upendra – Peepal Media

ʼನಾನು ದಡ್ ನನ್ ಮಗʼ: ಪ್ರಜಾಕೀಯದ ಬಗ್ಗೆ ಬೇಸರಗೊಂಡು ಪೋಸ್ಟ್‌ ಹಾಕಿದ ಉಪೇಂದ್ರ
ಬೆಂಗಳೂರು: ನೆರೆರಾಜ್ಯದಲ್ಲಿ ನಟ ಪವನ್ ಕಲ್ಯಾಣ್‌ ಗೆದ್ದ ಬೆನ್ನಲ್ಲೆ ತಮ್ಮ ಪ್ರಜಾಕೀಯ ಪಕ್ಷದ ಬಗ್ಗೆ ಬೇಸರಪಟ್ಟುಕೊಂಡು ನಟ ಉಪೇಂದ್ರ ಇನಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಪವನ್‌ ಅವರನ್ನು ಗೆಲ್ಲಿಸಲು ತೆಲುಗಿನ ಜನ 14 ವರ್ಷ ತೆಗೆದುಕೊಂಡರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ’ ಎಂದಿರುವ ಉಪೇಂದ್ರ ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

‘ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ನಾನು ಗೆಲ್ಲಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವು ಹೇಳಿದ ಹಾಗೆ ಮಾಡುತ್ತೇನೆ. ಗೆದ್ದೆ ಗೆಲ್ಲುತ್ತೇನೆ. ನೀವು ಗೆಲ್ಲೋದು ಯಾವಾಗ ಅಂತ ನೀವು ಯೋಚನೆ ಮಾಡಿ. ಮುಂದಿನ ಚುನಾವಣೆಯಲ್ಲಿ ನನಗೆ ಕೆಲಸ ಕೊಡುತ್ತಿರಾ ಅಂದ್ರೆ ನಿಲ್ಲುತ್ತೇನೆ. ಆಗಲೂ ನೀವು ಎಮೋಷನಲ್‌ ಪ್ರಚಾರ ಮಾಡಬೇಕು. ಸಭೆ ಸಮಾರಂಭ ಎಲ್ಲವನ್ನು ಮಾಡಿ. ಕಷ್ಟಪಡಿ.. ಆಮೇಲೆ ಐದು ವರ್ಷ ನೀವೇನು ಬೇಕಾದರೂ ಮಾಡಿಕೊಳ್ಳಿ ನಾನು ಕೇಳುವುದಕ್ಕೆ ಬರಲ್ಲ ಅಂದರೆ… ಉಸ್‌..ಏನು ಬರೀಬೇಕೋ ಗೊತ್ತಾಗುತ್ತಿಲ್ಲ. ಈ ದಡ್ಡ ನನ್ನ ಮಗಂಗೆ ಯಾವನಾದ್ರೂ ಇನ್ನು ಮೇಲೆ ಬುದ್ದಿವಂತಾ ಅಂದರೆ ಅಷ್ಟೇ… ಸೆಂದಾಗಿರಕ್ಕಿಲ್ಲಾ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಪವನ್ ಕಲ್ಯಾಣ್‌ ಅವರ ಜನಸೇನಾ ಪಕ್ಷಕ್ಕೆ ಅಭೂತ ಪೂರ್ವ ಫಲಿತಾಂಶ ಬಂದಿದ್ದು, ಇದಾದ ಬೆನ್ನಲ್ಲೇ ಉಪೇಂದ್ರ ಅವರ ಪ್ರಜಾಕೀಯ ಪಕ್ಷವನ್ನು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಹೋಲಿಸಿ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಪಕ್ಷ ಬೆಳೆಸುವುದರಲ್ಲಿ ಪವನ್‌ ಕಲ್ಯಾಣ್ ಅವರಿಗಿದ್ದ ಆಸಕ್ತಿಯನ್ನು ಉಪೇಂದ್ರ ಅವರು ತೋರಿಸುತ್ತಿಲ್ಲ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

2018ರಲ್ಲಿ ‘ಉತ್ತಮ ಪ್ರಜಾಕೀಯ ಪಕ್ಷ’ವನ್ನು ಕಟ್ಟಿ ಬೆಳೆಸಿದ್ದ ಉಪೇಂದ್ರ ಅವರು, 2019 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಗೆಲುವು ದಕ್ಕಿಲ್ಲ. ಹೀಗಾಗಿ ಅವರಿಗೆ ತಮ್ಮ ಪ್ರಜಾಕೀಯ ರಾಜಕೀಯ ಸಿದ್ಧಾಂತದ ಬಗ್ಗೆಯೇ ಬೇಸರ ಬಂದಂತಿದೆ.  ಅವರ ಪೋಸ್ಟ್‌  ಓದಲು ಇಲ್ಲಿ ಕ್ಲಿಕ್ಕಿಸಿ.

