Virat Kohli – Peepal Media

VIRAT KOHLI : ಟೆಸ್ಟ್‌ ಕ್ರಿಕೆಟ್‌ ನಿಂದ ವಿರಾಟ್‌ ಕೋಹ್ಲಿ ನಿವೃತ್ತಿ ಘೋಷಣೆ
ನವದೆಹಲಿ : ಟೆಸ್ಟ್‌ ಕ್ರಿಕೆಟ್‌ ನಿಂದ ನಿವೃತ್ತಿ  ಹೊಂದುವುದಾಗಿ ಭಾರತದ ಕ್ರಿಕೆಟ್‌ ಆಟಗಾರ ವಿರಾಟ್‌ ಕೋಹ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಬಿಸಿಸಿಐ ಸುಳಿವು ನೀಡಿತ್ತು.

14 ವರ್ಷದ ಹಿಂದೆ ನಾನು ಟೆಸ್ಟ್‌ ಕ್ರಿಕೆಟ್‌ ನಲ್ಲಿ ಆಡಲು ಶುರುಮಾಡಿದೆ. ಈ ಪಯಣ ಇಲ್ಲಿಯವರೆಗೂ ಕರೆತರುವುದೆಂದು ನಾನೆಂದೂ ಊಹಿಸಿರಲಿಲ್ಲ. ಅದು ನನ್ನನ್ನು ಪರೀಕ್ಷಿಸಿತು. ರೂಪಿಸಿತು. ಹಾಗೂ ನನ್ನ ಜೀವನವಿಡೀ ನೆನಪಿಡಬಹುದಾದ ಪಾಠ ಕಲಿಸಿತು.

https://www.instagram.com/p/DJiwQm0RbiM/?utm_source=ig_embed&ig_rid=b6a913e6-43d2-4f06-8862-debf053d191e

ಬಿಳಿಯ ವಸ್ತ್ರದಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡುವುದು ನನಗಂತೂ ತೀರಾ ವೈಯಕ್ತಿಕ, ಭಾವನಾತ್ಮಕ ಸಂಗತಿ. ಖಾಲಿ ಸ್ಟೇಡಿಯಂ. ಹಲವು ದಿಗನಳ ಆಟ, ಯಾರೂ ನೆನೆಪಿಟ್ಟುಕೊಳ್ಳದ ಸಣ್ಣ ಸಂಗತಿಗಳು. ಆದರೆ ನಾನೆಂದಿಗೂ ನಿಮ್ಮ ಜೊತೆ ಇರುವೆ ಎಂದು ವಿರಾಟ್‌ ಕೋಹ್ಲಿ ಟ್ವೀಟ್‌ ಮಾಡಿದ್ದಾರೆ.

ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?
ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ಫೈನಲ್‌ ಗೇರಿದೆ. ಎಲ್ಲರ ಬಾಯಲ್ಲೂ ಕೊಹ್ಲಿ-ರೋಹಿತ್‌, ಬುಮ್ರಾ-ಶಮಿ, ರಾಹುಲ್-ಶ್ರೇಯಸ್‌ ಹೆಸರುಗಳು ಕೇಳಿಬರುತ್ತಿವೆ. ನಿಜ, ಈ ಬಾರಿಯ ಭಾರತ ಕ್ರಿಕೆಟ್‌ ತಂಡದ ಪ್ರತಿಯೊಬ್ಬ ಆಟಗಾರನೂ ಎಲ್ಲರ ಮನಗೆದ್ದಿದ್ದಾರೆ. ಅವರೆಲ್ಲರೂ ಒಂದು ತಂಡವಾಗಿ ಆಡಿದ್ದಾರೆ. ಅಸಾಧ್ಯಗಳನ್ನು ಸಾಧಿಸಿದ್ದಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗೆದ್ದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ಹತ್ತು ಗೆಲುವುಗಳು ಅಷ್ಟು ಸುಲಭವಲ್ಲ. ಎಲ್ಲ ವಿಭಾಗಗಳಲ್ಲೂ ಬಲಶಾಲಿಯಾಗಿರುವ ತಂಡವಷ್ಟೇ ಹೀಗೆ ಗೆಲ್ಲಲು ಸಾಧ್ಯ

ಆದರೆ ಕೇವಲ ಆಡುವ ಹನ್ನೊಂದು ಆಟಗಾರರಿಂದ ಇದೆಲ್ಲ ಸಾಧನೆ ಸಾಧ್ಯವೇ? ಭಾರತ ತಂಡ ಇವತ್ತು ಎದುರಾಳಿಗಳಿಗೆ ನಡುಕ ಹುಟ್ಟಿಸುವ ಪಡೆಯಾಗಿ ನಿಲ್ಲಲು ಮುಖ್ಯಕಾರಣ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್.‌ ಹೀಗಾಗಿ ಭಾರತ ತಂಡದ ಸಾಧನೆಯನ್ನು ದ್ರಾವಿಡ್‌ ಹೆಸರು ಹೇಳದೇ ಶ್ಲಾಘಿಸುವುದು ಅನ್ಯಾಯ. ಹಾಗೆ ನೋಡಿದರೆ ದ್ರಾವಿಡ್‌ ಎಂದೂ ತನ್ನ ಬಗ್ಗೆ ತಾನು ಕೊಚ್ಚಿಕೊಂಡು ಮಾತನಾಡಿದ್ದಿಲ್ಲ. ತಂಡದ ನಾಯಕನನ್ನು ಹಿಂದೆ ಸರಿಸಿ ಎಲ್ಲ ತನ್ನಿಂದನೇ ಆಗುತ್ತಿದೆ ಎಂಬಂತೆ ಫೋಜು ಕೊಟ್ಟವರೂ ಅಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ, ತಂಡದ ಗೆಲುವಿಗೆ ಏನೇನು ಸ್ಟ್ರಾಟರ್ಜಿಗಳನ್ನು ಮಾಡಬೇಕೋ ಮಾಡುತ್ತ, ಆಟಗಾರರನ್ನು ತಿದ್ದುತ್ತ ವಿಶ್ವಕಪ್‌ ಗೆಲ್ಲುವ ಹಂತಕ್ಕೆ ತಂದುನಿಲ್ಲಿಸಿರುವ ದ್ರಾವಿಡ್‌ ನಿಜವಾದ ಅರ್ಥದಲ್ಲಿ ನಿಸ್ವಾರ್ಥಿ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಕಾಲಕ್ಕೆ ದ್ರಾವಿಡ್‌ ʻದಿ ವಾಲ್‌ʼ (ಗೋಡೆ) ಎಂದೇ ಹೆಸರಾದವರು. ಸಾಧಾರಣವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ದ್ರಾವಿಡ್‌ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡುತ್ತಿದ್ದವರು. ಯಾರನ್ನು ಬೇಕಾದರೂ ಔಟ್‌ ಮಾಡಬಹುದು, ಆದರೆ ರಾಹುಲ್‌ ಅವರನ್ನಲ್ಲ ಎಂದು ಇತರೆ ದೇಶಗಳ ಬೌಲರ್‌ ಗಳು ಪರಿತಪಿಸುವಷ್ಟು ಅವರು ಕ್ರೀಜ್‌ ಗೆ ಅಂಟಿ ನಿಲ್ಲುತ್ತಿದ್ದರು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಾಗ ಅತ್ಯಂತ ಹೀನಾಯವಾಗಿ 4-0 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು. ಆದರೆ ರಾಹುಲ್‌ ದ್ರಾವಿಡ್‌ ಆ ಸರಣಿಯಲ್ಲಿ ಗಳಿಸಿದ ರನ್‌ ಗಳ ಸಂಖ್ಯೆ 602! ಛಲ ಬಿಡದೆ ಹೋರಾಡುವುದು ರಾಹುಲ್‌ ಸ್ವಭಾವ.

ದ್ರಾವಿಡ್‌ ಕೋಚ್‌ ಹುದ್ದೆಗೆ ದಿಢೀರನೇ ಬರಲಿಲ್ಲ. ಅದಕ್ಕೆ ಅವರು ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು. ಮೊದಲು ಅವರು 2016ರಲ್ಲಿ ಅಂಡರ್‌-19 ಭಾರತ ತಂಡಕ್ಕೆ ಕೋಚ್‌ ಆದರು. ಆ ಹುದ್ದೆಗೆ ಅಂಥ ಡಿಮ್ಯಾಂಡೇನೂ ಇರಲಿಲ್ಲ. ಆದರೆ ದ್ರಾವಿಡ್‌ ಹೊಸ ತಲೆಮಾರಿನ ಕ್ರಿಕೆಟಿಗರನ್ನು ತಯಾರು ಮಾಡುವ ಕಾರ್ಯದಲ್ಲಿ ತಾವೇ ಆಸಕ್ತಿ ವಹಿಸಿ ಈ ಹುದ್ದೆಗೆ ಬಂದಿದ್ದರು. ಈಗ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಹಲವು ಆಟಗಾರರು ದ್ರಾವಿಡ್‌ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. ಮೂರು ವರ್ಷಗಳ ಕಾಲ ಹೊಸ ಹುಡುಗರಿಗೆ ತರಬೇತಿ ನೀಡಿದ ನಂತರ ದ್ರಾವಿಡ್‌ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (ಎನ್‌ ಸಿ ಎ) ನಿರ್ದೇಶಕರಾಗಿ ಬಂದರು. ಎನ್.ಸಿ.ಎ ಒಂದು ಬಗೆಯಲ್ಲಿ ಆಟಗಾರರಿಗೆ ಸಂಜೀವಿನಿ ಇದ್ದಂತೆ. ಗಾಯಗೊಂಡವರು, ಫಿಟ್ನೆಸ್‌ ಕಳೆದುಕೊಂಡವರು ಇಲ್ಲಿ ಬಂದು ಪರಿಪೂರ್ಣವಾಗಿ ಸಿದ್ಧರಾಗುತ್ತಾರೆ. ಎನ್‌.ಸಿ.ಎ ಯನ್ನು ಸಮರ್ಥವಾಗಿ ಕಟ್ಟುವಲ್ಲಿ ದ್ರಾವಿಡ್‌ ಯಶಸ್ವಿಯಾದರು.

