women – Peepal Media

ಸಿಟಿ ರವಿ ಅಶ್ಲೀಲ ಪದ ಬಳಕೆ ಖಂಡಿಸಿ ಹಾಸನ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ: ಆಕ್ರೋಶ
ಹಾಸನ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಟಿ. ರವಿ ಅವರು ಬಳಕೆ ಮಾಡಿರುವ ಅವಾಚ್ಯ ಪದವನ್ನು ಖಂಡಿಸಿ ಕಾಂಗ್ರೆಸ್ ಕಚೇರಿ ಎದುರು ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ತಾರಾ ಚಂದನ್ ಮಾತನಾಡಿ, ಸಿಟಿ ರವಿ ಅವರು ಬಿಜೆಪಿ ಸರ್ಕಾರದಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಅವರು ಮಹಿಳೆಯರ ಬಗ್ಗೆ ಅಸಹ್ಯಕರ ಪದ ಬಳಕೆ ಮಾಡುವುದು ಮಹಿಳೆಯರಿಗೆ ಅವರು ತೋರಿಸುವ ಗೌರವವನ್ನು ಸೂಚಿಸುತ್ತದೆ. ತುಂಬಿದ ಸಭೆಯಲ್ಲಿ ಸಚಿವ ಸಂಪುಟದ ಸದಸ್ಯರಾಗಿರುವ ಲಕ್ಷಿ÷್ಮ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದ ಬಳಸಿರುವ ಪದ ಅವರ ಸಂಸ್ಕöÈತಿಯನ್ನು ತೋರಿಸುತ್ತದೆ. ಭೇಟಿ ಬಚಾವೋ ಭೇಟಿ ಪಡವೋ ಎಂಬ ಮಾತುಗಳನ್ನು ಆಡುವ ಅವರದೇ ಪಕ್ಷದ ಪ್ರಧಾನಿ ಅವರು ಸಿ.ಟಿ ರವಿ ಅವರ ಮಾತುಗಳಿಗೆ ಉತ್ತರ ನೀಡಬೇಕು ಎಂದರು. ಈ ಹಿಂದೆ ಚಿಕ್ಕಮಗಳೂರಿನಲ್ಲಿ ಅಲ್ಲಿನ ಜನ ಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸುವ ಕೆಲಸ ಮಾಡಿದ್ದಾರೆ ಆದರೂ ಕೇಂದ್ರದ ನಾಯಕರು ಆತನನ್ನು ಎಂಎಲ್ಸಿ ಮಾಡುವ ಮೂಲಕ ಹೊಲಸು ಮಾತುಗಳನ್ನು ಆಡುವ ಸಿಟಿ ರವಿ ಅವರನ್ನು ಮಹಿಳೆಯರ ವಿರುದ್ದ ಮಾತನಾಡಲು ಬಿಟ್ಟಿದ್ದಾರೆ. ಅವರು ಇದೆ ರೀತಿ ಮಾತುಗಳನ್ನು ಆಡುತ್ತಿದ್ದರೆ ಮಹಿಳೆಯರಿಂದಲೇ ತಕ್ಕ ಶಾಸ್ತಿ ಆಗಲಿದೆ ಎಂದು ಎಚ್ಚರಿಸಿದರು. ಅವರ ಮನೆಯಲ್ಲಿ ಕೂಡ ಮಹಿಳೆಯರು ಇದ್ದಾರೆ ಅವರ ಬಗ್ಗೆಯೂ ಸಿಟಿ ರವಿ ಹೀಗೆ ಮಾತನಾಡುತ್ತಾರೆಯೆ ? ಎಂದು ಪ್ರಶ್ನಿಸಿದ ಅವರು, ಕೂಡಲೇ ಕೇಂದ್ರ ಸರ್ಕಾರ ಅವರ ಎಂಎಲ್ಸಿ ಸ್ಥಾನವನ್ನು ಹಿಂಪಡೆಯಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ. ಶೃತಿ, ಪಾರ್ವತಿ, ಕಮಲಮ್ಮ, ವಸಂತ, ಸರೋಜಾ, ನೇತ್ರ, ಮಂಜುಳಾ ಬಾಯಿ, ರಘು ದಾಶರಕೊಪ್ಪಲು, ಕಬ್ಬಲಿ ರಾಮಚಂದ್ರ, ಅಬ್ದುಲ್ ಕಯ್ಯುಮ್, ಚಂದ್ರು, ಶೇಖರ್, ವಿಜಯ್ ಕುಮಾರ್, ಮಲ್ಲಿಗೆ ವಾಳು ದೇವಪ್ಪ ಇತರರು ಉಪಸ್ಥಿತರಿದ್ದರು.

ಇಂದು ಮಹಿಳೆಯರೂ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ: ಮಾಧುರಿ ದೀಕ್ಷಿತ್
ಮುಂಬೈ: ಹೆಚ್ಚು ಹೆಚ್ಚು ಮಹಿಳೆಯರು ಉದ್ಯಮದಲ್ಲಿ ವಿಭಿನ್ನ ಉದ್ಯೋಗಗಳನ್ನು ಮಾಡಲು ಮುಂದೆ ಬರುತ್ತಿದ್ದಾರೆ ಮತ್ತು ಸಿನೇಮಾ ನಿರ್ಮಾಪಕರಾಗಿಯೂ ಕೆಲಸ ಮಾಡುತ್ತಿದ್ದಾರೆ ಎಂದು ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್ ಅವರು 80 ಮತ್ತು 90 ರ ದಶಕದಿಂದ ಬಾಲಿವುಡ್‌ನಲ್ಲಿ ಆಗಿರುವ ಉತ್ತಮ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.

1984 ರಲ್ಲಿ “ಅಬೋಧ್” ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಮಾಧುರಿ, “ದಿಲ್ ತೋ ಪಾಗಲ್ ಹೈ”, “ತೇಜಾಬ್”, “ಬೇಟಾ” ಮತ್ತು “ರಾಜಾ” ನಂತಹ ಚಿತ್ರಗಳಲ್ಲಿ ಅಭಿಯಿಸಿದ್ದರು, ಚಲನಚಿತ್ರ ಸೆಟ್‌ಗಳಲ್ಲಿ ನಟಿಯರು ಮತ್ತು ಕೇಶ ವಿನ್ಯಾಸಕರಾಗಿ ಮಾತ್ರ ಈ ಹಿಂದೆ ಮಹಿಳೆಯರೇ ಇರುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು.

“ಮಹಿಳೆಯರು ಬಹಳ ದೂರ ಬಂದಿದ್ದಾರೆ, ಇದು ಒಂದು ಪುಟ್ಟ ಹೆಜ್ಜೆಯ ನಡಿಗೆ. ನಾನು 80 ಮತ್ತು 90 ರ ದಶಕದಲ್ಲಿ ಕೆಲಸ ಮಾಡುತ್ತಿದ್ದಾಗ, ಸೆಟ್‌ನಲ್ಲಿ ನಾನು, ನನ್ನ ಸಹ ನಟಿಯರು ಮತ್ತು ಕೇಶ ವಿನ್ಯಾಸಕಿಯರು ಮಾತ್ರ ಮಹಿಳೆರು. ಇಂದು, ನಾನು ಸೆಟ್‌ನಲ್ಲಿ ಕಾಲಿಟ್ಟಾಗ — DOP ನಿಂದ ಹಿಡಿದು AD ಗಳು, ಬರಹಗಾರರು ಮತ್ತು ಆಕ್ಷನ್ ಮಾಸ್ಟರ್‌ಗಳವರೆಗೆ – ಮಹಿಳೆಯರು ಬೇರೆ ಬೇರೆ ಕ್ಷೇತ್ರದಲ್ಲಿರುತ್ತಾರೆ ಎಂದು ನಾನು ಊಹಿಸಿರಲಿಲ್ಲ,” ಅದ್ಭುತ,” ಎಂದು ಅವರು ಹೇಳಿದ್ದಾರೆ. (PTI)

ಮಹಿಳೆಯರನ್ನು ಖಿನ್ನತೆಗೆ ತಳ್ಳುವ ಬಾಡಿ ಶೇಮಿಂಗ್‌ ಅನ್ನುವ ಕೆಟ್ಟ ಚಾಳಿ
–ಅಂಜನಿ

ನೋಡಪ್ಪ ಇವ್ಳು ಎಷ್ಟು ಸಣ್ಣ ಇದಾಳೆ , ಹೇ ನೋಡೋ ಅವಳು ಎಷ್ಟು ದಪ್ಪ ಇದ್ದಾಳೆ, ಅವಳ ಬಾಡಿ ಕಾಡಂದಿ ತರ ಇದೆ, ಕಾಡೆಮ್ಮೆಯಂಗವಳೆ.. .ಹೀಗೆ ಅತ್ಯಂತ ಹೀನಾಯ ಕಮೆಂಟ್‌ ಪಾಸ್‌ ಮಾಡೋ ಅಂತವ್ರು ನಮ್ಮ ಸುತ್ತ ಮುತ್ತಲೇ ಇದ್ದಾರೆ .ಇಂಥವರಿಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದಂತಹ ಮಾನಸ ದಪ್ಪ ಇದ್ದರೆ….ಏನ್‌ ಪ್ರಾಬ್ಲಮ್ಮೋ ಗೊತ್ತಿಲ್ಲ…….ನಿವೇದಿತ ಗೌಡ ದಪ್ಪ ಆದ್ರೆ ಇವರಿಗೇನು ಖುಷಿನೋ….ಅಥವಾ ಸಮಸ್ಯೆನೋ ಗೊತ್ತಾಗ್ತಿಲ್ಲ……..ಹಾಗೇನೇ ದೊಡ್ಮನೆ ಕುಡಿ ಅಂತ ಈಗೀಗ ಟ್ರೋಲ್‌ಗೆ ಬಲಿಯಾಗ್ತೀರೋ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮಗಳು ನೋಡೋಕೆ ಕಪ್ಪಗಿದ್ರೆ….ದಪ್ಪ ಇದ್ರೆ ಇವರು ಯಾಕೆ ಯೋಚನೆ ಮಾಡ್ತಾರೆ ಅನ್ನೋದೂ ಸಹ ಗೊತ್ತಾಗ್ತಿಲ್ಲ….

ಬಾಡಿ ಶೇಮಿಂಗ್! ಉಫ್‌… ಈಗೀಗ ಬಾಡಿ ಶೇಮಿಂಗ್‌ ಅನ್ನೋ ಒಂದು ಕೆಟ್ಟ ಮಾನಸಿಕ ಕಿರುಕುಳವನ್ನು ಕೋಟ್ಯಾಂತರ ಜನ ಗಂಡಸರೂ…ಹೆಂಗಸರೂ ಅನುಭವಿಸ್ತಾಲೇ ಇರ್ತಾರೆ….ಆದರೆ, ನಾನೀಗ ಪರ್ಟಿಕ್ಯುಲರ್‌ ಹೆಣ್ಣು ಮಕ್ಕಳ ಬಾಡೀ ಶೇಮಿಂಗ್‌ ಬಗ್ಗೆ ಮಾತಾಡ್ತಿದಿನಿ. ಹಾಗೇನೇ ಸೋಶಿಯಲ್‌ ಮೀಡಿಯಾ ಅವರಿಗೆ Sexual ಹರಾಸ್‌ ಮಾಡುವಂತಹ, ಮಾನಸಿಕವಾಗಿ ಹಲ್ಲೆ ಮಾಡುವಂತಹ, ಹಾಗೇನೇ ಕಮೆಂಟ್ಸ್‌ ಮುಖಾಂತರ ಹೆಣ್ಣು ಮಕ್ಕಳ ಮಾನಸಿಕ ರೇಪ್‌ ಮಾಡುವಂತಹ ಅಸಹ್ಯ ಮನಸ್ಥಿತಿಗಳ ಬಗ್ಗೆ ಮಾತಾಡ್ತಿದಿನಿ.

