Umman chandy – Peepal Media

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ
ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು ಮುಂಜಾನೆ 4.25 ರ ಆಸುಪಾಸಿನಲ್ಲಿ ನಿಧನರಾಗಿದ್ದಾರೆ. ಹಲವು ಸಮಯದಿಂದ ಕ್ಯಾನ್ಸರ್ ಪೀಡಿತರಾಗಿದ್ದ ಇವರು, ಬೆಂಗಳೂರಿನ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿದ್ದರು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಕೇರಳ ರಾಜ್ಯದಲ್ಲಿ ಸುಮಾರು 10 ಬಾರಿ ಶಾಸಕರಾಗಿ ಆಯ್ಕೆ ಆದ ಕೀರ್ತಿ ಉಮ್ಮನ್ ಚಾಂಡಿಯವರಿಗಿದೆ. ಮೊದಲ ಬಾರಿಗೆ 1970 ರಲ್ಲಿ ಚುನಾಯಿತರಾದ ಇವರು ನಂತರ ಕೇರಳ ಸರ್ಕಾರದ ವಿವಿಧ ಖಾತೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದರು.

ಮೊದಲ ಬಾರಿಗೆ 1977 ರಲ್ಲಿ ಕಾರ್ಮಿಕ ಸಚಿವರಾಗಿ, 1981 ರಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿ, 2004 ಮತ್ತು 2011 ರ ಅವಧಿಯಲ್ಲಿ ಎರಡು ಬಾರಿ ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

1943 ಅಕ್ಟೋಬರ್ 31ರಂದು ಜನಿಸಿದ ಅವರು, ಅವರು ಕೇರಳ ವಿದ್ಯಾರ್ಥಿ ಒಕ್ಕೂಟದ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. 1967 ರಲ್ಲಿ ಒಕ್ಕೂಟದ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದರು. ಅಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿದ ಉಮ್ಮನ್ ಚಾಂಡಿ ಅವರು ನಂತರ 1969 ರಲ್ಲಿ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.