War – Peepal Media

ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ
ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.

ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ ಸುದ್ದಿಗಳ ಕುರಿತು #PIBFactCheck ಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.

ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ  ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.

ಇಂಥಹ ಸುದ್ದಿಗಳ ಬಗ್ಗೆ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email:  factcheck@pib.gov.in ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.

ಭಾರತಕ್ಕೆ ಕರೆತರಲು ಸತತ ಮನವಿ ಮಾಡಿದ್ದ ರಷ್ಯಾದ ಸೇನೆಯಲ್ಲಿರುವ ಕೇರಳದ ವ್ಯಕ್ತಿ ರಷ್ಯಾ-ಉಕ್ರೇನ್‌ ಯುದ್ದದಲ್ಲಿ ಸಾವು
ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಭಾರತಕ್ಕೆ ವಾಪಾಸು ಕರೆತರಲು ನೆರವಾಗುವಂತೆ ಹಲವಾರು ಮನವಿಗಳನ್ನು ಮಾಡಿದ್ದ ರಷ್ಯಾದ ಸೇನೆಯಲ್ಲಿ ಹೋರಾಡುತ್ತಿದ್ದ ಕೇರಳದ ವ್ಯಕ್ತಿ ರಷ್ಯಾ ಮತ್ತು ಉಕ್ರೇನ್ ಯುದ್ಧದ ಮುಂಚೂಣಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮೃತ ವ್ಯಕ್ತಿಯನ್ನು ಕೇರಳದ ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿ ನಿವಾಸಿ 32 ವರ್ಷದ ಬಿನಿಲ್ ಟಿಬಿ ಎಂದು ಗುರುತಿಸಲಾಗಿದೆ. ಇದೇ ದಾಳಿಯಲ್ಲಿ ಬಿನಿಲ್ ಅವರ ಸಂಬಂಧಿ 27 ವರ್ಷದ ಜೈನ್ ಟಿಕೆ ಕೂಡ ಗಾಯಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಡ್ರೋನ್ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂಬ ಸಂದೇಶ ಬಿನಿಲ್ ಕುಟುಂಬಕ್ಕೆ ಬಂದಿತ್ತು. ಕುಟುಂಬಕ್ಕೆ ಬಿನಿಲ್ ಅಥವಾ ಜೈನ್ ರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ ನಂತರ ಬಿನಿಲ್ ಅವರ ಪತ್ನಿ ಜೋಯ್ಸಿ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು ಎಂದು ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ, ಬಿನಿಲ್ ಮತ್ತು ಜೈನ್ ಟಿಕೆ ಮನೆಗೆ ವಾಪಾಸು ಬರಲು ಪ್ರಯತ್ನಿಸಿ ಹತಾಶರಾಗಿದ್ದರು. ಬಿನಿಲ್ ಕಳೆದ ತಿಂಗಳಷ್ಟೇ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಜೊತೆಗೆ ಸರಣಿ ಧ್ವನಿ ಸಂದೇಶಗಳ ಮೂಲಕ ಮಾತನಾಡಿದ್ದರು ಎಂದು ಆ ಪತ್ರಿಕೆ ಉಲ್ಲೇಖಿಸಿದೆ.

“ಮನೆಗೆ ಮರಳುವ ಪ್ರಯತ್ನದಲ್ಲಿ ಸೆಪ್ಟೆಂಬರ್‌ನಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಬಾಗಿಲುಗಳನ್ನು ಬಡಿದು ವಿಫಲರಾಗಿದ್ದೇವೆ ಎಂದು ಬಿನಿಲ್ ಹೇಳಿದ್ದಾರೆ” ಎಂದು ವರದಿ ಹೇಳಿದೆ.

“ಮಾನಸಿಕವಾಗಿ ಮತ್ತು ದೈಹಿಕವಾಗಿ ನಾವು ದಣಿದಿದ್ದೇವೆ” ಎಂದು ಬಿನಿಲ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ತಮ್ಮ ಕೊನೆಯ ಸಂದೇಶದಲ್ಲಿ ಬಿನಿಲ್ ಅವರು ತನ್ನನ್ನು ಯುದ್ಧದ ಮುಂಚೂಣಿಗೆ ತೆರಳಲು ಒತ್ತಾಯಿಸುತ್ತಿದ್ದಾರೆ ಎಂದಿರುವುದು ವರದಿಯಾಗಿದೆ.

“ನಾವು ಈಗ ರಷ್ಯಾ ಆಕ್ರಮಿತ ಉಕ್ರೇನ್ ಪ್ರದೇಶದಲ್ಲಿ ಕಷ್ಟಕರವಾದ ಭೂಪ್ರದೇಶದಲ್ಲಿದ್ದೇವೆ. ಒಪ್ಪಂದವು ಒಂದು ವರ್ಷಕ್ಕೆ ಇತ್ತು ಎಂದು ನಮ್ಮ ಕಮಾಂಡರ್ ಹೇಳುತ್ತಾರೆ. ನಮ್ಮ ಬಿಡುಗಡೆಗಾಗಿ ನಾವು ಸ್ಥಳೀಯ ಕಮಾಂಡರ್‌ಗಳಿಗೆ ಮನವಿ ಮಾಡುತ್ತಿದ್ದೇವೆ. ರಷ್ಯಾದ ಸೇನೆ ನಮಗೆ ಪರಿಹಾರ ನೀಡದ ಹೊರತು ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ಅಭಿಪ್ರಾಯಪಟ್ಟಿದೆ. ರಾಯಭಾರ ಕಚೇರಿಯು ನಮ್ಮನ್ನು ರಷ್ಯಾದ ಪ್ರದೇಶಕ್ಕೆ ಹಿಂತಿರುಗಿಸಬೇಕೆಂದು ಹೇಳುತ್ತದೆ,” ಎಂದು ಅವರು ಹೇಳಿದ್ದರು.

ಘಟನೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಡಿಸೆಂಬರ್ 6, 2024 ರಂದು ಸಂಸತ್ತಿನ ಉತ್ತರದಲ್ಲಿ, ರಷ್ಯಾದಲ್ಲಿ ಇಲ್ಲಿಯವರೆಗೆ 10 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ . ಅವರಲ್ಲಿ ತಲಾ ಇಬ್ಬರು ಉತ್ತರ ಪ್ರದೇಶ ಮತ್ತು ಗುಜರಾತ್‌ನವರು; ಹರಿಯಾಣ, ಪಂಜಾಬ್, ಉತ್ತರಾಖಂಡ, ತೆಲಂಗಾಣ, ಕೇರಳ ಮತ್ತು ಒಡಿಶಾದಿಂದ ತಲಾ ಒಬ್ಬರು. ಇದು 11ನೇ ಸಾವು ಆಗಿರುವ ಸಾಧ್ಯತೆ ಇದೆ.

ಕಳೆದ ವರ್ಷ ಜುಲೈನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ರಷ್ಯಾದ ಸೈನ್ಯದಲ್ಲಿ ಹೋರಾಡುತ್ತಿರುವ ಭಾರತೀಯರ ಪರಿಸ್ಥಿತಿಯನ್ನು ಪ್ರಸ್ತಾಪಿಸಿದ ನಂತರ, ರಷ್ಯಾ ತನ್ನ ಸೇನೆಯಲ್ಲಿ ಹೋರಾಡುತ್ತಿರುವ ಅಂತಹ ಎಲ್ಲ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತೀಯರು ಉದ್ದೇಶಪೂರ್ವಕವಾಗಿ ರಷ್ಯಾದ ಸೇನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ರಷ್ಯಾದ ಹೇಳಿಕೆಯನ್ನು ಸರ್ಕಾರ ಅನುಮೋದಿಸುವುದಿಲ್ಲ ಎಂದು ಆಗಸ್ಟ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸತ್ತಿನಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ರಷ್ಯಾದ ರಾಯಭಾರ ಕಚೇರಿಯು ಭಾರತೀಯ ನಾಗರಿಕರನ್ನು ಮಿಲಿಟರಿ ಸೇವೆಗೆ ಸೇರಿಸಿಕೊಳ್ಳಲು ತಾನು ಯಾವುದೇ ನೇಮಕಾತಿ ಪ್ರಯತ್ನಗಳಲ್ಲಿ, ವಿಶೇಷವಾಗಿ “ಮೋಸದ ಯೋಜನೆಗಳಲ್ಲಿ” ತೊಡಗಿಸಿಕೊಂಡಿಲ್ಲ ಎಂದು ಹೇಳಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಏಪ್ರಿಲ್ 2024 ರಿಂದ “ಭಾರತ ಸೇರಿದಂತೆ ಹಲವಾರು ವಿದೇಶಿ ದೇಶಗಳ ನಾಗರಿಕರನ್ನು ರಷ್ಯಾದ ಸಶಸ್ತ್ರ ಪಡೆಗಳಲ್ಲಿ ಮಿಲಿಟರಿ ಸೇವೆಗೆ ಸೇರಿಸುವುದನ್ನು ನಿಲ್ಲಿಸಿದೆ” ಎಂದು ಹೇಳಿಕೊಂಡಿದೆ.

ಪ್ರೊ. ರೀಫಾತ್ ಅಲಾರೀರ್: ಪ್ಯಾಲೇಸ್ತೀನಿನ ಸಾಹಿತ್ಯ ಸಂಗ್ರಾಮಿಯೊಬ್ಬನ ಬಲಿದಾನ
ದಾಳಿಗೊಳಗಾದ ದೇಶವನ್ನು ಅಕ್ಷರದ ಬಂಕರ್‌ಗಳಲ್ಲಿ ಕಾಪಿಟ್ಟುಕೊಳ್ಳುವ ದಾರಿ ತೋರಿದ ಅಕ್ಷರಯೋಧ - ಶಿವಸುಂದರ್, ಚಿಂತಕರು

ಇದೆ ಡಿಸೇಬರ್ ೭ ರಂದು ಪ್ಯಾಲೇಸ್ತೀನಿನ ಪ್ರಖ್ಯಾತ ಕವಿ , ಮೇಧಾವಿ ಪ್ರೊ. ರೀಫಾಟ್ ಅಲಿರಾರ್ ಇಸ್ರೇಲಿನ ಬಾಂಬುಗಲಿಗೆ ಬಲಿಯಾಗಿದ್ದಾರೆ.

ಒಂದು ದೇಶ ಅಥವಾ ಸಮುದಾಯದ ಮೇಲೆ ದಾಳಿ ನಡೆಯುತ್ತಿರುವಾಗ ಆ ದೇಶದ ಸಾಹಿತಿ – ಕಲಾವಿದರು ಹೇಗೆಲ್ಲಾ ಪ್ರತಿಭಟಿಸಬಹುದು ಮತ್ತು ದೇಶದ ಅಸ್ಮಿತೆಯನ್ನು ರಕ್ಷಿಸಿಕೊಳ್ಳಬಹುದು ಎನ್ನುವುದಕ್ಕೆ ಉತ್ತರ ಪ್ರೊ. ರೀಫಾತ್ ಅಲಾರೀರ್.

ಒಬ್ಬ ಸಾಹಿತಿ- ಕಲಾವಿದ ಸೃಜನಶೀಲ ವಾಗಿ ಬದುಕುವ ಮೂಲಕ ತಾನಾಗಲೀ,ತನ್ನ ದೇಶವಾಗಲೀ ಸಾಯುವುದಿಲ್ಲ ಎಂದು ತೋರಿಸಬಹುದು. ಧ್ವನಿಯನ್ನು ಹತ್ತಿಕ್ಕಿದರೂ ಇತರ ಪ್ರಾಕಾರಗಳ ಮೂಲಕ ಜಗತ್ತಿಗೆ ತಮ್ಮ ಇರುವನ್ನು, ಪರಿಸ್ಥಿತಿಯನ್ನು ಸಾರಿ ಹೇಳಬಹುದು. ಭೌತಿಕವಾಗಿ ಒಂದು ನೆಲವನ್ನು ಆಕ್ರಮಿಸಿದರೂ ಎದೆಯಲ್ಲಿರುವ ನೆಲೆಯನ್ನು ಆಕ್ರಮಿಸಲಾಗದು ಎಂದು ದಾಖಲಿಸಬಹುದು. ಆ ಮೂಲಕ ವಿನಾಶ- ವಿಧ್ವಂಸಗಳ ನಡುವೆಯೂ ಹೊಸ ಚಿಗುರಿನ ಎಲೆಯನ್ನು ಭವಿಷ್ಯಕ್ಕಾಗಿ ಕಾಪಾಡಿಕೊಳ್ಳಬಹುದು.

ಗಾಜಾದ ಪ್ಯಾಲೆಸ್ತೀನ್ ಪ್ರೊಫೆಸರ್ ರೀಫಾತ್ ಅಲಾರೀರ್ ಅಂಥ ಸಾಂಸ್ಕೃತಿಕ ಯೋಧರ ಪರಂಪರೆಗೆ ಸೇರಿದವರು. ಸತ್ತರೂ ಹುಟ್ಟಿ ಬೆಳೆದ ಗಾಜಾ ತೊರೆಯೇ ಎಂದು ಬಾಂಬುಗಳ ನಡುವೆಯೇ ಬದುಕುತ್ತಾ ಬಲಿಯಾದ ಗಾಜಾದ ಕಥೆಗಾರ ಆಲಾರೇರ್. ಪ್ಯಾಲೇಸ್ಟಿನಿಯರ ಕಥೆಗಳನ್ನೇ ಕಥನಕಣವನ್ನಾಗಿ ರೂಪಿಸಿದವರು.

1979ರಲ್ಲಿ ಆಕ್ರಮಿತ ಗಾಜಾದಲ್ಲಿ ಇಸ್ರೇಲ್ ದೌರ್ಜನ್ಯಗಳನ್ನೇ ಕಂಡುಂಡು ಬೆಳದ ಅಲಾರೇರ್ ನಂತರ ಲಂಡನ್ನಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಲೇಷಿಯಾ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿಯನ್ನು ಪಡೆದವರು. ಗಾಜಾದ ವಿಶ್ವವಿಧಾಯಲಯದಲ್ಲಿ ಸಾಹಿತ್ಯ ಮತ್ತು ಸೃಜನಶೀಲ ಬರವಣಿಗೆಯ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಪ್ರೊ. ರೀಫಾತ್ ಅಲಾರೀರ್ ಅವರು ಇಸ್ರೇಲ್ ಆಕ್ರಮಣದಿಂದ ಪ್ಯಾಲೆಸ್ತೀನ್ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಕಥನ ಮಾರ್ಗ ಹಿಡಿದಿದ್ದರು. ಅವರ ಪ್ರಕಾರ ಪ್ಯಾಲೇಸ್ಟಿನಿಯರ ಹಿರಿಯರು ಹೇಳುತ್ತಾ ಬಂದ ಕಥೆಗಳನ್ನೂ ಮುಂದಿನ ಪೀಳಿಗೆಗೆ ದಾಟಿಸುವುದು ಕೂಡ ಪ್ಯಾಲೆಸ್ತೀನ್ ಅನ್ನು ಉಳಿಸಿಕೊಳ್ಳುವ ಒಂದು ಪರಿ.

ಇತಿಹಾಸದಲ್ಲಿ ಮತ್ತು ನಿತ್ಯ ಜೀವನದಲ್ಲಿ ಬೇರುಬಿಟ್ಟ ಪ್ಯಾಲೇಸ್ಟಿನಿಯರ ಕಥೆಗಳನ್ನು ಕಾಪಾದುತ್ತ, ಅವನ್ನು ಎಳೆಯ ಪೀಳಿಗೆಗೆ ಹರಡುತ್ತಾ, ಹೊಸ ಪೀಳಿಗೆಯ ಹೊಸ ಕಥೆಗಳನ್ನು ದಾಖಲಿಸುತ್ತಾ… ಇಸ್ರೇಲಿನ ಬಾಂಬು ದಾಳಿಯಿಂದ ಪ್ಯಾಲೇಸ್ತೀನನ್ನು ಅಕ್ಷರಗಳ ಬ್ಯಾರಕ್ಕಿನಲ್ಲಿ ಕಾಪಾಡಬಹುದು ಎಂದು ಭಾವಿಸಿದ್ದ ರೀಫಾತ್ ಅದನ್ನು ಸಾಧಿಸಲು ಅಕ್ಷರ ಕಮಾಂಡರ್ ಆಗಿಯೇ ಸೆಣೆಸಿದರು.

ಅದಕ್ಕಾಗಿಯೇ ಇಸ್ರೇಲ್ ಆಕ್ರಮಣದ ವಿರುದ್ಧ ” We Are Not Numbers” ಎಂಬ ಬರಹ ಯೋಧರ ಸಂಘಟನೆಯನ್ನೂ ಹುಟ್ಟುಹಾಕಿದರು.

ಗಾಜಾದ ತರುಣ ತರುಣಿಯರಿಗೆ ತಮ್ಮ ಕಥೆಗಳನ್ನೂ ಬರೆಯಲು ತಾವು ಬೋಧಿಸುತ್ತಿದ್ದ ಗಾಜಾ ವಿಶ್ವವಿದ್ಯಾಲಯದಲ್ಲಿ ಪ್ರೋತ್ಸಾಹಿಸಿದರು. ಅದನ್ನು ” Gaja Writes Back” ಎಂದು ಸಂಕಲಿಸಿದರು.
ಮತ್ತು ಅದನ್ನು ಜಗತ್ತಿನ ಗಮನಕ್ಕೆ ತಂದು ಪ್ಯಾಲೇಸ್ತೀನನ್ನ ಅಳಿಸಿಹಾಕಿಬಿಡಬೇಕೆಂಬ ಇಸ್ರೇಲ್ ವ್ಯೂಹತಂತ್ರಕ್ಕೆ ಸಾಂಸ್ಕೃತಿಕ ಸವಾಲು ಎಸೆದರು.

” Gaja Unsilenced” ಎಂಬ ಮತ್ತೊಂದು ಸಂಕಲನವನ್ನು ತಂದು ಪ್ಯಾಲೇಸ್ತೀನನ್ನು ಅಕ್ಷರ ಲೋಕದಲ್ಲಿ ಬದುಕಿಸಿಕೊಳ್ಳುವ ಕಾಯಕ ಮುಂದುವರೆಸಿದರು..

ಪರಕೀಯರ ನೆಲವನ್ನು ತನ್ನದೆನ್ನುವ ಆಕ್ರಮಣಕಾರರಿಗೆ , ಹಾಗಿದ್ದರೆ ಈ ನೆಲದ ಕಥೆ ಹೇಳಿ ಎಂದು ಸವಾಲು ಹಾಕಿ ಹಿಮ್ಮೆಟ್ಟಿಸಿದರು. ಪ್ಯಾಲೆಸ್ತೀನ್ ಅನ್ನು ಭೌತಿಕವಾಗಿ ಆಕ್ರಮಿಸಿರುವ ಇಸ್ರೇಲಿ ಆಕ್ರಮಣಕಾರರ ಭಾವಲೋಕದಲ್ಲಿ ಪ್ಯಾಲೆಸ್ತೀನ್ ಇಲ್ಲವೇ ಇಲ್ಲ ಎಂದು ಅವರ ಬರಡುತನವನ್ನು ಬಯಲಿಗೆಳೆದರು.

ಇಂಥಾ ಪ್ರೊ. ರೀಫಾತ್ ಅಲಾರೀರ್ ಗಾಜಾದ ಮೇಲೆ ಇಸ್ರೇಲ್ ಅತ್ಯಂತ ಘನಘೋರ ಹಾಗೂ ಅನ್ಯಾಯಯುತ ಯುದ್ಧ ಪ್ರಾರಂಭಿಸಿದ ಮೇಲೂ ತನ್ನ ಮನೆ ಮತ್ತು ನೆಲೆಯಾದ ಗಾಜಾ ವನ್ನು ಯಾವ ಕಾರಣಕ್ಕೂ ತೊರೆಯಲಾರೆ ಎಂದು ಉತ್ತರ ಗಾಜಾದಲ್ಲೇ ಉಳಿದುಕೊಂಡಿದ್ದರು.

ಇದನ್ನು ಅರಿತುಕೊಂಡ ಇಸ್ರೇಲಿ ಆಕ್ರಮಕಾರಿ ಪಡೆಗಳು ಅವರ ಮನೆಯ ಮೇಲೆ ಗುರಿಯಿಟ್ಟು ದಾಳಿ ಮಾಡಿ ಡಿಸೇಂಬರ್ 7 ರಂದು ಪ್ಯಾಲೆಸ್ತೀನ್ ಜನರ ಈ ಬೌದ್ಧಿಕ ಹಾಗೂ ಸಾಂಸ್ಕೃತಿಕ ಯೋಧನನ್ನು, ಪ್ಯಾಲೆಸ್ತೀನ್ ಕಥನವೀರನನ್ನು ಕೊಂದು ಹಾಕಿದರು.

ಬಲಿಯಾಗುತ್ತೇನೆಂದು ಗೊತ್ತಿದ್ದೇ ಬರೆದಂತಿರುವ ಪ್ರೊ. ರೀಫಾತ್ ಅವರ ಕೊನೆಯ ಪದ್ಯದ ಒಂದು ಸಾಲು:

ನಾನು ಸಾಯುವುದು ಕಡ್ಡಾಯವಾದರೆ
ನೀನು ಬದುಕಬೇಕು ..
ನನ್ನ ಕಥೆಯನ್ನು ಹೇಳಲು
ನನ್ನ ಸರಕನ್ನು ಮಾರಲು

ನಾವು ಸಾಯುವುದು ಕಡ್ಡಾಯವಾದರೆ
ಅದು ಬರವಸೆಗಳನ್ನು ಹುಟ್ಟಿಸಲಿ
ಕೇಳುವ ಕಥೆಯಾಗಲಿ…

ಸಾಹಿತಿ ಕಲಾವಿದರು ಹೀಗೂ ತಮ್ಮ ಸಮುದಾಯಗಳನ್ನು ದೇಶವನ್ನು ಬದುಕಿಸಿಕೊಳ್ಳಬಹುದು. ಕಥನ ರಂಗದಲ್ಲಿ ಶತ್ರುಗಳನ್ನು ಸೋಲಿಸಬಹುದು.ಆದರೆ ಸಾಯುವುದಕ್ಕೆ ಸಿದ್ಧವಾದ ಸಾಹಿತಿ ಕಲೆಗಾರ ಮಾತ್ರ ಬದುಕುವ ಸಾಲನ್ನು ಬರೆಯಬಹುದು . ಅಲ್ಲವೇ?

ಶಿವಸುಂದರ್, ಚಿಂತಕರು

ಹಮಾಸ್‌ ಮತ್ತು ರಷ್ಯಾ ಪ್ರಜಾಪ್ರಭುತ್ವಕ್ಕೆ ಮಾರಕ: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್‌
ಬೆಂಗಳೂರು,ಅಕ್ಟೋಬರ್.‌20: ಹಮಾಸ್ ಮತ್ತು ರಷ್ಯಾ ಎರಡೂ ದೇಶಗಳೂ ಪ್ರಜಾಪ್ರಭುತ್ವವನ್ನು “ನಿರ್ಮೂಲನೆ” ಮಾಡಲು ಹೊರಟಿವೆ, ಅಮೇರಿಕಾ, ಉಕ್ರೇನ್ ಮತ್ತು ಇಸ್ರೇಲ್‌ಗೆ ನೆರವನ್ನು ನೀಡಿ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಗುರುವಾರ ಓವಲ್ ಕಚೇರಿಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾವೋದ್ರಿಕ್ತ ಭಾಷಣದಲ್ಲಿ‌ ಕೋರಿದ್ದಾರೆ.

ಹಮಾಸ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ “ಬೆದರಿಕೆಗಳನ್ನು ಪ್ರತಿನಿಧಿಸುತ್ತಾರೆ. ಇವರಿಬ್ಬರೂ ನೆರೆಯ ದೇಶಗಳ ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡಲು ಹೊರಟಿದ್ದಾರೆ” ಎಂದು ಬಿಡೆನ್  ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

“ಒಂದು ದೊಡ್ಡ ರಾಷ್ಟ್ರವಾಗಿ ನಮ್ಮ ಜವಾಬ್ದಾರಿಯಂತೆ ಕ್ಷುಲ್ಲಕ ಪಕ್ಷಪಾತದ, ದ್ವೇಷದ ರಾಜಕಾರಣವನ್ನು ನಾವು ಎಂದಿಗೂ ಸುಮ್ಮನೆ ಬಿಡಲಾರೆವು. ನಾವು ಹಮಾಸ್‌ನಂತಹ ಭಯೋತ್ಪಾದಕರು ಮತ್ತು ಪುಟಿನ್‌ನಂತಹ ನಿರಂಕುಶಾಧಿಕಾರಿಗಳನ್ನು ಗೆಲ್ಲಲು ಬಿಡುವುದಿಲ್ಲ,” ಎಂದು ಬಿಡೆನ್ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದ್ದಾರೆ.

ಉಕ್ರೇನ್ ಮತ್ತು ಇಸ್ರೇಲ್‌ಗೆ ಸಹಾಯವಾಗಿ ಬೃಹತ್ ಹಣಕಾಸಿನ ನಿಧಿಯನ್ನು ಅನುಮೋದಿಸಲು ಶುಕ್ರವಾರ ಕಾಂಗ್ರೆಸ್‌ಗೆ ಮನವಿ ಮಾಡುವುದಾಗಿ ಹೇಳಿರುವ ಬಿಡೆನ್, “ಇದು ಜಾಗತಿಕ ನಾಯಕನಾಗಿ ನಾನು ಯುನೈಟೆಡ್ ಸ್ಟೇಟ್ಸ್‌ನ ಭವಿಷ್ಯಕ್ಕಾಗಿ ಮಾಡುವ ಹೂಡಿಕೆಯಾಗಿದೆ” ಎಂದು ತಿಳಿಸಿದ್ದಾರೆ.

“ಇದು ಅನೇಕ ತಲೆಮಾರುಗಳವರೆಗೆ ಅಮೇರಿಕನ್ನರ ಭದ್ರತೆಗಾಗಿ ಮಾಡುವ ಸ್ಮಾರ್ಟ್ ಹೂಡಿಕೆಯಾಗಿದೆ” ಎಂದು ಐತಿಹಾಸಿಕ ರೆಸಲ್ಯೂಟ್ ಡೆಸ್ಕ್‌ನಿಂದ ಮಾಡಿದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದಾರೆ.

“ಅಮೆರಿಕನ್ ನಾಯಕತ್ವವು ಜಗತ್ತನ್ನು ಒಟ್ಟಿಗೆ ಹಿಡಿದಿಡಲು ಬಯಸುತ್ತದೆ. ಅಮೇರಿಕದ ಜೊತೆಗಿನ ಮೈತ್ರಿಗಳು ನಮ್ಮನ್ನು, ಅಮೇರಿಕಾವನ್ನು ಸುರಕ್ಷಿತವಾಗಿರಿಸುತ್ತವೆ. ಅಮೆರಿಕಾದ ಮೌಲ್ಯಗಳೇ ಇತರ ರಾಷ್ಟ್ರಗಳು ನಮ್ಮ ಜೊತೆಗೆ ಕೆಲಸ ಮಾಡುವಂತೆ ಮಾಡುತ್ತಿವೆ. ಅಮೇರಿಕಾ ಜಗತ್ತಿಗೆ ಎಂದೆಂದಿಗೂ ದಾರಿದೀಪವಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ಈ ವಾರ ಇಸ್ರೇಲ್‌ಗೆ ಪ್ರವಾಸ ಮಾಡಿದ್ದ ಬಿಡೆನ್, ತಮ್ಮ 2024 ರ ಮರುಚುನಾವಣೆಯನ್ನು ಗೆಲ್ಲುವ ಯುದ್ಧದಿಂದ  ದಣಿದಿರುವ ಮತದಾರರು ಮತ್ತು ರಿಪಬ್ಲಿಕನ್ನರನ್ನು ಗೆಲ್ಲಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ.

ಶ್ವೇತಭವನವು ಹಮಾಸ್‌ ವಿರುದ್ಧ ಇಸ್ರೇಲ್‌ಗೆ ಮತ್ತು ರಷ್ಯಾದ ಆಕ್ರಮಣದ ವಿರುದ್ಧದ ಉಕ್ರೇನ್‌ಗೆ ಯುದ್ಧ ನೆರವಾಗಿ 100 ಬಿಲಿಯನ್‌ ಡಾಲರ್ ಪ್ಯಾಕೇಜ್‌ ಘೋಷಿಸಲು ಕಾಂಗ್ರೆಸ್‌ಗೆ ವಿನಂತಿಯನ್ನು ಮಾಡುವುದಾಗಿ ತಿಳಿಸಿದ್ದಾರೆ.

ಯುನೈಟೆಡ್ ಸ್ಟೇಟ್ಸ್‌ನಿಂದ ಸಾಗರ ದೂರದಲ್ಲಿರುವ ಎರಡೂ ಸಂಘರ್ಷಗಳನ್ನು ಒಂದಾಗಿ ಜೋಡಿಸಿ ಮತ್ತು  ಯುಎಸ್‌ನಲ್ಲಿ ಅಮೆರಿಕನ್ನರನ್ನು ಸುರಕ್ಷಿತನ್ನಾಗಿ ಇಡಲು ದೊಡ್ಡ ಹೋರಾಟದ ಭಾಗವಾಗಿ ಇದನ್ನು ರೂಪಿಸಲು ಬಿಡೆನ್  ಪ್ರಯತ್ನ ಪಡುತ್ತಿದ್ದಾರೆ.

ಅಮೇರಿಕಾ ಅಧ್ಯಕ್ಷರು ಸಾಂಪ್ರದಾಯಿಕವಾಗಿ ಓವಲ್ ಕಚೇರಿಯಿಂದ (solemn setting of the Oval Office) ಪ್ರಮುಖ ರಾಷ್ಟ್ರೀಯ ಮಹತ್ವದ ಭಾಷಣಗಳನ್ನು ಮಾತ್ರ ಮಾಡುತ್ತಾರೆ.

ಜೂನ್‌ನಲ್ಲಿ ಅಮೇರಿಕಾದ ಸಾಲ ಡೀಫಾಲ್ಟ್ ದುರಂತವನ್ನು ತಪ್ಪಿಸಲು ಕಾಂಗ್ರೆಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಾಗ ಇಲ್ಲಿಂದಲೇ ಭಾಷಣ ಮಾಡಿದ್ದರು.

ಆದರೆ, ವೈಟ್‌ಹೌಸ್‌ನಲ್ಲಿ ಬಹುಮತವನ್ನು ನಿಯಂತ್ರಿಸುವ ವಿಭಜನೆಗೊಂಡಿರುವ ರಿಪಬ್ಲಿಕನ್ನರು ಹೌಸ್ ಸ್ಪೀಕರ್ ಅನ್ನು ಆಯ್ಕೆ ಮಾಡಲು ಪದೇ ಪದೇ ವಿಫಲರಾಗಿರುವುದರಿಂದ ಕಾಂಗ್ರೆಸ್ ಎರಡು ವಾರಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿದೆ.

ಫೆಬ್ರವರಿ 2022 ರಲ್ಲಿ ಮಾಸ್ಕೋ ಉಕ್ರೇನ್‌ ಮೇಲೆ ದಾಳಿಯನ್ನು ಆರಂಭಿಸಿದಾಗಿನಿಂದ ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ಗೆ ನೀಡಲು ಹೊರಟಿರುವ 43.9 ಬಿಲಿಯನ್‌ ಡಾಲರ್ ಭದ್ರತಾ ನೆರವನ್ನು ಹೆಚ್ಚಿಸುವುದಕ್ಕೆ ರಿಪಬ್ಲಿಕನ್ನರು ಮತ್ತು ಸ್ವತಃ ಜನರೇ ವಿರೋಧಿಸಿದ್ದರು.

ಶುಕ್ರವಾರ, ವಿನಂತಿ ಮಾಡಲು ಹೊರಟಿರುವ ಪ್ಯಾಕೇಜ್‌ನಲ್ಲಿ ಇಸ್ರೇಲ್‌ಗೆ  10 ಬಿಲಿಯನ್ ಡಾಲರ್‌ ಮತ್ತು ಉಕ್ರೇನ್‌ಗೆ  60‌ ಬಿಲಿಯನ್ ಡಾಲರ್ ಹಣಕಾಸಿನ ನೆರವು ಇರುತ್ತದೆ ಎಂದು ಅಮೇರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಈ ಭಾಷಣಕ್ಕೂ ಮೊದಲು ಬಿಡೆನ್ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯೊಂದಿಗೆ ಮಾತುಕತೆ ನಡೆಸಿದ್ದರು.

ವೊಲೊಡಿಮಿರ್ ಝೆಲೆನ್ಸ್ಕಿ ಅಮೇರಿಕಾ ನೀಡಿದ ATACMS ಎಂಬ ಲಾಂಗ್-ರೇಂಜ್‌ ಕ್ಷಿಪಣಿಗಳಿಗೆ ಕೃತಜ್ಞತೆ ತಿಳಿಸಿದ್ದಾರೆ. “ಸ್ವಾತಂತ್ರ್ಯಕ್ಕಾಗಿ ಮತ್ತು ರಷ್ಯಾದ ಆಕ್ರಮಣದ ವಿರುದ್ಧದ ನಮ್ಮ ಹೋರಾಟಕ್ಕೆ ಅಮೇರಿಕಾ ನೀಡಿರುವ ಬೆಂಬಲಕ್ಕೆ ಉಕ್ರೇನ್ ಕೃತಜ್ಞವಾಗಿರುತ್ತದೆ,” ಎಂದು ಉಕ್ರೇನ್‌ನ ಅಧ್ಯಕ್ಷ ತಿಳಿಸಿದ್ದಾರೆ.

ಎಡಪಂಥೀಯ ಡೆಮೋಕ್ರಾಟ್‌ಗಳು ಬಿಡೆನ್ ನಿಲುವನ್ನು ವಿರೋಧಿಸಿದರೂ, ಅದೇ ಪಕ್ಷದ ಬಿಡೆನ್‌ ಮಾತ್ರ ಇಸ್ರೇಲ್‌ಗೆ ಬಲವಾದ ಬೆಂಬಲ ನೀಡುತ್ತಿರುವ ಅಮೇರಿಕಾ ಮತದಾರರ ಕಾರಣದಿಂದಾಗಿ ಇಸ್ರೇಲ್-ಹಮಾಸ್ ಯುದ್ಧದ ಮೇಲೆ ತಮ್ಮ ಪ್ರಭಾವವನ್ನು ಹೆಚ್ಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ಬುಧವಾರ ಟೆಲ್ ಅವೀವ್‌ನಲ್ಲಿ ಮಾತನಾಡಿದ ಬಿಡೆನ್ ಇಸ್ರೇಲ್‌ಗೆ ಬೆಂಬಲ ಸೂಚಿಸಿ, ಅಕ್ಟೋಬರ್ 7 ರಂದು ಪ್ಯಾಲೇಸ್ಟಿನಿಯನ್ ಬಂಡುಕೋರ ಗುಂಪು ಹಮಾಸ್ ನಡೆಸಿದ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರನ್ನು ಹತರಾದ ನಂತರ ಗಾಜಾದ ಮೇಲೆ  ಆಕ್ರಮಣಕ್ಕೆ ಇಸ್ರೇಲ್‌ ಸಜ್ಜಾಗಿದೆ ಎಂದು ಹೇಳಿದ್ದರು.

ಆದರೆ, ಬಿಡೆನ್‌ ಈಜಿಪ್ಟ್ ಮೂಲಕ ಇಸ್ರೇಲಿ ಬಾಂಬ್ ದಾಳಿಯಿಂದ ಕನಿಷ್ಠ 3,785 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿರುವ ಗಾಜಾ ಪಟ್ಟಿಗೆ ನೆರವು ನೀಡಲು ಒಪ್ಪಂದವನ್ನು ಮಾಡಿಕೊಂಡಿದ್ದರು.

ವಿಶಾಲವಾದ ಮಧ್ಯಪ್ರಾಚ್ಯದ ಈ ಸಂಘರ್ಷದ ಮಧ್ಯೆ ಅಮೇರಿಕಾ ಒಳಗೊಳಗಿನ ಅಟಗಳನ್ನು ಆಡುತ್ತಿದೆ. ಹಮಾಸ್‌ನ ಮಿತ್ರರಾಷ್ಟ್ರಗಳಾದ ಇರಾನ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾವನ್ನು ತಡೆಯಲು  ಯುನೈಟೆಡ್ ಸ್ಟೇಟ್ಸ್ ಈಗಾಗಲೇ ಎರಡು ಯುದ್ಧನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ಗೆ ಸ್ಥಳಾಂತರಿಸಿದೆ

ಗಾಜಾಪಟ್ಟಿ ಈಗ ಅಕ್ಷರಶಃ ನರಕ!
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನದಲ್ಲಿ ಈಗ ಪರಿಸ್ಥಿತಿ ಕೈ ಮೀರಿದೆ. ಹಮಾಸ್ ನನ್ನು ಬಗ್ಗು ಬಡಿಯುವ ಇಸ್ರೇಲ್ ನ ಆವೇಶಕ್ಕೆ ಈಗ ಗಾಜಾಪಟ್ಟಿಯಲ್ಲಿ ಅಕ್ಷರಶಃ ನರಕಸದೃಶ ವಾತಾವರಣ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಸೈರನ್ ಶಬ್ದ, ನೆಲಕ್ಕುರುಳಿದ ಬಹು ಅಂತಸ್ತಿನ ಕಟ್ಟಡಗಳು ಎಲ್ಲಕ್ಕಿಂತ ಹೆಚ್ಚಾಗಿ ಕಂಡಕಂಡಲ್ಲೆಲ್ಲ ಅಮಾಯಕರ ಹೆಣಗಳು ಭಯಾನಕ ವಾತಾವರಣ ಸೃಷ್ಟಿ ಮಾಡಿದೆ.

ಗಾಜಾ ಮೇಲೆ ಇಸ್ರೇಲ್ ಸೇನೆ ನಡೆಸಿದ ಪರಿಣಾಮ ಭಯ ಆವರಿಸಿರುವ ಕಾರಣ ಅಮಾಯಕ ಜನ ಊರು ಬಿಟ್ಟು ಹೋಗಿದ್ದಾರೆ. ಈಗಾಗಲೇ ಸುಮಾರು 10 ಲಕ್ಷ ಜನರು ಗಾಜಾಪಟ್ಟಿ ಬಿಟ್ಟು ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ. ತಾವು ಹುಟ್ಟಿ ಬೆಳದ ಊರು ಸ್ಥಳ ಬಿಟ್ಟು, ಜೀವ ಉಳಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲಿ ಗಾಜಾಪಟ್ಟಿ ಒಳಗೆ ನರಳುತ್ತಿರುವ ಜನರಿಗೂ ಔಷಧದ ಕೊರತೆ ಎದುರಾಗಿದೆ.

ಈಗಾಗಲೇ ಗಾಜಾಪಟ್ಟಿ ತೊರೆಯಲು ಇಸ್ರೇಲ್ ಗಾಜಾ ನಿವಾಸಿಗಳಿಗೆ ಎರಡು ದಿನಗಳ ಗಡುವು ನೀಡಿತ್ತು. ಪರಿಸ್ಥಿತಿಯ ಭೀಕರತೆ ಅರಿತ ಹಲವು ಮಂದಿ ತಮ್ಮ ಜಾಗ ಖಾಲಿ ಮಾಡಿದ್ದರು. ಅಷ್ಟಾದರೂ ಮುಂದಿನ ನೆಲೆಯ ಬಗ್ಗೆ ದಿಕ್ಕು ಕಾಣದ ಮಂದಿ ಎಲ್ಲಿ ಹೋಗುವುದು ಎಂಬುದು ತೋಚದೇ ಅಲ್ಲೇ ಉಳಿದಿದ್ದರು.

ಈ ನಡುವೆ ಯಾವುದೇ ಪರಿಸ್ಥಿತಿ ಕೈಮೀರುವಂತೆ, ಆಕ್ರಮಣಕಾರಿ ದಾಳಿಗೆ ಇಸ್ರೇಲ್ ಕೈ ಹಾಕಬಾರದು ಎಂದು ವಿಶ್ವಸಂಸ್ಥೆ ಮನವಿ ಮಾಡಿತ್ತು. ಆದರೆ ಇಸ್ರೇಲ್ ಇದ್ಯಾವುದನ್ನೂ ಲೆಕ್ಕಕ್ಕೆ ತಗೆದುಕೊಳ್ಳದೇ ಹಮಾಸ್ ಬೆನ್ನಿಗೆ ಬಿದ್ದು ಅಕ್ಷರಶಃ ಇಡೀ ಗಾಜಾವನ್ನು ಧ್ವಂಸ ಮಾಡಲು ಹೊರಟಿದೆ. ಬೀದಿ ಬೀದಿಗಳಲ್ಲಿ ಹೆಣಗಳ ರಾಶಿ, ಕಟ್ಟಗಳ ಕೆಳಗೆ ಸಿಲುಕಿ ನರಳುತ್ತಿರುವ ಜನರಿಗೆ ಅನ್ನ, ನೀರು ಸಹ ಸಿಗದಿರುವುದು ನೋಡಿದರೆ ಎರಡನೇ ಮಹಾಯುದ್ಧದ ನೆನಪನ್ನು ಮತ್ತೆ ಮರುಕಳಿಸಿದೆ.

ಗಾಜಾದಲ್ಲಿ 4 ಆಸ್ಪತ್ರೆಗಳು ಈಗಾಗಲೇ ಕೆಲಸ ನಿಲ್ಲಿಸಿದ್ದು 21 ಆಸ್ಪತ್ರೆಗಳಿಗೆ ಮುಚ್ಚುವಂತೆ ಇಸ್ರೇಲ್‌ ಆದೇಶ ನೀಡಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈ ನಡುವೆ ರೋಗಿಗಳು ಹಾಗೂ ಚಿಕ್ಕ ಚಿಕ್ಕ ಮಕ್ಕಳ ನರಳಾಟ ಮುಂದುವರಿದಿದೆ.

ಪಟ್ಟು ಬಿಡದ ಹಮಾಸ್

ಇಷ್ಟಾದರೂ ಹಮಾಸ್ ಮಾತ್ರ ತಮ್ಮ ಹಠ ಸಾಧನೆಗೆ ಇನ್ನಿಲ್ಲದ ಕಸರತ್ತು ಮಾಡಲು ಹೊರಟಿದ್ದಾರೆ. ಇಸ್ರೇಲ್ ನ ದಾಳಿಗೆ ಇಡೀ ಗಾಜಾದಲ್ಲಿ ಆಹಾರ ಮತ್ತು ಔಷಧಕ್ಕೆ ತತ್ವಾರ ಆಗಿರುವಾಗ, ಪ್ಯಾಲೆಸ್ತೇನಿಯರ ರಕ್ಷಣೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ನಿರಾಶ್ರಿತರ ರಕ್ಷಣಾ ಶಿಬಿರದ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿ ಅಪಾರ ಪ್ರಮಾಣದ ಇಂಧನ ಮತ್ತು ಔಷಧೀಯ ಪರಿಕರಗಳನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ನೀಡಿದ್ದು, ಗಾಜಾಪಟ್ಟಿ ಸಮೀಪದ ಪೂರ್ವದಲ್ಲಿ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಘಟಕ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣ ಇಂಧನ ಮತ್ತು ವೈದ್ಯಕೀಯ ಉಪಕರಣಗಳನ್ನು ಹಮಾಸ್ ಉಗ್ರ ಸಂಘಟನೆ ಕದ್ದಿದೆ ಎಂದು ಆರೋಪಿಸಿದೆ.

Hamas stole fuel and medical equipment from @UNRWA in Gaza.

The amount of fuel stolen is enough to power Gaza’s water desalination facilities for six days.

Hamas does not care about the people of Gaza.

This remains true even if UNRWA deletes its tweets. pic.twitter.com/iHF2P0CFjE
— Israel Defense Forces (@IDF) October 16, 2023

ಆದರೆ ಹಮಾಸ್ ಮೇಲೆ ಜಾಗತಿಕವಾಗಿ ತಪ್ಪು ಅಭಿಪ್ರಾಯ ರೂಪಿಸುವ ಕಾರಣಕ್ಕೆ ಇಸ್ರೇಲ್ ಇಂತಹದ್ದೊಂದು ಸುಳ್ಳು ಮಾಹಿತಿಯನ್ನು ರವಾನೆ ಮಾಡುತ್ತಿದೆ ಎಂದು ಪ್ಯಾಲೆಸ್ತೇನ್ ಪರ ನಿಂತವರ ಅಭಿಪ್ರಾಯವಾಗಿದೆ. ಅದಕ್ಕೆ ಸರಿಯಾಗಿ ಇಸ್ರೇಲ್ ಈ ಆಹಾರ ಮತ್ತು ಔಷಧಿ ಕದ್ದ ಪ್ರಕರಣವನ್ನು ಹಮಾಸ್ ತಲೆಗೆ ಕಟ್ಟಲು ಪ್ರಯತ್ನಿಸಿದೆ. ಆದರೆ ವಿಶ್ವಸಂಸ್ಥೆಯ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಘಟಕ ಈ ಒಂದು ಆರೋಪವನ್ನು ತಳ್ಳಿ ಹಾಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು, ನಮ್ಮ ಶಿಬಿರಗಳಿಂದ ಯಾವುದೇ ಲೂಟಿ ಆಗಿಲ್ಲ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಚಿತ್ರಗಳು ತಪ್ಪು ಅಭಿಪ್ರಾಯ ಸೃಷ್ಟಿಸುತ್ತಿವೆ ಎಂದು ಸ್ಪಷ್ಟನೆ ನೀಡಿದೆ.

🛑URGENT CLARIFICATION FROM @UNRWA

With regards to reports on social media of looting of an UNRWA warehouse.
UNRWA would like to confirm that no looting has taken place in any of its warehouses in the Gaza Strip. [1/2]
— UNRWA (@UNRWA) October 16, 2023

ಈ ಒಂದು ಬೆಳವಣಿಗೆ ಇಟ್ಟುಕೊಂಡು ಇಸ್ರೇಲ್ ಸೇನೆ ಇನ್ನಷ್ಟು ಬಿಗಿಯಾಗಿ ತನ್ನ ಕಾರ್ಯಾಚರಣೆ ಮುಂದುವರೆಸಬಹುದು ಎನ್ನಬಹುದು. ಸ್ವತಃ ಪ್ಯಾಲೆಸ್ತೇನಿಯರ ರಕ್ಷಣೆಗೆ ನಿಂತ ವಿಶ್ವಸಂಸ್ಥೆಯ ಶಿಬಿರಕ್ಕೂ ದಾಳಿ ಮಾಡಿದ ಹಮಾಸ್ ಉಗ್ರರನ್ನು ಬಿಡುವ ಮಾತೇ ಇಲ್ಲ ಎಂದು ಇಸ್ರೇಲ್ ನಿರ್ಧಾರ ತಗೆದುಕೊಂಡರೆ, ಪರಿಸ್ಥಿತಿ ಇನ್ನಷ್ಟು ಭೀಕರತೆ ಪಡೆದುಕೊಳ್ಳಲಿದೆ.

ಇನ್ನೊಂದು ಕಡೆ ಪ್ಯಾಲೆಸ್ತೇನ್ ಪರವಾಗಿ ರಷ್ಯಾ ತನ್ನ ಬೆಂಬಲ ಸೂಚಿಸಿದ್ದು, ಇಸ್ರೇಲ್ ಪರವಾಗಿ ಅಮೇರಿಕಾ ನಿಂತಿದೆ. ಈ ನಡುವೆ ಯುದ್ಧ ನಿಲ್ಲಿಸಲು ಯಾರೂ ಸಹ ಮುಂದೆ ಬರುತ್ತಿಲ್ಲ ಎಂಬ ಕೂಗು ಸಹ ಶಾಂತಿಪ್ರಿಯರದ್ದಾಗಿವೆ. ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಕದನ ಕೇವಲ ಅವೆರಡು ದೇಶಗಳ ನಡುವಿನ ಕದನವಾಗಿರದೇ ವಿಶ್ವ ಮಟ್ಟದಲ್ಲಿ ಪ್ರತಿಷ್ಠೆ ಪ್ರದರ್ಶನದ ಕಣವಾಗುತ್ತಿದೆ.

ಸಂಘರ್ಷದ ಮಧ್ಯೆ ಗಾಜಾದಲ್ಲಿ ಸಿಕ್ಕಿಹಾಕಿಕೊಂಡಿರುವ ತಮಿಳುನಾಡಿನ ಪ್ರಾಧ್ಯಾಪಕಿ
ಬೆಂಗಳೂರು,ಅಕ್ಟೋಬರ್.‌14: ತಿರುಚನಪಳ್ಳಿಯ ಅನ್ಬಿಲ್ ಧರ್ಮಲಿಂಗಂ ಕೃಷಿ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕರೊಬ್ಬರು ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಇಸ್ರೇಲ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.

ನೆಗೆವ್‌ನ ಬೆನ್-ಗುರಿಯನ್ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಹನಿ ನೀರಾವರಿ ಕುರಿತಾದ ಎರಡು ತಿಂಗಳ ತರಬೇತಿ ಕಾರ್ಯಕ್ರಮದಲ್ಲಿರುವ ಭಾಗವಹಿಸಿರುವ 40 ವರ್ಷ ಪ್ರಾಯದ ಎಸ್ ರಥಿಕಾ ಎಂಬ ಸಹ ಪ್ರಾಧ್ಯಾಪಕಿ ಸಂಘರ್ಷ ಭುಗಿಲೇಳುವ ಮೊದಲೇ, ಸೆಪ್ಟೆಂಬರ್ 23, 2023 ರಂದು ಇಸ್ರೇಲ್‌ಗೆ ತೆರಳಿದ್ದರು.

ತಮಿಳುನಾಡು ಕೃಷಿ ವಿಶ್ವವಿದ್ಯಾನಿಲಯದ (ಟಿಎನ್‌ಎಯು) ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಸಹ ಪ್ರಾಧ್ಯಾಪಕ, ರಥಿಕಾ ಅವರ ಪತಿ ಟಿ ರಮೇಶ್, “ನನ್ನ ಪತ್ನಿ ಗಾಜಾಕ್ಕೆ ಸಮೀಪವಿರುವ ನೆಗೆವ್‌ನಲ್ಲಿ ನಿದ್ದೆಯಿಲ್ಲದೆ ದಿನ ಕಳೆಯುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ರಮೇಶ್‌ರವರು ಹೇಳುವಂತೆ ರಥಿಕಾ ಭೂಗತ ಬಂಕರ್‌ನಲ್ಲಿ ಅಡಗಿಕೊಂಡಿದ್ದು, ಸಂಘರ್ಷ ಕೊನೆಗೊಂಡ ನಂತರ ರಕ್ಷಣೆಗಾಗಿ ಕಾಯುತ್ತಿದ್ದಾರೆ. “ಸೈರನ್‌ಗಳು ಕೂಗಿದಾಗಲೆಲ್ಲಾ, ಅವರು ನೆಲಮಾಳಿಗೆಗೆ ಧಾವಿಸಿ ಬಂಕರ್‌ನಲ್ಲಿ ಆಶ್ರಯ ಪಡೆಯಬೇಕು, ಅಲ್ಲಿ ಅವರು ಸುಮಾರು 30 ನಿಮಿಷದಿಂದ ಒಂದು ಗಂಟೆಯವರೆಗೆ ಅಥವಾ ಕೆಲವೊಮ್ಮೆ ಸೈರನ್‌ ನಿಲ್ಲುವವರೆಗೆ ಇರಬೇಕಾಗಿದೆ” ಎಂದು ಅವರು ಹೇಳಿದರು.

ಕಳೆದ ನಾಲ್ಕು ದಿನಗಳಿಂದ ವಾಟ್ಸಾಪ್ ಮೂಲಕ ಪತ್ನಿಯನ್ನು ಸಂಪರ್ಕಿಸಿ, ಅವರ ಸುರಕ್ಷತೆಯ ಬಗ್ಗೆ ವಿಚಾರಿಸುತ್ತಿರುವ ರಮೇಶ್ ಸದ್ಯ ರಥಿಕಾ ಸುರಕ್ಷಿತವಾಗಿದ್ದು, ಮನೆಗೆ ಮರಳುವ ಆತಂಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯು ಈಗಾಗಲೇ ರಥಿಕಾರನ್ನು ಸಂಪರ್ಕಿಸಿದೆ.

ಪ್ಯಾಲೆಸ್ಟೈನ್ -ಇಸ್ರೇಲ್: ಧಾರ್ಮಿಕವಲ್ಲ, ವಸಾಹತುಶಾಹಿಯ ವಿರುದ್ಧದ ಸಂಘರ್ಷ
ಪ್ಯಾಲೆಸ್ಟೈನ್ ‌ಇಸ್ರೇಲ್ ಘರ್ಷಣೆಯನ್ನು ಧರ್ಮಗಳ ಆಧಾರದ‌ ಮೇಲೆ ಚರ್ಚಿಸೋದು ಸಮಸ್ಯಾತ್ಮಕವಾದುದು, ಇದನ್ನು ವಸಾಹತುಶಾಹಿ ನೆಲೆಯಲ್ಲಿಯೇ‌ ನೋಡಬೇಕು.

ಮೊದಲನೆಯದಾಗಿ ಇಸ್ರೇಲ್ ಸರ್ವ ಯಹೂದಿಗಳ ಪ್ರತಿನಿಧಿಯಲ್ಲ, ಯುರೋಪಿನ ಜಿಯೋನಿಸ್ಟ್ ಕೇಂದ್ರಿತ ಯಹೂದಿ ಗುಂಪುಗಳು ಬ್ರಿಟಿಷ್- ಫ್ರೆಂಚ್ ನೆರವಿನಿಂದ ಪ್ಯಾಲೆಸ್ಟೈನನ್ನು ಆಕ್ರಮಿಸಿದವು, ತದನಂತರ ಅದಕ್ಕೆ ಪೌರಾಣಿಕ‌ ಕಥೆಯೊಂದನ್ನು ಕಟ್ಟಿ ಇಸ್ರೇಲ್ ದೇಶವನ್ನು ‌ಸ್ಥಾಪಿಸಲಾಯಿತು.

ಅಲ್ಲದೆ ಪ್ಯಾಲೆಸ್ಟೈನ್ ರಾಷ್ಟ್ರೀಯತೆ ಅಥವಾ‌ ಅಸ್ಮಿತೆ ಒಂದು ಧರ್ಮದ ನೆಲೆಯಲ್ಲಿ ನಿಂತಿಲ್ಲ, ಅದು ಬಹುಸಂಸ್ಕೃತಿಯ ಅಸ್ಮಿತೆ. ಅದು ಅರಬ್ ಮುಸ್ಲಿಮರು, ಅರಬ್ ಕ್ರಿಶ್ಚಿಯನ್‌ರು, ಅರಬ್ ಯಹೂದಿಗಳನ್ನೊಳಗೊಂಡ ಒಂದು ರಾಷ್ಟ್ರೀಯ ‌ಅಸ್ಮಿತೆ. ಅಲ್ಪಸಂಖ್ಯಾತರಾಗಿದ್ದ ಈ ಅರಬ್ ಯಹೂದಿಗಳು ಕೂಡ ಇಸ್ರೇಲ್ ಸ್ಥಾಪನೆ ವಿರುದ್ಧ ಪ್ರತಿಭಟಿಸಿದರು, ಆದರೆ ಆ ಇತಿಹಾಸವನ್ನು ಮುಚ್ಚಿ ಹಾಕಲಾಯಿತು, ಹಾಗಾಗಿ ‌ನೈಜ ಇತಿಹಾಸವನ್ನು ಒಮ್ಮೆ‌ ಗಮನಿಸೋಣ.

ಪ್ಯಾಲೆಸ್ಟೈನ್ ಸೇರಿದಂತೆ ಬಹುತೇಕ ಅರಬ್ ಪ್ರಾಂತ್ಯಗಳು ಮೊದಲನೆ ಮಹಾಯುದ್ಧದ ‌ಪೂರ್ವ ಅಟಮನ್ ಟರ್ಕರ ಆಡಳಿತಕ್ಕೆ ಒಳಪಟ್ಟಿದ್ದವು, 19ನೇ‌ ಶತಮಾನದ‌ ಅಂತ್ಯದಲ್ಲಿ ಅಟಮನ್‌ ಟರ್ಕರ ವಿರುದ್ಧ ಅರಬ್ ರ ಹೋರಾಟಗಳು ಪ್ರಾರಂಭವಾದವು, ಮೊದ ಮೊದಲು ಆರಂಭದಲ್ಲಿ ಈ ಹೋರಾಟದ ನಾಯಕತ್ವವನ್ನು ಸಿರಿಯಾದ ಅರಬ್ ಕ್ರಿಶ್ಚಿಯನ್ನರು ವಹಿಸಿದ್ದರು, ತದನಂತರ ಹಾಶಮೇಟ್ ಸಂಸ್ಥಾನದ ಶರೀಫ್ ಆಫ್ ಮೆಕ್ಕಾ ಕರೆಯಲ್ಪಡುತ್ತಿದ್ದ ಹುಸೆನ್‌‌‌ ಬಿನ್ ಅಲಿ ಅರಬ್‌ ನಾಯಕತ್ವ ವಹಿಸಿದ್ದರು, ಇದರ ಭಾಗವಾಗಿ 1916ರಲ್ಲಿ ಅಟಮನ್ ಟರ್ಕರ ವಿರುದ್ಧ “ಅರಬ್ ದಂಗೆ” ಎಂದು ಕರೆಸಿಕೊಳ್ಳುವ ‌ಅರಬ್‌ರ ಹೋರಾಟ‌ ಮೆಕ್ಕಾದಲ್ಲಿ ಆರಂಭವಾಯಿತು.

1914ರಲ್ಲಿ ಮೊದಲನೆ ಮಹಾಯುದ್ಧ ಆರಂಭವಾಯಿತು, ಆ‌ ಸಂಧರ್ಭದಲ್ಲಿ ಫ್ರಾನ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ (ಬ್ರಿಟಿಷ್) ಒಂದು ತಂಡವಾಗಿದ್ದರೆ ಮತ್ತೊಂದು ಕಡೆ ಅವರು ಎದುರಾಳಿಯಾಗಿ ಅಟಮನ್ ಟರ್ಕಿ, ಜರ್ಮನಿ, ಆಸ್ಟ್ರೋ ಹಂಗೇರಿಯನ್ ಒಕ್ಕೂಟ ಯುದ್ಧದಲ್ಲಿ ಭಾಗವಹಿಸಿದ್ದವು.

ಅಟಮನ್ ಟರ್ಕಿಯ ವಿರುದ್ದ ಸ್ವಾತಂತ್ರ್ಯಕ್ಕಾಗಿ ದಂಗೆಯಂದಿದ್ದ ಅರಬ್‌ರ ಬೆಂಬಲವನ್ನು ಬ್ರಿಟಿಷ್ ‌ಮತ್ತು ಫ್ರೆಂಚರು ಕೇಳಿದರು. ಬೆಂಬಲಿಸಿದರೆ ಅವರ ಎಲ್ಲಾ ಅರಬ್ ಪ್ರಾಂತ್ಯಗಳನ್ನು ಅಟಮನ್ ಟರ್ಕ ಸಾಮ್ರಾಜ್ಯದಿಂದ ಮುಕ್ತಗೊಳಿಸಿ‌ ನೀಡುವುದಾಗಿ ಎಂದು ಘೋಷಿಸಿದರು. ಈ ಭಾಗವಾಗಿ ಅರಬ್ಬರು ಮೊದಲನೆ ಮಹಾಯುದ್ಧದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಜೊತೆ ಸೇರಿ ಕೆಚ್ಚೆದೆಯಿಂದ ಅಟಮನ್ ಟರ್ಕರ ವಿರುದ್ಧ ಹೋರಾಡಿದರು, ಮೊದಲನೆ ‌ಮಹಾಯುದ್ಧದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಒಕ್ಕೂಟವು ತಮ್ಮ ವಿಜಯ ಹತ್ತಿರವಾಗುತ್ತಿದ್ದಂತೆ ಅರಬ್ಬರಿಗೆ ದ್ರೋಹ ಬಗೆದರು.

ಆ ದ್ರೋಹದ ಭಾಗವಾಗಿ ಅರಬ್ಬರಿಗೆ ಗೊತ್ತಾಗದೆ ನಡೆಸಿದ ಸಂಚು, ಅದನ್ನು ಸೈಕ್ಸ್ -ಪೈಕೋಟ್ ಒಪ್ಪಂದ ( Sykes-Picot agreement‌ )ಎಂದು ಕರೆಯಲಾಗುತ್ತದೆ. 1916ರಲ್ಲಿ ಮಾಡಿದ ರಹಸ್ಯ ಒಪ್ಪಂದದ‌ ಪ್ರಕಾರ ಬ್ರಿಟಿಷ್‌ ಮತ್ತು ಫ್ರೆಂಚರು ತಮ್ಮಲ್ಲೆ ಅಟಮನ್ ಆಡಳಿತದಲ್ಲಿದ್ದ ಭೂಬಾಗಗಳನ್ನು ಹಂಚಿಕೊಳ್ಳಲು ನಿರ್ಧರಿಸಿದರು, ಯುದ್ಧದ ವಿಜಯದ ನಂತರ ಇರಾಕ್ ಮತ್ತು ಪ್ಯಾಲೆಸ್ಟೈನ್ ಬ್ರಿಟಿಷ್‌ರಿಗೆ, ಸಿರಿಯಾ ಮತ್ತು ಲೆಬನಾನ್ ಫ್ರೆಂಚರಿಗೆ ಎಂದು ತಮ್ಮೊಳಗೆ ನಿರ್ಣಯ ಮಾಡಿಕೊಂಡರು. 1917ರ‌ ನವೆಂಬರ್ ತನಕವೂ ಈ ಒಪ್ಪಂದದ‌ ಬಗ್ಗೆ ಅರಬ್‌ರಿಗೆ‌ ಗೊತ್ತಾಗಲಿಲ್ಲ,‌ ಅಟಮನ್ ಟರ್ಕರ ವಿರುದ್ಧ ಅವರ ಹೋರಾಟ ನಡೆದೆ ಇತ್ತು.

ಈ ರಹಸ್ಯವನ್ನು ಅರಬ್ಬರಿಗೆ ತಿಳಿಸಿದ್ದು, ಆಗತಾನೆ‌ ರಷ್ಯಾದಲ್ಲಿ ಕ್ರಾಂತಿ ಮಾಡಿ ವಿಜಯಿಯಾಗಿದ್ದ ಬೊಲ್ಷೆವಿಕರು. ಬೊಲ್ಷೆವಿಕರು ಈ‌ ಒಪ್ಪಂದದ ಮಾಹಿತಿಯನ್ನು ಅವರ ಪತ್ರಿಕೆಯಾದ “ಪ್ರಾವಡಾ” ದಲ್ಲಿ‌ ಪ್ರಕಟಿಸಿದರು. ತದನಂತರ ಇನ್ನೊಂದು ಸಂಚನ್ನು ಬ್ರಿಟಿಷರು ಮಾಡಿದರು, ಅದೇ‌ ಬಾಲ್ಫರ್ ಡಿಕ್ಲೆರೇಶನ್ (Balfour declaration) (1917), ಇದರ ‌ಪ್ರಕಾರ ‌ಪೌರಾಣಿಕ ನೆಲೆಯಲ್ಲಿ ಪ್ಯಾಲೆಸ್ಟೈನನಲ್ಲಿ “ಯಹೂದಿಗಳ ರಾಜ್ಯ ” ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಯಿತು, ಬ್ರಿಟಿಷ್ ‌ವಿದೇಶಾಂಗ ಕಾರ್ಯದರ್ಶಿ ಅರ್ಥರ್ ಬಾಲ್ಫರ್

ಬ್ರಿಟಿಷ್ ಯಹೂದಿ ಗುಂಪಿನ ನಾಯಕನಾಗಿದ್ದ ರೋಥ್ಸ್‌ಚೈಲ್ಡ್ ಬರೆಯಲಾದ ಈ ಡಿಕ್ಲೇರೇಶನ್ ಇವತ್ತಿನ ಇಸ್ರೇಲ್ ಮತ್ತು ಪ್ಯಾಲೆಸ್ಟೈನ ಘರ್ಷಣೆಯ ಮೂಲ.

ಬ್ರಿಟಿಷ್‌ರು ಇದನ್ನು ‌ಯಹೂದಿಗಳಿಗಾಗಿ ಒಂದು ದೇಶ ಇರಬೇಕೆಂದು ಕರುಣೆಯಿಂದ ಕೊಟ್ಟಿರಲಿಲ್ಲ, ಅವರು ಅದನ್ನು ಯರೋಪಿನ ವ್ಯಾಪಾರಸ್ಥ ಯುಹೂದಿ ಸಮುದಾಯವಾದ ಜಿಯೋನಿಸ್ಟರಿಗೆ ಮಾರಾಟ ಮಾಡಿದ್ದರು. ಹಾಗಾಗಿ ಜಿಯೊನಿಸ್ಟ್ ಯಹೂದಿಗಳು ಮತ್ತು ಯರೋಪಿನ ವಸಾಹತುಶಾಹಿ‌ ನಡುವಿನ ಸಂಬಂಧವನ್ನು ನಾವು ಗುರುತಿಸಬೇಕಾಗುತ್ತೆ. 19ನೇ‌ ಶತಮಾನದಿಂದಲೂ ಈ ವ್ಯಾಪಾರಸ್ಥ ಯಹೂದಿ ಸಮುದಾಯಗಳು ಬ್ರಿಟಿಷ್ ಮತ್ತು ಫ್ರೆಂಚರ ವಸಾಹತುಶಾಹಿ ಯೋಜನೆಗಳಿಗೆ ಅಪಾರ ಹಣ ಸುರಿದಿದ್ದರು. ಇವರು ಮೊದಲನೆ‌ ಮಹಾಯುದ್ಧದ ಪೂರ್ವ 1890ರ ಆಸುಪಾಸು ಯಹೂದಿಗಳಿಗೆ ಒಂದು ದೇಶ ಬೇಕೆಂದು ಬ್ರಿಟಿಷ್‌ರಿಗೆ ಬೇಡಿಕೆಯಿಟ್ಟಿದ್ದರು, ಅದರ ಭಾಗವಾಗಿ ಇವರು ಮೊದಲು ಬೇಡಿಕೆ ಇಟ್ಟ ದೇಶ ಪ್ಯಾಲೆಸ್ಟೈನ್ ಅಲ್ಲ, ಅದು ಸೈಪ್ರಸ್ (Cyprus).‌ ಮೊದಲು‌ ಈ ದೇಶವನ್ನು ‌ಕೊಂಡುಕೊಂಡು ತದನಂತರ ಪ್ಯಾಲೆಸ್ಟೈನ್ ಭೂಮಿಯನ್ನು ಖರೀದಿಸಿಬೇಕೆಂಬ ಇರಾದೆ ಇವರದ್ದಾಗಿತ್ತು. ಆದರೆ‌ ಬ್ರಿಟಿಷ್‌ರು Cyprus ಕೊಡಲು ಒಪ್ಪಲಿಲ್ಲ, ಒಂದು‌ ಅಧಿವೇಶನದಲ್ಲಿ ‌ಇಸ್ರೇಲ್‌ ದೇಶದ ಮೂಲ ಪರಿಕಲ್ಪನೆಯನ್ನು ನೀಡಿದ್ದ ಥಿಯೋಡರ್ ಹರ್ಜಲ್ ಉಗಾಂಡಾದಲ್ಲಿ ಇಸ್ರೇಲ್ ದೇಶವನ್ನು ‌ಸ್ಥಾಪಿಸುವ ಪ್ರಸ್ತಾಪ ಕೂಡ ಮಾಡಿದ್ದ, ಅದನ್ನು ಬಹುಸಂಖ್ಯಾತ ಜಿಯೋನಿಸ್ಟರು ವಿರೋಧಿಸಿದರು. 20ನೇ‌ ಶತಮಾನದ ಆರಂಭದಲ್ಲಿ ಜಿಯೋನಿಸ್ಟರು ಪ್ಯಾಲೆಸ್ಟೈನ್‌ನಲ್ಲಿ‌ ಇಸ್ರೇಲ್ ಸ್ಥಾಪಿಸಬೇಕೆಂದು‌ ನಿರ್ಧಾರ‌ ಮಾಡಿದರು. ನಂತರ ಬಾಲ್ಫರ್ ಡಿಕ್ಲೆರೇಶನ್ ಇದನ್ನು ಅನುಮೋದಿಸಿತು.‌ ಫ್ರೆಂಚರು ಮತ್ತು ಬ್ರಿಟಿಷರ ಈ ಎರಡು ಮಹಾದ್ರೊಹಗಳ ವಿರುದ್ಧ‌ ಅರಬ್ಬರು ದಂಗೆಯೆದ್ದರು. ಏಕೆಂದರೆ ಅರಬ್ಬರ ನೆಲೆಗಳು ಫ್ರೆಂಚರು ಮತ್ತು ಬ್ರಿಟಿಷರ ವಸಾಹತುಶಾಹಿ ನೆಲೆಗಳಾಗಿ ಬದಲಾಗಿದ್ದವು, ಅದಲ್ಲದೇ ಅವರದೇ ಭೂಮಿಯಾದ ಪ್ಯಾಲೆಸ್ಟೈನ್‌ನನ್ನು ಜಿಯೋನಿಸ್ಟರಿಗೆ ಮಾರಾಟ ಮಾಡಲಾಗಿತ್ತು. ಅರಬ್ಬರ ನಾಯಕತ್ವ ವಹಿಸಿದ್ದ‌‌ ಹುಸೆನ್‌ ಬಿನ್ ಅಲಿ ಈ ಒಪ್ಪಂದಗಳ ವಿರುದ್ಧ ಹಲವಾರು ಬಾರಿ ಬ್ರಿಟಿಷ್‌ ಮತ್ತು ಫ್ರೆಂಚರ ಜೊತೆ ಮಾತುಕತೆ ನಡೆಸಿದ, ಆದರೆ ಯಶಸ್ವಿಯಾಗಲಿಲ್ಲ. ಒಂದು ಮಾತುಕತೆಯಲ್ಲಿ ಹುಸೆನ್‌ ಬಿನ್‌ ಅಲಿ ಯುರೋಪಿನಲ್ಲಿ ಯಹೂದಿಗಳಿಗೆ ಸಮಸ್ಯೆ ಆಗಿದ್ದಲ್ಲಿ ‌ಅವರು ಅರಬ್ ನಾಡಿನಲ್ಲಿ ಬಂದು ನೆಲೆಸಲಿ ಅವರು ನಮ್ಮ ಸಹೋದರರು ‌ಇದ್ದಂತೆ, ಆದರೆ ಇಸ್ರೇಲ್ ದೇಶವನ್ನು ಸ್ಥಾಪಿಸಲು ನಾವು ಒಪ್ಪುವುದಿಲ್ಲವೆಂದು ಕೂಡ ಹೇಳಿದ್ದ.

ಆದರೆ ಬ್ರಿಟಿಷ್ ಮತ್ತು ಫ್ರೆಂಚರು ಇಸ್ರೇಲ್ ದೇಶ ಸ್ಥಾಪಿಸಲು ಯರೋಪಿನ ಜಿಯೋನಿಸ್ಟರಿಗೆ ಬೆನ್ನೆಲುಬಾಗಿ ನಿಂತರು, ಬಲವಂತವಾಗಿ ಪ್ಯಾಲೆಸ್ಟೈನ್ ಜನರನ್ನು ಒಕ್ಕಲೆಬ್ಬಿಸಲಾಯಿತು, ಅವರ ಭೂಮಿಯನ್ನು ‌ಕಸಿಯಲಾಯಿತು.‌ ಕೌರ್ಯ ಮತ್ತು ಹಿಂಸೆಯಿಂದ ಪ್ಯಾಲೆಸ್ಟೈನ್ ರ ಪ್ರತಿಭಟನೆಯಯನ್ನು ಹತ್ತಿಕ್ಕಲಾಯಿತು. ಪ್ರತಿಭಟಿಸಿದವರಲ್ಲಿ ಪ್ಯಾಲೆಸ್ಟೈನನ್ ಅರಬ್ ಮುಸ್ಲಿಮರು, ಅರಬ್ ಕ್ರಿಶ್ಚಿಯನರು, ಅರಬ್ ಯಹೂದಿಗಳು ಇದ್ದರು. ಇಸ್ರೇಲ್ ‌ವಿರುದ್ಧ ಪ್ರತಿಭಟಿಸಿದ ಅರಬ್ ಯಹೂದಿಗಳ ಪಾತ್ರವನ್ನು ಯೋಜನಾತ್ಮಕವಾಗಿ ಪಾಶ್ಚಿಮಾತ್ಯ ಇತಿಹಾಸಕಾರರು ಮುಚ್ವಿಹಾಕಿದರು. 1948ರಲ್ಲಿ ಇಸ್ರೇಲ್ ಸ್ಥಾಪನೆಯಾದ ನಂತರ ಯರೋಪಿನ ಬೈಬಲ್ ‌ಗಳಲ್ಲಿ ಪ್ಯಾಲೆಸ್ಟೈನ್ ಪದ ತೆಗೆದು ಇಸ್ರೇಲ್ ಎಂದು ನಾಮಕರಣ ಮಾಡಿದರು.ಇದನ್ನು ‌ಬಹಳ‌ ವ್ಯವಸ್ಥಿತವಾಗಿ ಮಾಡಲಾಯಿತು. ವಸಾಹತುಶಾಹಿ ದೇಶಗಳ ಮಾಧ್ಯಮಗಳು, ವಿಶ್ವವಿದ್ಯಾಲಯದ ಸಂಶೋಧಕರು ಇಸ್ರೇಲ್‌ ಪ್ಯಾಲೆಸ್ಟೈನ್ ಸಂಘರ್ಷವನ್ನು ಧರ್ಮಗಳ ದೃಷ್ಟಿಕೋನದಲ್ಲಿ‌‌ ಬಂಧಿಸಿದರು,‌ಪೌರಾಣಿಕ ಕತೆಗಳನ್ನು ಹಣೆದರು. ಹೀಗಾಗಿ ಪ್ಯಾಲೆಸ್ಟೈನ್ ಅರಬ್ಬರಿಗೆ‌‌ ಸೇರಿದ್ದು, ಅಲ್ಲಿ‌‌ ಸ್ಥಾಪಿತವಾದ‌ ಇಸ್ರೇಲ್ ಯುರೋಪಿನ ವಸಾಹತುಶಾಹಿಯ ಭಾಗ.

ಈ ಎಲ್ಲಾ‌ ಮಾಹಿತಿಯನ್ನು ‌ ನಾನು‌ ಈ ಕೆಳಗಿನ ಪುಸ್ತಕಗಳಿಂದ ಸಂಗ್ರಹಿಸಿದ್ದು.

1.Maxime Rodinson ಬರೆದ Israel- a Colonial-Settler state?

2. Ilan pappe ಬರೆದ The Ethnic Cleansing of Palestinians, Ten Myths about Israel ಮತ್ತು The Idea of Israel: A History of Power and Knowledge

3. Noam Chomsky ಮತ್ತು Ilan pappe ಬರೆದ ಲೇಖನಗಳ‌ ಸಂಗ್ರಹ “On Palestine”

Newleft review ನಲ್ಲಿ Edward Said ಬರೆದ‌‌‌ ಲೇಖನ “On Palestinian Identity: A Conversation with Salman Rushdie ಕೂಡ ಓದಿ.

ಲೇಖಕರು: ವಸಂತ ಕಳಲ್‌, ಸಂಶೋಧಕರರು,ಜೆಎನ್‌ಯು, ದೆಹಲಿ

ದ್ವೀಪ ರಾಷ್ಟ್ರ ತೈವಾನ್ ಸುತ್ತ ಸಮುದ್ರದಲ್ಲಿ ಚೀನಾ ಸಮರಾಭ್ಯಾಸ
ಬೀಜಿಂಗ್: ಸ್ವಯಂ ಆಡಳಿತ ಹೊಂದಿರುವ ದ್ವೀಪ ರಾಷ್ಟ್ರ ತೈವಾನ್ ಸುತ್ತಲಿನ ಸಮುದ್ರದಲ್ಲಿ ಚೀನಾ ಮಿಲಿಟರಿ ಪಡೆಗಳು ಸಮರಾಭ್ಯಾಸ ನಡೆಸಿರುವುದು ಮತ್ತೊಂದು ಯುದ್ಧದ ಮುನ್ಸೂಚನೆಯ ಹಾಗೆ ಕಾಣುತ್ತಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಚೀನಾದ ಪ್ರತಿರೋಧದ ನಡುವೆಯೂ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ದ್ವೀಪಕ್ಕೆ ಭೇಟಿ ನೀಡಿದ ನಂತರ ಚೀನಾ ಆಕ್ರಮಣಕಾರಿ ನಿಲುವು ತಳೆದಿದ್ದು, ತೈವಾನ್ ಜಲಸಂಧಿಯಲ್ಲಿ ಮಿಲಿಟರಿ ಡ್ರಿಲ್ ನಡೆಸುತ್ತಿದೆ. ತೈವಾನ್ ಗೆ ಕೇವಲ ಇಪ್ಪತ್ತು ಕಿ.ಮೀ ದೂರದಲ್ಲಿ ಕೂಡ ಈ ಡ್ರಿಲ್ ನಡೆಯುತ್ತಿದ್ದು, ಲೈವ್ ಫೈರಿಂಗ್ ಕೂಡ ಒಳಗೊಂಡಿದೆ.

ತೈವಾನ್ ಸ್ವಯಂ ಆಡಳಿತದ ದ್ವೀಪವಾಗಿದ್ದರೂ, ಅದನ್ನು ಚೀನಾದ ಅವಿಭಾಜ್ಯ ಅಂಗ ಎಂದು ಅಲ್ಲಿನ  ಆಡಳಿತಗಾರರು ಪ್ರತಿಪಾದಿಸುತ್ತ ಬಂದಿದ್ದಾರೆ. ಏತನ್ಮಧ್ಯೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ತೈವಾನ್ ಸ್ವಾಯತ್ತತೆಗೆ ಬೆಂಬಲಿಸುತ್ತಿರುವುದು ಚೀನಾ ಕಣ್ಣು ಕೆಂಪಾಗಲು ಕಾರಣವಾಗಿದೆ.

ತೈವಾನ್‌ನ ರಕ್ಷಣಾ ಸಚಿವಾಲಯವು ತಾನು ಸಮರಾಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದ್ದು, ದ್ವೀಪವು ಸಂಘರ್ಷಕ್ಕೆ ಸಿದ್ಧವಾಗಿದೆ. ಆದರೆ ತೈವಾನ್ ಯಾವುದೇ ರೀತಿಯ ಯುದ್ಧಸನ್ನಿವೇಶವನ್ನು ಬಯಸುವುದಿಲ್ಲ ಎಂದು ಹೇಳಿದೆ.