ಇದಾದ ನಂತರವೇ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆದರು. ಅವರು ಕೋಚ್‌ ಆದಾಗ ವಿರಾಟ್‌ ಕೊಹ್ಲಿ ತಂಡದ ನಾಯಕರಾಗಿದ್ದರು. ಆದರೆ ಕೊಹ್ಲಿಯನ್ನು ಒಂದು ಬಗೆಯಲ್ಲಿ ಅಪಮಾನಿಸಿ ನಾಯಕತ್ವದಿಂದ ಇಳಿಯುವಂತೆ ಮಾಡಿತು ಬಿಸಿಸಿಐ. ರೋಹಿತ್‌ ಶರ್ಮಾ ನಾಯಕರಾದರು. ಇಂಥ ಸಂದರ್ಭದಲ್ಲಿ ತಂಡವನ್ನು ಕಟ್ಟುವುದು ಕಷ್ಟದ ಕೆಲಸ. ದ್ರಾವಿಡ್‌ ಸವಾಲಾಗಿ ತೆಗೆದುಕೊಂಡು ಸತತ ಶ್ರಮವಹಿಸಿ ತಂಡ ಕಟ್ಟುತ್ತ ಹೋದರು. ಹೊಸಹೊಸ ಪ್ರಯೋಗಗಳನ್ನು ಮಾಡಿದರು. ಫಾರ್ಮ್‌ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್‌ ಕೈಗೆ ಗ್ಲೌಸ್‌ ಕೊಟ್ಟು ವಿಕೆಟ್‌ ಕೀಪಿಂಗ್‌ ಗೆ ಹಚ್ಚಿದರು. ತಂಡದ ನಾಯಕ ರೋಹಿತ್‌ ಶರ್ಮಾ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡರು. ಭಾರತ ತಂಡದ ಡ್ರೆಸಿಂಗ್‌ ರೂಮ್‌ ಲವಲವಿಕೆಯಿಂದ ತುಂಬಿ ತುಳುಕಿತು. ದ್ರಾವಿಡ್‌ ಎಲ್ಲರಿಗೂ ಸ್ಪೂರ್ತಿಯಾಗಿ ನಿಂತರು.

ದ್ರಾವಿಡ್‌ ಎಂದರೆ ಹಾಗೆಯೇ. ಸದ್ದುಗದ್ದಲವಿಲ್ಲದೆ ತಮ್ಮ ಕೆಲಸ ತಾವು ಮಾಡುವವರು. ಅವರು ಜೋರಾಗಿ ಮಾತಾಡಿದ್ದನ್ನು ನೋಡಿದವರೇ ವಿರಳ. ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು ಎಂಬುದು ಅವರಿಗೆ ಗೊತ್ತು. ಅಷ್ಟೆಲ್ಲ ದೊಡ್ಡ ಸಾಧನೆ ಮಾಡಿಯೂ ಅವರು ಎಲೆಮರೆಯ ಕಾಯಿಯಂತೆ ಉಳಿದವರು. ಈಗಲೂ ಅಷ್ಟೆ. ಭಾರತ ವಿಶ್ವಕಪ್‌ ಗೆದ್ದು ನಿಂತಾಗ ಅವರು ಇದು ನನ್ನ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಮೀಡಿಯಾಗಳ ಕಣ್ಣಿಗೂ ಪದೇಪದೇ ಬೀಳುವುದಿಲ್ಲ. ಅವರು ಹಿನ್ನೆಲೆಯಲ್ಲೇ ನಿಂತು ಸಂಭ್ರಮಿಸುವ ಜೀವ. ದ್ರಾವಿಡ್‌ ಅಂದರೆ ಹಾಗೆಯೇ, ʻಕಾಣ್ತಿದೆ, ಆದರೆ ಕಾಣಾಕಿಲ್ಲʼ!

ಕ್ರಿಕೆಟ್‌ ‘ಕಿಂಗ್’ ಕೊಹ್ಲಿ ವೃತ್ತಿಜೀವನಕ್ಕೆ 15 ವರ್ಷ
ಕ್ರಿಕೆಟ್ ನ ಕಿಂ‌ಗ್ ಎಂದೇ ಖ್ಯಾತಿ ಪಡೆದ ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿ ಇಂದಿಗೆ ಸರಿಯಾಗಿ 15 ವರ್ಷಗಳು. ವಿರಾಟ್ ಕೊಹ್ಲಿ 18 ಆಗಸ್ಟ್ 2008ರಂದು ಶ್ರೀಲಂಕಾ ವಿರುದ್ಧದ ODI ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರು.

ಫಾರ್ಮ್ಯಾಟ್‌ ಯಾವುದೇ ಇರಲಿ, ರನ್‌ಗಳ ಪ್ರವಾಹವನ್ನೇ ಹರಿಸುವ ಕೊಹ್ಲಿ ಇದುವರೆಗೆ ಟೆಸ್ಟ್, ODI ಮತ್ತು T20 ಯಂತಹ ಎಲ್ಲಾ ಮೂರು ಸ್ವರೂಪಗಳಲ್ಲಿ 500ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. ಸತತವಾಗಿ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಅವರು ಚೇಸಿಂಗ್ ಮಾಸ್ಟರ್ ಎಂದು ಹೊಗಳಲ್ಪಟ್ಟಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ, ಕೊಹ್ಲಿ 111 ಟೆಸ್ಟ್‌ಗಳಲ್ಲಿ 49.3 ಸರಾಸರಿಯಲ್ಲಿ 8676 ರನ್ ಗಳಿಸಿದ್ದಾರೆ. ಅವರು 275 ODIಗಳಲ್ಲಿ 57.32 ಸರಾಸರಿಯಲ್ಲಿ 12,898 ರನ್ ಗಳಿಸಿದ್ದಾರೆ. 115 T20I ಗಳಲ್ಲಿ 52.73ರ ಸರಾಸರಿಯಲ್ಲಿ ಮತ್ತು 137.97 ರ ಸ್ಟ್ರೈಕ್ ರೇಟ್‌ನಲ್ಲಿ 4008 ರನ್ ಗಳಿಸಿದ್ದಾರೆ.

ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 15 ವರ್ಷ ಪೂರೈಸಿರುವ ವಿರಾಟ್ ಕೊಹ್ಲಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಕೊಹ್ಲಿಯ ಅದ್ಭುತ ಸಾಧನೆಗಳು ಕೋಟ್ಯಂತರ ಜನರಿಗೆ ಸ್ಫೂರ್ತಿ ನೀಡಿವೆ ಎಂದು ಜಯ್ ಶಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

“ಹೇಳಲು ಹೆಚ್ಚೇನಿಲ್ಲ..” ಸಾಕರ್ ಜಗತ್ತಿಗೆ ಧನ್ಯವಾದ ತಿಳಿಸಿದ ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ
ಮೊರಾಕೊ ವಿರುದ್ಧದ ಆಘಾತಕಾರಿ ಸೋಲಿನ ನಂತರ ಪೋರ್ಚುಗಲ್ಗಾಗಿ ವಿಶ್ವಕಪ್ ಗೆಲ್ಲುವ ಕನಸು ಕೊನೆಗೊಂಡಿದೆ ಎಂದು ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಭಾವನಾತ್ಮಕವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.

ಕತಾರ್ (Qatar) ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್ ಫುಟ್ಬಾಲ್ ಕ್ವಾರ್ಟರ್ ಫೈನಲ್ ನಲ್ಲಿ ಮೊರಾಕೋ ವಿರುದ್ಧದ ಸೋಲಿನ ಬಳಿಕ ದಿಗ್ಬ್ರಮೆಗೊಂಡ ಒಂದು ದಿನದ ನಂತರ ಭಾನುವಾರದ ದಿನ ಕ್ರಿಸ್ಟಿಯಾನೋ ರೊನಾಲ್ಡೋ ಹಾಕಿದ ಒಂದು ಪೋಸ್ಟ್ ಫುಟ್ಬಾಲ್ ಪ್ರೇಮಿಗಳು ಅದರಲ್ಲೂ ಕ್ರಿಸ್ಟಿಯಾನೋ ರೊನಾಲ್ಡೋ ಅಭಿಮಾನಿಗಳನ್ನು ಭಾವನಾತ್ಮಕವಾಗಿ ದುಃಖತಪ್ತರನ್ನಾಗಿಸಿದೆ.

ಕ್ವಾರ್ಟರ್ ಫೈನಲ್ ನಂತಹ ನಿರ್ಣಾಯಕ ಪಂದ್ಯಕ್ಕಾಗಿ ಬೆಂಚ್ ನಲ್ಲಿ ಇದ್ದ ರೊನಾಲ್ಡೋ ದ್ವಿತೀಯಾರ್ಧದ ಬದಲಿ ಆಟಗಾರನಾಗಿ ಅಂಕಣಕ್ಕೆ ಬಂದರು. ಆದರೆ ಮೊರಾಕೋ ಆಟಗಾರ ಯೂಸೆಫ್ ಎನ್-ನೆಸಿರಿ ಅವರ ಮೊದಲಾರ್ಧದ ಸ್ಟ್ರೈಕ್ ಅದಾಗಲೇ ಮೊರೊಕ್ಕೊವನ್ನು ಸೆಮಿ-ಫೈನಲ್ಗೆ ಕೊಂಡೊಯ್ಯಲು ಸಾಕಾಗಿದ್ದರಿಂದ ರೊನಾಲ್ಡೋ ತನ್ನ ಪ್ರಭಾವ ಬೀರಲು ಮತ್ತು ಪೋರ್ಚುಗಲ್ ನನ್ನು ಸೆಮಿಫೈನಲ್ ಗೆ ಕೊಂಡೊಯ್ಯಲು ವಿಫಲರಾದರು.