ಇನ್ನೂ ಕನ್ನಡದ ಬಿಗ್‌ ಬಾಸ್‌ನಲ್ಲಿ ಲಾಯರ್‌ ಜಗದೀಶ್‌ ಮತ್ತೆ ಆ ಮನೆಯಲ್ಲಿದ್ದ ಮಾನಸ, ಚೈತ್ರ, ಹಂಸ ಮತ್ತಷ್ಟು ಮಂದಿಯ ನಡುವೆ ಆದ ಕೆಲವೊಂದಿಷ್ಟು ಜಗಳದಲ್ಲಿ ಜಗದೀಶ್‌ ವಿರುದ್ಧ ಅವರು ನಡೆದುಕೊಂಡ ರೀತಿ ಅಷ್ಟು ಸರಿ ಇರಲಿಲ್ಲ… ಹೌದು ಒಪ್ಕೊಳೋಣ. ಮಾನಸ ಮಾತನಾಡಿದ್ದು ತಪ್ಪು ಅಂತಾದ್ರೆ ಆಕೆಯ ತಪ್ಪಿನ ಬಗ್ಗೆ ಪ್ರಶ್ನೆ ಮಾಡುವುದು ಒಕೆ. ಆದ್ರೆ, ಆಕೆಯ ದೇಹದ ಆಕಾರದ ವಿಚಾರಕ್ಕೆ ಯಾಕೆ ಬರ್ತೀರಿ ಅನ್ನೋದು ಪ್ರಶ್ನೆ. ಮಾನಸಾಳ ದೇಹವನ್ನು ಆಕೆಯ ಮುಖವನ್ನು ಹಂದಿಗೆ ಹೋಲಿಸೋದು ಸರಿನಾ?

ಇನ್ನು ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ ಮಾಡಿಕೊಂಡ್ರು. …ಪರಸ್ಪರ ಅವರೇ ಒಬ್ಬರಿಗೊಬ್ಬರು ಗೌರವಿಸಿ ಡಿವೋರ್ಸ್‌ ಪಡೆದುಕೊಂಡು ಅವರ ಮುಂದಿನ ಜೀವನ ನೋಡಿಕೊಳ್ತಾ ಇದ್ದಾರೆ. ಆದರೆ ಕೆಲವರು ನಿವೇದಿತಾ ಬಾಡಿ ವೇರಿಯೇಶನ್‌ಗಳನ್ನು ಇಟ್ಟುಕೊಂಡು ಆಕೆಗೆ ಕ್ಯಾರೆಕ್ಟರ್‌ ಲೆಸ್‌ ಸರ್ಟಿಫಿಕೇಟ್‌ಗಳನ್ನು ಕೊಟ್ಟು ಕಮೆಂಟ್‌ ಮಾಡ್ತೀರೋರು ಎಷ್ಟು ಸರಿ? ಹೀಗೆ ಹೇಳ್ತಾ ಹೋದ್ರೆ ಕೋಟಿಗಟ್ಟಲೆ ಹೆಣ್ಣು ಮಕ್ಕಳ ಲಿಸ್ಟ್‌ ಆಗ್ತಾ ಹೋಗುತ್ತೆ.

ಈ ರೀತಿ ಕಮೆಂಟ್‌ ಮಾಡುವವರು ಮೊದಲು ನಿಮ್ಮ ನಿಮ್ಮ ದೇಹದ ಸ್ಥಿತಿಯನ್ನು ಒಮ್ಮೆ ಸ್ವತಃ ನೀವೇ ನೋಡ್ಕೋಳೋದು ಉತ್ತಮ ಅನಿಸುತ್ತೆ. ಹಾಗೇನೇ ನಿಮ್ಮ ಮನೆಯಲ್ಲಿರುವಂತಹ ನಿಮ್ಮ ಅಮ್ಮ, ಅಕ್ಕ, ತಂಗಿ. ಹೆಂಡತಿ, ಮಕ್ಕಳ ದೇಹದ ಸ್ಥಿತಿಯನ್ನು , ಅವರ ಬಣ್ಣವನ್ನೂ ಒಮ್ಮೆ ಯೋಚನೆ ಮಾಡಿ …….ಎಲ್ಲರೂ ಫಿಟ್‌ ಅಂಡ್‌ ಫೈನ್‌..ಫೇರ್‌ ಆಗಿನೇ ಇದಾರ ಅಂತ ಮೊದಲು ನಮ್ಮನ್ನ ನಾವು ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು ಅನಿಸುತ್ತೆ.

ಹೆಣ್ಣು ಅಥವಾ ಗಂಡಿನ ದೇಹ ಫಿಟ್‌ ಇಲ್ಲದೇ ತೀರಾ ದಪ್ಪಾನೋ ಸಣ್ಣನೋ ಇದೆ ಅಂದ್ರೆ ಅವರಿಗೆ ಅವರದ್ದೇ ಆದಂತಹ ಕೆಲವು ಆರೋಗ್ಯ ಸಮಸ್ಯೆಗಳು ಕಾಋಣವಾಗಿರುತ್ತವೆ. ಇಬ್ಬರ ಬಗ್ಗೆನೂ ಯೋಚನೆ ಮಾಡಬೇಕು ಅಂತ ಬಂದಾಗ ಕೆಲವರಿಗೆ ಜನಟಿಕ್ಸ್‌ ಪ್ರಾಬ್ಲಮ್‌ ಅಂದ್ರೆ, ಹಲವರಿಗೆ ಒತ್ತಡದ ಜೀವನ…..ಅವರ ಲೈಫ್‌ ಸ್ಟೈಲ್‌…..ಫುಡ್‌ ರೋಟೀನ್‌…..ನಿದ್ದೆ…….ಟೈಮ್‌ ಮ್ಯಾನೇಜ್‌ಮೆಂಟ್‌ ಇವೆಲ್ಲವೂ ಒಂದು ರೀತಿ ಕಾರಣ ಆಗಿರುತ್ತವೆ. ಇವೆಲ್ಲವನ್ನೂ ಒಂದು ಕಡೆ ಇಟ್ಟು ಕೇವಲ ಹೆಣ್ಣಿನ ದೇಹದ ಬಗ್ಗೇನೇ ಮಾತಾಡ್ಬೇಕು ಅಂದ್ರೆ ಆಕೆಯ ಬಾಡಿ ಹಾರ್ಮೋನಲ್‌ ಚೇಂಚಸ್‌, ಆಕೆಯ ದೇಹದ ಏರು ಪೇರಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರತ್ತೆ……ಸಾಮಾನ್ಯವಾಗಿ 15 ವರ್ಷದಿಂದ 45 ವರ್ಷದ ಹೆಣ್ಣು ಮಕ್ಕಳಿಗೆ pcos ಅಂದ್ರೆ polycystic ovary syndrome ಮತ್ತೆ PCOD ಮೀನ್ಸ್‌ Polycystic Ovarian Disease ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳೋದ್ರಿಂದ ಅವರ ಪೀರಿಯಡ್ಸ್‌ irregular ಆಗುತ್ತೆ, ಅವರ ದೇಹದ ತೂಕ ಹೆಚ್ಚಾಗುತ್ತೆ…..ಅವರ ಮುಖದಲ್ಲಿ ಎಕ್ಸೆಸ್‌ ಆಫ್‌ ಹೇರ್‌ ಕಾಣಿಸಿಕೊಳ್ಳುತ್ತೆ… ಮೊಡವೆಗಳು, ಬ್ಲಾಕ್‌ ಪಿಗ್‌ ಮೆಂಟೇಶನ್‌ ಕಾಣಿಸಿಕೊಳ್ಳುತ್ತೆ ….ಸಮ್‌ ಟೈಮ್ಸ್‌ ಈ ಟೈಮಲ್ಲಿ ಅವರು ಏನೇ ವರ್ಕ್‌ಔಟ್‌ ಮಾಡಿದ್ರು ವರ್ಕ್‌ ಆಗದೇ ಇರುವಂತಹ ಸ್ಥಿತಿ ಇರುತ್ತೆ…..ಇನ್ನೂ ಕೆಲವರು ಈ ಸಮಸ್ಯೆಯ ಟ್ರೀಟ್‌ಮೆಂಟ್‌ ಸಂದರ್ಭದಲ್ಲಿ ತೆಗೆದುಕೊಳ್ಳುವಂತಹ ಮೆಡಿಸಿನ್ಸ್‌ಯಿಂದ ದಪ್ಪ ಆಗಿರೋರು ಇರ್ತಾರೆ……….ಇನ್ನೂ ಸಾಮಾನ್ಯವಾಗಿ ಹೆಣ್ಣು ಮಕ್ಕಳು 40 ವಯಸ್ಸಿನ ನಂತರ ತನ್ನ Menopause ಸ್ಥಿತಿಗೆ ಹೋಗೋದ್ರಿಂದ ಅವರ ಆ ಮುಟ್ಟು ನಿಲ್ಲುವಿಕೆಯ ಸಂದರ್ಭದಲ್ಲಿ ದೇಹದಲ್ಲಿ ಇಷ್ಟ್ರೋಜನ್‌ ಎನ್ನುವ ಹಾರ್ಮೋನ್‌ ಉತ್ಪತ್ತಿ ಆಗೋದು ಕಡಿಮೆ ಆಗುತ್ತೆ…ಹಾಗೇನೇ ಅವರ ದೇಹದ ವ್ಯಾಯಾಮದ ಶಕ್ತಿ ಸಹ ಕಡಿಮೆ ಆಗ್ತಾ ಬರುತ್ತೆ… ಇದರಿಂದ ದೇಹದಲ್ಲಿರೊ ಕ್ಯಾಲೋರೀಸ್‌ ಬೇಗ ಬರ್ನ್‌ ಆಗಲಿಕ್ಕೆ ಶುರುವಾಗಿ ಕೆಲವರಿಗೆ ಫ್ಯಾಟ್‌ಕಂಟೆಂಟ್‌ ಶುರುವಾಗ್ತಾ ಬರುತ್ತೆ …ದೇಹದಲ್ಲಿ ಸೊಂಟದ ಸುತ್ತ ಬೊಜ್ಜು ಬೆಳೆಯೋದಕ್ಕೆ ಸ್ಟಾರ್ಟ್‌ ಆಗುತ್ತೆ.

ಇನ್ನೂ ಕೆಲವರಿಗೆ ಮೆನೋಪಾಸ್‌ ಟೈಮಲ್ಲಿ ಸರಿಯಾಗಿ ನಿದ್ರೆ ಮಾಡಲಿಕ್ಕೆ ಆಗೋದಿಲ್ಲ. ಆಗ ದೇಹದಲ್ಲಿ ಕಾರ್ಟಿಸೋಲ್‌ ಅನ್ನುವಂತಹ ಅಂಶ ಹೆಚ್ಚಾಗೋದ್ರಿಂದ ಶುಗರ್‌ ಲೆವೆಲ್‌ ಕಡಿಮೆ ಆಗಿ, ಆ ಸಮಯದಲ್ಲಿ ಕೊಬ್ಬಿನಾಂಶ ಇರುವಂತಹ ಆಹಾರವನ್ನು ತಿನ್ನಬೇಕು ಅಂತ ದೇಹ ಬಯಸುತ್ತೆ…. ಅಂತಹ ಆಹಾರವನ್ನು ಸೇವಿಸೋದ್ರಿಂದ ದಪ್ಪ ಆಗ್ತಾರೆ….ಮತ್ತೆ ಮೆನೋಪಾಸ್‌ ನಂತರ ಇಷ್ಟ್ರೋಜನ್‌ ಮತ್ತು ಕ್ಯಾಲ್ಶಿಯಂ ಕಂಟೆಂಟ್‌ ಕಡಿಮೆ ಆಗೋದ್ರಿಂದ ಅವರಿಗೆ ಮಂಡಿ ನೋವು ಸ್ಟಾರ್ಟ್‌ ಆಗಿ ಸರಿಯಾಗಿ ನಡೆಯಲಿಕ್ಕೆ ಆಗದೆ ಕೆಲವು ಹೆಂಗಸರು ದಪ್ಪ ಆಗ್ತಾರೆ…..ಕೆಲವರು ಮಕ್ಕಳನ್ನು ಹಡೆದ ನಂತರ ದಪ್ಪ ಆಗ್ತಾರೆ…ಹೀಗೆ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ  ದೇಹದಲ್ಲಿ ಸವಾಲುಗಳನ್ನು ಫೇಸ್‌ ಮಾಡ್ತಿರುವಾಗ ಅವರ ದೇಹದ ಬಗ್ಗೆ ಕೆಟ್ಟದಾಗಿ ಮಾತಾನಾಡೋದಿಕ್ಕೆ ನಿಮಗೆಲ್ಲಾ ಯಾವ ನೈತಿಕತೆ ಇದೆ ಅಂತ….ಈ ರೀತಿ ಒಂದು ಹೆಣ್ಣಿಗೆ ಆಕೆಯ ದೇಹ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಗಳಿಗೂ ಒಬ್ಬ ಗಂಡಿಗೆ ಆತನ ದೇಹಕ್ಕೆ ಎದುರಾಗುವ ಸವಾಲುಗಳಿಗೂ ತುಂಬಾ ಡಿಫರೆನ್ಸ್‌ಗಳು ಇರೋದ್ರಿಂದ ಒಬ್ಬ ಹೆಣ್ಣಿನ ದೇಹದ ಆಕಾರದ ಬಗ್ಗೆ ಕೀಳಾಗಿ ಮಾತನಾಡುವ ಮುನ್ನ First Educate your Mind about women Issues.