ಮತ್ತೆ ಹೈಕೋರ್ಟ್ ಮೆಟ್ಟಿಲು ಹತ್ತಿದ ಉಪೇಂದ್ರ – ಉಪೇಂದ್ರ ಫ್ಯಾನುಗಳ ಮೇಲೂ ಬೀಳಲಿದೆಯಾ ಕೇಸು?
ಬೆಂಗಳೂರು : ಅವಹೇಳನಾಕಾರಿ ಪದಬಳಕೆ ಮಾಡಿ ದಲಿತ ಸಮುದಾಯದ ಜನಾಂಗಕ್ಕೆ ಭಾವನಾತ್ಮಕವಾಗಿ ನೋವು ಕೊಟ್ಟ ಆರೋಪದಡಿ ದಾಖಲಾಗಿರುವ ಎರಡನೇ ಎಫ್​ಐಆರ್ ರದ್ದು ಕೋರಿ ನಟ ಉಪೇಂದ್ರ ಇಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡುವ ಸಂದರ್ಭದಲ್ಲಿ ಗಾದೆ ಮಾತೊಂದು ಬಳಸಿದ್ದು, ಇದು ಪರಿಶಿಷ್ಟ ಜಾತಿಯ ಒಂದು ಸಮುದಾಯವನ್ನು ಕೆಟ್ಟವರು ಎಂಬುದಾಗಿ ಬಿಂಬಿಸುವಂತೆ ಬಳಸಲಾಗಿದೆ ಎನ್ನುವ ಆರೋಪದಲ್ಲಿ, ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್​ಗೆ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್​ ಚಂದನಗೌಡರ್​ ಅವರಿದ್ದ ನ್ಯಾಯಪೀಠ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಇದರ ಬೆನ್ನಲ್ಲೇ ಎರಡನೇ ಎಫ್‌ಐಆರ್ ರದ್ದು ಕೋರಿ ಮತ್ತೊಮ್ಮೆ ಉಪೇಂದ್ರ ಹೈಕೋರ್ಟ್ ಮೊರೆ ಹೋಗಿದ್ದಾರೆ. ರಣಧೀರ ಪಡೆಯ ಹರೀಶ್ ಎನ್ನುವವರು ಕೊಟ್ಟ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಮೊದಲ ಎಫ್‌ಐಆರ್ ರದ್ದುಗೊಳಿವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ್ದ ಉಪೇಂದ್ರ ಪರ ವಕೀಲರು, ಉಪೇಂದ್ರ ಅವರು ನೀಡಿದ್ದ ಹೇಳಿಕೆಯಲ್ಲಿ ಯಾವುದೇ ಜಾತಿ, ಪಂಗಡಗಳನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ಸಾಮಾನ್ಯ ಪದವನ್ನಾಗಿ ಬಳಕೆ ಮಾಡಿದ್ದಾರೆ. ಈ ಪದ ಬಳಕೆ ಕೆಲವರಿಗೆ ನೋವುಂಟಾಗಿದೆ ಎಂದು ತಿಳಿಯುತ್ತಿದ್ದಂತೆ ಕ್ಷಮೆ ಕೇಳಿದ್ದರು. ವಿಡಿಯೋ ಡಿಲಿಟ್ ಮಾಡಿದ್ದರು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅಲ್ಲದೆ, ಶಿವಮೊಗ್ಗ ಜಿಲ್ಲೆಯಲ್ಲಿ ಹೊಲಗೇರಿ ಎಂಬ ಸ್ಥಳವಿದೆ. ಹೊಲಗೇರಿ ಎಂಬ ರೀತಿಯಲ್ಲಿ ಉಪನಾಮ ಹೊಂದಿರುವವರೂ ಇದ್ದಾರೆ. ಹಾಗಾಗಿ ಹಳೆಯ ಗಾದೆಯನ್ನು ಉಲ್ಲೇಖಿಸಿರುವ ಅಂಶ ಯಾವುದೇ ಜಾತಿಯನ್ನು ನಿಂದನೆ ಮಾಡಿದಂತೆ ಎಂಬ ಅರ್ಥವಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡ (ಎಸ್‌ಸಿ,ಎಸ್‌ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಯಾವುದೇ ಅಪರಾಧ ಎಸಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು. ಅದೇ ರೀತಿ ಎರಡನೇ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿಯೂ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇರುವ ಹೊಲಗೇರಿ ಎನ್ನುವ ಊರಿನ ಸರ್ಕಾರಿ ದಾಖಲೆಗಳ ಅಡಕಗಳನ್ನು ಸೇರಿಸಿದ್ದು, ಎಫ್‌ಐಆರ್ ರದ್ದು ಮಾಡಲು ಮನವಿ ಮಾಡಿದ್ದಾರೆ.

ಈ ನಡುವೆ ಹೋರಾಟಗಾರರು ಉಪೇಂದ್ರನನ್ನು ಬೆಂಬಲಿಸಿ ವಿಡಿಯೋ ಮಾಡುತ್ತಿರುವ ಅಭಿಮಾನಿಗಳ ವಿರುದ್ಧವೂ ಪ್ರಕರಣ ದಾಖಲಿಸಲು ಮುಂದಾಗಿದ್ದರೆಂದು ತಿಳಿದು ಬಂದಿದೆ.

ಕೆಲವು ಅಭಿಮಾನಿಗಳು ಉಪೇಂದ್ರನ ಹೇಳಿಕೆಯನ್ನು ಬೆಂಬಲಿಸಿದ್ದರು. ಅದರಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಉಪೇಂದ್ರ ಅಭಿಮಾನಿಗಳ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರಿಂದ ಉಪ್ಪಿ ಫ್ಯಾನ್ಸ್​ಗೂ ತೊಂದರೆ ಎದುರಾಗುವ ಸೂಚನೆ ಸಿಕ್ಕಿದೆ.

ಉಪೇಂದ್ರ ಬಂಧನಕ್ಕೆ ಆಗ್ರಹಿಸಲು ಮುಂದಾದ ಹೋರಾಟಗಾರರ ಬಂಧನ
ಸಮಾಜದ ತಳಸಮುದಾಯಗಳ ಬಗ್ಗೆ ಚಿತ್ರನಟ ಉಪೇಂದ್ರ ಅವರು ತುಚ್ಛವಾಗಿ, ಆಕ್ಷೇಪಾರ್ಹವಾಗಿ ಮಾತನಾಡಿದ್ದನ್ನು ವಿರೋಧಿಸಿ ಉಪೇಂದ್ರ ಬಂಧನಕ್ಕೆ ಆಗ್ರಹಿಸಿ, ಗೃಹಮಂತ್ರಿಗಳ ಮನೆ ಮುಂದೆ ಧರಣಿಗೆ ತೆರಳುತ್ತಿದ್ದ ಹೋರಾಟಗಾರರಾದ ಬಿ.ಆರ್.ಭಾಸ್ಕರ್ ಪ್ರಸಾದ್ ಹಾಗೂ ಪ್ರೊಫೆಸರ್ ಹರಿರಾಮ್ ಅವರ ನೇತೃತ್ವದ ತಂಡವನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪೀಪಲ್ ಮೀಡಿಯಾ ಗೆ ಪ್ರತಿಕ್ರಿಯಿಸಿದ ಮುಖಂಡರಾದ ಭಾಸ್ಕರ್ ಪ್ರಸಾದ್ ‘ಉಪೇಂದ್ರ ಅವರ ಈ ಹೇಳಿಕೆ ಸ್ಪಷ್ಟವಾಗಿ ಖಂಡನಾರ್ಹ. ಸಮಾಜದಲ್ಲಿ ಕೆಟ್ಟದ್ದನ್ನು ಉದಾಹರಿಸಲು ಒಂದು ನಿರ್ದಿಷ್ಟ ಸಮುದಾಯ ಅದರಲ್ಲೂ ತಳಸಮುದಾಯಕ್ಕೆ ಹೋಲಿಕೆ ಮಾಡುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದ್ದಾರೆ.

‘ಉಪೇಂದ್ರ ಈ ಹೇಳಿಕೆ ನೀಡಿ ಇಷ್ಟು ದಿನವಾದರೂ ಅವರನ್ನು ಬಂಧಿಸದೇ ಇರುವುದನ್ನು ಪ್ರಶ್ನಿಸಿ, ಗೃಹಮಂತ್ರಿಗಳ ಮನೆ ಮುಂದೆ ಧರಣಿ ಮಾಡಲು ಮುಂದಾಗಿದ್ದೆವು. ಆದರೆ ಪೊಲೀಸರು ನಮ್ಮನ್ನು ವಿಧಾನಸೌಧದ ಮುಂದೆ ತಡೆದು ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದ್ದಾರೆ.

ಅಷ್ಟೆ ಅಲ್ಲದೆ ‘ಗಾದೆಯಲ್ಲಿ ಇದ್ದ ಮಾತ್ರಕ್ಕೆ ತಳಸಮುದಾಯದ ಬಗ್ಗೆ ಆಡಿರುವ ಅವಹೇಳನಕಾರಿ ಮಾತನ್ನು ಪರಿಗಣಿಸಲು ಆಗುವುದಿಲ್ಲ. ಸಂವಿಧಾನದಲ್ಲಿ ಇಂತಹದಕ್ಕೆ ಅವಕಾಶವೇ ಇಲ್ಲ. ಆದರೆ ಘನ ನ್ಯಾಯಾಲಯ ಕೂಡಾ ಇಂತಹದ್ದನ್ನು ಪರಿಗಣಿಸುವುದಿಲ್ಲ ಎಂದರೆ ನಿಜಕ್ಕೂ ನೋವಿನ ಸಂಗತಿ, ಈ ಬಗ್ಗೆ ನ್ಯಾಯಾಲಯ ಕೂಡಾ ಗಂಭೀರವಾಗಿ ಆಲೋಚಿಸಬೇಕು’ ಎಂದು ಭಾಸ್ಕರ್ ಪ್ರಸಾದ್ ಆಗ್ರಹಿಸಿದ್ದಾರೆ.

