uk – Peepal Media

2024 ರಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆ 15% ರಷ್ಟು ಕುಸಿತ: ಸರ್ಕಾರಿ ಅಂಕಿಅಂಶಗಳು
ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 15% ರಷ್ಟು ಕಡಿಮೆಯಾಗಿದೆ, ಕೆನಡಾವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಸದ ಇ.ಟಿ. ಮೊಹಮ್ಮದ್ ಬಶೀರ್ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವೆ ಸುಕಾಂತ ಮಜುಂದಾರ್, 2023 ರಲ್ಲಿ 8,92,989 ಮತ್ತು 2022 ರಲ್ಲಿ 7,50,365 ಕ್ಕೆ ಹೋಲಿಸಿದರೆ  2024 ರಲ್ಲಿ 7,59,064 ಭಾರತೀಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಅಂಕಿಅಂಶ ಮುಂದಿಟ್ಟಿದ್ದಾರೆ.

ಒಂದು ಕಾಲದಲ್ಲಿ ಆದ್ಯತೆಯ ದೇಶವಾಗಿದ್ದ ಕೆನಡಾ, 2023 ರಲ್ಲಿ 2,33,532 ವಿದ್ಯಾರ್ಥಿಗಳಿಂದ 2024 ರಲ್ಲಿ 1,37,608 ಕ್ಕೆ ಶೇ. 41 ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಕೆನಡಾವು ವಿದ್ಯಾರ್ಥಿ ವೀಸಾ ನಿಯಮಗಳನ್ನು ಬಿಗಿಗೊಳಿಸಿತು, ಇದು ಹೆಚ್ಚಿನ ನಿರಾಕರಣೆ ಸಂಖ್ಯೆ ಮತ್ತು ಅಧ್ಯಯನ ಪರವಾನಗಿಗಳ ರದ್ದತಿಗೆ ಕಾರಣವಾಯಿತು.

ಕಳೆದ ವರ್ಷ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯೂ ಹೆಚ್ಚಾಗಿದೆ. ಅಕ್ಟೋಬರ್ 2023 ರಲ್ಲಿ, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದ ಗಲಾಟೆಯ ಮಧ್ಯೆ, ಕೆನಡಾ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಂಡಿತು, ಇದರಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೊಸ ಆರೋಪಗಳ ನಂತರ ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರನ್ನು ಹೊರಹಾಕಿದಾಗ ಅಕ್ಟೋಬರ್ 2024 ರಲ್ಲಿ ಪರಿಸ್ಥಿತಿ ಹದಗೆಟ್ಟಿತು.

ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಅಮೆರಿಕದಲ್ಲಿ, 2023 ರಲ್ಲಿ 2,34,473 ರಷ್ಟಿದ್ದ ಈ ಸಂಖ್ಯೆ 2024 ರಲ್ಲಿ 2,04,058 ಕ್ಕೆ ಇಳಿದಿದೆ. ಯುಕೆಯಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 1,36,921 ರಿಂದ 98,890 ಕ್ಕೆ ಇಳಿದಿದೆ, ಇದು ಸುಮಾರು 28% ರಷ್ಟು ಕಡಿಮೆಯಾಗಿದೆ. ಆಸ್ಟ್ರೇಲಿಯಾದಲ್ಲಿ 2023 ರಲ್ಲಿ 78,093 ವಿದ್ಯಾರ್ಥಿಗಳಿದ್ದು, 2024 ರಲ್ಲಿ 68,572 ಕ್ಕೆ ಇಳಿದಿದೆ.