ನಮ್ಮ ನಿಮ್ಮೆಲ್ಲರ ಹಾಗೇ ಕುಟುಂಬ ಒಂದಿಷ್ಟು ಸ್ನೇಹಿತರು ತಮ್ಮದೇ ಪುಟ್ಟ ಪ್ರಪಂಚ ಹೊಂದಿದ ವ್ಯಕ್ತಿಗೆ ಸಂಬಂಧವೇ ಇಲ್ಲದೆ ಆಕೆಯ ರೂಪದ ಕುರಿತ ಹೋಲಿಕೆ ನಡೆಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ. ಇನ್ನೂ ಮಾನಸಳನ್ನೇ ಉದಾಹರಣೆಯಾಗಿ ತೆಗೆದುಕೊಂಡ್ರೆ ಆಕೆ ಮತ್ತು ಆಕೆಯ ಪತಿ ಈ ರೀತಿಯ ಕಮೆಂಟ್‌ಗಳಿಗೆ ಕುಗ್ಗದೇ ಅದನ್ನು ಜೊತೆಯಾಗಿ ನಿಂತು ಎದುರಿಸಿದ್ದು ಧೈರ್ಯದ ನಡೆ. ಆದರೆ ಈ ಮನಸ್ಥಿತಿ ಎಲ್ಲರಿಗೂ ಇರೋದಿಲ್ಲ. ಇರೋದಿಕ್ಕೆ ಸಾಧ್ಯನೂ ಇಲ್ಲ. ನಿಮ್ಮ ಈ ರೀತಿಯ ಬಾಡಿ ಶೇಮಿಂಗ್‌ನಿಂದ ಅವಮಾನಗೊಂಡು ಮಾನಸಿಕ ಹಿಂಸೆಯಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟು ಇವೆ.

ಇನ್ನೂ ಈ ರೀತಿ ಬೇರೋಬ್ಬ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ದೃಷ್ಟಿಯಲ್ಲಿ ನೋಡ್ತಿರೋರಿಗೆ ನಿಮ್ಮ ನಿಮ್ಮ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳ ಸೇಫ್ಟಿ ಬಗ್ಗೆ ಮಾತನಾಡುವಂತಹ ಯಾವುದೇ ರೀತಿಯ ನೈತಿಕತೆ ನಿಮಗೆ ಇರೋದಿಲ್ಲ……ಯಾಕಂದ್ರೆ ನೀವು ಬೇರೊಬ್ಬ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನದಲ್ಲಿ, ನೀವು ಅವರ ಬಗ್ಗೆ ಯೋಚನೆ ಮಾಡುವ ರೀತಿಯಲ್ಲೇ ಮತ್ತೊಂದು ಕಡೆ, ಹೀಗೇನೇ ನಿಮ್ಮಂತಹದ್ದೇ ಮನಸ್ಥಿತಿಯುಳ್ಳ, ನಿಮ್ಮದೇ ರೀತಿ ಯೋಚನೆ ಮಾಡುವಂತಹ ಗುಂಪೊಂದು ಈ ಕಡೆ ನಿಮ್ಮ ನಿಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕೆಟ್ಟ ರೀತಿಯಲ್ಲಿ ಕಮೆಂಟ್‌ ಪಾಸ್‌ ಮಾಡ್ತಿರ್ತಾರೆ ಅನ್ನೋದನ್ನೂ ನಿಮ್ಮ ತಲೆಯಲ್ಲಿ ಇರಲಿ.

ಹೆಣ್ಣು ಮಕ್ಕಳು ತನ್ನ ಪೀರಿಯಡ್ಸ್‌ ಟೈಮ್‌ನಲ್ಲಿ ಒಂದು ಸ್ಯಾನಿಟರಿ ಪ್ಯಾಡ್‌ಗಳನ್ನ ಅಂಗಡಿಯಲ್ಲಿ ಕೇಳಲು ಮುಜುಗರ ಮಾಡ್ಕೋತಾಳೆ….ಇನ್ನೂ ಈ ರೀತಿ ಹೆಣ್ಣನ್ನ ಹಿಯಾಳಿಸುವಂತಹ ಮನಸ್ಥಿತಿಗಳಿಗೆ ಹೆದರಿ ಹೆಣ್ಣು ಪೀರಿಯಡ್ಸ್‌ ಆಗೋದೇ ದೊಡ್ಡ ಅಪರಾಧವೇನೋ ಎಂಬಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ತರುವಾಗ ಅದನ್ನ ಯಾರೂ ನೋಡಬಾರದು…ನೋಡಿದ್ರೆ ನನ್ನ ಏನೆಲ್ಲಾ ಅನ್ಕೊತಾರೋ ಅನ್ನುವ ಮನಸ್ಥಿತಿಯಿಂದ ಅದನ್ನು ಕಾಣದಂತೆ ಬ್ಲಾಕ್‌ ಕವರ್‌ ಅಥವಾ ಪೇಪರ್‌ನಲ್ಲಿ ಫುಲ್‌ ಕವರ್‌ ಮಾಡಿ ಬಚ್ಚಿಟ್ಕೊಂಡು ತರುವಂತೆ ಆಗಿದೆ…

ಒಬ್ಬ ಮಹಿಳೆಯ ಇಡೀ ಅಸ್ತಿತ್ವವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಡುವುದು ಮತ್ತು ಹಾಸ್ಯಾಸ್ಪದವನ್ನಾಗಿಸುವುದು ಅಷ್ಟು ಸಾಮಾನ್ಯವಾಗಿದ್ದರೆ ನಮ್ಮಲ್ಲಿ ಮಾನವೀಯತೆ ಮತ್ತು ನೈತಿಕತೆ ಕೆಟ್ಟು ನಾರುತ್ತಿದೆ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಟ್ರೋಲ್‌ ಮಾಡುವ ಪ್ರತಿಯೊಬ್ಬರೂ ಕೆಟ್ಟವರಲ್ಲ…. ಕಮೆಂಟ್‌ ಮಾಡುವ ಎಲ್ಲರೂ ಕೆಟ್ಟವರು ಅಂತ ಇಲ್ಲಿ ನಾನು ಹೇಳ್ತಿಲ್ಲ….ಕೆಲ ಮನಸ್ಥಿತಿಗಳು ಟ್ರೋಲ್‌ ಮಾಡೋದು ಮಾಡ್ತೀವಿ ಕಮೆಂಟ್‌ ಮಾಡೋದು ಮಾಡ್ತೀವಿ ಎದುರಿಸೋದು ಬಿಡೋದು ನಿಮ್ಮಿಷ್ಟ ಅಂತ ಕೆಲವರು ಕ್ರೂರ ಮೃಗಗಳ ರೀತಿ ಯೋಚನೆ ಮಾಡ್ತಿರೋರು ಇರ್ತಾರೆ…ಹಾಗಾಗೀ ಪರ್ಟಿಕ್ಯುಲರ್‌ ಅಂತವರಿಗೆ ಮತ್ತೆ ಎಲ್ಲಾ ಗಂಡು ಮನಸ್ಥಿತಿಗಳು ಎಲ್ಲಾ ರೀತಿಯ ಹೆಣ್ಣಿನ ಸಮಸ್ಯೆಗಳನ್ನ ಅರಿತುಕೊಳ್ಳಬೇಕಾದದ್ದು ನಾವುಗಳು ನಮ್ಮ ತಾಯಿಗೆ ಅಥವಾ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಆಗುತ್ತೆ.

ಕೊನೆಯದಾಗಿ, ಸೋಶಿಯಲ್‌ ಮೀಡಿಯಾಗಳಲ್ಲಿ ಬರುವಂತಹ ಯಾವುದೇ ಪೋಸ್ಟ್‌ಗಳು ಅಸಮಾಧಾನ ಉಂಟು ಮಾಡಿದ್ರೆ….ಅಸಮಾಧಾನ ಉಂಟು ಮಾಡಿದ ವಿಷಯವನ್ನು ಅವರಿಗೆ ಅರಿವು ಮೂಡಿಸುವಂತೆ ಕಮೆಂಟ್‌ ಮಾಡಿ ತಿಳಿಸಿ…..ಅದನ್ನು ಬಿಟ್ಟು ಇನ್ನೊಬ್ರ ಬಾಡಿ ಶೇಮೀಂಗ್‌ ಮಾಡಿ ನಿಮಗೆ ಬರುವಂತಹದ್ದು ಏನೂ ಇಲ್ಲ….…..ಪುಟ್ಟ ಪುಟ್ಚ ಮಕ್ಕಳ ಕೈಲೂ ಈಗ ಫೋನ್‌ಗಳು ಬಳಕೆ ಆಗೋದ್ರಿಂದ …..ನೀವು ಒಂದು ಹೆಣ್ಣನ್ನ ಕೆಟ್ಟ ದೃಷ್ಟಿಕೋನದಲ್ಲಿ ನೋಡಿ ಕಮೆಂಟ್‌ ಮಾಡಿದ್ರೆ ನಿಮ್ಮ ನೆಕ್ಸ್ಟ್‌ ಜನರೇಶನ್‌ ಗೆ ನೀವು ಇದನ್ನೇ ಪ್ರವೋಕ್‌ ಮಾಡಿದಾಗೆ ಆಗುತ್ತೆ… …..ನಮ್ಮ ಸಾಮಾಜಿಕ ಜಾಲತಾಣಗಳ ಬಳಕೆ ಸಮಾಜದ ಒಳ್ಳೆ ರೀತಿಯ ಬದಲಾವಣೆಗೆ ಉಪಯೋಗಿಸಿಕೊಳ್ಳೋಣ.

ಪಶ್ಚಿಮ ಬಂಗಾಳ: ಪರಪುರುಷನ ಜೊತೆಗಿದ್ದಳು ಆರೋಪಿಸಿ ಮಹಿಳೆಗೆ ಅಮಾನುಷವಾಗಿ ಥಳಿಸಿದ ಟಿಎಂಸಿ ಮುಖಂಡ
ಉತ್ತರ ದಿನಾಜ್‌ಪುರ:  ಜಿಲ್ಲೆಯ ಲಖೀಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘೆಮ್ಟಗಚ್ ಗ್ರಾಮದ ರಸ್ತೆಯಲ್ಲಿ ವಿವಾಹಿತ ಮಹಿಳೆಯೊಬ್ಬಳಿಗೆ ಆಡಳಿತ ಪಕ್ಷದ ತೃಣಮೂಲ ಕಾಂಗ್ರೆಸ್‌ ಪಕ್ಷದ ರಾಜಕೀಯ ಪುಡಾರಿಯೊಬ್ಬ ಸಾರ್ವಜನಿಕವಾಗಿ ಥಳಿಸಿದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ.

ಮಹಿಳೆ  ಮತ್ತು ಆಕೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿಗೆ ಭೀಕರವಾಗಿ ಥಳಿಸುವಾಗ ನೂರಾರು ಜನರು ಸುತ್ತುವರಿದು ನೋಡುವ ದೃಶ್ಯ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದೆ. ಈ ದೃಶ್ಯವನ್ನು ಚಿತ್ರೀಕರಿಸಿಕೊಂಡು ಹರಿಬಿಟ್ಟ ಯುವಕನನ್ನು ಈಗಾಗಲೇ ಊರಿನಿಂದ ಹೊರಗೆ ಓಡಿಸಲಾಗಿದೆ ಎಂದು ದಿ.ವೈರ್‌ ವರದಿ ಮಾಡಿದೆ.

