’ ಎಂದು ಗುರುತಿಸುತ್ತಾರೆ ಎಂದು ವಿವರಿಸಿದರು. ಕಟ್ಟಿಂಗರ ಕೇರಿ ‘ಕಟ್ಟಿಂಗೇರಿ’ ಎಂದಾಗಿದೆ. ಕಟ್ಟಿಂಗರ ಆಲಡೆ ಕಟ್ಟಿಂಗೇರಿ ಆಲಡೆ ಎಂದರು. ಕಟ್ಟಿಂಗರ ಬಾಕುಡರು ಎಂದೂ ಗುರುತಿಸುತ್ತಾರಂತೆ.  ಇಲ್ಲಿ ‘ಕಟ್ಟಿಂಗ ಕೆರೆ’ ಕೂಡಾ ಇದೆಯೆಂದರು. ಅದು ಈಗ ದೇವಸ್ಥಾನದ ಕೆರೆ ಆಗಿದೆ. ಈ ದೇವರ ಕೆರೆಯೇ ಆರು ಎಕ್ರೆ ಇದೆಯಂತೆ. ಈ ಕೆರೆಯನ್ನು ಮರು ನಿರ್ಮಾಣ ಮಾಡುವಾಗ ಕಟ್ಟಿಂಗರ ಸಮುದಾಯಕ್ಕೆ ಸೇರಿರಬಹುದಾದ ತಾಮ್ರದ ಪಾಪೆ-ಮುಂತಾದ ಪಳೆಯುಳಿಕೆಗಳು ದೊರೆತಿವೆ ಎಂದವರು ಹೆಬ್ಬಾರರು.

ಕಟ್ಟಿಂಗರ ಮೂಲದ ಬನ

ಅಷ್ಟಮಂಗಳ ಪ್ರಶ್ನೆಯಲ್ಲಿ ಕೂಡಾ ಕಟ್ಟಿಂಗರ ವಿಷಯ ತೇಲಿ ಬಂತು ಎಂದರು ಹೆಬ್ಬಾರರು. “ಓ ಅಲ್ಲಿ ಕಟ್ಟಿಂಗರ ಬನ ಇದೆ” ಕೈಚಾಚಿ ಹೇಳಿದರು. ಅವರು ಕೈನೀಡಿ ತೋರಿಸಿದ ಬನ ಆಕೆಯ ಮನೆಯ ಹಿಂಭಾಗದ ಗದ್ದೆಯ ಹಿಂದೆ ಸ್ವಲ್ಪ ಎತ್ತರದ ಜಾಗದಲ್ಲಿತ್ತು. ಬನದ ಪೊದೆ, ಗಿಡ, ಮರ ಕಡಿಯಲಾಗಿದೆ. ಕೆಲವು ಮುರಕಲ್ಲುಗಳನ್ನು ಸಾಲಾಗಿ ಇಡಲಾಗಿದೆ. ಅಲ್ಲಿಗೇ ನಡೆದೆವು ನಾವು. “ ಇದು ಕಟ್ಟಿಂಗರ ಮೂಲದ ಬನ. ಈ ಕಲ ಅವರ ಮೂಲಸ್ಥಾನವಂತೆ. ಅವರೆಲ್ಲ ಇಲ್ಲಿಗೆ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತಾರೆ. ಇಲ್ಲಿ ಜಾತ್ರೆ ನಡೆಯುವ ದಿನಗಳವು. ಹೀಗೆ ತುಳುನಾಡಿನ ನೆಲಮೂಲದ ಆಚರಣೆಯಂತೆ ಬೇಸಗೆಯಲ್ಲಿ ವರ್ಷಕ್ಕೆ ಒಮ್ಮೆ ಇವರ ಬನದಲ್ಲಿ ತನು ಸೇವೆ ಮುಗಿಸಿ ಮರಳುತ್ತಾರೆ.’

ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆ!

ನಮ್ಮ ಜೊತೆ ಇದ್ದ ಸ್ಥಳೀಯರು ಮಾತು ಮುಂದುವರಿಸಿದರು. 2000 ನೇ ಇಸವಿಯಲ್ಲೂ ಜಾತ್ರೆಯ ದಿನಗಳಲ್ಲಿ ಕಟ್ಟಿಂಗರು ಬಂದಿದ್ದರು. ಬಂದವರು ಇಲ್ಲೇ (ಬನದ ನೆಲದಲ್ಲಿ) ಮಾಮೂಲಿಯಂತೆ ತನು ಹುಯ್ಯಲು/ಎರೆಯಲು ಮುಂದಾದರು. ಆಗ ಜಾತ್ರೆಗೆ ಬಂದಿದ್ದ ‘ತಂತ್ರಿ’ಯವರು ಇದ್ದರು. ಆತ ಕಟ್ಟಿಂಗರನ್ನು ಕಂಡವರೇ ದಬಾಯಿಸಿದರು. ಮತ್ತೆಂದೂ ಇತ್ತ ಬರಬಾರದೆಂದು ಅಪ್ಪಣೆ ಇತ್ತರು ಎಂದಳು! ಇದು ದ್ರಾವಿಡರನ್ನು ಆರ್ಯರು ದಬ್ಬಿದರು ಎನ್ನುವುದಕ್ಕೆ ಉದಾಹರಣೆಯಾಗಬಲ್ಲುದು. ಆ ದಬ್ಬಾಳಿಕೆಯ ಮಾಹಿತಿ ಪಡೆದ ನನಗೆ ನನ್ನ ಮನೆಯಿಂದ ನನ್ನನ್ನು ಹೊರಗೆ ತಳ್ಳಿದಂತೆ ನೋವಾಯಿತು. ನಾವು ಇಲ್ಲಿಗೆ ಹೋದುದು 2000ಕ್ಕೆ. ಆಗ ಜಾತ್ರೆ ಮುಗಿದಿತ್ತು.

ದಲಿತರ ಇಂತಹ ಮೂಲಸ್ಥಾನಗಳನ್ನು ನವೀಕರಣದ ಹೆಸರಲ್ಲಿ ಸಂಸ್ಕೃತೀಕರಣಗೊಳಿಸಿ ದಲಿತರನ್ನು ಕೆಳವರ್ಗದವರನ್ನು ಅವರದೇ ಮೂಲತಾನಗಳಿಂದ, ಅವರದೇ ಕುಲದೇವರುಗಳಿಂದ ದೂರೀಕರಿಸುವುದು ತುಳುನಾಡಿನಲ್ಲಿ ನನ್ನ ಅಧ್ಯಯನ ಕಂಡ ವಿಷಯ. ಉತ್ತರ ಭಾರತ ಮೂಲದವರ ಅಷ್ಟಮಂಗಳದವರ ಬೆಂಬಲವೂ ಇಲ್ಲಿ ಕಾಣಬರುತ್ತದೆ. ಆದರೂ ಇದು ಬ್ರಾಹ್ಮಣರ ಅಥವಾ ಅಷ್ಟಮಂಗಳದವರ ತಪ್ಪಲ್ಲ. ತುಳುನಾಡಿನ ಇತರ ಮೇಲ್ವರ್ಗದವರ ಪಾಲು ಇದರಲ್ಲಿ ಹೆಚ್ಚಿದೆ. ಜೀರ್ಣೋದ್ಧಾರಕ್ಕೆ ರೂಪು ರೇಷೆ ಹಾಕಿ ಅಷ್ಟಮಂಗಳದವರನ್ನು ಕರೆಸುವುದು ಹೆಚ್ಚಾಗಿ ಬಂಟರು.

ಈ ಕಟ್ಟಿಂಗರ ಮೂಲತಾನದ ಆಡಳಿತ, ಹೆಬ್ಬಾರ ಕುಟುಂಬಕ್ಕೆ ಹಸ್ತಾಂತರ ಆದುದು ಜೈನ ಕುಟುಂಬದಿಂದ. ಇಲ್ಲಿ ಇದ್ದ ಜೈನ ಕುಟುಂಬದವರು 1957ರಲ್ಲಿ ಆಸ್ತಿ, ಪಟೇಲ ಹುದ್ದೆ ಹಾಗೂ ಈ ಬ್ರಹ್ಮಸ್ತಾನದ ಒಡೆತನವನ್ನು ಈಗಿನ ಹೆಬ್ಬಾರ ಕುಟುಂಬಕ್ಕೆ ದಾನ ನೀಡಿದ್ದರಂತೆ. ಸಾಮಾನ್ಯವಾಗಿ ಜೈನರ ಕುಟುಂಬ ಸಂಸ್ಥೆ ಚಿಕ್ಕದಿದ್ದರೆ ಅಲ್ಲಿ ಮುಂದೆ ಸಂತಾನ ನಶಿಸುತ್ತದೆ. ಅಂತಹ ಸಂದರ್ಭದಲ್ಲಿ ಇಂತಹ ಕ್ಷೇತ್ರಗಳನ್ನು ಬ್ರಾಹ್ಮಣರಿಗೆ ದಾನ ನೀಡಿ ಪೂಜಾ ವ್ಯವಸ್ಥೆಯನ್ನು ಮಾಡಲು ಕರಾರು ಮಾಡಿರುವುದು ನನ್ನ ಅಧ್ಯಯನ ಕಾಲದಲ್ಲಿ ದೊರಕಿದೆ.

ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ…

ಇತ್ತೀಚಿನ ವರ್ಷಗಳಲ್ಲಿ ಬ್ರಹ್ಮಸ್ಥಾನ ಎಂದು ಗುರುತಿಸಿಕೊಳ್ಳುವ ಈ ದೇವಸ್ಥಾನದಲ್ಲಿ ಚತುರ್ಮುಖ ಬ್ರಹ್ಮ ಶಿಲ್ಪ ಇದೆ. ತುಳುವರ ನಿರಾಕಾರ ಬ್ರಹ್ಮನಿಗೆ ಮೂರ್ತರೂಪ ಕೊಟ್ಟಿದ್ದು ಹೀಗೆ. ಡಾ. ಗುರುರಾಜ ಭಟ್ಟರ ಸಂಗ್ರಹದಲ್ಲಿ ಈ ಶಿಲ್ಪದ ಚಿತ್ರ ಇದೆ. ನಾಲ್ಕು ತಲೆ ಒಂದು ಕಿರೀಟ, ನಾಲ್ಕು ಕೈಗಳ ಹತ್ತು ಅಡಿ ಎತ್ತರದ ಶಿಲ್ಪ ಎಂದು ಬರೆಯುತ್ತಾರೆ ಅವರು. ಈ ಶಿಲ್ಪದ ಮೇಲ್ಭಾಗದ ಒಂದೊಂದು ಕೈಗಳಲ್ಲಿ ಜಪಸರ ಮತ್ತು ಕುಂಡಲಗಳಿವೆ. ಇದು ಪದ್ಮಾಸನದಲ್ಲಿ ಇದ್ದು ಧ್ಯಾನ ಮುದ್ರೆಯಲ್ಲಿರುವ ವೇದ ಬ್ರಹ್ಮ ಎಂದು ಗುರುರಾಜ ಭಟ್ಟರು ಬರೆಯುತ್ತಾರೆ. ಪದ್ಮಾಸನ ಭಂಗಿಯಲ್ಲಿ ಇರುವ ಈ ಚತುರ್ಮುಖ ಶಿಲ್ಪದ ಪೀಠದಲ್ಲಿ ಕೋಳಿಯ ಚಿತ್ರ ಇದೆ. ಕೋಳಿ (ಮಯೂರ) ಕುಮಾರನ ಸಂಕೇತ. ಸಿರಿಯ ಮಗ ಕುಮಾರನ ಸಂಕೇತವೂ ಕೋಳಿ. ತುಳುವರ ಆರಾಧನಾ ಕ್ಷೇತ್ರಗಳಲ್ಲಿ ಕೋಳಿಯ ಪ್ರತಿಮೆಗಳಿವೆ.

ಸಿರಿಯ ಕುಟುಂಬ ಇಲ್ಲಿಲ್ಲ…

ಸಿರಿಯ ಕುಟುಂಬದ ಅಬ್ಬಗ, ದಾರಗ, ಸೊನ್ನೆ, ಗಿಂಡೆ ಮಾತ್ರ ಇಲ್ಲಿ ಇಲ್ಲ. ಆದರೆ ಕುಮಾರ, ನಂದಿಗೋನ, ರೆಕ್ಕೆಸಿರಿ, ಚವುಂಡಿ -ಹೀಗೆ ಪರಿವಾರ ದೈವಗಳಿವೆ. ಕುಮಾರ ಶಿಲ್ಪ ಇದ್ದರೂ ಕುಮಾರ ದರ್ಶನ ಇಲ್ಲ. ಆದರೆ ಕೆಲವು ಕಾಲದ ಹಿಂದೆ ಬ್ರಹ್ಮದರ್ಶನ ಇತ್ತು ಇತ್ತೀಚೆಗೆ ಅದೂ ನಿಂತಿದೆ. ಇಲ್ಲಿ ಹಿಂದೆ ದೆಯ್ಯೊಲೆ ನಲಿಕೆ ಆಗುತ್ತಿತ್ತು ಎನ್ನುತ್ತಾರೆ. ಹೀಗಾಗಿ ಇಲ್ಲಿ ಅತಿಕಾರೆ ಭತ್ತದ ಪ್ರಾತಿನಿಧಿಕ ಸಿರಿಗಳು ಇದ್ದಿರಬಹುದು. ದೆಯ್ಯೊಲೆ ನಲಿಕೆ ನಡೆಯುತ್ತಿದ್ದ ಗದ್ದೆಯನ್ನು ‘ಜಕ್ಕೆದ ಬಾಕ್ಯಾರ್’ ಎಂದು ಇಂದಿಗೂ ಕರೆಯಲಾಗುತ್ತದೆ. ‘ಜಕ್ಕೆದ ಬಳಿ’ ಅಂದರೆ  ಢಕ್ಕೆ ಬಳಿ. ದೆಯ್ಯೊಲಿ ನಲಿಕೆ ಆಗುತ್ತಿದ್ದಲ್ಲಿ ಬೀಜದ ಜೊತೆ ಬಂದಿರುವ (ಕುಂಭ) ಕಡ್ಯ ಸಿರಿಯ ಜಕ್ಕೆದ ನಲ್ಕೆ, ದೆಯ್ಯೊಲೆ ನಲ್ಕೆ ನಡೆಯುತ್ತಿದ್ದಿರಬೇಕು.

ಸಂಸ್ಕೃತೀಕರಣ ಮತ್ತು ಮೂಲ ಅಸ್ಮಿತೆ…

ಸಾಮಾನ್ಯವಾಗಿ ಪಾಳೆಯಗಾರರ ಆಲಡೆ ಕ್ಷೇತ್ರಗಳಲ್ಲಿ ಅಂಬೊಡಿ ನಡೆಯುವ ಗದ್ದೆ, ಅಂಕದ ಗದ್ದೆ ಇತ್ಯಾದಿ ಇರುತ್ತವೆ. ಇಲ್ಲಿಯೂ ಇತ್ತು. ಈಗ ಇಲ್ಲಿಯ ಅಂಕ ಅಂಬೊಡಿಯ ಆಚರಣೆ ನಿಂತಿದೆ. ಆದರೂ ‘ಅಂಕದ ಗದ್ದೆ, ಅಂಬೊಡಿ ಗದ್ದೆ, ಚೆಂಡಿನ ಗದ್ದೆ’ ಎಂಬ ಹೆಸರುಗಳು ನೆಲಮೂಲದ ಕ್ಷೇತ್ರವೊಂದು ವೈದಿಕೀಕರಣ ಗೊಂಡುದಕ್ಕೆ ಸಾಕ್ಷಿ ನೀಡುತ್ತವೆ. ಹೀಗೆ ತುಳು ಜನಪದರ ಉಪಾಸನಾ ಕಲಗಳು ಸಂಸ್ಕೃತೀಕರಣ ಗೊಂಡರೂ ತಮ್ಮ ಮೂಲ ಅಸ್ಮಿತೆಯ ಚಿತ್ರಣವನ್ನು ಕಳೆದುಕೊಳ್ಳುವುದಿಲ್ಲ.

ಸರಸ್ವತಿ ಹೆಗ್ಗಡಿತಿ ಇಲ್ಲಿಗೆ  ಬಂದುದರ ಕಾರಣ ನಾನು ಆರಂಭದಲ್ಲೇ ಹೇಳಿರುವೆನು.  ಅವರ ನಂಬಿಕೆಯ ‘ಬಾಲು ಮಾಡೆದಿ’ ಕಟ್ಟೆಯನ್ನು ವಾಣಿ ತೋರಿಸಿದಾಗ ಸರಸ್ವತಿಯ ಸಂತಸಕ್ಕೆ ಪಾರವೇ ಇಲ್ಲ. ಆಲಡೆಯ ಜಾತ್ರೆಯ ದಿನಗಳಲ್ಲಿ ಆ ಕಟ್ಟೆಯಲ್ಲಿ ದೀಪ ಹೊತ್ತಿಸಲಾಗುತ್ತದೆಯೆಂದರು. ಐತಿಹ್ಯ ತಲೆಮಾರಿನಿಂದ ತಲೆಮಾರಿಗೆ ಹೀಗೇ ಮುಂದುವರಿಯುತ್ತದೆ.

ಡಾ. ಇಂದಿರಾ ಹೆಗ್ಗಡೆ

ಕನ್ನಡ ಮತ್ತು ತುಳು ಭಾಷಾ ಸಾಹಿತಿ, ಉಪನ್ಯಾಸ, ಸಂಶೋಧನೆ ಹಾಗೂ ಸಮಾಜ ಸೇವೆಗಳಲ್ಲಿ ಸದಾ ಸಕ್ರಿಯರು.

ತುಳುನಾಡಿನ ‘ಪರ್ಬ’ ‘ದೊಡ್ಡಬ್ಬ’ ಎಂಬ ಜನ ಮೂಲ ಹಬ್ಬ.
ತುಳು ಹಾಗೂ ಅರೆಬಾಸೆಯವರ ‘ಪರ್ಬ’  ಅಥವಾ  ‘ದೊಡ್ಡಬ್ಬ’ ವೇ ಇಂದು ಬಲೀಂದ್ರ ಪೂಜೆಯಾಯಿತೇ? ವ್ಯಾಪಕ ಆಚರಣೆಯಲ್ಲಿದ್ದ ಜನಪದೀಯ ಹಬ್ಬವೊಂದು ಪುರಾಣ ಕತೆಗೆ ಪ್ರೇರಣೆಯಾಯಿತೇ? ಓದಿ.. ಕೃಷಿಕ ಗೋಪಾಲ್‌ ಪೆರಾಜೆಯವರ ಲೇಖನ

ಈ ಮೇಲಿನ ಎರಡು ಪದಗಳಲ್ಲಿ ಮೊದಲಿನದು ‘ತುಳು’ ಭಾಷೆಗೆ ಸಂಬಂಧಿಸಿದರೆ ಎರಡನೆಯದು ಅರೆಬಾಸೆಗೆ ಸಂಬಂಧಿಸಿದೆ.  ‘ಪರ್ಬ’ ಅಥವಾ ‘ದೊಡ್ಡಬ್ಬ’ ಇಂದು ‘ಬಲಿಂದ್ರ’ ಅಥವಾ ‘ದೀಪಾವಳಿ’ ಎಂದು ಕರೆಯಲ್ಪಡುತ್ತಿದೆ. ಬಹುಷ: ಪುರಾಣ ಕಥೆಯೊಂದರ ರಚನೆಯ ನಂತರ ಈ ಹೆಸರುಗಳು ಬಂದಿರಬೇಕು. ಅದರ ಬಗ್ಗೆ ಸ್ವಲ್ಪ ವಿವರಣೆಗಳನ್ನು ಮತ್ತೆ ನೋಡೋಣ.

