vijayapura – Peepal Media

ಮುದುಡಿದ ಕಮಲ ; ಅರಳಿದ ಕೈ : ಯತ್ನಾಳ್ ಗೆ ಮುಖಭಂಗ
ಭಾರಿ ನಾಟಕೀಯತೆಯ ನಡುವೆ ಮಂಗಳವಾರ ನಡೆದ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿಜಯಪುರ ನಗರ ಪಾಲಿಕೆಯಲ್ಲಿ ಏಕೈಕ ದೊಡ್ಡ ಪಕ್ಷವಾಗದಿದ್ದರೂ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದೆ.

ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಬಿಜೆಪಿ ಚುನಾವಣಾಧಿಕಾರಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚುನಾವಣೆ ಸಭೆಯಿಂದ ಹೊರ ನಡೆದ ಘಟನೆ ಜರುಗಿತು. ಆ ನಂತರ ಬಿಜೆಪಿ ಒಳಗೇ ರಾಜಕೀಯ ಜಿದ್ದಾಜಿದ್ದಿಗೆ ಬಿದ್ದ ಪರಿಣಾಮ ಅಗತ್ಯ ಸಂಖ್ಯಾಬಲ ಇದ್ದರೂ ಬಿಜೆಪಿ ಸೋಲುಣ್ಣಬೇಕಾಯಿತು.

ಜ.9 ರಂದು ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತರು 2023 ಡಿಸೆಂಬರ್ 28 ರಂದು ಅಧಿಸೂಚನೆ ಹೊರಡಿಸಿದ್ದರು. ಪರಿಣಾಮ ಮಂಗಳವಾರ ಮೇಯರ್-ಉಪ ಮೇಯರ್ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟಣ್ಣವರ ಚುನಾವಣೆ ಪ್ರಕ್ರಿಯೆ ನಡೆಸಿದರು.

ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, 35 ಸದಸ್ಯರಲ್ಲಿ ಪಂಗಡದ ಏಕೈಕ ಸದಸ್ಯ ಕಾಂಗ್ರೆಸ್‍ನ ದಿನೇಶ ಹಳ್ಳಿ ಉಮೇದುವಾರಿಕೆ ಸಲ್ಲಿಸಿ ಅವಿರೋಧ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ. 34 ರ ಸದಸ್ಯೆ ಮೆಹಜಬಿನ್ ಹೊರ್ತಿ ಹಾಗೂ ಬಿಜೆಪಿ ಪಕ್ಷದಿಂದ ವಾರ್ಡ್ ನಂ.12 ರಿಂದ ಗೆದ್ದಿರುವ ರಶ್ಮಿ ಕೋರಿ ಉಮೇದುವಾರಿಕೆ ಸಲ್ಲಿಸಿದ್ದರು.

ಬಿಜೆಪಿ ಸದಸ್ಯರು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಲೇ ಮೇಯರ್-ಉಪ ಮೇಯರ್ ಚುನಾವಣೆ ಪ್ರಕ್ರಿಯೆ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರ ನಡೆದರು. ಸಭೆ ಬಹಿಷ್ಕರಿಸಿ ಹೊರ ಬಂದ ಬಿಜೆಪಿ ಸದಸ್ಯರಲ್ಲಿ ಕೆಲವರು ಚುನಾವಣಾಧಿಕಾರಿಕಾರಿ ವಿರುದ್ಧ ಧಿಕ್ಕಾರ ಕೂಗುವ ಜತೆಗೆ ಕಪ್ಪು ಪಟ್ಟಿಯನ್ನೂ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಬಿಜೆಪಿ 17 ಸದಸ್ಯರ ಬಲ ಹೊಂದಿದ್ದರೂ ಓರ್ವ ಸದಸ್ಯರ ನಿಧನದಿಂದ 16ಕ್ಕೆ ಇಳಿದಿದ್ದು, ಶಾಸಕ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರ ಮತಗಳು ಸೇರಿದಂತೆ 18 ಮತಗಳನ್ನು ಮಾತ್ರ ಹೊಂದಿತ್ತು. ಪಾಲಿಕೆಯ 10 ಸದಸ್ಯರು, ಇಬ್ಬರು ಎಮ್ಮೆಲ್ಸಿ, ಇಬ್ಬರು ಎಂಎಲ್‍ಎ ಹೊಂದಿದ್ದ ಕಾಂಗ್ರೆಸ್ 14 ಮತಗಳನ್ನು ಹೊಂದಿದ್ದರೂ ಐವರು ಪಕ್ಷೇತರರು, ಎಂಐಎಂ ಪಕ್ಷದ ಇಬ್ಬರು ಹಾಗೂ ಓರ್ವ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಸಧ್ಯ ರಾಜ್ಯ ರಾಜಕಾರಣದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಸ್ವಪಕ್ಷೀಯರೇ ಮಸಲತ್ತು ನಡೆಸಿದ್ದು, ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿನ ಬಿಜೆಪಿ ಸೋಲು ಈಗ ಯತ್ನಾಳ್ ರನ್ನು ಮತ್ತೆ ಕುಗ್ಗುವಂತೆ ಮಾಡಿದೆ. ಇತ್ತ ಇಂತಹ ನಾಟಕೀಯ ಬೆಳವಣಿಗೆ ಬಗ್ಗೆ ಅರಿವಿದ್ದ ಕಾಂಗ್ರೆಸ್ ಗೆ ಎಲ್ಲವೂ ನಿರೀಕ್ಷಿತ ಎಂಬಂತೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈದ್ ಮಿಲಾದ್ ಮೆರವಣಿಗೆ ವೇಳೆ ಬ್ಯಾನರ್ ಹರಿದು ಹಾಕಿದ್ದ ಮೂವರ ಬಂಧನ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಬ್ಯಾನರ್ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕರ್ನಾಟಕ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಯಾಸೀನ್, ಮೊಹಮ್ಮದ್ ಮತ್ತು ಸೊಹೈಲ್ ಎಂದು ಗುರುತಿಸಲಾಗಿದೆ.

ಬಿಜೆಪಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಚಿತ್ರವಿದ್ದ ಬ್ಯಾನರ್ ಅನ್ನು ಆರೋಪಿಗಳು ಹರಿದು ಹಾಕಿದ್ದರು. ಗಣೇಶ ಹಬ್ಬದ ಶುಭಾಶಯ ಕೋರಲು ಇದನ್ನು ಹಾಕಲಾಗಿತ್ತು. ಬ್ಯಾನರ್‌ನಲ್ಲಿ ಗಣೇಶ ಮತ್ತು ಶಿವಾಜಿ ಮಹಾರಾಜರ ಚಿತ್ರಗಳಿದ್ದವು.

ಬಳಿಕ ಬ್ಯಾನರ್ ಹರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಶಾಸಕ ಯತ್ನಾಳ್ ಬೆಂಬಲಿಗ ರಘು ವಿಜಯಪುರದ ಗಾಂಧಿ ಚೌಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಇದು ನಗರದಲ್ಲಿ ಕೋಮು ಸೌಹಾರ್ದ ಹಾಳು ಮಾಡುವ ಪ್ರಯತ್ನವಾಗಿದೆ ಎಂದು ದೂರಿದರು.

ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಗಣೇಶ ಚತುರ್ಥಿ ಆಚರಿಸಿದ್ದು, ಈದ್ ಆಚರಣೆ ವೇಳೆ ಯುವಕರ ಗುಂಪು ಉದ್ದೇಶಪೂರ್ವಕವಾಗಿ ಹಿಂದೂ ದೇವರುಗಳ ಫೋಟೋ ಇರುವ ಬ್ಯಾನರ್ ಹರಿದು ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಜಯಪುರ: ಹಂದಿಗಳ ಪ್ರವಾಸ ತಾಣವಾಗಿರುವ ಜಿಲ್ಲಾಸ್ಪತ್ರೆ ಆವರಣ!!
ವಿಜಯಪುರ, ಅ 21: ಇಲ್ಲಿನ ಜಿಲ್ಲಾಸ್ಪತ್ರೆಯ ಆವರಣವು ಅಕ್ಷರಶಃ ಹಂದಿಗಳ ಮೋಜುದಾಣವಾಗಿ ಮಾರ್ಪಟ್ಟಿದ್ದು, ಈ ಆವರಣದೊಳಗೆ ಹಂದಿಗಳು ಕೆಸರಿನಲ್ಲಿ ಬಿದ್ದು ಒದ್ದಾಡುತ್ತಿರುವುದು ಸರಕಾರಿ ಆಸ್ಪತ್ರೆಗಳ ನಿರ್ವಹಣಾ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.