ಜೂನ್ 28ರಂದು ಘಟನೆ ನಡೆದರೂ ಬೆಳಕಿಗೆ ಬಂದಿರಲಿಲ್ಲ. ಜನರ ಮೊಬೈಲ್‌ನಲ್ಲಿ ವಿಡಿಯೋ ಹರಿದಾಡುತ್ತಿತ್ತು. ಆದರೆ, ಯಾರೂ ಭಯದಿಂದ ಪೊಲೀಸರು ಮತ್ತು ಮಾಧ್ಯಮಗಳಿಗೆ ತಿಳಿಸಿರಲಿಲ್ಲ ಎಂದು ವರದಿಗಳು ಹೇಳಿವೆ.

ಘಟನೆ ಸಂಬಂಧ ಇಸ್ಲಾಂಪುರ ಪೊಲೀಸ್ ಜಿಲ್ಲೆಯ ಪೊಲೀಸ್ ಅಧೀಕ್ಷಕ ಡಾ. ಜೋಬಿ ಥಾಮಸ್ ಕೆ ಅವರನ್ನು ವೈರ್‌ ಸಂಪರ್ಕಿಸಿದಾಗ “ಚೋಪ್ರಾ ಪ್ರದೇಶದ ಘಟನೆಯೊಂದು ನಮ್ಮ ಗಮನಕ್ಕೆ ಬಂದಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪೊಲೀಸ್ ತನಿಖೆ ಮುಂದುವರಿಯುತ್ತದೆ.” ಎಂದು ತಿಳಿಸಿರುವುದಾಗಿ ವರದಿಯಾಗಿದೆ.

ಹಲ್ಲೆಗೆ ಕಾರಣ: ಹಲ್ಲೆಗೊಳಗಾದ ಮಹಿಳೆಯನ್ನು ಸುಲ್ತಾನಾ ಎಂದು ಗುರುತಿಸಲಾಗಿದ್ದು, ಈಕೆ ವಾರದ ಹಿಂದೆ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ರಾಜೀವ್ ಎಂಬ ವ್ಯಕ್ತಿಯೊಂದಿಗೆ ಸಿಲಿಗುರಿ ಬಳಿಯ ಮಟಿಗಾರ ಪ್ರದೇಶಕ್ಕೆ ತೆರಳಿದ್ದರು. ಜೂನ್ 28 ರಂದು ರಾಜೀವ್ ಮತ್ತು ಸುಲ್ತಾನಾ ಗ್ರಾಮಕ್ಕೆ ಮರಳಿದ್ದು ತಿಳಥಳಿಸಲಾಗಿದೆ ಎಂದು ದಿ ವೈರ್ ಹೇಳಿದೆ.

ಟಿಎಂಸಿಯ ಸ್ಥಳೀಯ ಮುಖಂಡ ತಾಜಿಮುಲ್ ಅಲಿಯಾಸ್ ‘ಜೆಸಿಬಿ’ ಮಹಿಳೆಗೆ ಥಳಿಸಿದ್ದು, ಆಕೆ ತನ್ನ ಪತಿಯನ್ನು ಎರಡನೇ ಬಾರಿ ಮದುವೆಯಾಗಬೇಕಾದರೆ 3 ಲಕ್ಷ ರೂ. ಮತ್ತು ತಾಜಿಮುಲ್‌ಗೆ 2 ಲಕ್ಷ ರೂ. ಪಾವತಿಸಬೇಕೆಂದು ಷರತ್ತು ವಿಧಿಸಲಾಗಿತ್ತು. ಆದರೆ, ಸುಲ್ತಾನಾ ಹಣ ಪಾವತಿಸಲು ನಿರಾಕರಿಸಿದ್ದರು.

ಇದರಿಂದ ಕುಪಿತಗೊಂಡ ತಾಜಿಮುಲ್, ಮೊದಲು ಮಹಿಳೆಗೆ ಅವಮಾನಿಸಿ ಬಳಿಕ ಸುಮಾರು ಒಂದು ಗಂಟೆಗಳ ಕಾಲ ಭೀಕರವಾಗಿ ಥಳಿಸಿದ್ದಾನೆ. ರಾಜೀವ್‌ಗೂ ಥಳಿಸಲಾಗಿದೆ ಎನ್ನಲಾಗಿದೆ.

ಘಟನೆ ನಡೆದ ನಾಲ್ಕೈದು ಗಂಟೆಗಳ ನಂತರ ಚೋಪ್ರಾ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಜ್ಞಾಹೀನರಾಗಿದ್ದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರು ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಯ ರಾಜಕೀಯ ಹಿನ್ನೆಲೆ: ತಾಜಿಮುಲ್ ಚೋಪ್ರಾ ಶಾಸಕ ಹಮೀದುರ್ ರೆಹಮಾನ್ ಅವರ ಬಲಗೈ ಬಂಟ ಎಂದು ತಿಳಿದು ಬಂದಿದೆ. ಈತ ಕಳೆದ ವರ್ಷ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಗುಂಡಿನ ದಾಳಿಯಿಂದ ಹತ್ಯೆಗೀಡಾದ ಯುವ ಸಿಪಿಐ(ಎಂ) ಕಾರ್ಯಕರ್ತ ಮನ್ಸೂರ್ ಹತ್ಯೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಈತನಾಗಿದ್ದಾನೆ.

ಮಾಜಿ ಸಂಸದ ಮತ್ತು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಅವರು ಎಕ್ಸ್‌ ಪೋಸ್ಟ್‌ನಲ್ಲಿ ಹಲ್ಲೆಯ ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಈಗಾಗಲೇ ಗ್ರಾಮದಿಂದ ಹೊರಹಾಕಲಾಗಿದೆ ವಿಡಿಯೋ ಹಂಚಿಕೆಯಲ್ಲಿ ಪಾತ್ರವಹಿಸಿದ ಇನ್ನೊಬ್ಬ ವ್ಯಕ್ತಿಗೆ 50,000 ರೂ “ದಂಡ” ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ವಿಡಿಯೋ ಲಿಂಕಗಾಗಿ ಇಲ್ಲಿ ಕ್ಲಿಕ್ಕಿಸಿ.

ʼಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ..!ʼ – ಬಿಜೆಪಿ ಪ್ರತಿಭಟನೆ
ಬೆಂಗಳೂರು : ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಭ್ರೂಣಹತ್ಯೆ ತಡೆಗಟ್ಟುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದು ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟಣೆ ನಡೆಸಿದ್ದಾರೆ.

ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರೆವಣಿಗೆ ಮಾಡಿಸಿದಾಗ ದೌರ್ಜನ್ಯ ಅನ್ನಿಸಿಲ್ಲದ್ದೆ ಸದ್ದು ಮಾಡದಿದ್ದ ಮೋರ್ಚಾಗಳು, ಕುಸ್ತಿಪಟುಗಳ ಮೇಲೆ ಬಿಜಿಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ಎಸಗಿದ್ದು ಮಹಿಳಾ ದೌರ್ಜನ್ಯ ಎಂದು ಪ್ರತಿಭಟನೆ ಮಾಡದ ಬಿಜೆಪಿ ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ಹಾಗೆಯೇ ಭ್ರೂಣಹತ್ಯೆ ತಡೆಗಟ್ಟುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಹಿಳಾ ಮೋರ್ಚಾ ವತಿಯಿಂದ ಕಾಂಗ್ರೆಸ್ನ ವಿರುದ್ದ ಪ್ರತಿಭಟನೆ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ್ ಮತ್ತು ಪ್ರಮುಖ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಭಾರತದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ: ಅಪರಾಧದಲ್ಲಿ ಉತ್ತರಪ್ರದೇಶವೇ ಟಾಪ್!‌ NCRB ವರದಿ ಬಹಿರಂಗ
ಬೆಂಗಳೂರು: 2021 ಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 2022 ರಲ್ಲಿ ಶೇ.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು 3 ಡಿಸೆಂಬರ್, ಭಾನುವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau – NCRB) ನ 2022 ರ ವರದಿ ಬಹಿರಂಗಪಡಿಸಿದೆ.

ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯಾದ ದಿನವೇ ಎನ್‌ಸಿಆರ್‌ಬಿ ವಾರ್ಷಿಕ ವರದಿ ಬಿಡುಗಡೆಗೊಂಡಿದ್ದು, ಮಕ್ಕಳು, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಸೈಬರ್ ಅಪರಾಧಗಳ ವಿರುದ್ಧ ವರದಿಯಾದ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.

2022 ರಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗುವುದರೊಂದಿಗೆ ದೆಹಲಿಯು ಭಾರತದಲ್ಲಿಯೇ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರವಾಗಿ ಬದಲಾಗಿದೆ ಮತ್ತು ಮಹಿಳೆಯ ಮೇಲಿನ ದೌರ್ಜನ್ಯದಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ  ಎಂದು ಎನ್‌ಸಿಆರ್‌ಬಿ ಡೇಟಾ ತೋರಿಸಿದೆ.

ಎನ್‌ಸಿಆರ್‌ಬಿ ವರದಿಯು ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣವು (1 ಲಕ್ಷ ಜನಸಂಖ್ಯೆಗೆ ಘಟನೆಗಳ ಸಂಖ್ಯೆ) 2021 ರಲ್ಲಿ ಶೇ.64.5 ದಿಂದ 2022 ರಲ್ಲಿ ಶೇ.66 ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ.

2022 ರಲ್ಲಿ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಒಟ್ಟು 48,755 ಪ್ರಕರಣಗಳು ದಾಖಲಾಗಿವೆ, ಇದು 2021 ಕ್ಕಿಂತ 12.3% ಹೆಚ್ಚಳವಾಗಿದೆ ( ಹಿಂದಿನ ವರ್ಷ43,414 ಪ್ರಕರಣಗಳು).

ಈ ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ,

ಪತಿ ಅಥವಾ ಅವನ ಮನೆಯವರಿಂದ ಕ್ರೌರ್ಯ: 31.4%

ಮಹಿಳೆಯರ ಅಪಹರಣ: 19.2%

ಮಹಿಳೆಯರ ಮೇಲಿನ ಹಲ್ಲೆ: 18.7%

ಅತ್ಯಾಚಾರ: 7.1%

ರಾಜ್ಯಗಳ ಕಥೆ ಏನು?

2022 ರಲ್ಲಿ 65,743 ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳನ್ನು ದಾಖಲಿಸಿರುವ ಉತ್ತರ ಪ್ರದೇಶ ಮಹಿಳಾ ದೌರ್ಜನ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಮಹಾರಾಷ್ಟ್ರ (45,331) ಮತ್ತು ರಾಜಸ್ಥಾನ (45,058) ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.

ಮೆಟ್ರೋಪಾಲಿಟನ್ ಸಿಟಿಗಳ ಕಥೆ ಏನು?

ದೆಹಲಿ, ಈ ಹಿಂದೆ ಹೇಳಿದಂತೆ ಸತತ ಮೂರನೇ ವರ್ಷಕ್ಕೆ 14,158 ಮಹಿಳೆಯರ ವಿರುದ್ಧದ ಅತಿ ಹೆಚ್ಚು ಅಪರಾಧಗಳು ದಾಖಲಾಗಿ ಮಹಿಳೆಯರಿಗೆ ಅಸುರಕ್ಷಿತವಾದ ನಗರವಾಗಿ ಉಳಿದುಕೊಂಡಿದೆ ಮತ್ತು 1,00,000 ಮಹಿಳೆಯರಿಗೆ ಸುಮಾರು 186.9 ಅಪರಾಧಗಳು ವರದಿಯಾಗಿವೆ.

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳು ಒಟ್ಟು ಅಪರಾಧಗಳಲ್ಲಿ ಶೇ.31.20 ರಷ್ಟಿದೆ. ʼಮಹಿಳಾ ಘನತೆಗೆ ದಕ್ಕೆ ತರಲು ನಡೆಸಿದ ದೌರ್ಜನ್ಯ’ ಮತ್ತು ‘ಮಹಿಳೆಯರ ಅಪಹರಣʼ ವಿಭಾಗಗಳಲ್ಲಿ ದೆಹಲಿಯ 19 ಮಹಾನಗರಗಳಲ್ಲಿ ಅಗ್ರಸ್ಥಾನದಲ್ಲಿದೆ.

ಇದರ ಜೊತೆಗೆ, ಮುಂಬೈನಲ್ಲಿ 6,176 ಪ್ರಕರಣಗಳು ಮತ್ತು ಬೆಂಗಳೂರಿನಲ್ಲಿ 3,924 ಪ್ರಕರಣಗಳು ದಾಖಲಾಗಿವೆ.

ಅತ್ಯಾಚಾರ ಪ್ರಕರಣಳು:

ಭಾರತದಲ್ಲಿ 2022 ರಲ್ಲಿ ಒಟ್ಟು 31,516 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ:

ರಾಜಸ್ಥಾನದಲ್ಲಿ 5,399 ಪ್ರಕರಣಗಳು

ಉತ್ತರ ಪ್ರದೇಶದಲ್ಲಿ 3,690 ಪ್ರಕರಣಗಳು

ಮಧ್ಯಪ್ರದೇಶದಲ್ಲಿ 3,029 ಪ್ರಕರಣಗಳು

ಮಹಾರಾಷ್ಟ್ರದಲ್ಲಿ 2,904 ಪ್ರಕರಣಗಳು

ಹರಿಯಾಣದಲ್ಲಿ 1,787 ಪ್ರಕರಣಗಳು

ʼಅತ್ಯಾಚಾರ/ಗ್ಯಾಂಗ್‌ ರೇಪ್‌ ಹಾಗೂ ಕೊಲೆ’ವಿಭಾಗದಲ್ಲಿ ಅಡಿಯಲ್ಲಿ 62 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಮತ್ತೆ ಪ್ರಥಮ ಸ್ಥಾನ ಪಡೆದಿದೆ. 41 ಪ್ರಕರಣಗಳನ್ನು ದಾಖಲಾಗಿರುವ ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ.

ದೆಹಲಿಯಲ್ಲಿ ಕಳೆದ ವರ್ಷ 1,204 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಜೈಪುರದಲ್ಲಿ 497 ಪ್ರಕರಣಗಳು ವರದಿಯಾಗಿವೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.

ಮಕ್ಕಳ ಮೇಲಿನ ದೌರ್ಜನ್ಯ: ಮಹಾರಾಷ್ಟ್ರವೇ ಮೊದಲು!

2022 ರಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಒಟ್ಟು 1,62,449 ಪ್ರಕರಣಗಳು ದಾಖಲಾಗಿವೆ, ಇದು 2021 ಕ್ಕಿಂತ ಶೇ.8.7 ಹೆಚ್ಚಳವಾಗಿದೆ (1,49,404 ಪ್ರಕರಣಗಳು).

ಮಕ್ಕಳ ಮೇಲಿನ ಪ್ರಮುಖ ದೌರ್ಜನ್ಯಗಳು:

ಅಪಹರಣ – 45.7%

ಮಕ್ಕಳ ಮೇಲಿನ ಅತ್ಯಾಚಾರ ಸೇರಿದಂತೆ,ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ – ಪೋಕ್ಸೋ- 2012 ಪ್ರಕರಣಗಳು -39.7%

2022 ರಲ್ಲಿ ಮಹಾರಾಷ್ಟ್ರದಲ್ಲಿ ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳ 20,762 ಪ್ರಕರಣಗಳು ದಾಖಲಾಗಿದ್ದು ಅಗ್ರಸ್ಥಾನದಲ್ಲಿದೆ, ಇದರ ನಂತರ ಮಧ್ಯಪ್ರದೇಶ (20,415) ಮತ್ತು ಉತ್ತರ ಪ್ರದೇಶ (18,682) ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿವೆ. ಉತ್ತರ ಪ್ರದೇಶದಲ್ಲಿ ಪೋಕ್ಸೊ ಕಾಯ್ದೆಯಡಿ 7,955 ಪ್ರಕರಣಗಳು ವರದಿಯಾಗಿವೆ.

ದೆಹಲಿಯಲ್ಲಿ 2022 ರಲ್ಲಿ 1,529 ಪೋಕ್ಸೊ ಪ್ರಕರಣಗಳು ವರದಿಯಾಗಿವೆ. ಮುಂಬೈ ಮಹಾನಗರಗಳಲ್ಲಿ 1,195 ಪ್ರಕರಣಗಳನ್ನು ದಾಖಲಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಬಾಲಾಪರಾಧಿಗಳ ವಿರುದ್ಧದ ಪ್ರಕರಣಗಳು:

2022 ರಲ್ಲಿ ಬಾಲಾಪರಾಧಿಗಳ ವಿರುದ್ಧ ಒಟ್ಟು 30,555 ಪ್ರಕರಣಗಳನ್ನು ದಾಖಲಿಸಲಾಗಿದೆ, ಇದು 2021 ಕ್ಕಿಂತ 2.0% ರಷ್ಟು ಇಳಿಕೆಯಾಗಿದೆ (31,170 ಪ್ರಕರಣಗಳು).

ಕೊಲೆ ಪ್ರಕರಣಗಳು:

2022 ರಲ್ಲಿ, 2022 ರಲ್ಲಿ ಒಟ್ಟು 28,522 ಎಫ್‌ಐಆರ್‌ಗಳು ದಾಖಲಾಗಿವೆ. ಪ್ರತಿ ದಿನ ಸರಾಸರಿ 78 ಹತ್ಯೆಗಳು ಅಥವಾ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಭಾರತದಾದ್ಯಂತ ವರದಿಯಾಗಿವೆ. ಎನ್‌ಸಿಆರ್‌ಬಿ ಡೇಟಾ ಪ್ರಕಾರ 2020 ರಲ್ಲಿ 29,193 ರಿಂದ 2021 ರಲ್ಲಿ 29,272ಕ್ಕೆ  ಕಡಿಮೆಯಾಗಿದೆ.

ಪ್ರಕರಣಗಳ ಪ್ರಮುಖ ಉದ್ದೇಶಗಳು – ಮೋಟಿವ್ ಯಾವುವು?

2022 ರಲ್ಲಿ ಅತಿ ಹೆಚ್ಚು ಕೊಲೆ ಪ್ರಕರಣಗಳಿಗೆ, 9,962 ಪ್ರಕರಣಗಳಿಗೆ ವಿವಾದ-ಡಿಸ್ಪ್ಯೂಟ್‌ ಕಾರಣವಾಗಿವೆ ವೈಯಕ್ತಿಕ ದ್ವೇಷ ಅಥವಾ ದ್ವೇಷದ (Personal vendetta or enmity) ಅಡಿಯಲ್ಲಿ 3,761 ಪ್ರಕರಣಗಳು ವರದಿಯಾಗಿವೆ 1,884 ಪ್ರಕರಣಗಳಲ್ಲಿ ʼಗಳಿಕೆ – Gain ‘ ಮೂರನೇ ಅತಿ ದೊಡ್ಡ ಉದ್ದೇಶವಾಗಿದೆ.

ಎನ್‌ಸಿಆರ್‌ಬಿ ಪ್ರಕಾರ, ಕೊಲೆಗೆ ಬಲಿಯಾದವರಲ್ಲಿ 8,125 ಮಹಿಳೆಯರು ಮತ್ತು ಒಂಬತ್ತು “ತೃತೀಯ ಲಿಂಗಿಗಳು”, ಶೇ.70 ಪುರುಷರು ಇದ್ದಾರೆ.

ಎಸ್‌ಸಿ/ಎಸ್‌ಟಿಗಳ ವಿರುದ್ಧದ ಅಪರಾಧಗಳು:

ಒಟ್ಟು 57,582 ಎಸ್‌ಸಿಗಳ ವಿರುದ್ಧ ಅಪರಾಧಗಳ ಪ್ರಕರಣಗಳು ದಾಖಲಾಗಿವೆ, ಇದು 2021 (50,900 ಪ್ರಕರಣಗಳು) ಗಿಂತ ಶೇ.13.1 ಹೆಚ್ಚಳವಾಗಿದೆ. ಮಧ್ಯೆ, ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧ ಅಪರಾಧದಲ್ಲಿ 10,064 ಪ್ರಕರಣಗಳನ್ನು ದಾಖಲಲಾಗಿದೆ, ಇದು 2021 (8,802 ಪ್ರಕರಣಗಳು) ಗಿಂತ ಶೇ.14.3 ಹೆಚ್ಚಳವಾಗಿದೆ.

ಭಾರತದಲ್ಲಿ ಹೆಚ್ಚಿದ್ದಾರೆ 25 ವರ್ಷದೊಳಗಿನ ನಿರುದ್ಯೋಗಿಗಳು! – State of Working India ವರದಿಯಲ್ಲಿ ಏನಿದೆ?
ಬೆಂಗಳೂರು: ಭಾರತದಲ್ಲಿ ಒಟ್ಟಾರೆ ನಿರುದ್ಯೋಗದ ಪ್ರಮಾಣ 2017-18ರ 8.7% ಕ್ಕೆ ಹೋಲಿಸಿದರೆ 2021-22ರಲ್ಲಿ  6.6% ಇಳಿದಿದೆ. ಆದರೆ 25 ವರ್ಷ ಪ್ರಾಯದೊಳಗಿನ ಭಾರತದ 42% ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ‌ ಸೆಂಟರ್ ಫಾರ್ ಸಸ್ಟೈನಬಲ್ ಎಂಪ್ಲಾಯಿಮೆಂಟ್ (Centre for Sustainable Employment – CSE)  ವರದಿ ತಿಳಿಸಿದೆ.

ಬುಧವಾರ ಬಿಡುಗಡೆ ಮಾಡಿರುವ ಈ ವರದಿಯಲ್ಲಿ ಉನ್ನತ ಶೈಕ್ಷಣಿಕ ಮಟ್ಟವನ್ನು ಹೊಂದಿರುವವರಿಗೆ ಅದೇ ವಯಸ್ಸಿನವರಿಗೆ ಹೋಲಿಸಿದರೆ ಭಾರತದಲ್ಲಿ 25 ವರ್ಷಕ್ಕಿಂತ ಕಡಿಮೆ ಪ್ರಾಯದ ಪದವೀಧರರು ಅತೀ ಹೆಚ್ಚು ನಿರುದ್ಯೋಗಿಗಳು ಎಂದು ಹೇಳಿದೆ.

ಅಲ್ಲದೇ, ಲಿಂಗಾಧಾರಿತ ವೇತನದಲ್ಲಿ ಅಸಮಾನತೆ (gender pay disparity) ಕಡಿಮೆಯಾಗಿದ್ದರೂ, ಜಾತಿ – ಧರ್ಮ ಆಧಾರಿತ ವೇತನದಲ್ಲಿರುವ ಅಸಮಾನತೆಗಿಂತ ಲಿಂಗಾಧಾರಿತ ವೇತನದಲ್ಲಿ ಅಸಮಾನತೆ ಹೆಚ್ಚಿದೆ. ಇದು ಇನ್ನೂ ವಿವಿಧ ಜಾತಿಗಳು ಮತ್ತು ಧರ್ಮಗಳ ನಡುವಿನ ಆದಾಯದ ಅಸಮಾನತೆಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಸ್ವಉದ್ಯೋಗಿಗಳಲ್ಲಿ ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ಮಹಿಳಾ ಉದ್ಯೋಗಿಗಳಲ್ಲಿ ಅಸಮಾನತೆ ಹೆಚ್ಚಿದೆ.

‘State of Working India 2023 — Social Identities and Labour Market Outcomes’  ಎಂಬ ಈ ವರದಿಯ ಪ್ರಕಾರ ಕಾರ್ಮಿಕ ಮಾರುಕಟ್ಟೆಗಳಲ್ಲಿ ಜಾತಿ ಆಧಾರಿತ ಬೇಧ ಮತ್ತು ಲಿಂಗಾಧಾರಿತ ಅಸಮಾನತೆ ಕಡಿಮೆಯಾಗಿದೆ.  ಆದರೆ, ಅಭಿವೃದಿಯನ್ನು ಉದ್ಯೋಗಗಳಿಗೆ ಜೋಡಿಸುವ ವಿಚಾರದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸಾಧನೆ ಕಳಪೆ.

Employment-Unemployment Surveys ಮತ್ತು Periodic Labour Force Survey, India Working Survey ಯಂತಹ National Statistical Office (NSO) ನಡೆಸಿದ ಸಮೀಕ್ಷೆಗಳು ಸೇರಿದಂತೆ ಬೇರೆ ಬೇರೆ ಮೂಲಗಳ ಡೇಟಾ ಬಳಸಿಕೊಂಡು ಈ ವರದಿನ್ನು ತಯಾರಿಸಲಾಗಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧಕರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು, ಮತ್ತು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಂಶೋಧನೆ ನಡೆಸಿದ್ದಾರೆ.

ಮಹಿಳೆಯರು ಏನು ಮಾಡುತ್ತಿದ್ದಾರೆ?

ಈ ವರದಿಯಲ್ಲಿ ಲಿಂಗ-ಆಧಾರಿತ ವೇತನದಲ್ಲಿರುವ ಅಸಮಾನತೆಯಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಗಳನ್ನೂ, ಸಾಂಪ್ರದಾಯಿಕ ಲಿಂಗ ಮಾನದಂಡಗಳು ಮಹಿಳೆಯರ ಉದ್ಯೋಗಗಳ ಮೇಲೆ ಬೀರಿರುವ ಪ್ರಭಾವವನ್ನು ತೋರಿಸಲಾಗಿದೆ.

2004 ರಲ್ಲಿ ಮಹಿಳೆಯರು ಪುರುಷರ ಸಂಬಳದ 70% ವೇತನ ಪಡೆಯುತ್ತಿದ್ದರು. ಇದು 2017 ರಲ್ಲಿ 76% ಏರಿದ್ದು, ಈ ಪ್ರಮಾಣ 2020-21ವರೆಗೆ ಮುಂದುವರಿದಿದೆ.  ಮುಖ್ಯವಾಗಿ ಗೃಹಣಿಯರು ಸ್ವಉದ್ಯೋಗ ಆರಂಭಿಸಿದ ನಂತರ 2020-21ರಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.  ಕೋವಿಡ್-‌19ಕ್ಕಿಂತ ಮೊದಲು ಇದ್ದ 50% ಗೆ ಹೋಲಿಸಿದರೆ 60% ಮಹಿಳೆಯರು ಸ್ವಯಂ ಉದ್ಯೋಗಗಳನ್ನು ಆರಂಭಿಸಿದ್ದಾರೆ.

ಆದರೆ ಇದೇನು ಸಂಭ್ರಮಿಸುವ ವಿಚಾರವಲ್ಲ. ಈ ವರದಿಯ ಪ್ರಕಾರ 2019ರಿಂದ  ಕೋವಿಡ್‌ನ ಕಾರಣದಿಂದಾಗಿ ಹೆಚ್ಚಿದ ಸ್ವಉದ್ಯೋಗಗಳ ಗಳಿಕೆ ಕುಸಿದಿದೆ. 2022ರಲ್ಲಿ ಈ ಗಳಿಕೆಯು 2019ಕ್ಕೆ ಮೊದಲ ತ್ರೈಮಾಸಿಕದಲ್ಲಿದ್ದ ಗಳಿಕೆಯ 85% ಆಗಿದೆ.

2004 ಮತ್ತು 2017 ರ ನಡುವೆ ವಾರ್ಷಿಕ ಸರಿಸುಮಾರು ಮೂರು ಮಿಲಿಯನ್ ನಿಯಮಿತ ವೇತನ ಉದ್ಯೋಗಗಳು ಸೃಷ್ಟಿಯಾಗಿವೆ. 2017 ಮತ್ತು 2019 ರ ನಡುವೆ ಇದು ಐದು ಮಿಲಿಯನ್‌ಗೆ ಏರಿದೆ. 2019 ರಿಂದ ಇದು ಕೊರೋನ ಮತ್ತು ಆರ್ಥಿಕ ಕುಸಿತದ ಕಾರಣಗಳಿಂದ ಕಡಿಮೆಯಾಗಿದೆ.

ವರದಿಯನ್ನು ಇಲ್ಲಿ ಓದಿ: ‘State of Working India 2023 — Social Identities and Labour Market Outcomes’

ಅತ್ತೆ – ಸೊಸೆಯರ ಸಂಬಂಧ!

ಮನೆಯಲ್ಲಿ ಅತ್ತೆಯಂದಿರ ಉದ್ಯೋಗ ಗ್ರಾಮೀಣ ಹಾಗೂ ನಗರ ಪ್ರದೇಶದ ಸೊಸೆಯಂದಿರು ಕೆಲಸ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ನಿರ್ಧಿರಿಸುವ ವಿಚಾರ ಈ ವರದಿಯ ಗಮನಾರ್ಹ ಸಂಗತಿ. ನಿರುದ್ಯೋಗಿ ಅತ್ತೆಯೊಂದಿಗೆ ವಾಸಿಸುವ ಭಾರತದ ವಿವಾಹಿತ ಮಹಿಳೆಯರು ಉದ್ಯೋಗ ಮಾಡುವುದು 20%-30% ಕಡಿಮೆ.

ಅಕಸ್ಮಾತ್‌, ಪ್ರತ್ಯೇಕವಾಗಿ ವಾಸಿಸುವ ಸೊಸೆಯಂದಿರಿಗೆ ಹೋಲಿಸಿದರೆ ಉದ್ಯೋಗವಿರುವ ಅತ್ತೆಯಂದಿರೊಂದಿಗೆ ವಾಸಿಸುವ 50% (ಗ್ರಾಮೀಣ) ಮತ್ತು  70% (ನಗರ) ಹೆಚ್ಚು  ಸೊಸೆಯಂದಿರುವ ಉದ್ಯೋಗಿಗಳಾಗಿದ್ದಾರೆ.

ಕ್ಯಾಸ್ಟ್‌ ಮ್ಯಾಟರ್ಸ್!

ಜನರಲ್‌ ಕೆಟಗರಿಯ ಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿ/ಪಂಗಡಗಳ ಕಾರ್ಮಿಕರಿಗೆ Intergenerational  Mobility ತುಂಬಾ ಕಷ್ಟವಾಗಿ ಪರಿಣಮಿಸಿದೆ.

2018 ರಲ್ಲಿ ಸಾಂದರ್ಭಿಕ ವೇತನ ಪಡೆಯುವ  75.6% SC/ST ಪುರುಷ ಉದ್ಯೋಗಿಗಳ ಗಂಡು ಮಕ್ಕಳೂ ತಂದೆಯಂತೆ ವೇತನ ಪಡೆಯುವ ಕೆಲಸವನ್ನೇ ಮಾಡುತ್ತಿದ್ದಾರೆ.  2004 ರಲ್ಲಿ ಇದು 86.5% ಇತ್ತು. ಈ ಇಳಿಕೆ  ಸಾಂದರ್ಭಿಕ ವೇತನ ಪಡೆಯುವ SC/ST ಕಾರ್ಮಿಕರ ಗಂಡು ಮಕ್ಕಳು ಬೇರೆ ಉದ್ಯೋಗಗಳನ್ನು, ಅದರಲ್ಲೂ  ಅನೌಪಚಾರಿಕ ನಿಯಮಿತ ವೇತನದ ಕೆಲಸ ಮಾಡಲು ಆರಂಭಿಸಿರುವುದನ್ನು. ಸಾಮಾನ್ಯ ವರ್ಗದ ಜಾತಿಯಲ್ಲಿ  2004ರಲ್ಲಿ ಇದ್ದ ಈ ಪ್ರಮಾಣ 83.2% ರಿಂದ 2018 ರಲ್ಲಿ 53.2% ಗೆ ಕುಸಿದಿದೆ.

ಎಂಬತ್ತರ ದಶಕದಲ್ಲಿ ಪರಿಶಿಷ್ಟ ಜಾತಿಯ ಕಾರ್ಮಿಕರು ತ್ಯಾಜ್ಯ ವಿಲೇವಾರಿಯ ಕೆಲಸದಲ್ಲಿ ಈಗಿಗಿಂತ ಐದು ಪಟ್ಟು ಹೆಚ್ಚು ಮತ್ತು ಚರ್ಮದ ಕೆಲಸದಲ್ಲಿ ನಾಲ್ಕು ಪಟ್ಟು ಹೆಚ್ಚಿದ್ದರು. ಆದರೆ ಈಗ ಇದು ಕಡಿಮೆಯಾಗಿರುವುದು ಈ ವರದಿಯಿಂದ ತಿಳಿದುಬರುತ್ತದೆ. ಆದರೆ, ಎಸ್‌ಸಿ/ಎಸ್‌ಟಿ ಮಹಿಳಾ ಕಾರ್ಮಿಕರು ಮೇಲ್ಜಾತಿಯ ಮಹಿಳೆಯರು ಸಂಬಳದ 54% ಮಾತ್ರ ಗಳಿಸುತ್ತಿದ್ದಾರೆ.

ಈ ವರದಿ ಬೆಳಕು ಚೆಲ್ಲುವ ಇನ್ನೊಂದು ಪ್ರಮುಖ ಅಂಶವೆಂದರೆ, ದಲಿತ ಸಮುದಾಯಗಳ ಉದ್ಯಮಿಗಳ ಪಾತಿನಿಧ್ಯತೆ. ಸಣ್ಣ ವ್ಯವಹಾರಗಳಲ್ಲೇ SC/ST ಉದ್ಯಮಿಗಳು ಬೇರೆಯವರಿಗೆ ಹೋಲಿಸಿದರೆ ತುಂಬಾ ಕಡಿಮೆ ಇದ್ದಾರೆ. 20ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ದಿಮೆಗಳಲ್ಲಿ ದಲಿತ ಉದ್ಯಮಿಗಳ ಪ್ರಾತಿನಿಧ್ಯತೆ ಕಡಿಮೆ ಇರುವುದು ಕಂಡುಬಂದಿದೆ, ಅಲ್ಲದೇ SC/S ಉದ್ಯೋಗಿಗಳನ್ನು ತಾತ್ಕಾಲಿಕ ಉದ್ಯೋಗಗಳಿಗೆ ನೇಮಿಸಲಾಗುತ್ತಿದೆ.

ಮುಸಲ್ಮಾನರೂ ನಿಯಮಿತವಾಗಿ ವೇತನ ಪಡೆಯುವ ಉದ್ಯೋಗಗಳಲ್ಲಿರುವುದು ತುಂಬಾ ಕಡಿಮೆ. ಕಳೆದ ನಾಲ್ಕು ದಶಕಗಳಿಂದ ಸ್ವಯಂ ಉದ್ಯೋಗ, ಇಲ್ಲವೇ ಸಾಂದರ್ಭಿಕ ವೇತನದ ಕೆಲಸಗಳನ್ನೇ ಹೆಚ್ಚು ನೆಚ್ಚಿಕೊಂಡಿರುವುದು ಕಂಡು ಬಂದಿದೆ.

ಒಂದು ಕಡೆಯಲ್ಲಿ ದೇಶದ ಯುವಜನತೆ ನಿರೂದ್ಯೋಗಿಗಳಾಗುತ್ತಿದ್ದಂತೆ, ಔದ್ಯೋಗಿಕ ವಲಯಗಳಲ್ಲಿ ಜಾತಿ, ಲಿಂಗ ಮತ್ತು ಧರ್ಮದ ಪ್ರಭಾವ ದಟ್ಟವಾಗಿ ಹರಡಿರುವ ಕರಾಳತೆಯನ್ನು ಈ ವರದಿ ಬಿಚ್ಚಿಟ್ಟಿದೆ.

ವರದಿಯನ್ನು ಇಲ್ಲಿ ಓದಿ: ‘State of Working India 2023 — Social Identities and Labour Market Outcomes’

ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ
ಕಳೆದ ಒಂದು ದಶಕದಿಂದಲೂ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಇದೀಗ ಮತ್ತೆ ಜೀವ ಬಂದಿದೆ. ಸಪ್ಟೆಂಬರ್‌ 18, 2023 ಮಂಗಳವಾರ, ಲೋಕಸಭೆಯಲ್ಲಿ 128ನೇ ತಿದ್ದುಪಡಿ ತಂದು ಸಂವಿಧಾನ ಮಸೂದೆ ಮಹಿಳಾ ಮೀಸಲಾತಿ ವಿಧೆಯಕ ಮಂಡನೆಯಾಗಿದೆ. ಈ ರೀತಿ ಮಹಿಳಾ ಮೀಸಲಾತಿ ಮಸೂದೆ ದೊಡ್ಡ ಸದ್ದು ಮಾಡುತ್ತಾ ಸಂಸತ್ತಿನಲ್ಲಿ ಮಂಡನೆಯಾಗುವುದು ಇದೇನೂ ಮೊದಲಲ್ಲ. ಈಗಲೂ ಎರಡೂ ಸದನಗಳಲ್ಲಿ ಒಪ್ಪಿಗೆಯಾಗಿ ರಾಷ್ಟ್ರಪತಿಯವರ ಅಂಕಿತ ಬಿದ್ದೇ ಬೀಳುತ್ತದೆ ಎಂದು ನಂಬಿ ಕೂರುವ ಸ್ಥಿತಿಯೂ ಇಲ್ಲ. ಆದರೆ ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಇರುವುದರಿಂದ ಮಸೂದೆ ಜಾರಿಯೇ ಆಯ್ತೇನೋ ಎನ್ನುವಂತ ಪ್ರಚಾರ ಮಾತ್ರ ಹೊರಗಡೆ ಜೋರಾಗಿದೆ.

ಮತ್ತೊಮ್ಮೆ ಮಸೂದೆಯನ್ನು ಮಂಡಿಸಿರುವುದಕ್ಕೆ ಇಡೀ ದೇಶದಲ್ಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ  ʼನಾರಿ ಶಕ್ತಿ ವಂದನ್ ಅಧಿನಿಯಮ’ ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಬಹುಮತವಿಲ್ಲದೆ ಆಂಗೀಕಾರವಾಗಲಿಲ್ಲ. ಈಗ ನನಗೆ ಈ ಮಸೂದೆ ಜಾರಿಗೆ ತರಲು ದೇವರು ಅವಕಾಶ ನೀಡಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಈ ನಡುವೆ, ಕಾಂಗ್ರೇಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳಾ ಮೀಸಲಾತಿ ಮಸೂದೆಯನ್ನು 2010 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿಯೇ ತರಲಾಗಿತ್ತು, ಇದರ ಕ್ರೆಡಿಟ್‌ ಕಾಂಗ್ರೇಸ್‌ಗೆ ಕೊಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 2010 ರಲ್ಲಿ ಯುಪಿಎ ಸರ್ಕಾರ ಮಂಡಿಸಿದ ಮಸೂದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ನೀಡಿತ್ತು. ಅದರಲ್ಲಿ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಮೀಸಲಿಡಲಾಗಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾದರೂ ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ. ಆಗ ಹಿಂದುಳಿದ ವರ್ಗಗಳ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಪಡಿಸಿದ್ದ ಕಾರಣ ಮಸೂದೆ ನೆನೆಗುದಿಗೆ ಬಿದ್ದಿತ್ತು.  ಈಗ ಮಂಡಿಸಿರುವ ಮಸೂದೆಯಲ್ಲೂ ಒಬಿಸಿ ಮಹಿಳೆಯರಿಗೆ ಒಳ ಮೀಸಲಾತಿ ಕಲ್ಪಿಸಲಾಗಿಲ್ಲ.

ವಿಡಿಯೋ: ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

ಈಗ ಮಂಡಿಸಲಾಗಿರುವ ಮಸೂದೆ ಅಂಗೀಕಾರಕೊಂಡು ಕಾಯ್ದೆಯಾದರೂ ಅದು ಸಧ್ಯದಲ್ಲೇನು ಜಾರಿಯಾಗುವುದಿಲ್ಲ. ಅದು ಜಾರಿಯಾಗುವುದು 2029ಕ್ಕೆ! ಯಾಕೇಂದರೆ, ಈ ಮೀಸಲಾತಿ 2026 ರಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ನಂತರವೇ ಜಾರಿಗೊಳಿಸುವ ಸಾಧ್ಯತೆಯಿದೆ. ಈ ಮಹಿಳಾ ಮೀಸಲಾತಿಯು ಲೋಕಸಭಾ  ಮತ್ತು ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗೆ ಅನ್ವಯಿಸುವುದಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ. ಈಗ ಮೋದಿ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ 2010ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಮಂಡಿಸಿದ್ದ ಮಸೂದೆಯ ತದ್ರೂಪವೇ ಆಗಿದೆ.

ಇದರಲ್ಲಿ ಸೇರಿರುವ ಎರಡು ಸಣ್ಣ ಹೊಸ ಅಂಶಗಳು ಏನೆಂದರೆ ಈ

• ಕಾಯ್ದೆ ಜಾರಿಯಾದ 15 ವರ್ಷಗಳವರೆಗೆ ಇರಲಿದ್ದು, ಆನಂತರವೂ  ಅವಧಿಯನ್ನು ವಿಸ್ತರಿಸಬಹುದು.

• ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮೀಸಲಾತಿಯನ್ನು ಒಳಗೊಂಡಿರುವ ಎರಡು ಆರ್ಟಿಕಲ್‌ಗಳಿಗೆ ತಿದ್ದುಪಡಿಯನ್ನು ಮೋದಿ ಸರ್ಕಾರದ ಮಸೂದೆಯಲ್ಲಿ ಕೈಬಿಡಲಾಗಿದೆ.

ದೇಶದಲ್ಲಿ ಇಂದು ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಶೇಕಡಾ 50ರ ವರೆಗೂ ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಆದರೆ ಪಾರ್ಲಿಮೆಂಟು ಮತ್ತು ವಿಧಾನಸಭೆ ವಿಧಾನ ಪರಿಷತ್ತುಗಳಿಗೂ 33% ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದ ಹೋರಾಟಕ್ಕೆ ಬರೋಬ್ಬರಿ ಮೂರು ದಶಕಗಳ ಇತಿಹಾಸವೇ ಇದೆ.

ಮಹಿಳಾ ಪ್ರಾತಿನಿಧ್ಯದ ಇತಿಹಾಸ:

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ 1970 ರ ದಶಕದವರೆಗೆ 5% ರಷ್ಟಿತ್ತು.  ಅದು ಎರಡಂಕಿಗೆ ಏರಿದ್ದೇ 2009 ರಲ್ಲಿ. ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಲೋಕಸಭೆಗಿಂತ ಕಡಿಮೆಯಾಗಿದೆ. 1951 ರಿಂದ ಇದು ಒಟ್ಟು ಸದಸ್ಯತ್ವದ 13% ನ್ನೂ ದಾಟಿಲ್ಲ. ಅಂದರೆ 545 ರಷ್ಟು ಸಂಸದ ಬಲ ಇರುವ ಲೋಕಸಭೆಯಲ್ಲಿ 50 ಜನ ಮಹಿಳೆಯರೂ ಇಲ್ಲ ಎಂದರೆ ಎಂತಹ ವಿಪರ್ಯಾಸ ನೋಡಿ.

ಇಡೀ ದೇಶದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಜಾರಿಗೊಳಿಸಿದ್ದು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ನಮಗೆ ಹೆಮ್ಮೆಯ ಸಂಗತಿ. 1983ರಲ್ಲಿ ಜನತಾದಳ ಸರ್ಕಾರ ರಾಜ್ಯದಲ್ಲಿ ಪಂಚಾಯ್ತಿಗಳಲ್ಲಿ 25% ಮೀಸಲಾತಿ ನೀಡುವ ಮೂಲಕ ಇತಿಹಾಸ ಬರೆದಿತ್ತು.

1988ರಲ್ಲಿ ರಚನೆಯಾದ ನ್ಯಾಶನಲ್‌ ವಿಶನ್‌ ಪ್ರೋಗ್ರಾಮ್‌ನಲ್ಲಿ ಪಂಚಾಯ್ತಿಯಿಂದ ಲೋಕಸಭೆಯ ವರೆಗೆ ಮೂರನೇ ಒಂದರಷ್ಟು ಮಹಿಳಾ ಮೀಸಲಾತಿ ನೀಡುವ ಕಾರ್ಯಕ್ರಮ ರೂಪಿಸಲಾಯಿತು. ಇದರಂತೆ ಮರು ವರ್ಷ ಅಂದರೆ, 1989ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಮೇ ತಿಂಗಳಿನಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಮಹಿಳಾ ಮೀಸಲಾತಿ ನೀಡುವ ಮೊದಲ ಪ್ರಯತ್ನ ನಡೆಸಿದರು. ಆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿಲ್ಲ. ಹೀಗಾಗಿ ರಾಜೀವ್‌ ಗಾಂಧಿಯವರ ಪ್ರಯತ್ನಕ್ಕೆ ಹಿನ್ನಡೆಯಾಯ್ತು.

ಮುಂದೆ 1992 ಮತ್ತು 1993ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚಾಯತ್‌ ರಾಜ್‌ಗೆ 72 ಮತ್ತು 73ನೇ ತಿದ್ದುಪಡಿ ತಂದಿತು. ದೇಶದಾದ್ಯಂತ ಕರ್ನಾಟಕ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಆರಂಭವಾಗುವ ಜೊತೆಯಲ್ಲಿ ಮಹಿಳಾ ಮೀಸಲಾತಿಯೂ ಜಾರಿಗೊಂಡಿತು.  ಇಂದು ಎಲ್ಲಾ ಮೂರು ಹಂತದ ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮತ್ತು ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಅಂದರೆ (33%) ಸ್ಥಾನಗಳನ್ನು ಮೀಸಲಿಡಲಾಗಿದೆ. ಮಸೂದೆಗಳು ಉಭಯ ಸದನಗಳಿಂದ ಅಂಗೀಕಾರವಾಯಿತು. ಆದರೆ ಸಮಾಜದಲ್ಲಿ ಅರ್ಧದಷ್ಟು ಮಹಿಳೆಯರು ಇರುವುದರಿಂದ ಅಷ್ಟೇ ಪ್ರಮಾಣದ ಮೀಸಲಾತಿ ಇರಬೇಕು ಎಂದು ಪ್ರತಿಪಾದಿಸಿದ ಹಲವು ರಾಜ್ಯಗಳಲ್ಲಿ ಇಂದು ಶೇಕಡಾ 50 ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಇದರಲ್ಲಿ ಕರ್ನಾಟಕವೇ ಮುಂದು. ಹೀಗೆ 1988-89 ರಿಂದ 1992-93 ರ ನಡುವೆ ಆದಂತಹ ಒಂದೇ ಒಂದು ಸಂವಿಧಾನ ತಿದ್ದುಪಡಿಯ ಫಲವಾಗಿ ಈಗ ದೇಶಾದ್ಯಂತ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಸುಮಾರು 15 ಲಕ್ಷ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ.

ಆದರೆ, ಈ ಸನ್ನಿವೇಶ ವಿಧಾನ ಸಭೆ ಲೋಕಗಭೆಗಳಲ್ಲೂ ಆಗಬೇಕೆಂಬ ಪ್ರಯತ್ನವೂ ನಿರಂತರವಾಗಿದೆ.

ಸೆಪ್ಟೆಂಬರ್ 12, 1996 ರಂದು, ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದ ಸಂಯುಕ್ತ ರಂಗ ಸರ್ಕಾರವು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ ಲೋಕಸಭೆಯಲ್ಲಿ 81 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಆದರೆ ಲೋಕಸಭೆಯಲ್ಲಿ ಅನುಮೋದನೆ ಸಿಗಲಿಲ್ಲ. ನಂತರ ಇದನ್ನು  ಕಮ್ಯುನಿಷ್ಟ್‌ ನಾಯಕಿ ಗೀತಾ ಮುಖರ್ಜಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ನೀಡಲಾಯಿತು.  ಡಿಸೆಂಬರ್ 1996 ರಂದು ಈ ಸಮಿತಿ ತನ್ನ ವರದಿಯನ್ನು ಮಂಡಿಸಿದರೂ, ಲೋಕಸಭೆಯಲ್ಲಿ ಮಸೂದೆಯು ಬಿದ್ದುಹೋಯಿತು.

ವಿಡಿಯೋ ನೋಡಿ: ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!

ಎರಡು ವರ್ಷಗಳ ನಂತರ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ NDA ಸರ್ಕಾರವು 1998 ರಲ್ಲಿ 12 ನೇ ಲೋಕಸಭೆಯಲ್ಲಿ WRB ಮಸೂದೆಯನ್ನು ಮಂಡಿಸಿತು. ಆದರೆ ಆಗಲೂ ವಿಫಲವಾಯಿತು. ವಾಜಪೇಯಿ ಸರ್ಕಾರ 1999, 2002 ಮತ್ತು 2003 ರಲ್ಲಿ ಮತ್ತೆ ಮಂಡಿಸಿದರೂ ಯಶಸ್ವಿಯಾಗಲಿಲ್ಲ.

1996 ರ ಮಹಿಳಾ ಮೀಸಲಾತಿ ಮಸೂದೆ ವರದಿ OBC ಮಹಿಳೆಯರಿಗೆ ಒಳಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡುತ್ತದೆ. ಅಲ್ಲದೇ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೂ ಮೀಸಲಾತಿಯನ್ನು ವಿಸ್ತರಿಸುವಂತೆ ಹೇಳುತ್ತದೆ. ಆದರೆ ಎರಡೂ ಶಿಫಾರಸುಗಳನ್ನು 2008ರ  ಮಸೂದೆಯಲ್ಲಿ ಅಳವಡಿಸಿರಲಿಲ್ಲ. ಹೀಗಾಗಿ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಬಹುಜನ ಸಮಾಜ ಪಕ್ಷಗಳು ಈ ಮಸೂದೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದವು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ರ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತೆ ಚರ್ಚೆಗೆ ಬಂತು. 2004 ರಲ್ಲಿ ಸರ್ಕಾರ ಅದನ್ನು ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (Common Minimum Programme)   ಸೇರಿಸಿತು. ಅದನ್ನು 108ನೇ ಸಾಂವಿಧಾನಿಕ ತಿದ್ದುಪಡಿಯನ್ನು ತಂದು 6 ಮೇ 2008 ರಂದು ಮಂಡಿಸಲಾಯಿತು. 1996 ರ ಗೀತಾ ಮುಖರ್ಜಿ ಸಮಿತಿಯು ಮಾಡಿದ ಏಳು ಶಿಫಾರಸುಗಳಲ್ಲಿ ಐದನ್ನು ಈ ಮಸೂದೆಯಲ್ಲಿ ಸೇರಿಸಲಾಯಿತು. ಮಸೂದೆಯನ್ನು ಮೇ 9, 2008 ರಂದು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. ಸ್ಥಾಯಿ ಸಮಿತಿ ಡಿಸೆಂಬರ್ 17, 2009 ರಂದು ತನ್ನ ವರದಿಯನ್ನು ಮಂಡಿಸಿತು. ಇದು ಫೆಬ್ರವರಿ 2010 ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಯನ್ನೂ ಪಡೆಯಿತು. ಅಂತಿಮವಾಗಿ ಮಸೂದೆ ರಾಜ್ಯಸಭೆಯಲ್ಲಿ ಮಾರ್ಚ್ 8ರ ಮಹಿಳಾ ದಿನದಂದು ಮಂಡನೆಗೊಂಡು, ಮಾರ್ಚ್‌ 9, 2010 ರಂದು 186 ಮತಗಳೊಂದಿಗೆ ಸರ್ವಾನುಮತದಿಂದ ಅಂಗೀಕಾರವಾಯಿತು. ಇದು ದೇಶದ ಮಹಿಳಾ ಮೀಸಲಾತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಎಂದರೂ ತಪ್ಪಿಲ್ಲ.

ಆದರೂ ಈ ಮಸೂದೆ ಲೋಕಸಭೆಯಲ್ಲಿ ಮಾತ್ರ ಅಂಗೀಕಾರವಾಗಲೇ ಇಲ್ಲ, 2014 ರಲ್ಲಿ ಲೋಕಸಭೆಯ ವಿಸರ್ಜನೆಯೊಂದಿಗೆ ಬಿಲ್ ಲ್ಯಾಪ್ಸ್ ಆಯಿತು. ರಾಜ್ಯಸಭೆಯಲ್ಲಿ ಮಂಡಿಸಿದ/ಅನುಮೋದಿತವಾದ ಮಸೂದೆಗಳು ಅನೂರ್ಜಿತಗೊಳ್ಳುವುದಿಲ್ಲ, ಆದ್ದರಿಂದ ಮಹಿಳಾ ಮೀಸಲಾತಿ ಮಸೂದೆಯು ಇನ್ನೂ ಹೆಚ್ಚು ಸಕ್ರಿಯವಾಗಿದೆ.

2019 ರ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹಿಂದಿಗಿಂತ ಹೆಚ್ಚಿದ್ದರೂ, ಅವರ ಪ್ರಮಾಣವು ಒಟ್ಟು ಸದಸ್ಯತ್ವದ ಶೇಕಡಾ 15 ರಷ್ಟು ಮಾತ್ರ ಇದೆ. 2014ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಶೇಕಡಾ 12.7 ರಷ್ಟಿತ್ತು.

ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ:

ಕೃಪೆ: ಭಾರತೀಯ ಚುನಾವಣಾ ಆಯೋಗ

ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ

ಕೃಪೆ: ಭಾರತೀಯ ಚುನಾವಣಾ ಆಯೋಗ

ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ (1957-2019)

ಕೃಪೆ:  Statista

ಭೌಗೋಳಿಕತೆಯ ಆಧಾರದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ:

ಕೃಪೆ:  IPU Parline: Global Data on National Parliament (as of May 2022)

ಇದೀಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದು 5 ವರ್ಷಗಳ ಅವಧಿಯಲ್ಲಿ ಈ ಕುರಿತು ಚಕಾರವೆತ್ತಲಿಲ್ಲ, ಮತ್ತೆ 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ಕಾಲವೂ ಈ ಬಗ್ಗೆ ಉಸಿರೇ ಬಿಡಲಿಲ್ಲ. ಇದೀಗ ಇನ್ನೇನು ಚುನಾವಣೆ ಬಂತೆನ್ನುವ ಸಮಯದಲ್ಲಿ ಭಾರೀ ಪ್ರಚಾರದೊಂದಿಗೆ ಮಹಿಳಾ ಮಸೂದೆ ಮಂಡಿಸಲಾಗಿದೆ.

2019ರಲ್ಲಿ ಮೋದಿ ಸರ್ಕಾರ ಮೇಲ್ಜಾತಿಗಳಿಗೆ ಸಂವಿಧಾನಬಾಹಿರವಾಗಿ 10% ಮೀಸಲಾತಿ ನೀಡುವ ಮಸೂದೆ ಮಂಡಿಸಿ ಮೂರೇ ದಿನದಲ್ಲಿ ರಾಷ್ಟ್ಟಪತಿ ಸಹಿಯೂ ಬಿದ್ದು ಕಾಯ್ದೆಯಾಗಿ ಜಾರಿಯೂ ಅಗಿಬಿಟ್ಟಿತು. ಆಗಲೂ ಮಹಿಳಾ ಮೀಸಲಾತಿಯನ್ನು ಮಾತ್ರ ಕಡೆಗಣಿಸಲಾಗಿತ್ತು.

ಕನಿಷ್ಟ ಈಗಲಾದರೂ ಚುನಾವಣಾ ದೃಷ್ಟಿಯಿಂದಲಾದರೂ ಮತ್ತೆ ಇದು ಮುನ್ನೆಲೆಗೆ ಬಂದಿದೆ. ಆದರೆ ಇದರಲ್ಲಿ ಒಬಿಸಿ ಒಳಮೀಸಲಾತಿ ಇಲ್ಲದಿರುವುದು ಮತ್ತು ಇದು ಜಾರಿಯಾಗುವುದೇ 2029ಕ್ಕೆ ಎಂಬುದು ಸಮಸ್ಯಾತ್ಮಕವಾಗಿದೆ.

ಒಳಮೀಸಲಾತಿಯೊಂದಿಗೆ, ತಕ್ಷಣದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.

ಲೇಖನ: ಚರಣ್‌ ಐವರ್ನಾಡು, ಬೆಂಗಳೂರು

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ,‌ ದಲಿತ, ಮಹಿಳೆಯರ ಅವಗಣನೆ
ಮಹೇಶ್‌ ಜೋಶಿಯವರು ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ ಎಂಬುದು ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದ ವಿವಾದದ ಹಿನ್ನೆಲೆಯಲ್ಲಿ, ಸಮಾಜ ಮತ್ತು ಸಂಸ್ಕೃತಿ ಚಿಂತಕರಾಗಿರುವ ಡಾ.ಕೆ.ಷರೀಫಾ ಅವರ ಆಶಯ.

ಹಾವೇರಿಯಲ್ಲಿ ದಿನಾಂಕ 6-1-202೩ ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರು, ಮತ್ತು ಮುಸಲ್ಮಾನ  ಸಾಹಿತಿಗಳನ್ನು ಒಳಗೊಂಡಿಲ್ಲವೆಂದು ಅದರಲ್ಲೂ ಮಹಿಳೆಯರ ಅವಗಣನೆ ಕುರಿತು ವಿವಾದ ಸೃಷ್ಟಿಯಾಗಿದೆ. ಹಿಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಆಗ ಪರಿಷತ್ತಿನ ಅಧ್ಯಕ್ಷರಾದ ಹಂಪ ನಾಗರಾಜಯ್ಯನವರಿಗೆ ಚೆನ್ನಣ್ಣ ವಾಲೀಕಾರ ಮತ್ತು ಜಂಬಣ್ಣ ಅಮರಚಿಂತ ಅವರು ಹೋಗಿ ಸಮ್ಮೇಳನದಲ್ಲಿ ದಲಿತ ಗೋಷ್ಟಿಯೊಂದನ್ನು ಇಡಲು ಹೇಳಿದಾಗ ಹಂಪನಾರವರು “ಕನ್ನಡ ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಎಂದೇನೂ ಇಲ್ಲ” ಎಂದು ಹೇಳಿದಾಗ ಅದನ್ನು ವಿರೋಧಿಸಿದ ಸಾಹಿತಿಗಳು ಅಂದಿನ ಪರಿಷತ್ತಿಗೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟಿದ್ದು ಈಗ ಇತಿಹಾಸ.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆಯೇ ಹೊರತು ಅದು ಮನುವಾದಿಗಳ ಕೇಂದ್ರವಲ್ಲ. 1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ನೂರಾ ಏಳು ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷೆಯಾಗದಿರುವ ಕೆಟ್ಟ ದುರಿತ ಕಾಲದಲ್ಲಿ ನಾವು ಪರಿಷತ್ತಿನ ಸಮ್ಮೆಳನಗಳಲ್ಲಿ ಸಾಮಾಜಿಕ ನ್ಯಾಯವನ್ನು ಬಯಸುತ್ತಿದ್ದೇವೆ. ಮಹಿಳೆಯರ ಅವಗಣನೆಯನ್ನು ಪ್ರಶ್ನಿಸುತ್ತಿದ್ದೇವೆ. ಪರಿಷತ್ತಿನ ಅಧ್ಯಕ್ಷರು, ಕೋಮುವಾದಿ ಪಕ್ಷದ ಶಾಸಕರು ಸಂಸದರ ಮೂಲಕವೇ ಆರಿಸಿ ಬಂದಾಗ ಅವರಿಗೆ ವಿಧೇಯರಾಗಿರುತ್ತಾರೆ. ಆದರೆ ಪರಿಷತ್ತು ನಡೆಯುತ್ತಿರುವುದು ಸರ್ಕಾರದ ಅನುದಾನದಿಂದ ಮತ್ತು ಸರ್ಕಾರವು ನೀಡುತ್ತಿರುವ ಹಣ ಜನಸಾಮಾನ್ಯರದು.  ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ. ಆದರೆ, ಅವರು ಜನತೆಯ ಅಭಿಪ್ರಾಯವನ್ನು ಗೌರವಿಸಬೇಕಾಗುತ್ತದೆ. ಆಗ ಸಹಜವಾಗಿಯೇ ಅಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಬರುತ್ತದೆ. ನಾಡಿನ ಬಹುಸಂಸ್ಕೃತಿಗೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನಾಗರೀಕರ ಜವಾಬ್ದಾರಿಯಾಗಿದೆ.

ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಗಳಿಗೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ ನಂಟು ತುಂಬಾ ಪ್ರಾಚೀನವಾದುದು. ಬದುಕು ಚಲನಶೀಲವಾಗಿರುವಂತೆ ಸಾಹಿತ್ಯವೂ ಚಲನಶೀಲವಾಗಿದೆ. ಕನ್ನಡ ಸಾಹಿತ್ಯಕ್ಕೆ ಇರುವ ದೀರ್ಘ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದಾಗ ಅಲ್ಲಿ ಆರಂಭದ ಕನ್ನಡ ಸಾಹಿತ್ಯದ ಘಟ್ಟಗಳಲ್ಲಿ ಮುಸ್ಲಿಂ ಮಹಿಳಾ ಸಂವೇದನೆಗಳನ್ನು ಕಾಣಲು ಸಾಧ್ಯವಾಗುವುದಿಲ್ಲ.

14ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಮುಸ್ಲಿಂ ದೊರೆಗಳು, ರಾಣಿಯರು ರಾಜ್ಯಭಾರ ಮಾಡಿದ ಚರಿತ್ರೆಯನ್ನು ನಾವು ಕಾಣಬಹುದಾಗಿದೆ. ