untouchability – Peepal Media

ಜಾತಿ ದೌರ್ಜನ್ಯ – ಅಸ್ಪೃಶ್ಯತೆ ಆಚರಣೆ: ತಿಂಗಳಾದರೂ ತಪ್ಪಿತಸ್ಥರ ಮೇಲೆ ಕ್ರಮ ಇಲ್ಲ
* ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಣೆ ಪ್ರಕರಣ ಕುರಿತು ತಿಂಗಳಾದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಇಲ್ಲ
* ಕಾಲೇಜಿಗೆ ಡಿಎಚ್ಎಸ್ ನಿಯೋಗ ಬೇಟಿ ನೀಡಿ ಕ್ರಮಕ್ಕೆ ಒತ್ತಾಯ

ಹೊಳೆನರಸೀಪುರ ತಾಲೂಕಿನ ಹಳ್ಳಿ ಮೈಸೂರಿನಲ್ಲಿ ಇರುವ ತಮ್ಮ ವಿಶ್ವ ವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಜಾತಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ತಗೆದುಕೊಳ್ಳಲಾಗಿಲ್ಲ. ಇಲ್ಲಿ ಕಳೆದ 4 ವರ್ಷಗಳಿಂದ ಪರಿಚಾರಕರಾಗಿ (ಅಟೆಂಡರ್) ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿ(ಎಸ್.ಸಿ) ಸಮುದಾಯಕ್ಕೆ ಸೇರಿದ ಪರಮೇಶ್ ಜಿ.ಕೆ ಎಂಬುವವರು ಮೇಲೆ ಇಬ್ಬರು ಅತಿಥಿ ಉಪನ್ಯಾಸಕರು ಅಸ್ಪೃಶ್ಯತೆಯ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಇವರ ಮೇಲೆ ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಬಿ.ಡಿ ಮತ್ತು ಡಾ. ಚಂದ್ರಶೇಖರ್ ಎಚ್.ಆರ್ ಎಂಬುವವರು ಹಲವು ತಿಂಗಳುಗಳಿಂದ ಪರಮೇಶ್ ರವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಲೇಜಿನಲ್ಲಿ ಮಧ್ಯಾಹ್ನದ ಊಟದ ಸಂದರ್ಭಗಳಲ್ಲಿ “ಕೀಳು ಜಾತಿಯವನು ಹೇಗೆ ನಮ್ಮ ಜೊತೆಯಲ್ಲೇ ಒಟ್ಟಿಗೆ ಊಟ ಮಾಡುತ್ತಾನೆ,” ಎಂದು ಹಲವು ನೆಪಗಳನ್ನೊಡ್ಡಿ ಪರಮೇಶ್ ಊಟ ಮಾಡುವುದನ್ನು ತಪ್ಪಿಸಿರುತ್ತಾರೆ ಎಂಬ ಆರೋಪ ಮಾಡಲಾಗಿದೆ.

ಜೊತೆಗೆ ಕುರ್ಚಿ ಮೇಲೆ ಕೂರುವುದನ್ನು ಸಹಿಸದಿರುವುದು, ನಾಯಿಗೆ ನಿಂದಿಸುವ ನೆಪದಲ್ಲಿ ಮಾರ್ಮಿಕವಾಗಿ ಬಯ್ಯುವುದು ಸೇರಿದಂತೆ, ನಾವು ಒಬ್ಬ ಎಸ್.ಸಿ (ಪರಿಶಿಷ್ಟ ಜಾತಿ) ಯವನ ಜೊತೆ ಕೂರಬೇಕಾ ಎಂದು ಸಾರ್ವಜನಿಕವಾಗಿ ಅವರಿವರ ನೆಪದಲ್ಲಿ ನಿಂದಿಸಿ, ಜಾತಿಯತೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದುದು ತಿಳಿದು ಬಂದಿದೆ.

ಕವಿತ ಮತ್ತು ಚಂದ್ರಶೇಖರ್ ರವರುಗಳು ಮಾರ್ಚ್‌ 20, 2025 ರಂದು ಪರಮೇಶ್ ರವರ ಮಾನಕ್ಕೆ ಕುಂದುಂಟಾಗುಂತೆ ಮತ್ತೊರ್ವರ‌ ಸಮ್ಮುಖದಲ್ಲಿ ಜಾತಿಯ ಹೆಸರು ಹಿಡಿದು ಅಪಮಾನಿಸಿ ಮಾತನಾಡಿದ್ದಾರೆ.

