vhp – Peepal Media

ಸುಳ್ಳು ಮತಾಂತರ ಪ್ರಕರಣ: 15 ತಿಂಗಳುಗಳ ಹೋರಾಟದಲ್ಲಿ ಗೆದ್ದು ಬಂದ ಉತ್ತರ ಪ್ರದೇಶದ ದಲಿತ ಮೆಕ್ಯಾನಿಕ್
* ವಿಎಚ್‌ಪಿ ಮತ್ತು ಬಜರಂಗದಳದ ಕಾರ್ಯಕರ್ತರ ದಾಳಿಯ ನಂತರ, ಸೋನು ಸರೋಜ್ ಮತ್ತು ಅವರ ಕುಟುಂಬದ ಮೇಲೆ ರಾಜ್ಯದ ವಿವಾದಾತ್ಮಕ ಮತಾಂತರ ವಿರೋಧಿ ಕಾನೂನನ್ನು ಅಸ್ತ್ರವಾಗಿ ಬಳಸಿಕೊಂಡು ಉತ್ತರ ಪ್ರದೇಶ ಪೊಲೀಸರಿಂದ ಮತ್ತೊಂದು ದಾಳಿ ನಡೆಯುತ್ತದೆ.

* ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೆ ತಂದ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು ಕಾನೂನು ಹೋರಾಟಗಳಲ್ಲಿ ಗೆದ್ದ ಜನರ ಕುರಿತಾದ ಸರಣಿ ವರದಿಗಳಲ್ಲಿ ಇದು ಮೊದಲ ಲೇಖನ.

ಮೂಲ ವರದಿ: ಒಮರ್‌ ರಾಶಿದ್ | ಕನ್ನಡಾನುವಾದ:‌ ಸುನೈಫ್ ವಿಟ್ಲ

35 ವರ್ಷದ ಸೋನು ಸರೋಜ್ ಎಂಬ ವ್ಯಕ್ತಿಗೆ 2023 ಜೂನ್ 25ರ ಭಾನುವಾರ ಇತರ ಭಾನುವಾರಗಳ ಮುಂಜಾನೆಯಂತೆಯೇ ಪ್ರಾರಂಭವಾಗಿತ್ತು. ಆತನ ಕುಟುಂಬ, ದೂರದ ಸಂಬಂಧಿಕರು ಮತ್ತು ನೆರೆಯ ಹಳ್ಳಿಗಳ ಜನರು ಉತ್ತರ ಪ್ರದೇಶದ ರಾಯ್ ಬರೇಲಿಯ ಕೊದ್ರಾ ಗ್ರಾಮದಲ್ಲಿ ತನ್ನ ಮನೆಯ ಹಿಂದುಗಡೆ ನಿರ್ಮಿಸಿದ್ದ ಶೆಡ್ ಬಳಿ ಯೇಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸುವ ಸಭೆಯಲ್ಲಿ ಭಾಗವಹಿಸಲೆಂದು ಸೇರಿದ್ದರು. ಮೆಕ್ಯಾನಿಕ್ ಆಗಿದ್ದ ದಲಿತ ಸಮುದಾಯದ ಸರೋಜ್ ಜೀವನ್ ದ್ವಾರ ಪ್ರಾರ್ಥನಾ ಭವನ ಎಂಬ ಆ ತಾತ್ಕಾಲಿಕ ಪ್ರಾರ್ಥನಾ ಕೇಂದ್ರದಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದರು. ಅದನ್ನು ಸೊಸೈಟಿಯ ರೂಪದಲ್ಲಿ ನೋಂದಾಯಿಸಲಾಗಿತ್ತು. ಆದರೆ ಅಂದು, ಆ ದಿನ ನಿಧಾನಕ್ಕೆ ಸಾಮಾನ್ಯ ಭಾನುವಾರಕ್ಕಿಂತ ಭಿನ್ನವಾದ ಬಣ್ಣ ಪಡೆದುಕೊಳ್ಳುತ್ತಿತ್ತು.

ಪ್ರಾರ್ಥನಾ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಸುಮಾರು 250ರಷ್ಟು ಸ್ವಯಂಸೇವಕರು ಅದಕ್ಕೂ ಅರ್ಧ ಗಂಟೆ ಮೊದಲೇ ಆ ಶೆಡ್‌ ತರದ ಪ್ರಾರ್ಥನಾ ಭವನದ ಬಳಿ ಸೇರಿದ್ದರು. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರು. ಜನರು ಇನ್ನೂ ಬರುತ್ತಲೇ ಇದ್ದರು. ಅಷ್ಟರಲ್ಲಿ, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಅದರ ಯುವ ಘಟಕವಾದ ಬಜರಂಗದಳಕ್ಕೆ ಸೇರಿದ 10–15 ಹಿಂದುತ್ವವಾದಿ ಜನರ ಗುಂಪೊಂದು ಸರೋಜ್‌ ಅವರ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಗಲಾಟೆ ಎಬ್ಬಿಸುತ್ತಾರೆ. “ಅವರು ತಮ್ಮ ಕೈಯಲ್ಲಿ ಲಾಠಿ ಮತ್ತು ದಂಡಗಳನ್ನು ಹಿಡಿದುಕೊಂಡಿದ್ದರು. ಯಾವ ಎಚ್ಚರಿಕೆಯನ್ನೂ ನೀಡದೆ ನಮ್ಮ ಮೇಲೆ ಹಲ್ಲೆ ನಡೆಸಿದರು.” ಎಂದು ಸರೋಜ್‌ ಹೇಳುತ್ತಾರೆ.

ಸೋನು ಸರೋಜ್

ಸರೋಜ್‌ ಅವರ ಸೋದರಳಿಯನ ಮೇಲೆ ಮೂವರು ಗಂಡಸರ ತಂಡ ಹಲ್ಲೆ ನಡೆಸುತ್ತದೆ. ಆಗ ಸ್ನಾನದ ಮನೆಯಲ್ಲಿದ್ದ ಸರೋಜ್ ಅವರ ಪತ್ನಿ ಪ್ರಭಾ (ಹೆಸರು ಬದಲಾಯಿಸಲಾಗಿದೆ) ತಡೆಯಲು ಮುಂದೆ ಬಂದಾಗ, ಕೇಸರಿ ಸ್ಕಾರ್ಫ್ ಧರಿಸಿದ್ದ ಕೆಲವು ದುಷ್ಕರ್ಮಿಗಳು ಅವರ ಮೇಲೆಯೂ ದೈಹಿಕ ಹಲ್ಲೆ ನಡೆಸುತ್ತಾರೆ. ದುಷ್ಕರ್ಮಿಗಳಲ್ಲಿ ಒಬ್ಬ ಲಾಠಿಯಿಂದ ಆಕೆಯ ತಲೆಗೆ ಬಲವಾಗಿ ಹೊಡೆದ ಕಾರಣ ಆಕೆಗೆ ಗಂಭೀರ ಗಾಯವಾಗುತ್ತದೆ. ಅಲ್ಲಿನ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸುವ ಹುನ್ನಾರದೊಂದಿಗೆ ಸರೋಜ್ ಅನಧಿಕೃತವಾಗಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ ಎಂಬುದು ಆ ದುಷ್ಕರ್ಮಿಗಳ ಆರೋಪವಾಗಿತ್ತು.

ಕೆಲವು ಕ್ಷಣಗಳ ನಂತರ, ಪೊಲೀಸರು ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸುತ್ತಾರೆ. ಆದರೆ, ಪೊಲೀಸರು ದಾಳಿಕೋರರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಸಿಆರ್‌ಪಿಸಿ ಸೆಕ್ಷನ್ 151 ಬಳಸಿಕೊಂಡು ಸರೋಜ್ ಅವರನ್ನೇ ಬಂಧಿಸಿ ಜೈಲಿಗಟ್ಟುತ್ತಾರೆ. ಒಬ್ಬ ವ್ಯಕ್ತಿಯು ಶಿಕ್ಷಾರ್ಹ ಅಪರಾಧವೆಸಗಲು ಪಿತೂರಿ ನಡೆಸುತ್ತಿದ್ದಾನೆ/ಳೆ ಎಂದು ಪೊಲೀಸರಿಗೆ ಮನದಟ್ಟಾದರೆ, ವಾರೆಂಟ್‌ ಅಥವಾ ಮ್ಯಾಜಿಸ್ಟ್ರೇಟ್‌ ಆದೇಶವಿಲ್ಲದೆ ವ್ಯಕ್ತಿಯನ್ನು ಬಂಧಿಸುವ ಅಧಿಕಾರವನ್ನು ಈ ಸೆಕ್ಷನ್‌ ಪೊಲೀಸರಿಗೆ ನೀಡುತ್ತದೆ. ಅಂದು ಸಂಜೆಯ ಹೊತ್ತಿಗೆ, 2020ರಲ್ಲಿ ಯೋಗಿ ಆದಿತ್ಯನಾಥ್‌ ಸರಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕ್ರೂರ ಕಾನೂನು, ಮತಾಂತರ ನಿಷೇಧ ಕಾಯ್ದೆಯ ಸೆಕ್ಷನ್‌ 3 ಮತ್ತು 5(1) ಅಡಿಯಲ್ಲಿ ಸಲೂನ್‌ ಪೊಲೀಸ್‌ ಠಾಣೆಯಲ್ಲಿ ಸರೋಜ್‌ ವಿರುದ್ಧ FIR ದಾಖಲಾಗುತ್ತದೆ. ವಿಹೆಚ್‌ಪಿ ಸದಸ್ಯ ಸಂಜಯ್‌ ಕುಮಾರ್‌ ತಿವಾರಿ ಎಂಬ ವ್ಯಕ್ತಿಯ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಸರೋಜ್‌ ಆಮಿಷಗಳನ್ನು ಒಡ್ಡುವ ಮೂಲಕ ಮತ್ತು ವಂಚನೆಗಳನ್ನು ಎಸಗುವ ಮೂಲಕ ಬಡ ಹಿಂದೂಗಳನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಮತ್ತು ಅದಕ್ಕಾಗಿ ಆತ “ಚಂಗಾಯಿ ಸಭಾ” ಅಥವಾ ವಿಶೇಷ ಚಿಕಿತ್ಸಕ ಸಭೆಗಳನ್ನು ಅಕ್ರಮವಾಗಿ ನಡೆಸುತ್ತಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು.

ಕಿರುಕುಳ ನೀಡಲೆಂದೇ ಒಂದು ಕಾನೂನು

ನವೆಂಬರ್‌ 2020ರ ನಂತರ ಮತಾಂತರ ನಿಷೇಧ ಕಾನೂನಿನ ಅಡಿಯಲ್ಲಿ ರಾಜ್ಯದಲ್ಲಿ ದಾಖಲಾಗಿರುವ ಒಟ್ಟು 835ಕ್ಕೂ ಹೆಚ್ಚಿನ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಸಲ್ಪಟ್ಟಿರುವ ಒಟ್ಟು 2700 ಜನರಲ್ಲಿ ಸರೋಜ್‌ ಕೂಡ ಒಬ್ಬರು. (ಜುಲೈ 31, 2024ರ ವರೆಗಿನ ಅಧಿಕೃತ ಅಂಕಿಅಂಶಗಳ ಪ್ರಕಾರ). ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗರ ನಡುವಿನ ಪ್ರೇಮ ಮತ್ತು ವಿವಾಹಗಳನ್ನು ತಡೆಗಟ್ಟಲು, ಅದನ್ನು ಅಪರಾಧೀಕರಿಸಲು, ಮುಸ್ಲಿಂ ಗಂಡಸರನ್ನು ಮತ್ತು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಸಂಘ ಪರಿವಾರ ಸತತವಾಗಿ ನಡೆಸುತ್ತಿದ್ದ ಹಿಂಸಾತ್ಮಕ ಚಟುವಟಿಕೆಗಳಿಗೆ ಮತ್ತು ಅದರ ಕಾರ್ಯಕ್ರಮಗಳಿಗೆ ಕಾನೂನಿನ ಬಲ ನೀಡಲೆಂದು ಈ ಕಾನೂನನ್ನು ಜಾರಿಗೆ ತರಲಾಗಿತ್ತು. ಕೇಸರಿ ಪಕ್ಷ ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಕಿರುಚಿಕೊಳ್ಳುವ “ಲವ್‌ ಜಿಹಾದ್”‌ ಎಂಬ ಸುಳ್ಳು ಸೃಷ್ಟಿಯು ಕಾನೂನಿನ ಮೂಲಕ ಇನ್ನೂ ಸಾಬೀತಾಗಿಲ್ಲ ಎಂಬುದು ವಾಸ್ತವ. ಆದರೂ ಕೂಡ, ಬಡ ಮತ್ತು ಅಂಚಿನಲ್ಲಿರುವ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸಿ ಹಿಂದೂಗಳೆಂದೇ ಪರಿಗಣಿಸಲ್ಪಟ್ಟಿರುವ ದಲಿತ, ಬುಡಕಟ್ಟು ಮತ್ತು ಹಿಂದುಳಿದ ಜಾತಿಗಳ ಮೇಲೆ ಈ ಕಾನೂನನ್ನು ವ್ಯವಸ್ತಿತವಾಗಿ ಮತ್ತು ಎಗ್ಗಿಲ್ಲದೆ ಬಳಸಲಾಗಿದೆ. ಬ್ರಾಹ್ಮಣ್ಯ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಜನರಿಗೆ ಕಿರುಕುಳ ನೀಡಲೆಂದೇ ಈ ಕಾನೂನಿಡಿಯಲ್ಲಿ ಸರಕಾರವು ಪ್ರಕರಣ ದಾಖಲಿಸಿಕೊಳ್ಳುತ್ತಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು, ವಿರೋಧ ಪಕ್ಷಗಳು ಮತ್ತು ವಕೀಲರುಗಳು ಆರೋಪಿಸುತ್ತಿದ್ದಾರೆ.

ದಲಿತ ಸಮುದಾಯದ ಪಾಸಿ ಉಪಜಾತಿಯಲ್ಲಿ ಜನಿಸಿದ ಸರೋಜ್‌, ತಮ್ಮ ಮೇಲಿನ ಈ ದೌರ್ಜನ್ಯಕ್ಕೆ ಪ್ರಮುಖ ಕಾರಣ ತನ್ನ ಜಾತಿ ಗುರುತು ಎಂದು ಹೇಳುತ್ತಾರೆ. ರಾಜ್ಯದ ಎರಡನೇ ಅತಿದೊಡ್ಡ ಪರಿಶಿಷ್ಟ ಜಾತಿ ಸಮುದಾಯವಾದ ಪಾಸಿಗಳು, ಲಕ್ನೋದ ಪಕ್ಕದಲ್ಲಿರುವ ಅವಧ್ ಪ್ರದೇಶಗಳಲ್ಲಿ ಸುದೀರ್ಘವಾದ ಇತಿಹಾಸ, ಪರಂಪರೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದ್ದಾರೆ. ರಾಯ್ ಬರೇಲಿಯಲ್ಲಿರುವ ಸರೋಜ್ ಅವರ ಹುಟ್ಟೂರು ಸಲೂನ್, ಲಕ್ನೋದಿಂದ ಸುಮಾರು 110 ಕಿ.ಮೀ ಆಗ್ನೇಯಕ್ಕಿದೆ.

ಮತಾಂತರ ನಿಷೇಧ ಕಾನೂನು ಜಾರಿಗೆ ಬಂದ ನಂತರ, ಈ ತನಕ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರವೇ ತಾರ್ಕಿಕ ಅಂತ್ಯ ಕಂಡಿವೆ. ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ನವೆಂಬರ್ 2020 ರಿಂದ ಜುಲೈ 31, 2024 ರವರೆಗೆ, ಪೊಲೀಸರು 835 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. 1,682 ಜನರನ್ನು ಕಾನೂನುಬಾಹಿರ ಮತಾಂತರದ ಆರೋಪ ಹೊರಿಸಿ ಬಂಧಿಸಿದ್ದಾರೆ. ಇವುಗಳಲ್ಲಿ ಕೇವಲ ನಾಲ್ಕು ಪ್ರಕರಣಗಳಲ್ಲಿ ಮಾತ್ರ ಇಲ್ಲಿಯವರೆಗೆ ಶಿಕ್ಷೆ ವಿಧಿಸಲಾಗಿದೆ ಎಂದು ವರದಿ ಹೇಳುತ್ತದೆ. ಮತ್ತೊಂದೆಡೆ, ಬರೇಲಿಯ ನ್ಯಾಯಾಲಯವು ಇಬ್ಬರು ಹಿಂದೂ ಪುರುಷರನ್ನು ಕಾನೂನುಬಾಹಿರ ಮತಾಂತರ ಆರೋಪದಿಂದ ಖುಲಾಸೆಗೊಳಿಸಿದ್ದಲ್ಲದೆ, ನಕಲಿ ಗೋರಕ್ಷಕರ ಆಧಾರರಹಿತ ಸುಳ್ಳು ಆರೋಪದ ಮೇಲೆ ಬಂಧಿಸಿದ್ದಕ್ಕಾಗಿ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆದೇಶ ನೀಡಿದ ಕಥೆಯನ್ನು ಆಗಸ್ಟ್‌ 2024 ರಲ್ಲಿ ದಿ ವೈರ್ ಹೊರ ತರುವ ತನಕ ಪ್ರಕರಣದಿಂದ ಖುಲಾಸೆಗೊಂಡವರ ಬಗ್ಗೆ ವರದಿಗಳೇ ಬರುತ್ತಿರಲಿಲ್ಲ.

ಇಂತಹ ಸುಳ್ಳು ಆರೋಪಗಳು ಹೊರಿಸಲ್ಪಟ್ಟ ನಂತರ ನ್ಯಾಯಾಲಯಗಳು ಕಾನೂನು ಕ್ರಮಗಳನ್ನು ಪೂರೈಸಿದ ಕೆಲವೇ ಕೆಲವು ಪ್ರಕಣಗಳಲ್ಲಿ ಸರೋಜ್‌ ಅವರ ಪ್ರಕರಣವೂ ಒಂದು. ಸರೋಜ್‌ ವಿರುದ್ಧ ಪ್ರಕರಣ ದಾಖಲಾಗಿ ಸುಮಾರು 15 ತಿಂಗಳುಗಳ ನಂತರ, ಸೆಪ್ಟೆಂಬರ್‌ 2024ರಲ್ಲಿ ಪ್ರಕರಣವನ್ನು ಮುಂದುವರಿಸಲು ಸಾಕಷ್ಟು ಬಲವಾದ ಸಾಕ್ಷ್ಯಾಧಾರಗಳು ಇಲ್ಲವೆಂದು ಹೇಳಿ ಸ್ಥಳೀಯ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿತು. ವಿಚಾರಣಾ ಹಂತವನ್ನು ತಲುಪುವ ಮೊದಲೇ, ಪ್ರಾಸಿಕ್ಯೂಷನ್‌ ಹೆಣೆದ ಸುಳ್ಳು ಪ್ರಕರಣವು ಹೇಗೆ ಕುಸಿದು ಬಿತ್ತು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.

ಸರೋಜ್‌ ಅವರ ಪತ್ನಿ ಪ್ರಭಾ ಅವರ ತಲೆಗೆ ಬಿದ್ದ ಹೊಡೆತದ ಪರಿಣಾಮವನ್ನು ಈಗಲೂ ಅನುಭವಿಸುತ್ತಿರುವ ಕುರಿತು ಅವರು ನೆನೆಯುತ್ತಾರೆ. ಹಿಂದಿನಂತೆ ಕೆಲಸ ಮಾಡಲು ಆಕೆಯಿಂದ ಸಾಧ್ಯವಾಗುತ್ತಿಲ್ಲ. ಮನೆ ಮತ್ತು ನಾಲ್ವರು ಮಕ್ಕಳನ್ನು ನೋಡಿಕೊಳ್ಳಲು ಆಕೆ ಹೆಣಗಾಡುತ್ತಿದ್ದಾರೆ. ಸರೋಜ್‌ ದಂಪತಿಗೆ 13 ಮತ್ತು 9 ವರ್ಷದ ಇಬ್ಬರು ಹೆಣ್ಣುಮಕ್ಕಳು ಹಾಗೂ 16 ಮತ್ತು 7 ವರ್ಷದ ಇಬ್ಬರು ಗಂಡುಮಕ್ಕಳಿದ್ದಾರೆ. “ನನ್ನ ಹೆಂಡತಿಯ ತಲೆ ಒಡೆದಿತ್ತು. ನಮ್ಮ ಮೇಲೆ ದಾಳಿ ನಡೆದು ಮೂರ್ನಾಲ್ಕು ತಿಂಗಳ ನಂತರ ನಮಗೆ ನಿಜವಾದ ಸಮಸ್ಯೆಗಳು ಪ್ರಾರಂಭವಾದವು. ನಾನು ಆಕೆಯನ್ನು ಒಂದು ವಾರದವರೆಗೆ ರಾಯ್ ಬರೇಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಆಕೆ ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಅವಳ ದೃಷ್ಟಿ ಕುಗ್ಗಿದೆ. ಕೆಲವೊಮ್ಮೆ, ಅವಳು ದೀರ್ಘಸಮಯ ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ಅವಳೀಗ ಹಳೆಯ ವ್ಯಕ್ತಿಯೇ ಅಲ್ಲ.” ಎಂದು ಸರೋಜ್ ಹತಾಶೆಯಿಂದ ಹೇಳುತ್ತಾರೆ.