ಆಸ್ಪತ್ರೆಯ ಆವರಣದಲ್ಲಿ ವಿಹಾರದ ಮೋಜು ಅನುಭವಿಸುತ್ತಿರುವ ಹಂದಿಗಳು

ಈ ಜಿಲ್ಲಾಸ್ಪತ್ರೆಗೆ ಇತ್ತೀಚಿನ ದಿನಗಳಲ್ಲಿ ಜನರಿಗಿಂತಲೂ ಹೆಚ್ಚು ಹಂದಿಗಳೇ ಭೇಟಿ ನೀಡುತ್ತಿರುವುದರಿಂದಲೋ ಏನೋ, ಈ ಆ ಸ್ಪತ್ರೆಯ ಆವರಣದಲ್ಲಿ ಮಳೆ ಬಂದರೆ ಹಂದಿಗಳಿಗೆ ಈಜುಕೊಳವೇ ನಿರ್ಮಾಣವಾಗಿಬಿಡುತ್ತದೆ.

ವಿಜಯ ಜಿಲ್ಲಾಸ್ಪತ್ರೆಯ ನೋಟ

ಅಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ, ಈ ಆಸ್ಪತ್ರೆಯ ಬಳಿ ಹಂದಿಗಳ ಉಪಟಳ ನಿನ್ನೆ ಮೊನ್ನೆಯದಲ್ಲ. ಈ ಸಂಬಂಧ ಆಸ್ಪತ್ರೆಯ ಡೀನ್‌ ಆಗಲೀ, ಆರೋಗ್ಯ ಇಲಾಖೆಯಾಗಲೀ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಸ್ಪತ್ರೆಯ ಶುಚಿತ್ವ ಮತ್ತು ರೋಗಿಗಳ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ಆವರಣವನ್ನು ಗುಂಡಿಮುಕ್ತ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಪರ್ತಕರ್ತರಿಗೆ ಜೀವ ಬೆದರಿಕೆ: ರಕ್ಷಣೆ ಕೋರಿ ತಹಶೀಲ್ದಾರರಿಗೆ ಮನವಿ
ಮುದ್ದೇಬಿಹಾಳ: ಮತಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ಎಂಬಾತ ಪತ್ರಿಕಾ ವರದಿಯೊಂದನ್ನು ಆಧರಿಸಿ ಪತ್ರಕರ್ತರೊಬ್ಬರಿಗೆ ಅವಾಚ್ಯಾ ಶಬ್ಧಗಳಿಂದ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಾದ ತಂಗಡಗಿ, ಕುಂಚಗನೂರು, ಕಮಲದಿನ್ನಿ, ಗಂಗೂರು ಸೇರಿದಂತೆ ಇತರೇ ಗ್ರಾಮಗಳಲ್ಲಿ ಭಾರೀ ಮಳೆಯಾಗಿರುವ ಹಿನ್ನಲೆಯಲ್ಲಿ ಗ್ರಾಮಗಳಿಗೆ ನೀರುನುಗ್ಗಿ ಜನರ ಜೀವನ ಅಸ್ತವ್ಯಸ್ತವಾಗಿದ್ದು, ನೆರೆಹಾವಳಿಯಿಂದಾಗಿ ರಸ್ತೆಗಳು ಹಾಳಾಗಿವೆ.

ಈ ಕುರಿತು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದನ್ನು ಸ್ವತಃ ಅಲ್ಲಿನ ಜನರೇ ಮಾಧ್ಯಮಕ್ಕೆ ವರದಿ ನೀಡಿದ್ದಾರೆ. ಈ ವೇಳೆ ಪತ್ರಕರ್ತರಾದ ನಾರಾಯಣ ಮಾಯಾಚಾರಿ ಅವರು ಕ್ಷೇತ್ರದ ಜನರ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ವರದಿ ಮಾಡಿದ್ದರು. ವರದಿಯನ್ನು ಯಾಕೇ ಮಾಡಿದ್ದೀರಾ? ಎಂದು ಶಾಸಕರು ಪ್ರಶ್ನಿಸಿ ಧಮಕಿ ಹಾಕಿದಲ್ಲದೆ, ಜೀವ ಬೇದರಿಕೆ ಹಾಕಿದ್ದಾರೆ.

ಈ ಹಿನ್ನಲೆಯಲ್ಲಿ ತಾಲ್ಲೂಕಿನ ಪತ್ರಕರ್ತರಿಗೆ ರಕ್ಷೆಣೆ ನೀಡಬೇಕು ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳು ಅನುವು ಮಾಡಿಕೊಡಬೇಕು ಮತ್ತು ದಬ್ಬಾಳಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಪತ್ರಕರ್ತರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.