ನಟ ಉಪೇಂದ್ರ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು ; ಪೊಲೀಸರಿಗೆ ಸಿಗದ ‘ಬುದ್ಧಿವಂತ’
ಸಮಾಜದ ತಳ ವರ್ಗಗಳ ಅಪಹಾಸ್ಯ ಮಾಡುವ ಗಾದೆ ಮಾತು ಬಳಸಿದ ಆರೋಪದ ಮೇಲೆ ಚಿತ್ರನಟ ಉಪೇಂದ್ರ ವಿರುದ್ಧ ಹಲವು ಕಡೆಗಳಲ್ಲಿ ಪೊಲೀಸರಿಗೆ ದೂರು ಸಲ್ಲಿಕೆಯಾಗುತ್ತಿದೆ. ಈಗಾಗಲೇ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ಕೂಡಾ ದಾಖಲಾಗಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ನೇತೃತ್ವದ ಕರ್ನಾಟಕ ರಣಧೀರ ಪಡೆ ಕೂಡಾ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, FIR ಕೂಡಾ ದಾಖಲಾಗಿದೆ.

ಕರ್ನಾಟಕ ರಣಧೀರ ಪಡೆ ಸಂಘಟನೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್, “ದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು/ಜಾತಿಗಳನ್ನು ಎತ್ತಿ ಕಟ್ಟಿ ಸಮಾಜದಲ್ಲಿ ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂಧನೆ ಮಾಡಿರುವ ನಟ ಉಪೇಂದ್ರ ವಿರುದ್ಧ ಕಲಂ 505 (1)(B)(C) , 153 a, 295, 295 A, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಅಟ್ರಾಸಿಟಿ ದಾಖಲು ಮಾಡುವಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟ ಉಪೇಂದ್ರ ಒಬ್ಬ ಬ್ರಾಹ್ಮಣ ಸಮುದಾಯದವರಾಗಿದ್ದು, ತಳ ಸಮುದಾಯ ಎಂದೇ ಗುರುತಿಸಿಕೊಂಡು ಬಂದ ಹೊಲಯ ಸಮುದಾಯದವರು ವಾಸಿಸುವ ಪ್ರದೇಶವನ್ನು ‘ಹೊಲಗೇರಿ’ ಎಂಬ ಪದದಿಂದ ಅವಹೇಳನಕಾರಿಯಾಗಿ ಬಳಸಿದ್ದಾರೆ. ಅದರಲ್ಲೂ ಊರು ಅಂದ್ರೆ ಕೆಟ್ಟ ಪ್ರದೇಶ, ಕೆಟ್ಟ ಜನರೂ ಇರುತ್ತಾರೆ ಎನ್ನುವುದನ್ನು ಹೇಳಲು ಹೋಗಿ, ‘ಊರು ಅಂದ್ರೆ ಹೊಲಗೇರಿ ಇರುತ್ತೆ, ನಾವು ಅಂತವರ ವಿರುದ್ಧ ಇರಬೇಕು..’ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇದು ಸ್ಪಷ್ಟವಾಗಿ ದಲಿತ ನಿಂದನೆ ಅಡಿಯಲ್ಲಿ ಬರುವಂತದ್ದು ಎಂದೂ ಕರ್ನಾಟಕ ರಣಧೀರ ಪಡೆ ಆರೋಪಿಸಿದೆ.

ಇದು ನೇರವಾಗಿ ಸಮಾಜದ ಜನ ಇಂತವರ (ದಲಿತ ಸಮುದಾಯದವರ) ವಿರುದ್ಧವಾಗಿ ಇರಬೇಕು ಎಂದು ಕರೆ ನೀಡಲಾಗಿದೆ. ಸ್ಪಷ್ಟವಾಗಿ ಇದು ಸಮಾಜವನ್ನು ದಲಿತರ ವಿರುದ್ಧ ಎತ್ತಿ ಕಟ್ಟುವ ಕೆಲಸ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆ ಉಂಟುಮಾಡುವ ಉದ್ದೇಶದಿಂದ ಅಥವಾ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸುವುದಾಗಿದೆ‌.. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಟ ಉಪೇಂದ್ರ ವಿರುದ್ಧ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಬೈರಪ್ಪ ಹರೀಶ್ ಕುಮಾರ್ ಪೊಲೀಸರಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ನಟ ಉಪೇಂದ್ರ ಮೇಲೆ FIR ದಾಖಲು ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಸಮಾಜ ಕಲ್ಯಾಣ ಇಲಾಖೆಯ ಉದ್ಯೋಗಿಯೊಬ್ಬರು ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇಲ್ಲೂ ಕೂಡಾ ಉಪೇಂದ್ರ ವಿರುದ್ಧ FIR ದಾಖಲಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ನಟ ಉಪೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸೋಮವಾರದ ದಿನ ರಾಜ್ಯದ ಹಲವು ಕಡೆಗಳಲ್ಲಿ ದೂರು ದಾಖಲಾಗುವ ಸಾಧ್ಯತೆ ಕಂಡುಬಂದಿದೆ.

