WOMANS CRICKET – Peepal Media

ಮಹಿಳಾ ಟಿ-20 ಏಷ್ಯಾ ಕಪ್ 2022| ಮುಗ್ಗರಿಸಿದ ಥಾಯ್ಲೆಂಡ್: ಭಾರತಕ್ಕೆ ಸುಲಭ ಜಯ
ಸಿಲ್ಹೆಟ್‌: ಮಹಿಳಾ ಟಿ-20 ಏಷ್ಯಾ ಕಪ್‌ ಭಾರತ ಮತ್ತು ಥಾಯ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ವನಿತೆಯರ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ, ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ, ಉತ್ತಮ ಪ್ರದರ್ಶನ ನೀಡುವುದರ ಮೂಲಕ ಅತಿಥೇಯ ಥಾಯ್ಲೆಂಡ್ ತಂಡವನ್ನು ಕೇವಲ 37 ರನ್‌ಗಳಿಗೆ ಆಲ್‌ ಔಟ್‌ ಮಾಡಿ  ಹೊಸ ದಾಖಲೆ ಸೃಷ್ಟಿಸಿದರು.

ಸುಲಭ ಗೆಲುವಿಗೆ ಕಾರಣವಾದ ಭಾರತ ವನಿತೆಯರ ಉತ್ತಮ ಬೌಲಿಂಗ್‌ ಪ್ರದರ್ಶನ

ಈ ಪಂದ್ಯದಲ್ಲಿ ದೀಪ್ತಿ ಶರ್ಮಾ 4 ಓವರ್‌ಗಳಿಗೆ 10 ರನ್‌ ನೀಡಿ 2 ವಿಕೆಟ್‌ ಪಡೆದುಕೊಂಡರೆ, ಸ್ನೇಹ ರಾಣಾ ಅವರು 4 ಓವರ್‌ಗಳಿಗೆ 9 ರನ್‌ ನೀಡಿ 3 ವಿಕೆಟ್‌ ಪಡೆದುಕೊಂಡಿದ್ದಾರೆ. ಉಳಿದಂತೆ ಮೇಘನಾ ಸಿಂಗ್ ಅವರು 2.1 ಓವರ್‌ಗೆ 6 ರನ್‌ ನೀಡಿ 1 ವಿಕೆಟ್‌, ರಾಜೇಶ್ವರಿ ಗಾಯಕವಾಡ 3 ಓವರ್‌ಗಳಿಗೆ 8 ರನ್‌ ನೀಡಿ 2 ವಿಕೆಟ್‌ ಪಡೆದುಕೊಳ್ಳುವುದರ ಮೂಲಕ ಥಾಯ್ಲೆಂಡ್ ವನಿತೆಯರನ್ನು ಹೆಚ್ಚು ರನ್‌ ಗಳಿಸದಂತೆ ಮಾಡಿ ಪೆವಿಲಿಯನ್‌ ಸೇರುವಂತೆ ಮಾಡಿದರು.

ನಂತರ 38 ರನ್‌ಗಳ ಗುರಿ ಬೆನ್ನತ್ತಿದ ಭಾರತ ವನಿತೆಯರು ನಿಧಾನಗತಿಯಲ್ಲಿ ಆಟವಾಡಿ 6 ಓವರ್ಗಳಿಗೆ 1 ವಿಕೆಟ್‌ ಕಳೆದು ಕೊಂಡು 40ರನ್‌ ಗಳಿಸುವ ಮೂಲಕ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು.

ಈ ಮೂಲಕ ಪಂದ್ಯ ಶ್ರೇಷ್ಠೆ ಪ್ರಶಸ್ತಿಯನ್ನು ಸ್ನೇಹ ರಾಣಾ( 9/3) ಅವರು ತಮ್ಮದಾಗಿಸಿಕೊಂಡಿದ್ದಾರೆ.