ಅದರಂತೆ ಕ್ರಿಸ್ಟಿಯಾನೋ ರೊನಾಲ್ಡೋ ಅವರ ವಯಕ್ತಿಕ ಜಾಲತಾಣದ ಪೋಸ್ಟ್ ನಲ್ಲಿ…
“ಪೋರ್ಚುಗಲ್ಗೆ ವಿಶ್ವಕಪ್ ಗೆಲ್ಲುವುದು ನನ್ನ ವೃತ್ತಿಜೀವನದ ಅತ್ಯಂತ ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಕನಸಾಗಿತ್ತು. ಅದೃಷ್ಟವಶಾತ್, ನಾನು ಪೋರ್ಚುಗಲ್ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಆಯಾಮದ ಪ್ರಶಸ್ತಿಗಳನ್ನು ಗೆದ್ದಿದ್ದೇನೆ, ಆದರೆ ನಮ್ಮ ದೇಶದ ಹೆಸರನ್ನು ವಿಶ್ವದಲ್ಲೇ ಉನ್ನತ ಮಟ್ಟದಲ್ಲಿ ಇಡುವುದು ನನ್ನ ದೊಡ್ಡ ಕನಸಾಗಿತ್ತು” ಎಂದು ರೊನಾಲ್ಡೊ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಮುಂದುವರಿದು “ನಾನು ಅದಕ್ಕಾಗಿ ಹೋರಾಡಿದೆ. ಈ ಕನಸು ಸಾಕಾರಗೊಳಿಸಲು ನಾನು ಕಠಿಣವಾಗಿ ಹೋರಾಡಿದೆ. 16 ವರ್ಷಗಳ ನನ್ನ ವೃತ್ತಿ ಜೀವನದ ವಿಶ್ವಕಪ್‌ನಲ್ಲಿ ಗಳಿಸಿದ 5 ಉಪಸ್ಥಿತಿಗಳಲ್ಲಿ, ಯಾವಾಗಲೂ ಶ್ರೇಷ್ಠ ಆಟಗಾರರೊಂದಿಗೆ ಮತ್ತು ಲಕ್ಷಾಂತರ ಪೋರ್ಚುಗೀಸ್ ಜನರ ಬೆಂಬಲದೊಂದಿಗೆ, ನಾನು ನನ್ನ ಎಲ್ಲವನ್ನೂ ನೀಡಿದ್ದೇನೆ. ನಾನು ಮೈದಾನದಲ್ಲಿ ಎಲ್ಲವನ್ನೂ ಬಿಟ್ಟುಬಿಟ್ಟೆ. ನಾನು ಎಂದಿಗೂ ನನ್ನ ಮುಖವನ್ನು ಹೋರಾಟದ ಕಡೆಗೆ ತಿರುಗಿಸಲಿಲ್ಲ ಮತ್ತು ನಾನು ಆ ಕನಸನ್ನು ಎಂದಿಗೂ ಬಿಡಲಿಲ್ಲ.” ಎಂದು ತಿಳಿಸಿದ್ದಾರೆ.

ಆದಾಗ್ಯೂ, 37 ವರ್ಷ ವಯಸ್ಸಿನ ರೊನಾಲ್ಡೋ ತಮ್ಮ ಭವಿಷ್ಯದ ಬಗ್ಗೆ ಏನನ್ನೂ ಬಹಿರಂಗಪಡಿಸಿಲ್ಲ.

“ದುರದೃಷ್ಟವಶಾತ್, ನಿನ್ನೆ ನನ್ನ ಎಲ್ಲಾ ಕನಸು ಕೊನೆಗೊಂಡಿತು. ಇದನ್ನು ಉದ್ವೇಗಬರಿತವಾಗಿ ಹೇಳುವುದು ಈ ಸಂದರ್ಭದಲ್ಲಿ ಅಷ್ಟು ಸಮಂಜಸವಲ್ಲ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ, ಈಗಾಗಲೇ ಬಹಳಷ್ಟು ಹೇಳಲಾಗಿದೆ, ಬಹಳಷ್ಟು ಬರೆಯಲಾಗಿದೆ, ಹೆಚ್ಚು ಊಹಿಸಲಾಗಿದೆ, ಆದರೆ ಪೋರ್ಚುಗಲ್ಗೆ ನನ್ನ ಸಮರ್ಪಣೆಯು ಒಂದು ಕ್ಷಣವೂ ಆಚೀಚೆ ಆಗಿಲ್ಲ. ಪ್ರತಿಯೊಬ್ಬರ ಗುರಿಗಾಗಿ ಯಾವಾಗಲೂ ಹೋರಾಡಿದೆ. ಮತ್ತು ನನ್ನ ತಂಡದ ಸದಸ್ಯರು ಮತ್ತು ನನ್ನ ದೇಶಕ್ಕೆ ನಾನು ಎಂದಿಗೂ ಬೆನ್ನು ತಿರುಗಿಸಿಲ್ಲ.”

“ಸದ್ಯಕ್ಕೆ, ಹೇಳಲು ಹೆಚ್ಚೇನೂ ಇಲ್ಲ. ಧನ್ಯವಾದಗಳು, ಪೋರ್ಚುಗಲ್. ಧನ್ಯವಾದಗಳು, ಕತಾರ್. ಕನಸು ಇದ್ದಾಗಲೂ ಸುಂದರವಾಗಿತ್ತು. ಈಗ, ಉತ್ತಮ ಸಲಹೆಗಾರರಾಗಿ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವಕಾಶ ಮಾಡಿಕೊಡುವ ಸಮಯ,” ಅವರು ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಭಾವನಾತ್ಮಕವಾಗಿ ತಮ್ಮ ಜಾಲತಾಣದ ಪೋಸ್ಟ್ ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಪೋರ್ಚುಗಲ್ ಮಾತ್ರವಲ್ಲದೆ, ವಿಶ್ವದಾದ್ಯಂತ ಬಿಲಿಯನ್ ಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್ಟಿಯಾನೋ ರೊನಾಲ್ಡೋ ಅವರ ಈ ಪೋಸ್ಟ್ ಗೆ ವಿಶ್ವದ ದೊಡ್ಡ ದೊಡ್ಡ ಗಣ್ಯರು ಪ್ರತಿಕ್ರಿಯಿಸಿದ್ದಾರೆ. ಮಾತ್ರವಲ್ಲ ರೊನಾಲ್ಡೋ ಪಂದ್ಯ ಸೋತರೂ ಅಭಿಮಾನಿಗಳಿಂದ ಮತ್ತೊಮ್ಮೆ ಪ್ರೀತಿಯ ತಬ್ಬುಗೆ ಪಡೆದುಕೊಂಡಿದ್ದಾರೆ. ನಿರ್ಣಾಯಕ ಹಂತದಲ್ಲಿ ಒಬ್ಬ ವ್ಯಕ್ತಿ ಎಷ್ಟು ಶ್ರಮ ವಹಿಸಬಹುದು, ಅದನ್ನು ಮೀರಿದ ಶ್ರಮ ನಿಮ್ಮದು ಎಂಬ ಪ್ರೀತಿಯ ಮಾತುಗಳನ್ನು ಪಡೆದುಕೊಂಡಿದ್ದಾರೆ.

ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಕೂಡಾ ರೊನಾಲ್ಡೋ ಬಗೆಗಿನ ತಮ್ಮ ಫೇಸ್ಬುಕ್ ಪೋಸ್ಟ್ ಕೂಡಾ ಅತ್ಯಂತ ಆಪ್ತವೆನಿಸಿದೆ. “ಯಾವುದೇ ಟ್ರೋಫಿ ಅಥವಾ ಯಾವುದೇ ಶೀರ್ಷಿಕೆಯು ನೀವು ಈ ಕ್ರೀಡೆಯಲ್ಲಿ ಮತ್ತು ಪ್ರಪಂಚದಾದ್ಯಂತದ ಕ್ರೀಡಾಭಿಮಾನಿಗಳಿಗೆ ಏನು ಮಾಡಿದ್ದೀರಿ ಎಂಬುದರಲ್ಲಿ ಏನನ್ನೂ ತೆಗೆದುಕೊಳ್ಳುವುದಿಲ್ಲ. ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ಯಾವುದೇ ಶೀರ್ಷಿಕೆಯಿಂದ ವಿವರಿಸಲು ಸಾಧ್ಯವಿಲ್ಲ ಮತ್ತು ನೀವು ಆಡುವುದನ್ನು ನಾವು ನೋಡಿದಾಗ ನಾನು ಮತ್ತು ಪ್ರಪಂಚದಾದ್ಯಂತದ ಅನೇಕರು ಏನನಿಸುತ್ತದೆ ಎಂಬುದನ್ನು ವಿವರಿಸಲೂ ಸಾಧ್ಯವಿಲ್ಲ. ಅದು ದೇವರ ಕೊಡುಗೆ. ಪ್ರತಿ ಬಾರಿಯೂ ತನ್ನ ಹೃದಯದಿಂದ ಆಡುವ ವ್ಯಕ್ತಿಗೆ ನಿಜವಾದ ಆಶೀರ್ವಾದ ಮತ್ತು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಪ್ರತಿರೂಪವಾಗಿದೆ ಮತ್ತು ಯಾವುದೇ ಕ್ರೀಡಾಪಟುವಿಗೆ ನಿಜವಾದ ಸ್ಫೂರ್ತಿಯಾಗಿದೆ. ನೀವು ನನಗೆ ಸಾರ್ವಕಾಲಿಕ ಶ್ರೇಷ್ಠರು.” ಎಂದು ವಿರಾಟ್ ಕೊಹ್ಲಿ ತಮ್ಮ ಅಭಿಮಾನ ಮೆರೆದಿದ್ದಾರೆ.

ತನ್ನ ಐದನೇ ಮತ್ತು ಬಹುಶಃ ತನ್ನ ಕೊನೆಯ ವಿಶ್ವಕಪ್‌ನಲ್ಲಿ ಆಡುತ್ತಿರುವ ರೊನಾಲ್ಡೊ, ಇಷ್ಟು ವರ್ಷಗಳಲ್ಲಿ ತಮ್ಮನ್ನು ಬೆಂಬಲಿಸಿದ ಪೋರ್ಚುಗೀಸ್ ಜನರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆ ಎಂದು ಹೇಳಿದ್ದಾರೆ.

