Uttarakhand – Peepal Media

ಉತ್ತರಾಖಂಡ: ದೇವಸ್ಥಾನಕ್ಕೆ ಡೋಲು ಬಾರಿಸಲು ಬರಲಿಲ್ಲ ಎಂದು ಗ್ರಾಮದ ದಲಿತ ಕುಟುಂಬಗಳಿಗೆಲ್ಲ ಬಹಿಷ್ಕಾರ ಹೇರಿಕೆ
ಗೋಪೇಶ್ವರ್:‌ ದಲಿತ ಸಮುದಾಯದ ವ್ಯಕ್ತಿ ಅನಾರೋಗ್ಯದ ಕಾರಣದಿಂದ ದೇವಸ್ಥಾನವೊಂದಕ್ಕೆ ಡೋಲು ಬಾರಿಸಲು ಆಗಮಿಸಲಿಲ್ಲ ಎಂಬ  ಒಂದೇ ಕಾರಣಕ್ಕೆ ಇಡೀ ಗ್ರಾಮದ ದಲಿತ ಕುಟುಂಬಗಳಿಗೆ ಸ್ಥಳೀಯ ಪಂಚಾಯತ್‌ ಬಹಿಷ್ಕಾರ ಹೇರಿದ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಸುಭೈ ಎಂಬ ಗ್ರಾಮದಲ್ಲಿ ನಡೆದಿದೆ.

ಭಾರತ-ಚೀನಾ ಗಡಿ ಸಮೀಪದ ನೀತಿ ಕಣಿವೆಯಲ್ಲಿರುವ ಈ ಗ್ರಾಮದಲ್ಲಿ ಸುಮಾರು ಒಂದು ಡಜನ್‌ ದಲಿತ ಕುಟುಂಬಗಳಿವೆ. ಗ್ರಾಮದ ದೇವಸ್ಥಾನ, ಧಾರ್ಮಿಕ ಮತ್ತು ಸಾಂಸ್ಕೃತಿ ಸಮಾರಂಭಗಳಲ್ಲಿ ತಲೆತಲಾಂತರದಿಂದ ದಲಿತರಿಂದ ಡೋಲು ಬಾರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ.

ಆದರೆ ಅನಾರೋಗ್ಯದ ಕಾರಣದಿಂದ ಪುಷ್ಕರ್‌ ಲಾಲ್‌ ಎಂಬಾತ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಡೋಲು ಬಾರಿಸಲು ಆಗಮಿಸದೇ ಇದ್ದಾಗ ಸ್ಥಳೀಯ ಪಂಚಾಯತ್‌ ಇಡೀ ದಲಿತ ಸಮುದಾಯಕ್ಕೆ ಬಹಿಷ್ಕಾರ ಹಾಕಲಾಗಿದೆ. ಪಂಚಾಯತ್‌ ಸದಸ್ಯನೊಬ್ಬ ಬಹಿಷ್ಕಾರ ಘೋಷಿಸುವ ವೀಡಿಯೋವೊಂದೂ ಹರಿದಾಡುತ್ತಿದೆ ಹಾಗೂ ಆದೇಶ ಪಾಲಿಸಲು ವಿಫಲವಾದರೆ ಇಂತಹುದೇ ಪರಿಣಾಮ ಎದುರಿಸಬೇಕಿದೆ ಎಂದು ಆತ ಎಚ್ಚರಿಸುವುದೂ ಕೇಳಿಸುತ್ತದೆ.ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಈ ಬಹಿಷ್ಕಾರದ ಭಾಗವಾಗಿ ದಲಿತ ಕುಟುಂಬಗಳು ಅರಣ್ಯ, ಜಲ ಸಂಪನ್ಮೂಲಗಳನ್ನು ಬಳಸುವಂತಿಲ್ಲ, ಅಂಗಡಿಗಳಿಂದ ಆಗತ್ಯ ವಸ್ತುಗಳನ್ನು ಖರೀದಿಸುವಂತಿಲ್ಲ, ವಾಹನಗಳಲ್ಲಿ ಸಾಗುವಂತಿಲ್ಲ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವಂತಿಲ್ಲ ಎಂದು ತಿಳಿದು ಬಂದಿದೆ. ಬಹಿಷ್ಕಾರ ಕಾರಣಕ್ಕೆ ಊರಿನ ದಲಿತ ಕುಟುಂಬಗಳಲ್ಲಿಯೇ ಜಗಳ ಸಂಪ್ರದಾಯದ ಪರ ಮತ್ತು ವಿರುದ್ಧ ಆರೋಪಗಳು ಕೇಳಿ ಬರುತ್ತಿವೆ ಎಂದು ವರದಿಯಾಗಿದೆ.

‘ಉತ್ತರಕಾಂಡ’ಕ್ಕೆ ಹನುಮಂತನ ಆಶೀರ್ವಾದ ಪಡೆದ ಡಾಲಿ
“ಉತ್ತರಕಾಂಡ” ಚಿತ್ರದ ಚಿತ್ರೀಕರಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ನಟರಾಕ್ಷಸ ಡಾಲಿ‌ ಧನಂಜಯ್, ಉತ್ತರಕಾಂಡದ ನಿರ್ದೇಶಕ ರೋಹಿತ್ ಪದಕಿ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಇಂದು ನುಗ್ಗೇಕೇರಿಯ ಶ್ರೀ ಹನುಮಂತ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನುಗ್ಗೇಕೇರಿ‌ ಶ್ರೀ ಹನುಮಂತ ದೇವಾಲಯ ಧಾರವಾಡದ ಪುರಾತನ ಮತ್ತು ಪ್ರಖ್ಯಾತ ದೇವಾಲಯವಾಗಿದೆ‌.

“ಉತ್ತರಕಾಂಡ” ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಹಾಗೂ ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ‌‌ ಬರಲಿದೆ.

ಉತ್ತರಾಖಂಡ: ಬಿಜೆಪಿ ನಾಯಕನಿಂದ ಅಪ್ರಾಪ್ತೆಯ ಅತ್ಯಾಚಾರ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂಪಾವತ್ ಜಿಲ್ಲೆಯ ಬಿಜೆಪಿ ನಾಯಕನ ಮೇಲೆ ಉತ್ತರಾಖಂಡ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಮಲ್ ರಾವತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ: ಪೀಪಲ್‌ ಮೀಡಿಯಾ

ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಅಡಿಯಲ್ಲಿ (ಪೋಕ್ಸೋ)  ಪ್ರಕರಣ ದಾಖಲಿಸಲಾಗಿದೆ ಎಂದು ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ.

ಶನಿವಾರ ವೈದ್ಯಕೀಯ ಪರೀಕ್ಷೆಯ ನಂತರ ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಪಿಂಚಾ ತಿಳಿಸಿದ್ದಾರೆ. (PTI)

ಸಿಲ್ಕ್ಯಾರಾ ಸುರಂಗ ದುರಂತ: ಸಿಲುಕಿರುವ ಕಾರ್ಮಿಕರನ್ನು ಹೊರತರಲು ಕ್ಷಣಗಣನೆ
ಉತ್ತರಕಾಶಿ: ಕಳೆದ 16 ದಿನಗಳಿಂದ 41 ಕಾರ್ಮಿಕರು ಸಿಲುಕಿ ಹಾಕಿಕೊಂಡಿರುವ ಸಿಲ್ಕ್ಯಾರಾ ಸುರಂಗವನ್ನು‌ ಮಂಗಳವಾರ ರಕ್ಷಣಾ ಕಾರ್ಯಕರ್ತರು 60 ಮೀಟರ್ ಕೊರೆದಿದ್ದಾರೆ. ರಾಜ್ಯ ಸರ್ಕಾರದ ಮಾಹಿತಿ ಇಲಾಖೆ ಮುಖ್ಯಸ್ಥ ಬನ್ಸಿ ಧರ್ ತಿವಾರಿ ಈ ಪ್ರಕ್ರಿಯೆ ಮುಗಿದಿರುವ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಕೊರೆಯಲಾದ ಪ್ಯಾಸೇಜ್‌ಗೆ ಎಸ್ಕೇಪ್ ಪೈಪ್ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ತಿಳಿಸಿದ್ದಾರೆ. “ಶೀಘ್ರದಲ್ಲೇ ಎಲ್ಲಾ ಕಾರ್ಮಿಕರನ್ನು ಹೊರತರಲಾಗುವುದು” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಎನ್‌ಎಚ್‌ಐಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹಮೂದ್ ಅಹ್ಮದ್ ಈ ಕೊರೆಯುವ ಕೆಲಸ ಮುಗಿದಿದೆ ಎಂದು ತಕ್ಷಣ ಖಚಿತಪಡಿಸಲಿಲ್ಲ. ಪೈಪ್‌ನ ಕೊನೆಯ ಭಾಗವನ್ನು ತಳ್ಳಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕಳೆದ ಹಲವು ದಿನಗಳಿಂದ ಕೊರೆಯಲಾದ ಮಾರ್ಗಕ್ಕೆ ಸ್ಟೀಲ್‌ ಚ್ಯೂಟ್‌ ತಳ್ಳಿ ಒಬ್ಬೊಬ್ಬರಾಗಿ ಕಾರ್ಮಿಕರನ್ನು ಹೊರತರುವ ನಿರೀಕ್ಷೆಯಿದೆ.

ಪ್ರತಿಯೊಬ್ಬ ಕಾರ್ಮಿಕನೂ ಚಕ್ರದ ಸ್ಟ್ರೆಚರ್ ಮೇಲೆ ಮಲಗುತ್ತಾನೆ, ಅದನ್ನು ರಕ್ಷಣಾ ತಂಡದವರು ಹೊರಗೆ ಹಗ್ಗಗಳನ್ನು ಬಳಸಿ ಎಳೆಯುತ್ತಾರೆ. ಇದು ಸುಮಾರು ಎರಡು ಅಥವಾ ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಚಾರ್ ಧಾಮ್ ಮಾರ್ಗದ ವಿಪತ್ತು ನಡೆದಿರುವ ಸ್ಥಳದಲ್ಲಿ ಈ ಸುದ್ದಿ ಹೊರಬೀಳುವ ಗಂಟೆಗಳ ಮುಂಚೆಯೇ ನಿರೀಕ್ಷೆಯ ವಾತಾವರಣ ನಿರ್ಮಾಣವಾಗಿತ್ತು. ಸ್ಟೀಲ್‌ ಚ್ಯೂಟ್‌ನಿಂದ ಒಂದೊಂದಾಗಿ ಹೊರಬರುವ ಕಾರ್ಮಿಕರನ್ನು ನೇರವಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳು ಸುರಂಗದ ಬಾಯಿಯ ಬಳಿ ಸಾಲುಗಟ್ಟಿ ನಿಂತಿದ್ದವು.

ಆಂಬ್ಯುಲೆನ್ಸ್‌ಗಳ ಸಂಚಾರವನ್ನು ಸುಲಭಗೊಳಿಸಲು ಮಣ್ಣಿನ ರಸ್ತೆಯನ್ನು ವಿಸ್ತರಿಸಲಾಗಿದೆ. ಸುರಂಗದ ಬಾಯಿಯೊಳಗೆ ಸ್ಟ್ರೆಚರ್‌ಗಳನ್ನು ಕಳುಹಿಸಲಾಗುತ್ತಿದೆ.

ಎಲ್ & ಟಿ ತಂಡದ ನಾಯಕ ಕ್ರಿಸ್ ಕೂಪರ್ “ಅವರು ಸಂಜೆ 5 ಗಂಟೆಯ ಮೊದಲು ಹೊರಬರುವ ಸಾಧ್ಯತೆಯಿದೆ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುರಂಗದ ಮೇಲಿನಿಂದ ಕಾರ್ಮಿಕರನ್ನು ತಲುಪಲು ಲಂಬಾಕಾರದ ಡ್ರಿಲ್ಲಿಂಗ್, ಏಕಕಾಲದಲ್ಲಿ ಕೊರೆಯುವ ಕಾರ್ಯಾಚರಣೆಯನ್ನು ಈಗ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೀಮಿತ ಜಾಗದಲ್ಲಿ ಕೈಯಲ್ಲಿ ಹಿಡಿಯುವ ಉಪಕರಣಗಳನ್ನು ಬಳಸಿಕೊಂಡು ಕೊನೆಯ ಹಂತದ ಕೊರೆಯುವಿಕೆಯನ್ನು ಮುಗಿಸಲು ಹನ್ನೆರಡು ಗಣಿಗಾರಿಕೆ ತಜ್ಞರನ್ನು ಕರೆತರಲಾಗಿದೆ.

ರಕ್ಷಿಸಲ್ಪಟ್ಟ ಕಾರ್ಮಿಕರಿಗಾಗಿ ಸಿಲ್ಕ್ಯಾರಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಆಮ್ಲಜನಕ ಸಹಿತ ಹಾಸಿಗೆಗಳನ್ನು ಹೊಂದಿರುವ ವಿಶೇಷ ವಾರ್ಡ್ ಅನ್ನು ದಿನಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು.

ಸುರಂಗ ಕುಸಿತ : ಬೆಳಿಗ್ಗೆ 9 ಗಂಟೆಯ ವೇಳೆಗೆ 41 ಕಾರ್ಮಿಕರ ರಕ್ಷಣೆ ಸಾಧ್ಯತೆ – ರಕ್ಷಣಾ ಅಧಿಕಾರಿಗಳು
ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಗುರುವಾರ ಬೆಳಗ್ಗೆ 9 ಗಂಟೆಯ ವೇಳೆಗೆ ಹೊರತರುವ ನಿರೀಕ್ಷೆಯಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬುಧವಾರ ಸಂಜೆಯಿಂದಲೇ ಹೊಸ ಅತ್ಯಾಧುನಿಕ ತಂತ್ರಜ್ಞಾನದ ಡ್ರಿಲ್ಲಿಂಗ್ ಮಷಿನ್ ನಿಂದ ಕಾರ್ಮಿಕರಿಗೆ ಸಮೀಪಿಸುವ ಕಾರ್ಯ ಭರದಿಂದ ಸಾಗಿದೆ.

ಕಮಾಂಡೆಂಟ್ ನೇತೃತ್ವದ 15 ಜನರ ಎನ್‌ಡಿಆರ್‌ಎಫ್ ತಂಡವು ಕಳೆದ 10 ದಿನಗಳಿಂದ ಕುಸಿದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಒಬ್ಬೊಬ್ಬರಾಗಿ ಹೊರತೆಗೆಯಲು ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರು ಸಿಲುಕಿರುವ ಅವಶೇಷಗಳ ಇನ್ನೊಂದು ಬದಿಗೆ ಪೈಪ್ ಮೂಲಕ ಹೇಗೆ ಹೋಗುತ್ತಾರೆ ಎಂಬುದರ ಕುರಿತು ಎನ್‌ಡಿಆರ್‌ಎಫ್ ಜವಾನರು ಅಣಕು ಡ್ರಿಲ್ ನಡೆಸಿದ್ದಾರೆ ಎಂದು ಎನ್‌ಡಿಆರ್‌ಎಫ್ ಸೆಕೆಂಡ್ ಇನ್ ಕಮಾಂಡ್ ರವಿಶಂಕರ್ ಬಧಾನಿ ಪಿಟಿಐಗೆ ತಿಳಿಸಿದ್ದಾರೆ.

#WATCH | Uttarkashi (Uttarakhand) tunnel rescue | Girish Singh Rawat, one of the members of the rescue operation team says, " Rescue operation is almost in the last stage, I hope the result will come in 1-2 hours…pipeline is being inserted to take out the workers…the steel… pic.twitter.com/Wp9EL5yZ5n
— ANI (@ANI) November 22, 2023

41 ಜನ ಕಾರ್ಮಿಕರ ರಕ್ಷಣೆಯ ನಂತರ ರಾಜ್ಯಕ್ಕೆ ಸೇರಿದ ಕಾರ್ಮಿಕರನ್ನು ಏರ್‌ಲಿಫ್ಟ್ ಮಾಡಲು ಜಾರ್ಖಂಡ್ ಸರ್ಕಾರ ಯೋಜಿಸಿದೆ. ಜಾರ್ಖಂಡ್‌ ಗೆ ಸೇರಿದ ಸುಮಾರು 15 ಕಾರ್ಮಿಕರು ಸುರಂಗದಲ್ಲಿ ಸಿಲುಕಿದ್ದಾರೆ. ರಕ್ಷಣಾ ಸ್ಥಳದಲ್ಲಿ ಹಾಜರಿದ್ದ ಜಾರ್ಖಂಡ್ ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ಪಿಟಿಐಗೆ ರಾಜ್ಯ ಸರ್ಕಾರವು ತಮ್ಮ ರಾಜ್ಯಕ್ಕೆ ಸೇರಿದ ಕಾರ್ಮಿಕರನ್ನು ವಿಮಾನದಲ್ಲಿ ಕರೆತರಲು ಯೋಜಿಸಿದೆ ಎಂದು ತಿಳಿಸಿದ್ದಾರೆ. ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಉತ್ತರಕಾಶಿಯ ಚಿಲ್ಯಾನಿಸೌರ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗುವುದು, ಅಲ್ಲಿ 41 ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ಹೊಂದಿರುವ ಪ್ರತ್ಯೇಕ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಉತ್ತರಕಾಶಿ ಸುರಂಗ ಕುಸಿತದ ದುರ್ಘಟನೆ ನಂತರ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ ಎಲ್ಲಾ 29 ಸುರಂಗಗಳ ಸುರಕ್ಷತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಕೈಗೊಳ್ಳಲಿದೆ ಎಂದು ಪ್ರಾಧಿಕಾರ ಹೇಳಿದೆ. “ಎನ್‌ಎಚ್‌ಎಐ ಅಧಿಕಾರಿಗಳು, ದೆಹಲಿ ಮೆಟ್ರೋ ರೈಲು ನಿಗಮದ (ಡಿಎಂಆರ್‌ಸಿ) ತಜ್ಞರ ತಂಡ ಮತ್ತು ಇತರ ಸುರಂಗ ತಜ್ಞರೊಂದಿಗೆ ಕಾಮಗಾರಿ ಹಂತದಲ್ಲಿರುವ ಸುರಂಗ ಯೋಜನೆಗಳನ್ನು ಪರಿಶೀಲಿಸಲಿದ್ದಾರೆ ಮತ್ತು ಈ ಬಗ್ಗೆ ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.

ಉತ್ತರಕಾಶಿ ಸುರಂಗ ಕುಸಿತ : ‘ಕಾರ್ಮಿಕರ ರಕ್ಷಣೆಗೆ ಇನ್ನೂ 15 ದಿನ ಬೇಕಾಗಬಹುದು’ ಎಂದ ಅಧಿಕಾರಿಗಳು
ಉತ್ತರಾಕಾಂಡದ ಉತ್ತರ ಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದು 10 ದಿನ ಕಳೆದರೂ ಕಾರ್ಮಿಕರ ರಕ್ಷಣೆ ಆಗಿಲ್ಲ. ಸುಮಾರು 60 ಅಡಿ ಉದ್ದಕ್ಕೆ ಕುಸಿದಿರಬಹುದಾದ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಇನ್ನೂ 15 ದಿನಗಳು ಆಗಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ ಆಗರ್ ಯಂತ್ರ ಉಪಯೋಗಿಸಿ ಸುರಂಗವನ್ನು ಕೊರೆದು ಕಾರ್ಮಿಕರ ರಕ್ಷಣೆಗೆ ಮುಂದಾಗಿತ್ತು. ಆದರೆ ಮಧ್ಯದಲ್ಲಿ ದೊಡ್ಡದಾದ ಕಲ್ಲು ಬಂಡೆ ಬಂದ ಹಿನ್ನೆಲೆಯಲ್ಲಿ ಕಾರ್ಮಿಕರು ಇರುವ ಜಾಗದಲ್ಲೇ ಭೂಮಿ ಕುಸಿಯಬಹುದಾದ ಸಾಧ್ಯತೆ ಕಂಡುಬಂದ ಕಾರಣ ಅದನ್ನು ಅಲ್ಲಿಗೇ ನಿಲ್ಲಿಸಲಾಯಿತು.

ಮುಂದಿನ ಎರಡು ದಿನಗಳಲ್ಲಿ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಕಾರ್ಮಿಕರನ್ನು ಹೊರತರುವ ಎಲ್ಲಾ ಪ್ರಯತ್ನಗಳು ನಡೆದಿವೆ. ಸಧ್ಯಕ್ಕೆ ಡ್ರಿಲ್ಲಿಂಗ್ ಮಷಿನ್ ಸೂಕ್ತ ಆಯ್ಕೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದೂ ಕೂಡ ಕೆಲಸ ಮಾಡದಿದ್ದರೆ ಕಾರ್ಮಿಕರ ರಕ್ಷಣೆಗೆ ಇನ್ನೂ 15 ದಿನವರೆಗೂ ಹಿಡಿಯಬಹುದು ಎಂದು ಹೇಳಲಾಗಿದೆ.

ಈಗಾಗಲೇ 6 ಇಂಚಿನ ಪೈಪ್ ಮೂಲಕ 41 ಕಾರ್ಮಿಕರು ಸುರಕ್ಷತೆಯಿಂದ ಇರುವ ಬಗ್ಗೆ ವಿಡಿಯೋ ಸಾಕ್ಷಿ ಹೊರ ಬಿದ್ದಿದೆ. ಹಾಗೆಯೇ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಚಪಾತಿ, ವೆಜ್​ ಪಲಾವ್, ಮಟರ್​ ಪನೀರ್​ನಂತಹ ಬೇಯಿಸಿದ ಆಹಾರ ಪದಾರ್ಥಗಳನ್ನು 6 ಇಂಚಿನ ಪೈಪ್ ಮೂಲಕ ರವಾನಿಸಲಾಗುತ್ತಿದೆ. ಆಹಾರ ಪದಾರ್ಥಗಳ ಜೊತೆಗೆ ಆಕ್ಸಿಜನ್ ಮತ್ತು ನೀರನ್ನು ಕಳಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಳೆಂಟು ದಿನಗಳಿಂದ ಘಟನಾ ಸ್ಥಳದಲ್ಲಿ ಎನ್​ಡಿಆರ್​ಎಫ್ , ಎಸ್​ಡಿಆರ್​ಎಫ್, ಐಟಿಬಿಪಿ, ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಕಾರ್ಮಿಕರ ರಕ್ಷಣೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಬಿಜೆಪಿ ನಾಯಕನ ಪತ್ನಿ ಸಾವು: ಪೊಲೀಸರ ವಿರುದ್ಧ ಪ್ರಕರಣ ದಾಖಲು
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಗಣಿಗಾರಿಕೆ ಮಾಫಿಯಾದ ಮೇಲೆ ಕಾರ್ಯಚರಣೆ ನಡೆಸುತ್ತಿರುವ ಸಂದರ್ಭದಲ್ಲಿ, ಉತ್ತರ ಪ್ರದೇಶದ ಮೊರಾದಾಬಾದ್‌ನ ಐವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಮಾಹಿತಿ ಪ್ರಕಾರ, ಪೊಲೀಸರು ಮತ್ತು ಗಣಿಗಾರಿಕೆ ಮಾಫಿಯಾದ ಸಹಾಯಕರ ನಡುವಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಮಹಿಳೆಯು, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ ಎಂದು ತಿಳಿದುಬಂದಿದೆ.

ಜಫರ್ ಎಂಬ ಗಣಿಗಾರಿಕೆ ಮಾಫಿಯಾವನ್ನು ಬಂಧಿಸಲು ಮೊರಾದಾಬಾದ್ ಪೊಲೀಸ್ ತಂಡವು ಉತ್ತರಾಖಂಡದ ಜಸ್ಪುರ್‌ಗೆ ತಲುಪಿದಾಗ ಉಂಟಾದ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಲಾಗಿದೆ. ಈ ವೇಳೆ ಮೂವರು ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಮಾಫಿಯಾದ ಸಹಾಯಕನಾಗಿದ್ದ ಜಾಫರ್ ಎಂಬಾತ ₹ 50,000 ಬಹುಮಾನವನ್ನು ಹೊತ್ತೊಯ್ದು ಭುಲ್ಲರ್ ಅವರ ಮನೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಮಾಹಿತಿ ತಿಳಿದುಬಂದಿತು. ಈ ವೇಳೆ ಪೋಲಿಸ್‌ ತಂಡವು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲಿ, ನಮ್ಮ ಅಧಿಕಾರಿಗಳಿಗು ಮತ್ತು ಮಾಫಿಯಾ ಸಹಾಯಕರ ನಡುವೆ ಗುಂಡಿನ ಚಕಮಕಿಯಾಗಿದ್ದರಿಂದ ಮೂವರು ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ವೇಳೆ ಗುರ್ತಾಜ್ ಭುಲ್ಲರ್ ಅವರ ಪತ್ನಿ ಅವರಿಗೂ ಗುಂಡು ತಗಲಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಿಳೆ ಸಾವಿನ ನಂತರ ಕೋಪಗೊಂಡ ಗ್ರಾಮಸ್ಥರು, ಉತ್ತರಾಖಂಡದಲ್ಲಿನ ಯುಪಿ ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಉತ್ತರಾಖಂಡ, ರೆಸಾರ್ಟ್‌ಹತ್ಯೆ: ಮಾಜಿ ಸಚಿವನನ್ನು ಪಕ್ಷದಿಂದ ಹೊರಗಟ್ಟಿದ ಬಿಜೆಪಿ
ನವದೆಹಲಿ: ಉತ್ತರಾಖಂಡದ ರಿಷಿಕೇಶ್‌ದಲ್ಲಿ ಬಿಜೆಪಿಯ ಹಿರಿಯ ಮುಖಂಡರೊಬ್ಬರ ಪುತ್ರನಿಂದ 19 ವರ್ಷದ ಯುವತಿಯೊಬ್ಬಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನಾಕಾರರು ಬಿಜೆಪಿ ಶಾಸಕ ರೇಣು ಬಿಶ್ತ್ ಅವರ ಕಾರನ್ನು ಧ್ವಂಸಗೊಳಿಸಿದ್ದಾರೆ.

ಪುಲ್ಕಿತ್‌ ಆರ್ಯ ಅವರ ಮಾಲಿಕತ್ವದ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ಯುವತಿ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಆದರೆ ಅವರ ಮೃತ ದೇಹವು ಇಂದು ಬೆಳಗ್ಗೆ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಹಿನ್ನಲೆ ಆರೋಪಿ ಪುಲ್ಕಿತ್ ಆರ್ಯ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ್ದು, ಹತ್ಯ ಮಾಡಿದ ಸ್ಥಳವಾದ ಉತ್ತರಾಖಂಡದ ರೆಸಾರ್ಟ್‌ನ ಕೆಲವು ಭಾಗಗಳನ್ನು ಆಡಳಿತವು ಕೆಡವಿ ಹಾಕಿದೆ.

ಈ ಹತ್ಯೆಯ ವಿಚಾರವಾಗಿ ಕೋಪಗೊಂಡ ಸ್ಥಳೀಯರು, ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದ್ದು, ನಂತರ ಸ್ಥಳೀಯ ಬಿಜೆಪಿ ಶಾಸಕ ರೇಣು ಬಿಷ್ತ್ ಅವರ ಕಾರನ್ನು ಧ್ವಂಸಗೊಳಿಸಿದ್ದಾರೆ.

ಈ ಹತ್ಯೆಯ ಆರೋಪಿ ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ, ಪುಲ್ಕಿತ್ ಆರ್ಯ ಸೇರಿದಂತೆ ಮೂವರನ್ನು ಉತ್ತರಾಖಂಡ್‌ ಪೊಲೀಸರು ಬಂದಿಸಿದ್ದು, ಆರೋಪಿ ಪುಲ್ಕಿತ್ ಆರ್ಯ ಬಂಧನದ ನಂತರ ಬಿಜೆಪಿ ಮುಖಂಡ ವಿನೋದ್ ಆರ್ಯ ಮತ್ತು ಪಕ್ಷದ ಸದಸ್ಯರಾಗಿದ್ದ ಆರೋಪಿಯ ಸಹೋದರ ಅಂಕಿತ್ ಆರ್ಯ ಅವರನ್ನು ಪುಷ್ಕರ್ ಸಿಂಗ್ ಧಾಮಿ ಸರ್ಕಾರ ಪಕ್ಷದಿಂದ ಹೊರ ಹಾಕಿದೆ.