ಮಹಿಳಾ ಟಿ-20 ಏಷ್ಯಾ ಕಪ್‌ 2022: ಬಾಂಗ್ಲಾದೇಶದ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಸಿಲ್ಹೆಟ್: ಭಾರತ ಮತ್ತು ಬಾಂಗ್ಲದೇಶದ ವಿರುದ್ಧ ನಡೆದ ಮಹಿಳಾ ಟಿ-20 ಏಷ್ಯಾ ಕಪ್‌ ಟೂರ್ನಿಯ 15ನೇ ಪಂದ್ಯದಲ್ಲಿ ಭಾರತ ತಂಡವು 59 ರನ್‌ಗಳ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಮೊದಲು ಟಾಸ್‌ ಗೆದ್ದ ಭಾರತ ತಂಡವು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಂತರ ಮೈದಾನಕ್ಕಿಳಿದ ಭಾರತೀಯ ಓಪನರ್‌ಗಳಾದ ಶಫಾಲಿ ವರ್ಮಾ ಮತ್ತು ನಾಯಕಿ ಸ್ಮೃತಿ ಮಂಧಾನ ಬಿರುಸಿನ ಆಟವಾಡುವ ಮೂಲಕ ತಂಡಕ್ಕೆ ಹೊಸ ಹುರುಪು ತುಂಬಿದರು.

ಈ ಮೂಲಕ ಸ್ಮೃತಿ ಮಂಧಾನ 38 ಎಸೆತಗಳಲ್ಲಿ 47 ರನ್‌ ಗಳಿಸಿದರೆ, ಶಫಾಲಿ ವರ್ಮ 44 ಎಸೆತಗಳಲ್ಲಿ 55 ರನ್‌ ಗಳಿಸುವುದರ ಮೂಲಕ ಇಬ್ಬರ ಜೊತೆಯಾಟವು ತಂಡಕ್ಕೆ 96 ರನ್‌ ಕಲೆಹಾಕಿತು. ನಂತರ ಬಂದ ಜೆಮಿಮಾ ರಾಡ್ರಿಗಸ್ ಆಟವು ತಂಡಕ್ಕೆ ಬರವಸೆ ನೀಡಿತು. ಆದರೆ ರಿಚಾ ಘೋಷ್ ಮತ್ತು ಕಿರಣ್‌ ನವಿಗಿರೆ ತಂಡಕ್ಕೆ ತಮ್ಮ ಉತ್ತಮ ಕೊಡುಗೆ ನೀಡದೆ ಪೆವಿಲಿಯನ್‌ ಸೇರಿದರು.

ನಂತರ ಬಂದ ದೀಪ್ತಿ ಶರ್ಮಾ ಜೆಮಿಮಾ ಇಬ್ಬರು ಉತ್ತಮ ಆಟ ಪ್ರದರ್ಶಿಸಿ ಕೊನೆಯ 2.3 ಓವರ್‌ಗಳಲ್ಲಿ 29 ರನ್‌ ಗಳಿಸಿದ್ದರಿಂದ ತಂಡ ಒಟ್ಟು 159 ರನ್‌ ಗಳಿಸಲು ಸಾಧ್ಯವಾಯಿತು.

ತದನಂತರ 159 ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾ ವನಿತೆಯರು ನಿಧಾನಗತಿಯಲ್ಲಿ ಆಟ ಪ್ರಾರಂಭ ಮಾಡಿದರು. ಹೀಗಾಗಿ ಹೆಚ್ಚು ವಿಕೆಟ್‌ ಕಳೆದುಕೊಳ್ಳದಿದ್ದರೂ, ಗುರಿ ತಲುಪುವಲ್ಲಿ ವಿಫಲರಾದರು. ಈ ನಿಟ್ಟಿನಲ್ಲಿ ಅತಿಥೇಯ ತಂಡವು 7 ವಿಕೆಟ್‌ಗಳಿಗೆ 100 ರನ್‌ಗಳಿಸಿದ್ದರಿಂದ ಸೋಲನ್ನು ಅನುಭವಿಸಿದರು.

ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿರುವ ಭಾರತೀಯ ವನಿತೆಯರು, ಸೆಮಿಫೈನಲ್‌ ಪ್ರವೇಶ ಕೂಡಾ ಖಚಿತವಾಗಿಸಿಕೊಂಡಿದ್ದಾರೆ.

CWG: ಆಸ್ಟ್ರೇಲಿಯಾಗೆ ಚಿನ್ನ – ಭಾರತಕ್ಕೆ ಬೆಳ್ಳಿ
ಬರ್ಮಿಂಗ್‌ ಹ್ಯಾಮ್‌ : ಕಾಮನ್‌ ವೆಲ್ತ್‌ ಗೇಮ್ಸ್‌ ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದು, ಭಾರತ ತಂಡವು ಬೆಳ್ಳಿಗೆ ತೃಪ್ತಿ ಪಡೆದುಕೊಂಡಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ  ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಂತರ ಕಣಕ್ಕೆ ಇಳಿದ ಆಸ್ಟ್ರೇಲಿಯಾ ಆಟಾಗಾರ್ತಿ ಅಲಸ್ಯಾ ಹೀಲಿ  7 ರನ್‌ ಇರುವಾಗಲೇ ರೇಣುಕಾ ಸಿಂಗ್ ಬೌಲಿಂಗ್‌ ದಾಳಿಗೆ ಎಲ್ ಬಿಡಬ್ಲ್ಯು ಆಗಿ ಪೆವಿಲಿಯನ್‌ ಸೇರಿದರು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌, 72 ರನ್‌ ಕಲೆಹಾಕಿದರೆ. ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿದರು, ಅವರೊಂದಿಗೆ ಉತ್ತಮ ಪಾಟ್ನರಶಿಪ್‌ ಗಳಿಸಿದ  ಮೆಗ್‌, 36 ರನ್ ಬಾರಿಸಿದರು. ಹೀಗಾಗಿ ಆಸಿಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್ ಕಲೆಹಾಕಿತು.

161 ಗುರಿಯತ್ತ ಸಾಗಿದ ಭಾರತ ತಂಡಕ್ಕೆ ಮೊದಲೇ ಆಘಾತಕ್ಕೆ ಸಿಲುಕಿತು. ಭಾರತ ತಂಡದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ 6 ರನ್‌ ಗಳಿಸಿ ಹಾಗೂ ಶೆಫಾಲಿ ವರ್ಮಾ 11 ರನ್‌ ಗಳಿಸಿ ತಂಡಕ್ಕೆ ಆಸರೆಯಾಗದೆ ಬೇಗ ಪವಲಿಯನ್‌ ಸೇರಿದರು. ಆದರೆ ಭರವಸೆ ಆಟವಾಡಿ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಮತ್ತು ಜೆಮಿಯಾ ರಾಡ್ರಿಗಸ್‌ ತಂಡಕ್ಕೆ ಆಸರೆಯಾದರು. 96 ರನ್‌ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಗೆಲುವಿನ ಭರವಸೆ ಹುಟ್ಟಿಸಿದರು.

ಆದರೆ ಜೊತೆಯಾಟವನ್ನ ಬೇರ್ಪಡಿಸಿದ ಮೇಘನ್‌ ಸ್ಕಟ್‌ ಭಾರತದ ಗೆಲುವಿನ ಹಾದಿಯನ್ನು ದಿಕ್ಕುತಪ್ಪಿಸಿದರು. ನಂತರ ಬಂದ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡದ ಕಾರಣ 19.3 ಓವರ್ ಗಳಿಗೆ ಆಲ್‌ ಔಟ್‌ ಆಗಿ 152 ರನ್‌ ಕಲೆಹಾಕಿ ಆಸಿಸ್‌ ವಿರುದ್ಧ ಮಣಿದರು.

ಅತ್ಯತ್ತಮ ಪ್ರದರ್ಶನ ನೀಡಿದ ಆಸಿಸ್‌ ತಂಡ  ಕಾಮನ್‌ ವೆಲ್ತ್‌ ಗೇಮ್ಸ್‌ ಮಹಿಳಿಯರ ಕ್ರಿಕೆಟ್‌ ನಲ್ಲಿ ದಾಖಲೆ ಮಾಡುವುದರೊಂದಿಗೆ ದೇಶಕ್ಕೆ ಚಿನ್ನದ ಪದಕಗಳಿಸಿ ಕೊಟ್ಟಿತು.  ಇದರ ಜೊತೆಗೆ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಬೆಳ್ಳಿಗಳಿಸಿ ಅಷ್ಟಕ್ಕೆ ತೃಪ್ತಿಹೊಂದಿದೆ.