WEST INDIES VS IRELAND – Peepal Media

ಟಿ-20 ವಿಶ್ವಕಪ್‌: ವೆಸ್ಟ್ ಇಂಡೀಸ್‌ಗೆ ಹೀನಾಯ ಸೋಲು
ಹೋಬರ್ಟ್: ಶುಕ್ರವಾರ ನಡೆದ ಟಿ 20 ವಿಶ್ವಕಪ್ ನಲ್ಲಿ ಐರ್ಲೆಂಡ್ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದ್ದು, ಎರಡು ಬಾರಿ ಚಾಂಪಿಯನ್ ಎಂದೆನಿಸಿಕೊಂಡಿದ್ದ ತಂಡ ಹೀನಾಯ ಸೋಲನ್ನು ಕಂಡಿದೆ.

ಐರ್ಲೆಂಡ್ ವಿರುದ್ಧ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಂತರ ಐರ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ತಂಡದ ಆಟಗಾರರು, ಹೆಚ್ಚು ರನ್ ಗಳಿಸದೆ ಪೆವಿಲಿಯನ್ ಸೇರಿದರು. ಆದರೆ ಬ್ರಾಂಡನ್ ಕಿಂಗ್ವ ಅವರು ಉತ್ತಮ ಆಟ ಪ್ರದರ್ಶಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಮೂಲಕ ವೆಸ್ಟ್ ಇಂಡೀಸ್ 20 ಓವರ್ ಗಳಿಗೆ 5 ವಿಕೇಟ್ ಕಳೆದುಕೊಂಡು 146 ರನ್ ಗಳನ್ನು ಕಲೆ ಹಾಕಿತು.

ನಂತರ 146 ರನ್ ಬೆನ್ನಟ್ಟಿದ ಐರ್ಲೆಂಡ್ 17.3 ಓವರ್ ಗಳಲ್ಲಿ 1 ವಿಕೇಟ್ ನಷ್ಟಕ್ಕೆ 150 ರನ್ ಗಳನ್ನು ಸಿಡಿಸಿ ಪಂದ್ಯವನ್ನ ಗೆದ್ದು ಬೀಗಿದರು.

ಐರ್ಲೆಂಡ್ ನ ಪಾಲ್ ಸ್ಟ್ರಿಂಗ್ ಮತ್ತು ಲೋರ್ಕನ್ ಟುಕರ್ ಅವರ ಬಿರುಸಿನ ಆಟವನ್ನ ಕಟ್ಟಿ ಹಾಕುವಲ್ಲಿ ವೆಸ್ಟ್ ಇಂಡೀಸ್ ಬೌಲರ್ ಗಳು ಸಂಪೂರ್ಣ ವಿಫಲರಾಗಿದ್ದು ವೆಸ್ಟ್ ಇಂಡೀಸ್ ಸೋಲಿಗೆ ಬಹುದೊಡ್ಡ ಹೊಡೆತ ಎಂದು ಹೇಳಬಹುದು.

ಸ್ಕೋರ್ ಕಾರ್ಡ್

ವೆಸ್ಟ್ ಇಂಡೀಸ್ : 146/5(20)

ಕೈಲ್ ಮಯೇರ್ಸ್ : 1(5)
ಜಾನ್ಸನ್ ಚಾರ್ಲ್ಸ್ : 24(18)
ಎವಿನ್ ಲಿವಿಸ್ : 13(18)
ಬ್ರಾಂಡೊನ್ ಕಿಂಗ್ : 62(48)
ನಿಕೋಲಸ್ ಪೂರನ್ : 13(11)
ರೋಮನ್ ಪೋವಲ್ : 6(8)
ಒಡೀನ್ ಸ್ಮಿತ್ : 19(12)
ಇತರೆ : 8

ಬೌಲಿಂಗ್ :
ಜಾಶುಅ ಲಿಟ್ಲ್ : 4-0-31-0
ಮಾರ್ಕ್ ಅದೈರ್ : 4-0-26-0
ಬೆರ್ರಿ ಮೆಕ್‌ಕಾರ್ಥಿ : 4-0-33-1
ಕರ್ಟೀಸ್ ಕಂಪೆರ್ : 2-0-28-0
ಸಿಮಿ ಸಿಂಗ್ : 2-0-11-1
ಗೆರೆತ್ ಡೆಲಾನಿ : 4-0-16-3

ಐರ್ಲೆಂಡ್ : 150/1(17.3)

ಬ್ಯಾಟಿಂಗ್

ಪಾಲ್ ಸ್ಟಿರ್ಲಿಂಗ್ (ನಾಟ್ ಔಟ್) : 66(48)
ಅ್ಯಂಡ್ರೂ ಬಲ್‌ಬಿರ್ನೀ : 37(23)
ಲೋರ್ಕನ್ ಟುಕರ್ (ನಾಟ್ ಔಟ್) : 45(35)
ಇತರೆ : 2

ಬೌಲಿಂಗ್

ಒಬೆಡ್ ಮಕಾಯ್ : 3.3-0-27-0
ಅಖೀಲ್ ಹೊಸೈನ್ : 4-0-38-1
ಅಲ್ಜಾರಿ ಜೋಸೆಫ್ : 4-0-39-0
ಒಡೀನ್ ಸ್ಮಿತ್ : 2-0-23-0
ಜಾಸೊನ್ ಹೊಲ್ಡರ್ : 4-0-24-0

ಟಿ-20 ವಿಶ್ವಕಪ್‌: ಚಾಂಪಿಯನ್‌ ತಂಡವನ್ನು ಹೊರಹಾಕುತ್ತಾ ಐರ್ಲೆಂಡ್!
ಹೋಬರ್ಟ್: ಇಂದು ಟಿ -20 ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ಸೇಣಸಾಟ ನೆಡೆಸುತ್ತಿದ್ದು, ಟಿ -20 ವಿಶ್ವಕಪ್ ನಲ್ಲಿ ಎರೆಡುಬಾರಿ ಚಾಂಪಿಯನ್ ಎಂದೆನಿಸಿಕೊಂಡಿರುವ  ವೆಸ್ಟ್ ಇಂಡಿಸ್ ತಂಡವನ್ನು ಐರ್ಲೆಂಡ್ ಹೊರಹಾಕುವ ಸಾಧ್ಯತೆ ಇದೆ.

ಶುಕ್ರವಾರ ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿರುವ ವೆಸ್ಟ್‌ ಇಂಡೀಸ್‌ ತಂಡವು, 20 ಓವರ್‌ಗಳಿಗೆ 5 ವಿಕೆಟ್‌ ನೀಡಿ 146 ರನ್‌ ಕಲೆಹಾಕಿದೆ. ಮೊದಲು ಬ್ಯಾಟಿಂಗ್‌ ಮಾಡಲು ಸ್ಕ್ರೀಜ್‌ಗೆ ಇಳಿದ ಕೈಲ್ ಮೇಯರ್ಸ್ ಮತ್ತು ಜಾನ್ಸನ್ ಚಾರ್ಲ್ಸ್ ಐರ್ಲೆಂಡ್ ತಂಡದ ಬೌಲಿಂಗ್‌ ದಾಳಿಗೆ ರನ್‌ಗಳಿಸಲು ತಡಕಾಡಿದ್ದು, ಉತ್ತಮ ಪ್ರದರ್ಶನ ನೀಡದೆ ಪೆವಿಲಿಯನ್‌ ಸೇರಿದರು.

ಎವಿನ್ ಲೆವಿಸ್, ರೋವ್ಮನ್ ಪೊವೆಲ್, ನಾಯಕ ನಿಕೋಲಸ್ ಪೂರನ್ ಸೇರಿದಂತೆ ಯಾವೊಬ್ಬ ಆಟಗಾರರು ಭರವಸೆ ಆಟವನ್ನಾಡದೆ ವಿಕೆಟ್‌ ಒಪ್ಪಿಸಿ ತಂಡ ಸೇರಿದರು, ಆದರೆ ಪಂದ್ಯದಲ್ಲಿ ಬ್ರಾಂಡನ್ ಕಿಂಗ್ವ ಅವರು ಏಕಾಂಗಿಯಾಗಿ ಹೋರಾಟ ನಡೆಸಿ, ಉತ್ತಮ ಆಟವಾಡಿ ತಂಡಕ್ಕೆ ಅಜೇಯರಾಗಿ 62 ರನ್‌ ಕಲೆಹಾಕಿಕೊಡುವುದರ ಮೂಲಕ ತಂಡಕ್ಕೆ ನೆರವಾದರು.

ನಂತರ ಬ್ಯಾಟಿಂಗ್‌ಗೆ ಕಣಕ್ಕಿಳಿದಿರುವ ಐರ್ಲೆಂಡ್ ತಂಡ ರಭಸದ ಆಟವಾಡುತ್ತಿದ್ದು, ಗೆಲ್ಲುವ ಭರವಸೆ ಹೊಂದಿದೆ.

ಎರಡೂ ತಂಡಗಳಿಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿದ್ದು, ಸೋತ ತಂಡ ವಿಶ್ವಕಪ್‌ನಿಂದ ಹೊರಬೀಳಲಿದೆ. ಎರಡು ಬಾರಿ ಚಾಂಪಿಯನ್ ಎಂದೆನಿಕೊಂಡಿರುವ ವೆಸ್ಟ್ ಇಂಡೀಸ್ ತಂಡ, ಈಗಾಗಲೇ ಸ್ಕಾಟ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದ್ದು, ಈ ಪಂದ್ಯದಲ್ಲಿ ಸೋತರೆ ತಂಡಕ್ಕೆ ಇದು ಕಪ್ಪು ಚುಕ್ಕೆಯಾಗಿ ಪರಿಣಾಮ ಬೀರಲಿದೆ.