WFI – Peepal Media

ಸಂವಿಧಾನ ನಿಯಮ ಉಲ್ಲಂಘನೆ : ನೂತನ WFI ಸಮಿತಿಯನ್ನು ಅಮಾನತಿನಲ್ಲಿಟ್ಟ ಕೇಂದ್ರ ಸರ್ಕಾರ
ಭಾರತೀಯ ಕುಸ್ತಿ ಫೆಡರೇಶನ್ (WFI) ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯನ್ನು (EC) ಕೇಂದ್ರ ಕ್ರೀಡಾ ಸಚಿವಾಲಯ ಭಾನುವಾರ ಅಮಾನತುಗೊಳಿಸಿದೆ ಮತ್ತು ಫೆಡರೇಶನ್ ಕಾರ್ಯಾಚರಣೆಗಳನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(IOA) ಗೆ ನಿರ್ದೇಶನ ನೀಡಿದೆ.

ಕುಸ್ತಿಯಲ್ಲಿ ಒಲಿಂಪಿಕ್ ಪದಕ ಗೆದ್ದ ಭಾರತದ ಏಕೈಕ ಮಹಿಳೆ ಸಾಕ್ಷಿ ಮಲಿಕ್ ಅವರು WFI ಚುನಾವಣಾ ಫಲಿತಾಂಶಗಳಿಂದ ನೊಂದು ಕ್ರೀಡೆಯಿಂದ ನಿವೃತ್ತಿ ಘೋಷಿಸಿದರು ಮತ್ತು ಬಜರಂಗ್ ಪುನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕೆಲವೇ ದಿನಗಳಲ್ಲಿ ಸಚಿವಾಲಯದ ಕಡೆಯಿಂದ ಈ ನಿರ್ಧಾರವು ಹೊರಬಿದ್ದಿದೆ.

ಆಶ್ಚರ್ಯಕರ ವಿಚಾರವೆಂದರೆ, ನೂತನವಾಗಿ ಡಬ್ಲ್ಯುಎಫ್‌ಐ ಅಧ್ಯಕ್ಷರಾದ ಸಂಜಯ್ ಸಿಂಗ್ ಅವರು ತಮ್ಮ ಸಮೀಪದ ಸ್ಪರ್ಧಿ ಅನಿತಾ ಶೆರಾನ್ ಅವರನ್ನು ಸೋಲಿಸಿದ ನಂತರ ಡಬ್ಲ್ಯುಎಫ್‌ಐ ಅಧ್ಯಕ್ಷರಾದ ದಿನವಾದ ಡಿಸೆಂಬರ್ 21 ರ ಸಂಜೆಯೇ ಉತ್ತರ ಪ್ರದೇಶದ ಗೊಂಡಾ ಬಳಿ ಬ್ರಿಜ್ ಭೂಷಣ್ ಅವರ ಕ್ಷೇತ್ರವಾದ ಕೈಸರ್‌ಗಂಜ್‌ನಿಂದ ಕೇವಲ 50 ಕಿಮೀಗಿಂತ ಕಡಿಮೆ ದೂರದಲ್ಲಿ 15 ಮತ್ತು 20 ವರ್ಷದೊಳಗಿನ ರಾಷ್ಟ್ರೀಯ ಆಟಗಾರರನ್ನು ಘೋಷಿಸಿದ್ದಾರೆ.

ಇದನ್ನು “ತರಾತುರಿಯ ನಿರ್ಧಾರ” ಎಂದು ಕರೆದ ಕ್ರೀಡಾ ಸಚಿವಾಲಯವು ಈ ಆಯ್ಕೆ ನಮ್ಮ ಗಮನಕ್ಕೆ ತಾರದೇ ತಂದದ್ದಾಗಿದೆ ಮತ್ತು ಈ ಪ್ರಕಟಣೆಯು WFI ನ ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಚುನಾಯಿತರಾದ ದಿನದಂದೇ ನಡೆದ ಈ ಘೋಷಣೆ ತರಾತುರಿಯಲ್ಲಿದೆ ಹಾಗೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಅಗತ್ಯ ಸೂಚನೆ ನೀಡದೆ ಮತ್ತು ಡಬ್ಲ್ಯುಎಫ್‌ಐ ಸಂವಿಧಾನದ ನಿಬಂಧನೆಗಳನ್ನು ಅನುಸರಿಸದೆ,” ಈ ನಿರ್ಧಾರ ತಗೆದುಕೊಂಡಿದೆ ಎಂದು ತಿಳಿಸಿದೆ.

WFI ನೂತನ ಅಧ್ಯಕ್ಷನ ಆಯ್ಕೆ : ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕುಸ್ತಿಪಟು ಸಾಕ್ಷಿ ಮಲಿಕ್
ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಅವರು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (WFI) ಹೊಸ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ಖ್ಯಾತ ಕುಸ್ತಿ ತಾರೆ ಸಾಕ್ಷಿ ಮಲಿಕ್ ಅವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.

ಹಲವಾರು ಮುಂದೂಡಿಕೆಗಳ ನಂತರ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಚುನಾವಣೆಯನ್ನು ಡಿಸೆಂಬರ್ 21 ರಂದು ಗುರುವಾರ ನಡೆಸಲಾಯಿತು. ಹೊಸದಿಲ್ಲಿಯಲ್ಲಿ ಮುಂಜಾನೆ ಮತದಾನ ನಡೆದಿದ್ದು, ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ನಡೆಯಿತು.

ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರ ಪ್ಯಾನೆಲ್ 40 ಮತಗಳಿಂದ ಗೆದ್ದರೆ ಇನ್ನೊಂದು ಪ್ಯಾನೆಲ್ 7 ಮತಗಳನ್ನು ಪಡೆದುಕೊಂಡಿತು. ವಿಜೇತರ ಘೋಷಣೆಯ ನಂತರ, ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿಯಿಂದ ಹೊರಬರಲು ನಿರ್ಧರಿಸಿದರು.

“ನಾವು 40 ದಿನಗಳ ಕಾಲ ರಸ್ತೆಗಳಲ್ಲಿ ಮಲಗಿದ್ದೇವೆ. ಈ ವರ್ಷದ ಆರಂಭದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ನಮ್ಮನ್ನು ಬೆಂಬಲಿಸಲು ಬಂದ ನಮ್ಮ ದೇಶದ ಹಲವಾರು ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಬ್ರಿಜ್ ಭೂಷಣ್ ಸಿಂಗ್ ಅವರ ವ್ಯಾಪಾರ ಪಾಲುದಾರ ಮತ್ತು ನಿಕಟ ಸಹವರ್ತಿ ಡಬ್ಲ್ಯುಎಫ್‌ಐ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಕ್ಕೆ ನಾನು ಕುಸ್ತಿಯನ್ನು ತ್ಯಜಿಸುತ್ತಿದ್ದೇನೆ” ಎಂದು ಸಾಕ್ಷಿ ಮಲಿಕ್ ಗುರುವಾರ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

WFI ಚುನಾವಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟಕ್ಕೆ (Wrestling Federation of India – WFI) ಚುನಾವಣೆ ನಡೆಸುವುದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಹೈಕೋರ್ಟ್ ಹೇಗೆ ನಿಷ್ಪ್ರಯೋಜಕಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ತಮ್ಮ ಪೀಠ ವಿಫಲವಾಗಿದೆ ಎಂದು ಹೇಳಿದರು.

“ಹರಿಯಾಣ ಕುಸ್ತಿ ಅಸೋಸಿಯೇಷನ್ ಸಲ್ಲಿಸಿದ ರಿಟ್ ಅರ್ಜಿ ಬಾಕಿ ಉಳಿದಿದೆ, ಮಧ್ಯಂತರ ಆದೇಶದ ಮೂಲಕ ಹೈಕೋರ್ಟ್ ಡಬ್ಲ್ಯುಎಫ್‌ಐ ಚುನಾವಣೆಗೆ ತಡೆ ನೀಡಿದೆ. ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಎಚ್‌ಸಿ ಹೇಗೆ ನಿಷ್ಪ್ರಯೋಜಕಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ವಿಫಲರಾಗಿದ್ದೇವೆ. ಸರಿಯಾದ ಕೋರ್ಸ್ ಚುನಾವಣೆ ನಡೆಸಲು ಅವಕಾಶ ನೀಡುವುದು ಮತ್ತು ಬಾಕಿ ಉಳಿದಿರುವ ರಿಟ್ ಅರ್ಜಿಯ ಫಲಿತಾಂಶಕ್ಕೆ ಚುನಾವಣೆ ಒಳಪಡಿಸುವುದು,” ಎಂದು ಪೀಠ ತಿಳಿಸಿದೆ.