ಇದನ್ನೂ ಓದಿ : ಪೊಲೀಸರೊಡನೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ಉಪೇಂದ್ರ – ಫೋನ್‌ ಸ್ಚಿಚಾಫ್‌, ಮನೆಯಲ್ಲಿಲ್ಲ ಎನ್ನುತ್ತಿರುವ ಸೆಕ್ಯುರಿಟಿ

ಇತ್ತ ವಿಚಾರಣೆ ಹಿನ್ನೆಲೆಯಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಉಪೇಂದ್ರ ಅವರನ್ನು ಸಂಪರ್ಕಿಸಲು ಮುಂದಾದರೆ, ಉಪೇಂದ್ರ ಯಾರ ಕೈಗೂ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದ್ದು, ಮನೆಯಲ್ಲಿ ಸೆಕ್ಯೂರಿಟಿ ಕೊಟ್ಟ ಮಾಹಿತಿಯಂತೆ ಅವರು ಮನೆಯಲ್ಲಿ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್
ಈ ನಡುವೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರುದಾರ ದಲಿತ ಅಲ್ಲದ ಕಾರಣಕ್ಕೆ ಆ ಕೇಸಿನ ರದ್ದತಿಗೆ ಉಪೇಂದ್ರ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಕೂಡಾ ನೀಡಿದೆ. ಆದರೆ ಬೈರಪ್ಪ ಹರೀಶ್ ಕುಮಾರ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿಗೆ ಉಪೇಂದ್ರ ಅವರಿಗೆ ಹೈಕೋರ್ಟ್ ನಿಂದ ತಡೆ ಸಿಕ್ಕಿಲ್ಲ.

ಬೈರಪ್ಪ ಹರೀಶ್ ಕುಮಾರ್ ತಮ್ಮ ದೂರಿನಲ್ಲಿ ದಾಖಲಿಸಿದ ಎಲ್ಲಾ ಕಲಂ ಅಡಿಯಲ್ಲೂ ಕೇಸು ದಾಖಲಾಗಿದೆ. ಮೇಲಾಗಿ ನಟ ಉಪೇಂದ್ರ ಯಾವ ಮಾನದಂಡದ ಅಡಿಯಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಕೇಸು ರದ್ಧತಿಗೆ ಅವಕಾಶ ಕೋರಿದ್ದರೋ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾದ ಕೇಸ್ ಇದಕ್ಕೆ ವ್ಯತಿರಿಕ್ತವಾಗಿದೆ. ಯಾಕೆಂದರೆ ಸ್ವತಃ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯಿಂದಲೇ ಕೇಸ್ ದಾಖಲು ಮಾಡಲಾಗಿದೆ. ಹಾಗಾಗಿ ನಟ ಉಪೇಂದ್ರರಿಗೆ ಈ ಪ್ರಕರಣದಿಂದ ಬಿಡುಗಡೆ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಪೊಲೀಸರೊಡನೆ ಕಣ್ಣಾ ಮುಚ್ಚಾಲೆ ಆಡುತ್ತಿರುವ ಉಪೇಂದ್ರ – ಫೋನ್‌ ಸ್ಚಿಚಾಫ್‌, ಮನೆಯಲ್ಲಿಲ್ಲ ಎನ್ನುತ್ತಿರುವ ಸೆಕ್ಯುರಿಟಿ
ಬೆಂಗಳೂರು: ದಲಿತ ಸಮುದಾಯದ ಕುರಿತು ನಿಂದನಾತ್ಮಕ ಗಾದೆ ಬಳಸಿದ ಆರೋಪದಡಿ ನಟ, ನಿರ್ದೇಶಕ ಉಪೇಂದ್ರ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌ ಜಾರಿಗೊಳಿಸಿದ್ದಾರೆ. ಆದರೆ ಇತ್ತ ಉಪೇಂದ್ರ ಪೊಲೀಸರ ಕೈಗೆ ಸಿಗದೆ ʼಬುದ್ಧಿವಂತʼತನ ತೋರಿಸುತ್ತಿರುವ ಕುರಿತು ವರದಿಯಾಗಿದೆ.

ಮೊನ್ನೆ ರಾತ್ರಿ ತನ್ನ ಪ್ರಜಾಕೀಯ ಕುರಿತು ವಿಡಿಯೋ ಒಂದರಲ್ಲಿ ಮಾತನಾಡುತ್ತಾ ಉಪೇಂದ್ರ ಒಂದು ಸಾಮುದಾಯಿಕವಾಗಿ ನಿಂದನಾತ್ಮಕವಾಗಿರುವ ಗಾದೆ ಮಾತೊಂದನ್ನು ಬಳಸಿದ್ದರು. ನಂತರ ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಕ್ಷಮೆ ಕೇಳುವ ಮೂಲಕ ಪ್ರಕರಣವನ್ನು ಅಂತ್ಯಗೊಳಿಸಲು ಪ್ರಯತ್ನಸಿದ್ದರು.

