uttara kannada – Peepal Media

ವಿದೇಶಗಳಲ್ಲಿ ನಿಷೇಧಕ್ಕೊಳಗಾದ ಕಳೆನಾಶಕ ನಮ್ಮಲ್ಲಿ ಯಾಕೆ? DRFO ಸಾವಿನ ನಂತರವಾದರೂ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
ಕಳೆದ ವಾರ ದಾಂಡೇಲಿ ತಾಲ್ಲೂಕಿನ ಕುಳಗಿ ವಲಯ ಅರಣ್ಯ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ಅವರ ಅನಿರೀಕ್ಷಿತ ಮತ್ತು ಆಘಾತಕಾರಿ ಸಾವು ಎಲ್ಲರನ್ನೂ ಕಂಗೆಡಿಸಿತ್ತು. ಅರಣ್ಯ ಇಲಾಖೆ ಮಾತ್ರವಲ್ಲದೆ, ಸ್ಥಳೀಯ ಸಾರ್ವಜನಿಕ ಮಟ್ಟದಲ್ಲೂ ಒಳ್ಳೆಯ ಹೆಸರು ಉಳಿಸಿಕೊಂಡಿದ್ದ ಯೋಗೇಶ್ ನಾಯ್ಕ ಸ್ನೇಹಪರ ವ್ಯಕ್ತಿ ಎಂದೇ ಎಲ್ಲರ ಕಡೆಯಲ್ಲೂ ಹೆಸರು ಪಡೆದವರಾಗಿದ್ದರು. ಸಧ್ಯ ಇವರ ಅಗಲಿಕೆ ಯೋಗೇಶ್ ಅವರ ಕುಟುಂಬ ಮಾತ್ರವಲ್ಲದೆ ಅರಣ್ಯ ಇಲಾಖೆ, ಸುತ್ತಮುತ್ತಲಿನ ಜನರಲ್ಲೂ ಗಾಢ ಮೌನ ಎದುರಾಗಿದೆ.

ಎರಡು ವಾರಗಳ ಹಿಂದೆ ಕುಳಗಿ ಶಾಖೆಯಲ್ಲಿ ಅತ್ಯಂತ ವಿಷಕಾರಿ ಕಳೆನಾಶಕ ಸಿಂಪಡನೆ ಮಾಡಲು ಹೋಗಿ ಆನಂತರ ಸರಿಯಾಗಿ ಕೈ ತೊಳೆಯದೇ, ನೀರು ಆಹಾರ ಸೇವಿಸಿದ ಪರಿಣಾಮ ಯೋಗೇಶ್ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ದಾಂಡೇಲಿಯ ಖಾಸಗಿ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಆರೋಗ್ಯ ಮತ್ತೆ ಹದಗೆಡಲು ಶುರುವಾಗಿದೆ.

ಆ ನಂತರ ತಾನೇ ತನ್ನ ಕಾರನ್ನು ಚಲಾಯಿ‌ಸಿಕೊಂಡು ತನ್ನ ಪತ್ನಿ ಮತ್ತು ಮಗುವಿನ ಜೊತೆಯಲ್ಲಿ ಧಾರವಾಡದ ಎಸ್.ಜಿ.ಎಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಎರಡ್ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರೂ ಅನಾರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ನಂತರ ಹುಬ್ಬಳ್ಳಿಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಯೂ ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ದಿನ ಕಳೆದರೂ ಅನಾರೋಗ್ಯ ಉಲ್ಬಣಿಸಿದೆಯೇ ಹೊರತು, ಯಾವುದೇ ಚೇತರಿಕೆ ಕಂಡುಬಂದಿಲ್ಲ.

ಈ ನಡುವೆ ಯೋಗೇಶ್ ನಾಯ್ಕರ ಸಹೋದ್ಯೋಗಿಗಳು ಮತ್ತು ಅರಣ್ಯಾಧಿಕಾರಿಗಳ ತಂಡ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಯೋಗೇಶ್ ಅವರ ಚಿಕಿತ್ಸೆಗೆ ಎಷ್ಟು ಖರ್ಚಾದರೂ ಸರಿಯೇ… ನಾವು ಭರಿಸುತ್ತೇವೆ. ಏನಾದರೂ ಮಾಡಿ ಅವರನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಯೋಗೇಶ್ ಬದುಕಿಸಲು ಸಾಧ್ಯ ಎನ್ನುವುದಾದರೆ ಹೆಲಿಕಾಪ್ಟರ್ ಮೂಲಕವಾದರೂ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು, ಆಸ್ಪತ್ರೆ ಮೇಲೆ ಹೆಲಿಪ್ಯಾಡ್ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಆದರೆ ಯೋಗೇಶ್ ನಾಯ್ಕ ಬದುಕುವ ಸಾಧ್ಯತೆ ತೀರಾ ಎಂದರೆ ತೀರಾ ಕಡಿಮೆ ಇದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಯಾಕೆಂದರೆ ಯೋಗೇಶ್ ದೇಹದ ಒಳಗೆ ಹೋದ ಕಳೆನಾಶಕದ ವಿಷ ಅತ್ಯಂತ ಅಪಾಯಕಾರಿಯಾದದ್ದು. ಈಗಾಗಲೇ ಅದು ದೇಹದ ನರನಾಡಿಗೇ ವಿಸ್ತರಿಸಿಯಾಗಿದೆ. ಅದೂ ಅಲ್ಲದೆ ಅವರ ದೇಹದ ಒಳಕ್ಕೆ ಹೋದ Paraquat Dichloride ಗೆ ಇಲ್ಲಿಯವರೆಗೆ Antidote ಔಷಧಿ ಈ ವರೆಗೂ ಬಂದಿಲ್ಲ. ಆ ಕಾರಣಕ್ಕಾಗಿ ಅವರನ್ನು ಉಳಿಸುವ ಸಾಧ್ಯತೆ ಬಗ್ಗೆ ಯಾವುದೇ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ, ಸರ್ಕಾರ, ಅಪಾರ ಪ್ರಮಾಣದ ಹಿತೈಷಿಗಳು ಎಷ್ಟೇ ಜನರು ಎಲ್ಲಾ ರೀತಿಯ ಸಹಕಾರ ನೀಡಿದರೂ ಬದುಕಿಸಲು ಸಾಧ್ಯವೇ ಇಲ್ಲ ಎನ್ನುವುದಾದರೆ ಎಂತಹ ಸಹಾಯವೂ ವ್ಯರ್ಥ ಎನ್ನಿಸಿದೆ. ಪ್ರೀತಿಸಿ ಮದುವೆಯಾದ ಪತ್ನಿ, ಎರಡು ವರ್ಷದ ಮಗು ಎಲ್ಲರನ್ನೂ ಯೋಗೇಶ್ ನಾಯ್ಕ ತೊರೆದಿದ್ದಾರೆ. ಒಂದು ಸಣ್ಣ ಅಜಾಗರೂಕತೆ ಒಂದು ಅಮೂಲ್ಯ ಜೀವವನ್ನು ಬಲಿ ಪಡೆದುಕೊಂಡಿದೆ ಎಂಬುದಷ್ಟೇ ಈಗ ಉಳಿದಿರುವ ಸತ್ಯ.

“Paraquat Dichloride ಕಳೆನಾಶಕ ಅದೆಷ್ಟು ಘೋರ ವಿಷ ಗೊತ್ತ?”
ದಾಂಡೇಲಿ ತಾಲ್ಲೂಕಿನ ಕುಳಗಿ ವಲಯ ಅರಣ್ಯ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ಅವರನ್ನು ಬಲಿ ಪಡೆದ Paraquat Dichloride ಕಳೆನಾಶಕದ ಬಗ್ಗೆ ಈಗ ಹೆಚ್ಚು ಚರ್ಚೆ ಶುರುವಾಗಿದೆ. ಯಾಕೆಂದರೆ ಯೋಗೇಶ್ ನಾಯ್ಕ ಅವರ ದೇಹದ ಒಳಗೆ ಸೇರಿದ್ದ ವಿಷಕ್ಕೆ Antidote ಔಷಧಿ ಯಾವುದೂ ಇಲ್ಲವೇ ಇಲ್ಲ ಎಂದರೆ ಆ ಕಳೆನಾಶಕ ಅದೆಷ್ಟು ದುಷ್ಪರಿಣಾಮಕಾರಿ ವಿಷ ಎಂಬುದು ಯೋಚಿಸುವಂತದ್ದು. ಮಾಹಿತಿಯ ಪ್ರಕಾರ ಇದುವರೆಗೂ ಈ ವಿಷಕ್ಕೆ  ಔಷಧಿಯನ್ನೆ ಕಂಡು ಹಿಡಿಯಲಾಗಿಲ್ಲ!!!  Paraquat Dichloride ಎಂಬ ರಸಾಯನಿಕ ಸಂಯೋಜನೆಯಿಂದ ಕೂಡಿದ ಈ ಕಳೆನಾಶಕವನ್ನು ಈಗಾಗಲೇ ಅನೇಕ ದೇಶಗಳು ನಿಷೇಧಿಸಿವೆ ಎಂಬುದು ಇನ್ನೊಂದು ಆಘಾತಕಾರಿ ವಿಚಾರ.

Gramoxone, Firestorm, Helmquat,  Parazone Uniquat  All clear Milquat Sabaa Kapiq  ಇತ್ಯಾದಿ ಬ್ರಾಂಡ್ ಹೆಸರಿನಿಂದ ಹತ್ತಾರು ಕಂಪನಿಗಳು ಈ ಉಗ್ರವಿಷವನ್ನು ನಮ್ಮ ದೇಶದಲ್ಲಿ ಉತ್ಪಾದಿಸುತ್ತಿವೆ. ಇದೊಂದು ಸಂಪರ್ಕ ಕಳೆನಾಶಕ (Contact Herbicide) ಅಂದರೆ, ಕಳೆನಾಶಕ ಸಿಂಪಡಿಸಿದ ಸಸ್ಯದ ಭಾಗಗಳಿಗೆ ಮಾತ್ರ ಪರಿಣಾಮ ಬೀರುತ್ತದೆ, ಬೇರೆ ಭಾಗಗಳಿಗೆ ಪರಿಣಾಮ ಬೀರುವುದಿಲ್ಲ. ಆದರೆ ಮನುಷ್ಯನ ದೇಹ ಹೊಕ್ಕರೆ ಎಲ್ಲಾ ಅಂಗಗಳಿಗೂ ವ್ಯಾಪಿಸಿ ಸಾವು ತರುತ್ತದೆ.