ಟಿ-20 ವಿಶ್ವಕಪ್‌: ಭಾರತಕ್ಕೆ ಹೀನಾಯ ಸೋಲು
ಅಡಿಲೇಡ್‌ ಓವಲ್‌: ಇಂದು ನಡೆದ ವಿಶ್ವಕಪ್‌ ಎರಡನೇ ಸೆಮಿಪೈನಲ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್‌ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದೆ.

ಇಂಗ್ಲೆಂಡ್‌ ತಂಡವು ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕಾರಣ, ಮೊದಲು ಬ್ಯಾಟಿಂಗ್‌ ಇಳಿದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 168 ರನ್‌ ಕಲೆಹಾಕಿತು.

ಈ ವೇಳೆ ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್‌. ರಾಹುಲ್‌ ಎರಡನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ನಂತರ ಕಣಕ್ಕಿಳಿದ ವಿರಾಟ್‌ ಕೊಹ್ಲಿ ತಂಡಕ್ಕೆ ಭರವಸೆಯ ಆಟವಾಡಿದರು. ಆದರೆ ಓಂಬತ್ತನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಅವರು ಜೊರ್ಡನ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದರು. ನಂತರ ಬಂದಂತಹ ಸೂರ್ಯಕುಮಾರ್‌ ಯಾದವ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡದೆ, 10 ಎಸೆತಗಳಲ್ಲಿ 14 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ನಂತರ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ ಉತ್ತಮವಾಗಿ ಆಟವಾಡಿದ್ದರಿಂದ ತಂಡ ಹೆಚ್ಚು ರನ್‌ಗಳಿಸುವ ನಿಟ್ಟಿನಲ್ಲಿ ಸಾಗಿತು. ತಂಡಕ್ಕೆ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ ಅವರು ಗಳಿಸಿದ ಅರ್ಧಶತಕದಿಂದಾಗಿ ಭಾರತ ತಂಡ 168 ರನ್‌ಗಳಿಸಲು ಸಾಧ್ಯವಾಯಿತು.

ನಂತರ 168 ರನ್‌ ಬೆನ್ನತ್ತಿದ ಇಂಗ್ಲೆಂಡ್‌ ತಂಡ ಯಾವುದೇ ವಿಕೆಟ್‌ ಇಲ್ಲದೆ, ನಿರಾಸದಾಯಕ ಗೆಲುವು ಸಾಧಿಸಿತು.

ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭಾರತ ತಂಡದ ಎಲ್ಲಾ ಬೌಲರ್‌ಗಳಿಗೆ ತಮ್ಮ ಉತ್ತಮ ಪ್ರರ್ದಶನದ ಮೂಲಕ ಸರಿಯಾಗಿ ಪಾಠ ಕಲಿಸಿದರು. ಈ ಮೂಲಕ ಇಂಗ್ಲೆಂಡ್‌ ತಂಡ ಬಲಿಷ್ಠ ಭಾರತ ತಂಡವನ್ನು ಮಣಿಸಿ ಪೈನಲ್‌ ಪ್ರವೇಶಿಸಿದೆ.

ಸ್ಕೋರ್ ಕಾರ್ಡ್‌

ಭಾರತ: 168/6(20)

ಬ್ಯಾಟಿಂಗ್

ಕೆ.ಎಲ್.ರಾಹುಲ್ : 5(5)

ರೋಹಿತ್ ಶರ್ಮಾ : 27(28)

ವಿರಾಟ್ ಕೊಹ್ಲಿ : 50(40)

ಸೂರ್ಯಕುಮಾರ್ ಯಾದವ್ : 14(10)

ಹಾರ್ದಿಕ್ ಪಾಂಡ್ಯ : 63(33)

ರಿಷಬ್ ಪಂತ್ : 6(4)

ರವಿಚಂದ್ರನ್ ಅಶ್ವಿನ್ : 0(0)

ಇತರೆ : 3

ಬೌಲಿಂಗ್

ಬೆನ್ ಸ್ಟೊಕ್ಸ್ : 2-0-18-0

ಕ್ರಿಸ್ ವೂಕ್ಸ್ : 3-0-24-1

ಸ್ಯಾಮ್ ಕರನ್ : 4-0-42-0

ಆದಿಲ್ ರಶೀದ್ : 4-0-20-1

ಲಿಯಾಮ್ ಲಿವಿಂಗ್ಸ್ಟನ್ : 3-0-21-0

ಕ್ರಿಸ್ ಜೋರ್ಡನ್ : 4-0-43-3

ಇಂಗ್ಲೆಂಡ್ : 170/0(16)

ಬ್ಯಾಟಿಂಗ್

ಜಾಸ್ ಬಟ್ಲರ್ : 80(49)

ಅಲೆಕ್ಸ್ ಹೇಲ್ಸ್ : 86(47)

ಇತರೆ: 4

ಬೌಲಿಂಗ್

ಭುವನೇಶ್ವರ್ ಕುಮಾರ್ : 2-0-25-0

ಅರ್ಶದೀಪ್ ಸಿಂಗ್ : 2-0-15-0

ಅಕ್ಸರ್ ಪಟೇಲ್ : 4-0-30-0

ಮೊಹಮ್ಮದ್ ಶಮಿ : 3-0-39-0

ರವಿಚಂದ್ರನ್ ಅಶ್ವಿನ್ : 2-0-27-0

ಹಾರ್ದಿಕ್ ಪಾಂಡ್ಯ : 3-0-34-0

T20 ವಿಶ್ವ ಕಪ್‌ : ಭಾರತ ಮತ್ತು ಇಂಗ್ಲೆಂಡ್‌ ಎರಡನೇ ಸಮಿಫೈನಲ್‌, ತಂಡಕ್ಕೆ ನೆರವಾದ ಕೊಹ್ಲಿ-ಪಾಂಡ್ಯಾ
ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 168/6

ಅಡಿಲೇಡ್‌ ಓವೆಲ್‌: ಭಾರತ ಇಂಗ್ಲೆಂಡ್‌ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯ ಇಂದು ನಡೆಯುತ್ತಿದ್ದು ಭಾರತ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 168 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ದಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್‌ ಎರಡನೇ ಓವರ್‌ನಲ್ಲಿ ಕೆ.ಎಲ್‌ ರಾಹುಲ್‌ ವಿಕೇಟ್‌ ಪಡೆದಿದ್ದು ಭಾರತಕ್ಕೆ ಭಾರಿ ಹಿನ್ನಡೆ ಎನ್ನಬಹುದು. ನಂತರ ರೋಹಿತ್‌ ಜೊತೆಗೂಡಿದ ರನ್‌ ಮಿಷಿನ್‌ ಕೊಹ್ಲಿ ಇಬ್ಬರೂ ಒಂದಷ್ಟು ಕಾಲ ಜವಾಬ್ದಾರಿಯುತವಾಗಿ ಆಡುತ್ತ ಇಬ್ಬರ ಜೊತೆಯಾಟದಲ್ಲಿ 47 ರನ್‌ ಗಳಿಸಿದರು.

ಓಂಬತ್ತನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಅವರು ಜೊರ್ಡನ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದರೆ ನಂತರ ಬಂದಂತಹ ಸೂರ್ಯಕುಮಾರ್‌ ಯಾದವ್‌ ಸಹಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಹು ನಿರೀಕ್ಷೆ ಹೊಂದಿದ್ದ ಸೂರ್ಯಕುಮಾರ್‌ ಗಳಿಸಿದ್ದು ಮಾತ್ರ ಕೇವಲ 14 ರನ್.‌ ತಂಡಕ್ಕೆ ಎಂದಿನಂತೆ ಅಪದ್ಭಾಂದವರಾಗಿದ್ದು ಮಾತ್ರ  ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ . ಒಂದೆಡೆ ವಿಕೇಟ್‌ ಕಳೆದುಕೋಳ್ಳುತ್ತಿದ್ದರೂ ಸಹ ಯಾವುದೇ ರೀತಿಯಲ್ಲೂ ಗೊಂದಲಕ್ಕೊಳಗಾಗದೆ ಮಂದಗತಿಯಲ್ಲಿ ಶೂರು ಮಾಡಿ ಉತ್ತಮ ಸ್ಟ್ರೈಕ್‌ ರೇಟ್‌ ನತ್ತ ಭಾರತವನ್ನ ಕೊಂಡೊಯ್ಯುತ್ತಿದ್ದರು. ಕೋಹ್ಲಿಗೆ ಹಾರ್ದಿಕ್‌ ಪಾಂಡ್ಯಾ ಸಹ ಉತ್ತಮ ರೀತಿಯಲ್ಲಿ ಸ್ಟ್ರೈಕ್‌ ನೀಡುತ್ತಾಬಂದಿದ್ದು ಅವಶ್ಯವಾಗಿತ್ತು ಮತ್ತು ಹಾಗೆಯೇ ಮುಂದುವರೆದರೂ ಸಹ.

ಕೊಹ್ಲಿಯ ಅರ್ಧ ಶತಕದ ನಂತರ ಅವರ ಅಬ್ಬರದ ಆಟಕ್ಕೆ ಕಾದಿದ್ದ ಅಭಿಮಾನಿಗಳಿಗೆ ಪಾಂಡ್ಯ ಭರ್ಜರಿ ಮನರಂಜನೆಯನ್ನೇ ಕೊಟ್ಟುಬಿಟ್ಟರು. ಕೊಹ್ಲಿಯ ಆಟಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ಕೊಹ್ಲಿ ಅರ್ಧ ಶತಕಕ್ಕೆ ಕ್ರಿಸ್‌ ವೂಕ್ಸ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದದ್ದು ಮಾತ್ರ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿತು. ಕೊಹ್ಲಿ ಮತ್ತು ಪಾಂಡ್ಯ ಜೊತೆಯಾಟ ತಂಡಕ್ಕೆ 61 ರನ್‌ ತಂದುಕೊಟ್ಟಿತು. ಕೊಹ್ಲಿ ನಂತರ ಪಾಂಡ್ಯ ಆಟಕ್ಕೆ ಕಡಿವಾಣ ಹಾಕಲು ಇಂಗ್ಲೆಂಡ್‌ ಆಟಗಾರರಿಗೆ ಆಗಲೇ ಇಲ್ಲ.

ಒಟ್ಟಾರೆ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 6 ವಿಕೆಟ್‌ ನೀಡಿ, 168 ರನ್‌ ಗಳಿಸಿದ್ದು, ಭಾರತದ ಬೌಲರ್‌ಗಳ ಮೇಲೆ ತಂಡದ ಗೆಲುವು ಆಧರಿಸಿದೆ.

ಟಿ-20 ವಿಶ್ವಕಪ್‌: ಭಾರತಕ್ಕೆ ಪಾಕಿಸ್ತಾನದೆದುರು ಫೈನಲ್‌ ಆಡಲು ನಾವು ಬಿಡುವುದಿಲ್ಲ
ಅಡಿಲೇಡ್ ಓವಲ್ (ಆಸ್ಟ್ರೇಲಿಯಾ):‌ ಟಿ-20 ವಿಶ್ವಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡ ಕಣಕ್ಕಿಳಿಯಲು ನಾವು ಬಿಡುವುದಿಲ್ಲ ಎಂದು ಇಂಗ್ಲೇಂಡ್‌ ತಂಡದ ನಾಯಕ ಜೋಸ್‌ ಬಟ್ಲರ್‌ ಹೇಳಿದ್ದಾರೆ.

ʼಅಡಿಲೇಡ್ ಓವಲ್‌ʼನಲ್ಲಿ ಗುರುವಾರ ನಡೆಯಲಿರುವ ಟಿ 20 ವಿಶ್ವಕಪ್‌ ಎರಡನೇ ಸೆಮಿಫೈನಲ್‌ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡ ಭಾರತ ತಂಡವನ್ನುಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರವರು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್‌ನಲ್ಲಿ ಯಾವ ತಂಡ ಜಯಗಳಿಸುವುದೊ, ಆ ತಂಡದ ವಿರುದ್ಧ ಪೈನಲ್‌ನಲ್ಲಿ ಆಡಲಿದೆ.

ಭಾರತದ ವಿರುದ್ಧದ ಪಂದ್ಯದ ಮೊದಲು, ನಾಯಕ ಜೋಸ್ ಬಟ್ಲರ್ ಅವರು ತಮ್ಮ ತಂಡದ ಸಿದ್ಧತೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಡೇವಿಡ್ ಮಲಾನ್ ಮತ್ತು ಮಾರ್ಕ್ ವುಡ್‌ಗೆ ಗಾಯದ ಭಯ ಕಾಡುತ್ತಿರುವುದಾಗಿ ತಿಳಿಸಿದರು. ನಂತರ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಚ್ಚು ರನ್‌ಗಳಿಸದಂತೆ ಕಟ್ಟಿಹಾಕುತ್ತೇವೆ ಎಂದು ಸಹ ಹೇಳಿದ್ದಾರೆ.

ಈ ವೇಳೆ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸ್ಫರ್ಧಿಸಲು ನಾವು ಬಿಡುವುದಿಲ್ಲ, ಏಕೆಂದರೆ ನಮ್ಮ ತಂಡ ಭಾರತ ತಂಡವನ್ನು ಸೋಲಿಸುವ ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಂದುವರೆದು ಮಾತನಾಡಿದ ಅವರು, ʼನೋಡಿ, ನಾವು ಖಂಡಿತವಾಗಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಆಟವಾಡುವುದನ್ನು ನಾವು ನೋಡಲು ಬಯಸುವುದಿಲ್ಲ. ಆದ್ದರಿಂದ ಈ ರೀತಿ ನಡೆಯದಂತೆ ನಾವು ನಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಾವು ಮಾಡುತ್ತೇವೆʼ ಎಂದು ಬಟ್ಲರ್ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ʼಭಾರತವು ಕ್ರಿಕೆಟ್‌ ಜಗತ್ತಿನಲ್ಲಿ ಬಹಳ ಬಲಿಷ್ಠ ತಂಡ. ಅದನ್ನ ಅವರು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಸ್ವಾಭಾವಿಕವಾಗಿ ಭಾರತ ತಂಡದ ಆಟಗಾರರು ಒಳ್ಳೆಯ ಪ್ರತಿಭೆಯುಳ್ಳಂತವರು, ಹಾಗಾಗಿಯೇ ಅವರ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರಿದ್ದಾರೆʼ ಎಂದು ಬಟ್ಲರ್ ಹೇಳಿದರು.

ಬಲಗೈ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡಿದ ಬಟ್ಲರ್, ಅವರು ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಫಾರ್ಮ್ನಲ್ಲಿದ್ದಾರೆ, ಏಕೆಂದರೆ ಅವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಅವರ ಆಟ ನೋಡುವುದೆ ಒಂದು ಅದ್ಭುತ. ಅವರು ಇಲ್ಲಿಯವರಗೆ ಆಟವಾಡಿರುವ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಸೂರ್ಯಕುಮಾರ್‌ ಕಣಕ್ಕೆ ಇಳಿದಾಗ ಹೆಚ್ಚು ರನ್‌ಗಳಿಸಲು ನೋಡುತ್ತಾರೆ. ಅದಲ್ಲದೇ ಅವರು ಹೊಡೆಯುವ ಎಲ್ಲಾ ಹೊಡೆತಗಳನ್ನು ಅತ್ಮವಿಶ್ವಾಸದಿಂದ ಹೊಡೆಯುತ್ತಾರೆ. ಹಾಗಾಗಿಯೇ ಅವರು ಮೈದಾನದ ಎಲ್ಲಾ ಕಡೆಗೂ ಚೆಂಡನ್ನು ಕಳಿಸುತ್ತಾರೆ ಎಂದು ಹೇಳಿದರು. ಹೀಗಾಗಿ ಇಂತಹ ಒಳ್ಳೆಯ ಆಟಗಾರನ ವಿಕೆಟ್‌ ಪಡೆಯಲು ನಮ್ಮ ತಂಡದ ಬೌಲರ್‌ಗಳು ಹಲವಾರು ಸಿದ್ದತೆಗಳನ್ನು ನಡೆಸಿದ್ದಾರೆ ಎಂದರು.

ಯಜುವೇಂದ್ರ ಚಹಲ್ ವಿಶ್ವಕಪ್ನಲ್ಲಿ ಯಾವುದೇ ಪಂದ್ಯದಲ್ಲಿ ಆಡದಿರುವುದು ನಿಮಗೆ ಆಶ್ಚರ್ಯ ತಂದಿದೆಯೇ ಎಂದು ಕೇಳಿದಾಗ, ಬಟ್ಲರ್ ಪ್ರತಿಕ್ರಯಿಸಿ, ಯೂಜಿ ಒಬ್ಬ ಶ್ರೇಷ್ಠ ಬೌಲರ್, ನಾನು ʼಐಪಿಎಲ್‌ʼನಲ್ಲಿ ಅವರೊಂದಿಗೆ ಆಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಅವರು ಉತ್ತಮ ಬೌಲರ್, ಅವರು ಯಾವಾಗಲೂ ವಿಕೆಟ್ ಪಡೆಯಲು ತುಂಬಾ ಉತ್ಸುಕರಾಗಿರುತ್ತಾರೆ. ಹಾಗಾಗಿ ಅವರು ಶ್ರೇಷ್ಠ ಬೌಲರ್ ಎಂದು ನನಗೆ ಖಾತ್ರಿಯಿದೆ,” ಎಂದು ಹೇಳಿದರು.

ಮಲಾನ್ ಮತ್ತು ವುಡ್‌ಗೆ ಆದ ಗಾಯಗಳ ಬಗ್ಗೆ ಮಾತನಾಡಿದ ಬಟ್ಲರ್, ನಾವು ವೈದ್ಯಕೀಯ ತಂಡವನ್ನು ನಂಬುತ್ತೇವೆ. ಜೊತೆಗೆ ಆ ಇಬ್ಬರು ಆಟಗಾರರನ್ನು ಸಹ. ಅವರು ಸದ್ಯಕ್ಕೆ ಗಾಯದಿಂದ ಸುಧಾರಿಸಿಕೊಂಡಿದ್ದು, ಸಮಿಫೈನಲ್‌ನಲ್ಲಿ ಆಡಲಿದ್ದಾರೆ ಎಂದು ತಿಳಿಸಿದರು.

ಭುವನೇಶ್ವರ್ ಕುಮಾರ್ ಅವರನ್ನು ಎದುರಿಸುವ ತಮ್ಮ ಸಿದ್ಧತೆಯ ಬಗ್ಗೆ ಮಾತನಾಡಿದ ಬಟ್ಲರ್, ʼನನ್ನ ಸ್ವಂತ ಆಟದ ಬಗ್ಗೆ ನನಗೆ ಯಾವಾಗಲೂ ವಿಶ್ವಾಸವಿದೆ. ಭಾರತದಂತಹ ನಂಬರ್‌ ಒನ್‌ ತಂಡದಲ್ಲಿ, ಇತರ ತಂಡಗಳಿಗಿಂತ ಕಷ್ಟವೆನಿಸುವ ಬೌಲರ್‌ಗಳು ಇರುತ್ತಾರೆ. ಆ ಪಟ್ಟಿಯಲ್ಲಿ ಭುವನೇಶ್ವರ್‌ ಕೂಡ ಒಬ್ಬರು. ನಾನು ಯಾವಾಗಲೂ ಚೆನ್ನಾಗಿ ತಯಾರಿ ನಡೆಸುತ್ತೇನೆ, ಹಾಗಾಗಿ ನಾನು ಯಾರಿಗೂ ಹೆದರುವುದಿಲ್ಲ. ಏಕೆಂದರೆ ನಾನು ಆಟವಾಡುವ ಸಂದರ್ಭದಲ್ಲಿ ನನ್ನ ಮುಂದೆ ಬರುವ ಚೆಂಡನ್ನು ನೋಡುತ್ತೇನೆಯೇ ಹೊರತು ಎಸೆತಗಾರನನ್ನಲ್ಲ ಎಂದು ಹೇಳಿದರು.

