tumakuru – Peepal Media

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಿಕೇತ್ ರಾಜ್ ಮೌರ್ಯ : ಕಾಂಗ್ರೆಸ್ ಘಟಾನುಘಟಿಗಳ ಶಿಫಾರಸು!
ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧರಾಗಬೇಕು, ಆ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ಕ್ಷೇತ್ರಗಳನ್ನು ಹೊರತುಪಡಿಸಿ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಬೇಕು ಎಂಬ ಸೂಚನೆ ಹಿನ್ನೆಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಅವರ ಹೆಸರನ್ನು ನಾಯಕರು ಶಿಫಾರಸು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಎರಡ್ಮೂರು ದಿನಗಳಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ರಾಜ್ಯ ನಾಯಕರ ಸಭೆ ಕರೆದಿದ್ದು, ಸಭೆಯಲ್ಲಿ ಬಹುತೇಕ ಅಭ್ಯರ್ಥಿಗಳ ಪಟ್ಟಿ ಕೊಡಬೇಕು ಎಂಬ ಸೂಚನೆ ನೀಡಿದ್ದರು. ತುಮಕೂರು ಭಾಗಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿ ನೀಡಲಾಗಿದೆ. ನಿಕೇತ್ ರಾಜ್ ಮೌರ್ಯ ಈಗಾಗಲೇ ರಾಜ್ಯಾದ್ಯಂತ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದು, ಈ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುವ ವ್ಯಕ್ತಿತ್ವ ಹೊಂದಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನೇ ಅಭ್ಯರ್ಥಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ

ಇನ್ನು ಹೇಳಿಕೇಳಿ ಅಹಿಂದ ಸಮುದಾಯದ ಹಿನ್ನೆಲೆಯಿಂದ ಬಂದ ನಿಕೇತ್ ರಾಜ್ ಮೌರ್ಯ ಅವರಿಗೆ ಸ್ಥಳೀಯ ನಾಯಕರಾದ ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವರ ಆಶೀರ್ವಾದದ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೃಪೆ ಕೂಡಾ ಡಬಲ್ ಧಮಾಕದ ಕಾಣಿಕೆ ಸಿಗಲಿದೆ.

ಅಷ್ಟೆ ಅಲ್ಲದೆ ಕಾಂಗ್ರೆಸ್ ಪಾಲಿನ ರಾಜ್ಯದ ಕೆಲವು ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ತುಮಕೂರು ಕ್ಷೇತ್ರ ಕೂಡ ಇದ್ದು, ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಟಾರ್ಗೆಟ್ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ನಿಕೇತ್ ರಾಜ್ ಈ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಎಂದು ಸ್ಥಳೀಯ ಮಟ್ಟದಲ್ಲೂ ಮಾತುಗಳು ಕೇಳಿ ಬಂದಿವೆ.

ಇತ್ತ ಸಮುದಾಯದ ಹಿನ್ನೆಲೆಯಲ್ಲಿ ಕುರುಬರಾಗಿರುವ ನಿಕೇತ್ ರಾಜ್ ಅವರಿಗೆ ಒಂದೂವರೆಯಿಂದ ಎರಡು ಲಕ್ಷದಷ್ಟು ಇರುವ ಸಮುದಾಯದ ಮತಗಳು ಏಕಪಕ್ಷೀಯವಾಗಿ ಒಂದೆಡೆ ಸೇರಲಿದೆ. ಇನ್ನು ಸ್ವಲ್ಪ ಮಟ್ಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಲೆ ಮುಂದುವರೆದರೆ ಒಕ್ಕಲಿಗ ಮತಗಳೂ ಸಹ ನಿಕೇತ್ ರಾಜ್ ಅವರಿಗೆ ಬೀಳುವ ಬಗ್ಗೆಯೂ ಯಾವುದೇ ಅನುಮಾನವಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಪರಮೇಶ್ವರ್ ಮತ್ತು ರಾಜಣ್ಣ ಅವರ ಸಂಪೂರ್ಣ ಬೆಂಬಲ ಇವರ ಮೇಲೆ ಇರುವುದೂ ಸಹ ಬೇರಾವುದೇ ಪ್ರಬಲ ಆಕಾಂಕ್ಷಿಯ ಹೆಸರೂ ಸಹ ಈವರೆಗೆ ಓಡಾಡದೇ ಇರುವುದರಿಂದ ಕಾಂಗ್ರೆಸ್ ತುಮಕೂರಿನಲ್ಲಿ ನಿಕೇತ್ ರಾಜ್ ಮೌರ್ಯ ಅವರನ್ನು ಕಣಕ್ಕಿಳಿಸಲು ಎಲ್ಲಾ ತಯಾರಿ ಮಾಡಿಕೊಂಡಂತಿದೆ.

ನಿಕೇತ್ ರಾಜ್ ಕೂಡಾ ಹಲವು ದಿನಗಳಿಂದ ತುಮಕೂರು ಕ್ಷೇತ್ರದಾದ್ಯಂತ ಪ್ರವಾಸ ನಡೆಸುತ್ತಿದ್ದು, ಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ ಪರವಾಗಿ, ಸರ್ಕಾರದ ಯೋಜನೆಗಳ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಿಕೇತ್ ರಾಜ್ ಈಗ ತುಮಕೂರಿನಾದ್ಯಂತ ಯುವ ಪಡೆಗಳನ್ನು ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಈ ಸುದ್ದಿಗೆ ಇಂಬು ಕೊಟ್ಟಂತಿದೆ.

ಸೂತಕ ಎಂಬ ಮೌಢ್ಯ ಪದ್ಧತಿ ತೊಲಗಿಸಲು ʼಮೌಢ್ಯ ಮುಕ್ತ ಹಟ್ಟಿ ಅಭಿಯಾನʼ
ತುಮಕೂರು: ಹೆಣ್ಣುಮಕ್ಕಳಿಗೆ ಮುಟ್ಟಾದಾಗ ಅದನ್ನು ಸೂತಕ ಎಂದು ಪರಿಗಣಿಸಿ, ಅವರನ್ನು ಊರಿನ ಆಚೆ ಉಳಿಸುವಂತಹ ಕಟ್ಟುಪಾಡಿನ ವಿರುದ್ಧ ಸಮುದಾಯದ ಹೆಣ್ಣುಮಕ್ಕಳೇ ಪ್ರತಿಭಟಿಸಿ ಮೌಢ್ಯದಿಂದ ಮುಕ್ತಗೊಳ್ಳುವ ಅಭಿಯಾನವೊಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮಪ್ಪ ಹಟ್ಟಿಯಲ್ಲಿ ನಡೆದಿದೆ.

ಬುಡಕಟ್ಟು ಸಮುದಾಯವಾದ ಕಾಡುಗೊಲ್ಲ ಸಮುದಾಯದಲ್ಲಿ ಪರಂಪಾರಗತವಾಗಿ ಈ ಅನಿಷ್ಟ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಇದಕ್ಕೆ ಧರ್ಮ ಸಂಪ್ರದಾಯದ ನೆಪಗಳನ್ನು ನೀಡಿಕೊಂಡು ಬರಲಾಗಿದೆ. ಹೆಣ್ಣುಮಕ್ಕಳು ಮುಟ್ಟಾದ ಸಮಯದಲ್ಲಿ ಮನೆಯಿಂದ, ಧಾರ್ಮಿಕ ಆಚರಣೆಗಳಿಂದ, ಇಷ್ಷೇ ಅಲ್ಲದೆ ಊರಿನಿಂದ ಹೊರಕ್ಕೆ ಒಂಟಿಯಾಗಿ ಉಳಿಸುವ ಪದ್ಧತಿ ಜಾರಿಲ್ಲಿದೆ. ಇದನ್ನು ತಪ್ಪು ಎಂದು ಗುರುತಿಸಿ ಇದರಿಂದ ಸಮುದಾಯವನ್ನು ಮುಕ್ತಗೊಳಿಸುವ ʼಮೌಡ್ಯ ಮುಕ್ತ ಹಟ್ಟಿ ಅಭಿಯಾನʼ ವೊಂದನ್ನು ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರು ಮುಟ್ಟಾದಾಗ ಸಮಾಜವು ಅದನ್ನು ಸೂತಕ ಎಂದು ಪರಿಗಣಿಸದೇ ಅದು ಪ್ರಕೃತಿ ಸಹಜವಾದಂತದ್ದು ಎನ್ನುವ ಜಾಗೃತಿಯನ್ನು ಗ್ರಾಮಸ್ಥರಿಗೆ ಮುಟ್ಟಿನ ಕುರಿತು ಅರಿವು ಮೂಡಿಸಿ, ಜನರ ಸಮ್ಮುಖದಲ್ಲಿಯೇ ಮುಟ್ಟಾದ ಮಹಿಳೆಯರಿಗೆ ಹೂಗುಚ್ಚವನ್ನು ನೀಡುವುದರ ಮೂಲಕ ಅರಿವು ಮಾಡಿಸಲಾಯಿತು. ಇಂದಿನಿಂದ ಈ ಸೂತಕದ ಸುಳಿ ಮಹಿಳೆಯರನ್ನು ಬಿಟ್ಟು ತೊಲಗಲಿ ಮತ್ತು ಈ ಕುರಿತು ಎಲ್ಲರೂ ವೈಜ್ಞಾನಿಕವಾಗಿ ಯೋಚನೆಮಾಡಿ ಎಂದು ತಿಳಿಸಿ ಹೇಳಲಾಯ್ತು.

ಸೂತಕದ ಮೌಢ್ಯ ತೊಲಗಲಿ: ಕೆಜೆಹಳ್ಳಿ ಸುರೇಶ್

ಈ ಕುರಿತು ʼಪೀಪಲ್‌ ಮೀಡಿಯಾʼದೊಂದಿಗೆ ಮಾತನಾಡಿದ ಅಭಿಯಾನದ ರೂವಾರಿ ಕೆ.ಜೆ.ಹಳ್ಳಿ ಸುರೇಶ್‌ರವರು, ʼಮುಟ್ಟಾದಂತಹ ಸಂದರ್ಭದಲ್ಲಿ ಈ ಕಾಡುಗೊಲ್ಲ ಸುಮುದಾಯದಲ್ಲಿನ ಮಹಿಳೆಯರು, ಉಳಿದ ಮಹಿಳೆಯರಿಗಿಂತ ಹೆಚ್ಚಿನ ಸಮಸ್ಯೆಯನ್ನು ಹೆದರಿಸುತ್ತಿದ್ದು, ಈ ವೇಳೆ ಸಮುದಾಯದಲ್ಲಿ ಬಾಲಕೀಯರು, ಗರ್ಭಿಣಿಮಹಿಳೆಯರು ಎನ್ನುವುದನ್ನ ಲೆಕ್ಕಿಸದೆ ಅವರನ್ನು ಊರಿನಿಂದ ಹೊರಕ್ಕೆ ಇರಿಸಿ, ಅವರಿಗೆ ಬಾಳೆ ಎಲೆಗಳಲ್ಲಿ ಒಂದು ಗುಡಿಸಲಿನ ರೀತಿ ಉಳಿದುಕೊಳ್ಳಲು ವ್ಯವಸ್ಥೆ  ಮಾಡಲಾಗಿದ್ದು, ಅಲ್ಲಿ ಅವರಿಗೆ ದೂರದಿಂದ ಊಟ ನೀಡಲಾಗುತ್ತದೆ. ಮತ್ತೆ ಗರ್ಭಿಣಿ ಮಹಿಳೆಯರು ಮತ್ತು ಹೆರಿಗೆಯಾದ ಹೆಣ್ಣುಮಕ್ಕಳು ಎಷ್ಟೇ ತಿಂಗಳ ಮಕ್ಕಳಿದ್ದರು ಅವರು ಮಳೆ ಗಾಳಿ, ಚಳಿ, ಕ್ರಿಮಿಕೀಟಗಳ ಬಗ್ಗೆ ಯೋಚಿಸದೆ ಅಲ್ಲೇ ಉಳಿಯುವ ಪದ್ಧತಿ ಇದೆ. ಇನ್ನೂ ಶಾಲೆಗೆ ಹೋಗುವ ಹೆಣ್ಣು ಮಕ್ಕಳು, ಈ ಸಂದರ್ಭದಲ್ಲಿ ಏನೂ ಮಟ್ಟುವಂತಿಲ್ಲ. ಮುಟ್ಟಿದರೆ ಅದು ಸೂತಕ ಎಂದು ಪರಿಗಣಿಸಿ, ಸ್ನಾನ ಮಾಡಿ ಊರ ಒಳಗೆ ಹೋಗುವ ಪದ್ಥತಿ ಇಲ್ಲಿ ಆಚರಣೆಯಲ್ಲಿದೆ. ಈ ಕಾರಣ ಇಲ್ಲಿನ ಹಟ್ಟಿಯ ಎಷ್ಟೋ ಹೆಣ್ಣುಮಕ್ಕಳು ಮುಟ್ಟಾದ ಸಂದರ್ಭದಲ್ಲಿ ರಾತ್ರಿವೇಳೆ ಹಾವು ಕಚ್ಚಿ ಸತ್ತಿರುವುದು ಉಂಟು. ಆದರೂ ಕೂಡ ಈ ಪದ್ಧತಿ ರೂಢಿಯಲ್ಲಿರುವುದು ಇಲ್ಲಿನ ಜನರು ಅತಿಯಾಗಿ ಮೌಢ್ಯತೆ ಆಚರಣೆ ಮಾಡುತ್ತಿರಯವುದೇ ಕಾರಣ ಎನ್ನಬಹುದಾಗಿದೆʼ ಎಂದು ಬೇಸರ ವ್ಯಕ್ತಪಡಿಸಿದರು.

ಮೌಢ್ಯಾಚರಣೆಯ ಬಗ್ಗೆ ಕೆಜೆಹಳ್ಳಿ ಸುರೇಶ್‌ ಅವರು ಗ್ರಾಮಸ್ಥರಿಗೆ ಅರಿವು ಮೂಡಿಸುತ್ತಿರುವ ದೃಶ್ಯ

ʼಚಿಕ್ಕನಾಯಕನಹಳ್ಳಿ ತಾಲ್ಲೂಕಿನ ರಾಮಪ್ಪ ಹಟ್ಟಿ, ಕಾಡುಗೊಲ್ಲರ ಹಟ್ಟಿಯಾಗಿದ್ದು, ನಮಗೆಲ್ಲಾ ತಿಳಿದಿರುವ ಹಾಗೆ ಕಾಡುಗೊಲ್ಲ ಸಮುದಾಯವು ಅತ್ಯಂತ ಸಾಂಸ್ಕೃತಿಕ ಅನನ್ಯತೆಯನ್ನು ಒಳಗೊಂಡಿರುವ ಮತ್ತು ಬುಡಕಟ್ಟು ತನವನ್ನು ಉಳಿಸಿಕೊಂಡಿರುವಂತಹ ಸಮುದಾಯವಾಗಿದೆ. ಆದರೆ ಈ ಸಮುದಾಯಕ್ಕೆ ಸಾಮಾಜಿಕ ಆನ್ಯಾಯವಾಗಿದ್ದು, ಈ ಸುಮುದಾಯಕ್ಕೆ ಸಿಗಬೇಕಾದ ನ್ಯಾಯ ಸಿಗದಿರುವ ಕಾರಣ, ಅಭಿವೃದ್ದಿಯಿಂದ ಹಿಂದುಳಿದಿದೆ. ಇದರ ಪರಿಣಾಮವಾಗಿ ಶಿಕ್ಷಣ, ಸಾಮಾಜಿಕ ಜ್ಞಾನ, ಬುಡಕಟ್ಟುತನದಿಂದ ಹಿಂದುಳಿದಿದೆʼ ಎಂದರು.

ಮುಂದುವರೆದು ಮಾತನಾಡಿದ ಅವರು, ಮುಟ್ಟು ಎನ್ನುವುದು ಒಂದು ನೈಸರ್ಗಿಕವಾದ ಪಕ್ರಿಯೆ ಅಷ್ಟೇ, ಆದರೆ ಅದನ್ನು ಸೂತಕ ಎಂದು ತಪ್ಪಾಗಿ ಅರ್ಥೈಸಲಾಗಿದೆ, ಅದು ತಪ್ಪು. ಹೀಗಾಗಿ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಅವರನ್ನು ಊರಿನಿಂದ ದೂರವಿಡುವ ಅವಶ್ಯಕತೆ ಇಲ್ಲಾ. ಅದನ್ನು ಎಲ್ಲರು ವೈಜ್ಞಾನಿಕವಾಗಿ ತಿಳಿಯಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಇದರಿಂದ ಮಹಿಳೆಯರನ್ನು ಇಂಥಹ ಪದ್ಧತಿಗಳಿಂದ ಮುಕ್ತಗೊಳಿಸಬಹುದು ಎಂದು ಹೇಳಿದರು.

ಬಿಜೆಪಿ ನಾಯಕನಿಗೆ ಜೀವ ಬೆದರಿಕೆ: ಎಫ್ಐಆರ್ ದಾಖಲು
ತುಮಕೂರು: ಬಿಜೆಪಿ ಮುಖಂಡ ಸುರೇಶ್ ಗೌಡ ಅವರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರದ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೊಲೀಸರು ಹಲವಾರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಬಿಜೆಪಿ ಮುಖಂಡ ಸುರೇಶ್ ಗೌಡ

ಈ ಕುರಿತು ಸುರೇಶ್ ಗೌಡರವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ವ್ಯಕ್ತಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲಿ ʼನನ್ನ ಜೀವಕ್ಕೆ ಅಪಾಯವಿದೆ ಮತ್ತು ತನ್ನ ಜೀವ ಕಾಪಾಡಿಕೊಳ್ಳುವ ಉದ್ದೇಶದಿಂದ ಈಗಾಗಲೇ 5 ಕೋಟಿ ರೂ.ಗಳನ್ನು ನೀಡಲಾಗಿದೆʼ.ʼನಾನು ಕಾರಿನಲ್ಲಿ ಸಂಚಾರಿಸುವಾಗ ಸಂಚಾರಕ್ಕೆ ಅಡ್ಡಿಪಡಿಸುವುದು ಅಥವಾ ಬೇರೆ ವಾಹನದಿಂದ ಅಪಘಾತಗೊಳಿಸಿ. ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆʼ ಎಂದು ಸುರೇಶ್ ಗೌಡರವರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನಲೆಯಲ್ಲಿ ಶಾಸಕ ಗೌರಿಶಂಕರ್ ಮತ್ತು ಅವರ ಬೆಂಬಲಿಗರಾದ ಹಿರೇಹಳ್ಳಿ ಮಹೇಶ್ ಮತ್ತು ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಟಿಕಾ ಬಾಬು ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಹಾಗೂ ಸೆಕ್ಷನ್‌109 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತುಮಕೂರಿನ ಪ್ರಥಮ ದರ್ಜೆ ನ್ಯಾಯಾಧೀಶರ (ಜೆಎಂಎಫ್ ಸಿ) ನ್ಯಾಯಾಲಯದ ಅನುಮತಿ ಮೇರೆಗೆ ಮಾಜಿ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಬ್ಬೂರು: ಸಂಗೊಳ್ಳಿ ರಾಯಣ್ಣ ಬೋರ್ಡ್ ಕಿತ್ತು ಅವಮಾನ ಮಾಡಿದ ಕಿಡಿಗೇಡಿಗಳು
ತುಮಕೂರು: ತುಮಕೂರು ಜಿಲ್ಲೆಯ ಹೆಬ್ಬೂರಿನಲ್ಲಿ ಸ್ವಾತಂತ್ರ್ಯ ಸೇನಾನಿ, ವೀರ ಯೋಧ ಸಂಗೊಳ್ಳಿ ರಾಯಣ್ಣನ  ಬೋರ್ಡ್ ಕಿತ್ತು ಅವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ.

ತುಮಕೂರು ಗ್ರಾಮಾಂತರ ಶಾಸಕರದ ಡಿ ಸಿ ಗೌರಿಶಂಕರ್, ತುಮಕೂರು ಜಿಲ್ಲಾದಿಕಾರಿಗಳು ಮತ್ತು ತುಮಕೂರು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಗೊಳ್ಳಿ ರಾಯಣ್ಣನಿಗೆ ಅಗೌರವ ತೋರಿದ ಕಾಣದ ಕೈಗಳು ಕೀಡಿಗೇಡಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಂಡು ಶಿಕ್ಷೆ ಕೊಡಿಸಬೇಕೆಂದು ಹಾಗು ಅಲ್ಲೇ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿ ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಭಾರತ್ ಐಕ್ಯತಾ ಯಾತ್ರೆಯಲ್ಲಿ ಮುಲಾಯಂ ಸಿಂಗ್ ಯಾದವ್ ಗೆ ಸಂತಾಪ
ತುಮಕೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ, ಕೇಂದ್ರದ ಮಾಜಿ ಸಚಿವ ಮುಲಾಯಂ ಸಿಂಗ್ ಯಾದವ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಅವರು ಒಬ್ಬ ಹುಟ್ಟು ಹೋರಾಟಗಾರ. ಜಾತ್ಯತೀತ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು, ಶೋಷಿತರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಿಟ್ಟರು. ಸಾಮಾನ್ಯ ಹಿನ್ನೆಲೆಯಿಂದ ಬಂದು ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮಟ್ಟಿಗೆ ಬೆಳೆದು ನಿಂತ ನಾಯಕ ಮುಲಾಯಂ ಸಿಂಗ್ ಯಾದವ್ ಅವರು.

ಅವರು ಬೇರೆ ರಾಜಕೀಯ ಪಕ್ಷಗಳ ನಾಯಕರ ಜತೆ ಉತ್ತಮ ಬಾಂಧವ್ಯ ಹಾಗೂ ಗೌರವ ಸಂಪಾದಿಸಿದ್ದು, ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಸಮಾಜವಾದಿ ಚಿಂತನೆಗಳ ಪರ ನಿಂತಿದ್ದ ಧೀಮಂತ ನಾಯಕನ ಅಗಲಿಕೆ ಇಡೀ ದೇಶಕ್ಕೆ ತುಂಬಲಾರದ ನಷ್ಟ.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು, ಮಿತ್ರರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶಿವಕುಮಾರ್ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ತುಮಕೂರು ರಸ್ತೆ ಅಪಘಾತದಲ್ಲಿ 9 ಪ್ರಯಾಣಿಕರು ಸಾವು: ಪ್ರಧಾನಿ ಮೋದಿ ಸಂತಾಪ
ತುಮಕೂರು: ತುಮಕೂರು ರಸ್ತೆ ಅಪಘಾತದಲ್ಲಿ 9 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ತುಮಕೂರಿನ ಶಿರಾ ರಸ್ತೆಯ ಬಾಲೇನಹಳ್ಳಿ ಗೇಟ್‌ ಬಳಿ ಲಾರಿ ಮತ್ತು ಟೆಂಪೋ ಟ್ರ್ಯಾಕ್ಸ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿ 14 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಸದ್ಯ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿ, ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದ  ಅಪಘಾತವು ಹೃದಯ ವಿದ್ರಾವಕ. ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ. ಮೃತರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ.

ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದ ಅಪಘಾತ ಹೃದಯ ವಿದ್ರಾವಕ.ಅಪಘಾತದಲ್ಲಿ ಜೀವ ಕಳೆದು ಕೊಂಡವರಿಗೆ ಸಂತಾಪಗಳು.ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥನೆ.ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು: PM
— PMO India (@PMOIndia) August 25, 2022

The accident in Tumakuru district, Karnataka is heart-rending. Condolences to the bereaved families. Prayers with the injured. Rs 2 lakh from PMNRF would be paid to the next of kin of each deceased. The injured would be paid Rs. 50,000: PM @narendramodi
— PMO India (@PMOIndia) August 25, 2022