ಹಲ್ಲೆಗೊಳಗಾದ ಪ್ರಭಾ

ಜಾತಿ ದಬ್ಬಾಳಿಕೆಯ ವಿರುದ್ಧದ ಹೋರಾಟಕ್ಕೆ ತೆರಬೇಕಾದ ಬೆಲೆ

ಸರೋಜ್ ಒಬ್ಬ ಹಿಂದೂ ದಲಿತನಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ಅವರು ಯೇಸುಕ್ರಿಸ್ತನ ತಾತ್ವಿಕತೆ ಮತ್ತು ಬೋಧನೆಗಳಿಂದ ಬಹಳವೇ ಪ್ರಭಾವಿತರಾಗಿದ್ದಾರೆ. ಸರೋಜ್‌ ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ಯೇಸುಕ್ರಿಸ್ತನ ಬಗ್ಗೆ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು. ನಂತರ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಆರಂಭದಲ್ಲಿ, ಪ್ರಯಾಗ್‌ರಾಜ್‌ನಲ್ಲಿರುವ ಸಮಾನ ಮನಸ್ಕ ಜನರು ಸರೋಜ್ ಅವರನ್ನು ಕ್ರಿಸ್ತನ ಕಡೆಗೆ ಆಕರ್ಷಿಸಿದರು. ಆದರೆ ನಿಯಮಿತವಾಗಿ ಸಭೆಗಳು ಮತ್ತು ಪ್ರಾರ್ಥನಾ ಕಾರ್ಯಕ್ರಮಗಳಿಗಾಗಿ ಅಲ್ಲಿಯ ತನಕ ಪ್ರಯಾಣಿಸುವುದು ಕಷ್ಟಕರ ಮತ್ತು ದುಬಾರಿಯೂ ಆಗಿತ್ತು. ಆದ್ದರಿಂದ, ಒಂದು ದಿನ, ಅವರು ತಮ್ಮ ಸ್ವಂತ ಮನೆಯಲ್ಲಿ, ತನ್ನ ಕುಟುಂಬ ಸದಸ್ಯರೊಂದಿಗೆ ಪ್ರಾರ್ಥನಾ ಸಭೆಗಳನ್ನು ನಡೆಸಲು ನಿರ್ಧರಿಸುತ್ತಾರೆ. ಆದರೆ, ಅದರಲ್ಲಿ ಜನರ ಸಕ್ರಿಯ ಪಾಲ್ಗೊಳ್ಳುವಿಕೆ ಕಂಡು ಅವರು ಚಕಿತರಾಗುತ್ತಾರೆ. ಹಾಗಾಗಿ, ನಿಯಮಿತವಾಗಿ ಈ ಸಭೆಗಳನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸುತ್ತಾರೆ. ಜನರ ಪಾಲ್ಗೊಳ್ಳುವಿಕೆ ಹೆಚ್ಚಾಗತೊಡಗಿದಂತೆ ಅವರು ಪ್ರಾರ್ಥನೆಗಾಗಿ ಸಣ್ಣದೊಂದು ಶೆಡ್‌ ನಿರ್ಮಿಸುತ್ತಾರೆ. ಸರೋಜ್ ಔಪಚಾರಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳದೆ, ತನ್ನ ಹಿಂದೂ ಗುರುತನ್ನು ಮುಂದುವರಿಸುತ್ತಿದ್ದರೂ, ಅವರು ಯೇಸುವಿನ ಚಿಕಿತ್ಸಕ ಶಕ್ತಿಗಳಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುತ್ತಾರೆ. ಯೇಸುಕ್ರಿಸ್ತನೊಂದಿಗಿನ ತನ್ನ ಸಾಮೀಪ್ಯವು ತನ್ನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದಿತು ಮತ್ತು ಮದ್ಯಪಾನದಂತಹ ಅನೇಕ ದುರ್ಗುಣಗಳನ್ನು ತೊಡೆದುಹಾಕಲು ಸಹಾಯ ಮಾಡಿತು ಎಂದು ಸರೋಜ್ ನಂಬುತ್ತಾರೆ.

“ಪೊಲೀಸರು ನಮ್ಮ ಶೆಡ್‌ ಬಳಿಯಿಂದ ಹಾದು ಹೋಗುತ್ತಿದ್ದರು, ಆದರೆ ಅವರು ಎಂದೂ ನಮಗೆ ತೊಂದರೆ ನೀಡಲಿಲ್ಲ” ಎಂದು ಅವರು ಹೇಳುತ್ತಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆರಂಭದಲ್ಲಿ ನನಗೆ ಕೆಲವು ಅಡೆತಡೆಗಳಿದ್ದವು. ಇದು ಇತರ ಧರ್ಮಗಳಂತೆಯೇ ಕೆಲವು ಪರಿಹಾರಗಳು ಮತ್ತು ಆಚರಣೆಗಳನ್ನು ಮಾತ್ರ ಸೂಚಿಸುತ್ತವೆ ಎಂದು ನಾನು ಭಾವಿಸಿದ್ದೆ. ಪ್ರೇತಬಾಧೆ ದೂರ ಮಾಡುವಂತಹ ಅದೇ ಗೀಳು ಇಲ್ಲೂ ಇದೆ ಎಂದು ಅನಿಸಿತ್ತು. ಆದರೆ ಯೇಸುವಿನ ಸಂದೇಶ ಸಂಪೂರ್ಣವಾಗಿ ವಿಭಿನ್ನವಾಗಿತ್ತು.”

ಸರೋಜ್ ವಿರುದ್ಧದ ಎಫ್‌ಐಆರ್ ಕೇವಲ ಅಸ್ಪಷ್ಟ ಆರೋಪಗಳನ್ನು ಮಾತ್ರ ಆಧರಿಸಿದ್ದಾಗಿತ್ತು. ಪೊಲೀಸ್ ದೂರಿನಲ್ಲಿ, ತಿವಾರಿ ಯಾವುದೇ ನಿರ್ದಿಷ್ಟ ಕಾನೂನುಬಾಹಿರ ಮತಾಂತರದ ಘಟನೆಯನ್ನು ಉಲ್ಲೇಖಿಸಿರಲಿಲ್ಲ. ಅಥವಾ ಮತಾಂತರಕ್ಕೆ ಒಳಗಾದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿರಲಿಲ್ಲ. ಕಳೆದ ಐದು ವರ್ಷಗಳಿಂದ, ಸರೋಜ್ ಅವರು ಅಧಿಕಾರಿಗಳ ಪೂರ್ವಾನುಮತಿಯಿಲ್ಲದೆ ಮಂಗಳವಾರ ಮತ್ತು ಭಾನುವಾರದಂದು ಕೊದ್ರಾದಲ್ಲಿ “ಚಂಗಾಯಿ ಸಭೆಗಳನ್ನು” ಆಯೋಜಿಸುತ್ತಿದ್ದಾರೆ ಎಂಬುದು ತಿವಾರಿಯ ಆರೋಪವಾಗಿತ್ತು. ಈ ಸಭೆಗಳ ಮೂಲಕ, ಸರೋಜ್ ಹಿಂದೂ ಧರ್ಮದ ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ “ದಾರಿತಪ್ಪಿಸುತ್ತಿದ್ದಾರೆ ಮತ್ತು ಜನರನ್ನು ಗೊಂದಲಗೊಳಿಸುತ್ತಿದ್ದಾರೆ” ಎಂಬುದು ತಿವಾರಿಯ ಆರೋಪ.

ಯೇಸುವಿನ ಬೋಧನೆಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಶಿಕ್ಷಿಸಲು ಮತ್ತು ಅಂತಹ ಪ್ರಾರ್ಥನಾ ಸಭೆಗಳಲ್ಲಿ ಇತರರು ಭಾಗವಹಿಸದಂತೆ ತಡೆಯಲು ಬಲಪಂಥೀಯ ಕಾರ್ಯಕರ್ತರು ತನ್ನನ್ನು ಗುರಿಯಾಗಿಸಿಕೊಂಡಿದ್ದರೆಂದು ಸರೋಜ್ ಹೇಳುತ್ತಾರೆ. “ನನಗೆ ಯಾರೊಂದಿಗೂ ಯಾವುದೇ ದ್ವೇಷ ಅಥವಾ ಸಂಘರ್ಷವಿರಲಿಲ್ಲ. ಆದರೆ ಅದು ನನ್ನ ಜಾತಿಯ ಕಾರಣದಿಂದಾಗಿತ್ತು ಎಂದು ನಾನು ಭಾವಿಸುತ್ತೇನೆ. ನೆರೆಹೊರೆಯಲ್ಲಿ ಕಾರು ನಿಲ್ಲಿಸಿಕೊಂಡು, ಇಷ್ಟೊಂದು ಜನರು ಅದು ಹೇಗೆ ಪ್ರಾರ್ಥನಾ ಸಭೆಗೆ ಆಕರ್ಷಿತರಾಗುತ್ತಾರೆ ಎಂದು ಕೆಲವರಿಗೆ ಅಸೂಯೆ ಹುಟ್ಟಿತ್ತು.” ಎಂದು ಅವರು ಹೇಳುತ್ತಾರೆ.

ಸರೋಜ್ ಅವರ ಕ್ರಿಶ್ಚಿಯನ್ ತಾತ್ವಿಕತೆಯೊಂದಿಗಿನ ಹೊಸ ಆದರೆ ಸಂಕೀರ್ಣವಾದ ಈ ಬಾಂಧವ್ಯದಲ್ಲಿ ಜಾತಿ ದಬ್ಬಾಳಿಕೆಯ ವಿರುದ್ಧದ ದಲಿತರ ಐತಿಹಾಸಿಕವಾದ ನಿರಂತರ ಪ್ರತಿರೋಧ ಮತ್ತು ಘನತೆಯ ಹುಡುಕಾಟವೂ ಇದೆ. ಸಭೆಗಳನ್ನು ನಡೆಸಲು ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಲಿಲ್ಲ ಎಂದು ಅವರು ಒಪ್ಪಿಕೊಂಡರೂ, ಧಾರ್ಮಿಕ ಮತಾಂತರದ ಆರೋಪವನ್ನು ಅವರು ನಿರಾಕರಿಸುತ್ತಾರೆ. ಜೊತೆಗೆ ಯೇಸುವಿನಲ್ಲಿ “ನಂಬಿಕೆ” ಇಡುವುದನ್ನು ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಔಪಚಾರಿಕವಾಗಿ ಮತಾಂತರವಾಗುವುದನ್ನು ಪ್ರತ್ಯೇಕವಾಗಿ ಕಾಣಬೇಕೆಂದು ಅವರು ಹೇಳುತ್ತಾರೆ.

“ಕೆಳಜಾತಿಯ ಜನರು ಚರ್ಚ್‌ಗಳಿಗೆ ಹೋಗಲು ಪ್ರಾರಂಭಿಸುವಾಗ, ಅವರು ಮುನ್ನಡೆ ಸಾಧಿಸಲು ಮತ್ತು ಶಿಕ್ಷಣ ಪಡೆಯಲು ಪ್ರಾರಂಭಿಸುತ್ತಾರೆ. ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುತ್ತಾರೆ ಮತ್ತು ಮುಖ್ಯವಾಗಿ, ತಮ್ಮ ಹಕ್ಕುಗಳಿಗಾಗಿ ಹೋರಾಡಲು ಕಲಿಯುತ್ತಾರೆ” ಎಂಬುದು ಸರೋಜ್ ಅವರ ಸ್ಪಷ್ಟ ಮಾತು. ಆದರೆ ಸಮಾಜದಲ್ಲಿರುವ ಊಳಿಗಮಾನ್ಯ ಮತ್ತು ಜಾತಿವಾದಿ ಅಂಶಗಳು ಇದನ್ನು ಸಹಿಸುವುದಿಲ್ಲ ಎಂದೂ ಅವರು ಹೇಳುತ್ತಾರೆ. “ನಾವು ಅನಕ್ಷರಸ್ಥರಾಗಿ ಮತ್ತು ಅಜ್ಞಾನಿಗಳಾಗಿ ಉಳಿಯಬೇಕೆಂದು ಅವರು ಬಯಸುತ್ತಾರೆ. ಶಾಲೆಗಳಲ್ಲಿ ಓದುವ ಬದಲು ನಾವು ಅವರ ಹೊಲಗಳಲ್ಲಿ ಕೆಲಸ ಮಾಡಬೇಕೆಂಬುದೇ ಅವರ ಬಯಕೆ.”

ಈ ಪ್ರಕರಣದ ಹಿಂದೆ ವೈಯಕ್ತಿಕ ದ್ವೇಷವೂ ಇತ್ತೆಂದು ಸರೋಜ್‌ ಹೇಳುತ್ತಾರೆ. ಜೂನ್‌ 15, 2023ರಂದು, ಅಂದರೆ ಘಟನೆ ನಡೆಯುವ ಹತ್ತು ದಿನಗಳ ಮೊದಲು, ತಿವಾರಿ ತಮ್ಮ ಬೈಕ್‌ ರಿಪೇರಿಗೆಂದು ಸರೋಜ್‌ ಅವರ ಗ್ಯಾರೇಜಿಗೆ ಬಂದಿದ್ದ. ಬೈಕ್‌ ರಿಪೇರಿಗಾಗಿ ಸರೋಜ್‌ 600 ರೂಪಾಯಿಗಳನ್ನು ಕೇಳಿದ್ದರು. ಆದರೆ, ಸರೋಜ್‌ ಹಣ ಪಾವತಿಸುವಂತೆ ಕೇಳಿಕೊಂಡಾಗ, ತಿವಾರಿ ಕೆಂಡಾಮಂಡಲನಾಗಿ ಪ್ರತಿಕ್ರಿಯೆ ನೀಡಿದ್ದರು ಮತ್ತು ತನ್ನ ಭಜರಂಗದಳದ ಹಿನ್ನೆಲೆಯನ್ನು ಹೇಳಿಕೊಂಡು “ನನ್ನ ಬಳಿ ಹಣ ಕೇಳುತ್ತೀಯಾ ಪಿ…. (ಜಾತಿವಾದಿ ಬೈಗುಳ)” ಎಂದು ಬೈಯ್ದಿದ್ದ. ಇದನ್ನು ಸರೋಜ್‌ ಜಾಮೀನು ಅರ್ಜಿ ಸಲ್ಲಿಸುವಾಗ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸುತ್ತಾರೆ.  ಘಟನೆಯ ಮುಂದುವರಿಕೆಯಾಗಿಯೇ ತಿವಾರಿ ತನ್ನ ಮೇಲೆ ಸುಳ್ಳಾರೋಪ ಹೊರಿಸಿದ್ದನೆಂದು ಸರೋಜ್‌ ಹೇಳುತ್ತಾರೆ.

ಪೊಲೀಸರೇ ಉಲ್ಲಂಘಿಸುತ್ತಿರುವ ಮತಾಂತರ ನಿಷೇಧ ಕಾನೂನು

ಸಿಆರ್‌ಪಿಸಿಯ ಸೆಕ್ಷನ್ 227ರ ಅಡಿಯಲ್ಲಿ ಸರೋಜ್ ಬಿಡುಗಡೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಸೆಕ್ಷನ್‌ ಪ್ರಕಾರ, ಲಭ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಕ್ರಿಮಿನಲ್ ಮೊಕದ್ದಮೆಗೆ ಸಾಕಷ್ಟು ಆಧಾರವಿಲ್ಲ ಎಂದು ನ್ಯಾಯಾಲಯ ಭಾವಿಸಿದರೆ ನ್ಯಾಯಾಧೀಶರಿಗೆ ಆರೋಪಿಯನ್ನು ಬಿಡುಗಡೆಗೊಳಿಸುವ ಅಧಿಕಾರವಿದೆ. ಸೆಪ್ಟೆಂಬರ್ 21, 2024ರಂದು ಪ್ರಕರಣದ ಅರ್ಹತೆಯ ಕುರಿತು ವಿವರವಾದ ಚರ್ಚೆಯ ನಂತರ, ರಾಯ್ ಬರೇಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತ್ ಕುಮಾರ್ ಪಾಂಡೆ ಸರೋಜ್ ಅವರ ಬಿಡುಗಡೆ ಅರ್ಜಿಯನ್ನು ಅಂಗೀಕರಿಸುತ್ತಾರೆ. ಕಾನೂನುಬಾಹಿರ ಮತಾಂತರದ ಆರೋಪದಡಿಯಲ್ಲಿ ಸರೋಜ್ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಆಧಾರವಿಲ್ಲ ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ.

ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿರುವ ಹಿಂದುತ್ವವಾದಿ ಬಲಪಂಥೀಯ ವ್ಯಕ್ತಿಗಳು

ಸರೋಜ್ ವಿರುದ್ಧದ ಪ್ರಕರಣವು ಉತ್ತರ ಪ್ರದೇಶದ ಮತಾಂತರ ನಿಷೇಧ ಕಾನೂನಿನ ಕೆಲವು ಮುಖ್ಯ ಅಂಶಗಳನ್ನು ಉಲ್ಲಂಘಿಸಿದೆ. ಕಾನೂನಿನ ಸೆಕ್ಷನ್ 3ರ ಪ್ರಕಾರ ತಪ್ಪು ನಿರೂಪಣೆ, ಬಲವಂತ, ವಂಚನೆ, ಅನಗತ್ಯ ಪ್ರಭಾವ, ಆಮಿಷ, ದಬ್ಬಾಳಿಕೆ ಅಥವಾ ಅಭ್ಯಾಸದ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ನಿಷೇಧಿಸುತ್ತದೆ. ಮೇಲಿನ ಅಪರಾಧಕ್ಕೆ ಸೆಕ್ಷನ್ 5(1) ಶಿಕ್ಷೆಯನ್ನು ಕೂಡ ಸೂಚಿಸುತ್ತದೆ. ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ. ಐದು ವರ್ಷಗಳವರೆಗೂ ಇದನ್ನು ವಿಸ್ತರಿಸಬಹುದು. ಬಲಿಪಶುವಾದ ವ್ಯಕ್ತಿ ಮಹಿಳೆ, ಅಪ್ರಾಪ್ತ, ದಲಿತ ಅಥವಾ ಬುಡಕಟ್ಟು ಜನಾಂಗದವರಾಗಿದ್ದರೆ, ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ. ಇದನ್ನು ಹತ್ತು ವರ್ಷಗಳವರೆಗೂ ವಿಸ್ತರಿಸಬಹುದು ಮತ್ತು 25,000 ರೂ. ದಂಡವನ್ನೂ ವಿಧಿಸಬಹುದು. ಕಾನೂನಿನ ಸೆಕ್ಷನ್ 2(1) ಕಾನೂನುಬದ್ಧವಾಗಿ ಮತಾಂತರವನ್ನು ನಡೆಸಲು ಯಾರು ಅಧಿಕಾರ ಹೊಂದಿದ್ದಾರೆ ಎಂಬುದನ್ನು ವ್ಯಾಖ್ಯಾನಿಸುತ್ತದೆ. “ಧರ್ಮ ಪರಿವರ್ತಕ” ಅಂದರೆ ಯಾವುದೇ ಧರ್ಮದ ವ್ಯಕ್ತಿ, ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವ ಯಾವುದೇ ಕ್ರಿಯೆಯನ್ನು ಮಾಡುವವನು ಮತ್ತು ಆತ ಫಾದರ್, ಕರ್ಮಕಾಂಡಿ, ಮೌಲ್ವಿ ಅಥವಾ ಮುಲ್ಲಾ ಮುಂತಾದ ಯಾವುದೇ ಹೆಸರಿನ ವ್ಯಕ್ತಿಯೂ ಆಗಿರಬಹುದು ಎಂದು ಕಾನೂನು ಹೇಳುತ್ತದೆ. ಸರೋಜ್ ತಾನೊಬ್ಬ “ಧರ್ಮ ಪರಿವರ್ತಕ” ಅಲ್ಲ ಮತ್ತು ಆದ್ದರಿಂದಲೇ ಜನರನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸುವ ಅಧಿಕಾರ ತನಗಿಲ್ಲ ಎಂದು ವಾದಿಸುತ್ತಾರೆ.

