Waqf Amendment Act – Peepal Media

ವಕ್ಫ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯುವರೆಗೂ ನಿಲ್ಲುವುದಿಲ್ಲ ಹೋರಾಟ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ
ಹಾಸನ : ಕೆಲ ದುಷ್ಠ ಶಕ್ತಿಗಳು ಮುಸಲ್ಮಾನರನ್ನು ನಿರ್ಮೂಲನೆ ಮಾಡಲು ಹೊರಟಿದ್ದು, ಆದರೇ ಅದು ಸಾಧ್ಯವಿಲ್ಲ. ನಮ್ಮ ಪೂರ್ವಿಕರು ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮುಸಲ್ಮಾನರದು ಕೂಡ ಭಾರತ ಆಗಿದೆ. ದೇಶದಲ್ಲಿ ಆಳುತ್ತಿರುವುದು ಮೋದಿ, ಶಾ ಅವರ ಮೋಸದ ಆಡಳಿತ ಆಗಿದ್ದು, ವಕ್ಫ್ ತಿದ್ದುಪಡಿ ಕಾಯ್ದೆ 2025ನ್ನು ಸಂಪೂರ್ಣವಾಗಿ ಹಿಂಪಡೆಯುವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಜನಾಬ್ ಮುಫ್ತಿ ಇದ್ರೀಸ್ ಅಹಮದ್ ಸಾಬ್ ಹಾಗೂ ಸಾಮಾಜಿಕ ಚಿಂತಕ ರಾವಚಿಂತನ್ ಕರೆ ನೀಡಿ ತಮ್ಮ ನಿಲುವು ತಿಳಿಸಿದರು.

ನಗರದ 80 ಫೀಟ್ ರಸ್ತೆಯ ಈದ್ಗಾ ಮೈದಾನದಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಮುಫ್ತಿ ಇದ್ರೀಸ್ ಅಹಮದ್ ಸಾಬ್, ಕೆಲ ದುಷ್ಠ ಶಕ್ತಿಗಳು ಮುಸಲ್ಮಾನರನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ ಆದರೇ ಅದು ಸಾಧ್ಯವಿಲ್ಲ. ನಮ್ಮ ಪೂರ್ವಿಕರು ಸ್ವಾತಂತ್ರ‍್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ನಮ್ಮದು ಕೂಡ ಭಾರತ ಆಗಿದೆ. ಮುಸ್ಲಿಂ ರಲ್ಲಿ ಕೂಡ ಯಾರು ಅಧರ್ಮದಲ್ಲಿ ಇರುತ್ತಾರೆ ಅವರು ಮುಸ್ಲಿಂ ವಿರೋಧಿಗಳು. ಇಸ್ಲಾಂ ಎಂದರೇ ಶಾಂತಿ ಮತ್ತು ಏಕತೆ ಕಲಿಸುತ್ತದೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಈ ಹೋರಾಟ ನಿಲ್ಲಿಸುವುದಿಲ್ಲ. ಆದರೇ ಕಾನೂನು ಅಲ್ಲದ ಕೆಲಸ ಮಾಡಬಾರದು ಎಂದು ಹೇಳಿದರು.

ಸಾಮಾಜಿಕ ಚಿಂತಕ ರಾವಚಿಂತನ್ ಮಾತನಾಡಿ, ಬೇಟಿ ಬಚಾವ್ ಎಂದು ಹೇಳಿ ಹೆಣ್ಣು ಮಕ್ಕಳ ಇಜಾಬ್ ಬಟ್ಟೆ ತೋರಿಸಿ ಕಾಲೇಜಿನಿಂದ ಹೊರಗೆ ಹಾಕಿದ್ದೀರಾ, ನಾವು ಮಟ್ಟಾಳರು ಅಲ್ಲ. ಪೂರ್ಣ ಚಂದ್ರ ತೇಜಸಿಗಳು ಆದರ್ಶರು. ಇವರು ಹೇಳುವಂತೆ ಈ ಸನ್ಯಾಸಿಗಳಲ್ಲಿ ಆಡಳಿತ ಸಿಗಬಾರದು ಎಂದಿದ್ದರು. ಯೋಗಿ ಆದಿತ್ಯ ಹೇಳುವಂತೆ ವಕ್ಪ್ ಜಾಗದಲ್ಲಿ ಮುಸಲ್ಮಾನರಿಗೆ ಶಾಲಾ ಕಾಲೇಜು ಕಟ್ಟಿಸಿಕೊಡುತ್ತಾರಂತೆ. ಅಯೋಗ್ಯರ ಮಾತು ನಾವು ಕೇಳಬೇಕಾ ಎಂದು ಆಕ್ರೋಶವ್ಯಕ್ತಪಡಿಸಿದರು. ಈ ದೇಶದಲ್ಲಿ ಮುಸಲ್ಮಾನರಿಗೆ ಮೋಸ ಆಗುತ್ತಿದೆ. ದೇಶದಲ್ಲಿ ಆಳುತ್ತಿರುವುದೇ ಮೋಸ ಮೋದ, ಶಾ ಎಂದು ಜರಿದರು. ಇನ್ನೊಬ್ಬರೂ ಸಂವಿಧಾನ ಬದಲಾಯಿಸುತ್ತೆನೆ ಎನ್ನುತ್ತಾರೆ. ಇನ್ನೋರ್ವ ದೇಶ ಬಿಟ್ಟು ಮುಸಲ್ಮಾನರ ಕಳುಹಿಸುತ್ತೇವೆ ಎನ್ನುತ್ತಾರೆ. ಸದಾ ಮುಸಲ್ಮಾನರ ಧ್ವೇಷಿಸುವ, ಟೀಕಿಸುವ ಇವರು ಮುಸಲ್ಮಾನರ ಜೀವ ಉದ್ಧಾರಕ್ಕಾಗಿ ವಕ್ಫ್ ತಿದ್ದುಪಡಿ ಮಸೂದೆ ತಂದಿದ್ದೇವೆ ಎಂದರೇ ನಾವು ಅದನ್ನ ನಂಬಲು ಮುಟ್ಟಾಳರಾ ಎಂದು ಪ್ರಶ್ನಿಸಿದರು. ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಟವನ್ನು ಲಕ್ಷಾಂತರ ಜನ ಮುಸಲ್ಮಾನರು ಇದ್ದು, ಅವರು ಕೂಡ ಈ ದೇಶಕ್ಕೆ ರಕ್ತ ಹರಿಸಿದ್ದಾರೆ. ಈ ದೇಶ ಕೇವಲ ಮೋದಿ, ಶಾ ಅವರದು ಅಲ್ಲ. ಭಾರತದ ಮುಸಲ್ಮಾನರ ದೇಶ ಕೂಡ ಆಗಿದೆ ಎಂದರು. ಭಾರತ ಬೇಡ ಎಂದು ಪಾಕಿಸ್ತಾನಕ್ಕೆ ಹೋದವರ ಸಂಬAಧ ನಮಗೆ ಇಲ್ಲ. ಪದೆ ಪದೆ ಪಾಕಿಸ್ತಾನವನ್ನು ಏಕೆ ಎಳೆದುಕೊಂಡು ಬರಿತ್ತೀರಾ! ಹೀಗೆ ಎಳೆದರೇ ಅಧಿಕಾರ ಉಳಿಯುತ್ತದೆ ಎಂಬುದು ಅವರದಾಗಿದೆ ಎಂಧು ದೇಶದ ಪ್ರಧಾನಿ ಹಾಗೂ ರಾಷ್ಟಿçÃಯ ಅಧ್ಯಕ್ಷರ ವಿರುದ್ಧ ಸಿಡಿಮಿಡಿಗೊಂಡರು.
ಸಮಾವೇಶದಲ್ಲಿ ಜನಪರ ಸಂಘಟನೆಗಳ ಮುಖಂಡ ಧರ್ಮೇಶ್, ದಲಿತ ಮುಖಂಡ ಸಂದೇಶ್, ಮರಿ ಜೋಸಫ್, ಧಾರ್ಮಿಕ ಮುಖಂಡರಾದ ಹಾಫಿಜ್ ಫರುರ್ ಅಹಮದ್, ಮೌಲಾನಾ ವಸೀಮ್, ಮೌಲಾನಾ ಅಜ್ಹರ್ ಉಲ್ಲಾ ಖಸ್ವಿ, ಮುಫ್ತಿ ಜುಬೇರ್, ಮೌಲಾನಾ ನಸೀರ್ ಹುಸೇನ್ ರಜ್ವಿ, ಮೌಲಾನಾ ಅನ್ವಾರ್ ಅಸಅದಿ, ಅಬ್ದುಲ್ ಹಾನನ್, ಮುಫ್ತಿ ನಸೀಮುದ್ದೀನ್ ಸಾಬ್, ಮುಬಶಿರ್ ಅಹಮದ್ ಮತ್ತು ಇತರರು ಉಪಸ್ಥಿತರಿದ್ದರು. ಜನಾಬ್ ಮುಫ್ತಿ ಇದ್ರೀಸ್ ಅಹಮದ್ ಸಾಬ್ ಮತ್ತು ಇಮ್ರಾನ್ ಖಾದ್ರಿ ಅವರು ಪ್ರಾರ್ಥನೆ ನಡೆಸಿದರು. ಸಾರೆ ಜಹಾಂ ಸೇ ಅಚ್ಚಾ ಗೀತೆಯನ್ನು ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳು ಹಾಡಿದರು. ಸ್ವಾಗತವನ್ನು ಆಮೀರ್ ಜಾನ್, ನಿರೂಪಣೆ ನೌಷಾದ್ ಪಾಲ್ಯ ನೆರವೇರಿಸಿದರು.