ಬಹಳ ಆತಂಕದ ಸಂಗತಿ ಎಂದರೆ ಈ ಘನಘೋರ ವಿಷಕ್ಕೆ ಇದುವರೆಗೂ  ಪ್ರತ್ಯೌಷಧ(Antidote) ಲಭ್ಯವಿಲ್ಲ! ಕೇವಲ ಒಂದೆರಡು ಮಿಲಿ ಕಳೆನಾಶಕ ದೇಹ ಸೇರಿದರೂ ಸಾವು ಖಚಿತ. ಅಂದರೆ ಅದೆಷ್ಟು ಕಾರ್ಕೋಟಕ ವಿಷ ಈ ಕಳೆನಾಶಕದಲ್ಲಿ ಇರಬೇಕು. ಇಂತಹ ಕಳೆನಾಶಕ ವಿಷವನ್ನು ಶುಂಠಿ ಬೆಳೆಯಿಂದ ಹಿಡಿದು ಅನೇಕ ಬೆಳೆಗಳಲ್ಲಿ ಕಳೆಗಳನ್ನು ಕೊಲ್ಲಲು ವ್ಯಾಪಕವಾಗಿ ಇದನ್ನು ಬಳಸುತ್ತಾರೆ, ಒಂದೆರಡು ಹನಿ ವಿಷ ದೇಹ ಸೇರಿದರೂ ಬಹು ಅಂಗಾಂಗಗಳು ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು, ಪಾರ್ಕಿನ್ಸನ್ ನಂತಹ ಅಪಾಯಕಾರಿ ಕಾಯಿಲೆಗಳಿಗೂ ಆಹ್ವಾನ ನೀಡಬಹುದು.

ರೈತರು ಇದನ್ನು ಉಪಯೋಗಿಸುವಾಗ  ಸುರಕ್ಷಿತ ವಿಧಾನ ಅನುಸರಿಸಿ ಬಳಸಬೇಕು. ಸಿಂಪಡಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಹಾರ ನೀರನ್ನು ಸೇವಿಸಬಾರದು. ದೇಹಗಳಲ್ಲಿ ಗಾಯಗಳಿದ್ದರೆ ಕಳೆನಾಶಕದ ಸಂಪರ್ಕಕ್ಕೆ ಬರಲೇಬಾರದು. ಔಷಧಿಯೇ ಇಲ್ಲದ ಈ ವಿಷ ನಮ್ಮ ಜೀವಜಾಲದಲ್ಲಿ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ.  (Paraquat Dichloride ಬಗೆಗಿನ ವಿವರ ನಾಗರಾಜ್ ಬೆಳ್ಳೂರು ಅವರ ಬರಹದ ಮೂಲ)

ಯೋಗೇಶ್ ನಾಯ್ಕ ಸಾವಿನ ಹಿಂದೆ ಉದ್ಭವಿಸುವ ಪ್ರಶ್ನೆಗಳು :

ಈ ಪ್ರಕರಣದ ಅಡಿಯಲ್ಲಿ ಗಂಭೀರವಾಗಿ ಒಂದಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅರಣ್ಯ ಇಲಾಖೆ ಉಪಯೋಗಿಸುವ Herbicides ಗಳು ಇಷ್ಟು ವಿಷಕಾರಿ ಎಂಬುದರ ಅರಿವು ಇಲಾಖಾ ಅಧಿಕಾರಿಗಳಿಗೆ ಇರಲಿಲ್ಲವೆ? Herbicides ಗಳಾಗಲಿ, ಔಷಧಿಗಳಾಗಲಿ ಅಥವಾ ಇನ್ನಾವುದೇ ಪದಾರ್ಥಗಳನ್ನು ಬಳಸುವುದಾದರೆ, ಅವುಗಳ ಹಿನ್ನೆಲೆ ಅರಿತು ಬಳಸುವುದು ಸಾಮಾನ್ಯ. ವಿಶೇಷವಾಗಿ ಅವುಗಳ ದುಷ್ಪರಿಣಾಮಗಳು ಅಲ್ಲಿ ಗಣನೆಗೆ ಬರಬೇಕು. ಆದರೆ ಈ Herbicides ಗಳ ಉಪಯೋಗದ ಹಿಂದೆ ಅರಣ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಒಬ್ಬ ಅಮಾಯಕ ಅಧಿಕಾರಿಯ ಸಾವಿಗೆ ಕಾರಣವಾಗಿದೆ. ಹಾಗಾಗಿ ಯೋಗೇಶ್ ನಾಯ್ಕ ಅವರ ಸಾವಿನ ಸಂಪೂರ್ಣ ಹೊಣೆಯನ್ನು ಅರಣ್ಯ ಇಲಾಖೆಯೇ ಹೊರಬೇಕು. ಅಷ್ಟೆ ಅಲ್ಲದೆ ಇಡೀ ವಲಯ ವ್ಯಾಪ್ತಿಯಲ್ಲೇ ಈ Herbicides ಬಳಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಟೆಂಡರ್ ಲಾಭಿ ಕೂಡಾ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಕರೆದ ಟೆಂಡರ್ ಗಳಲ್ಲಿ ನಾ ಮುಂದು ತಾ ಮುಂದು ಎಂದು ಬರುವ ಇಂತಹ ವಿಷ ಹಂಚುವ ಕಂಪನಿಗಳು ಉನ್ನತ ಅಧಿಕಾರಿಗಳ ಕಡೆಯಿಂದ ಲಾಭಿ ನಡೆಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಯೋಗೇಶ್ ನಾಯ್ಕ ಅವರ ಸಾವಿನ ಪ್ರಕರಣವನ್ನು ಅಪಘಾತ ಅಥವಾ ಅಜಾಗರೂಕತೆ ಅಡಿಯಲ್ಲಿ ಆದ ಸಾವು ಎಂದಷ್ಟೇ ಪರಿಗಣಿಸದೆ ಇದರ ಹಿಂದೆ ಎಂತಹ ಲಾಭಿ ನಡೆದಿರಬಹುದು ಎಂಬ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಪ್ರತ್ಯೌಷಧವೇ ಇಲ್ಲದ ಇಂತಹ Herbicides ಗಳು ಈ ನೆಲಕ್ಕೆ ಅಷ್ಟು ಅಗತ್ಯವಾದರೂ ಏನಿತ್ತು.? ಒಬ್ಬ ಮನುಷ್ಯನ ಸಾವಿಗೇ ಈ ಕಳೆನಾಶಕಗಳು ಇಷ್ಟು ಪರಿಣಾಮಕಾರಿಯಾಗಿ ದುಷ್ಪರಿಣಾಮ ಬೀರಬೇಕಾದರೆ, ನೆಲದ ಮೇಲೆ ಇನ್ನೆಂತಹ ದುಷ್ಪರಿಣಾಮ ಬೀರಬಹುದು. ಒಟ್ಟಾರೆ ಕಳೆನಾಶಕಗಳ ಬಗ್ಗೆ ಪರಿಸರ ಪ್ರೇಮಿಗಳ ದೊಡ್ಡ ವಿರೋಧ ಇದ್ದರೂ, ಕಾಡು, ಪರಿಸರ ಉಳಿಸುವ ಅರಣ್ಯ ಇಲಾಖೆಯೇ ಬಳಸುವುದು ಸ್ಪಷ್ಟವಾಗಿ ಪರಿಸರ ನಾಶಕ್ಕೆ ದಾರಿ ಮಾಡಿದಂತೆ ಅಲ್ಲವೆ? ಜೊತೆಗೆ ಇಂತಹ ವಿಷಕಾರಿ ಕಳೆನಾಶಕ ಭಾರತದಲ್ಲಿ ಉತ್ಪಾದನೆ ಆಗುತ್ತಿರುವುದು ಯಾಕೆ.? ಪ್ರತ್ಯೌಷಧ (Antidote) ಇಲ್ಲದ ಇಂತಹ ಕಳೆನಾಶಕಗಳು ಇಂತಹ ಅದೆಷ್ಟು ಜೀವಗಳ ಬಲಿ ಪಡೆಯಬಹುದು ಎಂಬುದು ನಿಜಕ್ಕೂ ಆತಂಕಕಾರಿಯೇ ಸರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿ ತನಿಖೆಗೆ ಮುಂದಾಗಬೇಕು. ಇಂತಹ ಕಳೆನಾಶಕಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದರ ಜೊತೆಗೆ ಯೋಗೇಶ್ ನಾಯ್ಕ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಅವರ ಸಾವಿನ ಪ್ರಕರಣ ಕೂಡಾ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಎಂಬುದು ಸಾರ್ವಜನಿಕ ವಲಯದ ಕಳಕಳಿಯ ಬೇಡಿಕೆಯಾಗಿದೆ.

ಕೇದಾರನಾಥ ಯಾತ್ರಿಕರ ಹೆಲಿಕಾಪ್ಟರ್ ಪತನ
ಉತ್ತರಾಖಂಡ: ಫಟಾದಿಂದ ಕೇದಾರನಾಥ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ.

ಸಾವುನೋವುಗಳ ಭೀತಿ ಎದುರಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಆಡಳಿತ ತಂಡವು ಸ್ಥಳಕ್ಕೆ ತೆರಳಿದೆ.

ಈ ದುರಂತದಲ್ಲಿ 4 ಯಾತ್ರಿಕರು ಹಾಗು 2 ಪೈಲಟ್‌ಗಳು ಸಾವನ್ನಪ್ಪಿರುವ ಸುದ್ದಿ ತಿಳಿದು ಬಂದಿದೆ. ಇದನ್ನು ಹೊರತು ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

#WATCH | Uttarakhand: A helicopter carrying Kedarnath pilgrims from Phata crashes, casualties feared; administration team left for the spot for relief and rescue work. Further details awaited pic.twitter.com/sDf4x1udlJ
— ANI (@ANI) October 18, 2022

Uttarakhand | A helicopter carrying Kedarnath pilgrims from Phata crashes, casualties feared; the administration team has left for the spot for relief and rescue work. Details awaited pic.twitter.com/houwDQY1qT
— ANI (@ANI) October 18, 2022

ಕೋಮು ಗಲಭೆಗೆ ಯತ್ನ: ಇಬ್ಬರು ಹಿಂದುತ್ವವಾದಿ ಕಾರ್ಯಕರ್ತರ ಬಂಧನ
ಉತ್ತರ ಕನ್ನಡ: ವೈಯಕ್ತಿಕ ಜಗಳವನ್ನು ಕೋಮು ಗಲಭೆಯನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ ಇಬ್ಬರು ಹಿಂದೂಪರ ಸಂಘಟನೆಯ ಕಾರ್ಯಕರ್ತರನ್ನು ಮುರುಡೇಶ್ವರ ಠಾಣೆ ಹಾಗೂ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಿರಾಲಿಯ ನವೀನ್ ಸೋಮಯ್ಯ ನಾಯ್ಕ, ನವೀನ್ ವೆಂಕಟೇಶ ನಾಯ್ಕ ಬಂಧಿತ ಹಿಂದೂ ಕಾರ್ಯಕರ್ತರಾಗಿದ್ದಾರೆ. ಇಬ್ಬರೂ ವೈಯಕ್ತಿಕ ಕಾರಣಕ್ಕೆ ಪರಸ್ಪರ ಜಗಳವಾಡಿಕೊಂಡ ಸಂದರ್ಭದಲ್ಲಿ ನವೀನ್ ಸೋಮಯ್ಯ ನಾಯ್ಕನಿಗೆ ನವೀನ್ ವೆಂಕಟೇಶ ನಾಯ್ಕ ಕೀ ಚೈನಿನಿಂದ ತಲೆಗೆ ಹಲ್ಲೆ ನಡೆಸಿ ಪೊಲೀಸ್ ಠಾಣೆಯಲ್ಲಿ ಅನ್ಯ ಕೋಮಿನವರು ಹಲ್ಲೆ ನಡೆಸಿರುವುದಾಗಿ ದೂರು ನೀಡಿರುತ್ತಾನೆ.

ನಂತರ ಪೊಲೀಸರು ಈ ಕುರಿತು ತನಿಖೆ ನಡೆಸಿದಾಗ ಸುಳ್ಳು ಪ್ರಕರಣ ದಾಖಲಿಸಿರುವುದು ಕಂಡುಬಂದಿರುತ್ತದೆ. ಭಟ್ಕಳ ಠಾಣೆಯ ಸಿಪಿಐ ಮಹಾಬಲೇಶ್ವರ ನಾಯಕ ತಂಡವು ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದಾಗ ಭಟ್ಕಳದಲ್ಲಿ ಕೋಮು ಸಂಘರ್ಷ ಮೂಡಿಸಿ ಶಾಂತಿ ಕದಡಲು ಪ್ರಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಒಟ್ಟಿನಲ್ಲಿ ಪೊಲೀಸರ ಸಮಯೋಚಿತ ಪ್ರಜ್ಞೆಯಿಂದಾಗಿ ಭಟ್ಕಳದಲ್ಲಿ ಇನ್ನೊಂದು ಕೋಮು ಗಲಭೆ ನಡೆಯುವುದು ತಪ್ಪಿದಂತಾಗಿ ಜನರು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

ಅಕ್ರಮ ಗೋಮಾಂಸ ಸಾಗಣೆ : ಐವರ ಬಂಧನ
ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು 3,10, 800 ರೂ ಮೌಲ್ಯದ 2,220 ಕೆಜಿ ಗೋಮಾಂಸವನ್ನು ಜಪ್ತಿ ಮಾಡಿದ್ದಾರೆ.

ಉತ್ತರ ಕನ್ನಡದಲ್ಲಿ ಐದು ಜನ ಸೇರಿ ಸುಮಾರು 3,10, 800 ರೂ ಮೌಲ್ಯದ 2,220 ಕೆಜಿ ಗೋಮಾಂಸವನ್ನು ಗೋವಾಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ವೇಳೆ ಜೋಯಿಡಾ ತಾಲ್ಲೂಕಿನ ಅನಮೋಡ್ ಚೇಕ್ ಪೋಸ್ಟ್ ನ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಹೇಂದ್ರ ಪಿಕಪ್ ವಾಹನ ಸಮೇತ ಗೋಮಾಂಸವನ್ನು ವಶಕ್ಕೆ ಪಡೆದಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಜೋಯಿಡಾ ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಳ್ನಾವರ ಮೂಲದ ಸಾದಿಕ್, ದಾವಲಮಲಿಕ್, ಖಾನಾಪುರ ಮೂಲದ ಶಾಹಿದ್, ಇಲಿಯಾಸ್ ಮತ್ತು ರಾಜಾಸಾಬ್ ಬಂಧಿತ ಆರೋಪಿಗಳಾಗಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ದೇಶ ವಿಭಜನೆಯಾಗಿದ್ದು ಗಾಂಧೀಜಿಯವರು ಮತ್ತು ನೆಹರು ರವರಿಂದ ಎಂಬ ಹಸಿ ಸುಳ್ಳನ್ನ ಹೊತ್ತು ಮೆರೆಸುತ್ತಿದ್ದಾರೆ

ದೇಶ ವಿಭಜನೆಯ ಹಿಂದಿನ ನೈಜ ಸತ್ಯವೇನು ಎಂಬುದನ್ನ ತಿಳಿಯಲು ಈ ವೀಡಿಯೋ ನೋಡಿ

peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ

https://fb.watch/fVbRq_9xvi/

ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಮನ್ನಣೆ ದೊರೆತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಪ್ರಕಟಿಸಿದರು.

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡ ಬಳಿಕ, ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಗೆ ಉತ್ಕೃಷ್ಟವಾದ ಆರೋಗ್ಯ ಸೇವೆ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎಲ್ಲಿ ನಿರ್ಮಿಸಬೇಕು, ಹೇಗೆ ನಿರ್ಮಾಣ ಮಾಡಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಈ ಪ್ರಸ್ತಾವ ಆರ್ಥಿಕ ಇಲಾಖೆಯವರೆಗೆ ಹೋಗಿದೆ. ಇನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾವ ಇರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕುಮಟ ಪ್ರದೇಶ ಉತ್ತರ ಕನ್ನಡ ಜಿಲ್ಲೆಯ ಮಧ್ಯಭಾಗದಲ್ಲಿದ್ದು, ಅಲ್ಲಿಯೇ ಆಸ್ಪತ್ರೆ ನಿರ್ಮಿಸುವ ಬಗ್ಗೆಯೂ ಚರ್ಚೆಯಾಗಿದೆ. ಶಿರಸಿಯಲ್ಲಿ ಈಗಾಗಲೇ 250 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾರವಾರದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದ್ದು, ಮುಂದಿನ ವರ್ಷಕ್ಕೆ ಆ ಕಾಮಗಾರಿಯೂ ಮುಗಿಯಲಿದೆ. ಅಲ್ಲಿ ಈ ವರ್ಷವೇ 150 ವಿದ್ಯಾರ್ಥಿಗಳಿಗೆ ಬೋಧಿಸಲು ಎನ್‌ಎಂಸಿಯಿಂದ ಪರವಾನಗಿ ದೊರೆತಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ಕೃಷ್ಟವಾದ ಆರೋಗ್ಯ ಸೇವೆ ನೀಡುವುದು, ಆರೋಗ್ಯ ಸೇವೆ ಮೇಲ್ದರ್ಜೆಗೇರಿಸುವುದು, ಸಿಬ್ಬಂದಿ ಕೊರತೆ ನೀಗಿಸುವುದು, ಉಪಕರಣಗಳ ಪೂರೈಕೆ, ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಸುಧಾಕರ್‌ ಹೇಳಿದರು.

ಈ ಹಿನ್ನಲೆ ಅಧಿವೇಶನ ಮುಗಿದ ಬಳಿಕ ಸಚಿವ ಡಾ.ಕೆ.ಸುಧಾಕರ್‌ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಕಮರಿ ಹೋಯ್ತಾ ಉತ್ತರ ಕನ್ನಡ ಜಿಲ್ಲೆಯ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಬೇಡಿಕೆಯ ಕೂಗು?
ಇಲ್ಲಿಗೆ ಕೇವಲ 2 ತಿಂಗಳ ಹಿಂದೆ… ಅಂದ್ರೆ ಜುಲೈ 20, 2022 ರ ಸಂಜೆ 4 ಗಂಟೆಯ ಸುಮಾರಿಗೆ ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಿಂದ ಹೊರಟ ಆಂಬುಲೆನ್ಸ್ ಚಾಲಕನ ಅಜಾಗರುಕತೆಯಿಂದಲೋ ಅಥವಾ ಟೋಲ್ ಸಿಬ್ಬಂದಿಯ ಬೇಜವಾಬ್ದಾರಿಯಿಂದಲೋ ಆಂಬುಲೆನ್ಸ್ ನಲ್ಲಿದ್ದ ನಾಲ್ವರ ಜೀವ ಬಲಿ ಪಡೆದುಕೊಂಡಿತ್ತು.

ಹೆಚ್ಚಿನ ಮಂದಿಗೆ ಈ ಭೀಕರ ದುರಂತ ಮರೆತು ಹೋಗಿರಲಾರದು. ಆದರೆ ಆ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದ ಒಂದು ಬಿಸಿಬಿಸಿ ಚರ್ಚೆ ಮಾತ್ರ ಹುಟ್ಟಿದಷ್ಟೇ ವೇಗವಾಗಿ ತಣ್ಣಗಾಗಿದ್ದು ಜನಪ್ರತಿನಿಧಿಗಳ ಬೇಜವಾಬ್ದಾರಿ ಎನ್ನಬೇಕೋ ಅಥವಾ ಜನಪ್ರತಿನಿಧಿಗಳ ಕೊರಳ ಪಟ್ಟಿ ಹಿಡಿದು ಕೇಳಬೇಕಾದ ಪ್ರಜೆಗಳ ಅಲ್ಪಕಾಲದ ನೆನಪಿನ ಶಕ್ತಿ ಎನ್ನಬೇಕೋ ತಿಳಿಯದು. ಅಷ್ಟರ ಮಟ್ಟಿಗೆ ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆ ಸಂದರ್ಭದ ಕೂಗಾಯ್ತೇ ಹೊರತು ಒಂದು ಗಟ್ಟಿ ದನಿಯಾಗಿ ನಿಲ್ಲಲೇ ಇಲ್ಲ.

ಸಧ್ಯ ಈ ಸಂದರ್ಭದಲ್ಲಿ ಈ ಪೀಠಿಕೆಗೆ ಒಂದು ಪ್ರಮುಖ ಕಾರಣವಿದೆ. ವಿಧಾನ ಸಭೆಯ ನಿನ್ನೆಯ ಪಲಾಪದಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಚರ್ಚೆಗೆ ಪ್ರಸ್ತಾವನೆ ಇಟ್ಟಿದ್ದರು. ದುರಂತ ಎಂದರೆ ಅದೇ ಜಿಲ್ಲೆಯವರಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಗೈರಿನ ನೆಪವೊಡ್ಡಿ ರೂಪಾಲಿ ನಾಯ್ಕ ಅವರ ಬಾಯಿ ಮುಚ್ಚಿಸಿ ಕೂರಿಸಿದ್ದಾರೆ. ಕನಿಷ್ಟ ಪಕ್ಷ ಮುಖ್ಯಮಂತ್ರಿ ಬೊಮ್ಮಾಯಿಯಾದರೂ ಒಂದು ಭರವಸೆಯ ಮಾತನ್ನಾದರೂ ಹೇಳಬಹುದಿತ್ತು. ಆದರೆ ಆ ಬಗ್ಗೆ ಸೂಚನೆಯೂ ಅವರಿಂದ ಸಿಕ್ಕಿಲ್ಲ.

ಶಾಸಕಿ ರೂಪಾಲಿ ನಾಯ್ಕ

ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಗೆ ಶಿರಸಿ ಪ್ರಮುಖ ಪಟ್ಟಣವಾದರೂ ಜಿಲ್ಲೆಯ ಭೌಗೋಳಿಕ ಲಕ್ಷಣಗಳನ್ನು ನೋಡಿದರೆ ಕುಮಟಾ ಜಿಲ್ಲೆಯ ಎಲ್ಲಾ ಭಾಗಕ್ಕೂ ಮಧ್ಯೆ ಬರುತ್ತದೆ. ಉತ್ತರ ಕನ್ನಡ ಜಿಲ್ಲೆ ನಾಲ್ಕು ತಾಲ್ಲೂಕುಗಳು ಕರಾವಳಿ ಭಾಗದಲ್ಲಿದ್ದರೆ, ಉಳಿದ ತಾಲ್ಲೂಕುಗಳು ಮಲೆನಾಡು ಭಾಗಕ್ಕೆ ಸೇರಿದಂತಿವೆ. ಹಾಗಾಗಿ ಒಂದು ಕೇಂದ್ರ ಸ್ಥಾನವಾಗಿ ಹೊಸ ಆಸ್ಪತ್ರೆ ನಿರ್ಮಾಣ ಎಲ್ಲಿ ಆಗಬೇಕು ಎಂಬ ಬಗ್ಗೆಯೂ ಸಾಕಷ್ಟು ಚರ್ಚೆಗಳಾಗಿವೆ.

ಒಂದು ದೃಷ್ಟಿಯಿಂದ ಜಿಲ್ಲೆಯಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಆದರೆ ಕುಮಟಾದಲ್ಲಿ ಆದರೆ ಒಳ್ಳೆಯದು ಎಂಬುದು ಹಲವರ ಅಭಿಪ್ರಾಯ. ಯಾಕೆಂದರೆ ಇತ್ತ ದಕ್ಷಿಣದಿಂದ ಉತ್ತರಕ್ಕೆ ಕರಾವಳಿ ಮತ್ತು ಘಟ್ಟ ಪ್ರದೇಶ ಇವುಗಳಿಗೆ ಕೇಂದ್ರ ಸ್ಥಾನದಂತಿರುವುದು ಕುಮಟಾ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ, ಸೂಕ್ತ ಜಾಗದ ಹುಡುಕಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ ಕಾರವಾರದಲ್ಲಿ ಇರುವ ಮೆಡಿಕಲ್ ಕಾಲೇಜನ್ನು ಉನ್ನತೀಕರಿಸಿದರೆ ಜಿಲ್ಲೆಯ ಕರಾವಳಿ ಭಾಗದ ನಾಲ್ಕು ತಾಲ್ಲೂಕುಗಳಿಗೆ ಉತ್ತಮ ಸೌಕರ್ಯ ಒದಗಿಸಬಹುದು. ಹಾಗೇ ಶಿರಸಿಯ ಆಸ್ಪತ್ರೆನ್ನು ಮೇಲ್ದರ್ಜೆಗೇರಿಸಿದರೆ ಘಟ್ಟ ಪ್ರದೇಶದ ಎಲ್ಲಾ ತಾಲ್ಲೂಕುಗಳ ಜನರಿಗೂ ಉತ್ತಮ ಸೌಕರ್ಯ ಕೊಡಬಹುದು. ಹಾಗೇ ಒಂದು ದೊಡ್ಡ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಟ್ಟುವುದಕ್ಕಿಂತ ಇದು ಉತ್ತಮ ನಿರ್ಧಾರ ಕೂಡಾ.

ಆದರೆ ದುರಂತ ಎಂದರೆ ಇಷ್ಟೆಲ್ಲಾ ಯೋಜನೆ, ಯೋಚನೆ ಆಸ್ಪತ್ರೆಗಾಗಿ ಹೋರಾಟವನ್ನು ರೂಪಿಸಿದವರದ್ದೇ ಹೊರತು ಇಲ್ಲಿನ ಜನಪ್ರತಿನಿಧಿಗಳದ್ದಲ್ಲ. ಮೇಲಿನ ಎಲ್ಲಾ ಲೆಕ್ಕಾಚಾರಗಳೂ ಕೂಸು ಹುಟ್ಟೋಕು ಮುನ್ನ ಕುಲಾವಿ ಹೊಲೆಸಿದಂತಿದೆ. ಇಲ್ಲಿ ಕಳೆದ ಮೂರು ಅವಧಿಯಲ್ಲಿ ಆರಿಸಿ ಹೋಗುತ್ತಿರುವ ಸಂಸದ ಅನಂತ ಕುಮಾರ್ ಹೆಗ್ಡೆ “ನನ್ನ ಕೆಲಸ ಆಸ್ಪತ್ರೆ ಕಟ್ಟೋದಲ್ಲ..” ಎಂಬುದಾಗಿ ನೇರವಾಗಿ ಹೇಳಿ, ಆಸ್ಪತ್ರೆ ಕಟ್ಟಲು ಬೇಕಾದ ಯಾವ ಕೆಲಸವೂ ನನ್ನಿಂದಾಗದು ಎಂದು ಪರೋಕ್ಷವಾಗಿ ಹೇಳಿಯಾಗಿದೆ. ಇನ್ನು ಉಳಿದ ಜನಪ್ರತಿನಿಧಿಗಳಿಗೆ ಸರ್ಕಾರದ ಸಚಿವ ಸಂಪುಟದವರ ಮೂಗು ಹಿಡಿದು ಕೇಳುವ ಧೈರ್ಯವಿಲ್ಲ.

ಸಂಸದ ಅನಂತ ಕುಮಾರ್ ಹೆಗ್ಡೆ

ಬಾಯ್ಬಿಟ್ಟರೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿ ಬಡಾಯಿ ಕೊಚ್ಚಿದ್ದೇ ಬಂತು. ಇಲ್ಲಿಯವರೆಗೆ ಸರ್ಕಾರದ ಕಡೆಯಿಂದ ಆಸ್ಪತ್ರೆಯ ಬಗ್ಗೆ ಭರವಸೆಯ ಮಾತೂ ಸಹ ಈ ಜಿಲ್ಲೆಯ ನಾಗರೀಕರಿಗೆ ಸಿಕ್ಕಿಲ್ಲದಿರುವುದು ಕ್ಷೇತ್ರಕ್ಕಾಗುತ್ತಿರುವ ನಿಜವಾದ ಅನ್ಯಾಯ. ಜಿಲ್ಲೆಯ ಮುಕ್ಕಾಲು ಪಾಲು ಜನಪ್ರತಿನಿಧಿಗಳು ಆಡಳಿತ ಪಕ್ಷ ಬಿಜೆಪಿಯವರೇ ಆದರೂ ಜಿಲ್ಲೆಯ ಬಹು ಬೇಡಿಕೆಯ ಆರೋಗ್ಯ ಕ್ಷೇತ್ರಕ್ಕೆ ನಯಾ ಪೈಸೆಯ ಕೊಡುಗೆ ಸಿಕ್ಕಿಲ್ಲ.

ಇನ್ನು ಉತ್ತರ ಕನ್ನಡ ಜಿಲ್ಲೆಗೆ ಆಸ್ಪತ್ರೆ ಕೂಗು ಮತ್ತೆ ಕೇಳಿ ಬರಬೇಕು ಎಂದರೆ ಇನ್ನೊಂದು ಆಂಬುಲೆನ್ಸ್ ದುರಂತವೋ ಅಥವಾ ಇನ್ನೋವುದೋ ಜೀವಹಾನಿಯೋ ಆಗಿ ಮುನ್ನೆಲೆಗೆ ಬರಬೇಕೇನೋ? ಅಲ್ಲಿಯವರೆಗೆ ಇಲ್ಲಿನ ಜನರಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಈ ವಿಚಾರ ಗಂಭೀರ ಅನ್ನಿಸುವುದಿಲ್ಲ. ಅಲ್ಲಲ್ಲಿ ಆಸ್ಪತ್ರೆಗಾಗಿ ಹೋರಾಟಗಾರರ ಒಂದಷ್ಟು ಗುಂಪಷ್ಟೆ ದನಿ ಎತ್ತರಿಸುತ್ತಿರುತ್ತವೆ.