ಮುಖ್ಯವಾಗಿ, ಕಾನೂನುಬಾಹಿರ ಮತಾಂತರದ ವಿರುದ್ಧ ದೂರು ದಾಖಲಿಸಲು ಯಾರು ಅಧಿಕಾರ ಹೊಂದಿದ್ದಾರೆ ಎಂಬುದನ್ನು ವ್ಯಾಖ್ಯಾನಿಸುವ 2021 ರ ಕಾಯ್ದೆಯ ಸೆಕ್ಷನ್ 4ರೊಂದಿಗೆ ಎಫ್‌ಐಆರ್ ತಾಳೆಯಾಗುವುದಿಲ್ಲ. ಕಾನೂನಿನ ಸೆಕ್ಷನ್ 4 ರಲ್ಲಿ “ನೊಂದ ವ್ಯಕ್ತಿ, ಅವನ/ಳ ಪೋಷಕರು, ಸಹೋದರ, ಸಹೋದರಿ ಅಥವಾ ರಕ್ತಸಂಬಂಧ, ಮದುವೆ ಅಥವಾ ದತ್ತು ಸ್ವೀಕಾರದ ಮೂಲಕ ಅವನಿಗೆ/ಳಿಗೆ ಸಂಬಂಧಿಸಿದ ಯಾವುದೇ ವ್ಯಕ್ತಿ” ಎಫ್‌ಐಆರ್ ದಾಖಲಿಸಬಹುದು ಎಂದು ಹೇಳುತ್ತದೆ.

ಅದಾಗ್ಯೂ, ಅಲಹಾಬಾದ್ ಹೈಕೋರ್ಟ್‌ನ ಹಲವಾರು ಜ್ಞಾಪನೆಗಳ ಹೊರತಾಗಿಯೂ, ಉತ್ತರ ಪ್ರದೇಶದ ಪೊಲೀಸರು ಮೂರನೇ ವ್ಯಕ್ತಿಗಳಿಗೆ – ವಿಶೇಷವಾಗಿ ತೀವ್ರವಾದಿ ಹಿಂದುತ್ವ ಶಕ್ತಿಗಳಿಗೆ, ಭಾರತೀಯ ಜನತಾ ಪಕ್ಷದ ಸದಸ್ಯರುಗಳಿಗೆ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ – ಅವರು ಯಾವುದೇ ರೀತಿಯಲ್ಲಿ ತೊಂದರೆಗೊಳಗಾಗದಿದ್ದರೂ ಅಥವಾ ಬಲವಂತದ ಮತಾಂತರಕ್ಕೆ ಬಲಿಯಾಗದಿದ್ದರೂ ಸಹ ದೂರು ದಾಖಲಿಸಲು ನಿರ್ಲಜ್ಜವಾಗಿ ಅವಕಾಶ ನೀಡುತ್ತಿದ್ದಾರೆ. ಈ ಕಾನೂನು ಸಮಸ್ಯೆಯನ್ನು ನಿಭಾಯಿಸಲೆಂದು, ಆದಿತ್ಯನಾಥ್ ಸರ್ಕಾರವು ಜುಲೈ 2024ರಲ್ಲಿ ಕಾನೂನಿನ ಸೆಕ್ಷನ್ 4 ಅನ್ನು ತಿದ್ದುಪಡಿ ಮಾಡಿ ಅದರ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಆ ಮೂಲಕ “ಯಾವುದೇ ವ್ಯಕ್ತಿ”ಗೆ ಕಾನೂನುಬಾಹಿರ ಮತಾಂತರದ ವಿರುದ್ಧ ದೂರು ದಾಖಲಿಸಲು ಅವಕಾಶ ಮಾಡಿಕೊಡುತ್ತದೆ. ಅಂದರೆ, ಒಬ್ಬ ವ್ಯಕ್ತಿ ತಾನು ನೊಂದವನಲ್ಲದಿದ್ದರೂ ಅಥವಾ ನೊಂದವರ ಸಂಬಂಧಿಯಲ್ಲದಿದ್ದರೂ ಸಹ ದೂರು ದಾಖಲಿಸಬಹುದು.

ಸರೋಜ್ ವಿರುದ್ಧದ ಎಫ್‌ಐಆರ್ ಒಂದು “ಕಾನೂನುಬಾಹಿರ ಡಾಕ್ಯುಮೆಂಟ್”

ಸರೋಜ್ ಅವರ ಪ್ರಕರಣದಲ್ಲಿ, ಕಾನೂನುಬಾಹಿರ ಮತಾಂತರಕ್ಕೆ ಬಲಿಪಶುವಾದ ವ್ಯಕ್ತಿಗಳು ಇರಲಿಲ್ಲ ಅಥವಾ ಯಾವುದೇ ನೊಂದ ವ್ಯಕ್ತಿ ಎಫ್‌ಐಆರ್ ದಾಖಲಿಸಿರಲಿಲ್ಲ. ತನಿಖೆಯ ಸಮಯದಲ್ಲಿ, ಸರೋಜ್ ಅವರಿಂದ ಹಳೆಯ ಒಡಂಬಡಿಕೆಯ ಪ್ರತಿ, ಬಿಲೀವರ್ಸ್ ಬೈಬಲ್ ಕಾಮೆಂಟರಿ ನ್ಯೂ ಟೆಸ್ಟಮೆಂಟ್ (ಭಾಗ 1)ರ ಪ್ರತಿ, ಒಂದು ಡೈರಿ, ಒಂದು ರಿಜಿಸ್ಟರ್ ಮತ್ತು ಒಂಬತ್ತು ಲಕೋಟೆಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು. ಡೈರಿಯಲ್ಲಿ ಪ್ರಾರ್ಥನಾ ಸಭೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿದ್ದ ಜನರ ಹೆಸರುಗಳು ಮತ್ತು ಫೋನ್ ಸಂಖ್ಯೆಗಳನ್ನು ಬರೆದಿಡಲಾಗಿತ್ತು ಎಂದು ಸರೋಜ್ ಹೇಳುತ್ತಾರೆ.

ಪ್ರಾಸಿಕ್ಯೂಷನ್ ಅರೆ ಡಜನ್‌ಗೂ ಹೆಚ್ಚು ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು – ಮೇವಾ ಲಾಲ್ ಭಾರತಿ, ವಿನೋದ್ ಮೌರ್ಯ, ಸುರೇಶ್ ಸಿಂಗ್, ಕುಲೈ, ದ್ವಿಜ, ಸೀತಾ ಪಟೇಲ್, ಸೂರಜ್ ಪಾಲ್ ಕೌಶಲ್. ಅವರಲ್ಲಿ ಬಹುತೇಕರು ಬಜರಂಗದಳಕ್ಕೆ ಸೇರಿದವರು. ಸರೋಜ್ ಅವರು “ಚಂಗಾಯಿ ಸಭೆಗಳನ್ನು” ನಡೆಸುತ್ತಿದ್ದರು, ಅಲ್ಲಿ ಅವರು ಕ್ರಿಶ್ಚಿಯನ್ ನಂಬಿಕೆ ಮತ್ತು ಕ್ರಿಸ್ತನ ಬಗ್ಗೆ “ಹೆಚ್ಚು ಮಾತನಾಡುತ್ತಿದ್ದರು” ಮತ್ತು ಹಿಂದೂ ದೇವರುಗಳ ಬಗ್ಗೆ ಟೀಕಿಸುತ್ತಿದ್ದರು ಎಂದು ಅವರೆಲ್ಲ ಒಂದೇ ರಾಗದಲ್ಲಿ ಸಾಕ್ಷಿ ಹೇಳಿದ್ದರು.

ಆದರೆ, ನ್ಯಾಯಾಧೀಶರು ಈ ಹೇಳಿಕೆಗಳಿಗೆ ಯಾವ ಬೆಲೆಯನ್ನೂ ನೀಡುವುದಿಲ್ಲ. ತನಿಖಾಧಿಕಾರಿಯು ನೊಂದ ಅಥವಾ ಮೋಸದಿಂದ ಮತಾಂತರಗೊಂಡ ಒಬ್ಬನೇ ಒಬ್ಬ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಲು ವಿಫಲರಾಗಿದ್ದಾರೆ ಎಂಬುದರ ಕಡೆಗೆ ನ್ಯಾಯಾಧೀಶರು ಗಮನ ಸೆಳೆಯುತ್ತಾರೆ. ನ್ಯಾಯಾಧೀಶರಾದ ಪಾಂಡೆ ತಮ್ಮ ಆದೇಶದಲ್ಲಿ, ಪ್ರಾಸಿಕ್ಯೂಷನ್ ಹಾಜರುಪಡಿಸಿದ ಯಾವುದೇ ಸಾಕ್ಷಿಗಳು ಕಾನೂನುಬಾಹಿರ ಮತಾಂತರದ ಬಗ್ಗೆ ಮಾತನಾಡಲಿಲ್ಲ ಎಂದು ಬೊಟ್ಟು ಮಾಡುತ್ತಾರೆ. ಸರೋಜ್ ತನ್ನ ಮನೆಯಲ್ಲಿ ಜನರನ್ನು ಒಟ್ಟುಗೂಡಿಸಿ ಕ್ರಿಶ್ಚಿಯನ್ ಧರ್ಮವನ್ನು ಕೊಂಡಾಡುತ್ತಿದ್ದರು ಎಂದು ಮಾತ್ರ ದಾಖಲಿಸಿದ್ದಾರೆಂದು ಅವರು ಹೇಳುತ್ತಾರೆ.

ಸರೋಜ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ “ಕಾನೂನುಬಾಹಿರ ಡಾಕ್ಯುಮೆಂಟ್” ಎಂದು ನ್ಯಾಯಾಧೀಶ ಪಾಂಡೆ ತೀರ್ಮಾನಿಸುತ್ತಾರೆ. ಈ ವಿಷಯದಲ್ಲಿ ತಿವಾರಿ ಅವರಿಗೆ ದೂರು ದಾಖಲಿಸುವ ಹಕ್ಕಿಲ್ಲ ಮತ್ತು ಸರೋಜ್ ವಿರುದ್ಧ ಎಫ್‌ಐಆರ್ ದಾಖಲಿಸುವ ಹಕ್ಕು ಪೊಲೀಸರಿಗೆ ಇಲ್ಲ ಎಂದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳುತ್ತಾರೆ. ತಿವಾರಿ ಅವರು ನೊಂದ ವ್ಯಕ್ತಿಯಾಗಿರಲಿಲ್ಲ ಅಥವಾ ಯಾವುದೇ ನೊಂದ ವ್ಯಕ್ತಿಯ ಸಂಬಂಧಿಯೂ ಆಗಿರಲಿಲ್ಲ.

ಎಫ್‌ಐಆರ್‌ನಲ್ಲಿ ಯಾವ ವ್ಯಕ್ತಿ ಅಥವಾ ಸಮುದಾಯವನ್ನು ಮತಾಂತರಿಸಲಾಗುತ್ತಿದೆ ಎಂಬುದರ ಕುರಿತೂ ಸ್ಪಷ್ಟಣೆಯಿಲ್ಲ ಎಂಬುದನ್ನೂ ನ್ಯಾಯಾಧೀಶರು ಗಮನಿಸುತ್ತಾರೆ. ಸರೋಜ್ ಅವರು ತಪ್ಪು ನಿರೂಪಣೆ, ಆಮಿಷ, ಬಲಪ್ರಯೋಗ, ಅನಗತ್ಯ ಪ್ರಭಾವ ಅಥವಾ ಒತ್ತಡದ ಮೂಲಕ ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಿಸಿದ್ದಾರೆ ಅಥವಾ ಮತಾಂತರಿಸಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ನ್ಯಾಯಾಧೀಶರಾದ ಪಾಂಡೆ ಗಮನಿಸುತ್ತಾರೆ. ಬೈಬಲ್‌ನಂತಹ ಧಾರ್ಮಿಕ ಪುಸ್ತಕಗಳನ್ನು ಒಬ್ಬ ವ್ಯಕ್ತಿಯ ಮನೆಯಿಂದ ವಶಪಡಿಸಿಕೊಂಡ ಮಾತ್ರಕ್ಕೆ 2021ರ ಕಾಯ್ದೆಯಡಿಯಲ್ಲಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುವುದಿಲ್ಲ ಎಂದು ನ್ಯಾಯಾಧೀಶರು ಒತ್ತಿ ಹೇಳುತ್ತಾರೆ.

ಗದ್ದಲದ ನಂತರ ನಡೆದ ಪ್ರಾರ್ಥನಾ ಸಭೆ

ಮತಾಂತರ ವಿರೋಧಿ ಪ್ರಕರಣವು ಸರೋಜ್ ಅವರ ಹೋರಾಟದ ಒಂದು ಭಾಗ ಮಾತ್ರ. ಬಲಪಂಥೀಯ ಕಾರ್ಯಕರ್ತರು ಅವರ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿದ ನಂತರ, ಹಲ್ಲೆಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲು ಸರೋಜ್‌ ಬಹಳವೇ ಹೆಣಗಾಡಿದ್ದರು. ಅವರು ಕಛೇರಿಯಿಂದ ಕಛೇರಿಗೆ ಅಲೆದಾಡಿದ್ದರು. ಕೊನೆಗೆ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರ ನಂತರ ಫೆಬ್ರವರಿ 2024 ರಲ್ಲಿ, ಏಳು ಜನರು ಮತ್ತು ಗುರುತಿಸಲಾಗದ ಇತರ ಹತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ. ಆರೋಪಿಗಳಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ಸುರೇಶ್ ಸಿಂಗ್ ಮತ್ತು ಅವರ ಸಹಚರರು ಎಂದು ಹೇಳಲಾಗುವ ಪಪ್ಪು ಕೌಶಲ್, ರಾಮ್ ಸಜೀವನ್, ಸತೀಶ್ ಜೋಶಿ, ಅಮನ್ ಸಿಂಗ್, ಶಿವ ಮತ್ತು ಧೀರಜ್ ಕೌಶಲ್ ಸೇರಿದ್ದಾರೆ. ಅವರುಗಳ ವಿರುದ್ಧ ಕೊಲೆಯತ್ನ, ಹಲ್ಲೆ ಮತ್ತು ಧಾರ್ಮಿಕ ಸಭೆಗಳಿಗೆ ತೊಂದರೆ ನೀಡುವುದು ಸೇರಿದಂತೆ ಇತರ ಅಪರಾಧಗಳನ್ನು ಹೊರಿಸಲಾಗುತ್ತದೆ. ಮತಾಂತರದ ಸುಳ್ಳು ಆರೋಪದಿಂದ ಸರೋಜ್‌ ಅವರನ್ನು ಖುಲಾಸೆಗೊಳಿಸಲಾಗಿದ್ದರೂ, ಈ ಪ್ರಕರಣದಲ್ಲಿ ನ್ಯಾಯ ದೊರೆಯುವ ಭರವಸೆಯನ್ನು ಅವರು ಹೊಂದಿಲ್ಲ.

ದಿ ವೈರ್ ತಿವಾರಿ ಅವರನ್ನು ಮಾತನಾಡಿಸಿತು. ಆತ ಸರೋಜ್‌ ಮೇಲೆ ದೂರು ದಾಖಲಿಸಿದ್ದು ತಾನಲ್ಲ, ಬದಲಿಗೆ ಸುರೇಶ್‌ ಸಿಂಗ್‌ ಎಂದು, ಇಷ್ಟೊಂದು ದಾಖಲೆಗಳು ಇರುವಾಗಲೇ, ಮತ್ತೊಂದು ಸುಳ್ಳಿನ ಕತೆಯನ್ನು ಹೇಳಿದ. ಅದರ ನಂತರ ಯಾವ ಪ್ರತಿಕ್ರಿಯೆಯನ್ನೂ ನೀಡಲು ತಯಾರಾಗಲಿಲ್ಲ. ಆತ ಸುರೇಶ್‌ ಸಿಂಗ್‌ ಅನ್ನು ಸಂಪರ್ಕಿಸಲು ತಿಳಿಸಿದ, ಆದರೆ ಆತ ಸಂಪರ್ಕಕ್ಕೆ ಸಿಗಲಿಲ್ಲ.

ಇದು ದಿ ವೈರ್‌ನಲ್ಲಿ ಪ್ರಕಟವಾಗಿರುವ ಒಮರ್‌ ರಾಶಿದ್‌ರವರ A Dalit Mechanic in UP Spent 15 Months Fighting a False ‘Conversion’ FIR – and Won ನ ಕನ್ನಡಾನುವಾದ

ಕನ್ನಡಾನುವಾದ:‌ ಸುನೈಫ್ ವಿಟ್ಲ

ಭಾರತವನ್ನು ಸಾವಿರ ವರ್ಷ ಹಿಂದಕ್ಕೆ ಕೊಂಡೊಯ್ಯುತ್ತಿದೆ ಆರ್‌ಎಸ್‌ಎಸ್:‌ ಮೂಡ್ನಾಕೂಡು ಚಿನ್ನಸ್ವಾಮಿ
"ಸಿಎಎ ಒಂದು ದೇಶ ಒಂದು ಚುನಾವಣೆಯಂತಹ ಹೊಸ ಹೊಸ ಕಾರ್ಯಕ್ರಮಗಳ ಬಗ್ಗೆ ಮಾತಾಡ್ತಾರೆ, ಇದು ಯಾರಿಗೆ ಬೇಕಿತ್ತು. ಸಂವಿಧಾನದಲ್ಲಿರುವ ಸಮಾನತೆಯ ಬಗ್ಗೆ ಇವರು ಮಾತಾಡಲ್ಲ," ಶಿವಸುಂದರ್ ಅವರ ಅಂಕಣ ಸಂಕಲನ 'ಸಂವಿಧಾನ v/s ಸಂಘಿಗಳ ಸುಳ್ಳು ಅಭಿಯಾನ' ಕೃತಿ ಬಿಡುಗಡೆಯಲ್ಲಿ ಮಾತನಾಡುತ್ತಾ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿಕೆ

ಬೆಂಗಳೂರು: “ಭಾರತವನ್ನು ಕನಿಷ್ಠ 1000 ವರ್ಷಗಳ ಹಿಂದಕ್ಕೆ ಕೊಂಡೋಯ್ಯತ್ತೇವೆ ಅಂತಾ ಆರ್.ಎಸ್.ಎಸ್ ಬಹಳ ಹಿಂದೆಯೇ ಬರೆದುಕೊಂಡಿತ್ತು. ಈಗಿನ ಕುಂಭಮೇಳ ಇದಕ್ಕೆ ಸಾಕ್ಷಿಯಾಗ್ತಿದೆ. ನಾಗರೀಕ ಸಮಾಜವನ್ನ ಇನ್ನಷ್ಟು ಹಿಂದಕ್ಕೆ ಅಂದರೆ ಅನಾಗರೀಕತೆಯತ್ತ ಎಳೆಯುತ್ತಿದ್ದಾರೆ,” ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ಪಟ್ಟರು.

2025 ಫೆಬ್ರವರಿ 12 ರಂದು ರಾಜಾಜಿನಗರದ ಈದಿನ.ಕಾಂ ಕಚೇರಿಯಲ್ಲಿ ತಮಟೆ ಮೀಡಿಯಾ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಹಮ್ಮಿಕೊಂಡಿದ್ದ ಶಿವಸುಂದರ್ ಅವರ ಅಂಕಣ ಸಂಕಲನ ‘ಸಂವಿಧಾನ v/s ಸಂಘಿಗಳ ಸುಳ್ಳು ಅಭಿಯಾನ’ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.