ವೇಗದ ಬೌಲರ್‌ಗಳಿಗೆ ಬಿಜಿನೆಸ್‌ ಕ್ಲಾಸ್ ಸೀಟ್‌ ಬಿಟ್ಟುಕೊಟ್ಟ ದ್ರಾವಿಡ್‌, ಕೊಹ್ಲಿ, ರೋಹಿತ್‌
ಅಡಿಲೇಡ್‌ ಓವಲ್‌ (ಆಸ್ಟ್ರೇಲಿಯಾ): ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡದ ಆಟಗಾರರು ಪಂದ್ಯಾವಳಿ ಆರಂಭವಾದಗಿನಿಂದಲೂ ವಿಮಾನಗಳಲ್ಲಿ ಸಾಕಷ್ಟು ಮೈಲಿಗಳ ದೂರದ ಪ್ರಯಾಣ ನಡೆಸುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳನ್ನು ಬಿಟ್ಟುಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು, ಮತ್ತು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣ ನಡೆಸಬಹುದಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾನದಂಡಗಳ ಪ್ರಕಾರ, ಸಾಮಾನ್ಯವಾಗಿ ತಂಡದ ಕೋಚ್, ನಾಯಕ, ಉಪನಾಯಕ ಮತ್ತು ಮ್ಯಾನೇಜರ್‌ಗೆ ಬಿಸಿನೆಸ್‌ ಕ್ಲಾಸ್ ಸೀಟ್‌ಗಳು ಮತ್ತು ಉಳಿದ ಆಟಗಾರರಿಗೆ ಎಕನಮಿ ಕ್ಲಾಸ್‌ ಸೀಟ್‌ಗಳು ನೋಂದಣಿಯಾಗಿರುತ್ತವೆ.

ಸಾಮಾನ್ಯವಾಗಿ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಕರು ಕಾಲುಗಳನ್ನು ನೀಡಿಕೊಂಡು ಆರಾಮದಾಯಕ ಪ್ರಯಾಣ ನಡೆಸಬಹುದಾಗಿದೆ. ಆದರೆ ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಕೊಂಚ ಇಕ್ಕಟ್ಟು ಇರುವುದರಿಂದ ಪ್ರಯಾಣಿಕರು ಬಿಸಿನೆಸ್‌ ಕ್ಲಾಸ್‌ನಷ್ಟು ಆರಾಮದಾಯಕ ಪ್ರಯಾಣ ನಡೆಸಲು ಸಾಧ್ಯವಾಗುವುದಿಲ್ಲ.

ವೇಗದ ಬೌಲರ್‌ಗಳು ಮೈದಾನದಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ, ಬೆವರು ಹರಿಸಬೇಕಾಗುತ್ತದೆ. ಇತರ ಆಟಗಾರರಿಗಿಂತ ಹೆಚ್ಚು ವೇಗದ ಬೌಲರ್‌ಗಳ ಕಾಲುಗಳಿಗೆ ವಿಶ್ರಾಂತಿ ಅಗತ್ಯವಾಗಿರುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ತಂಡದ ವೇಗದ ಬೌಲರ್‌ಗಳು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಸುವುದರಿಂದ, ಅವರಿಗೆ ಆರಾಮದಾಯಕ ವಿಶ್ರಾಂತಿ ಸಿಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ತಮ್ಮ ಸೀಟುಗಳನ್ನು ತಂಡದ ವೇಗಿ ಬೌಲರ್‌ಗಳಾದ ಮಹಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಮತ್ತು ಅರ್ಶದೀಪ್‌ ಸಿಂಗ್‌ ಅವರಿಗೆ aಬಿಟ್ಟುಕೊಟ್ಟು, ಆಟಗಾರರ ಬಗ್ಗೆ ಕಾಳಜಿ ತೋರಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಕಿಂಗ್‌ ಮಾತ್ರವಲ್ಲ, ಜೀನಿಯಸ್‌ ವಿರಾಟ್‌ ಕೊಹ್ಲಿಗೆ 34
ಭಾರತೀಯ ಕ್ರಿಕೆಟ್‌ ತಂಡದ ರನ್‌ ಮೆಶೀನ್‌ ವಿರಾಟ್‌ ಕೊಹ್ಲಿ ಇಂದು ೩೪ ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹೊತ್ತು ಹಿರಿಯ ಪತ್ರಕರ್ತರಾದ ದಿನೇಶ್‌ ಕುಮಾರ್‌ ಎಸ್‌ ಸಿ ಅವರ‌, ಕೊಹ್ಲಿಯ ʼವಿರಾಟʼ ಸಾಧನೆಯ ಝಲಕ್‌ ನೊಂದಿಗೆ ಪೀಪಲ್‌ ಮೀಡಿಯಾ ಕನ್ನಡ ವೆಬ್‌ ಬಳಗವು ಕ್ರಿಕೆಟ್‌ ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತದೆ.

ಆತನ ಆ ಇನ್ನಿಂಗ್ಸ್‌ ದೇವರ ಹಾಡಿನಂತಿತ್ತು ಎಂದು ಬಿಟ್ಟರು ಗ್ರೆಗ್‌ ಚಾಪಲ್?! ದೇವರ ಹಾಡು ಎಂದರೆ ಮತ್ತೇನೂ ಅಲ್ಲ, ಅದು ಮನುಷ್ಯನ ಸಾಧ್ಯತೆಗಳನ್ನು ಮೀರಿದ್ದು ಎಂದರ್ಥ. ಚಾಪೆಲ್‌ ಹೇಳಿದ್ದು ಅದನ್ನೇ.

19ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ವಿರಾಟ್‌ ಕೊಹ್ಲಿ ಸಿಕ್ಸರ್‌ಗಳನ್ನು ಸಿಡಿಸಿದರು. ಟಿ20 ಕ್ರಿಕೆಟ್‌ನಲ್ಲಿ ಸಿಕ್ಸರುಗಳಿಗೇನು ಕೊರತೆಯೇ? ಕೊನೆಯ ಎಸೆತದಲ್ಲಿ ಸಿಕ್ಸರ್‌ ಹೊಡೆದು ತಂಡವನ್ನು ಗೆಲ್ಲಿಸಿದ ಹೊಡಿಬಡಿ ಆಟಗಾರರಿದ್ದಾರೆ. ಒಂದೇ ಓವರ್‌ನ ಎಲ್ಲ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ಆಟಗಾರರಿದ್ದಾರೆ. ಕೊಹ್ಲಿ ಹೊಡೆದ ಸಿಕ್ಸರ್‌ಗಳು, ಅದರಲ್ಲೂ 19ನೇ ಓವರ್‌ನ ಐದನೇ ಎಸೆತದಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌ ಎಸೆತದಲ್ಲಿ ಲಾಂಗ್‌ ಆನ್‌ನಲ್ಲಿ ಹೊಡೆದ ಸಿಕ್ಸರ್‌ ಯಾಕಷ್ಟು ವಿಶೇಷ?

ನಿಜ, ಅದು ಹಲವರು ಹೇಳುವಂತೆ ಡಿವೈನ್‌ ಶಾಟ್. ಹ್ಯಾರಿಸ್‌ ರೌಫ್‌ ಎಸೆದ ಕೊಂಚ ಮಂದಗತಿಯ ಶಾರ್ಟ್‌ ಆಫ್‌ ಲೆಂಥ್‌ ಚೆಂಡನ್ನು ಬ್ಯಾಕ್‌ ಫುಟ್‌ನಲ್ಲಿ ಕನೆಕ್ಟ್‌ ಮಾಡಿ ಸ್ಟ್ರೈಟ್‌ ಬ್ಯಾಟ್‌ನಲ್ಲಿ ಸಿಕ್ಸ್‌ ಹೊಡೆದ ರೀತಿಯಿದೆಯಲ್ಲ ಅದು ಕೊಹ್ಲಿ ಬಿಟ್ಟರೆ ಮತ್ತೆ ಯಾರಿಗೂ ಸಾಧ್ಯವಿರಲಿಲ್ಲ. ಟೈಮಿಂಗ್‌ನಲ್ಲಿ ಒಂದು ಮೈಕ್ರೋ ಸೆಕೆಂಡ್‌ ಹೆಚ್ಚು ಕಡಿಮೆಯಾಗಿದ್ದರೂ ಅದು ಸಿಕ್ಸರ್‌ ಆಗುತ್ತಿರಲಿಲ್ಲ. ಬೇರೆಯವರ ವಿಷಯ ಹಾಗಿರಲಿ, ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಮಾರ್ಕ್‌ ಟೈಲರ್ ಹೇಳಿದ: ʻʻನನಗೆ ಇನ್ನೂ ಆ ಹೊಡೆತ ಹೇಗೆ ಸಾಧ್ಯವಾಯಿತೆಂದೇ ಅರ್ಥವಾಗುತ್ತಿಲ್ಲ. ನಾನೇನಾದರೂ ಆ ಶಾಟ್‌ ಪ್ರಯತ್ನಿಸಿದ್ದರೆ ಬಹುಶಃ ಲಾಂಗ್‌ ಆನ್‌ ನಲ್ಲಿ ಕ್ಯಾಚ್‌ ಕೊಟ್ಟು ಔಟಾಗುತ್ತಿದ್ದೆ!ʼʼ. ಮಧುರ್‌ ಪಾತ್ರೇಯ ಎಂಬ ಕ್ರಿಕೆಟ್‌ ವಿಶ್ಲೇಷಕ, ಟಿ20 ಕ್ರಿಕೆಟ್‌ ಆರಂಭವಾದಾಗಿನಿಂದ ನಾವು ನೋಡಿರಬಹುದಾದ ಅತ್ಯುತ್ತಮ ಸಿಕ್ಸರ್‌ ಎಂದರು. ಮಾತ್ರವಲ್ಲ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯುನ್ನತ ಇನ್ನೋವೇಟಿವ್‌ ಶಾಟ್‌ ಎಂದರು.

ಅಕ್ಟೋಬರ್‌ 23 ವಿರಾಟ್‌ ಕೊಹ್ಲಿಯ ದಿನವಾಗಿತ್ತು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಚೇಸಿಂಗ್‌ಗೆ ಇಳಿದಿತ್ತು. ಮೊದಲ ನಾಲ್ಕು ವಿಕೆಟ್‌ಗಳು ತೊಪತೊಪನೆ ಉದುರಿದ್ದವು. ಕೊಹ್ಲಿ ನಿಧಾನಕ್ಕೆ ಹಾರ್ದಿಕ್‌ ಪಾಂಡ್ಯ ಜೊತೆ ಇನ್ನಿಂಗ್ಸ್‌ ಕಟ್ಟುತ್ತ ನಡೆದಿದ್ದ. ಪಾಂಡ್ಯ ತನ್ನ ಎಂದಿನ ಹೊಡಿಬಡಿ ಆಟ ಆಡಲು ಸಾಧ್ಯವಿರಲಿಲ್ಲ. ಪಾಕಿಸ್ತಾನದ ಬೌಲಿಂಗ್‌ ಪಡೆ ಸದ್ಯಕ್ಕೆ ಜಗತ್ತಿನ ಅತಿಶ್ರೇಷ್ಠ ಬೌಲಿಂಗ್‌ ಪಡೆ. ಪಾಕಿಸ್ತಾನದ ಮೂರು-ನಾಲ್ಕು ಬೌಲರ್‌ಗಳು ನೂರೈವತ್ತು ಕಿ.ಮೀ ವೇಗದಲ್ಲಿ ಬೌಲ್‌ ಮಾಡುತ್ತಾರೆ. ರಿಸ್ಕ್‌ ತೆಗೆದುಕೊಂಡು ಬೌಂಡರಿ, ಸಿಕ್ಸರ್‌ ಹೊಡೆಯಲು ಹೋದರೆ ಔಟಾಗುವ ಭೀತಿ. ಔಟಾದರೆ ಕೆಳಹಂತದ ಆಟಗಾರರು ಪಾಕಿಸ್ತಾನದ ಬೌಲರ್‌ಗಳಿಗೆ ಸುಲಭದ ತುತ್ತಾಗಿ ಹೋಗುತ್ತಾರೆ. ಹೀಗಾಗಿ ಕೊಹ್ಲಿ, ಪಾಂಡ್ಯ ಬೇಕಾಗಿದ್ದ ರನ್‌ರೇಟ್‌ಗೆ ಹೋಲಿಸಿದರೆ ನಿಧಾನವಾಗಿ ಆಡುತ್ತಿದ್ದರು. ಕೊನೆಕೊನೆಗೆ ಪಂದ್ಯ ಸಂಪೂರ್ಣ ಭಾರತದ ಕೈ ತಪ್ಪಿ ಹೋಯಿತೆಂದೇ ಎಲ್ಲರೂ ಭಾವಿಸಿದರು. ಆದರೆ ಕೊಹ್ಲಿ, ಹ್ಯಾರಿಸ್‌ ರೌಫ್‌ ಎಸೆದ 19ನೇ ಓವರ್‌ನ ಕೊನೆಯ ಎರಡು ಚೆಂಡುಗಳಿಗೆ ಹೊಡೆದ ಸಿಕ್ಸರ್‌ಗಳು ಭಾರತವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದವು.

ಪಾಕಿಸ್ತಾನದ ಅಂದಿನ ಬೆಸ್ಟ್‌ ಬೌಲರ್‌ ಹ್ಯಾರಿಸ್‌ ರೌಫ್‌ ಮೊದಲ ನಾಲ್ಕು ಎಸೆತಗಳಲ್ಲಿ ಕೊಹ್ಲಿ-ಪಾಂಡ್ಯ ಜೋಡಿಯನ್ನು ರನ್‌ ಗಳಿಸದಂತೆ ಕಟ್ಟಿ ಹಾಕಿದ್ದರು. ಮೊದಲ ನಾಲ್ಕು ಎಸೆತಗಳಲ್ಲಿ ಮೂರೇ ರನ್‌ಗಳು. ಇನ್ನೇನು ಪಂದ್ಯ ಮುಗಿದೇಹೋಯಿತು, ಪಾಕಿಸ್ತಾನ ಗೆದ್ದೇ ಬಿಟ್ಟಿತು ಎಂಬಂಥ ಸ್ಥಿತಿ. ಆಗ ಐದನೇ ಎಸೆತದಲ್ಲಿ ಕೊಹ್ಲಿ ಬೌಲರ್‌ ತಲೆಯ ಮೇಲೆ ಹೊಡೆದ ಚೆಂಡು ಬೌಂಡರಿ ಲೈನ್‌ ದಾಟಿ 90 ಮೀಟರ್‌ ದೂರ ಹೋಗಿ ಬಿದ್ದಿತು. ಅದೇ ಹೊಡೆತವನ್ನು ಇಡೀ ಕ್ರಿಕೆಟ್‌ ರಂಗ ಕೊಂಡಾಡುತ್ತಿದೆ. ಇದು ಶಾಟ್‌ ಆಫ್‌ ದಿ ಸೆಂಚುರಿ ಎಂದು ಬಣ್ಣಿಸಿದವರು ಹಲವರು.

ವಿರಾಟ್‌ ಕೊಹ್ಲಿ ಆಟವೇ ಹೀಗೆ. ಟೆಸ್ಟ್‌, ಏಕದಿನ, ಟಿ20 ಈ ಎಲ್ಲ ಮೂರು ಮಾದರಿಯ ಆಟದಲ್ಲಿ ಕೊಹ್ಲಿಯನ್ನು ಮೀರಿಸುವವರಿಲ್ಲ. ಟಿ20 ಕ್ರಿಕೆಟ್‌ ಎಂಬುದು ಹೊಡಿಬಡಿ ಮಾದರಿಯ ಆಟ. ಪಕ್ಕಾ ಕ್ರಿಕೆಟಿಂಗ್‌ ಶಾಟ್‌ಗಳೇ ಇಲ್ಲಿ ಇರಬೇಕೆಂದಿಲ್ಲ. ಎಲ್ಲೋ ಹೊಡೆಯಲು ಪ್ರಯತ್ನಿಸಿದ ಚೆಂಡು ಎಡ್ಜ್‌ ಆಗಿ ಎಲ್ಲಿಗೋ ಬಿದ್ದರೂ ಪರವಾಗಿಲ್ಲ, ಒಟ್ಟಿನಲ್ಲಿ ರನ್‌ ಬಂದು ಸುರಿಯಬೇಕು ಅಷ್ಟೆ. ಹೀಗಾಗಿ ಟಿ20 ಪಂದ್ಯಗಳಿಗೆಂದೇ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳು ಹುಟ್ಟಿಕೊಂಡರು. ವಿಕೆಟ್‌ನ ಹಿಂದೆ ಫೈನ್‌ಲೆಗ್‌, ಥರ್ಡ್‌ ಮ್ಯಾನ್‌ ಮತ್ತು ಸ್ಕ್ವೇರ್‌ ಆಫ್‌ ದಿ ವಿಕೆಟ್‌ ನಲ್ಲೇ ಹೆಚ್ಚು ರನ್‌ ಗಳು ಬರಲಾರಂಭಿಸಿದವು. 360 ಡಿಗ್ರಿಯಲ್ಲೂ ರನ್‌ ಗಳಿಸುವ ಆಟಗಾರರಿಗೆ ಬೇಡಿಕೆ ಹುಟ್ಟಿಕೊಂಡಿತು. ಆದರೆ ಕೊಹ್ಲಿ ತನ್ನ ತಂತ್ರವನ್ನೇನು ಬದಲಾಯಿಸಿಕೊಳ್ಳಲಿಲ್ಲ. ಆಟದ ವಿಧಾನವೂ ಬದಲಾಗಲಿಲ್ಲ. ಪಕ್ಕಾ ಕ್ರಿಕೆಟಿಂಗ್‌ ಶಾಟ್‌ಗಳಿಂದಲೇ ಆಡಿದ, ಟಿ20 ಕ್ರಿಕೆಟ್‌ಗೆ ಬೇಕಾದ ವೇಗದಲ್ಲೇ ರನ್‌ ಗಳಿಸುತ್ತ ಹೋದ.

ಪಾಕಿಸ್ತಾನ ವಿರುದ್ಧದ ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ನಿಸ್ಸಂಶಯವಾಗಿ ಅವರ ಜೀವಮಾನದ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು. ಆ ಒಂದು ಸಿಕ್ಸರ್‌ ಕೊಹ್ಲಿಯ ಕ್ರಿಕೆಟನ್ನು ಸಮರ್ಥವಾಗಿ ವರ್ಣಿಸುತ್ತದೆ. ಬ್ಯಾಟು ಮತ್ತು ಬಾಲು ಸೇರುವ ಘಳಿಗೆ ಇದೆಯಲ್ಲ, ಅದನ್ನು ಕ್ರಿಕೆಟ್‌ನಲ್ಲಿ ಟೈಮಿಂಗ್‌ ಎನ್ನುತ್ತಾರೆ. ಕೊಹ್ಲಿಯ ಟೈಮಿಂಗ್‌ ಅನ್ನು ಆ ದೇವರೇ ನಿರ್ಧರಿಸಿದಂತಿರುತ್ತದೆ. ಹೀಗಾಗಿ ಒಂದು ಮೈಕ್ರೋ ಸೆಕೆಂಡು ಕೂಡ ಹೆಚ್ಚು ಕಡಿಮೆಯಾಗೋದಿಲ್ಲ.

ಭಾರತ ಕ್ರಿಕೆಟ್‌ ಪ್ರಿಯರ ದೇಶ. ಇಲ್ಲಿ ಸುನೀಲ್‌ ಗವಾಸ್ಕರ್‌, ಕಪಿಲ್‌ ದೇವ್‌, ಮಹಮದ್‌ ಅಜರುದ್ದೀನ್‌, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ, ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ ಸೇರಿದಂತೆ ಲೆಜೆಂಡರಿ ಆಟಗಾರರನೇಕರು ಬಂದು ಹೋಗಿದ್ದಾರೆ. ಈ ಸಾಲಿನಲ್ಲಿ ಕೊಹ್ಲಿ ಕೂಡ ಒಬ್ಬರು. ಆತನಿಗೆ ಅಭಿಮಾನಿಗಳು ಕಿಂಗ್‌ ಎಂದು ಕರೆಯುತ್ತಾರೆ. ಆತ ಕಿಂಗ್‌ ಮಾತ್ರವಲ್ಲ, ಜೀನಿಯಸ್‌ ಎನ್ನುತ್ತಾರೆ ಕ್ರಿಕೆಟಿಗರು.

ವಿರಾಟ್‌ ಕೊಹ್ಲಿ 2021ರ ಟಿ20 ವಿಶ್ವಕಪ್‌ ಸಂದರ್ಭದಲ್ಲಿ ತಂಡದ ಕಳಪೆ ಪ್ರದರ್ಶನದಿಂದಾಗಿ ನಾಯಕತ್ವ ಕಳೆದುಕೊಂಡರು. ನಂತರ ಅವರ ಒನ್‌ ಡೇ ಕ್ಯಾಪ್ಟನ್ಸಿಯನ್ನೂ ಕಿತ್ತುಕೊಳ್ಳಲಾಯಿತು. ಕೊಹ್ಲಿ ಟೆಸ್ಟ್‌ ನಾಯಕತ್ವವನ್ನೂ ಬಿಟ್ಟುಕೊಟ್ಟರು. ಪಾಕಿಸ್ತಾನ ಎದುರಿನ ಸೋಲು, ಅದರಿಂದಾಗಿ ಎದುರಿಸಬೇಕಾದ ಕೊಳಕು ಟೀಕೆಗಳಿಗೆ ಮಿತಿಯೇ ಇರಲಿಲ್ಲ. ಕೊಹ್ಲಿ ಮಾತ್ರವಲ್ಲ ಆತನ ಪತ್ನಿ ಅನುಷ್ಕಾ ಶರ್ಮರನ್ನೂ ಈ ಕೊಳಕರು ಬಿಡಲಿಲ್ಲ. ಕೊನೆಗೆ ಈ ದಂಪತಿಗಳು, ಪುಟ್ಟ ಕಂದಮ್ಮಳನ್ನೂ ಗುರಿಯಾಗಿಸಿಕೊಂಡು ಬೆದರಿಕೆ ಒಡ್ಡಲಾಯಿತು. ಇನ್ನೊಂದೆಡೆ ಕೊಹ್ಲಿ ಸೆಂಚುರಿ ಹೊಡೆಯುತ್ತಿಲ್ಲ ಎಂಬ ಕೂಗು ಕ್ರಿಕೆಟ್‌ ಪಂಡಿತರಿಂದಲೇ ಶುರುವಾಯಿತು. ಕೊಹ್ಲಿ ಆಟ ಮುಗಿದೇಹೋಯಿತು ಎಂದು ಹಲವರು. ಕೊಹ್ಲಿ ರಿಟೈರ್‌ ಆಗಬೇಕು ಎಂಬ ಮಾತುಗಳೂ ಕೇಳಿ ಬರಲಾರಂಭಿಸಿದವು.

ಕೊಹ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಪರಿಶ್ರಮವನ್ನು ಕೈಬಿಡಲಿಲ್ಲ. ನೆಟ್‌ ಪ್ರಾಕ್ಟಿಸ್‌ನಲ್ಲಿ ಬೆವರು ಹರಿಸುವುದನ್ನು ಮರೆಯಲಿಲ್ಲ. 34 ವರ್ಷದ ವಿರಾಟ್‌ ಈಗಿನ ಇಂಡಿಯಾ ತಂಡದಲ್ಲಿ ಎಲ್ಲರಿಗಿಂತ ಹೆಚ್ಚು ಫಿಟ್‌ ಆಗಿದ್ದಾರೆಂದರೆ ನೀವು ನಂಬಲೇಬೇಕು. ಆತನ ಫೀಲ್ಡಿಂಗ್‌ ಅದ್ಭುತ. ಎದುರಾಳಿ ತಂಡ ಗಳಿಸಬಹುದಾದ ಹತ್ತು-ಹದಿನೈದು ರನ್‌ಗಳನ್ನು ತಡೆಯುವ ಕ್ಷಮತೆ ಆತನಿಗಿದೆ. ಕ್ಯಾಪ್ಟನ್‌ ಆಗಿರದಿದ್ದರೂ ಕೊಹ್ಲಿ‌ ಯಾವಾಗಲೂ ಪಂದ್ಯದ ಕೇಂದ್ರಬಿಂದುವಾಗಿಯೇ ಇರುತ್ತಾರೆ, ಹಿ ಈಸ್ ಆಲ್ವೇಸ್‌ ಇನ್‌ ಆಕ್ಷನ್. ಹಾಡು ಹೇಳಿಕೊಂಡು, ಪುಟ್ಟದಾಗಿ ಸ್ಟೆಪ್‌ ಹಾಕುತ್ತ ಸಿಕ್ಸರ್‌ ಸಿಡಿಸುವ ಆಟಗಾರನನ್ನು ನಾವು ಇನ್ನೆಲ್ಲಾದರೂ ನೋಡಿರಲು ಸಾಧ್ಯವೇ? ಬೌಂಡರಿ ಲೈನ್‌ ನಲ್ಲಿ ಪ್ರೇಕ್ಷಕರ ಕೂಗಿಗೆ ಸ್ಪಂದಿಸುತ್ತ, ಅವರೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಇಂಟರಾಕ್ಷನ್‌ ನಡೆಸುತ್ತ ಎಲ್ಲರನ್ನೂ ಎಂಗೇಜ್‌ ಮಾಡುತ್ತ ಹೋಗುವ ಕೊಹ್ಲಿ ಪ್ರೇಕ್ಷಕರ ಪಾಲಿನ ಪಕ್ಕಾ ಎಂಟರ್‌ಟೇನರ್.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಆಗಲೇ ಮೂರು ಅರ್ಧಶತಕ ಬಾರಿಸಿ ಆಗಿದೆ. ಎರಡು ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ದಕ್ಕಿದೆ. ಕೊಹ್ಲಿ ಹೀಗೇ ಆಡಿದರೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆಯಬಹುದು. ಈಗಷ್ಟೇ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ಗೆ ಬಂದ ಹದಿಹರೆಯದ ಆಟಗಾರನೊಬ್ಬನ ಉತ್ಸಾಹ ಕೊಹ್ಲಿಯಲ್ಲಿ ಇನ್ನೂ ಉಳಿದುಕೊಂಡಿದೆ. ಕ್ರಿಕೆಟ್‌ ಅಂಗಳದ ಒಳಗೂ ಹೊರಗೂ ಆತ ಪುಟ್ಟ ಮಗುವಿನಂತೆ ಸಂಭ್ರಮಿಸುವ, ಕ್ರಿಕೆಟ್‌ಪ್ರೇಮಿಗಳೊಂದಿಗೆ ಸಂವಾದಿಸುವ ರೀತಿಗೆ ಬೆರಗಾಗದವರಿಲ್ಲ.

ಕೊಹ್ಲಿ ಕ್ರಿಕೆಟ್‌ ಜಗತ್ತಿನ ಪುಟವಿಟ್ಟ ಚಿನ್ನ, ಹ್ಯಾಪಿ ಬರ್ತ್‌ ಡೇ ಜೀನಿಯಸ್.

ದಿನೇಶ್‌ ಕುಮಾರ್‌ ಎಸ್‌ ಸಿ
ಹಿರಿಯ ಪತ್ರಕರ್ತರು.

ICC T20-ವರ್ಲ್ಡ್ ಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಜಯ
ಅಡಿಲೈಡ್ ಓವಲ್: ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ಬಾಂಗ್ಲಾದೇಶದ ಪಂದ್ಯದಲ್ಲಿ ಭಾರತ ಐದು ರನ್‌ಗಳ ರೋಚಕ ಜಯ ಸಾಧಿಸಿದೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶವು, ಮೊದ-ಮೊದಲು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಪ್ರಯತ್ನಿಸಿತು. ಈ ವೇಳೆ ರನ್‌ ಗಳಿಸಲು ಪರದಾಡಿದ ರೋಹಿತ್‌ ಶರ್ಮಾ 2 ರನ್‌ಗಳಿಸಿ ಪೆವಿಲಿಯನ್‌ ಸೇರಿದರು. ನಂತರ ಬಂದ ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಜೊತೆಗೂಡಿ ತಮ್ಮ ಉತ್ತಮ ಪ್ರದರ್ಶನ ನೀಡುವುದರ ಮೂಲಕ, ಇಬ್ಬರು ಆಟಗಾರರು ಅರ್ಧ ಶತಕಗಳಿಸಿ, ಬಾಂಗ್ಲಾದೇಶದ ಬೌಲರ್‌ಗಳಿಗೆ ನೀರು ಕುಡಿಸಿದರು.

ನಂತರ ಬಂದ ಸೂರ್ಯ ಕುಮಾರ್‌ ಯಾದವ್‌ ರಭಸದ ಆಟವಾಡುವ ಮೂಲಕ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ ನೀಡಿ 184 ರನ್‌ಗಳಿಸಿತು.

ನಂತರ ಮಳೆಯ ಕಾರಣದಿಂದಾಗಿ ಮೊಟಕುಗೊಂಡ ಪಂದ್ಯ 16 ಓವರ್ ಗಳಿಗೆ ಸೀಮಿತಗೊಂಡಿತ್ತು. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶವು 16 ಓವರ್‌ಗಳಿಗೆ 151 ರನ್‌ ಗಳಿಸಬೇಕಾಗಿತ್ತು. ಈ ವೇಳೆ ಭಾರತೀಯ ಬೌಲರ್‌ಗಳ ದಾಳಿಗೆ ರನ್‌ ಗಳಿಸಲು ಪರದಾಡಿದ ಬಾಂಗ್ಲಾ ಆಟಗಾರರು, 16 ಓವರ್‌ಗಳಿಗೆ 6 ವಿಕೆಟ್‌ ನೀಡಿ 145 ರನ್‌ ಗಳಿಸಿದರು. ಈ ಮೂಲಕ ಭಾರತ ತಂಡವು 5 ರನ್‌ಗಳ ಜಯ ಸಾಧಿಸಿ, ಸೆಮಿಪೈನಲ್‌ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಸಫಲವಾಯಿತು.