wedding – Peepal Media

ವಧು ವರರ ಹೆಚ್ ಐ ವಿ ಪರೀಕ್ಷೆಗೆ ಅಸಡ್ಡೆ ಸಲ್ಲ
ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.

ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ‌

ತೃತೀಯ ಲಿಂಗಿಗಳಲ್ಲಿ‌ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ ಹಿತಾಸಕ್ತಿ ಪೂರೈಕೆ ಕಾರ್ಯವನ್ನು ನಡೆಸಿಕೊಂಡು ಬರುತ್ತಾರೆ. ಈ ಕಾರಣಗಳಿಗಾಗಿಯೇ ಲೈಂಗಿಕ ರೋಗಗಳು ಮನುಕುಲದ ಬೆನ್ನು ಬಿಡದಂತೆ ಕಾಡುತ್ತಲೇ ಬಂದಿವೆ. ಅವುಗಳಲ್ಲಿ ಏಡ್ಸ್ ಒಂದು ಮಹಾಮಾರಿ. ಮಹಾನಗರಗಳಲ್ಲಿ ವೇಶ್ಯಾವಾಟಿಕೆಗಳು ಇರುವ ಕೆಲವು ಏರಿಯಾಗಳೇ ಇವೆ. ಅವು ಇಂದಿಗೂ ಜೀವಂತ ಇವೆ. ರಾಜಮಹಾರಾಜರ ಕಾಲದಿಂದಲೂ ಸಹ ವೇಶ್ಯಾವಾಟಿಕೆಗಳು ಇದ್ದೇ ಇವೆ. ಹಾಗೆಯೇ ಲೈಂಗಿಕ ರೋಗಗಳು, ಗುಪ್ತ ರೋಗಗಳು ಸಹ ಇದ್ದೇ ಇವೆ.

ಚಿಕ್ಕ ವಯಸ್ಸಿನಲ್ಲಿಯೇ ಈ ಮಾರಕ ಲೈಂಗಿಕ ರೋಗಕ್ಕೆ ತುತ್ತಾದ ಯುವಜನತೆ ಬಹಳ ನೋವಿನ ಜೀವನ ನಡೆಸುತ್ತಿದೆ.

ಇನ್ನು ಕರ್ನಾಟಕದ ಅಂಕಿ ಸಂಖ್ಯೆ ಗಮನಿಸಿದರೆ ಬೆಳಗಾವಿಯಲ್ಲಿ ಮೂವತ್ತೆಂಟು ಸಾವಿರ ಮಂದಿಗೆ ಹೆಚ್ ಐವಿ ಪಾಸಿಟಿವ್ ಇದೆ. ಇವರು ನೊಂದಾಯಿತ ಏಡ್ಸ್ ರೋಗಿಗಳು. ಅಲ್ಲಿಯ ಒಟ್ಟು ಜನಸಂಖ್ಯೆ ಸುಮಾರು ೨೭ ಲಕ್ಷವಿದೆ. ಇವರಲ್ಲಿಯೇ ಇಪ್ಪತ್ತು ಸಾವಿರ ವಿಧವೆಯರಿದ್ದಾರೆ. ಇವರು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸಹ ಇದ್ದು ಇವರ ಪತಿ ವಿವಾಹದ ಒಂದೆರಡು ವರ್ಷಗಳಲ್ಲಿ ಏಡ್ಸ್ ರೋಗದಿಂದಾಗೇ ತೀರಿಹೋಗಿದ್ದಾರೆ.

ಹೀಗೆ ಏಡ್ಸ್ ಹಬ್ಬಲು ಕಾರಣ ಅಸುರಕ್ಷಿತ ಲೈಂಗಿಕ ಸಂಪರ್ಕ. ಕಾಂಡೂಂ ಇಲ್ಲದೆಯೇ ಸೆಕ್ಸ್ ಮಾಡಬೇಕೆಂದು ಒತ್ತಾಯಿಸುವ ಕ್ಲೈಂಟ್ ಗಳು ಹೆಚ್ಚಿನ ಹಣದ ಆಮಿಶ ತೋರಿದ್ದರು ಎಂಬುದು ಹಲವಾರು ಏಡ್ಸ್ ರೋಗಿಗಳ ಅಳಲು.

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಂದು ವಿದ್ಯಾರ್ಥಿಗಳು ಏಡ್ಸ್ ಬಾಧಿತರಾಗುತ್ತಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಅಂತ ಏಡ್ಸ್ ರೋಗ ಪೀಡಿತರಾಗುತ್ತಿದೆ ಯುವಜನತೆ.

ಮದುವೆಗೆ ಮುಂಚೆ ವಧು ವರರ ಹೆಚ್ ಐ ವಿ ಪರೀಕ್ಷೆ ಕಡ್ಡಾಯವಾಗುವುದು ಯಾವಾಗಲೋ ಗೊತ್ತಿಲ್ಲ. ಆದರೆ ಹಿರಿಯರು ಮಾಡಿದ ಮದುವೆ ನಂಬಿ ನೂರಾರು ಯುವತಿಯರು ಏಡ್ಸ್ ಗೆ ಬಲಿಯಾಗಿದ್ದುಂಟು. ಇತ್ತ ಪತಿಯೂ ಇಲ್ಲ, ಜೊತೆಗೆ ಏಡ್ಸ್ ರೋಗವೂ ಹಬ್ಬಿ ದುರ್ಬಲರಾಗುವ ನವವಿವಾಹಿತೆಯರ ಸಂಖ್ಯೆ ಸಾವಿರಾರಿದೆ.

ಸಂಯಮ ಯುವಜನತೆಯ ಹಾಡಾಗಬೇಕು. ಆಗಲೇ ಅವರು ಆದರ್ಶಯುತ ಜೀವನ ನಡೆಸಲು ಅವಕಾಶ ಒದಗುತ್ತದೆ.

ಸಂಯಮದ‌ ಬದುಕಿಗಾಗಿ ನಮಗೆ ಆದರ್ಶಪ್ರಾಯವಾದ ಸ್ವಾಮಿ ವಿವೇಕಾನಂದರು ಕಸಲ್ಲ

ದೇಶ ಮೀರಿ ನಿಲ್ಲುವ ಸಾಧಕ. ಯುವ ಜನತೆ ಇವರ ಬದುಕನ್ನು ಹತ್ತಿರದಿಂದ ನೋಡಿ, ಗ್ರಹಿಸಿ ಓದಬೇಕು. ಆಗಲೇ ವೈಯಕ್ತಿಕ ಜೀವನದಲ್ಲಿ ಸಹ ಬದಲಾವಣೆ ಸಾಧ್ಯವಿದೆ.

ಮದುವೆಗೆ ಮುನ್ನ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದೆ ಸಂಯಮದಿಂದ ವರ್ತಿಸಿ ತಮ್ಮ ಯೌವನ ಮತ್ತು ಬದುಕನ್ನು ಶಕ್ತಿಯುತವಾಗಿ ಕಟ್ಟಿಕೊಳ್ಳಬೇಕಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ.

ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.

ಏಡ್ಸ್ ಬಾಧಿತರಿಗೆ ಪ್ರೀತಿ‌ಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಅವರಿಗೂ ಬದುಕುವ ಅವಕಾಶ ಕಲ್ಪಿಸಿ ಕೊಡಬೇಕು. ಸರಿಯಾದ ಚಿಕಿತ್ಸೆ ನೀಡುವ ಮೂಲಕ ಆತ್ಮವಿಶ್ವಾಸ ಮೂಡಿಸಿ ಬದುಕಿನೆಡೆಗೆ ಸೆಳೆಯಬೇಕು.

ಏಡ್ಸ್ ಬಾಧಿತ ಇಬ್ಬರು ದಂಪತಿಗಳು ಧೈರ್ಯದಿಂದ ಸಾವನ್ನು ಎದುರಿಸಿ ಮೂವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ್ದಾರೆ.‌‌ ಇವರನ್ನು ಕಂಡಾಗ ಸಮಸ್ಯೆ ಇರದ ಅದೆಷ್ಟೋ ಗಂಡ ಹೆಂಡಿರು ಅನವಶ್ಯಕ ಜೀವನ ನರಕ‌ ಮಾಡಿಕೊಂಡಿರುವುದು ನೆನಪಾಗುತ್ತದೆ. ಪರಸ್ಪರ ಸಂಗಾತಿ ಪ್ರೀತಿ, ಸಮಯಕ್ಕೆ ಸರಿಯಾದ ಔಷಧಿ ಸೇವನೆ, ಆರೋಗ್ಯಕರ ಅಭ್ಯಾಸಗಳು ಈ‌ ದಂಪತಿಯನ್ನು ಸಾವಿನ ದವಡೆಯಿಂದ ಪಾರಾಗಿಸಿವೆ ಎನ್ನಬಹುದು.

ಏಡ್ಸ್ ಬಾರದಂತೆ ತಡೆಯಬೇಕಾದ್ದು ಮೊದಲ ಕಾರ್ಯ, ಹೀಗಾಗಿ ವಿವಾಹವಾಗುವವರ ಏಡ್ಸ್ ನೆಗೆಟಿವ್ ವರದಿ‌ ಪಡೆಯುವುದು ಅತೀ ಅವಶ್ಯಕ. ಮುಂದೆ ರೋಗ ಇದ್ದವರು ಸರಿಯಾದ ಚಿಕಿತ್ಸೆ ಪಡೆದು ಆತ್ಮವಿಶ್ವಾಸದಿಂದ ದಿಟ್ಟ ಜೀವನ ನಡೆಸಬೇಕು.

ಲೇಖಕರು: ನಳಿನಾ ಚಿಕ್ಕಮಗಳೂರು

“ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು…”
ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು.

“ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…” ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. “ಇವ್ರ್ ಕರ್ಮ ಎಂತ ಹಾರು ಫ್ಯಾನ್ ಮಾಡುಸ್ತಾರೆ..” ಅಂತ ಮನಸಲ್ಲಿ ಅಂದ್ಕೋತ ಮತಾಡ್ತ ಇದ್ದ ಹಾಗೆ ಗೊತ್ತಾಯ್ತು. ಅದು ಹಾರು ಫ್ಯಾನ್ ಅಲ್ಲ ಡ್ರೋನ್ ಎಂದು.

ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು, ಮಗ, ಮಗಳ ಮದ್ವೆ ಮಾಡ್ಬೇಕು, ಮನೆ ಕಟ್ಬೇಕು, ಅನಾರೋಗ್ಯ ಪೀಡಿತ ವಯಸ್ಸಾದವರ ಆಸ್ಪತ್ರೆಗೆ ಸೇರಿಸಬೇಕು ಏನೆಲ್ಲ ಮಾಡ್ಬೇಕು ಅಂದ್ರು ಮಲೆನಾಡಿಗರಿಗೆ ಬೆನ್ನೆಲುಬಾಗಿ ಆರ್ಥಿಕ ಧೈರ್ಯ ಕೊಟ್ಟಿದ್ದು ಅಡಿಕೆ. ಯಾವ ಮಟ್ಟಕ್ಕೆಂದರೆ ಮಲೆನಾಡಿನ ಮೂಲ ಪ್ರಭೇದವೇ ಅಲ್ಲದ ಅಡಿಕೆ ಬೆಳೆ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಮಾತು ಗದ್ದೆ, ತೋಟ, ಹಡ್ಡೆ, ಮದ್ವೆ ಮನೆ, ಸಾವಿನ ಮನೆ ಎಲ್ಲ ಕಡೆ ಕೇಳ್ತಿದೆ.

ಇದು ಇವತ್ತಿನ ಮಲೆನಾಡಿನ ಸ್ಥಿತಿಯಲ್ಲಿ ಸತ್ಯವೂ ಹೌದು. ಅಡಿಕೆ ಇದ್ದರೆ ಬದುಕು ಎನ್ನುವಷ್ಟು ಅವಲಂಬನೆಯೇ ಬಹುಪಾಲು. ಈಗ ಕಾಡುತ್ತಿರುವ ಅಭದ್ರತೆ ಒಂದೆಡೆ ಆದರೆ ಅಡಿಕೆ ಮಲೆನಾಡಿನ ಸಂಸ್ಕೃತಿ, ಜನಜೀವನವನ್ನೇ ಮತ್ತೆಂದು ಸರಿಪಡಿಸಲಾಗದಷ್ಟು ಅಂದಗೆಡಿಸಿ ಇಟ್ಟಿರುವುದು ಜೀರ್ಣಿಸಿಕೊಳ್ಳಲಾಗದ್ದು. ಹಿರಿಯರು ಎರಡು ಗುಡ್ಡಗಳ ನಡುವಿನ ಸರಕಲು ಜಾಗದಲ್ಲಿ ಸಾಂಪ್ರದಾಯಿಕವಾಗಿ, ಸಾವಯವವಾಗಿ ಬೆಳೆಯುತ್ತಿದ್ದ ಬೆಳೆ ಕಳೆದೆರಡು ದಶಕಗಳಿಂದ ಭತ್ತದ ಗದ್ದೆಗಳ ಜೊತೆಜೊತೆಗೆ ಮನೆ ಬಳಿಯ ಗುಡ್ಡಗಾಡುಗಳನ್ನೆಲ್ಲ ಆವರಿಸಿ ಕೇಕೆ ಹಾಕುತ್ತಿತ್ತು. ಮದುವೆ ಮನೆ ಸಾವಿನ ಮನೆ ತೊಟ್ಟಿಲು ಶಾಸ್ತ್ರ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮಾತೆತ್ತಿದರೆ “ನಿಮ್ಗೆ ಎಷ್ಟ್ ಕುಂಟಾಲ್ ಅಡಿಕೆ ಆಗ್ತದೆ…” ಪರಿಚಯದ ನಂತರದ ಮಾತೇ ಇದಾಗಿತ್ತು. ಗದ್ದೆ ಮಾಡ್ತೇವೆ ಎಂದರೆ ಸಾಕು “ಇನ್ನೂ ಗದ್ದೆ ಇಟ್ಕೊಂಡಿರ? ನಮ್ಗ್ ಆ ರಗಳೆ ಇಲ್ಲ. ಪೂರ್ತಿ ತ್ವಾಟ ಹಾಕಿವಿ” ಹೊಟ್ಟೆಗೆ ಅನ್ನ ಬೆಳೆದು ಕೊಳ್ಳುವುದೇ ರಗಳೆ ಎನ್ನುವುದರ ಮಟ್ಟಕ್ಕೆ ಮಾತನಾಡಿಕೊಳ್ಳುವವರಿಗೇನು ಕಡಿಮೆ ಇರಲಿಲ್ಲ.

ಮಲೆನಾಡಿನಲ್ಲಿ ಬೇರೆ ಯಾವ ಬೆಳೆಯು ಕೊಡಲಾಗದ ಲಾಭದ ಹಿಂದೆ ಬಿದ್ದವರು ಇಲ್ಲಿಯ ಪ್ರಕೃತಿಗೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ, ಅದ್ದೂರಿ ಮದುವೆ, ಇನ್ನೂ ಮುಂದೆ ಹೋಗಿ ಹುಟ್ಟಿದ ಹಬ್ಬದ ಸಂಭ್ರಮ ಇನ್ನು ಏನೇನೋ ಲಕ್ಷ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡುವಷ್ಟು ಗಟ್ಟಿಗರಾಗಿದ್ದರು. ಗಟ್ಟಿಗರಾಗಿದ್ದರು ಎನ್ನುವುದಕ್ಕಿಂತ ತೋರುಗಾಣಿಕೆಯ ಬದುಕು. ಈಗೀಗ ಮಲೆನಾಡಿನಲ್ಲಿ ನಿರ್ಮಾಣವಾದ ಯಾವುದೇ ಸ್ಲ್ಯಾಬ್ ಮನೆಗಳ ಒಳಹೊಕ್ಕರೂ ಸರ್ವೇ ಸಾಮಾನ್ಯವಾಗಿ ಗುರುತಿಸಬಹುದಾದ ಒಂದು ಅಂಶವೆಂದರೆ ಬಂದವರಿಗೆ ತೋರಿಸಲೆಂದೇ ಮಾಡಿಟ್ಟ ಲಕ್ಷದ ಖರ್ಚು ಮಾಡಿದ ಅಡುಗೆ ಮನೆ. ಅಲ್ಲಿ ಅಡುಗೆಯನ್ನು ಮಾಡದೆ ಕೇವಲ ವಾಸ್ತುವಿನ ಹೆಸರು ಹೇಳಿಕೊಂಡು ಬಂದವರಿಗೆ ಕರೆಕರೆದು ತೋರಿಸುವ ಗತ್ತಿಗಷ್ಟೇ ಆಗಿತ್ತದು. ದಿನ ನಿತ್ಯದ ಅಡುಗೆ ಕೆಲಸಕ್ಕೆ ಅಲ್ಲೆಲ್ಲೋ ಮೂಲೆಯಲ್ಲಿ ಮತ್ತೊಂದು ಅಡುಗೆ ಮನೆ. ಕೆಲವೇ ವರ್ಷಗಳಲ್ಲಿ ಮಳೆ ತಡೆದುಕೊಳ್ಳಲಾಗದೆ ಮಳೆ ನೀರು ತೊಟ್ಟಿಕ್ಕುವ ಸ್ಲ್ಯಾಬ್ ಮನೆಗಳ ಮೇಲೆ ಮತ್ತೆ ಕಟ್ಟಿ ಹೆಂಚು, ಶೀಟ್ ಹಾಕಿಸಿ ತಮ್ಮ ತೋರುಗಾಣಿಕೆ ಬದುಕು ಹೊರಕಾಣದಂತೆ ತೇಪೆ ಹಚ್ಚುವ ಕಾರ್ಯ.

ಇಲ್ಲಿಯ ಭೌಗೋಳಿಕ ಲಕ್ಷಣಗಳಿಗೆ ಹೊಂದಿಕೆಯಾಗದಂತಹ ಮನೆ ಕಟ್ಟಡಗಳ ನಿರ್ಮಾಣ ಒಂದೆಡೆಯಾದರೆ, ಮದುವೆ ಕಾರ್ಯಕ್ರಮಗಳು ಇಲ್ಲಿನ ಸಂಸ್ಕೃತಿ ಸೊಗಡನ್ನ ಬುಡಮೇಲು ಮಾಡಲು ಮುಂದಾಗಿದ್ದವು. ಹಳ್ಳಿ ಹಳ್ಳಿಗಳ ಹೊಕ್ಕಿದ ಡಿಜೆಯ ಸದ್ದಿನೊಂದಿಗೆ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಮತ್ತೇರಿಸಿ ಕುಣಿಸುತ್ತಿದ್ದವು. ಕಾಲುದಾರಿಯಲ್ಲಿ ಓಡಾಡಿ ಜೀವನ ಕಟ್ಟಿಕೊಂಡ ಊರು ಅಗಲವಾದ ಡಾಂಬರು ರಸ್ತೆಗಳೇ ಬೇಕೆನ್ನುವಷ್ಟು ಹಠ ಹಿಡಿದಿತ್ತು. ಮನೆಮನೆಗೂ ಬಂದು ನಿಂತ ಕಾರು ಬೈಕುಗಳಿಂದ ವೈಭವದ ಮೆಟ್ಟಿಲು ಹತ್ತುವ ತವಕ. ಒಬ್ಬರು ಮಾಡುತ್ತಾರೆಂದು ಮತ್ತೊಬ್ಬರು ಹೇಗೂ ಅಡಿಕೆ ಆಗುತ್ತದಲ್ಲ ಎಂಬ ನಂಬಿಕೆಯಲ್ಲಿಯೇ ಅಲ್ಲಿ ಇಲ್ಲಿ ಸಾಲ ಮಾಡಿ ಸುರಿಯುತ್ತಿದ್ದರು. ಈಗ ಅಡಿಕೆಯ ನಂಬಿಕೆಗೆ ಹೊಡೆತ ಬೀಳುವಂತಾಗಿದೆ.

ಸಾಂಪ್ರದಾಯಿಕ ಕೃಷಿಯಲ್ಲಿ ಮುಂದುವರಿಯುತ್ತಿರುವ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳು ದುರಾಸೆ ಬೀಳದೆ ಉಳಿದಿದ್ದರೂ ಸಹ ಅವರ ಬದುಕಿನ ಅವಲಂಬನೆ ಅಡಿಕೆಯೇ ಆಗಿತ್ತು. ಅಡಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ಮನೆಯಲ್ಲಿಯೇ ಇರಲಿ ಎಂಬ ಭಾವನೆ ತೆಗೆದು ಎಷ್ಟೋ ಹೆಣ್ಣು ಮಕ್ಕಳು ಡಿಗ್ರಿ ಪಡೆಯುವಂತಾಯ್ತು. ಮನೆಮಕ್ಕಳು ಓದಿ ಉದ್ಯೋಗ ಹಿಡಿಯುವಂತಾಯ್ತು. ಇವೆಲ್ಲಕ್ಕೂ ಮೂಲ ಬಲವಾಗಿದ್ದ ಅಡಿಕೆ ಯಾವ ಮಟ್ಟಕ್ಕೆ ಚರ್ಚಾ ವಸ್ತು ಆಗಿತ್ತೆಂದರೆ, ಮುಖ್ಯವಾಗಿ ಜಾತಿಯ ಆಧಾರದ ಮೇಲೆ ಮೇಲು ಕೀಳು ನಡೆಸುವುದಕ್ಕಿಂತ ಅಡಿಕೆ ಎಷ್ಟು ಕುಂಟಾಲ್ ಆಗುತ್ತದೆ ಎನ್ನುವುದರ ಮೇಲೆ ಜನರ ಯೋಗ್ಯತೆ ಅಳೆಯುವ ಮಟ್ಟಕ್ಕೆ ಬಂದು ನಿಂತಿತ್ತು ಬದುಕು. ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರು ಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮಲೆನಾಡಿನ ವಿಷಯದಲ್ಲಿ ಸರ್ಕಾರ ಕೊಟ್ಟಿದ್ದು ಕಡಿಮೆ ಇಲ್ಲಿಂದ ಪಡೆದದ್ದೇ ಹೆಚ್ಚು. ಹಳದಿ ಎಲೆ ರೋಗ ಬಂದು ಮೂರು ದಶಕಗಳಾದರು ಸಹ ಯಾವುದೇ ಔಷಧಿ ಕಂಡುಹಿಡಿಯಲಿಲ್ಲ. ಎಲೆಚುಕ್ಕಿ ರೋಗಕ್ಕೂ ಮದ್ದು ಕಂಡು ಹಿಡಿಯುವ ಸಂಶೋಧನೆಗಳನ್ನ ಸಮರ್ಥವಾಗಿ ನಡೆಸುತ್ತಾರೆಂಬ ಖಾತ್ರಿಯೂ ಇಲ್ಲ. ಆದರೆ ಅಡಿಕೆಯ ವಿಷಯದಲ್ಲಿ ಎಲ್ಲ ಹೆಚ್ಚು ಗಾರಿಕೆ ಮುರಿದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟ ಪ್ರಕೃತಿಯ ಶಕ್ತಿ ನಿಜದ ಆಶ್ಚರ್ಯ.

ದಿಗಂತ್ ಬಿಂಬೈಲ್‌

ಹವ್ಯಾಸಿ ಬರಹಗಾರರು