tumkur – Peepal Media

ತುಮಕೂರು: ಸಮುದಾಯದ ಮೌಢ್ಯಕ್ಕೆ ಮಗು ಬಲಿ
ತುಮಕೂರು: ಕೋರ ಎನ್ನುವಲ್ಲಿ ಕಾಡುಗೊಲ್ಲ ಸಮುದಾಯದ ಮೌಢ್ಯದ ಕಾರಣಕ್ಕೆ ಮಗುವೊಂದು ಬಲಿಯಾಗಿದೆ.

ಈ  ಸಮುದಾಯದ ಸಂಪ್ರದಾಯದಂತೆ ಬಾಣಂತಿಯರು ಮೂರು ತಿಂಗಳ ಕಾಲ ಮನೆಯ ಒಳಗೆ ಬರುವಂತಿಲ್ಲ. ಸಾಮಾನ್ಯವಾಗಿ ಅವರನ್ನು ಊರ (ಹಟ್ಟಿ) ಹೊರಗೆ ಗುಡಿಸಲಿನಲ್ಲಿ ಇರಿಸಲಾಗುತ್ತದೆ. ಈ ಆಚರಣೆ ಬೆಂಗಳೂರಿನಂತಹ ಮಹಾನಗರದಲ್ಲಿ ವರದಿಯಾಗಿತ್ತು.

ಹೀಗೆ ಗುಡಿಸಲಿನಲ್ಲಿದ್ದ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು

ಶೀತ ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನವಜಾತ ಶಿಶು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ.

ಮಗು ತೀರಿಕೊಂಡ ನಂತರವೂ, ಮೌಢ್ಯಾಚರಣೆಗೆ ಕಟ್ಟುಬಿದ್ದು ಕಾಡುಗೊಲ್ಲ ಸಮುದಾಯದ ಮುಖಂಡರು ತಾಯಿಯನ್ನು ಹಟ್ಟಿಯ ಒಳಗಡೆ ಬಿಟ್ಟುಕೊಂಡಿಲ್ಲ. ಮೂರು ದಿನಗಳಿಂದ ಸುರಿಯುತ್ತಿರುವ ಜಡಿ ಮಳೆಯನ್ನು ಲೆಕ್ಕಿಸದೇ ಊರಾಚೆಯ ಗುಡಿಸಿಲಿನಲ್ಲಿಯೇ ಒಂಟಿಯಾಗಿ ಮಹಿಳೆ ಜೀವಿಸುತ್ತಿದ್ದಾರೆ ಎನ್ನಲಾಗಿದೆ.

ಈ ಮಹಿಳೆಯು ಕಳೆದ ತಿಂಗಳು ಅವಧಿಗೆ ಮುನ್ನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಒಂದು ಮಗು ಈಗಾಗಲೇ ಸಾವನ್ನಪ್ಪಿತ್ತು. ಈಗ ಬಾಣಂತಿಯನ್ನು ಊರಿನಾಚೆ ಗುಡಿಸಲಿನಲ್ಲಿ ಜಡಿ ಮಳೆಗಾಳಿಯಲ್ಲಿ ಗುಡಿಸಲಿನಲ್ಲಿ ಇರಿಸಿದ್ದರಿಂದ ಶೀತ, ಉಸಿರಾಟದ ತೊಂದರೆಯಿಂದ ಮತ್ತೊಂದು ಮಗು ಮೌಢ್ಯಾಚರಣೆಗೆ ಬಲಿಯಾದಂತೆ ಆಗಿದೆ.