ಆದಾಗ್ಯೂ, ರಷ್ಯಾಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಏರಿತು, 2023 ರಲ್ಲಿ 23,503 ರಿಂದ 2024 ರಲ್ಲಿ 31,444 ಕ್ಕೆ, ಸುಮಾರು 34% ಹೆಚ್ಚಳ ಕಂಡಿದೆ. ಫ್ರಾನ್ಸ್‌ನಲ್ಲಿ ಕೂಡ 2023 ರಲ್ಲಿ 7,484 ವಿದ್ಯಾರ್ಥಿಗಳಿಂದ 2024 ರಲ್ಲಿ 8,536 ಕ್ಕೆ ಏರಿಕೆ ಕಂಡಿತು. ಜರ್ಮನಿಯು 2024 ರಲ್ಲಿ 34,702 ಭಾರತೀಯ ವಿದ್ಯಾರ್ಥಿಗಳನ್ನು ಹೊಂದಿತ್ತು, ಇದು 2022 ರಲ್ಲಿ 20,684 ರಿಂದ ಹೆಚ್ಚಾಗಿದೆ. ನ್ಯೂಜಿಲೆಂಡ್ 2022 ರಲ್ಲಿ 1,605 ಭಾರತೀಯ ವಿದ್ಯಾರ್ಥಿಗಳಿಂದ 2024 ರಲ್ಲಿ 7,297 ಕ್ಕೆ ಜಿಗಿತ ಕಂಡಿತು.

ವಿದೇಶಗಳಲ್ಲಿ ಶಿಕ್ಷಣ ಮತ್ತು ಅರೆಕಾಲಿಕ ಉದ್ಯೋಗಗಳ ಸುಳ್ಳು ಭರವಸೆಗಳನ್ನು ನೀಡುವ ಏಜೆನ್ಸಿಗಳಿಂದ ಭಾರತೀಯ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂದು ಬಶೀರ್ ಕೇಳಿದ್ದರು. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಕಲ್ಯಾಣ ಯೋಜನೆಗಳು ಮತ್ತು ಮೀಸಲಾದ ಬೆಂಬಲ ಕಾರ್ಯವಿಧಾನಗಳ ಬಗ್ಗೆಯೂ ಅವರು ವಿಚಾರಿಸಿದರು.

“ವಿದೇಶಗಳಲ್ಲಿ ಅಧ್ಯಯನ ಮಾಡುವುದು ವೈಯಕ್ತಿಕ ಇಚ್ಛೆ ಮತ್ತು ಆಯ್ಕೆಯ ವಿಷಯವಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಮಾಡುವ ಆಕಸ್ಮಿಕ ವೆಚ್ಚವನ್ನು ಪೂರೈಸಲು ವಿದೇಶದಲ್ಲಿರುವ ಎಲ್ಲಾ ಭಾರತೀಯ ಮಿಷನ್‌ಗಳು ಮತ್ತು ಪೋಸ್ಟ್‌ಗಳಲ್ಲಿ ಭಾರತೀಯ ಸಮುದಾಯ ಕಲ್ಯಾಣ ನಿಧಿ (ICWF) ಅನ್ನು ಭಾರತ ಸರ್ಕಾರವು ಸ್ಥಾಪಿಸಿದೆ,” ಎಂದು ಶಿಕ್ಷಣ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

“ಐಸಿಡಬ್ಲ್ಯೂಎಫ್‌ನ ಮುಖ್ಯ ಉದ್ದೇಶವೆಂದರೆ, ಆರ್ಥಿಕವಾಗಿ ಪರೀಕ್ಷಿತ ಆಧಾರದ ಮೇಲೆ ಸ್ಥಳದಲ್ಲೇ ನೆರವನ್ನು ಒದಗಿಸುವುದು. ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು / ಹುದ್ದೆಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳು ತಮ್ಮೊಂದಿಗೆ ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ ಮತ್ತು MADAD ಪೋರ್ಟಲ್‌ನಲ್ಲಿಯೂ ಸಹ ನೋಂದಾಯಿಸಿಕೊಳ್ಳಬಹುದು, ಇದರಿಂದಾಗಿ ಅವರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಸಮಯಕ್ಕೆ ಅನುಗುಣವಾಗಿ ಪರಿಹರಿಸಬಹುದು” ಎಂದು ಸಚಿವಾಲಯ ಹೇಳಿದೆ.