ಹಬ್ಬದ ಆಚರಣೆಯ ಸಂದರ್ಭ…

ಮೊದಲಿಗೆ ಈ ಹಬ್ಬದ ಆಚರಣೆಯ ಸಂದರ್ಭ ಮತ್ತು ಅದು ಜನಸಾಮಾನ್ಯರಲ್ಲಿ ಏಕೆ ‘ದೊಡ್ಡಬ್ಬ’ವಾಗಿ ಗುರುತಿಸಿಕೊಂಡಿತು ಎಂಬುದನ್ನು ನೋಡಬೇಕಾಗುತ್ತದೆ. ಒಂದು ಕಾಲದಲ್ಲಿ ಬತ್ತದ ಬೇಸಾಯವೇ ಪ್ರಧಾನವಾಗಿದ್ದ ತುಳುನಾಡಿಗೆ ‘ಕೆಡ್ಡಾಸ’ ‘ಬಿಸು’ ‘ಹೊಸ್ತು’  ‘ಪರ್ಬʼ ಆಚರಣೆಗಳು ನಿಜಕ್ಕೂ ಪರ್ವ ದಿನಗಳೇ ಆಗಿದ್ದವು. ಫೆಬ್ರವರಿ ‘ಕೆಡ್ಡಾಸ’ ದಲ್ಲಿ ಭೂಮಿತಾಯಿ ಮುಟ್ಟು ಆಗಿರುತ್ತಾಳೆ ನಂತರ ಬರುವ ಏಪ್ರಿಲ್ ನ  ‘ಬಿಸು’ ಹಬ್ಬಕ್ಕೆ ಭೂಮಿಗೆ ನೇಗಿಲು ಮುಖಾಂತರ ಉಳುಮೆ ಆರಂಭವಾಗುತ್ತದೆ. ಸೆಪ್ಟೆಂಬರ್ ಹೊತ್ತಿಗೆ ಬಸಿರಾದ ಭೂಮಿಯಿಂದ ಭತ್ತದ ತೆನೆಗಳು ಎದ್ದು ನಿಂತಿರುತ್ತವೆ. ಆಗ ಬರುವುದೇ ‘ಹೊಸ್ತು’ ಮನೆ ತುಂಬಿಸುವ ಹಬ್ಬ. ಈಗ ಭತ್ತದ ಕಣಜ ಮನೆ ತುಂಬಿದೆ. ಒಕ್ಕಲಿನವರ ಸಂತೋಷ, ಖುಷಿಗಳು ಕಳೆಕಟ್ಟಿವೆ. ದೊಡ್ಡಬ್ಬ ಅಥವಾ ಪರ್ಬಕ್ಕೆ ರಂಗ ಸಜ್ಜುಗೊಳ್ಳುವ ಮೂಲಕ ತುಳುನಾಡಿನ ಬಹುದೊಡ್ಡ ಹಬ್ಬದ ಆಚರಣೆ ನಡೆಯುತ್ತದೆ.

ಹಲವು ಸಾಂಪ್ರದಾಯಿಕ ಕಟ್ಟಳೆಗಳೊಂದಿಗೆ ಮೂರು ದಿನಗಳ ನಿರಂತರ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ ಹಬ್ಬ. ತುಳುನಾಡಿನ ಬೇರೆ ಬೇರೆ ಭಾಗಗಳು ಮತ್ತು ಜನಾಂಗಗಳು ಹೇಗೆ ಇದನ್ನು ಕಂಡವು ಎನ್ನುವ ವಿವರಕ್ಕೆ ಹೋಗದೆ ಮುಖ್ಯವಾಗಿ ಅರೆಬಾಸೆ ಗೌಡರ ಹಿನ್ನೆಲೆಯಲ್ಲಿ ಇದನ್ನು ನೋಡಲೆತ್ನಿಸುವೆ.

ಅರೆಬಾಸೆ ಗೌಡರ ಹಬ್ಬದ ತಯಾರಿ

ಕನಿಷ್ಠ  ಒಂದು ವಾರದ ಮೊದಲೇ ಹಬ್ಬಕ್ಕೆ ತಯಾರಿಯನ್ನು ಜನ ಶುರು ಮಾಡುತ್ತಾರೆ. ಅಂಗಳದ ಮಧ್ಯೆ ಪ್ರತಿಷ್ಠಾಪಿಸಲಿರುವ ಹಾಲು ಸುರಿಸುವ ಹಾಲೆಮರದ, ಅಂದರೆ  ಕಾಂಡದಲ್ಲಿ ಮೂರು ಗೆಲ್ಲುಗಳು ಟಿಸಿಲೊಡೆದ ಒಂದು ಗಿಡವನ್ನು ಆಯ್ಕೆ ಮಾಡುತ್ತಾರೆ. ಅಂತಹ ಮರದ ಕೊಂಬೆಯನ್ನು ಕತ್ತರಿಸಿ ತಂದು ಅಮಾವಾಸ್ಯೆಯ ದಿನ ಅಂಗಳದಲ್ಲಿ ನೆಡುತ್ತಾರೆ. ಕಾಡು ಬೆಟ್ಟಗಳಲ್ಲಿ ಸಿಗುವ  ಕೇಪ್ಳ ಹೂ, ಕೇನೆ ಕಾಯಿ, ಹಂದಿ ಬಳ್ಳಿ ಕಾಯಿ, ನರಿಕೊಂಬು, ನೆಲಗುಬ್ಬಿ, ಮಾರಾಟಿ ಮಲ್ಲಿಗೆ, ಚೆಂಡು ಹೂವು, ಇತ್ಯಾದಿ ಮಾಲೆಗಳಿಂದ ಮರವನ್ನು ಶೃಂಗರಿಸುವರು. ಈ ಶೃಂಗಾರಕ್ಕಾಗಿ ಮರದ ಕಂಠ ಭಾಗಕ್ಕೆ ಬಿದಿರ ಸಲಾಕೆಯೊಂದನ್ನು ಅಡ್ಡ ಕಟ್ಟಿ ಅದರ ಎರಡು ತುದಿಗಳಿಗೆ ವೀಳ್ಯದ ಎಲೆ ಮತ್ತು ಅಡಿಕೆ ಸುರಿದು ನೇತು ಹಾಕುತ್ತಾರೆ. ಮರಕ್ಕೆ ಅರ್ಧ ಚಂದ್ರಾಕೃತಿ ಅಥವಾ ತ್ರಿಕೋನ ಆಕಾರದಲ್ಲಿ ಮಾಡಿದ ಚೆಂಡು ಹೂಗಳನ್ನು ಸುರಿದ ಮುಡಿಯೊಂದನ್ನು ಕಿರೀಟ ರೀತಿಯಲ್ಲಿ ಕಟ್ಟುವರು. ಮರದ ಕೊರಳಿಗೆ ಅಂದರೆ ಕಂಠ ಭಾಗಕ್ಕೆ ಒಂದು ಹಿಡಿಯಷ್ಟು ದಪ್ಪದ ಭತ್ತದ ಕದಿರನ್ನು ಕಟ್ಟಬೇಕು. ಆ ಪವಿತ್ರ ಮರದ ಪೂಜ್ಯ ಭಾಗವೇ ಭತ್ತದ ಕದಿರು. ಇದಾದ ನಂತರ ಮೂರು ದಿನ ರಾತ್ರಿಗಳಲ್ಲಿ ಮರದ ಅಡಿ ಭಾಗದ ಅಂಗಳಕ್ಕೆ ಸೆಗಣಿ ಸಾರಿಸಿ,  ಮಣೆ ಇಟ್ಟು ಅದರ ಮೇಲೆ ಜೋಡು ಬಾಳೆಗಳ ಎಲೆ ಹಾಸಿ,  ಎಡೆ ಇರಿಸುವರು. ಮರದ ಟಿಸಿಲೊಡೆದ ಭಾಗದಲ್ಲಿ  ಹಣತೆ ಇಟ್ಟು,  ಕೈ ಮುಗಿಯುತ್ತ ‘ಪೊಲಿ ಪೊಲಿಯೇ ಬಾ’ ಎಂದು ಮನೆ ಮಂದಿ ಕೂಗುವರು. ಅಂದರೆ ‘ಸಮೃದ್ಧಿಯೇ ಮನೆಯೊಳಗೆ ತುಂಬಿ ತುಂಬಿ ಬಾ’ ಎಂಬ ಅರ್ಥ.  ಈ ಮರ ಹಾಕುವುದರಲ್ಲಿ ಕೆಲವೆಡೆ ಏಕಮರ, ಕೆಲವೆಡೆ ಜೋಡು ಮರ, ಮೂರು ಮರಗಳನ್ನು ನೆಡುವವರು ಇರುತ್ತಾರೆ. ಮನೆಯೊಳಗೆ ಬುಟ್ಟಿಗಳಲ್ಲಿ ಹುಳಿದೋಸೆ ( ಉದ್ದಿನ ದೋಸೆ) ಅಪ್ಪ ಮತ್ತು ಬಾಳೆಹಣ್ಣು  ತುಂಬಿರುತ್ತವೆ. ಹಬ್ಬದ ಊಟದಲ್ಲಿ ಮಾಂಸಾಹಾರ ಬಹು ಮುಖ್ಯ ಭಾಗ. ಇಲ್ಲಿ ಮರ ಹಾಕುವುದರಲ್ಲಿ ಮಾತ್ರವಲ್ಲ ಆಚರಣೆಯ ವಿಚಾರದಲ್ಲಿ ಕೂಡ ಮನೆಮನೆಗಳಲ್ಲಿ ಊರೂರುಗಳಲ್ಲಿ ವೈವಿಧ್ಯತೆ ತುಂಬಿರುತ್ತದೆ.

ಇದೊಂದು ಆದಿಮ ಆಚರಣೆ…

ಇದೊಂದು ಆದಿಮಕಾಲದ ಪ್ರಕೃತಿ ಪೂಜೆಯ ಭಾಗವೇ ಸರಿ. ಮರ, ಮಾಲೆ, ಫಲವಸ್ತುಗಳು ಎಲ್ಲವೂ  ನೆಲದ ಪೂಜೆಯ ಭಾಗಗಳಾಗಿವೆ.  ಮೂರು ದಿನಗಳಲ್ಲಿ ಫಲ ಕೊಡುವ ಹೊಲಗದ್ದೆಗಳು, ಉಳುಮೆಗೆ ಹೆಗಲುಕೊಟ್ಟ ಹಟ್ಟಿಯ ದನಗಳು, ಭೂತಗುಡಿಗಳು ಸೇರಿದಂತೆ ಗತಿಸಿದ ಹಿರಿಯರಿಗೆ ಎಡೆ ಇಡುವುದು ಎಲ್ಲ ಆರಾಧನೆಗಳು ರೂಢಿಯ ಕಟ್ಟಳೆಗಳಿಂದಲೇ ನೆರವೇರುತ್ತವೆ. ಒಂದು ಕಾಲದಲ್ಲಿ ಬೇಸಾಯದ ಪ್ರತಿ ಮನೆಗಳ ಮುಂದೆ ನಡೆಯುತ್ತಿದ್ದ ಈ ಪೂಜಾ ಪದ್ಧತಿಯಲ್ಲಿ ಪೂಜಾರಿ, ಪುರೋಹಿತ, ದೈವ ನರ್ತಕ, ಜೋಯಿಸ ಯಾರಿಗೂ ಪ್ರವೇಶವೇ ಇರಲಿಲ್ಲ. ಹಾಗಾಗಿಯೇ ಇದೊಂದು ಆದಿಮ ಆಚರಣೆ.  ಅಗೋಚರ, ಆಧ್ಯಾತ್ಮ, ಧರ್ಮಶಾಸ್ತ್ರಗಳ ಸೋಂಕು ಇಲ್ಲಿಲ್ಲ.

ದೀಪಾವಳಿ ಅಲ್ಲ.. ದೊಡ್ಡಬ್ಬ…

ಈ ಹೊತ್ತು ದೀಪಾವಳಿ ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಒಂದೆರಡು ತಲೆಮಾರುಗಳ ಹಿಂದೆ ಈ ಹೆಸರು  ಇರಲಿಲ್ಲ. ಈ ವಿಷಯ ಕುರಿತಂತೆ  ಅಧ್ಯಯನ ನಡೆಸಿದ ಸಂದರ್ಭದಲ್ಲಿ ಅರೆಬಾಸೆಯ 80 ವರ್ಷ ದಾಟಿದ ಹಿರಿಯರು ಅದನ್ನು ‘ದೊಡ್ಡಬ್ಬ’ ಎಂದು ಕರೆಯುತ್ತಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದರು. ಅವರು ಬಲಿ ಚಕ್ರವರ್ತಿ, ವಾಮನ ಅವತಾರ ಕಥೆಯನ್ನು ಕೇಳಿರಲಿಲ್ಲ. ಅಂದರೆ ವ್ಯಾಪಕ ಆಚರಣೆಯಲ್ಲಿದ್ದ ಜನಪದೀಯ ಹಬ್ಬವೊಂದು ಪುರಾಣ ಕತೆಗೆ ಪ್ರೇರಣೆಯಾಗಿದೆ ಅಷ್ಟೆ. ಜನಪದ ಅಧ್ಯಯನಕಾರರು, ಇತಿಹಾಸಕಾರರು ಈಗಾಗಲೇ ನಡೆಸಿರುವ ಸಂಶೋಧನೆಗಳ ಆಧಾರದಲ್ಲಿ ಅನೇಕ ಜನಪದ ಆಚರಣೆಗಳು ಪುರಾಣಗಳ ಭಾಗವಾಗಿ ಕಥೆಗಳ ರೂಪವನ್ನು ಪಡೆದಿವೆ, ಮತ್ತು ಈಗ ಅವುಗಳನ್ನೇ ನಿಜವೆಂದು ಬಿಂಬಿಸಲಾಗುತ್ತಿದೆ.  ಹೀಗಾದಾಗ ಜನಪದ ಆಚರಣೆಗಳಲ್ಲಿ ವೈದಿಕ ಕ್ರಮಗಳ ಅಳವಡಿಕೆ ಸುಸೂತ್ರವಾಗುತ್ತದೆ, ಸಲೀಸಾಗುತ್ತದೆ. ಬತ್ತದ ಕೃಷಿಯ ಕಣ್ಮರೆಯೊಂದಿಗೆ ಬಿಸು, ಹೊಸ್ತು, ದೊಡ್ಡಬ್ಬಗಳು ಜನರ ಮಧ್ಯೆ ಇಲ್ಲವಾಗುತ್ತಿದ್ದು ಅಥವಾ ನೆಪ ಮಾತ್ರಕ್ಕೆ ಎಂಬಂತೆ ಆಚರಣೆಯಲ್ಲಿದ್ದು ಅವುಗಳೆಲ್ಲ ದೇವಾಲಯಗಳಿಗೆ ಸೇರ್ಪಡೆಗೊಳ್ಳುತ್ತಿರುವುದು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ. ಅದರ ಪರಿಣಾಮಗಳು ಏನು ಎಂತು ಎಲ್ಲರಿಗೂ ತಿಳಿದ ಸಂಗತಿ.

ಗೋಪಾಲ್‌ ಪೆರಾಜೆ
ಕೃಷಿಕರು, ಸಾಮಾಜಿಕ ಕಾರ್ಯಕರ್ತರು. ಸುಳ್ಯದ ನಿವಾಸಿ.

ತುಳುನಾಡಿನ ದೈವಗಳು: ಒಂದು ಟಿಪ್ಪಣಿ
ತುಳುನಾಡಿನ ದೈವಗಳನ್ನು ʼಹಿಂದೂ ಧರ್ಮದʼ ಚೌಕಟ್ಟಿಗೆ ಒಳಪಡಿಸುವ ಪ್ರಕ್ರಿಯೆ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಈಗ ಅದಕ್ಕೆ ಮತ್ತಷ್ಟು ಚಾಲನೆ ದೊರಕಿದೆ. ʼಹಿಂದೂ ಧರ್ಮʼ ಎಂದರೇನು ಎಂಬುದನ್ನು ಯಾರೂ ಸರಿಯಾಗಿ ನಿರ್ವಚಿಸದೇ ಇರುವುದರಿಂದ ಅದರೊಳಕ್ಕೆ ಎಲ್ಲವನ್ನೂ ಸುಲಭವಾಗಿ ತುರುಕಲು ಸಾಧ್ಯವಾಗಿದೆ. ʼಹಿಂದೂವಾಗಿ ಸಾಯಲಾರೆ ʼಎಂದ ಅಂಬೇಡ್ಕರರನ್ನು ಕೂಡಾ ಇವತ್ತಿನ ಹಿಂದೂ ರಾಜಕಾರಣ ತನ್ನೊಳಗು ಮಾಡಿಕೊಂಡಿರುವಾಗ ತುಳುನಾಡಿನ ದೈವಗಳನ್ನು ಅದು ಬಿಡಲಾರದು.

ಬಹಳ ಪ್ರಾಚೀನ ಕಾಲದಲ್ಲಿ ತುಳುನಾಡಿಗೆ ವಲಸೆ ಬಂದು ನೆಲೆಯಾಗಿರುವ ತಳಸ್ತರದ ಸುಮಾರು ೩೨ ಸಮುದಾಯಗಳಿವೆ. ಇವರ ಒಟ್ಟು ಸಂಖ್ಯೆ ಸುಮಾರು ಎರಡು ಲಕ್ಷ ಇರಬಹುದು. ಆದಿ ದ್ರಾವಿಡ, ಅಜಿಲ, ನಲ್ಕೆ, ಮಾಯಿಲ, ಬಾಕುಡ, ಭೈರ, ಮೇರ, ಮುಗ್ಗೆರ್ಲು, ಮಲೆ ಕುಡಿಯ, ಬತ್ತಡ, ಪಾಣಾರ, ಮೊಗೇರ, ಪರವ, ಪಂಬದ, ಮೊದಲಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ. ಶ್ರೇಣೀಕೃತ ಸಮಾಜದ ತಳಭಾಗದಲ್ಲಿರುವ ಇವರಲ್ಲಿ ಕೆಲವರು ಭೂತಾರಾಧನೆಯ ಸಂದರ್ಭದಲ್ಲಿ ತಾವೇ ದೈವಗಳಾಗಿ, ತಾತ್ಕಾಲಿಕವಾಗಿ ನಿರ್ಮಿತವಾದ ಕಾಲ, ಸ್ಥಳ ಮತ್ತು ಸಮುದಾಯಗಳ ಒಗ್ಗೂಡುವಿಕೆಯ ಸಂದರ್ಭದಲ್ಲಿ ಜಾತಿ ಸಮಾಜದ ಶ್ರೇಣೀಕರಣದ ಮೇಲ್ತುದಿಗೆ ಚಲಿಸುತ್ತಾರೆ. ಆರಾಧನೆ ಮುಗಿದ ಮೇಲೆ ಮತ್ತೆ ಯಥಾಸ್ಥಿತಿ ಮುಂದುವರೆಯುತ್ತದೆ.

ತುಳುನಾಡಿನ ದೈವಾರಾಧನೆಯ ಕೇಂದ್ರದಲ್ಲಿರುವ ಸಾಂಸ್ಕೃತಿಕ ನಾಯಕರ ಸಂಖ್ಯೆಯು ಸಾವಿರಕ್ಕೂ ಮೀರಿದೆ ಎಂದು ವಿದ್ವಾಂಸರು ಹೇಳಿದ್ದಾರೆ. ಇದರಲ್ಲಿ ಬಬ್ಬರ್ಯ, ಆಲಿ ಮೊದಲಾದ ಮುಸ್ಲಿಮರೂ ಇದ್ದಾರೆ. ಮಂಜೇಶ್ವರದ ಉದ್ಯಾವರದಲ್ಲಿ ನಡೆಯುವ ಅರಸು ದೈವಗಳ ನೇಮದಲ್ಲಿ ಮುಸ್ಲಿಂ ಕುಟುಂಬಗಳು ಭಾಗವಹಿಸಲೇ ಬೇಕು. ಮುಸಲ್ಮಾನರಲ್ಲಿ ದೈವಾರಾಧನೆ ಇಲ್ಲ. ಹಿಂದೂ ದೇವರುಗಳಲ್ಲಿ ಮುಸಲ್ಮಾನರು ಇರುವುದು ಸಾಧ್ಯವಿಲ್ಲ. ಅಂಥ ದೈವಗಳನ್ನು ಪೂಜಿಸಲು ಬೇಕಾದ ಶಾಸ್ತ್ರೋಕ್ತ ಮಂತ್ರಗಳೂ ಇರಲಾರವು. ಆದರೆ ಭೂತಾರಾಧನೆಯಲ್ಲಿ ಇವೆರಡೂ ಸಾಧ್ಯವಾಗಿರುವುದೇ ನನ್ನಂಥವರಿಗೆ ಅದರಲ್ಲಿ ಕುತೂಹಲ ಹುಟ್ಟಲು ಕಾರಣ. ಈ ದೈವಗಳ ಕತೆಗಳನ್ನು ಪಾಡ್ದನಗಳು ನಿರೂಪಿಸುತ್ತವೆ. ಪಾಡ್ದನಗಳ ಲೋಕ ಅದ್ಭುತವಾಗಿದ್ದು ಕ್ಲಾಸಿಕಲ್‌ ಸಂಪ್ರದಾಯಕ್ಕಿಂತ ಭಿನ್ನವಾಗಿವೆ. ಉದಾಹರಣೆಗೆ, ಗುಳಿಗ ದೈವವು ತಾಯಿಯ ಬಲದ ಸಿರಿಮೊಲೆ ಒಡೆದು ಹೊರಬಂದು ಎಡದ ಮೊಲೆ ತಿಂದು ಕೈ ತಟ್ಟಿ ನಗುವುದನ್ನು ಗಮನಿಸಬೇಕು. ಪಾಡ್ದನಗಳ ಭಾಷೆ, ವಸ್ತು, ನಿರೂಪಣಾ ವಿಧಾನ ಇತ್ಯಾದಿಗಳ ಬಗ್ಗೆ ದೇಶ ವಿದೇಶಗಳ ವಿದ್ವಾಂಸರು ಸಾಕಷ್ಟು ಕೆಲಸ ಮಾಡಿದ್ದಾರೆ. ತುಳು ದೈವಗಳ ಕೆಲವು ವೈಶಿಷ್ಟ್ಯಗಳನ್ನು ಈ ಮುಂದಿನಂತೆ ಸಂಕ್ಷಿಪ್ತವಾಗಿ ಪಟ್ಟಿ ಮಾಡಬಹುದು-

ಪಾಡ್ದನಗಳಲ್ಲಿರುವ ದೈವದ ಕಥೆಗಳು ಬಹುಮಟ್ಟಿಗೆ ದುಃಖಾಂತವಾಗಿರುತ್ತವೆ. ಈ ವಿಷಯದಲ್ಲಿ ಅವು ನಮ್ಮ ಸಂಸ್ಕೃತ ಕಥನ ಪರಂಪರೆಗಿಂತ ತುಂಬಾ ಭಿನ್ನ. ಭೂತ ಕಟ್ಟುವ ಪರವನ ಹೆಂಡತಿ ಮಂಗಣೆಯ ಚೆಲುವಿಗೆ ಮರುಳಾಗಿ, ಅವಳನ್ನು ಪಡೆಯಲು ಅವಳ ಗಂಡನನ್ನೂ ಕೊಂದು, ತನ್ನ ಸರ್ವಸ್ವವನ್ನೂ ಕಳೆದುಕೊಂಡು, ಕೊನೆಗೆ ಮಂಗಣೆ ಬೆಂಕಿಗೆ ಹಾರಿದಾಗ ತಾನೂ ಬೆಂಕಿಗೆ ಹಾರಿ ಸತ್ತ ಬೊಟ್ಟುಪ್ಪಾಡಿ ಬಲ್ಲಾಳನ ಸಂಧಿಯು ನಾನು ಇದುವರೆಗೆ ಓದಿದ ಅತ್ಯುತ್ತಮ ದುರಂತ ಕಾವ್ಯಗಳಲ್ಲಿ ಒಂದು.

ಈ ಸಾಂಸ್ಕೃತಿಕ ನಾಯಕರು ದೈವಗಳಾಗಲು ಅವರ ಜಾತಿ ಅಥವಾ ಪೂರ್ವಜನ್ಮದ ಪುಣ್ಯ ವಿಶೇಷಗಳು ಕಾರಣವಾಗುವುದಿಲ್ಲ. ಆಲಿ, ಬಬ್ಬರ್ಯರು ಮುಸ್ಲಿಮರಾಗಿದ್ದರೆ, ಕಾಂತಾಬಾರೆ-ಬೂದಾಬಾರೆಯರು ಬಿಲ್ಲವ ವರ್ಗಕ್ಕೆ ಸೇರಿದವರು. ತನಿಯ ಕೊರಗ ಸಮುದಾಯಕ್ಕೆ ಸೇರಿದ ದೈವ.

ಹೆಚ್ಚಿನ ದೈವಗಳು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ, ಇಲ್ಲವೇ ಸ್ಥಾಪಿತ ಮೌಲ್ಯಗಳಿಗೆ ಮುಖಾಮುಖಿಯಾಗಿ, ಸಾಯುತ್ತಾರೆ. ಕಾರ್ಕಳದಲ್ಲಿ ಗೊಮ್ಮಟನನ್ನು ಕೆತ್ತಿದ ಕಲ್ಕುಡನು ಅರಸನ ಕಾರಣದಿಂದ ತನ್ನ ಬಲದ ಕೈಯನ್ನೂ ಎಡದ ಕಾಲನ್ನೂ ಕಳಕೊಳ್ಳಬೇಕಾಗುತ್ತದೆ. ಅಣ್ಣನಿಗಾದ ಅನ್ಯಾಯವನ್ನು ತಂಗಿ ಕಲ್ಲುರ್ಟಿ ಪ್ರಶ್ನಿಸುತ್ತಾಳೆ. ಗಂಡಸರ ಅನ್ಯಾಯವನ್ನು ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ. ಬಳಜೇಯಿ ಮಾನಿಗದಲ್ಲಿ ಚೆನ್ನೆಮಣೆ ಆಟದಲ್ಲಿ ಮೋಸ ಮಾಡಿದ ಗಂಡನಿಗೆ ತವರು ಮನೆಯಲ್ಲಿದ್ದ ಮಾನಿಗಳು ಪೊರಕೆಗೆ ತನ್ನ ತಾಳಿ ಕಟ್ಟಿ ದಂಡಿಗೆಯಲ್ಲಿ ಕಳಿಸುತ್ತಾಳೆ.

ಕ್ಲಾಸಿಕಲ್‌ ಸಂಪ್ರದಾಯದಲ್ಲಿ ನಾಯಕರು ಅವರ ತಾಯಿಯ ಗರ್ಭದಲ್ಲಿರುವಾಗ ದೇವತೆಗಳು ಪುಷ್ಟವೃಷ್ಟಿ ಸುರಿಸುತ್ತಾರೆ. ಆದರೆ ಪಾಡ್ದನಗಳಲ್ಲಿ ಈ ಬಗೆಯ ವಿವರಗಳಿಲ್ಲ. ಈ ವೀರರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅವರು ಕೇವಲ ಸಾಮಾನ್ಯರು.

ಈ ಸಾಂಸ್ಕೃತಿಕ ನಾಯಕರು ವೀರರಾಗಲು ಅವರು ಬೇರೊಂದು ದೈವದ ಅವತಾರವಾಗಿರುವುದು ಕಾರಣ ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಈ ಜನ್ಮದಲ್ಲಿ ಅವರು ಸಾಧಿಸಿದ್ದೇ ಅಂತಿಮ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ.

ದೈವಗಳಾಗಿರುವ ತುಳುನಾಡಿನ ಸಾಂಸ್ಕೃತಿಕ ನಾಯಕರು ಎಲ್ಲರಂತೆ ಜನಿಸಿ, ಬೆಳೆಯುತ್ತಾ ಬಗೆ ಬಗೆಯ ಒತ್ತಡಕ್ಕೆ ಒಳಗಾಗುತ್ತಾರೆ. ತಮ್ಮ ಪ್ರಾಮಾಣಿಕತೆ, ಬುದ್ಧಿಮತ್ತೆ, ಮತ್ತು ಸಾಹಸಗಳಿಂದ ಜನಾನುರಾಗಿಯಾಗಿರುವ ಅವರು ಸಮಾಜ ಒಡ್ಡುವ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸತ್ತು ದೈವಗಳಾಗುತ್ತಾರೆ.

ಸಾಂಪ್ರದಾಯಿಕ ಕ್ಲಾಸಿಕಲ್‌ ಕಥನಗಳು ನೇರವಾಗಿಯೋ ಪರೋಕ್ಷವಾಗಿಯೂ ವರ್ಣಾಶ್ರಮ ಧರ್ಮದ ಮತ್ತು ಪ್ರಭುತ್ವದ ಪರವಾಗಿಯೇ ಇರುತ್ತವೆ. ಆದರೆ ತುಳುನಾಡಿನ ದೈವ ಕಥನಗಳು ಜಾತಿ ಸಮಾಜದ ಒಳಗಿನ ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಕನ್ನಲ್ಲಾಯ ದೈವವು ಜಾತಿ ಕೇಳಿ ನೀರುಕೊಟ್ಟವಳನ್ನೇ ಮಾಯಮಾಡುತ್ತದೆ. ಕೋಡ್ದಬ್ಬು ಪಾಡ್ದನವು ದಲಿತ ಹುಡುಗನೊಬ್ಬ ತನ್ನ ಸಾಮರ್ಥ್ಯದಿಂದ ವಿದ್ಯಾವಂತನಾದಾಗ ಉಳಿದವರು ಅವನ ವಿರುದ್ಧ ಹೇಗೆ ಸಂಚು ಮಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ವಿವರಿಸುತ್ತದೆ.

ಈ ಬಗೆಯ ಕಥನಗಳು ಭಾರತೀಯ ಸಂಸ್ಕೃತಿಯ ಸಶಕ್ತವಾದ ಒಂದು ಭಾಗವೇ ಹೌದು. ಅವನ್ನು ಬದಲಿಸಿ ಇನ್ನಾವುದೋ ಒಂದರ ಭಾಗ ಮಾಡುವುದರಿಂದ ಯಾರಿಗೂ ಹೆಚ್ಚು ಪ್ರಯೋಜನ ಇಲ್ಲ.

ಪೋಟೋ ಕೃಪೆ: ಉಷ ಕಟ್ಟೆಮನೆ

– ಡಾ. ಪುರುಷೋತ್ತಮ ಬಿಳಿಮಲೆ
ನಿವೃತ್ತ ಪ್ರಾಧ್ಯಾಪಕರು, ಜೆ.ಎನ್.ಯು, ನವದೆಹಲಿ

ತುಳುವರ ನವರಾತ್ರಿಯ ಪಿಲಿ ನಲಿಕೆ
ಹುಲಿವೇಷ ಎಂಬ ಕಲೆ ಕರಾವಳಿಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ವರ್ಷದಲ್ಲಿ ಕೆಲವೇ ದಿನಗಳ ಕಾಲ ಕಾಣ ಸಿಗುವ ಹುಲಿವೇಷಗಳು ಕರಾವಳಿ ಭಾಗದ ಜನರಲ್ಲಿ ವಿಶೇಷ ಗೌರವವನ್ನು ಉಳಿಸಿಕೊಂಡಿವೆ. ತುಳುವರ ಈ ಕಲಾ ಪರಂಪರೆಯ ಬಗ್ಗೆ ಲೇಖಕಿ ಡಾ. ಜ್ಯೋತಿ ಚೇಳೈರು ವಿಶೇಷವಾಗಿ ಬೆಳಕು ಚೆಲ್ಲಿದ್ದಾರೆ.

ಕರಾವಳಿಯಲ್ಲಿ ಪಿಲಿ ನಲಿಕೆ (ಹುಲಿ ಕುಣಿತ) ಯಾವಾಗ ಆರಂಭವಾಗಿರಬಹುದು? ಎಂದು ಪ್ರಶ್ನಿಸಿದಾಗ, ಹುಡುಕಾಡಿದಾಗ ಸಿಗುವ ಮಾಹಿತಿ ಬಹಳ ಕಡಿಮೆಯೇ. ಅದರೆ, ಹುಲಿ ಕುಣಿಯುವ ತಂಡಗಳ ಮೂವತ್ತರ ಸಂಭ್ರಮ, 40ರ ಸಂಭ್ರಮದ  ಪಿಲಿನಲಿಕೆಗೆ ಶುಭ ಕೋರುವ ಫ್ಲೆಕ್ಸ್ ಗಳು ಬೇಕಾದಷ್ಟು ಕಾಣುತ್ತವೆ. ಪಿಲಿ ನಲಿಕೆಯ ಮೂಲ ಎಲ್ಲಿ ಎಂದರೆ ಮಹತ್ವದ ಮಾಹಿತಿಗಳು ಎಲ್ಲೂ  ಲಭ್ಯವಾಗಲಿಲ್ಲ. ಒಂದು ಉಲ್ಲೇಖದ ಪ್ರಕಾರ “ಮಂಗಳಾಪುರ” ಎಂಬ ಹೆಸರಿಗೆ ಕಾರಣವಾದ ಮಂಗಳಾದೇವಿಯ ವಾಹನ ಹುಲಿಯಾಗಿರುವುದರಿಂದ ಹುಲಿವೇಷ ಹಾಕಿ ಕುಣಿಯುವ ಪರಂಪರೆ ಬಂದಿರಬೇಕು ಎಂದು ತಿಳಿದು ಬರುತ್ತದೆ. ನಾಥ ಪಂಥದ ನಂತರದಲ್ಲಿ ಬಂದ ವೈದಿಕ ಪರಂಪರೆಯ ಪ್ರಭಾವ ಈ ಪುರಾಣದ ಕತೆಗಳಲ್ಲಿ ಇದೆ. ಪ್ರಾಚೀನತೆಯ ದೃಷ್ಟಿಯಿಂದ ಗಮನಿಸುವುದಾದರೆ ತುಳು ಜಾನಪದದಲ್ಲಿ ಇರುವ ಆರಾಧನಾ ಪರಂಪರೆಯಲ್ಲಿ ಬರುವ ಪಿಲಿಭೂತ( ಹುಲಿ ಭೂತ), ಪಿಲ್ಚಂಡಿ (ಹುಲಿ ಚಂಡಿ)ಯ ಕಲ್ಪನೆ ಪ್ರಾಚೀನವಾದುದು. ಪಿಲಿಪಂಜಿ (ಹುಲಿ ಹಂದಿ) ಕುಣಿತವು ತುಳುನಾಡಿನ ಬೇಟೆ ಸಂಬಂಧಿ ಕುಣಿತಗಳಲ್ಲಿ ಒಂದು. ಹಂದಿ ಮತ್ತು ಹುಲಿ ಪ್ರಧಾನ ವೇಷಧಾರಿಗಳಾಗಿ ಎರಡು ಜಿಂಕೆ ಮತ್ತು ಕೋವಿ ಹಿಡಿದ ಒಬ್ಬ ದೊರೆಯ ವೇಷವೂ ಇರುತ್ತದೆ. ಇಲ್ಲಿ ಹಾಡುವ ಹಾಡು ಪಿಲಿಪಂಜಿ ಕುಣಿತದ ಈಶ್ವರ ದೇವರ ಸೃಷ್ಟಿ ಮತ್ತು ಹುಲಿ ಬೇಟೆಯ ವಿವರಗಳಿರುವಂತಹುದು. ಪಿಲಿಭೂತ ಮತ್ತು ಪಿಲಿಕೋಲವನ್ನು ಗಮನಿಸುವಾಗ ಭೂತದ ಹುಟ್ಟಿನ ಕತೆಗಿಂತಲೂ  ಮಹಿಮೆಯನ್ನು ಸಾರುವ ಸಂಗತಿಗಳು ಮುಖ್ಯ ನೆಲೆಗೆ ಬರುತ್ತವೆ.

ದುರ್ಗೆಯನ್ನು ಗ್ರಹಿಸಿದ್ದು ಪಿಲ್ಚಂಡಿಯಾಗಿ..

ದುರ್ಗೆಯನ್ನು ನಮ್ಮ ಜನಪದರು ಗ್ರಹಿಸಿದ್ದು ʼಪಿಲ್ಚಂಡಿʼಯಾಗಿ. ಕಾರಣಿಕದ ಈ ದೈವವು ಶಕ್ತಿದಾಯಕವಾದುದು. ಹುಲಿಯ ಮೇಲೆ ಕುಳಿತ ದುರ್ಗೆ ಎನ್ನುವುದಕ್ಕಿಂತಲೂ ಬಾಯಿತೆರೆದು ನಿಂತ ಹುಲಿಯ ಉರುಗಳು ಆಲಡೆಗಳಲ್ಲಿಯೂ ಇವೆ. ಸಿರಿ ಮತ್ತು ಚಿಕ್ಕುವಿನ ಆರಾಧನಾ ಸ್ಥಳಗಳಲ್ಲೂ ಬಾಯಿ ತೆರೆದು ಉಗ್ರವಾಗಿ ನಿಂತಿವೆ‌. ನಮ್ಮ ಆರಾಧನೆಯ ಪರಂಪರೆಯು ಹಲವಾರು  ಸತ್ಯಗಳನ್ನು ತನ್ನ ಮಡಿಲಲ್ಲಿ ಹುದುಗಿರಿಸಿಕೊಂಡಿರುತ್ತದೆ. ಅದರಲ್ಲಿ ಹಲವಾರು ಸೂಕ್ಷ್ಮ ಎಳೆಗಳನ್ನು ಹೆಣೆದು ಭಯ ಮತ್ತು ಭಕ್ತಿಯನ್ನು ಸಾಕಾರ ಗೊಳಿಸುವುದರೊಂದಿಗೆ ಪ್ರೀತಿ ಮತ್ತು ನೀತಿಯ, ಸಮನ್ವಯತೆಯ ಹಂಬಲವೂ ಇರುತ್ತದೆ. ಕಾಪುವಿನಲ್ಲಿ ನಡೆಯುವ ಪಿಲಿ ಕೋಲವು ಇದಕ್ಕಿಂತಲೂ ಭಿನ್ನವಾಗಿ ಪಿಲಿ ಕೋಲ ಕಟ್ಟಿದವರು ಯಾರನ್ನು ಮುಟ್ಟುತ್ತಾರೋ ಅವರು ಬರುವ ವರುಷದ ಕೋಲಕ್ಕಿಂತ ಮೊದಲೇ ಸಾಯುತ್ತಾರೆ. ಇಲ್ಲದೇ ಹೋದರೆ ಕೋಲ ಕಟ್ಟಿದವರೇ ಸಾಯುತ್ತಾರೆ ಎಂಬ ನಂಬಿಕೆ ಇದೆ. ಈ ಎಲ್ಲಾ ಆರಾಧನೆಗಳಿಗಿಂತಲೂ ಭಿನ್ನವಾದುದು ನವರಾತ್ರಿಯ ದುರ್ಗಾಪೂಜೆ ಮತ್ತು ಪಿಲಿನಲಿಕೆ.

೧೯೨೮ ರಲ್ಲಿ ಪಿಲಿ ನಲಿಕೆ!

ಪಿಲಿನಲಿಕೆ ಯಾವಾಗ ಆರಂಭವಾಯಿತು ಎಂದು ಹುಡುಕಾಡಿದಾಗ ಸ್ನೇಹಿತರಿಂದ ಲಭಿಸಿದ್ದು 1928ರಲ್ಲಿ ಹಾಕಿದ್ದ ಹುಲಿವೇಷದ ಕಪ್ಪು ಬಿಳಿಪಿನ ಭಾವಚಿತ್ರ. ವೇಷ ಹಾಕುವವರು ಸಾಮಾನ್ಯವಾಗಿ ತಳ  ಸಮುದಾಯಗಳು. ಕುಣಿಸುವವರು ಮಾತ್ರ ಮೇಲ್ವರ್ಗದವರು ಆಗಿರುತ್ತಾರೆ. ಇಂದಿಗೂ ಕಟೀಲು ದೇವಸ್ಥಾನದ ಸುತ್ತಲಿನ ಊರುಗಳನ್ನು ಪ್ರತಿನಿಧಿಸಿ ನಡೆಯುವ ದಸರಾ ಮೆರವಣಿಗೆಯಲ್ಲಿ ಎಕ್ಕಾರಿನ ಹುಲಿ, ಕೊಡೆತೂರಿನ ಹುಲಿ, ಕಟೀಲಿನ ಹುಲಿ ಎಂದು ಊರವರು ವೇಷ ಹಾಕಿ ಮೆರವಣಿಗೆಯ ವಿಜೃಂಭಣೆಯನ್ನು ಹೆಚ್ಚಿಸುತ್ತಾರೆ. ದೇವಿಗೆ ಹರಕೆ ಹೊತ್ತವರು ಗಂಡು ಹೆಣ್ಣು ಮಕ್ಕಳಿಗೆ ಒಂದು ದಿನದ ವೇಷ ಹಾಕುವುದು ಸಾಮಾನ್ಯ ಮತ್ತು ಸಂಭ್ರಮವೂ ಕೂಡಾ. ಇಲ್ಲಿ ಹಾಕುವ ವೇಷವು ಸಾಂಪ್ರದಾಯಿಕವಾಗಿದ್ದು, ಮೈಗೆ ಬಣ್ಣ ಬಳಿಯಲು ಒಂದು ಇಡೀ ದಿನ ಕೈಯ್ಯಗಲಿಸಿ ಊಟ,  ಶೌಚ ಎಲ್ಲವನ್ನೂ ಮರೆತು ನಿಲ್ಲಬೇಕಿತ್ತು. ಅದಕ್ಕಾಗಿ ಉಪವಾಸ ವ್ರತ ನಡೆಸಿ ವೇಷ ಹಾಕುತ್ತಿದ್ದರು. ಬೇರೆ ಊರುಗಳಿಂದ ಬಂದು ವೇಷ ಹಾಕುವವರು ಒಮ್ಮೆ ಹುಲಿವೇಷದ ಬಣ್ಣ ಬಳಿದರೆ ಅದನ್ನು ತೆಗೆಯುವುದು ಒಂಬತ್ತು ದಿನಗಳ ನಂತರ. ವೇಷ ಕಳಚುವಾಗ ಸಂಗ್ರಹವಾದ ಹಣದ ಒಂದು ಪಾಲನ್ನು ದೇವಿಗೆ ಹರಕೆಯಾಗಿ ಒಪ್ಪಿಸಬೇಕು. ಇಲ್ಲಿ ಲಾಭ ನಷ್ಟದ ಪ್ರಶ್ನೆ ಇಲ್ಲ.

ಪಿಲಿನಲಿಕೆಯ  ಸ್ವರೂಪ ಬದಲಾಗಿದೆ

ಕಾಲಚಕ್ರದಲ್ಲಿ ಪಿಲಿನಲಿಕೆಯ  ಭಾವ,  ಲಯ, ಸ್ವರೂಪಗಳೂ ಬದಲಾಗಿವೆ. ಹುಲಿನೃತ್ಯ ಕೇವಲ ನೃತ್ಯವಲ್ಲ.  ಅದು ಬಲಾಢ್ಯತೆಯ ಪ್ರದರ್ಶನ. ಇಲ್ಲಿ ಕುಣಿತಗಾರರಿಗೆ ದೈಹಿಕ ಶ್ರಮವೇ ಪ್ರಧಾನ. ಹಾಗಾಗಿ ನೃತ್ಯದಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಒಂದು, ಮೂರು, ಐದು ಪೌಲದಲ್ಲಿ ಗಿರಕಿ ಹೊಡೆಯುವುದು, ತೇಲ್ ಬಗ್ಗುವುದು, ಚಕ್ರದಂಡದ ಮೂಲಕ ಜನರ ಮನರಂಜಿಸುವುದು, ನೆಲದ ಮೇಲೆ ಹಣದ ನೋಟು ಇಟ್ಟು ಹಿಂಬದಿಯಿಂದ ಬಾಗಿಸಿ ಬಾಯಲ್ಲಿ ಕಚ್ಚಿ ತೆಗೆಯುವುದು ಮುಂತಾದ ಕಸರತ್ತುಗಳೂ ಪ್ರದರ್ಶನಗೊಳ್ಳುತ್ತವೆ. ವಿಶಿಷ್ಟ ಪ್ರಯೋಗಗಳಲ್ಲಿ ಕುರಿ ಹೊಡೆಯುವುದು, ಎಂದರೆ ಕುರಿಯನ್ನು ಬಾಯಿಯಲ್ಲಿ ಕಚ್ಚಿ  ತನ್ನ ಹಿಂದಕ್ಕೆ ಎಸೆಯುವುದೂ ಇತ್ತು. ಅ ಕುರಿ  ಕುಣಿದವರಿಗೆ ಸಲ್ಲುತ್ತದೆ. ಪ್ರಾಣಿ ಹಿಂಸೆಯನ್ನು ನಿಷೇಧಿಸುವ ಹೆಸರಿನಲ್ಲಿ ಈಗ ಅಕ್ಕಿಮುಡಿಯನ್ನು ಬಾಯಲ್ಲಿ ಕಚ್ಚಿ ತಮ್ಮ ಬೆನ್ನ ಹಿಂದೆ ಎಸೆಯುತ್ತಾರೆ. ಬೆನ್ನು, ಸೊಂಟ, ಕತ್ತು ಹೆಚ್ಚು ಶ್ರಮ ಬಯಸುತ್ತ ಕುಣಿತವು ನೈಪುಣ್ಯ ಮತ್ತು ಜಾಣ್ಮೆಯನ್ನೂ ನಿರೀಕ್ಷಿಸುತ್ತದೆ. ಒಟ್ಟಾರೆ ಪಿಲಿನಲಿಕೆಯಲ್ಲಿ ಅಬ್ಬರ ಸಂಭ್ರಮಗಳಿಂದ ಬಣ್ಣ ಬಣ್ಣದ ಹುಲಿವೇಷದ ನೃತ್ಯ ಪ್ರದರ್ಶನ ಗೊಳ್ಳುತ್ತದೆ. ಆರ್ಥಿಕವಾಗಿ ಒಂದಿಷ್ಟು ಬಂಡವಾಳವನ್ನು ಇದು ಬಯಸುತ್ತದೆ. ತಾಸೆಯ ಪೆಟ್ಟಿಗೆ ಮೈಮರೆಯುವ, ಕಿವಿಯಿಂದ ಆಲಿಸಿ ಕಣ್ಣ ನೋಟದ ಕುತೂಹಲದಿಂದ ಗಮನಿಸುವ ತುಳುವರು ಹುಲಿಕುಣಿತವನ್ನು ಪೋಷಿಸುವವರೂ ಹೌದು.

ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿ

ಇಲ್ಲಿ ಹೊಸ ಹೊಸ ಪ್ರಯೋಗಗಳು ಜಾರಿಗೊಳ್ಳುತ್ತಿವೆ. ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿಯಲ್ಲಿ ಪಿಲಿನಲಿಕೆ ಸಾಗುತ್ತದೆ. ಇಂದು ಸಾಂಪ್ರದಾಯಿಕ ತಾಸೆಯ ಪೆಟ್ಟಿಗಿಂತ ಹಿಂದಿ ಸಿನಿಮಾದ ಹಾಡುಗಳಿಗೂ ಹುಲಿಗಳು ಕುಣಿಯುತ್ತವೆ. ಹಾಕುವ ಬಣ್ಣಗಾರಿಕೆಯಲ್ಲೂ ಹೊಸ ಪ್ರಯೋಗಗಳಾಗಿವೆ. ಹಿಂದೆ ತಾಯಿ ಹುಲಿ ಆಕರ್ಷಣೆಯ ಕೇಂದ್ರವಾದರೆ ಇಂದು ಮರಿ ಹುಲಿಗಳಿಗೆ ವಿಶೇಷ ಆಕರ್ಷಣೆ ಇದೆ, ಸ್ಪರ್ಧೆ ಇದೆ. ಸ್ಪರ್ಧೆಯಲ್ಲಿ ಮರಿ ಹುಲಿಯ ಹೆಜ್ಜೆಯೂ ಮುಖ್ಯವಾಗಿದೆ.

ಹುಲಿವೇಷದ ಬಣ್ಣಗಾರಿಕೆ

ಇಲ್ಲಿ ಕುಣಿತದಷ್ಟೇ ಬಣ್ಣಗಾರಿಕೆ ವಿಶಿಷ್ಟವಾದುದು. ವೆಲ್ವೆಟ್‌ ನಿಂದ ಮಾಡಿದ ಕಡುಬಣ್ಣದ ಚಲ್ಲಣವೊಂದು ಬಿಟ್ಟು ಉಳಿದಂತೆ ಮೈಗೆಲ್ಲಾ ಹಳದಿ, ಕಪ್ಪು, ಬಿಳಿ, ಬಣ್ಣ ಬಳಿದು ಬಾಲ ಕಟ್ಟಿ, ಹುಲಿಯ ಮುಖವಾಡ ಧರಿಸಿಕೊಂಡು ತಂಡವಾಗಿ ಬಂದು ಊರ ಮನೆಗಳ ಮುಂದೆ ಕುಣಿಯುತ್ತಾರೆ. ಕುಣಿತ ಮುಗಿಯೋ ಹೊತ್ತಿಗೆ ಇಂತಿಷ್ಟು ಹಣ ನೀಡುವುದು ವಾಡಿಕೆ. ಹುಲಿ ವೇಷದಲ್ಲೂ ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿಪಿಲಿಗಳೆಂಬ ಭಿನ್ನ ರೀತಿಯ ಬಣ್ಣಗಾರಿಕೆಯಿದೆ. ಕೆಲವೊಮ್ಮೆ ಹಸಿರು ಬಣ್ಣದ ಹುಲಿಗಳೂ ಇರುತ್ತವೆ. ಇಲ್ಲಿ ವೇಷಧಾರಿಯಲ್ಲಿ ನೈಜತೆ ತುಂಬುವವರು ಕಲಾವಿದರು. ತಮ್ಮ ಕುಂಚಗಳಿಂದ ಹುಲಿವೇಷ ಹಾಕುವವರಿಗೆ ವೈವಿಧ್ಯಮಯ ಬಣ್ಣ ಬಳಿದು ಕಾಡಿನ ಹುಲಿಯನ್ನು ಊರಿಗೆ ತಂದು ಬಿಡುವ ಪ್ರತಿಭಾವಂತರಿವರು.

ವೇಷಕ್ಕೆ ನಿಲ್ಲುವುದೆಂದರೆ..

