untochability – Peepal Media

ಅಸ್ಪೃಶ್ಯತೆ ಆಚರಣೆ : ʼಮೇಲ್ಜಾತಿʼ ವ್ಯಕ್ತಿಯ ವಿರುದ್ದ SC/ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು
ಚಾಮರಾಜನಗರ : ದಲಿತ ಮಹಿಳೆ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ, ಜಾತಿ ನಿಂದನೆ ಮಾಡಿದ ಮೇಲ್ಜಾತಿ ವ್ಯಕ್ತಿಯ ವಿರುದ್ಧ ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಪಂಚಾಯತ್‌ ಉಪ ನಿರ್ದೇಶಕರು ಅಲ್ಲಿನ ಆಯುಕ್ತರಿಗೆ ಈ ಪ್ರಕರಣದ  ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ʼಈ ಅಸ್ಪೃಶ್ಯತೆ ಆಚರಣೆಯ ಕುರಿತು ತಹಶಿಲ್ದಾರರು, ಉಪ ವಿಭಾಗಾಧಿಕಾರಿಗಳು, ಪೊಲೀಸ್‌ ಅಧಿಕಾರಿಕಾರು ಸೇರಿದಂತೆ ಎಲಾ ಜಾತಿಯ ಮುಖಂಡರುಗಳೊಡನೆ ಸಭೆ ನಡೆಸಿದ್ದು, ಹೆಗ್ಗೋಠಾರಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಖುದ್ದು ಕರೆದೊಯ್ದು ನೀರು ಕುಡಿಸಿರುವ ಬಗ್ಗೆ ತಿಳಿಸಿದ್ದಾರೆ.

ಹೆಗ್ಗೊಠಾರ ಗ್ರಾಮದಲ್ಲಿ ಅಂದಾಜು ಪರಿಶಿಷ್ಟ ಜನಾಂಗದವರ 200 ಮನೆಗಳು, 650 ಜನ ಪರಿಶಿಷ್ಟ ಜಾತಿಯ ಜನಸಂಖ್ಯೆ (ಪರಿಶಿಷ್ಟ ಪಂಗಡದ 180 ಕುಟುಂಬ , ಜನಸಂಖ್ಯೆ 500) ಪರಿಶಿಷ್ಟಜಾತಿ ಕುಟುಂಬದ ಗ್ರಾಮಕ್ಕೆ ಪೂರ್ಣವಾಗಿ ನೀರಿನ ಮೂಲ ಒಂದೇ ಆಗಿರುತ್ತದೆ ಆದರೆ ಸದರಿ ನೀರು ವಿವಿಧ ಸ್ವರೂಪದಲ್ಲಿ ಹರಿಯುತ್ತದಿರುವ ನೀರನ್ನು ವಿವಿಧ ಸಮುದಾಯದವರು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮದಲ್ಲಿನ ಒಟ್ಟು 42 ನೀರಿನ ತೊಂಬೆಗಳಲ್ಲಿ ಪಂಚಾಯತ್‌ ವತಿಯಿಂದ ಸಾರ್ವಜನಿಕರು ಉಪಯೋಗಿಸುವ ನೀರಿನ ಟ್ಯಾಂಕರ್‌ ಎಂದು ನಾಮಫಲಕ ಹಾಕಿಸಲು ಕ್ರಮ ವಹಿಸಲಾಗಿದ್ದು, ಈ ಕುರಿತು ಗ್ರಾಮಸ್ಥ ಗಿರಿಯಪ್ಪನವರ ದೂರಿನ ಆಧಾರದಲ್ಲಿʼಮೇಲ್ಜಾತಿʼಯ ಮಹದೇವಪ್ಪನವರ ಮೇಲೆ ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ The SC/ST(Prevention of Atrocities) Amendent Act 2015(U/s-3(1)(za)(A)) ರಂತೆ ಚಾಮರಾಜನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದಾರೆ.

ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ಸಂಬಂಧಿಕರ ಮದುವೆಗೆಂದು ದಲಿತ ಮಹಿಳೆಯೊಬ್ಬಳು ಬಾಯಾರಿಕೆಯಿಂದ  ಅಲ್ಲಿಯೇ ಇದ್ದ ಟ್ಯಾಂಕರ್‌ನ ನಲ್ಲಿಯಲ್ಲಿ ನೀರು ಕುಡಿದಿದ್ದಳು. ಅದನ್ನು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼ ಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದನು. ಈ ಬಗ್ಗೆ ಚಾಮಾರಾಜನಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ FIR ದಾಖಲಿಲಾಗಿತ್ತು.

ದಲಿತರಿಂದ 42 ಟ್ಯಾಂಕ್‌ ನಲ್ಲಿಗಳ ನೀರು ಮುಟ್ಟಿಸಿ ಜಾಗೃತಿ ಮೂಡಿಸಿದ ಅಧಿಕಾರಿಗಳು
ಚಾಮರಾಜನಗರ: ದಲಿತ ಮಹಿಳೆಯೊಬ್ಬಳು ನಲ್ಲಿಯಲ್ಲಿ ನೀರು ಕುಡಿದಳೆಂದು ಸೊ ಕಾಲ್ಡ್‌ ಮೇಲ್ಜಾತಿಯ ಕೆಲ ವ್ಯಕ್ತಿಗಳು ಟ್ಯಾಂಕರ್‌ನ ನೀರು ಕಾಲಿ ಮಾಡಿಸಿ, ಗೋಮೂತ್ರದಿಂದ ಶುದ್ಧಿಗೊಳಿಸಿದ ಪ್ರಕರಣದ ಈ ಹಿನ್ನೆಲೆಯಲ್ಲಿ ಅಧಿಕಾರಿಯೊಬ್ಬರು ಹೆಗ್ಗೋಠಾರಕ್ಕೆ ಭೇಟಿ ನೀಡಿ ಗ್ರಾಮದ  42 ತೊಂಬೆಗಳಲ್ಲೂ ದಲಿತರಿಂದ ನೀರು ಕುಡಿಸಿ ಸಹೋದರತೆಯ ಜಾಗೃತಿ ಸಂದೇಶ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಚಾಮರಾಜನಗರದ ತಹಶಿಲ್ದಾರ್‌ ಬಸವರಾಜ್‌ ನೇತೃತ್ವದಲ್ಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್‌, ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಪಿಡಿಒ ಮಾದಪ್ಪ, ಸಬ್‌ ಇನ್‌ಸ್ಪೆಕ್ಟರ್‌ ಜಯರಾಂ ಮತ್ತು ಇನ್ನಿತರ ದಲಿತ ಚಿಂತಕರು ಸೇರಿ ಸಭೆ ನಡೆಸಿ ಅಸ್ಫೃಶ್ಯತೆ ಆಚರಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಗ್ರಾಮದ ಟ್ಯಾಂಕರ್‌ ಕೇವಲ ಒಂದೇ ಜಾತಿಗೆ ಸೀಮಿತವಲ್ಲ ಎಂದು ತಿಳಿಹೇಳುವ ಕೆಲಸವನ್ನು ಮಾಡಿದ್ದಾರೆ.

ಹಿನ್ನೆಲೆ:

ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿದ್ದ ದಲಿತ ಮಹಿಳೆಯೊಬ್ಬಳು ಬಾಯಾರಿಕೆಯಾಗಿ ಅಲ್ಲಿಯೇ ಇದ್ದ ಟ್ಯಾಂಕರ್‌ನ ನಲ್ಲಿಯಲ್ಲಿ ನೀರು ಕುಡಿದಿದ್ದಾಳೆ. ಅದನ್ನು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼ ಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಚಾಮಾರಾಜನಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  FIR ದಾಖಲಾಗಿದೆ.

ಸಭೆಯ ನಂತರ ಪೊಲೀಸರ ಬಿಗಿ ಬಂದೋಬಸ್ತ್‌ನೊಂದಿಗೆ ಅಲ್ಲಿಗೆ ತೆರಳಿದ ಅಧಿಕಾರಿಗಳು ಸ್ವತಃ ಅವರೇ ದಲಿತ ಸಮುದಾಯದಿಂದ ಗ್ರಾಮದಲ್ಲಿರುವ ಪ್ರತಿಯೊಂದು ತೊಂಬೆಗಳನ್ನು ಮುಟ್ಟಿಸಿ, ನಲ್ಲಿಗಳಲ್ಲಿ ನೀರು ಕುಡಿಸಿದ್ದು  ಯಾವುದೇ ಸಂಘರ್ಷಕ್ಕೆ ಆಸ್ಪದ ಇಲ್ಲದಂತೆ ‘ಮೇಲ್ಜಾತಿ’ ವ್ಯಕ್ತಿಗಳು ಮಾಡುತ್ತಿರುವ ತಪ್ಪಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದ್ದಾರೆ.

ಈ ಕುರಿತು ಪೀಪಲ್‌ ಮೀಡಿಯಾದೊಂದಿಗೆ ಮಾತನಾಡಿದ ಹೆಸರು ಹೇಳಲಿಚ್ಚಿಸಿದ ಚಿಂತಕರೊಬ್ಬರು, ʼಈ ಅಸ್ಪೃಶ್ಯತೆ ಕೊನೆಯಾಗಬೇಕು. ಈಗಿರುವ ಕಾನೂನಿನ ಆಡಳಿತಲ್ಲೂ ಅಸ್ಪೃಶ್ಯತೆ ಆಚರಣೆ ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಇದಕ್ಕಾಗಿ ದಲಿತ ಸಂಘಟನೆಗಳು ಯಾವುದೇ ಪ್ರತಿಭಟನೆ ಮಾಡದೆ, ತಹಶಿಲ್ದಾರರು ತಾವೇ ಸ್ವತಃ ನಿಂತು ಜಾಗೃತಿ ಮೂಡಿಸುವಂತೆ ಮಾಡಿರುವುದು ಸ್ವಾಗತರ್ಹವಾಗಿದೆ. ಅಸ್ಪೃಶ್ಯತೆ ಬಗ್ಗೆ ಯಾರೂ ಹೋರಾಡಬೇಕಿಲ್ಲ. ಈಗಾಗಲೇ ಇರುವ ಕಾನೂನನ್ನು, ಇರುವ ಅಧಿಕಾರವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳದೆ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ಸಾಕು. ಇದಕ್ಕಾಗಿ ಯಾರನ್ನೂ ಬೆದರಿಸುವ ಅಗತ್ಯವಿಲ್ಲ, ದೊಡ್ಡ ಮಟ್ಟದ ಹೋರಾಟ ಮಾಡುವ ಅಗತ್ಯವೂ ಇಲ್ಲ. ಕಳ್ಳತನ ಮಾಡುವವರು, ಲೈಂಗಿಕ ಅಪರಾದ ಮಾಡುವವರು, ಅಸ್ಫೃಶ್ಯತೆ ಆಚರಣೆ ಮಾಡುವವರು ಎಲ್ಲವೂ ಒಂದೇ ರೀತಿಯ ಅಪರಾಧ. ಎಲ್ಲರಿಗೂ ಒಂದೇ ರೀತಿಯ ಶಿಕ್ಷೆಯಾಗಬೇಕುʼ ಎಂದರು.

ಇದೇ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ‘ನಾನೊಬ್ಬ ದಲಿತ’ ಫೇಸ್ಬುಕ್‌ ಪುಟದಲ್ಲಿ,  ʼಗ್ರಾಮದ ಎಲ್ಲಾ ತೊಂಬೆಗಳಲ್ಲಿ ನೀರು ಕುಡಿದ ದಲಿತ ಯುವಕರು ಈಗ ಎಷ್ಟು ಲಾರಿ ಗೋಮೂತ್ರ ತರಿಸಿ ಟ್ಯಾಂಕ್‌ ಶುದ್ಧ ಮಾಡ್ಕೋತಿರೋ ಮಾಡ್ಕೊಳಿʼ ಎಂದು ಬರೆದಿರುವ ಪೋಸ್ಟರ್‌ ಹಂಚಿಕೊಳ್ಳಲಾಗಿದೆ.