ರಾಹುಲ್‌ ಗಾಂಧಿಗೆ ಯುಕೆ ಪೌರತ್ವ ಇದೆ ಎಂಬ ದೂರಿನ ಬಗ್ಗೆ ಹೇಳಿಕೆ ನೀಡಿದ ಗೃಹ ಸಚಿವಾಲಯ
ಕರ್ನಾಟಕದ ಎಸ್ ವಿಘ್ನೇಶ್ ಶಿಶಿರ್ ಎಂಬ ಅರ್ಜಿದಾರರಿಂದ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಿಬಿಐ ತನಿಖೆಗೆ ಸಹ ಕೋರಿಕೆ

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ದ್ವಿಪೌರತ್ವದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಅಲಹಾಬಾದ್ ಹೈಕೋರ್ಟ್‌ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ತಿಳಿಸಿದೆ. ರಾಹುಲ್ ಗಾಂಧಿ ಅವರು ಯುಕೆ ಪ್ರಜೆಯೂ ಆಗಿದ್ದಾರೆ ಮತ್ತು ಅದನ್ನು ಪರಿಗಣಿಸಿ ಅವರ ಭಾರತೀಯ ಪೌರತ್ವವನ್ನು ರದ್ದು ಪಡಿಸಬೇಕು ಎಂಬ ಮನವಿಯೊಂದಿಗೆ ಸಲ್ಲಿಕೆಯಾದ ಅರ್ಜಿಯ ಕುರಿತು ನ್ಯಾಯಾಲಯವು ಕೇಂದ್ರದ ಪ್ರತಿಕ್ರಿಯೆಯನ್ನು ಕೇಳಿತ್ತು. ಕರ್ನಾಟಕದ ಎಸ್ ವಿಘ್ನೇಶ್ ಶಿಶಿರ್ ಎಂಬ ಈ ಅರ್ಜಿದಾರ ರಾಹುಲ್ ಗಾಂಧಿಯವರ ಪೌರತ್ವದ ಬಗ್ಗೆ ಸಿಬಿಐ ತನಿಖೆಯನ್ನು‌ ನಡೆಸುವಂತೆ ಕೋರಿದ್ದಾರೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ಬಿ.ಪಾಂಡೆ ಅವರಿಗೆ ಮೂರು ವಾರಗಳಲ್ಲಿ ಈ ಸಂಬಂಧ ಗೃಹ ಸಚಿವಾಲಯದಿಂದ ಸೂಚನೆಗಳನ್ನು ಪಡೆದುಕೊಳ್ಳುವಂತೆ ಮತ್ತು ಅದರ ಪ್ರತಿಕ್ರಿಯೆಯನ್ನು ಮುಂದಿನ ದಿನಾಂಕದಂದು ಸಲ್ಲಿಸುವಂತೆ ನ್ಯಾಯಾಲಯ ಹೇಳಿದೆ.

ಕೇಂದ್ರ ಗೃಹ ಸಚಿವಾಲಯವು, “ಅರ್ಜಿದಾರರು ಮಾಡಿದ ಮನವಿಯನ್ನು ಸಚಿವಾಲಯದಲ್ಲಿ ಸ್ವೀಕರಿಸಲಾಗಿದೆ ಮತ್ತು ಅದು ಪ್ರಕ್ರಿಯೆಯಲ್ಲಿದೆ. ಈ ವಿಚಾರವನ್ನು ಡಿಸೆಂಬರ್ 19, 2024 ಕ್ಕೆ ಪಟ್ಟಿ ಮಾಡಲಾಗಿದೆ. ಇದರ ಫಲಿತಾಂಶವನ್ನು ಪಟ್ಟಿ ಮಾಡಲಾಗುವ ಮಾರನೆ ದಿನವೇ ನ್ಯಾಯಾಲಯಕ್ಕೆ ತಿಳಿಸಲಾಗುವುದು” ಎಂದು ನ್ಯಾಯಾಲಯಕ್ಕೆ ಹೇಳಿದೆ.