ಆದರೆ ಸಾಮಾಜಿಕ ಹೋರಾಟಗಾರರು ಇದನ್ನು ಹಾಗೇ ಬಿಟ್ಟರೆ ಮತ್ತೆ ಮತ್ತೆ ಇಂತಹ ಸಮುದಾಯಗಳನ್ನು ಅವಮಾನಿಸುವ ಗಾದೆಗಳ ಬಳಕೆ ಹೆಚ್ಚಾಗುತ್ತದೆಯೆನ್ನುವ ಕಾರಣಕ್ಕೆ ಹೋರಾಟವನ್ನು ಕೈಗೆತ್ತಿಕೊಂಡು ಉಪೇಂದ್ರ ವಿರುದ್ಧ ಕೇಸ್‌ ದಾಖಲಿಸಿದ್ದರು.

ಆದರೆ ಹೋರಾಟಗಾರರು ಕೇಸು ದಾಖಲಿಸುವ ಮೊದಲೇ ಜಾತಿಯಿಂದ ಬ್ರಾಹ್ಮಣನಾಗಿರುವ ಸಮಾಜ ಕಲ್ಯಾಣ ಉದ್ಯೋಗಿಯೊಬ್ಬರು ಹೋಗಿ ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ಕುರಿತು FIR ಕೂಡಾ ದಾಖಲಾಗಿತ್ತು.

ಆದರೆ ಈ ದೂರು ಸಲ್ಲಿಸಿದ್ದು ಪ್ರಕರಣವನ್ನು ಹಳ್ಳ ಹಿಡಿಸುವ ಸಲುವಾಗಿ ಎನ್ನುವುದು ಹೋರಾಟಗಾರರ ವಾದವಾಗಿದೆ. ಇಲ್ಲಿ ದೂರು ಸಲ್ಲಿಸಿರುವುದು ದಲಿತ ವ್ಯಕ್ತಿಯಲ್ಲದ ಕಾರಣ ದೂರು ನ್ಯಾಯಾಲಯದಲ್ಲಿ ನಿಲ್ಲುವುದು ಕಷ್ಟ ಎನ್ನುವುದು ಅವರ ಅಭಿಪ್ರಾಯ.

ಪೊಲೀಸರು ನಿಮ್ಮನ್ನು ಸಾಕ್ಷಿಯಾಗಿಸುವುದಾಗಿ ದಲಿತ ಸಂಘಟನೆಗಳ ನಾಯಕರನ್ನು ಮನವೊಲಿಸಲು ನೋಡಿದರಾದರೂ, ಹೋರಾಟಗಾರರು ಪಟ್ಟು ಬಿಡದೆ FIR ದಾಖಲಿಸಿದ್ದಾರೆ ಎನ್ನಲಾಗಿದೆ.

ಇತ್ತ ಈಗ ಪ್ರಕರಣ ಕುರಿತು ವಿವರಣೆ ನೀಡಬೇಕಿರುವ ಉಪೇಂದ್ರ ತಲೆ ತಪ್ಪಿಸಿಕೊಂಡಿರುವುದಾಗಿ ವರದಿಗಳು ಹೇಳುತ್ತಿವೆ.

ಉಪೇಂದ್ರ ಅವರು ತನ್ನ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಅವರ ಮನೆ ಬಾಗಿಲಿಗೆ ಹೋದ ಪೊಲೀಸರನ್ನು ಸೆಕ್ಯುರಿಟಿಗಳು ಅವರು ಮನೆಯಲ್ಲಿ ಇಲ್ಲವೆಂದು ತಿಳಿಸಿ ಕಳಿದ್ದಾರೆಂದು ಹೇಳಲಾಗಿದೆ.

ನಿನ್ನೆ ಈ ಕುರಿತು ಟ್ವೀಟ್‌ (X) ಮಾಡಿದ್ದ ಉಪೇಂದ್ರ ಅಲ್ಲಿಯೂ “ನಾನು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಈಗ ನನ್ನ ವಿರುದ್ಧ ದೂರು ಕೊಡುತ್ತಿರುವವರು ಹುಟ್ಟಿಯೇ ಇರಲಿಲ್ಲ” ಎನ್ನುವ ಉದ್ಧಟತನದ ಮಾತುಗಳನ್ನೇ ಆಡಿದ್ದರು. ಆದರೆ ಇಂದು ತನ್ನ ಟ್ವಿಟರ್‌ (X) ಖಾತೆಯನ್ನು ಲಾಕ್‌ ಮಾಡಿಟ್ಟುಕೊಂಡಿದ್ದು, ಅವರ ಟ್ವಟರ್‌ ಐಡಿ ಓಪನ್‌ ಮಾಡಿದರೆ “These Tweets are protected” ಎಂದು ತೋರಿಸುತ್ತಿದ್ದು ಸದ್ಯ ಅವರ ಟ್ವಿಟರ್‌ ಖಾತೆಯನ್ನು ಅವರ ಫಾಲೋವರ್‌ಗಳು ಮಾತ್ರವೇ ನೋಡಬಹುದಾಗಿದೆ.

