vistara kannda news chanel – Peepal Media

ʻವಿಸ್ತಾರʼ ಟ್ರೇಡ್‌ ಮಾರ್ಕ್‌ ಬಳಸದಂತೆ ಕನ್ನಡ ಟಿವಿ ಚಾನಲ್‌ಗೆ ದೆಹಲಿ ಹೈಕೋರ್ಟ್‌ ಆದೇಶ
ಹೊಸದಿಲ್ಲಿ: ಟಾಟಾ ಎಸ್‌ಐಎ ಏರ್‌ಲೈನ್ಸ್ (ವಿಸ್ತಾರಾ ಏರ್‌ಲೈನ್ಸ್‌ನ ಮಾಲೀಕರು) ಸಲ್ಲಿಸಿದ್ದ ಟ್ರೇಡ್‌ ಮಾರ್ಕ್‌ ಉಲ್ಲಂಘನೆ ಅರ್ಜಿಯನ್ನು ಮಾನ್ಯ ಮಾಡಿದ ದೆಹಲಿ ಹೈಕೋರ್ಟ್‌ ಟ್ರೇಡ್‌ ಮಾರ್ಕ್‌ ಬಳಸದಂತೆ ಕನ್ನಡ ಟಿವಿ ಚಾನಲ್‌ ವಿಸ್ತಾರಗೆ ಆದೇಶಿಸಿದೆ.

ಕನ್ನಡದಲ್ಲಿ ಇತ್ತೀಚಿಗಷ್ಟೇ ಆರಂಭಗೊಂಡ ʻವಿಸ್ತಾರʼ ಸುದ್ದಿವಾಹಿನಿ, ಹೈಕೋರ್ಟ್‌ ಆದೇಶದಿಂದಾಗಿ ಆರಂಭದಲ್ಲೇ ಸಮಸ್ಯೆಗೆ ಸಿಲುಕಿಕೊಂಡಂತಾಗಿದೆ.

ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿಯೂ ‘ವಿಸ್ತಾರ’ದ ವೈವಿಧ್ಯಗಳನ್ನು ಬಳಸದಂತೆ ಜಾಲವನ್ನು ನಿರ್ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಕಾಯ್ದಿರಿಸಿ ಮಧ್ಯಂತರ ಆದೇಶ ನೀಡಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ಮೇಲ್ನೋಟಕ್ಕೆ ಟಾಟಾ ಎಸ್‌ಐಎ ಸಲ್ಲಿಸಿರುವ ಅರ್ಜಿಯಲ್ಲಿ ಸತ್ಯಾಂಶಗಳು ಕಂಡುಬಂದಿವೆ. ಹೀಗಾಗಿ ವಿಸ್ತಾರ ಟ್ರೇಡ್‌ ಮಾರ್ಕ್‌ ಬಳಕೆಗೆ ತಡೆಯಾಜ್ಞೆಯನ್ನು ನೀಡದಿದ್ದಲ್ಲಿ ಸರಿಪಡಿಸಲಾಗದ ಹಾನಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.

ʻʻಮುಂದಿನ ವಿಚಾರಣೆಯ ದಿನಾಂಕದವರೆಗೆ, ಪ್ರತಿವಾದಿ ಮತ್ತು ಅದರ ಪರವಾಗಿ ಕಾರ್ಯನಿರ್ವಹಿಸುವ ಇತರರು ಫಿರ್ಯಾದಿಯ ನೋಂದಾಯಿತ ಮತ್ತು ಸುಪ್ರಸಿದ್ಧ ಟ್ರೇಡ್‌ಮಾರ್ಕ್ VISTARA ಅನ್ನು ಯಾವುದೇ ರೂಪದಲ್ಲಿ ಅಥವಾ ಯಾವುದೇ ರೀತಿಯಲ್ಲಿ ಬಳಸದಂತೆ ನಿರ್ಬಂಧಿಸಲಾಗಿದೆ, ಕನ್ನಡವೂ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗಳಲ್ಲೂ ಬಳಸುವ ಹಾಗಿಲ್ಲʼʼ ಎಂದು ನ್ಯಾಯಾಲಯ ಆದೇಶಿಸಿದೆ.

Tata SIA ತಾನು ‘ವಿಸ್ತಾರಾ’ ಹೆಸರಿನ ಟ್ರೇಡ್‌ ಮಾರ್ಕ್‌ ಪಡೆದಿದ್ದು ತನ್ನ ಹಕ್ಕುಗಳನ್ನು ರಕ್ಷಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿತ್ತು.

ವಿಸ್ತಾರ ನ್ಯೂಸ್ ಸಂಪೂರ್ಣವಾಗಿ ಟ್ರೇಡ್‌ಮಾರ್ಕ್ ಅನ್ನು ಅಪ್ರಾಮಾಣಿಕವಾಗಿ ನಕಲು ಮಾಡಿದೆ ಮತ್ತು ಅದನ್ನು ಅಳವಡಿಸಿಕೊಳ್ಳಲು ಯಾವುದೇ ಸಮರ್ಥನೀಯ ಕಾರಣವನ್ನು ಹೊಂದಿರುವುದಿಲ್ಲ ಎಂದು ವಾದಿಸಲಾಗಿತ್ತು.

ನ್ಯಾಯಾಲಯವು ಪ್ರತಿವಾದಿಗಳಿಗೆ ಸಮನ್ಸ್ ನೀಡಿದ್ದು, 30 ದಿನಗಳೊಳಗೆ ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.