ಹುಲಿವೇಷದ ವೇಷಕ್ಕೆ ನಿಲ್ಲುವುದೆಂದರೆ ನಿಲ್ಲುವುದೇ. ಮೈಯ ಕೈಕಾಲಿನ ರೋಮಗಳನ್ನು ತೆಗೆದು ಪೈಂಟ್ ಹಚ್ಚಲು ಆರಂಭಿಸಿದಾಗ ಮೈಯ್ಯೆಲ್ಲಾ ಉರಿಯ ಅನುಭವ. ಹಿಂದೆಲ್ಲಾ ಅವರು  ರಚ್ಚೇವಿನ (ಕೆಸುವಿನ ಎಲೆ) ಅಗಲ ಎಲೆಯಲ್ಲಿ ಅಥವಾ ಬಾಳೆ ಎಲೆಯ ಮೇಲೆ ಮಲಗುತ್ತಿದ್ದರು. ಈಗ ಹಾಕುವ ಬಣ್ಣದ ಗುಣಮಟ್ಟದಲ್ಲಿ ವ್ಯತ್ಯಾಸ ಬಂದಿದೆ. ಒಂದು ದಿನಕ್ಕೆ ಬಣ್ಣ ಹಚ್ಚಿದವರೂ ಬಣ್ಣ ತೆಗೆಯುವುದು ಕಷ್ಟವೇ. ಬಣ್ಣ ತೆಗೆಯಲು ‘ನೆಗರಗುಂಡಿ’ ಯಲ್ಲಿ ಇಳಿದು ಚಿಮಿಣಿ ಎಣ್ಣೆ ಹಚ್ಚಿ ಮರಳನ್ನು ಹಾಕಿ ತೆಂಗಿನ ನಾರುವಿನಿಂದ ತಿಕ್ಕಿ ತೆಗೆಯುವುದು ಒಂದು ದೊಡ್ಡ ಕಾಯಕವೇ ಆಗಿತ್ತು ಎನ್ನುವುದು ಕಟೀಲಿನಲ್ಲಿ ವೇಷ ಹಾಕುತ್ತಿದ್ದ ಸಂಜೀವಣ್ಣನ ಅನುಭವದ ಮಾತು.  ಆಗ ಹುಲಿ ವೇಷ ಹಾಕುತ್ತಿದ್ದವರಲ್ಲಿ ಊರಿನ ಗುತ್ತಿನ ಮನೆಯವರೂ ಪಾಲು ಪಡೆಯುತ್ತಿದ್ದರು. ದಿವಂಗತ ರಘುರಾಮ ಶೆಟ್ಟರು ಅಂತಹ ಗುತ್ತಿನ ಮನೆಯ ದೊಡ್ಡ ಹುಲಿಯೇ ಆಗಿದ್ದರು.  ದೇಹದ ಗಾತ್ರ, ಶಕ್ತಿ ಸಾಮರ್ಥ್ಯಗಳಿಂದ ಹುಲಿಯು ಪಟ್ಟೆ ಪಿಲಿಯೋ ಮರಿ ಪಿಲಿಯೋ ಎಂದು ತಿಳಿಯುತ್ತಿತ್ತು. ಹಿಂದೆ ಮನೆ ಮನೆಗೆ ತೆರಳುತ್ತಿರುವ ಹುಲಿವೇಷಗಳ ಸಂಖ್ಯೆ ನಿಯಮಿತವಾಗಿ ಇತ್ತು. ತಾಯಿ ಮಕ್ಕಳ ಕುಟುಂಬವೆಂಬಂತೆ ತಾಯಿ ಹುಲಿ ಮರಿ ಹುಲಿಗಳನ್ನು ತನ್ನ ಮಡಿಲೊಳಗೆ ಇರಿಸಿ ಹಾಲೂಡಿಸುವ, ಪೋಷಿಸುವ ನೃತ್ಯವನ್ನು ಹುಲಿಯ ಹೆಜ್ಜೆಯ ಹಿನ್ನೆಲೆಯಲ್ಲಿ ವಿವರಿಸಲಾಗುತ್ತಿತ್ತು. ಬಡಿಯುವ ತಾಸೆಯ ಪೆಟ್ಟಿನ ಲಯಕ್ಕೆ ಅನುಗುಣವಾಗಿ ನಿಧಾನ ಮತ್ತು ವೇಗವಾಗಿ ಹೆಜ್ಜೆ ಹಾಕಲಾಗುತ್ತದೆ. ಅಂದು ಒಂದು ತಂಡದಲ್ಲಿ ಹತ್ತಿಪ್ಪತ್ತು ಹುಲಿಗಳು ಕಾಲ್ನಡಿಗೆಯಲ್ಲಿ ಊರೂರು ಸುತ್ತುತ್ತಿದ್ದ ಹುಲಿಗಳು ಇಂದಿಲ್ಲ. ಕುಣಿಯತ್ತಲೇ ಸಾಗುವಾಗ ಇಳಿಸಂಜೆಗೆ ಬಳಲಿ ಬಸವಳಿದು ಊರಿನ ದೇವಸ್ಥಾನದ, ದೈವಸ್ಥಾನದ ಅಂಗಣಗಳಲ್ಲಿ  ರಾತ್ರಿ ಕಳೆಯುತ್ತಿದ್ದರು. ವೃತ ನಿಷ್ಠರಾಗಿ ಬಾಳುತ್ತಿದ್ದ  ಹಿರಿಯರು ತಾವು ಹಾಕುವ ವೇಷ ದೇವಿಯ ಸೇವೆ ಎಂದೇ ಭಾವಿಸುತ್ತಿದ್ದರು.

ಕೊರೋನೋತ್ತರ ಕಾಲದಲ್ಲಿ ಪಿಲಿ ನಲಿಕೆ

ಪಿಲಿ ನಲಿಕೆಯು ಕೊರೋನೋತ್ತರ ಕಾಲದಲ್ಲಿ ಬಹಳ ವಿಜೃಂಭಣೆಯಿಂದ ಸಾಗುತ್ತಿದೆ. ಪಿಲಿಪರ್ಬ (ಹುಲಿ ಹಬ್ಬ), ಪಿಲಿನಲಿಕೆ( ಹುಲಿ ಕುಣಿತ)ದ ಗೊಬ್ಬು (ಆಟ) ಸ್ಪರ್ಧೆಗಳು ಹೆಚ್ಚುತ್ತಿವೆ. ಉಳ್ಳವರ ಮನೆಯಂಗಳದಲ್ಲಿ ಬಲಾಢ್ಯತೆಯಿಂದ ಕುಣಿಯುವ ಹುಲಿಗಳೊಂದಿಗೆ ಕೆಲವರ ಹೆಸರಿನಲ್ಲೂ ಹುಲಿಗಳು ಬೀದಿಗಿಳಿಯುತ್ತವೆ. ʼಇಂತವರ ಹುಲಿʼ ಎನ್ನುವ ಮೂಲಕ ಒಂದು ಪ್ರತಿಷ್ಠೆಯನ್ನು ಅವುಗಳು ಹೊಂದಿವೆ. ಅದರೊಂದಿಗೆ ಅದು ವಸೂಲಿಯ ಒತ್ತಾಯವಾಗಿಯೂ ಹೊರ ಹೊಮ್ಮಿದೆ. ಪಿಲಿನಲಿಕೆಯ ಸಂಗ್ರಹದಿಂದ ಅಶಕ್ತರಿಗೆ ಸಹಾಯ ಹಸ್ತ ನೀಡುತ್ತೇವೆ ಎನ್ನುವವರ ಸಂಖ್ಯೆಯೂ ಹೆಚ್ಚಿದೆ.

ಹೆಣ್ಣು ಹುಲಿಗಳು!

ಹುಲಿ ವೇಷ ಹಾಕಿ ಕುಣಿಯುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಹುಲಿಯಂತೆ ಕುಣಿಯಲು ಕೈ ಮತ್ತು ಕಾಲಿನ ಚಲನೆ ವೇಗವಾಗಿ ಸಾಗಬೇಕಾದುದು ಮತ್ತು ಕಾಲನ್ನು ಎತ್ತಿ ಇಡುವ ಹೆಜ್ಜೆಯ ಕುಣಿತಗಳನ್ನು ಹೆಣ್ಣು ಮಕ್ಕಳು ಕುಣಿಯುವ ಮೂಲಕ ತಮ್ಮ ಅನನ್ಯತೆಯನ್ನು ಮೆರೆದಿದ್ದಾರೆ. ಗಂಡುಮಕ್ಕಳು ಬರಿಮೈಗೆ ಬಣ್ಣ ಬಳಿದರೆ ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ತೊಟ್ಟು ತೊಡುವ ಮುಖವಾಡಗಳಿಂದಲೇ ಹುಲಿಯ ವ್ಯಗ್ರತೆಯನ್ನು ಆವಿರ್ಭವಿಸುತ್ತಾರೆ.

ಪೂರ್ವ ತಯಾರಿ

ಮಾರ್ನೆಮಿ(ನವರಾತ್ರಿ) ಬರುವ ಪೂರ್ವದಲ್ಲಿ ಪೂರ್ವತಯಾರಿ ಮತ್ತು ಸಿದ್ಧತೆಯ ತಾಸೆಯ ಪೆಟ್ಟುಗಳು ಹುಲಿವೇಷದ ಮುನ್ನುಡಿಗಳು. ಗುಡ್ಡದ ತುದಿಯಲ್ಲೋ, ಊರಾಚೆಗಿನ ಸ್ಥಳಗಳಲ್ಲೋ ಹಿರಿಯರು ಕಿರಿಯರಿಗೆ ಪಿಲಿನಲಿಕೆಯ ಹೆಜ್ಜೆಗಳನ್ನು ಕಲಿಸುತ್ತಾರೆ. ವಾದ್ಯ ಸಂಗೀತ, ಕುಣಿತದ ಹೆಜ್ಜೆ, ಬಣ್ಣದ ವಿನ್ಯಾಸ, ದೈಹಿಕ ಸಾಮರ್ಥ್ಯ ಮತ್ತು ಶ್ರಮದೊಂದಿಗೆ ಪರಸ್ಪರ ನಂಬಿಕೆ ವ್ಯವಹಾರ ಸಾಮಾಜೀಕರಣದಲ್ಲಿ ಪ್ರಮುಖ ಅಂಶಗಳಾಗಿವೆ. ಪಿಲಿ ನಲಿಕೆಯೂ ಒಂದು ಕಲಾ ಪ್ರಕಾರವಾಗಿದ್ದು ಇದಕ್ಕೆ ಮನ್ನಣೆ ಗೌರವಗಳು ಸಲ್ಲಬೇಕು. ಸಂಗೀತ, ಬಣ್ಣಗಾರಿಕೆ, ಕುಣಿತ ಮೂರೂ ಮೇಳೈಸಿದ ಪಿಲಿ ನಲಿಕೆ ಸಾಂಸ್ಕೃತಿಕ ಚಲನೆಯಲ್ಲಿ ಬದಲಾವಣೆಗಳನ್ನು ಪಡೆದುಕೊಂಡರೂ ದೇಶ ವಿದೇಶಗಳ ವೇದಿಕೆಗಳಲ್ಲಿ ಪ್ರದರ್ಶನಗೊಂಡು ತುಳುವರ ಕಲಾಪರಂಪರೆಯ ಒಂದು ಭಾಗವಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಡಾ. ಜ್ಯೋತಿ ಚೇಳೈರು
ಉಪನ್ಯಾಸಕಿ, ಕವಯಿತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಗಿರುವ ಇವರು ಕನ್ನಡ ಮತ್ತು ತುಳು ಎರಡೂ ಭಾಷೆಯ ಸಾಹಿತ್ಯ ಕೃಷಿಯಲ್ಲಿ  ತೊಡಗಿ ಕೊಂಡವರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ನವರಸಗಳಲ್ಲಿ ನವದುರ್ಗೆಯರು- ಶೈಲಪುತ್ರಿ
ನವರಾತ್ರಿ ಪ್ರಯುಕ್ತ ಇದೊಂದು ವಿಶೇಷ ಸರಣಿಯನ್ನು Peepal / ಪೀಪಲ್ ಹೊರತಂದಿದೆ. ನವರಾತ್ರಿಯ ನವದುರ್ಗೆಯರನ್ನು ನವರಸಗಳಲ್ಲಿ ವರ್ಣಿಸುವ ಕೆಲಸವನ್ನು ಕವಯತ್ರಿ ಶೋಭಾ ಗಂಗಾಧರ್‌ ಮೃಗ ನಯನಿ ಅವರು ಮಾಡಿದ್ದಾರೆ. ಇದೊಂದು ವಿನೂತನ ಪ್ರಯತ್ನ. ಈ ವಿಡಿಯೋದಲ್ಲಿ ನವದುರ್ಗೆಯರಲ್ಲಿ ಮೊದನೆಯವಳಾದ ಶೈಲಪುತ್ರಿಯ ವಿವರಣೆಯಿದೆ. https://youtu.be/1T3a6WmL34w

ಇದೇ ವಿಡಿಯೋವನ್ನು ಪೀಪಲ್‌ ಫೆಸ್ಬುಕ್‌ ಪೇಜಿನಲ್ಲಿ ನೋಡಲು- https://www.facebook.com/peepaltvkannada/videos/778665506774796