ಇನ್ನು ಇಂತಹ ಕೆಟ್ಟ ಹೇಳಿಕೆಗಳನ್ನು ನೀಡಿ ಕ್ಷಮೆ ಕೇಳುವುದು ಸುಲಭ. ಆದರೆ ಇಂತಹ ಹೇಳಿಕೆಗಳಿಂದ ನೋವು ಅನುಭವಿಸುವ ಸಮುದಾಯಗಳಿಗೆ ಅದರಿಂದ ಹೊರಬರುವುದು ಅಷ್ಟೇ ಸುಲಭವೇ ಎಂದು ಉಪೇಂದ್ರ ಮತ್ತು ಅಂತಹ ಮನಸ್ಥಿತಿ ಹೊಂದಿರುವವರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಿದೆ.

ಇದನ್ನೂ ಓದಿ:

ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು

ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು,

ತಳಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ : ಉಪೇಂದ್ರ ಬಗ್ಗೆ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದ್ದೇನು?
ಕನ್ನಡ ಚಿತ್ರನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಒಂದು ಈಗ ಹೆಚ್ಚು ಸದ್ದು ಮಾಡುತ್ತಿದೆ. ಇದೇ ಕಾರಣಕ್ಕೆ ಉಪೇಂದ್ರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ದಾಖಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಉಪೇಂದ್ರ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ತಾನು ಮಾಡಿದ ವಿಡಿಯೋ ಒಂದರಲ್ಲಿ ಕೆಳವರ್ಗವನ್ನು ನಿಂದಿಸುವ ಹಿನ್ನೆಲೆಯಲ್ಲಿ ಬಳಸಿರುವ ವಾಕ್ಯದ ಬಗ್ಗೆ ಜಾಲತಾಣ ಸೇರಿದಂತೆ ಎಲ್ಲೆಡೆ ಉಪೇಂದ್ರ ವಿರುದ್ಧ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪನವರು ‘ಉಪೇಂದ್ರ ಅವರಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು, ಸಾಮಾಜಿಕ ಅಸಮಾನತೆಗಳ ಪ್ರಜ್ಞೆ ಅಗತ್ಯವಾಗಿ ಇದೆ ಅಂದುಕೊಂಡಿದ್ದೆ. ಆದರೆ ಸಮಾಜದ ಕೆಳವರ್ಗಗಳ ಬಗೆಗಿರುವ ಅವರ ಅಸಹನೆ ಬಗ್ಗೆ ಬಲವಾಗಿ ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಉಪೇಂದ್ರ ಅವರು ಒಬ್ಬ ಖ್ಯಾತ ನಟ, ನಿರ್ಮಾಪಕ ಮತ್ತು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಲಕ ಸಾರ್ವಜನಿಕ ಜೀವನದಲ್ಲಿ ಇರಲು ಬಯಸುತ್ತಿರುವ ವ್ಯಕ್ತಿ. ಇಂತಹ ವ್ಯಕ್ತಿಗೆ ಭಾರತದ ಇತಿಹಾಸ, ಚರಿತ್ರೆ ಸಾಂಸ್ಕೃತಿಕ ಬದುಕಿನ ಅರಿವು, ಸಾಮಾಜಿಕ ಅಸಮಾನತೆಗಳ ಪ್ರಜ್ಞೆ ಅಗತ್ಯವಾಗಿ ಇದೆ ಅಂದುಕೊಂಡಿದ್ದೆ. ಆದರೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಅವರು ಜಾತಿ ಹೆಸರನ್ನು ಕರೆಯುತ್ತಿರುವುದನ್ನು ನೋಡಿದರೆ ಇದು ಸಮುದಾಯ ಮಾತ್ರವಲ್ಲದೇ ಸಂವಿಧಾನಕ್ಕೂ ಮಾಡಿದ ಅಪಚಾರ ಆಗಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಸಚಿವರಾದ ಹೆಚ್‌.ಸಿ.ಮಹದೇವಪ್ಪ ಉಪೇಂದ್ರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು

“ಇನ್ನು ಸೂಕ್ಷ್ಮವಾಗಿ ಗಮನಿಸುವಾಗ ಉಪೇಂದ್ರ ಅವರು ತಮ್ಮ ಮಾತುಗಳಿಗೆ ಪೂರಕವಾಗಿ ಹೊಲಗೇರಿ ಎಂಬ ಪದವನ್ನು ಬಳಸಿರುವುದೇ ಅಪ್ರಸ್ತುತ. ಜೊತೆಗೆ ಅವರು ಕ್ಷಮೆಯಾಚನೆಯಲ್ಲೂ ಸಹ ನಾನೂ ಕೂಡಾ ಬಡತನದಿಂದ ಬಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಬಡತನವೇ ಬೇರೆ ಜಾತಿ ಆಧಾರಿತವಾದ ಸಾಮಾಜಿಕ ಅಸಮಾನತೆಯೇ ಬೇರೆ ಎಂಬ ಸಂಗತಿಯು ಉಪೇಂದ್ರ ಅವರಿಗೆ ಸಹಜವಾಗಿ ತಿಳಿದಿಲ್ಲ ಎಂದು ಕಾಣುತ್ತದೆ. ಹೀಗಾಗಿ ಸಾರ್ವಜನಿಕ ಜೀವನದಲ್ಲಿ ಇರುವ ಅವರು ಈ ದೇಶದ ಅಸಮಾನತೆ ಮತ್ತು ನೋವಿನ ಚರಿತ್ರೆಯನ್ನೇ ತಿಳಿಯದಿದ್ದ ಮೇಲೆ ಇವರ ಸಮಾಜ ಬದಲಾಯಿಸುವಂತಹ ಮಾತುಗಳಿಗೆ ಯಾವ ಅರ್ಥವಿದೆ” ಎನ್ನುವ ಮೂಲಕ ಉಪೇಂದ್ರ ಅವರಿಗೆ ಸಾಮಾಜಿಕ ಅರಿವಿನ ಅಗತ್ಯವಿದೆ ಎಂದು ಹೇಳಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಉಪೇಂದ್ರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸಚಿವರು “ಈಗಾಗಲೇ ಬಹುತೇಕ ದಲಿತ ಸಂಘಟನೆಗಳು ಈ ಕುರಿತಂತೆ ಮನವಿ ಸಲ್ಲಿಸುತ್ತಿರುವ ಕಾರಣ ಮುಂದೆ ಶೋಷಿತ ಸಮುದಾಯಗಳನ್ನು Taken for granted ಆಗಿ ಉಲ್ಲೇಖಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಮತ್ತು ಸಮುದಾಯಗಳಿಗೆ ಸಂವಿಧಾನದಲ್ಲೇ ಇರುವ ಸಮಾನ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳಲಾಗುವುದು” ಎಂದೂ ತಿಳಿಸಿದ್ದಾರೆ.

ಪ್ರಸ್ತುತ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಕಡೆಗಳಲ್ಲಿ ಚಿತ್ರನಟ ಉಪೇಂದ್ರ ವಿರುದ್ಧ ದೂರು ದಾಖಲಾಗಿದ್ದು, ಈ ಪ್ರಕರಣ ಯಾವ ಹಂತಕ್ಕೆ ಹೋಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಕಬ್ಜ’ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದೆ ಬಾಲಿವುಡ್​
ಬೆಂಗಳೂರು: ಕನ್ನಡ ಚಿತ್ರಗಳು ಈ ವರ್ಷ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ. ‘ಕೆಜಿಎಫ್​ 2’ ಮತ್ತು ‘ಕಾಂತಾರ’ ಚಿತ್ರಗಳು ಬಾಲಿವುಡ್​ ಚಿತ್ರಗಳ ಗಳಿಕೆಯನ್ನೂ ಮೀರಿಸಿ ಹೊಸ ದಾಖಲೆಯನ್ನು ನಿರ್ಮಿಸಿವೆ. ಈ ಎರಡು ಚಿತ್ರಗಳ ನಂತರ ಬಾಲಿವುಡ್​ನ ಕಣ್ಣು ಇದೀಗ ಉಪೇಂದ್ರ ಮತ್ತು ಸುದೀಪ್​ ಅಭಿನಯದ ಅದ್ಧೂರಿ ಚಿತ್ರ ‘ಕಬ್ಜ’ ಮೇಲೆ ಬಿದ್ದಿದೆ.

ಸಚಿವ ಎಂ.ಟಿ.ಬಿ. ನಾಗರಾಜ್​ ಆಶೀರ್ವಾದದೊಂದಿಗೆ ಶ್ರೀ ಸಿದ್ಧೇಶ್ವರ ಎಂಟರ್​ಪ್ರೈಸಸ್​ ನಿರ್ಮಿಸಿರುವ ‘ಕಬ್ಜ’ ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಟೀಸರ್​ ಸಹ ಬಿಡುಗಡೆಯಾಗಿದೆ. ಟೀಸರ್​ಗೆ ಎಲ್ಲಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು. ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲ, ಬೇರೆ ಚಿತ್ರರಂಗಗಳು ಸಹ ಈ ಚಿತ್ರವನ್ನು ಎದುರು ನೋಡುತ್ತಿದ್ದು, ಇತ್ತೀಚೆಗೆ ಇದೇ ವಿಚಾರವಾಗಿ ಬಾಲಿವುಡ್​ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್​ ಆದರ್ಶ್​ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಬಿಡುಗಡೆ ದಿನಾಂಕಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಚಿತ್ರತಂಡದವರು ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಆರ್​. ಚಂದ್ರು ನಿರ್ದೇಶನದ ‘ಕಬ್ಜ’ ಚಿತ್ರವು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು ಏಳು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಉಪೇಂದ್ರ ಜತೆಗೆ ಸುದೀಪ್​ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್​, ನವಾಬ್​ ಷಾ, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. ‘ಕೆಜಿಎಫ್​’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.