ವಿಘ್ನೇಶ್, “ಈ ವಿಷಯದ ಬಗ್ಗೆ ಸ್ಪಷ್ಟ ಮತ್ತು ಅಂತಿಮ ನಿರ್ಧಾರವನ್ನು ಡಿಸೆಂಬರ್ 19 ರೊಳಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಆದೇಶಿಸಿದೆ. ಗೃಹ ಸಚಿವಾಲಯವು ತನ್ನ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ತಿಳಿಸಬೇಕಾಗಿದೆ,” ಎಂದು ಹೇಳಿದ್ದಾರೆ.

“ಸರ್ಕಾರವು ತಕ್ಷಣವೇ ರಾಹುಲ್ ಗಾಂಧಿಯವರ ಭಾರತೀಯ ಪೌರತ್ವವನ್ನು ಹಿಂಪಡೆಯುತ್ತದೆ ಎಂದು ನಾನು ನಂಬುತ್ತೇನೆ. ಅವರ ಹೆಸರು ಯುಕೆಯ ಪೌರತ್ವ ದಾಖಲೆಗಳಲ್ಲಿದೆ ಎಂಬ ಬಗ್ಗೆ ನಾವು ಯುಕೆ ಸರ್ಕಾರದಿಂದ ನೇರ ಮಾಹಿತಿಯನ್ನು ಸ್ವೀಕರಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.

“ನಾವು ಎಲ್ಲಾ ದಾಖಲೆಗಳನ್ನು ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ್ದೇವೆ…. ಭಾರತೀಯ ಕಾನೂನುಗಳ ಅಡಿಯಲ್ಲಿ ದ್ವಿಪೌರತ್ವವನ್ನು ಅನುಮತಿಸಲಾಗುವುದಿಲ್ಲ. ಯಾರಾದರೂ ಮತ್ತೊಂದು ರಾಷ್ಟ್ರದ ಪೌರತ್ವವನ್ನು ತೆಗೆದುಕೊಂಡ ನಂತರ, ಭಾರತೀಯ ಪೌರತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ” ಎಂದು ವಿಘ್ನೇಶ್ ಹೇಳಿದ್ದಾರೆ.

“ಬೇಕಾದಂತೆ ಲಿಂಗ ಬದಲಿಸಲು ಸಾಧ್ಯವಿಲ್ಲ”: ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ರಿಷಿ ಸುನಕ್‌ ಕೀಳು ಮಟ್ಟದ ಹೇಳಿಕೆ
ಅಕ್ಟೋಬರ್ 4 ರಂದು 2023 ರ ಕನ್ಸರ್ವೇಟಿವ್ ಪಕ್ಷದ ಸಮ್ಮೇಳನದಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಪ್ರಸ್ತಾಪಿಸಿದ ಭಿನ್ನ ಲಿಂಗಿಗಳ ಬಗೆಗಿನ ಹೇಳಿಕೆ ಟೀಕೆಗೆ ಗುರಿಯಾಗಿದೆ. “ಜನರು ಅವರು ಬಯಸಿದ ಯಾವುದೇ ಲಿಂಗದಿಂದ ಗುರುತಿಸಿಕೊಳ್ಳಬಹುದು ಎಂದರೆ  ಅದು ಸಾಧ್ಯವಿಲ್ಲ. ಒಬ್ಬ ಮನುಷ್ಯ ಪುರುಷ ಅಥವಾ ಮತ್ತು ಮಹಿಳೆಯಾಗಿ ಗುರುತಿಸಿಕೊಳ್ಳಲು ಮಾತ್ರ ಸಾಧ್ಯ. ಇದು ಸಾಮಾನ್ಯ ಜ್ಞಾನ,” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಟ್ರಾನ್ಸ್‌ಫೋಭಿಕ್‌ (ಲಿಂಗಾಂತರಿಗಳ ಬಗೆಗಿನ ಅಸಹನೆ) ಎಂಬ ನೆಲೆಯಿಂದ ಟೀಕಿಸಲಾಗುತ್ತಿದೆ.