ಈ ಬಗ್ಗೆ ಕವಿತ ಬಿ.ಡಿ ರವರು “ನೀನು ಪ್ರಾಂಶುಪಾಲರು ಅಥವಾ ಪೊಲೀಸ್ ಗೆ ದೂರು ನೀಡಲು ಮುಂದಾದರೆ, ನಾನು ಹೇಗಿದ್ದರೂ ಹೆಂಗಸು ಬೇರೆ ಕೇಸನ್ನೇ ಕೊಡುತ್ತೇನೆಂದು ಮತ್ತು ನಿನ್ನನ್ನು ಇಲ್ಲಿ ಇರುಲು ಬಿಡುವುದಿಲ್ಲ. ಬೇರೆ ಕಡೆಗೆ ವರ್ಗಾವಣೆ ಮಾಡಿಸುತ್ತೇನೆಂದು ಬೆದರಿಕೆ ಹಾಕುವುದರ ಜೊತೆಗೆ ನೀನು ನಮ್ಮಂಥವರೊಂದಿಗೆ ಕೆಲಸ ಅರ್ಹನಲ್ಲ, ಎಲ್ಲಾದರೂ ಹೋಗಿ ಸಾಯಿರಿ,” ಎಂದು ತಮ್ಮ ಜಾತಿ ಹೆಸರನ್ನು ಕೀಳಾಗಿ ಬಳಸಿ ಅಪಮಾನಿಸಿ ತೊಂದರೆ ಕೊಟ್ಟಿದ್ದಾರೆ ಎಂದು ಪರಮೇಶ್ ಅವರು ಆರೋಪಿಸಿದ್ದಾರೆ.

ಈ ಘಟನೆಯಿಂದ ನೊಂದ ಪರಮೇಶ್ ರವರು ಕವಿತ.ಬಿ.ಡಿ ಮತ್ತು ಡಾ.ಚಂದ್ರಶೇಖರ್ ಎಚ್. ಆರ್. ಎಂಬುವವರ ಮೇಲೆ ಮಾರ್ಚ್‌ 20, 2025 ರಂದು ಹಳ್ಳಿ‌ಮೈಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ಮಾಡಲಾಗಿರುತ್ತದೆ. ಘಟನೆ ಇಷ್ಟು ದಿನವಾದರೂ ವಿ.ವಿ ಕೇಂದ್ರದಿಂದ ತಪ್ಪಿತಸ್ಥರ ಮೇಲೆ‌ ಯಾವುದೇ ಕ್ರಮ ಕೈಗೊಳ್ಳದಿರುವುದು ಅತ್ಯಂತ ನಿರ್ಲಕ್ಷ್ಯತನವಾಗಿರುತ್ತದೆ.

ನಂತರ ಶಾಸಕ‌ ಎ. ಮಂಜು ರವರು ಕಾಲೇಜಿಗೆ ಬೇಟಿ ನೀಡಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಬದಲು ಜಾತಿ ನಿಂದನೆಗೆ ಒಳಗಾಗಿ ನೊಂದಿರುವ ತಮ್ಮ  ದಬ್ಬಾಳಿಕೆಯ ಮಾತುಗಳನ್ನಾಡಿ, ಬೆದರಿಕೆ ಒಡ್ಡಿದ್ದಾರೆ ಎಂದು ಪರಮೇಶ್ ಆರೋಪಿಸಿದ್ದಾರೆ.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪನ್ಯಾಸಕರೇ ಈ ರೀತಿಯಲ್ಲಿ ಅನಾಗರೀಕವಾಗಿ ಅಸ್ಪೃಶ್ಯತೆ, ಜಾತಿ ತಾರತಮ್ಯ ಮಾಡಿರುವುದು ಅತ್ಯಂತ ದುರಂತದ ಸಂಗತಿ ಮತ್ತು ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದಾಗಿರುತ್ತದೆ. ಈ ಘಟನೆಯನ್ನು ದಲಿತ ಹಕ್ಕುಗಳ ಸಮಿತಿ- ಕರ್ನಾಟಕ (ಡಿಎಚ್ಎಸ್) ತೀವ್ರವಾಗಿ ಖಂಡಿಸಿದೆ.

ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಸನ ವಿಶ್ವವಿದ್ಯಾನಿಲಯದ ಉಪ ಕುಲಪತಿ ಮತ್ತು ಕುಸಚಿವರಿಗೆ ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಿಸಿರುವ ಕವಿತ ಬಿ.ಡಿ. ಮತ್ತು ಡಾ. ಚಂದ್ರಶೇಖರ್ ಎಚ್. ಆರ್. ಎಂಬುವವರ ಮೇಲೆ ಸೂಕ್ತ ಕ್ರಮ‌ ಜರುಗಿಸಿ, ನೊಂದ ಪರಮೇಶ್ ರವರಿಗೆ ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿ ಡಿಎಚ್ಎಸ್ ಹಾಸನ ಜಿಲ್ಲಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.

ಇಂದು, ಎಪ್ರಿಲ್‌ 22 ರಂದು ಡಿಎಚ್‌ಎಸ್ಜಿಲ್ಲಾ ಸಂಚಾಲಕ, ಎಂ.ಜಿ ಪೃಥ್ವಿ ಹಾಗೂ ಜಿಲ್ಲಾ ಸಮಿತಿ ಸದಸ್ಯ ರಮೇಶ್ ಹಳ್ಳಿ ಮೈಸೂರಿನ ಪದವಿ ಕಾಲೇಜಿಗೆ ಬೇಟಿ ನೀಡಿ, ಪ್ರಾಂಶುಪಾಲರನ್ನು ಬೇಟಿ ಮಾಡಿದ್ದಾರೆ. ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆ ಆಚರಿಸಿರುವವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮತ್ತು ಜಾತಿ ದೌರ್ಜನ್ಯ ಕೊಳಗಾದ ಪರಮೇಶ ರವರಿಗೆ ನ್ಯಾಯ ದೊರಕಿಸದಿದ್ದರೆ ಮುಂದಿನ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಡಿಎಚ್‌ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ ತಿಳಿಸಿದ್ದಾರೆ.

ಅಂಬೇಡ್ಕರ್ ದಾರಿಯೇ ನಮ್ಮ ತಾತ್ವಿಕ ನೆಲಗಟ್ಟು: ಜಸ್ಟೀಸ್‌ ನಾಗಮೋಹನ್‌ ದಾಸ್
ಬೆಂಗಳೂರು: ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಒಬ್ಬೊಬ್ಬರಾಗಿಯೇ ಮಾತನಾಡಿದರೆ ಸರ್ಕಾರಕ್ಕೆ ಕೇಳಿಸಲ್ಲ. ನಾವೆಲ್ಲ ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಒಂದಾಗಬೇಕು‌ ಎಂದು  ಇಂದು ನಡೆಯುತ್ತಿರುವ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು ಮಾತನಾಡಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್‌ 6, ಮಂಗಳವಾರದಂದು “ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ” ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು ಕೋಮುವಾದದ  ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ನ್ಯಾ.ಜಸ್ಟೀಸ್‌ ನಾಗಮೋಹನ್‌ ದಾಸ್‌ ಅವರು,ಈ ಸಂದರ್ಭದಲ್ಲಿ ಅಂಬೇಡ್ಕರ್‌ರವರಿಗೆ ಸಲಾಮ್ ಹೊಡೆದರೆ ಸಾಲುವುದಿಲ್ಲ, ನಾವು ಅಂಬೇಡ್ಕರ್ ಬಗ್ಗೆ ಅಹಂ ಬೆಳೆಸಿಕೊಳ್ಳಬಾರದು ಬದಲಿಗೆ ಅಂಬೇಡ್ಕರ್ ಬಗ್ಗೆ ಅರಿವು ಬೆಳೆಸಿಕೊಳ್ಳೋಣ. ಅಂದರೆ ಸಂವಿಧಾನದ ಅರಿವು ನಮ್ಮದಾಗಲಿ ಎಂದು ತಿಳಿಸಿದರು.

ʼಅಂಬೇಡ್ಕರ್‌ರವರು ಕಾರ್ಮಿಕ ಸಚಿವರಾಗಿ ಈ ದೇಶದ ಕಾರ್ಮಿಕರಿಗೆ ಹಕ್ಕುಗಳನ್ನು ನೀಡಿದರು. ಶ್ರೇಷ್ಟ ವಕೀಲರಾಗಿ, ಅರ್ಥಶಾಸ್ತ್ರಜ್ಞರಾಗಿ, ದಕ್ಷ ಆಡಳಿತಗಾರರಾಗಿ, ಸಂವಿಧಾನ ಶಿಲ್ಪಿಯಾಗಿ, ಮಾನವತಾವಾದಿಯಾಗಿ ಇಡೀ ದೇಶಕ್ಕೆ ಕೊಡುಗೆ ಕೊಟ್ಟವರನ್ನು ಈ ದೇಶ ಮರೆಯಬಾರದು ಎಂದು ಹೇಳಿದರು.

ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ದಿನದಂದೇ ಬಾಬ್ರಿ ಮಸೀದಿಯನ್ನು ಕೆಡವಲಾಯಿತು. ಸಂವಿಧಾನ ಅಂಬೇಡ್ಕರ್‌ರವರು ಬರೆದಿಲ್ಲ ಎಂದು ಸುಳ್ಳು ಹಬ್ಬಿಸಲಾಗಿದೆ. ಸಂವಿಧಾನ ರಚನೆಯಾದ ಬಳಿಕ ಈ ದೇಶವನ್ನು ಕಟ್ಟಲಾಗಿದೆ. ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ನಾವೆಲ್ಲರೂ ನೇರವಾಗಿ, ಪರೋಕ್ಷವಾಗಿ ಪಾಲ್ಗೊಳ್ಳುತ್ತಿರುವುದಕ್ಕೆ ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾರಣ, ಸಂವಿಧಾನದಿಂದಾಗಿ ದಲಿತ ರಾಷ್ಟ್ರಪತಿ, ಉಪಪ್ರಧಾನಿಯಾದರು. ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆಗೈಯಲು ಸಂವಿಧಾನ ಕಾರಣವಾಗಿದೆ ಎಂದು ಮಾತನಾಡಿದದರು.

ʼಇಂದು ಬೆಲೆ ಏರಿಕೆಯಾಗುತ್ತಿದೆ. ಸರ್ಕಾರಕ್ಕೆ ಪ್ರಜ್ಞೆ ಇಲ್ಲ. ಪ್ರಶ್ನೆ ಮಾಡಿದರೆ ಯುಎಪಿಎ ಹಾಕುತ್ತಿದ್ದಾರೆ. ಎನ್ಕೌಂಟರ್ ಮಾಡುತ್ತಿದ್ದಾರೆ. ಪಿಟಿಸಿಎಲ್ ಕಾಯ್ದೆ ಅಪ್ರಸ್ತುತ ಮಾಡಲಾಗುತ್ತಿದೆ. ಖಾಸಗೀಕರಣ ಹೆಚ್ಚಾಗುತ್ತಿದ್ದೆ. ಮೀಸಲಾತಿ ಅಪ್ರಸ್ತುತ ಮಾಡುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಕುರಿತು ಶಿಪಾರಸ್ಸು ಮಾಡಲು ಒಪ್ಪಿಕೊಂಡಿದೆ. ಆದರೆ ದೇಶದಲ್ಲಿ-ರಾಜ್ಯದಲ್ಲಿ ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ. ಹಾಗಾಗಿ ಎಷ್ಟು ಮೀಸಲಾತಿ ಹೆಚ್ಚಿಸಿದರೂ ಏನು ಪ್ರಯೋಜನ? ಖಾಲಿ ಹುದ್ದೆಗಳನ್ನು ತುಂಬಬೇಕು. ಮೀಸಲಾತಿ ಹೆಚ್ಚಿಸಿದರೂ ಖಾಸಗೀಕರಣ ಹೆಚ್ಚುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಾಗಿದೆʼ ಎಂದು ಕಿಡಿಕಾರಿದರು.

ಜನರ ಸಮಸ್ಯೆಗಳಿಗೆ ಜನಪರ ಹೋರಾಟಗಳೇ ಮದ್ದು. ಒಬ್ಬೊಬ್ಬರಾಗಿಯೇ ಮಾತನಾಡಿದರೆ ಸರ್ಕಾರಕ್ಕೆ ಕೇಳಿಸಲ್ಲ. ನಾವೆಲ್ಲ ದಲಿತ ಸಂಘಟನೆಗಳು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಒಂದಾಗಬೇಕು. ಅಂಬೇಡ್ಕರ್ ದಾರಿಯೇ ನಮ್ಮ ತಾತ್ವಿಕ ನೆಲಗಟ್ಟು. ಸಂವಿಧಾನವನ್ನು ಉಳಿಸಿಕೊಳ್ಳಬೇಕು. ನಾವು ಗಳಿಸಿದ್ದನ್ನು ಕಳೆದುಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ನಾವೆಲ್ಲ ಒಟ್ಟಿಗೆ ಸೇರಿ ಹೋರಾಡಿದರೆ ಮಾತ್ರ ಗಳಿಸಿದ್ದನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಒಗ್ಗಟ್ಟಿನ ಮಹತ್ವದ ಬಗ್ಗೆ ತಿಳಿಸಿದರು.

ಕೋಮುವಾದ ರಾರಾಜಿಸಿದ್ದಲ್ಲಿ ನಾವು ಬಾಯಿಗೆ ಬೀಗ ಹಾಕಿಕೊಂಡು ಇರಬೇಕಾಗುತ್ತದೆ. ಇಂದು ಮುಸ್ಲಿಮರು ಮಾರಾಟ ಮಾಡುವಂತಿಲ್ಲ ಎನ್ನುತ್ತಿದ್ದಾರೆ. ನಾಳೆ ದಲಿತರು ದೇವಾಲಯದ ಬಳಿ ತೆಂಗಿನಕಾಯಿ ಮಾರುವಂತಿಲ್ಲ, ಹೂ ಮಾರುವಂತಿಲ್ಲ ಎನ್ನುತ್ತಾರೆ. ಎಚ್ಚರ ವಹಿಸಬೇಕು ಎಂದು ಎಚ್ಚರಿಸಿದರು.

ಅಸ್ಪೃಶ್ಯತೆ ಪದ ಬಳಕೆ: ಹೆಚ್‌ಡಿಕೆ ವಿರುದ್ಧ ದೂರು
ದೊಡ್ಡಬಳ್ಳಾಪುರ:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಖಾಸಗಿ ವಾಹಿನಿಗೆ ಸಂದರ್ಶನ ಕೊಡುವ ಸಮಯದಲ್ಲಿ ʼಸಿಎಂ ಇಬ್ರಾಹಿಂ ಅಸ್ಪೃಶ್ಯರಲ್ಲʼ ಎಂಬ ಸಂವಿಧಾನ ವಿರೋಧಿ ಪದ ಬಳಕೆ ಮಾಡಿರುವುದರ ವಿರುದ್ಧ ದಲಿತ ಸಂಘಟನೆಯ ಮುಖಂಡರು ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ.

ನವೆಂಬರ್ 27 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಖಾಸಗಿ ವಾಹಿನಿಗೆ ಚುಟುಕು ಸಂದರ್ಶನ ನೀಡಿದ್ದು, ಆ ಸಮಯದಲ್ಲಿ ಅಸ್ಪೃಶ್ಯ ಎಂಬ ಪದ ಬಳಕೆ ಮಾಡಿದ್ದು, ಈ ವಿರುದ್ಧ ದಲಿತ ಮುಖಂಡರ ಕೆಂಗಣ್ಣಿಗೆ ಹೆಚ್‌ಡಿಕೆ ಕಾರಣರಾಗಿದ್ದಾರೆ.

ಸಂದರ್ಶನದ ಸಮಯದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯವರು, ʼಪತ್ರಕರ್ತ ಸಿಎಂ ಇಬ್ರಾಹಿಂ ಮುಖ್ಯಮಂತ್ರಿಯಾಗುತ್ತಾರಾ ? ಎಂಬ ಪತ್ರಕರ್ತನ  ಪ್ರಶ್ನೆಗೆ ಉತ್ತರ ನೀಡುವ ಸಮಯದಲ್ಲಿ ಕುಮಾರಸ್ವಾಮಿ ಸಿಎಂ ಇಬ್ರಾಹಿಂ ಅಸ್ಪೃಶ್ಯರಲ್ಲ ಎಂಬ ಪದ ಬಳಕೆ ಮಾಡಿದ್ದಾರೆ. ಇದು ಸಂವಿಧಾನದ ವಿರೋಧಿ ಹೇಳಿಕೆಯಾಗಿದ್ದು, ಈ ವಿರುದ್ದ ದಲಿತ ಮುಖಂಡರಾದ ರಾಜಸಣ್ಣಕ್ಕಿ ಮತ್ತು ಗೂಳ್ಯ ಹನುಮಣ್ಣ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಚ್‌ಡಿಕೆಯವರ ಹೇಳಿಕೆಯು ಕಾನೂನು ಬಾಹಿರವಾಗಿದ್ದು, ಇದಕ್ಕೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಲ್ಲದೇ ಈ ವಿರುದ್ದ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ  ದೂರು ನೀಡಿದ್ದಾರೆ.

ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಆಚರಣೆ : FIR ದಾಖಲು
ಚಾಮರಾಜನಗರ: ಇಲ್ಲಿಗೆ ಸಮೀಪದ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮೂರು ದಿನಗಳ ಹಿಂದೆ ಇಲ್ಲಿ ನಡೆದಿದ್ದ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಭಾನುವಾರ ಸಂಜೆ FIR ದಾಖಲಾಗಿದೆ. ಸೊಕಾಲ್ಡ್‌ ಮೇಲ್ಜಾತಿಗೆ ಸೇರಿದ ತೊಂಬೆ(ಟ್ಯಾಂಕರ್)‌ಯಲ್ಲಿ  ದಲಿತರು ನೀರು ಕುಡಿದು ಮಲಿನ ಮಾಡಿದ್ದರು ಎಂದು ಆರೋಪಿಸಿ ಜಾತಿ ನಿಂದನೆ ಮಾಡಲಾಗಿತ್ತಲ್ಲದೆ, ಆ ಟ್ಯಾಂಕರನ್ನು ಗೋಮೂತ್ರ ಸಿಂಪಡಿಸಿ ಶುದ್ದೀಕರಿಸುವ ವೈದಿಕ ಆಚರಣೆಯನ್ನೂ ನಡೆಸಲಾಗಿತ್ತು. ಈ ಕುರಿತಂತೆ ಹೆಗ್ಗೋಠಾರ ಗ್ರಾಮದ ಗಿರಿಯಪ್ಪ ಎಂಬುವವರು ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು FIR ನಲ್ಲಿ ಕೆಳಗಿನಂತೆ ದಾಖಲಾಗಿದೆ.

FIR ನಲ್ಲಿ ಏನಿದೆ?

ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಜನಾಂಗದ ಕುಟುಂಬದಲ್ಲಿ ನವೆಂಬರ್‌ 18ರಂದು ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಮದುವೆಗೆ ಆಗಮಿಸಿದ್ದ ಸಂಬಂಧಿಕರು ಸುಮಾರು ಒಂದು ಗಂಟೆಯ ಸಮಯದಲ್ಲಿ ಊಟ ಮುಗಿಸಿ, ಟೆಂಪೋ ಹತ್ತಲು ಹೊರಡುವಾಗ ಹುಡುಗಿ ಕಡೆಯ ಮಹಿಳೆ ಶಿವಮ್ಮ ಎಂಬುವವರು ಬಾಯಾರಿಕೆಯಾಗಿ ನೀರು ಕುಡಿಯಲು ಕೃಷ್ಣದೇವರಾಯ ದೇವಾಲಯದ ಬಳಿ ಇದ್ದ ಟ್ಯಾಂಕರ್‌ನಲ್ಲಿ ನೀರು ಕುಡಿದಾಗ ಮಹಿಳೆಗೆ ಜಾತಿ ನಿಂದನೆ ಆಗಿದೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆ ನೀರು ಕುಡಿಯುವುದು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದಾರೆಂದು FIR ನಲ್ಲಿ ಪ್ರಸ್ತಾಪಿಸಿದ್ದಾರೆ.

ಇದರ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಿ ಶೋಷಣೆಗೊಳಗಾದ ಮಹಿಳೆಗೆ ನ್ಯಾಯ ದೊರಕಿಸಿ ರಕ್ಷಣೆ ಕೊಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.