Vivek Rangaswamy – Peepal Media

‘ನನ್ನ ಸಲಹೆಗಾರರಾಗಿ ಎಲಾನ್ ಮಸ್ಕ್ ಇರಲೆಂದು ಅಪೇಕ್ಷಿಸುತ್ತೇನೆ’ : ಅಮೇರಿಕಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿವೇಕ್ ರಂಗಸ್ವಾಮಿ
ಅಮೆರಿಕದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರಿಗೆ ಎಲಾನ್ ಮಸ್ಕ್ ಮಾದರಿಯಂತೆ‌. ಹಾಗಾಗಿ ತನಗೆ ಸಲಹೆಗಾರರಾಗಿ ಎಲಾನ್ ಮಸ್ಕ್ ಅವರು ಇರಲಿ ಎಂದು ಅಪೇಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್ ಸಂಸ್ಥೆಯನ್ನು ತನ್ನದಾಗಿಸಿಕೊಂಡ ಎಲಾನ್ ಮಸ್ಕ್, ಟ್ವಿಟ್ಟರ್ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಗೂ ಕತ್ತರಿ ಹಾಕಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ವಿವೇಕ್ ರಂಗಸ್ವಾಮಿ ಟ್ವಿಟ್ಟರ್​ನಲ್ಲಿ ಎಲಾನ್ ಮಸ್ಕ್ ಕತ್ತರಿ ಹಾಕಿ ಚೊಕ್ಕಟ ಮಾಡಿದಂತೆ ಅಮೆರಿಕ ಆಡಳಿತದಲ್ಲೂ ಸುಧಾರಣೆ ತರುವೆ ಎಂದು ಹೇಳಿದ್ದಾರೆ.

ಸರ್ಕಾರದ ಒಳಗೆ ಇರದ ಮತ್ತು ಹೊಚ್ಚ ಹೊಸ ಮುಖಗಳು ನನಗೆ ಬೇಕು. ಇತ್ತೀಚೆಗೆ ಇಲಾನ್ ಮಸ್ಕ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅಚ್ಚರಿಪಟ್ಟಿದ್ದೇನೆ. ನನಗೆ ಸಲಹೆಗಾರರಾಗಿ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ. ಟ್ವಿಟ್ಟರ್​ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದರು ಎಂದು 38 ವರ್ಷದ ವಿವೇಕ್ ರಂಗಸ್ವಾಮಿ ಹೇಳಿದ್ದಾರೆ.

ಇದೇ ಮಾದರಿಯಲ್ಲಿ ನಾನು ಆಡಳಿತ ಸುಧಾರಣೆ ತರಲು ಪ್ರಯತ್ನಿಸುತ್ತೇನೆ. ಟ್ವಿಟ್ಟರ್​ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದ ನಂತರ ಟ್ವಿಟ್ಟರ್ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚಿದೆ ಎಂದು ವಿವೇಕ್ ರಂಗಸ್ವಾಮಿ ಹೇಳಿದ್ದಾರೆ.

ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಹೇಗೆ ನಿರ್ವಹಿಸುತ್ತಿದ್ದಾರೋ ಅದೇ ರೀತಿ ಸರ್ಕಾರದ ಆಡಳಿತವನ್ನು ನಡೆಸುತ್ತೇನೆ. ಶೇ. 75ರಷ್ಟು ಅನಗತ್ಯ ವೆಚ್ಚವನ್ನು ತೆಗೆದುಹಾಕುವುದು ಮತ್ತು ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಹೇಗೆಂಬುದಕ್ಕೆ ಟ್ಟಿಟ್ಟರ್ ಒಂದು ಉತ್ತಮ ನಿದರ್ಶನ ಎಂದು ಫಾಕ್ಸ್ ನ್ಯೂಸ್ ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.