ಇದೇ ವೇಳೆ ಆರ್.ಎಸ್.ಎಸ್. ಮತ್ತು ಬಿಜೆಪಿಯ ಸಂಚುಗಳ ಕುರಿತು ಮಾತನಾಡಿದ ಅವರು ‘ಬಿಜೆಪಿ ಒಂದು ಸಹಜ ರಾಜಕೀಯ ಪಕ್ಷವಲ್ಲ, ಅದೊಂದು ಅಸಹಜ ರಾಜಕೀಯ ಪಕ್ಷ. ಇವರು ಅಧಿಕಾರಕ್ಕಾಗಿ ಏನನ್ನಾದರೂ ಮಾಡುತ್ತಾರೆ, ಇವರು ಸಿಎಎ, ಒಂದು ದೇಶ ಒಂದು ಚುನಾವಣೆಯಂತಹ ಹೊಸ ಹೊಸ ಕಾನೂನುಗಳ ಬಗ್ಗೆ ಮಾತಾಡ್ತಾರೆ, ಇದು ಯಾರಿಗೆ ಬೇಕಿತ್ತು. ಸಂವಿಧಾನದಲ್ಲಿರುವ ಸಮಾನತೆಯ ಬಗ್ಗೆ ಇವರು ಮಾತಾಡಲ್ಲ,” ಎಂದು ಆರೋಪಿಸಿದರು.

“ಭಾರತ ಒಂದು ದೊಡ್ಡ ಭ್ರಮಾ ಲೋಕದೊಳಗೆ ಸಿಕ್ಕಿಹಾಕಿಕೊಂಡಿದೆ. ಯಾಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗಿಯಾಗದ, ಸದಾ ಒಂದು ಸಮುದಾಯದ ಏಳಿಗೆಯೇ ಮುಖ್ಯ ಅಂದುಕೊಂಡಿರುವ ಸಂಘಟನೆಯ ಭಾಗವಾಗಿರುವ ಪಕ್ಷ ಅಧಿಕಾರ ಹಿಡಿದಿದೆ. ಸಂಘಪರಿವಾರದ ಜೀವಾಳವೇ ಸುಳ್ಳು, ಶೂದ್ರರ ಮುಗ್ಧತೆಯನ್ನು ಬಳಸಿಕೊಂಡು ಅಧಿಕಾರ ಹಿಡಿಯುತ್ತಾರೆ. ಪ್ರತಿ ಚುನಾವಣೆಯಲ್ಲಿ ಒಂದೊಂದು ಸುಳ್ಳುಗಳನ್ನ ಬಳಸಿಕೊಂಡು ಅಧಿಕಾರಕ್ಕೆ ಬರ್ತಿದ್ದಾರೆ. ಸಂವಿಧಾನ ಮತ್ತು ಅಂಬೇಡ್ಕರ್ ಅವರನ್ನು ವಿರೋಧಿಸುತ್ತಲೇ ಬಂದ ಆರ್.ಎಸ್.ಎಸ್  ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಭಾರತೀಯತೆ ಇಲ್ಲ ಅಂತಾ ಆರೋಪಿಸಿದ್ದರು, ಅವರು ಹೇಳುವ ಭಾರತೀಯತೆಯಲ್ಲಿ ಜಾತೀಯತೆ ಮತ್ತು ಅಸ್ಪೃಶ್ಯತೆ ಇತ್ತು ಈ ಅಸಮಾನತೆ ಇಲ್ಲದ ಕಾರಣಕ್ಕೆ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ. ಅವರು ಮನುಸ್ಮೃತಿಯೇ ನಮ್ಮ ಸಂವಿಧಾನ ಎನ್ನುತ್ತಾರೆ. ಈ ಮನುಸ್ಮೃತಿ ಒಂದು ನೀಚಾತಿನೀಚ ಗ್ರಂಥ. ಜಾತಿವ್ಯವಸ್ಥೆಯನ್ನು ಮಾಡಿಕೊಂಡ ಅವರು ಬಹುಸಂಖ್ಯಾತ ವರ್ಗಗಳಿಗೆ ಭೂಮಿ ಅಧಿಕಾರ ಸಿಗದಂತೆ ನೋಡಿಕೊಂಡರು. ಯಾವಾಗ ಮುಸಲ್ಮಾನರು ಈ ದೇಶಕ್ಕೆ ಬಂದರೋ ಆಗ ಅವರೊಂದಿಗೂ ರಾಜಿಯಾದರು, ಅವರ ಆಳ್ವಿಕೆಯನ್ನ ಒಪ್ಪಿಕೊಂಡಿದ್ದರು. ಯಾವಾಗ ಬ್ರಿಟಿಷರು ಬಂದರೋ ಆಗ ಅವರು ಬ್ರಿಟಿಷರನ್ನ ಒಪ್ಪಿಕೊಳ್ಳಲು ತಯಾರಿರಲಿಲ್ಲ, ಕಾರಣ ಬ್ರಿಟೀಷರ ಕಾನೂನು ವ್ಯವಸ್ಥೆ. ದೇಶಕ್ಕೆ ಬಂದ ಬ್ರಿಟೀಷರು ಇಲ್ಲಿ ಸಾಮಾಜಿಕ ಅಸಮಾನತೆಗಳನ್ನು ಗಮನಿಸಿ ಎಲ್ಲರಿಗೂ ಒಂದೇ ರೀತಿಯ ಕಾನೂನುಗಳನ್ನು ಮಾಡಿದರು. ಇಲ್ಲಿ ಜಾತೀಯತೆಗೆ ಜಾಗ ಇರಲಿಲ್ಲ ಹಾಗಾಗಿ ಆರ್.ಎಸ್.ಎಸ್. ಬ್ರಿಟೀಷರನ್ನ ದ್ವೇಷಿಸೋದಕ್ಕೆ ಆರಂಭಿಸಿತು.

“1925ರಲ್ಲಿ RSS ಸಂಘಟನೆ ಸ್ಥಾಪನೆಯ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೋಗದಂತೆ ತಾಕೀತು ಮಾಡಿದರು. ಬಾಬಾ ಸಾಹೇಬರನ್ನು ವಿರೋಧಿಸುತ್ತಲೇ ಬಂದ ಅವರು “ಆ ನಂತರದಲ್ಲಿ ತಮ್ಮ ವೋಟ್ ಬ್ಯಾಂಕಿಗಾಗಿ ಬಾಬಾ ಸಾಹೇಬರ ಹೆಸರನ್ನು ಹೇಳಿಕೊಳ್ಳೋಕೆ ಆರಂಭಿಸಿದರು. ಸಾವರ್ಕರ್ ಬೌದ್ಧ ಧರ್ಮವನ್ನೇ ದೇಶದ್ರೋಹದ ಧರ್ಮ ಅಂತ ಕರೀತಾರೆ. ಅದಾದ ಮೇಲೆ ಗೋಲ್ವಾಲ್ಕರ್ ಕೂಡಾ ಹಾಗೆ ವಿರೋಧಿಸ್ತಾರೆ. ಅಂತವರು ಯಾವ ಕಾರಣಕ್ಕೂ ಸಂವಿಧಾನ ಪ್ರಿಯರು, ಅಂಬೇಡ್ಕರ್ ವಾದಿಗಳಾಗಿರಲಿಲ್ಲ. ಈಗ ಸಂವಿಧಾನ ಅಭಿಯಾನ ಮಾಡುತ್ತಿದ್ದಾರೆ. ಅಂಬೇಡ್ಕರ್ ಆರ್.ಎಸ್.ಎಸ್. ಅನ್ನು ಬೆಂಬಲಿಸಿದ್ದರು ಅಂತಾರೆ. ಜೊತೆಗೆ ನಾವೇ ನಿಜವಾದ ಅಂಬೇಡ್ಕರ್ ವಾದಿಗಳು ಅಂತ ಹೇಳಿಕೊಳ್ಳುತ್ತಲೇ ದಲಿತ ದಮನಿತರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಅಧಿಕಾರಕ್ಕಾಗಿ ಏನನ್ನಾದರೂ ಮಾಡುವ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನೇ ಬಳಸಿಕೊಂಡು ವೈರಿಗಳನ್ನ ಧ್ವಂಸ ಮಾಡುತ್ತಾರೆ. ಅಧಿಕಾರದ ಹಪಾಹಪಿ ಅವರಿಗೆ ಇದೆ. ವಾಮಮಾರ್ಗದಲ್ಲಿಯೇ ಅಧಿಕಾರ ಹಿಡಿವ ಬ್ರಾಹ್ಮಣರ ಸಂಘಟನೆ, ಪಕ್ಷ ಅದು. ಹೊರಗೆ ನಾವು ಐದನೆ ಬಹುದೊಡ್ಡ ರಾಷ್ಟ್ರ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಆದರೆ ತಲಾ ಆದಾಯ ಗಮನಿಸಿದರೆ ದೇಶ ತುಂಬಾ ಕೆಳಹಂತದಲ್ಲಿದೆ. ಹಸಿವಿನ ಸೂಚ್ಯಂಕದಲ್ಲಿ 101ನೇ ಸ್ಥಾನದಲ್ಲಿದ್ದೇವೆ ಇದನ್ನ ಬಿಜೆಪಿಯ ರಾಜಕಾರಣಿಗಳು ಎಲ್ಲೂ ಮಾತಾಡಲ್ಲ,” ಎಂದು ಚಿನ್ನಸ್ವಾಮಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿ.ಸಿ ಬಸವರಾಜ್‌ ಮಾತನಾಡಿ “ಮೋದಿ ಅಧಿಕಾರಕ್ಕೆ ಬಂದ ಮೇಲೆ ಮಾಧ್ಯಮಗಳನ್ನ ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡರು. ತಮ್ಮೆಲ್ಲಾ ಕೃತ್ಯಕ್ಕೆ ಬೇಕಾದಂತೆ ಬಳಸಿಕೊಂಡರು. ಈ ದೃಷ್ಟಿಯಿಂದ ನೋಡಿದಾಗ ಶಿವಸುಂದರ್ ಮಾಡುತ್ತಿರುವ ವಿಡಿಯೋ ಗಳು, ಬರವಣಿಗೆ ಎಷ್ಟು ಮುಖ್ಯ ಅಂತಾ ನಮಗೆ ಅರ್ಥವಾಗುತ್ತೆ. ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕತೆ ಕೆಳಗೆ ಇಳಿಯಿತು, ಆದ್ರೆ ಜನರಿಗೆ ಇದರಿಂದ ಏನೋ ದೊಡ್ಡ ಬದಲಾವಣೆ ಆಗುತ್ತೆ ಅಂತಾ ನಂಬಿಸಲಾಯಿತು. ಇಂಡಿಯಾ ವಿಕಸಿತ ಆಗುತ್ತೆ ಅನ್ನೋತರ ಬಿಂಬಿಸಲಾಯಿತು,”

“2035 ರ ಒಳಗೆ ಇಂಡಿಯಾ ಮುಸ್ಲಿಂ ಕಂಟ್ರಿ ಆಗಿಬಿಡುತ್ತೆ ಅಂತಾ ಬಿಂಬಿಸುತ್ತಾರೆ. ಈ ಮೂಲಕ ದೇಶದ ಆರ್ಥಿಕ, ಸಾಮಾಜಿಕ ಸಮಸ್ಯೆಗಳತ್ತ ಜನರ ಗಮನ ಹರಿಯದಂತೆ ನೋಡಿಕೊಳ್ತಾರೆ. ಇದೆಲ್ಲವನ್ನ ಅರ್ಥ ಮಾಡಿಸೋಕೆ ನಾವು ಅಂಕಿಅಂಶಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಸಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಶಿವಸುಂದರ್ ಅವರು ಮಾಡ್ತಿರೋ ಕೆಲಸ ಅತ್ಯಂತ ಮುಖ್ಯವಾದದ್ದು,” ಎಂದು ಬಿ.ಸಿ. ಬಸವರಾಜು ತಿಳಿಸಿದರು.

ಆರಂಭದಲ್ಲಿ ನಾವು ಸಂವಿಧಾನ ಬದಲಾಯಿಸುತ್ತೀವಿ ಅಂತಿದ್ದವರು. 2024ರ ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತವನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಎಚ್ಚೆತ್ತುಕೊಂಡ ಬಿಜೆಪಿ ಈಗ ಸಂವಿಧಾನ ಅಭಿಯಾನ ಆರಂಭಿಸಿದೆ. ಜೊತೆಗೆ ನಾವೇ ನಿಜವಾದ ಅಂಬೇಡ್ಕರ್ ಅನುಯಾಯಿಗಳು ಅಂತಾ ಹೇಳೋಕೆ ಆರಂಭಿಸಿದೆ. ಇದು ದಲಿತರನ್ನ ನಂಬಿಸೋಕೆ ಅವರನ್ನ ತಮ್ಮ ವೋಟ್ ಬ್ಯಾಂಕಾಗಿ ಬಳಸಿಕೊಳ್ಳೋಕೆ ಬಿಜೆಪಿ ಮಾಡುತ್ತಿರುವ ಸಂಚು. ಈ ಸಂಚಿನಲ್ಲಿ ಅವರು ಗೆದ್ದರೆ ಈ ದೇಶಕ್ಕೆ ಉಳಿಗಾಲವಿಲ್ಲ. ಶಿವಸುಂದರ್ ಅವರು ಈ ಪುಸ್ತಕದಲ್ಲಿ ತುಂಬಾ ಸರಳವಾಗಿ ಸಂಘಪರಿವಾರ ಈ ಸಂಚನ್ನು ವಿವರಿಸಿದ್ದಾರೆ,” ಎಂದು ಪುಸ್ತಕದ ಬಗ್ಗೆ ಬಸವರಾಜ್‌ ಹೇಳಿದ್ದಾರೆ.

ವೇದಿಕೆಯಲ್ಲಿದ್ದ ಮೈತ್ರೇಯಿಯವರು, “ಪಾಸಿಸಂನ ಸಂದರ್ಭದಲ್ಲಿ ದೇಶದಲ್ಲಿ ಆಗ್ತಿರೋ ವಿಷಯಗಳನ್ನ ಶಿವಸುಂದರ್ ಸರಳವಾಗಿ ಜನರಿಗೆ ತಲುಪಿಸ್ತಿದ್ದಾರೆ. ಸಂಘಪರಿವಾರದ ಕುತಂತ್ರಗಳಿಗೆ ಹೇಗೆ ಕೌಂಟರ್ ಕೊಡಬೇಕಿದೆಯೋ ಅದನ್ನು ಶಿವಸುಂದರ್ ಮಾಡ್ತಿದ್ದಾರೆ ಎಂದರು.

ಪುಸ್ತಕದ ಲೇಖಕ, ಮತ್ತು ಚಿಂತಕ ಶಿವಸುಂದರ್ ಅವರು ಮಾತನಾಡಿ, “ಇವತ್ತು ಆರ್.ಎಸ್.ಎಸ್. ಮತ್ತು ಬಿಜೆಪಿ ಹೋಗುತ್ತಿರುವ ವೇಗಕ್ಕೆ ನಮ್ಮಂತಹ ಸಾವಿರ ಬಾಯಿಗಳು ಬೇಕು. ಇದೊಂದು ಸುಧೀರ್ಘ ಕರಪತ್ರ. ಕರಪತ್ರದ ರೀತಿ ಕೊಟ್ಟರೆ ಜನ ಓದಲ್ಲ, ಅದಕ್ಕಾಗಿ ಪುಸ್ತಕ ಮಾಡ್ತಿದ್ದೇವೆ ಎಂದರು.

ದೆಹಲಿ ಚುನಾವಣೆಯ ನಂತರ ಬಿಜೆಪಿಗರಿಗಿದ್ದ ಅಲ್ಪ ಭಯವೂ ಹೋಗಿದೆ. ಭಾರತ ಮಾತ್ರವಲ್ಲ ಅಮೆರಿಕಾ ಸೇರಿದಂತೆ ಜಗತ್ತಿನ ಎಲ್ಲಾ ಪ್ರತಿಗಾಮಿ ಪಾಸಿಸ್ಟರು ಬಲಿಷ್ಠ ರಾಗುತ್ತಿದ್ದಾರೆ. ಪ್ಯಾಲೆಸ್ಟೀನಿಯರು ಸೋಲುವುದೆಂದರೆ ಭಾರತದಲ್ಲಿ ದಲಿತರು ಸೋತಂತೆ ಆ ಕಾರಣದಿಂದ ಇಂತ ಕಾರ್ಯಕ್ರಮಗಳು ಆಗಬೇಕು. ಇಂಥ ಪುಸ್ತಕಗಳನ್ನು ಹೆಚ್ಚೆಚ್ಚು ತಲುಪಿಸಬೇಕು ಎಂದು ಹೇಳಿದರು.

ಕೃತಿ ಬಿಡುಗಡೆಯಲ್ಲಿ ಇದ್ದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಕೌತಾಳ್, “ಎಲ್ಲಾ ಶೋಷಿತ ಸಮುದಾಯಗಳ ಪರ ಧ್ವನಿಯಾದ ದಲಿತ ಚಳುವಳಿಯ ಭಾಗವಾಗಿ ನಾವು ಇಲ್ಲಿದ್ದೇವೆ‌. ದೇಶ ಮುಂದೆ ಎದುರಿಸಬೇಕಾದ ಸಮಸ್ಯೆ-ಸವಾಲುಗಳನ್ನು ಅರ್ಥ ಮಾಡಿಕೊಂಡು ಶಿವಸುಂದರ್ ಈ ಕೃತಿ ರಚಿಸಿದ್ದಾರೆ. ಸಂವಿಧಾನದ ಸುತ್ತಾ, ಅಂಬೇಡ್ಕರ್ ಸುತ್ತಾ ದೊಡ್ಡ ರಾಜಕಾರಣ ನಡೀತಿದೆ. ಈ ಹೆಸರಿನಲ್ಲಿ ಶೋಷಿತ ಸಮುದಾಯವನ್ನು ವಂಚಿಸುತ್ತಿದ್ದಾರೆ. ಇದೇ ಪಾಸಿಸಂ ಅನ್ನು ನೂರಾರು ವರ್ಷಗಳಿಂದ ಹಿಮ್ಮೆಟಿಸಿದ್ದೇವೆ,” ಮುಂದೆಯೂ ಹಿಮ್ಮೆಟ್ಟಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮೂಡ್ನಾಕೂಡು ಚಿನ್ನಸ್ವಾಮಿ, ಶಿವಸುಂದರ್, ಬಿ.ಸಿ. ಬಸವರಾಜು, ಮೈತ್ರೇಯಿ, ಬಸವರಾಜ್ ಕೌತಾಳ್, ಹುಲಿಕುಂಟೆ ಮೂರ್ತಿ, ಚಂದ್ರು ತರಹುಣಸೆ, ಅಶ್ವಿನಿಬೋಧ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ತನ್ನ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ನ್ಯಾ.ಯಾದವ್
ಬೆಂಗಳೂರು: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ನಿಂದ ತರಾಟಗೆ ಒಳಗಾಗಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ನ್ಯಾಯಾಂಗ ನಡವಳಿಕೆಯ ಯಾವುದೇ ತತ್ವವನ್ನು ಉಲ್ಲಂಘಿಸದ ತನ್ನ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಜಸ್ಟಿಸ್ ಯಾದವ್ ಅವರು ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರಿಗೆ ಪ್ರತಿಕ್ರಿಯೆಯಾಗಿ ಬರೆದ ಪತ್ರದಲ್ಲಿ ತಮ್ಮ ಭಾಷಣವು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಅನುಗುಣವಾಗಿ ಸಾಮಾಜಿಕ ಸಮಸ್ಯೆಗಳ ಚಿಂತನೆಯ ಅಭಿವ್ಯಕ್ತಿಯಾಗಿದೆ ಮತ್ತು ಯಾವುದೇ ಸಮುದಾಯದ ಬಗ್ಗೆ ದ್ವೇಷವನ್ನು ಉಂಟುಮಾಡುವುದಿಲ್ಲ ಎಂದು ಬರೆದಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಡಿಸೆಂಬರ್ 17 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಭೇಟಿ ಮಾಡಿದ ನಂತರ ಮುಖ್ಯ ನ್ಯಾಯಮೂರ್ತಿ ಬನ್ಸಾಲಿ ಅವರು ನ್ಯಾಯಮೂರ್ತಿ ಯಾದವ್ ಅವರ ಪ್ರತಿಕ್ರಿಯೆಯನ್ನು ಕೇಳಿದ್ದರು.

ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ!

ಯಾದವ್ ಅವರ ಪ್ರತಿಕ್ರಿಯೆಯನ್ನು ಕೋರಿದ ಪತ್ರದಲ್ಲಿ ಕಾನೂನು ವಿದ್ಯಾರ್ಥಿ ಮತ್ತು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಅವರ ಭಾಷಣದ ವಿರುದ್ಧ ಸಲ್ಲಿಸಿದ ದೂರನ್ನೂ ಉಲ್ಲೇಖಿಸಿದ್ದಾರೆ. ಅಲ್ಲದೇ ಗೋಸಂರಕ್ಷಣೆಗೆ ಸಂಬಂಧಿಸಿದ ತನ್ನ ಆದೇಶಗಳಲ್ಲಿ ಒಂದನ್ನು ಮತ್ತು ಸಾಮಾಜಿಕ ಕಾರ್ಯಕರ್ತರು ಎತ್ತಿರುವ ಪ್ರಶ್ನೆಗಳನ್ನು ಕೂಡ ಉಲ್ಲೇಖಿಸಿದ್ದಾರೆ.

ಗೋಸಂರಕ್ಷಣೆಯು ಸಮಾಜದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಕಾನೂನಿಗೆ ಅನುಗುಣವಾಗಿದೆ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ.

ಡಿಸೆಂಬರ್ 8 ರಂದು ಅಲಹಾಬಾದ್ ಹೈಕೋರ್ಟ್‌ನ ಲೈಬ್ರರಿ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕರೂಪ ನಾಗರಿಕ ಸಂಹಿತೆಯ ವಿಷಯದ ಕುರಿತು ವಿವಾದಾತ್ಮಕ ಭಾಷಣ ಮಾಡಿದ ನ್ಯಾಯಮೂರ್ತಿ ಯಾದವ್ ಅವರು ” ಕಠ್ಮುಲ್ಲಾ ” ಎಂಬ ಅವಹೇಳನಕಾರಿ ಪದವನ್ನು ಬಳಸಿದರು ಮತ್ತು ಆರಂಭಿಕ ಹಂತದಿಂದಲೇ “ಪ್ರಾಣಿಗಳ ವಧೆ”ಯನ್ನು ನೋಡಿರುವ ಮುಸ್ಲಿಂ ಮಕ್ಕಳು “ಉದಾರಿಗಳು” ಮತ್ತು “ಸಹಿಷ್ಣುಗಳಾಗುವುದನ್ನು” ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ವಿರುದ್ಧ ದೋಷಾರೋಪಣೆ ಮಂಡಿಸಲು ಮುಂದಾದ ವಿರೋಧ ಪಕ್ಷಗಳು

ಇವರೊಂದಿಗೆ ಹೋಲಿಸುತ್ತಾ, ಹಿಂದೂಗಳಿಗೆ ಬಾಲ್ಯದಿಂದಲೂ ದಯೆಯ ಬಗ್ಗೆ ಕಲಿಸಲಾಗುತ್ತಿತ್ತು ಮತ್ತು ಅವರ ಮಕ್ಕಳಲ್ಲಿ ಅಹಿಂಸೆ ಮತ್ತು ಸಹಿಷ್ಣುತೆ ಬೇರೂರಿದೆ ಎಂದು ಯಾದವ್ ಹೇಳಿದ್ದರು. ಹಿಂದೂ ಸಮುದಾಯವನ್ನು ಉಲ್ಲೇಖಿಸಿ, ಭಾರತವು “ಬಹುಸಂಖ್ಯಾತರ” ಇಚ್ಛೆಯಂತೆ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಈ ಹೇಳಿಕೆಗಳು ರಾಷ್ಟ್ರವ್ಯಾಪಿ ದೊಡ್ಡ ಮಟ್ಟದ ಟೀಕೆಗಳಿಗೆ ಕಾರಣವಾದವು. ಇದನ್ನು ಖಂಡಿಸಿ ಭಾರತೀಯ ವಕೀಲರ ಸಂಘ ಹೇಳಿಕೆಯನ್ನೂ ನೀಡಿತ್ತು. “ಈ ಟೀಕೆಗಳು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತತೆಯ ತತ್ವಕ್ಕೆ ವಿರುದ್ಧವಾಗಿವೆ, ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ಪ್ರಮಾಣವಚನವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಮತ್ತು ಕಾನೂನಿನ ನಿಯಮವನ್ನು ಸಮರ್ಥಿಸುವ ನ್ಯಾಯಯುತ ಮತ್ತು ನಿಷ್ಪಕ್ಷಪಾತ ನ್ಯಾಯಾಂಗದ ತಳಹದಿಯ ಮೇಲೆ ಮಾಡಿದ ಅಪಚಾರ,” ಬಾರ್ ಅಸೋಸಿಯೇಷನ್‌ ಆಫ್‌ ಇಂಡಿಯಾ ಹೇಳಿತ್ತು.

ಬಂಟ್ವಾಳ: ಶರಣ್‌ ಪಂಪ್‌ವೆಲ್‌ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್
ಬಂಟ್ವಾಳ: ಹಿಂದುತ್ವವಾದಿ ಸಂಘಟನೆಗಳು ʼಬಿಸಿ ರೋಡ್‌ ಚಲೋʼ ನಡೆಸಿರುವ ಹಿನ್ನಲೆಯಲ್ಲಿ ಶರಣ್‌ ಪಂಪ್‌ವೆಲ್‌, ಭರತ್‌ ಕುಂಡೇಲು, ಯಶೋಧರ ಕರ್ಬೆಟ್ಟು ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ಬಂಟ್ವಾಳ ನಗರ ಪಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಇಸ್ಲಾಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯಶೋಧರ ಕರ್ಬೆಟ್ಟು ವಿರುದ್ಧ ಬಂಟ್ವಳದ ಮಹಮ್ಮದ್‌ ನವಾಜ್‌ ಎಂಬವರು ದೂರು ನೀಡಿದ್ದಾರೆ, ಬಂಟ್ವಾಳ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದಲ್ಲದೇ, ಸೆ.16 ರಂದು ಬಿಸಿ ರೋಡ್‌ ಚಲೋ ನಡೆಸಿ ಇಸ್ಲಾಮ್‌ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿ ಪ್ರಚೋದನೆಗೆ ಪ್ರಯತ್ನಿಸಿದ್ದಾರೆ ಎಂದು ಮಹಮ್ಮದ್‌ ರಫೀಕ್‌ ಎಂಬವರು ಪ್ರತ್ಯೇಕವಾಗಿ ಶರಣ್‌ ಪಂಪ್‌ವೆಲ್‌ ಹಾಗೂ ಭರತ್‌ ಕುಂಡೇಲು ಮೇಲೆ ದೂರು ನೀಡಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮಧ್ಯ ನಿಷೇಧ ಮತ್ತು ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಸಕ್ಕರೆ ನಾಡಿನ ಸ್ನೇಹಿತರಿಗೊಂದು ಪತ್ರ…
ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ, ನಮಸ್ಕಾರ…

ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ ಸಾಕ್ಷಿ ನಾನು.

ಒಂದು ಕಾಲದಲ್ಲಿ ಇಂತಹ ಮತೀಯ ಸಂಗತಿಗಳೇ ಶ್ರೇಷ್ಠವೆಂದು ಅದರ ಹಿಂದೆ ಹೋಗಿ ಅಲ್ಲಿನ ಸಾಮರಸ್ಯದ ಬದುಕಿಗೆ ಧಕ್ಕೆ ತಂದ ಪಾಪದಲ್ಲಿ ನನ್ನ ಪಾಲೂ ಇದೆ. ಈ ಪತ್ರ ನಾನು ಮಾಡಿದ ಪಾಪಕ್ಕೆ ಕೊಂಚ ಪ್ರಾಯಶ್ಚಿತ್ತ ಆದೀತೂ ಎಂದೂ ಭಾವಿಸುತ್ತೇನೆ.

ಕರಾವಳಿಯಲ್ಲಿ ಪದೇ ಪದೇ ನಡೆದ ಕೋಮು ದಳ್ಳುರಿಯ ಸುದ್ದಿ ಕೇಳಿದವರೇ ನೀವು. ಇಲ್ಲಿ ಹಂತ ಹಂತವಾಗಿ ಬೆಳೆದ ಕೋಮುವಾದದಿಂದ ಅನೇಕ ಹಿಂದೂ ಮತ್ತು ಮುಸ್ಲಿಂ ಯುವಕರು ಸ್ಮಶಾನಯಾತ್ರೆ ಮಾಡಿದ್ದರೆ, ಸಾವಿರಾರು ಯುವಕರು ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಅತ್ಯಂತ ಖಚಿತವಾಗಿ ನಾನು ಕಳೆದ ೨೫ ವರ್ಷಗಳಿಂದ ಹೇಳಿಕೊಂಡು ಬಂದ ಒಂದು ವಿವರ ನಿಮಗೆ ಹೇಳಲೇ ಬೇಕಾಗಿದೆ.
ಹೀಗೆ ಜೈಲು ಸೇರಿದವರು ಮತ್ತು ಸ್ಮಶಾನ ಸೇರಿದವರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಯುವಕರು ಮಾತ್ರ.

ನೀವು ಈಗ ಹನುಮ ಧ್ವಜದ ಹೋರಾಟ ಎಂದು ಭಾವನಾತ್ಮಕವಾಗಿ ಬೀದಿಗೆ ಇಳಿಯತೊಡಗಿದ್ದೀರಿ. ಮಂಡ್ಯದಲ್ಲಿ ವಿಶ್ವವಿದ್ಯಾಲಯ ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಸಾಕಷ್ಟು ಪದವಿ ಕಾಲೇಜುಗಳು,ಇಂಜಿನಿಯರಿಂಗ್ ಕಾಲೇಜು ಗಳು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) – ವೈದ್ಯಕೀಯ ಕಾಲೇಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಉನ್ನತ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ಕೇಂದ್ರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರ ಆವರಣ ಕೇಂದ್ರ ಶೈಕ್ಷಣಿಕ ವ್ಯವಸ್ಥೆಯಿದೆ.

ಶ್ರೀರಂಗಪಟ್ಟಣ ,ಟಿಪ್ಪೂ ಅರಮನೆ , ಕೋಟೆ, ಕುಂತಿ ಬೆಟ್ಟ , ರಂಗನ ತಿಟ್ಟು, ಚೆನ್ನ ಕೇಶವ ಸ್ವಾಮಿ ಗುಡಿ, ಸೇರಿದಂತೆ ಅನೇಕ ದೇವಸ್ಥಾನಗಳು, ಫಾಲ್ಸ್ ಗಳು, ಕೃಷ್ಣರಾಜ ಸಾಗರ ಆಣೆಕಟ್ಟು ಬೃಂದಾವನ ಹೀಗೆ ಬೇಕಾದಷ್ಟು ಪ್ರವಾಸಿ ತಾಣಗಳಿವೆ. ಅನೇಕ ಸಾಹಿತಿಗಳನ್ನು , ಒಳ್ಳೆಯ ರಾಜಕೀಯ ನಾಯಕರನ್ನೂ ನಿಮ್ಮ ಜಿಲ್ಲೆ ನೀಡಿದೆ.

ಈ ಹಿಂದೆ ನಿಮ್ಮ ಊರಿನಲ್ಲಿ ಹಿಂದೂ ದೇವಸ್ಥಾನಗಳು ಅಭಿವೃದ್ಧಿಯಾಗಿದೆಯಲ್ಲವೇ. ಬೇಕಾದಷ್ಟು ಧಾರ್ಮಿಕ ಕಾರ್ಯಕ್ರಮ ಆಗಿದೆಯಲ್ಲವೇ. ನಿಮ್ಮ ದೇವಸ್ಥಾನದ ಮೇಲೆ ದೇವರ ಧ್ವಜ ಹಾರಿಸಿದ್ದರೆ ಯಾರೂ ಬಂದು ತಡೆದದ್ದೂ ಇಲ್ಲ ಅಲ್ಲವೇ?.. ಯೋಚಿಸಿ. ಈಗ ಏಕಾಏಕಿ ಈ ಸಾರ್ವಜನಿಕ ಸ್ಥಳದಲ್ಲಿ ಅದೂ ರಾಷ್ಟ್ರ ಧ್ವಜ ಹಾರಿಸಲೆಂದು ಪರವಾನಿಗೆ ಪಡೆದು, ಹನುಮ ಧ್ವಜ ಹಾರಿಸಬೇಕೆಂಬ ಬೇಡಿಕೆಯ ಹಿಂದಿರುವ ಹುನ್ನಾರ ನೀವು ಅರ್ಥ ಮಾಡಿಕೊಳ್ಳಬೇಕಿದೆ.

ನೀವು ಯಾವುದೇ ರಾಜಕೀಯ ಪಕ್ಷದ ಹಿಂದೆ ಹೋಗಿ ನನ್ನ ಆಕ್ಷೇಪ ಕಿಂಚಿತ್ತೂ ಇಲ್ಲ. ಆದರೆ ಇಂತಹ ಭಾವನಾತ್ಮಕ ಸಂಗತಿಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ರಾಜಕೀಯ ಹೋರಾಟ ಎಂದಾದರೆ ಸಾವಿರ ಬಾರಿ ಯೋಚಿಸಬೇಕು.

ಬಿಜೆಪಿ ಅಂತಲ್ಲ. ನಾಳೆ ಜನತಾ ದಳ ಎಸ್ ಡಿ ಪಿ ಐ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷವಾದರೂ ಸರಿ ಇಂತಹ ಹಿಂದೂ ಮುಸ್ಲಿಂ ಭಾವನಾತ್ಮಕ ವಿಷಯ ಇಟ್ಟು ಕೊಂಡು ಚುನಾವಣೆ ಸಮಯದಲ್ಲಿ ಗಲಭೆ ಎಬ್ಬಿಸುವ ಯಾವುದೇ ಸಂಗತಿಗಳನ್ನು ನೀವು ಈಗಲೇ ತಿರಸ್ಕರಿಸುವುದು ಒಳಿತು.

ಇಲ್ಲವಾದರೆ ನಿಮ್ಮ ಬಡವರ ಮನೆಯ ಮಕ್ಕಳು ಹೆಣವಾಗುವುದು, ಜೈಲು ಸೇರುವುದು ನಿಮ್ಮಲ್ಲೂ ಪ್ರಾರಂಭವಾಗುತ್ತದೆ. ಇದು ಮುಂದುವರಿದರೆ ನೆನಪಿಡಿ, ಚುನಾವಣೆ ಹತ್ತಿರ ಬಂದಂತೆ ಇನ್ನೂ ಕೆಟ್ಟ ಘಟನೆಗಳಿಗೆ ನೀವೇ ಸಾಕ್ಷಿಯಾಗುತ್ತೀರಿ.

೨೦೦೬ ರ ಮಂಗಳೂರು ಕೋಮು ಗಲಭೆ ವಿವರ ತೆಗೆದು ನೋಡಿ. ಸುಮಾರು ೫೦೦ ಯುವಕರು ಜೈಲಿಗೆ ಸೇರಿದ್ದು ಅವರೆಲ್ಲರೂ ರೂ ಬಡವರ ಮನೆಯ ಮಕ್ಕಳು.

ಈಗ ಮೊನ್ನೆ ನಡೆದ ನಿಮ್ಮ ಊರಿನ ಧ್ವಜದ ಪ್ರತಿಭಟನೆಯಲ್ಲಿ ಇದ್ದವರು ಯಾರು. ನನಗೆ ಗೊತ್ತಿಲ್ಲ. ನಿಮ್ಮ ಊರಿನ ರಾಜಕೀಯ ನಾಯಕರ ಮನೆಯ ಮಕ್ಕಳು, ಶ್ರೀಮಂತ ವರ್ಗದವರು, ಉತ್ತಮ ಉದ್ಯೋಗದಲ್ಲಿರುವವರು, ವೈಧ್ಯಕೀಯ ತಂತ್ರಜ್ಞಾನ ಇತ್ಯಾದಿ ಕಲಿಯುವ ವಿದ್ಯಾರ್ಥಿಗಳು ನಿಮ್ಮ ಜೊತೆಗಿದ್ದರೋ?

ಖಂಡಿತ ಇರಲಿಕ್ಕಿಲ್ಲ. ಮುಂದಿನ ದಿನಗಳಲ್ಲೂ ಇರುವುದಿಲ್ಲ. ಹಾಗಾದಾರೆ ಇವರಿಗಿಲ್ಲದ ಸಮಸ್ಯೆ ನಿಮಗೆ ಮಾತ್ರ ಆಗುವುದು ಹೇಗೇ? ನಿಮ್ಮನ್ನು ಪ್ರಚೋದಿಸುವವರ ಬಳಿ ನಾಳೆ ಕೇಸ್ ಆದರೆ ಜಾಮೀನಿಗೆ ಬರ್ತಿರಾ ಅಂತಾ ಒಂದು ಮಾತು ಕೇಳಿನೋಡಿ. ಸತ್ಯದ ಹುಡುಕಾಟಕ್ಕೆ ದೂರ ಹೋಗಬೇಕಿಲ್ಲ. ನಿಮಗೇ ಸಿಗುತ್ತದೆ.

ದೀರ್ಘ ಕಾಲದ ನಂತರ ಕರಾವಳಿಯಲ್ಲಿ ಭಾವನಾತ್ಮಕ ವಿಷಯಕ್ಕೆ ಹೊಡೆದಾಡಲು ಯುವಕರು ಕಡಿಮೆಯಾಗಿದ್ದಾರೆ. ಜನ ಬೆಂಬಲ ಕಡಿಮೆಯಾಗುತ್ತಿದೆ. ಇದಕ್ಕೆ ನಿಮ್ಮ ಊರು ಹೊಸ ಪ್ರಯೋಗ ಶಾಲೆಯಾಗಬೇಕೆ?

ಇಂತಹ ಕೋಮು ಗಲಭೆಯಿಂದಾಗಿ ಕಳೆದ ೩೦ ವರ್ಷಗಳಿಂದ ದ. ಕ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಬರಲು ಹಿಂದೇಟು ಹಾಕುತ್ತಿವೆ. ಒಮ್ಮೆ ಕೋಮು ಗಲಭೆಯಾದರೆ ೨ ವರ್ಷ ವ್ಯಾಪಾರ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ನಿಮ್ಮ ಊರು ಬೆಂಗಳೂರು ಮತ್ತು ಮೈಸೂರಿಗೆ ಸಮೀಪವಿದೆ. ಅಭಿವೃದ್ಧಿಯ ಪಥದಲ್ಲಿದೆ. ನಿಮ್ಮ ಸಕ್ಕರೆ ನಾಡು ಪ್ರೀತಿ ಸಹಬಾಳ್ವೆಯ ನಾಡು. ಒಮ್ಮೆ ಮತೀಯ ಹುಚ್ಚು ಶುರುವಾದರೆ ಹಳ್ಳಿ ಹಳ್ಳಿಯಲ್ಲಿ ಮನಸ್ಸುಗಳು ಒಡೆಯುತ್ತವೆ. ಅನಗತ್ಯ ಕ್ರೋಧಗೊಳ್ಳುತ್ತವೆ.

ಸಂಶಯದ ಸುಳಿ ಪ್ರತಿಯೊಬ್ಬರ ಬದುಕನ್ನೂ ಸುಡುತ್ತದೆ. ವ್ಯಾಪಾರ ವಹಿವಾಟು ಪದೇ ಪದೇ ಹೊಡೆತ ತಿನ್ನುತ್ತದೆ.
ಬಂದ್ ಲಾಠಿ ಚಾರ್ಜ್ ನಿತ್ಯದ ಕೆಲಸವಾಗುತ್ತದೆ. ನೆಮ್ಮದಿ ಸುಡುಗಾಡಿನ ಸಮಾಧಿಯ ಮೇಲಿನ ಹೂವಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳು ಕೇಕೆ ಹಾಕಲು ನಿಮ್ಮಲ್ಲಿ ಪ್ರಾರಂಭವಾಗಿದೆ. ಅದು ಬೆಂಕಿಗೆ ತುಪ್ಪ ಸುರಿಯುತ್ತದೆ.

ಇಂದು ಒಂದು ಧ್ವಜ, ನಾಳೆ ಮಂದಿರ ,ಮಸೀದಿ ಹೀಗೆ ನಿಧಾನವಾಗಿ ಕಿಚ್ಚು ಹಬ್ಬುತ್ತದೆ. ಅಮಾಯಕರ ಶವಗಳನ್ನು ಮೆಟ್ಟಿಲಾಗಿಸಿಕೊಂಡು ಶಾಸಕ , ಎಂಪಿ ಗಳಾಗುವ ರಾಜಕೀಯ ನಾಯಕರ ತಂತ್ರ ನಿಮ್ಮೆಲ್ಲರ ಬದುಕನ್ನೂ ನಾಶಮಾಡುತ್ತದೆ. ಮತ್ತೆ ಪ್ರತೀ ಚುನಾವಣೆ ಬರುವಾಗ ಒಂದು ಗಲಾಟೆ ಎರಡು ಹೆಣ, ಸಿಟ್ಟು ಉದ್ರೇಖದಿಂದ ನಮ್ಮ ಓಟಿನ ಚಲಾವಣೆ ಆಗುತ್ತದೆ ಇಷ್ಟೆ.

ನೀವು ನಾಡಿಗೆ ಸಕ್ಕರೆ ಹಂಚುವವರು.
ನೀವು ಸದಾ ಸಕ್ಜರೆಯನ್ನೇ ಹಂಚಬೇಕು.

ನಿಮ್ಮ ಬದುಕೂ ಸಿಹಿಯಾಗಿರಬೇಕು ಎಂಬುವುದಷ್ಟೇ ನನ್ನ ಆಸೆ. ಇಂತಹ ಸಮಸ್ಯೆ ಯುಾವುದೇ ಸಂಘ ಸಂಸ್ಥೆ ರಾಜಕೀಯ ಪಕ್ಷದವರು ಮಾಡಿದರೂ ಸರಿ. ಸಕ್ಕರೆ ಕಬ್ಬಿನ ಒಂದು ತುಂಡು ಕೊಟ್ಟು ಮರ್ಯಾದೆಯಿಂದ ಹೊರಗೆ ಕಳಿಸಿಬಿಡಿ.

ಎಂ ಜಿ ಹೆಗಡೆ, ಮಂಗಳೂರು

ಅಯೋಧ್ಯೆಯ ಸೌಹಾರ್ದತೆ ಉಳಿಸಲು ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್ ದಾಸ್
ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್‌ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.

ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ ಲಾಲ್ ದಾಸ್ ಅವರನ್ನು. ಇವರನ್ನು ನವೆಂಬರ್ 26, 1993ರಂದು ಗುಂಡಿಕ್ಕಿ ಕೊಲ್ಲಲಾಯಿತು.

ಇವರ ಜೊತೆಗೆ ಕಾಶಿ ವಿಶ್ವನಾಥ ದೇವಾಲಯದ ಮಾಜಿ ಮಹಾಂತ್ ರಾಜೇಂದ್ರ ಪ್ರಸಾದ್ ತಿವಾರಿ ಅವರನ್ನು. ಇಬ್ಬರಲ್ಲಿ ಇರುವ ವ್ಯತ್ಯಾಸವೆಂದರೆ ಓಬ್ಬರನ್ನು ಸಾಯಿಸಲಾಗಿದೆ, ಇನ್ನೊಬ್ಬರು ಬದುಕಿದ್ದಾರೆ. ಆದರೆ ಇಬ್ಬರ ದನಿಯೂ ಒಂದೇ ಆಗಿದೆ.

“ಅಯೋಧ್ಯೆಯ ಜನ ಮಾತ್ರವಲ್ಲ, ಭಾರತದಾದ್ಯಂತ ಜನರು ಇದನ್ನು ವಿರೋಧಿಸಬೇಕು. ನಾವು ಎಂದಿಗೂ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸಬಾರದು ಮತ್ತು ಅವರ ಹೃದಯವನ್ನು ಒಡೆಯಬಾರದು. ನಮ್ಮ ಧರ್ಮ ಇದನ್ನು ಒಪ್ಪುವುದಿಲ್ಲ. ರಾಮನ ರಾಜಕೀಯ ಆದರ್ಶವು ಎಲ್ಲರಿಗೂ ಸಮೃದ್ಧಿಯನ್ನು ತರುತ್ತದೆ … ನಾವು ತಿಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಹಾರ ಸಿಗುತ್ತದೆ, ಆದ್ದರಿಂದ ಎಲ್ಲರೂ ನಮ್ಮವರೇ, ಯಾರೂ ಇಲ್ಲಿ ದೊಡ್ಡವರಲ್ಲ ಅಥವಾ ಚಿಕ್ಕವರಲ್ಲ. ಈ ಆದರ್ಶಗಳನ್ನು ಕೊಲ್ಲಲಾಗಿದೆ….!”

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

1990 ರ ದಶಕದಲ್ಲಿ ರಾಮ ಮಂದಿರದ ಗಲಭೆಯಲ್ಲಿ ದೇಶ ಹೊತ್ತಿ ಉರಿಯುತ್ತಿದ್ದಾಗ ಈ ಮಾತುಗಳನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ವಿವಾದಿತ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಹಿಂದೂ ಅರ್ಚಕ ಬಾಬಾ ಲಾಲ್ ದಾಸ್ ಅವರು. ಇದು ರಾಮ್ ಕೆ ನಾಮ್ ಸಾಕ್ಷ್ಯಚಿತ್ರದ ಕೊನೆಯಲ್ಲಿ ನೀವು ಕೇಳಬೇಕಾದ ಮುಂದೆಂದೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಮಾತುಗಳು.

ಭಾರತದ ಭಕ್ತಿ ಪರಂಪರೆಯ ಆತ್ಮದ ಭಾಷೆಗಳಾದ ಪ್ರೇಮ, ಶಾಂತಿ, ಒಳಗೊಳ್ಳುವಿಕೆ ನಶಿಸಿಹೋಗುತ್ತಾ, ದೇಶ ಆದ್ಯಾತ್ಮದಿಂದ ಕಳಚಿಕೊಂಡು ಕರ್ಮಠತನಕ್ಕೆ ದಾಂಗುಡಿ ಇಡುವಾಗ, ಮತೀಯತೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ, ಒಪ್ಪಿಕೊಂಡ ದೇಶದಲ್ಲಿ ಮುನ್ನಲೆಗೆ ಬರುತ್ತಿರುವಾಗ, ದೇಶ ಸಾಂಸ್ಕೃತಿಕವಾಗಿ ಬಹುಮುಖಿಯಾಗಿ ಕಟ್ಟಿಕೊಳ್ಳುವ ತನ್ನ ಪರಂಪರೆಯನ್ನು ನಿಲ್ಲಿಸುತ್ತಿರುವ ಸಂದರ್ಭದಲ್ಲಿ ಬಾಬಾ ಲಾಲ್‌ ದಾಸ್‌ ಆವರ ಮಾತುಗಳು ನಮ್ಮ ಹೃದಯವನ್ನು ಆಳವಾಗಿ ನಾಟಿ ಸಂಕಟವನ್ನು ಉಂಟುಮಾಡುತ್ತವೆ.

1991ರಲ್ಲಿ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ ರಾಮ್ ಕೆ ನಾಮ್ ಸಾಕ್ಷ್ಯಚಿತ್ರ ಪ್ರಚಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ನವೆಂಬರ್ 26, 1993 ರಂದು, ಬಾಬಾ ಲಾಲ್ ದಾಸ್ ಅವರನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಯಿತು.

ಯಾರು ಈ ಬಾಬಾ ಲಾಲ್‌ ದಾಸ್‌?

ಬಾಬಾ ಲಾಲ್ ದಾಸ್ ಅವರನ್ನು 1983 ರಲ್ಲಿ ಲಕ್ನೋ ಹೈಕೋರ್ಟ್ ಅಯೋಧ್ಯೆಯ ಮುಖ್ಯ ಅರ್ಚಕರನ್ನಾಗಿ ನೇಮಿಸಿತು. ಬಾಬರಿ ಮಸೀದಿಯ ಸುತ್ತ ವಿಶ್ವ ಹಿಂದೂ ಪರಿಷತ್  ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಇವರು,. ಲಾಲ್ ಕೃಷ್ಣ ಅಡ್ವಾಣಿಯವರಿಗೆ ತಮ್ಮ ರಥಯಾತ್ರೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ರಾಮ ಮಂದಿರ ಚಳವಳಿಯನ್ನು ಕೇವಲ ಹಿಂದೂ ಮತಗಳನ್ನು ಸೆಳೆಯುವ ತಂತ್ರ ಎಂದು ಟೀಕಿಸಿದ್ದರು.

ರಾಮ್‌ ಕೆ ನಾಮ್‌ ಡಾಕ್ಯುಮೆಂಟರಿಯಲ್ಲಿ, “ಇದು (ಮಸೀದಿ ಧ್ವಂಸ) ವಿಎಚ್‌ಪಿಯ ರಾಜಕೀಯ ಆಟ. ಇದನ್ನು ಮಾಡುತ್ತಿರುವವರಿಗೆ ಹಿಂದೂ ಮತವನ್ನು ಸೆಳೆಯಲು ಭಾರತದಾದ್ಯಂತ ಉದ್ವಿಗ್ನತೆಯನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ,” ಎನ್ನುತ್ತಾ ಎರಡು ಸಮುದಾಯಗಳ ನಡುವೆ ಇರುವ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ವಿವರಿಸಿದ್ದರು. ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಅವಧ್‌ನ ಮುಸ್ಲಿಂ ರಾಜರ ದೇಣಿಗೆಯಿಂದ ಹೇಗೆ ನಿರ್ಮಿಸಲಾಯಿತು ಮತ್ತು 1855 ರ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೀರರು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದರು ಎಂದು ಈ ಡಾಕ್ಯುಮೆಂಟರಿಯಲ್ಲಿ ಅರ್ಚಕರು ಹೇಳಿದ್ದಾರೆ.

ಬಾಬಾ ಲಾಲ್‌ ದಾಸ್‌ ಅವರಲ್ಲಿ ಬಾಬ್ರಿ ಮಸೀದಿ ಧ್ವಂಸದ  ಬಗ್ಗೆ ಸಾಕ್ಷ್ಯಾಧಾರಗಳು ಇದ್ದವು,1993 ರಲ್ಲಿ ದೆಹಲಿಯ ಸಿಟಿಜನ್‌ ಟ್ರಿಬ್ಯೂನಲ್‌ಗೆ ಇದನ್ನು ಸಲ್ಲಿಸಿದ್ದರು.  ರಾಮಜನ್ಮಭೂಮಿ ನ್ಯಾಸ್ ಪರವಾಗಿ ಸಂಗ್ರಹಿಸಲಾದ ದೊಡ್ಡ ಮೊತ್ತದ ಹಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಆರೋಪ ಕೂಡ ಮಾಡಿದ್ದರು.

ಇದಾಗಿ, 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಕೆಲ ತಿಂಗಳುಗಳ ಮೊದಲು, ಅಂದಿನ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಬಾಬಾ ಲಾಲ್ ದಾಸ್ ಅವರನ್ನು ಅರ್ಚಕ ಸ್ಥಾನದಿಂದ ಅನಧಿಕೃತವಾಗಿ ತೆಗೆದುಹಾಕಿತು. ಕೋರ್ಟಿನಿಂದ ನೇಮಕವಾಗಿರುವ ಕಾರಣ ಕೋರ್ಟಿನ ಆದೇಶ ಇಲ್ಲದೆ ಈ ರೀತಿ ವಜಾಗೊಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದರು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಈ ಪ್ರಕರಣ ಬಾಕಿ ಉಳಿದಿದೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವಾಯಿತು. ಇದಾದ ನಂತರ ತಮ್ಮ ಹತ್ಯೆಯಾಗಬಹುದು ಎಂಬ ಭಯ ಅರ್ಚಕರಿಗೆ ಇತ್ತು. ರಕ್ಷಣೆ ಕೊಡುವಂತೆ  ಸರ್ಕಾರಕ್ಕೆ ವಿನಂತಿಸಿದರು. ಆದರೆ ಕಲ್ಯಾಣ್ ಸಿಂಗ್ ಅವರ ಸರ್ಕಾರವು ಅವರ ಅಂಗರಕ್ಷಕರನ್ನು ತೆಗೆದುಹಾಕಿತು. ನವೆಂಬರ್ 26, 1993 ರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ದೇಶ ಕಂಡು ಕೇಳರಿಯದ ಅಮಾನವೀಯ ಘಟನೆಗಳು ಇದರ ಬೆನ್ನಿನಲ್ಲೇ ನಡೆದವು. ಇದರಿಂದ ದೇಶ ಚೇತರಿಸಿಕೊಂಡಿಲ್ಲ. ಆಗ ಉಂಟಾದ ಬೃಹತ್‌ ಕಂದಕವನ್ನು ಮುಚ್ಚಲು ಶತಮಾನಗಳಷ್ಟು ಪ್ರಯತ್ನಿಸಬೇಕು. ಈಗ ಬಾಬರಿ ಮಸೀದಿ ಇದ್ದಲ್ಲೇ ರಾಮನ ಪ್ರತಿಷ್ಠೆಯನ್ನು ಮಾನನೀಯ ಪ್ರಧಾನಿಗಳ ನೇತೃತ್ವದಲ್ಲಿ ಮಾಡಲಾಗಿದೆ. ದೇಶದ ರಾಜಕಾರಣ ಮಗ್ಗುಲು ಬದಲಿಸಿದ  ಈ ಸಂದರ್ಭದಲ್ಲಿ ರಾಮಭಕ್ತ ಲಾಲ್ ದಾಸ್ ಅವರು ನೀಡಿದ ಕೋಮು ಐಕ್ಯತೆಯ ಸಂದೇಶ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ.

ಮೊಘಲ್ ರಾಜಕುಮಾರ ದಾರಾ ಶಿಕೋಹ್ 17 ನೇ ಶತಮಾನದಲ್ಲಿ ವಾರಣಾಸಿಯ ವಿಶ್ವನಾಥ ದೇವಾಲಯದ ಮೇಲ್ವಿಚಾರಣೆಗಾಗಿ ಅಲ್ಲಿನ ಮಹಂತರಿಗೆ ಪಟ್ಟಾ (ಪತ್ರ) ನೀಡುತ್ತಾನೆ. 10 ತಲೆಮಾರುಗಳವರೆಗೆ ಇದು ಮುಂದುವರಿದುಕೊಂಡು ಬಂದಿದೆ. ಕಾಶಿ ವಿಶ್ವನಾಥ ದೇವಾಲಯದ ಆಡಳಿತದ ಅಧಿಕಾರ ಈ ಕುಟುಂಬದ ಕೈಯಲ್ಲೇ ಇತ್ತು. 1983 ರಲ್ಲಿ ಉತ್ತರ ಪ್ರದೇಶ ಸರ್ಕಾರ ಇವರನ್ನು ದೇವಾಲಯದ ಪಾರಂಪರಿಕ ಮೋಕ್ತೇಸರಿಕೆಯಿಂದ ತೆಗೆಯಿತು. ಈ ಮನೆತನದ ಈಗಿನ ತಲೆಮಾರು ಮಹಂತ್ ರಾಜೇಂದ್ರ ಪ್ರಸಾದ್ ತಿವಾರಿ ಸಧ್ಯದ ಕೋಮುವಾದ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಶಾಂತಿ ಸಹಬಾಳ್ವೆಯ ಬಹುಮುಖ್ಯ ದನಿಯಾಗಿ ಕಾಣಿಸಿಕೊಳ್ಳುತ್ತಾರೆ.

ತಿವಾರಿ ಪ್ರಧಾನಿ ನರೇಂದ್ರ ಮೋದಿಯವರ ಬಹುಪ್ರಿಯ ಯೋಜನೆಯಾದ ವಿಶ್ವನಾಥ ಟೆಂಪಲ್ ಕಾರಿಡಾರ್‌ನ ಕಟು ಟೀಕಾಕಾರರಾಗಿದ್ದರು. ಈ ಯೋಜನೆಯ ಮೂಲಕ ಸುಮಾರು 286 ಶಿವಲಿಂಗಗಳನ್ನು ಹೊಂದಿರುವ ಹಲವಾರು ಪುರಾತನ ದೇವಾಲಯಗಳನ್ನು ಕೆಡವಿ ಹಾಕಲಾಗಿದೆ. ಇವುಗಳನ್ನು ಕಿತ್ತು ಬಿಸಾಡಲಾಯಿತು, ಕೆಲವನ್ನು ಮುರಿದು ಹಾಕಿದರು. ಕೇವಲ 146 ಶಿವಲಿಂಗಗಳನ್ನು ಮಾತ್ರ ಜೀರ್ಣೋದ್ಧಾರಗೊಳಿಸಿ ಬನಾರಸ್‌ನ ಲಂಕಾದ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಸದ್ಯ ಅಲ್ಲಿ ಅವುಗಳಿಗೆ ನಿತ್ಯದ ಪೂಜೆಯನ್ನು ಸಲ್ಲಿಸಲಾಗುತ್ತಿದೆ.

ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯನ್ನು ತುರಾತುರಿಯಲ್ಲಿ ಮಾಡಿರುವುದನ್ನು ಎಲೆಕ್ಷನ್‌ ಗಿಮಿಕ್‌ ಎಂದೇ ಟೀಕಿಸಿರುವ ಕಾಶಿಯ ಮಾಜಿ ಮೊಕ್ತೇಸರ ತಿವಾರಿಯವರು, ಇದೊಂದು ʼಸ್ಪಾನ್ಸರ್ಡ್‌ ಬೈ ಪಿಲಂ ಸ್ಟಾರ್‌ʼ ಕಾರ್ಯಕ್ರಮ, ಇದು ಮೋದಿಯವರು ತಮ್ಮ ವ್ಯಾನಿಟಿಯನ್ನು ಹೆಚ್ಚಿಸಿಕೊಳ್ಳಲು ಮಾಡಿರುವ ತಂತ್ರ ಎಂದು ಆರೋಪಿಸಿದ್ದಾರೆ.

“ಮೋದಿಯವರು ಓಟಿಗಾಗಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರವೇ ಮೋದಿಯವರ ರಾಮ, ಅವರ ನಂಬಿಕೆ, ಅವರ ವ್ಯಾಪಾರ,” ಎಂದು ತಿವಾರಿ ಹೇಳಿದ್ದಾರೆ.

ಭಾರತದ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುವಲ್ಲಿ ತೋರಿರುವ ನಿರ್ಲಕ್ಷ್ಯ, ತಿರಸ್ಕಾರದ ಬಗ್ಗೆ ತಿವಾರಿಯವರಿಗೆ ಆಕ್ರೋಶ ಇದೆ, ಅವುಗಳನ್ನು ಮಾಲ್‌ಗಳ ರೀತಿಯಲ್ಲಿ ಕಟ್ಟಲಾಗುತ್ತಿದೆ, ಅಲ್ಲಿ ಜನರು ಶಾಪಿಂಗ್ ಮಾಡಲು ಮತ್ತು ಮೋಜು ಮಸ್ತಿಗಾಗಿ ಬರುತ್ತಾರೆ ಅಥವಾ ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಪವಿತ್ರವಾದ ಕ್ಷೇತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನಗಳೇ ಹೊರತು ಭಕ್ತರಲ್ಲಿ ದೇವರ ಮೇಲಿನ ಭಕ್ತಿಯನ್ನು ಮೂಡಿಸುವ ಪ್ರಯತ್ನಗಳಲ್ಲ. “ಇದು ಮಾಲ್, ಅಯೋಧ್ಯೆಯ ರಾಮಮಂದಿರವಲ್ಲ. ಅಂತಹ ಮೊದಲ ಮಾಲ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾಯಿತು. ಮೂರನೆಯದು ಮಥುರಾದಲ್ಲಿ ಆಗಲಿದೆ” ಎಂದು ತಿವಾರಿ ಹೇಳುತ್ತಾರೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಇವೆಲ್ಲವನ್ನೂ ಸನಾತನ ಧರ್ಮದ ಮೇಲಿನ ಆಕ್ರಮಣ ಎಂದು ತಿವಾರಿ ಕರೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸನಾತನ ಧರ್ಮ, ಅದರ ತತ್ವಗಳು, ಅದರ ನಿಯಮಗಳು ಮತ್ತು ಭವಿಷ್ಯದಲ್ಲಿ ಹಿಂದೂಗಳ ಧರ್ಮಗ್ರಂಥಗಳನ್ನು ರೂಪಿಸುವ ಅಧಿಕಾರವನ್ನು ಆಚಾರ್ಯರು ಮತ್ತು ಧಾರ್ಮಿಕ ಗುರುಗಳಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. “ಸನಾತನ ಧರ್ಮದ ಮೇಲಿನ ಈ ಸವಾರಿಯೇ ಶಂಕರಾಚಾರ್ಯರನ್ನು ಜನವರಿ 22 ರ ಉದ್ಘಾಟನೆಯ ವಿರುದ್ಧ ಮಾತನಾಡುವಂತೆ ಮಾಡಿತು” ಎಂದು ತಿವಾರಿ ವಾದಿಸುತ್ತಾರೆ.

ಇದು ಮತೀಯತೆ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಘರ್ಷ. ಸಂಘವು ತನ್ನ ರಾಜಕೀಯ ಬಲದ ಜೊತೆಗೆ ಧಾರ್ಮಿಕ ಶಕ್ತಿಯನ್ನು ಪಡೆಯಲು ಯತ್ನಿಸುತ್ತಿದೆ. “ಒಮ್ಮೆ ಇದು ನಡೆದರೆ, ನಮ್ಮ ಸಮಾಜದ ಮೇಲೆ ಸಂಘದ ನಿಯಂತ್ರಣವು ಪೂರ್ಣಗೊಳ್ಳುತ್ತದೆ” ಎಂದು ಅವರು ಭವಿಷ್ಯ ನುಡಿದ್ದಾರೆ.

“ಸತ್ಯಕ್ಕಿಂತ ಅಸತ್ಯವು ಯಾವಾಗಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ” ಎನ್ನುವ ಮಹಂತ್ ತಿವಾರಿ, ಸನಾತನ ಧರ್ಮದ 10 ಮೌಲ್ಯಗಳನ್ನು ಪಟ್ಟಿ ಮಾಡುತ್ತಾರೆ: ಸತ್ಯವನ್ನು ಹೇಳುವುದು, ಅಹಂಕಾರ ಮತ್ತು ಕೋಪವನ್ನು ತೊಡೆದುಹಾಕುವುದು, ಸಹನೆಯನ್ನು ಬೆಳೆಸುವುದು ಇತ್ಯಾದಿ. “ಈ ಎಲ್ಲಾ ಮೌಲ್ಯಗಳು ಕುಸಿಯುತ್ತಿವೆ, ಇವುಗಳಲ್ಲಿ ಯಾವುದನ್ನೂ ಸಾಕಾರಗೊಳಿಸಲಾಗಿಲ್ಲ, ಅವರು ನಮ್ಮನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ” ಎಂದು ಅವರು ತಿವಾರಿ ಹೇಳುತ್ತಾರೆ.

ಕಾಶಿ ವಿಶ್ವನಾಥ ದೇವಾಲಯದ ಪಾರಂಪರಿಕ ಅಧಿಕಾರವನ್ನು ಹೊಂದಿರುವ ಮನೆತನದ ಈಗಿನ ತಲೆಮಾರು, ಯಾವುದೇ ಫಲಾಪೇಕ್ಷೆ ಇಲ್ಲದೆ, ದೇಶದ ಬಹುದೊಡ್ಡ ರಾಜಕೀಯ ಶಕ್ತಿಯೊಂದರ ವಿರುದ್ಧ ತಮ್ಮ ಮಾತುಗಳನ್ನು ನಿರ್ಭಯವಾಗಿ ಹೇಳುತ್ತಿದ್ದಾರೆ. ಇವರ ಮಾತುಗಳು ನಮ್ಮನ್ನು ಮತ್ತೆ ಅಯೋಧ್ಯೆಯ ಮುಖ್ಯ ಅರ್ಚಕ, ಸತ್ಯಕ್ಕಾಗಿ ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್‌ ದಾಸ್‌ ಅವರ ನೆನಪನ್ನು ತರುತ್ತದೆ.

ಯಾಕೆ ಅವರು ಈಗ ಪ್ರಶ್ನಿಸುತ್ತಿದ್ದಾರೆ? ಯಾಕೆ ಅದ್ವೈತ ಪೀಠಗಳು, ಅನೇಕ ಧಾರ್ಮಿಕ ನಾಯಕರು ಬಿಜೆಪಿಯ ನಡೆಯನ್ನು ವಿರೋಧಿಸುತ್ತಿದ್ದಾವೆ?

ಅವರ ಮಾತುಗಳು ಸ್ಪಷ್ಟವಾಗಿವೆ: ಬಿಜೆಪಿ – ಸಂಘ ಪರಿವಾರದ ಈ ಎಲ್ಲಾ ನಡೆಗಳೂ ಹಿಂದೂ ಧರ್ಮಕ್ಕೆ ಕಂಟಕಪ್ರಾಯವಾಗಿವೆ. ದೇಶ ಸಹಸ್ರಾರು ವರ್ಷಗಳಿಂದ ರೂಪಿಸಿಕೊಂಡು ಬಂದ ಆಧ್ಯಾತ್ಮಿಕತೆ ಮತ್ತು ಬಹುಮುಖಿ ಸಂಸ್ಕೃತಿಗಳಿಗೆ ಹಿಂದುತ್ವ ಮಾರಕವಾಗಿ ಪರಿಣಮಿಸಿದೆ. ಇದು ಚುನಾವಣೆ ಗೆಲ್ಲುವುದಕ್ಕೆ, ಅನ್ಯ ಮತೀಯರನ್ನು ದ್ವೇಷಿಸುವುದಕ್ಕೆ ತಮ್ಮದೇ ಸಂಪ್ರದಾಯವನ್ನು ಎಷ್ಟರಮಟ್ಟಿಗೆ ಬೇಕಾದರೂ ತಿರುಚಿ, ಕೆಡವಿ ಹಾಕಲು ಮುಂದಾಗುತ್ತಿದೆ.

ಹಿಂದುತ್ವ ಎಂಬುದು ಕೋಮವಾದ+ರಾಜಕಾರಣ. ಹಿಂದೂ ಧರ್ಮ ಎಂಬುದು ಭಾರತೀಯ ಧರ್ಮಗಳ ಒಟ್ಟುಗೂಡುವಿಕೆ ಎಂಬ ಸ್ಪಷ್ಟತೆ ಇವರಲ್ಲಿ ಬರುತ್ತಿದೆ. ಹಿಂದುತ್ವವೇ ಹಿಂದೂ ಧರ್ಮದ ಮುಖವಾಡ ಧರಿಸಿಕೊಂಡು ಬಂದಾಗ ಹಿಂದೂ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಈ ಧಾರ್ಮಿಕ ನಾಯಕರಲ್ಲಿ ಇದೆ. ಹಿಂದುತ್ವ ಎಂಬುದು ಆದ್ಯಾತ್ಮಿಕವಲ್ಲದ್ದು, ಅದು ಆದ್ಯಾತ್ಮಿಕವಾಗಿದ್ದರೆ ಅನ್ಯರನ್ನು ದ್ವೇಷಿಸುವಂತೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ತಿವಾರಿಯಂತ ಪ್ರಜ್ಞಾವಂತೆರು ಬಿಜೆಪಿಯ ನಡೆಯನ್ನು ವಿರೋಧಿಸಿದ್ದಾರೆ.   ಬಾಬಾ ಲಾಲ್‌ ದಾಸ್‌ರಂತ ಅರ್ಚಕರು ತಮ್ಮ ಸಂಪ್ರದಾಯವನ್ನು ಉಳಿಸಲು ಪ್ರಾಣವನ್ನೇ ಕೊಡಬೇಕಾಯ್ತು.

ಲೇಖನ: ಚರಣ್‌ ಐವರ್ನಾಡು

NCERT ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ರಾಜಕೀಯದ ಆಟಗಳು!
ಪಠ್ಯಪುಸ್ತಕಗಳಲ್ಲಿ ಏನನ್ನು ಬೋಧಿಸಬೇಕು ಎಂಬುದನ್ನು ಆಯಾಯ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ನಿರ್ಧರಸುತ್ತವೆ. ಬಿಜೆಪಿಯದ್ದು ಇದರಲ್ಲಿ ಎತ್ತಿದ ಕೈ. 2000ರಲ್ಲಿ NCERT ಪಠ್ಯಗಳಲ್ಲಿ ವ್ಯಾಪಕ ಕೇಸರೀಕರಣದ ಆರೋಪಗಳು ಕೇಳಿ ಬಂದ ನಂತರ, 2005ರಲ್ಲಿ ತರಲಾದ ಪಠ್ಯಪುಸ್ತಕಗಳಲ್ಲೂ ಬಿಜೆಪಿ ತನ್ನ ಕೈಯಾಡಿಸಿತು. ಕೋವಿಡ್-‌19 ಕಾರಣವನ್ನು ನೀಡಿ ಗಾಂಧಿ ಹತ್ಯೆಯಲ್ಲಿ ಹಿಂದುತ್ವವಾದಿಗಳ ಕೈವಾಡವನ್ನು ತಿಳಿಸುವ ಪಠ್ಯವನ್ನು ಬಿಜೆಪಿ ಸರ್ಕಾರ ಕೈ ಬಿಟ್ಟಿತ್ತು. ಇದೀಗ, NCF 2023ರನ್ನು ಜಾರಿಗೆ ತರಲು ಹೊರಟಿದ್ದು, ಇದರಲ್ಲಿ ತನ್ನ ಹಳೆ-ಹೊಸ ಅಜೆಂಡಾಗಳನ್ನು ತೂರಿಸಿದೆ.

ಬೆಂಗಳೂರು,ಅಕ್ಟೋಬರ್.‌30: NCERT ಇದ್ದಕ್ಕಿದ್ದಂತೆ ಶಾಲೆಯ ಪಠ್ಯ ಪುಸ್ತಕಗಳಿಂದ ಇಂಡಿಯಾ ಎಂಬ ಹೆಸರನ್ನು ಕಿತ್ತು ಹಾಕಿ, ಭಾರತ್ ಎಂದು ಬದಲಾಯಿಸಲು ಶಿಫಾರಸ್ಸು ಮಾಡಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಡಿಸೆಂಬರ್ 28, 2021 ರಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಅಭಿವೃದ್ದಿಗಾಗಿ ತಜ್ಞರ 25 ಸಮಿತಿಗಳ ರಚನೆಯನ್ನು ಸದ್ದಿಲ್ಲದೆ ಘೋಷಿಸಿತು. ಆರಂಭ ಆದದ್ದು ಎಲ್ಲವೂ ಇಲ್ಲಿಂದಲೇ!

ನೋಡಿ: National Curriculum Framework For Social Education 2023

ಇಂತಹ ಒಂದು ಸಮಿತಿ Education in social science ಯ ನೇತೃತ್ವ ವಹಿಸಿದ್ದು ಸಿ ಐ ಐಸಾಕ್ ಎಂಬ ಕೇರಳ ಮೂಲದ ಇತಿಹಾಸ ಪ್ರಾಧ್ಯಾಪಕರು. ಸಿ ಐ ಐಸಾಕ್ ಆರ್.ಎಸ್.ಎಸ್ ಹಾಗೂ ಅದರ ಅಂಗ ಸಂಸ್ಥೆಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡವರು. ಇಡೀ ಕಮಿಟಿಯಲ್ಲಿ ಇರುವ ಏಳು ಜನ ಶಿಕ್ಷಣ ತಜ್ಞರೂ ಆರ್. ಎಸ್. ಎಸ್ ಜೊತೆಗೆ ನಂಟನ್ನು ಹೊಂದಿದ್ದವರೇ ಆಗಿದ್ದಾರೆ.

ಈ ಸಮಾಜ ವಿಜ್ಞಾನ ಅನುಸರೊಸಬೇಕಾದ ಕಾರ್ಯಸೂಚಿಯನ್ನು ತಯಾರಿಸಿ 2021ರ ಸಪ್ಟೆಂಬರ್‌ನಲ್ಲಿ ಇಸ್ರೋವಿನ ಮಾಜೀ ಅಧ್ಯಕ್ಷ ಕಸ್ತೂರಿರಂಗನ್‌ ನೇತೃತ್ವದ ಹನ್ನೆರಡು ಮಂದಿ ಸದಸ್ಯರ ಸಮಿತಿಗೆ ಸಲ್ಲಿಸಿದೆ. ಆದರೆ ಈ ಸಿ ಐ ಐಸಾಕ್‌ ಸಮಿತಿಯ ಈ ಶಿಫಾರಸ್ಸುಗಳು ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ, ಮೊದಲ ಬಾರಿಗೆ Education in social scienceನಂತಹ ಉಪಸಮಿತಿಗಳ ಶಿಫಾರಸ್ಸುಗಳು ಬಹಿರಂಗಗೊಂಡಿದ್ದು, ಪಠ್ಯಪುಸ್ತಕಗಳಲ್ಲಿ ದೇಶದ ಹೆಸರನ್ನು ಇಂಡಿಯಾದಿಂದ ಭಾರತ್‌ ಎಂದು ಬದಲಿಸಲು ತಿಳಿಸಿದ್ದು ದೇಶದಾದ್ಯಂತ ಚರ್ಚೆಯಲ್ಲಿದೆ.

ಸದ್ಯದ NCERT ಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳ ರಚನೆಯಲ್ಲಿದ್ದ ಯೋಗೇಂದ್ರ ಯಾದವ್ 1975 ರ ತುರ್ತು ಪರಿಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂಬ ಸಮಿತಿಯ ಆರೋಪಕ್ಕೆ ಅಸಮಧಾನ ವ್ಯಕ್ತಪಡಿಸಿ ಐಸಾಕ್‌ ವಿರುದ್ಧ ಟ್ವೀಟ್‌ ಮಾಡಿದ್ದರು.

“NCERT ಸಮಿತಿಯ ಅಧ್ಯಕ್ಷರು ಸರಿಯಾಗಿ ಪಠ್ಯಪುಸ್ತಕವನ್ನು ಓದಿಲ್ಲ ಎಂದು ಕಾಣುತ್ತದೆ. ಹತ್ತನೇ ತರಗತಿಗೆ ಪೊಲಿಟಿಕಲ್‌ ಸೈನ್ಸ್‌ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಒಂದು ಪೂರ್ಣ ಅಧ್ಯಾಯವಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಾಂವಿಧಾನಿಕ, ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ವಿವರಗಳನ್ನು ಒದಗಿಸಲಾಗಿದೆ. ಆದರೆ, ಈ ಬಿಜೆಪಿ ಸರ್ಕಾರವು ಅದಕ್ಕೆ ಕತ್ತರಿಹಾಕಿದೆ,” ಯಾದವ್ ಅಕ್ಟೋಬರ್ 26 ರಂದು ಟ್ವೀಟ್ ಮಾಡಿದ್ದಾರೆ.

ಐಸಾಕ್ ಸಮಿತಿ ಪಠ್ಯಪುಸ್ತಕಗಳಲ್ಲಿ ಮುಸ್ಲೀಂ ದೊರೆಗಳ ವಿಜಯಗಳ ಬಗ್ಗೆ ಕಡಿಮೆ ಪಾಠವಿಟ್ಟು, ಹಿಂದೂಗಳ ಗೆಲುವನ್ನು ಪಾಠ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ. ತುರ್ತು ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಯಾಕಿಲ್ಲ? ಎಂದು ಪ್ರಶ್ನೆ ಮಾಡಿತ್ತು.

ಆಗಸ್ಟ್ 2022 ರಲ್ಲಿ, ಕೇಂದ್ರವು ಕಸ್ತೂರಿರಂಗನ್‌ ಸಮಿತಿಯ National Curriculum Framework – NCF ಬಿಡುಗಡೆ ಮಾಡಿತು. ಇದರಲ್ಲಿ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ಮತ್ತು ಸೆಮಿಸ್ಟರ್ ವ್ಯವಸ್ಥೆಯನ್ನು ಪರಿಚಯಿಸುವಂತಹ ರಚನಾತ್ಮಕ ಸುಧಾರಣೆಗಳ ಸರಣಿಯನ್ನು ಪ್ರಸ್ತಾಪಿಸಿದೆ.

ಬಿಜೆಪಿಯ ಪಠ್ಯಕ್ರಮ ಪರಿಷ್ಕರಣೆಯ ಇತಿಹಾಸ

ಸ್ವಾತಂತ್ರ್ಯ ನಂತರ ದೇಶದಲ್ಲಿ 1975, 1988, 2000 ಮತ್ತು 2005 ರಲ್ಲಿ ನಾಲ್ಕು ಪಠ್ಯಕ್ರಮದ ಪರಿಷ್ಕರಣೆ ನಡೆದಿದೆ. ರಾಜಕೀಯ ಹಸ್ತಾಕ್ಷೇಪವಿಲ್ಲ ಎನ್ನಲಾಗದು.

2000ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗ NCERTಯ ಆಗಿನ ನಿರ್ದೇಶಕ ಜೆ ಎಸ್‌ ರಜಪೂತ್‌ ನೇತೃತ್ವದ ಆರು ಸದಸ್ಯರ ಸಮಿತಿ 2000ರ NCF ಜಾರಿಗೆ ತಂದಿತು. ಆಗ ಮಾನವ ಸಂಪನ್ಮೂಲ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರ ಮೇಲೆ ಪಠ್ಯಪುಸ್ತಕಗಳ ʼಕೇಸರೀಕರಣದ ಆರೋಪಗಳು ಎದ್ದವು.

NCF  2000ರ ‘Context and Concerns’ ಎಂಬ ಅಧ್ಯಾಯದಲ್ಲಿ  “ವಿರೋಧಾಭಾಸ ಎನಿಸಿದರೂ ನಮ್ಮ ಮಕ್ಕಳಿಗೆ ನ್ಯೂಟನ್ ಬಗ್ಗೆ ಗೊತ್ತಿದೆ, ಆರ್ಯಭಟ್ಟನ ಬಗ್ಗೆ ಗೊತ್ತಿಲ್ಲ, ಕಂಪ್ಯೂಟರ್ ಬಗ್ಗೆ ಗೊತ್ತಿದೆ ಆದರೆ ಸೊನ್ನೆ ಅಥವಾ ದಶಮಾಂಶ ಪದ್ಧತಿಯ ಪರಿಕಲ್ಪನ ಬಂದಿದ್ದು ಹೇಗೆ ಎಂಬುದು ತಿಳಿದಿಲ್ಲ… ಅಂತಹ ಅಸಮತೋಲನಗಳನ್ನು, ದೇಶದ ಪಠ್ಯಕ್ರಮವನ್ನು ಸರಿಪಡಿಸಬೇಕು,” ಎಂದು ಹೇಳಲಾಗಿದೆ. ಅಲ್ಲದೇ, ಇದರಲ್ಲಿ “ಮಾನವೀಯ ಮತ್ತು ರಾಷ್ಟ್ರೀಯ ದೃಷ್ಟಿಕೋನವನ್ನು ಉತ್ತೇಜಿಸಬೇಕು ಮತ್ತು ಭಾರತೀಯನಾಗಿರುವುದರಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಬೇಕು” ಎಂದು ಹೇಳಲಾಗಿದೆ.

ಈ NCF 2000ದಲ್ಲಿ ಛಾಂದೋಗ್ಯ ಉಪನಿಷತ್‌ನಿಂದ ಅಂಶಗಳನ್ನು ಅಳವಡಿಸಲು, ವೇದ ಗಣಿತದ ಪರಿಚಯ ಮತ್ತು ಆಯುರ್ವೇದ ಹಾಗೂ ಯೋಗದ ಜ್ಞಾನವನ್ನು ಶಿಫಾರಸು ಮಾಡಲಾಗಿತ್ತು.

2004 ರಲ್ಲಿ, ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಬಿಜೆಪಿ ಸರ್ಕಾರ ತಂದ ಬದಲಾವಣೆಗಳನ್ನು ರದ್ದುಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಯಿತು. ಮೊದಲಿಗೆ, ಬಿಜೆಪಿ ಅಧಿಕಾರಾವಧಿಯಲ್ಲಿ ಎನ್‌ಸಿಇಆರ್‌ಟಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಲು ನಿವೃತ್ತ ಅಧಿಕಾರಿ ಎಸ್ ಸತ್ಯಂ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.

ಈ ಸಮಿತಿಯು NCF 2000 ಪರಿಶೀಲನಾ ವರದಿಯಲ್ಲಿ ಅನ್ನು “ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸದೆ ಇದನ್ನು ನಡೆಸಲಾಯಿತು ಮತ್ತು ಅದನ್ನು ಬಿಡುಗಡೆ ಮಾಡಿದಾಗ, ಅದು ಕಾರ್ಯಕಾರಿ ಸಮಿತಿಯ ಅಥವಾ NCERT ಯ ಆಡಳಿತ ಮಂಡಳಿಯ ಒಪ್ಪಿಗೆಯನ್ನು ಪಡೆದಿರಲಿಲ್ಲ. ಇದನ್ನು ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಶನ್ (CABE) ಮುಂದೆ ಇಡಲಾಗಿಲ್ಲ,” ಎಂದು ತಿಳಿಸಿತು.

ಆದರೆ, ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 2002 ರಲ್ಲಿ, 2:1 ಬಹುಮತದ ತೀರ್ಪಿನಲ್ಲಿ, ಪಠ್ಯಕ್ರಮದ ಬದಲಾವಣೆಗಳನ್ನು ಎತ್ತಿಹಿಡಿದು, NCF 2000 ಅನ್ನು ಅಸಂವಿಧಾನಿಕ ಎಂದು ಘೋಷಿಸಲು ಯಾವುದೇ ಆಧಾರವಿಲ್ಲ ಎಂದು ಘೋಷಿಸಿತು.

ಸತ್ಯಂ ವರದಿಯ ಮೇಲೆ ಟೀಕೆಗಳು ಬಂದಂತೆ, ಪ್ರೊ.ಯಶ್ ಪಾಲ್ ನೇತೃತ್ವದ ಸಮಿತಿಯೊಂದು NCF 2005 ರಚನೆಗೆ ಸಿದ್ಧವಾಯಿತು. NCF 2005 ಪರಿಷ್ಕರಣೆಯಲ್ಲಿ 280 ಕ್ಕೂ ಹೆಚ್ಚು ತಜ್ಞರು ಇದ್ದರು. 35 ಸದಸ್ಯರ ಸ್ಟೀರಿಂಗ್ ಕಮಿಟಿಯಲ್ಲಿ ಪ್ರೊ.ಯಶ್ ಪಾಲ್, ಕವಿ ಅಶೋಕ್ ವಾಜಪೇಯಿ, ಪ್ರೊ.ವಲ್ಸನ್ ಥಂಪು, ಎನ್‌ಸಿಪಿಸಿಆರ್‌ನ ಮಾಜಿ ಮುಖ್ಯಸ್ಥ ಪ್ರೊ.ಶಾಂತ ಸಿನ್ಹಾ, ಮಾಜಿ ಇಪಿಡಬ್ಲ್ಯೂ ಸಂಪಾದಕ ಪ್ರೊ.ಗೋಪಾಲ್ ಗುರು ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಕೆಲವು ಪ್ರಮುಖರ ಹೆಸರುಗಳಿದ್ದವು

ಜೊತೆಗೆ ಇಪ್ಪತ್ತು ಉಪ-ಸಮಿತಿಗಳನ್ನು ಸಹ ಸ್ಥಾಪಿಸಲಾಯಿತು. ಫೋಕಸ್ ಗ್ರೂಪ್‌ಗಳ ಸುಮಾರು 250 ಸದಸ್ಯರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಪೂರ್ವಾನಂದ್, ಪರಿಸರಶಾಸ್ತ್ರಜ್ಞ ಮಾಧವ್ ಗಾಡ್ಗೀಲ್, ಕಲಾವಿದೆ ಶುಭಾ ಮುದ್ಗಲ್, ಶಿಕ್ಷಣತಜ್ಞರಾದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್, ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ಮುಂತಾದ ಶಿಕ್ಷಣ ತಜ್ಞರು ಇದ್ದರು.

ಆಗ ಸಿದ್ಧಪಡಿಸಲಾದ NCERT ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಪ್ರಸ್ತುತ ದೇಶಾದ್ಯಂತ CBSE ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಶಿಕ್ಷಣವು ಸಮಕಾಲೀನ ಪಟ್ಟಿಯ (Concurrent List) ಅಡಿಯಲ್ಲಿ ಬರುವುದರಿಂದ, ಕೇಂದ್ರವು ರಾಜ್ಯಗಳಿಗೆ NCERT ಪಠ್ಯಕ್ರಮವನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಅನೇಕ ರಾಜ್ಯಗಳು ತಮ್ಮಲ್ಲಿ ಈ ಪಠ್ಯಕ್ರಮಗಳನ್ನು ಅಳವಡಿಸಿಕೊಂಡರು

ಆದರೆ, ಆ ಪಠ್ಯಪುಸ್ತಕಗಳು ಈಗಾಗಲೇ ಅನೇಕ ಸುತ್ತಿನ ಪರಿಷ್ಕರಣೆಗಳಿಗೆ ಒಳಗಾಗಿವೆ, 2022 ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಉಂಟಾದ ಪ್ರಭಾವದ ಕಾರಣದಿಂದಾಗಿ ಕಲಿಕೆಯ ಹೊರೆಯನ್ನು ಕಡಿಮೆ ಮಾಡಲು ಅನೇಕ ಬದಲಾವಣೆಗಳನ್ನು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗಾಂಧಿ ಹತ್ಯೆಯ ಬಗೆಗಿನ ಪಠ್ಯಗಳನ್ನು ಕೈಬಿಡಲಾಗಿತ್ತು.

ಈ ವರ್ಷ ಬಿಜೆಪಿ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಸಾಕ್ ಅವರಂತಹ ಶಿಕ್ಷಣತಜ್ಞರನ್ನು ಒಳಗೊಂಡ ಸಮಿತಿಗಳು ವಿನ್ಯಾಸಗೊಳಿಸುವ ಪಠ್ಯಪುಸ್ತಕಗಳು ಮಾರುಕಟ್ಟೆಗೆ ಬರುವ ಮೊದಲೇ ಚರ್ಚೆಗೆ ಕಾರಣವಾಗಿವೆ. ಸರ್ಕಾರದ ಅಜೆಂಡಾಗಳನ್ನು ತುರುಕುವ ಮತ್ತು ಅವೈಜ್ಞಾನಿಕ, ತಿರುಚಿದ ಇತಿಹಾಸವನ್ನು ಕಲಿಸುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಶಿಕ್ಚಣ ತಜ್ಞರು ದನಿಯೆತ್ತಲು ಆರಂಭಿಸಿದ್ದಾರೆ.

ವಿಎಚ್‌ಪಿ ನಾಯಕ ಶರಣ್ ಪಂಪ್‌ವೆಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಕಾರ್ ಸ್ಟ್ರೀಟ್‌ನಲ್ಲಿ ಅಂಗಡಿಗಳ ಮೇಲೆ ಕೇಸರಿ ಧ್ವಜವನ್ನು ಕಟ್ಟಿದ ಕ್ರಮಕ್ಕಾಗಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕರ್ನಾಟಕ ಪ್ರಾಂತದ ಜಂಟಿ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮತ್ತು ಇತರ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರು”ಶರಣ್ ಮಂಗಳವಾರ ಅಕ್ಟೋಬರ್ 17ರಂದು ಧ್ವಜಗಳನ್ನು ಅಂಗಡಿಗಳಿಗೆ ಧ್ವಜ ಕಟ್ಟಿದ ನಂತರ ಹಿಂದೂಗಳು ಬಾವುಟ ಕಟ್ಟಿರುವ ಅಂಗಡಿಗಳಲ್ಲಷ್ಟೇ ವ್ಯಾಪಾರ ಮಾಡುವಂತೆ ಕರೆ ನೀಡಿದ್ದರು” ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

“ಅವರ ಈ ಹೇಳಿಕೆ ಮತ್ತು ಕೃತ್ಯವು ಧರ್ಮದ ಆಧಾರದ ಮೇಲೆ ದ್ವೇಷವನ್ನು ಸೃಷ್ಟಿಸುತ್ತದೆ” ಎಂದು ಅಗರವಾಲ್ ಹೇಳಿದ್ದಾರೆ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನೋಹರ್ ಪ್ರಸಾದ್ ಅವರ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸರು ಶರಣ್ ಪಂಪ್‌ವೆಲ್ ಮತ್ತು ಇತರ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದಕ್ಕೂ ಮುನ್ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಾತ್ರಾ ವ್ಯಾಪಾರಸ್ಥರ ಸಮನ್ವಯ ಸಮಿತಿ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿದ್ದರು.

“ಪಂಪ್‌ವೆಲ್ ಮತ್ತು ಇತರ ವಿಎಚ್‌ಪಿ ಸದಸ್ಯರ ಕ್ರಮವು ಸಂಸತ್ತಿನ ಚುನಾವಣೆಯ ಸಮಯದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ದೊಡ್ಡ ಕಾರ್ಯಸೂಚಿಯ ಒಂದು ಭಾಗವಾಗಿದೆ. ಸರಕಾರ ಶರಣ್ ಅವರನ್ನು ಬಂಧಿಸಬೇಕು” ಎಂದು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದರು.

ಸಮಿತಿಯ ಸಂಚಾಲಕ ಬಿ.ಕೆ. ಇಮ್ತಿಯಾಝ್ ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮುಸ್ಲಿಂ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಿರುವುದರಿಂದ 677 ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ಸದಸ್ಯರಾದ ದೇವದಾಸ್ ಮತ್ತು ರಘು ಯೆಕ್ಕಾರ್ ಕೂಡ ವಿಎಚ್‌ಪಿ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ದೇವಸ್ಥಾನಗಳನ್ನು ರಾಜಕೀಯಕ್ಕೆ ಬಳಸುವಂತಿಲ್ಲ: ಕೇಸರಿ ಧ್ವಜ ಕಟ್ಟಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೇರಳ ಹೈಕೋರ್ಟ್
ದೇವಸ್ಥಾನಗಳ ಮೇಲೆ ಕೇಸರಿ ಧ್ವಜ ಹಾಕಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದ್ದು, ದೇವಸ್ಥಾನಗಳನ್ನು ರಾಜಕೀಯ ಏಕಾಏಕಿ ಬಳಸಿಕೊಳ್ಳುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

“ದೇವಾಲಯಗಳು ಆಧ್ಯಾತ್ಮಿಕತೆ, ಸಾಂತ್ವನ ಮತ್ತು ನೆಮ್ಮದಿಗೆ ದಾರಿದೀಪಗಳು. ಇವುಗಳ ಪಾವಿತ್ರ್ಯತೆ ಮತ್ತು ಗೌರವಕ್ಕೆ ಮಹತ್ವವಿದೆ. ಇಂತಹ ಆಧ್ಯಾತ್ಮಿಕ ನೆಲೆಗಳ ಪಾವಿತ್ರ್ಯತೆ ರಾಜಕೀಯ ತಂತ್ರಗಳಿಂದ ಕಡಿಮೆಯಾಗಬಾರದು. ಅರ್ಜಿದಾರರ  ನಡೆ ಮತ್ತು ಉದ್ದೇಶಗಳು ದೇವಾಲಯದ ಪ್ರಶಾಂತತೆ ಮತ್ತು ಪವಿತ್ರ ವಾತಾವರಣಕ್ಕೆ ಸ್ಪಷ್ಟವಾಗಿ ವಿರುದ್ಧವಾಗಿವೆ” ಎಂದು ಬಾರ್ ಮತ್ತು ಬೆಂಚ್ ನ್ಯಾಯಾಲಯದ ಹೇಳಿಕೆಯನ್ನು ವರದಿ ಮಾಡಿದೆ.

ಮುತ್ತುಪಿಲಕ್ಕಾಡು ಶ್ರೀ ಪಾರ್ಥಸಾರಥಿ ದೇವಸ್ಥಾನದ ಭಕ್ತರು ಎಂದು ತನ್ನನ್ನು ಕರೆದುಕೊಂಡಿರುವ ಅರ್ಜಿದಾರ ತಾನು ದೇವಸ್ಥಾನದ ಮೇಲೆ ಹಬ್ಬ ಮತ್ತು ಇತರ ವಿಶೇಷ ಸಂದರ್ಭದಲ್ಲಿ ಕೇಸರಿ ಧ್ವಜ ಹಾರಿಸಲು ಮುಂದಾದಾಗ ತಮ್ಮ ರಾಜಕೀಯ ಸಂಪರ್ಕವನ್ನು ಬಳಸಿಕೊಂಡು ಅನೇಕರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇವರು 2022 ರಲ್ಲಿ ದೇವಸ್ಥಾನ ಮತ್ತು ಭಕ್ತರ ಕಲ್ಯಾಣಕ್ಕಾಗಿ ‘ಪಾರ್ಥಸಾರಥಿ ಭಕ್ತಜನಸಮಿತಿʼ ಎಂಬ ಸಂಘಟನೆಯನ್ನು ಕಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಕೇರಳ ಸರ್ಕಾರ ಪರ ವಕೀಲರು ಅರ್ಜಿದಾರರಿಗೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ಧ್ವಜಗಳನ್ನು ಉತ್ಸವಗಳಲ್ಲಿ ಹಾಕಲು ಅವಕಾಶ ನೀಡುವುದು “ರಾಜಕೀಯ ತಂತ್ರಗಳಿಗೆ ದೇವಸ್ಥಾನವನ್ನು ಬಳಸಲು ಅನುಮತಿ ನೀಡಿದಂತಾಗುತ್ತದೆ” ಎಂದು ವಾದಿಸಿದ್ದಾರೆ. ಅರ್ಜಿದಾರರ ಕ್ರಮದಿಂದಾಗಿ ದೇವಸ್ಥಾನದ ಆವರಣದಲ್ಲಿ ಈ ಹಿಂದೆ ಹಲವಾರು ಸಂಘರ್ಷಗಳು ನಡೆದಿವೆ ಎಂದು ಸರ್ಕಾರ ಆರೋಪಿಸಿದೆ.

ಕಾಣಿಕ್ಕವಂಚಿಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸಂಘಟನೆಗಳ ಧ್ವಜ, ಬ್ಯಾನರ್‌ಗಳನ್ನು ಅಳವಡಿಸುವುದನ್ನು ದೇವಸ್ಥಾನದ ಆಡಳಿತ ಸಮಿತಿಯು ನಿಷೇಧಿಸಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲಾಯಿತು. ದೇವಾಲಯದ ಆವರಣದಲ್ಲಿ ಇಂತಹ ಯಾವುದೇ ಕಂಡು ಬಂದರೆ ಕಿತ್ತು ಹಾಕುವಂತೆ 2020 ರಲ್ಲಿ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದಗಳನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪಿನಲ್ಲಿ, “ಅರ್ಜಿದಾರರು ತಮಗೆ ಬೇಕಾದಂತೆ ದೇವಾಲಯದಲ್ಲಿ ಆಚರಣೆಗಳನ್ನು ನಡೆಸಲು ಯಾವುದೇ ಕಾನೂನುಬದ್ಧ ಅಧಿಕಾರವನ್ನು ನ್ಯಾಯಾಲಯದ ಮುಂದೆ ತೋರಿಸಿಲ್ಲ. ಇದಲ್ಲದೆ, ಈ ನ್ಯಾಯಾಲಯವು ಹೊರಡಿಸಿದ ಆದೇಶಗಳು ಮತ್ತು ಆಡಳಿತಾತ್ಮಕ ಸಮಿತಿಯು ತೆಗೆದುಕೊಂಡಿರುವ ನಿರ್ಧಾರಗಳಂತೆ ದೇವಾಲಯದ ಸುತ್ತಮುತ್ತ ಧ್ವಜ ಕಟ್ಟಲು ಅನುಮತಿ ನೀಡುವುದಿಲ್ಲ,” ಎಂದಿದೆ.

ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಬಿಜೆಪಿಯಿಂದ ಗಲಭೆ ಎಬ್ಬಿಸುವ ಹುನ್ನಾರವೇ?
ಹುಬ್ಬಳ್ಳಿ, ಸಪ್ಟೆಂಬರ್.‌14: ಗಣೇಶ ಚತುರ್ಥಿ ಹತ್ತಿರ ಬರುತ್ತಿದ್ದಂತೆ ಹುಬ್ಬಳ್ಳಿಯ ಈದ್ಗಾದಲ್ಲಿ ಗಣೇಶ ಮೂರ್ತಿಯನ್ನು ಕೂರಿಸುವ ಬಗ್ಗೆ ಮತ್ತೆ ಗದ್ದಲ ಎದ್ದಿದೆ. 11 ದಿನ ಪ್ರತಿಷ್ಠಾಪನೆಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿರುವ ಹಿಂದುತ್ವ ಸಂಘಟನೆಗಳಿಂದ  ಮಹಾನಗರ ಪಾಲಿಕೆಗೆ ತಲೆನೋವು ಬಂದಿದೆ.ಗಣೇಶ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿರುವ ಮುಸ್ಲಿಂ ಸಂಘಟನೆಗಳು ಹೈಕೋರ್ಟ್‌ ಮಟ್ಟಿಲು ಏರಿವೆ.

ಹುಬ್ಬಳ್ಳಿಯ ಅಂಜುಮನ್‌ ಎ- ಇಸ್ಲಾಂ ಸಂಸ್ಥೆಯು ಧಾರವಾಡ ಹೈಕೋರ್ಟ್‌ನಲ್ಲಿ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಆರಂಭವಾಗುವ ಮೊದಲೇ ಮುಸ್ಲೀಂ ಸಂಘಟನೆ ಹೈಕೋರ್ಟ್‌ ಮೆಟ್ಟಿಲೇರಿದೆ.

ಕಳೆದ ವರ್ಷ ಹಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಿಂದುತ್ವ ಸಂಘಟನೆಗಳಿಗೆ ಗಣೇಶೋತ್ಸವ ಆಚರಿಸಲು ಅನುಮತಿ ನೀಡಿತ್ತು. ಆಗಲೂ ಮುಸ್ಲೀಂ ಸಂಘಟನೆಗಳು ಮೊರೆ ಹೋಗಿದ್ದವು. ಆ ಸಂದರ್ಭದಲ್ಲಿ ಅನುಮತಿ ನೀಡಬೇಕೋ ಬೇಡವೋ ಎಂಬುದನ್ನು ಪಾಲಿಕೆಯ ವಿವೇಚನೆಗೆ ಬಿಟ್ಟಿತ್ತು.  ಆ ಸಂದರ್ಭದಲ್ಲಿ ಈದ್ಗಾ ಮೈದಾನದಲ್ಲಿ 3 ದಿನಗಳ ಕಾಲ ಗಣೇಶೋತ್ಸವ ನಡೆದಿತ್ತು.

ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿಯವೊಂದಿಗೆ ಶಾಸಕ ಅರವಿಂದ ಬೆಲ್ಲದ ಅವರ ನೇತೃತ್ವದಲ್ಲಿ ಬಿಜೆಪಿ ಸಭೆ ನಡೆಸಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಒತ್ತಡ ಹಾಕಿತ್ತು. ಈಗ ಅನುಮತಿ ನೀಡುವವರೆಗೂ ಅಹೋರಾತ್ರಿ ಹೋರಾಟ ಮಾಡುವುದಾಗಿ ಪಟ್ಟು ಹಿಡಿದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಬೆಲ್ಲದ “ಈದ್ಗಾದಲ್ಲಿ ಗಣೇಶೋತ್ಸವ ನಡೆಸಲು ಅನುಮತಿ ಸಿಕ್ಕಿದರೂ ಆಯುಕ್ತರು ಅಧಿಕೃತವಾಗಿ ಅನುಮತಿ ನೀಡಿಲ್ಲ. ಅವರು ಮುಖ್ಯಮಂತ್ರಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಅನುಮತಿ ನೀಡುವ ತನಕ ಅವರ ಕಚೇರಿಯ ಮುಂದೆಯೇ ಧರಣಿ ಕೂರುತ್ತೇವೆ. ಅನುಮತಿ ಕೊಡುವವರೆಗೂ ನಾವು ಪಾಲಿಕೆ ಬಿಟ್ಟು ಹೋಗೋದಿಲ್ಲ ” ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕಿಡಿಕಾರಿರುವ ಬೆಲ್ಲದ “ಕಾಂಗ್ರೇಸ್‌ ಸರ್ಕಾರ ಹಿಂದೂಗಳ ಭಾವನೆಯ ಜೊತೆಗೆ ಚೆಲ್ಲಾಟ ಆಡುತ್ತಿದೆ. ಮುಸ್ಲೀಮರು ಮಾತ್ರವಲ್ಲ, ಹಿಂದೂಗಳೂ ಅವರಿಗೆ ಮತ ನೀಡಿದ್ದಾರೆ. ಈದ್ಗಾ ಮೈದಾನ ಮಹಾನಗರ ಪಾಲಿಕೆಯ ಆಸ್ತಿ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ನಾವು ಗಣೇಶೋತ್ಸವ ನಡೆಸಲು ಪಾಲಿಕೆಯ ಅನುಮತಿ ಕೇಳುತ್ತಿದ್ದೇವೆ. ಇಲ್ಲಿ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶವಿದೆ. ಮುಸ್ಲಿಮರಿಗೆ ನಮಾಜ್ ಮಾಡೋಕೆ ಸರ್ಕಾರ ಅವಕಾಶ  ನೀಡಿದೆ. ಆದರೆ, ಗಣೇಶ ಹಬ್ಬಕ್ಕೆ ಸಿದ್ದರಾಮಯ್ಯ ಸರ್ಕಾರ ಅನುಮತಿ ಕೊಡುತ್ತಿಲ್ಲ,” ಎಂದು ಹೇಳಿದ್ದಾರೆ.