ವಿಡಿಯೋ ನೋಡಿ: ರಿಷಿ ಸುನಕ್‌ ಅವರು ನೀಡಿದ ವಿವಾದಾತ್ಮಕ ಹೇಳಿಕೆ

ಯುಕೆ ಪ್ರಧಾನಿಯಾಗಿರು ರಿಷಿ ಸುನಕ್‌ ಅವರ ಈ ಹೇಳಿಕೆ ವೈಯಕ್ತಿಕ ಹೇಳಿಕೆಯಾಗಿರಲು ಸಾಧ್ಯವಿಲ್ಲ, ಇದು ಯುಕೆ ಸರ್ಕಾರದ ಅಭಿಪ್ರಾಯ ಎಂಬ ನೆಲೆಯಲ್ಲಿ ವ್ಯಾಪಕ ಟೀಕೆ ಮಾಡಲಾಗುತ್ತಿದೆ. ರಿಷಿ ಸುನಕ್‌ ಅವರನ್ನು ಟ್ರಾನ್ಸ್‌ಫೋಭಿಕ್‌ ಎಂದು ಕರೆಯಲಾಗುತ್ತಿದೆ.

ಸುನಕ್ ಅವರ ಭಾಷಣದ ಕೇವಲ ಒಂದು ದಿನದ ಹಿಂದೆ ಆರೋಗ್ಯ ಕಾರ್ಯದರ್ಶಿ ಸ್ಟೀವ್ ಬಾರ್ಕ್ಲೇ ಮಹಿಳೆಯರ ಆಸ್ಪತ್ರೆಯ ವಾರ್ಡ್‌ಗಳಲ್ಲಿ ಟ್ರಾನ್ಸ್‌ಜೆಂಡರ್ ಮಹಿಳೆಯರಿಗೆ ಚಿಕಿತ್ಸೆ ನೀಡುವುದನ್ನು ನಿಷೇಧಿಸುವ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಸ್ಕೈ ನ್ಯೂಸ್ ಪ್ರಕಾರ ಮಹಿಳೆಯರ ಆರೋಗ್ಯ ಸೇವೆಗಳ ಬಗೆಗಿನ ಚರ್ಚೆಗಳಲ್ಲಿ ಸೆಕ್ಸ್‌-ಸ್ಪೆಸಿಫಿಕ್ ಪರಿಭಾಷೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು.

ಯುಕೆಯಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಜನರು (3.2%) LGBTQ++ ಎಂದು ಗುರುತಿಸಿಕೊಂಡಿದ್ದು, 260,000 ಕ್ಕಿಂತ ಹೆಚ್ಚು (0.5%) ಟ್ರಾನ್ಸ್ ವ್ಯಕ್ತಿಗಳು/ಜೆಂಡರ್‌- ನಾನ್ ಬೈನರಿಯ ಅಡಿಯಲ್ಲಿ ಬರುತ್ತಾರೆ. ಈ ನೆಲೆಯಿಂದ ಸುನಕ್ ಅವರ ಈ ಅಭಿಪ್ರಾಯ ಅಪಾಯಕಾರಿಯಾಗಿರುತ್ತದೆ.

ಯುಕೆ ಪ್ರಧಾನಮಂತ್ರಿ ಲಿಂಗಾಂತರಿ ನಾಗರಿಕರನ್ನು ಕೀಳಾಗಿ ನೋಡುವುದು ಹಾಗೂ ಇಂತಹ ಸಾರ್ವಜನಿಕ ಟೀಕೆಗಳನ್ನು ನೀಡುವುದು ಇದೇ ಮೊದಲೇನಲ್ಲ. ಜೂನ್ 2023 ರಲ್ಲಿ, ಬ್ರಿಟೀಷ್ ಪ್ರಧಾನಿ ರಹಸ್ಯವಾಗಿ ಟ್ರಾನ್ಸ್ ಮಹಿಳೆಯರನ್ನು ಅಪಹಾಸ್ಯ  ಮಾಡುವ ವಿಡಿಯೋವನ್ನು ಪಿಂಕ್‌ನ್ಯೂಸ್‌ ಹಂಚಿಕೊಂಡಿತ್ತು.

ಈ ವಿಡಿಯೋದಲ್ಲಿ ರಿಷಿ ಸುನಕ್ “ಮಹಿಳೆಯರು ಶಿಶ್ನ ಹೊಂದಿರುವ” ಬಗ್ಗೆ ತಮಾಷೆ ಮಾಡಿದ್ದರು. ಇದು ಟ್ರಾನ್ಸ್‌ ಮಹಿಳೆಯ ಬಗ್ಗೆ ನೇರವಾಗಿ ಮಾಡಿದ ಅನಾಗರಿಕ ಅಪಹಾಸ್ಯವಾಗಿತ್ತು. ಅಲ್ಲದೇ, ಟ್ರಾನ್ಸ್ ಹಕ್ಕುಗಳನ್ನು ಬೆಂಬಲಿಸಿದ್ದಕ್ಕಾಗಿ ಲಿಬರಲ್-ಡೆಮೋಕ್ರಾಟ್ ಪಕ್ಷದ ನಾಯಕ ಎಡ್ ಡೇವಿ ಅವರನ್ನು ಗೇಲಿ ಮಾಡಿದ್ದರು.

“…ಎಡ್ ಡೇವಿ ಎಷ್ಟು ಬ್ಯುಸಿ ಇದ್ದಾರೆ ಎಂದರೆ,  ತನ್ನಂತೆಯೇ ಮಹಿಳೆಯರಿಗೂ ಶಿಶ್ನ ಇರುತ್ತದೆ ಎಂದು ಎಲ್ಲರಿಗೂ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದಾರೆ,” ಎಂಬ ಅತ್ಯಂತ ಕೀಳಾದ ಹೇಳಿಕೆ ನೀಡಿದ್ದರು.

ಕರ್ನಾಟಕ ಮೂಲದ ಉದ್ಯಮಿಗಳಾದ ಇನ್ಫೋಸಿಸ್‌ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯರವರ ಅಳಿಯನಾಗಿರುವ ರಿಷಿ ಸುನಕ್‌ನ ಈ ಹೇಳಿಕೆಗಳು ಇಡೀ ವಿಶ್ವದಲ್ಲಿ ಟೀಕೆಗೆ ಒಳಗಾಗಿದೆ. ಇದು ಓರ್ವ ನಾಯಕನಿಗೆ ತಕ್ಕುದಲ್ಲದ ವರ್ತನೆ, ಟ್ರಾನ್ಸ್ ವ್ಯಕ್ತಿಗಳು ಪ್ರತಿದಿನ ಎದುರಿಸುತ್ತಿರುವ ಸವಾಲುಗಳು ಮತ್ತು ತಾರತಮ್ಯವನ್ನು ಗ್ರಹಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡುತ್ತಿದ್ದಾರೆ.

X ನಲ್ಲಿ ರಿಷಿ ಸುನಕ್‌ ವಿರುದ್ದ ತೀವ್ರವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

1987 ರಲ್ಲಿ, ಥ್ಯಾಚರ್ ಟೋರಿ ಪಲ್ಪಿಟ್‌ನಿಂದ ಭಯಾನಕ ಹೋಮೋಫೋಬಿಕ್‌ ಮಾತುಗಳನ್ನು ಉಗುಳುತ್ತಿದ್ದರು. 2023 ರಲ್ಲಿ ರಿಷಿ ಸುನಕ್  ಟ್ರಾನ್ಸ್ ಜನರ ಮೇಲೆ ಇದೇ ರೀತಿಯಲ್ಲಿ ದಾಳಿ ಮಾಡುತ್ತಿದ್ದಾರೆ. ಆಗ ಹೆಚ್ಚಿನ ಜನರು ಥ್ಯಾಚರ್ ಅವರ ಭಾಷಣವನ್ನು ದ್ವೇಷಕ್ಕಾಗಿ ನೋಡುತ್ತಿದ್ದರು. ಈಗಲೂ ಹೆಚ್ಚಿನ ಜನರು ಸುನಕ್ ಅವರ ಭಾಷಣವನ್ನು ಅದೇ ರೀತಿಯಲ್ಲಿ ವೀಕ್ಷಿಸುತ್ತಿದ್ದಾರೆ. – @AidanCTweets

ಬ್ರಿಟನ್‌ ಪ್ರಧಾನಿ ಸ್ಪರ್ಧೆ: ಭಾರತೀಯ ಮೂಲದ ರಿಷಿ ಸುನಕ್‌ ರನ್ನು ಸೋಲಿಸಿದ ಲಿಜ್‌ ಟ್ರಸ್‌
ಬ್ರಿಟನ್‌: ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್‌ ಅವರು ಭಾರತೀಯ ಮೂಲದ ರಿಷಿ ಸುನಕ್‌ ಅವರನ್ನು ಸೋಲಿಸಿ ಬ್ರಿಟನ್‌ ನ ಹೊಸ ಪ್ರಧಾನಿಯಾಗಿದ್ದಾರೆ.

ವಿವಾದಗಳ ಸರಣಿಯ ನಂತರ ಜುಲೈನಲ್ಲಿ ಪ್ರಧಾನಿ ಹುದ್ದೆಗೆ ಬೋರಿಸ್‌ ಜಾನ್ಸನ್‌ ಅವರು ರಾಜೀನಾಮೆ ನೀಡಿದ್ದರು.

ಲಿಜ್‌ ಟ್ರಸ್‌ ಅವರನ್ನು ಮುಂದಿನ ಪ್ರಧಾನ ಮಂತ್ರಿ ಎಂದು ಹೆಸರಿಸಿದ ನಂತರ, ತೆರಿಗೆಗಳನ್ನು ಕಡಿತಗೊಳಿಸಲು ಮತ್ತು ಆರ್ಥಿಕತೆಯನ್ನು ಬೆಳಸಲು ದಿಟ್ಟ ಯೋಜನೆಯನ್ನು ನೀಡುವುದಾಗಿ ಹೇಳಿದರು.

ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಈ ಓಟದಲ್ಲಿ ವಿಜೇತೆ ಎಂದು ಘೋಷಿಸಿದ ಕೂಡಲೇ, ಕನ್ಸರ್ವೇಟಿವ್‌ ಪಕ್ಷದ ನಾಯಕಿಯಾಗಲು ನನಗೆ ಗೌರವವಿದೆ ಎಂದು ಹರ್ಷವ್ಯಕ್ತಪಡಿಸಿದರು. ದೇಶವನ್ನು ಮುನ್ನೆಡೆಸಲು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪಕ್ಷದ ನಾಯಕರಿಗೆ ಲಿಜ್‌ ಟ್ರಸ್‌ ಧನ್ಯವಾದ ತಿಳಿಸಿದರು.

UK Foreign Secretary Liz Truss becomes the new British Prime Minister, succeeds ousted Boris Johnson; defeats rival Rishi Sunak pic.twitter.com/6mrSLHkjqo
— ANI (@ANI) September 5, 2022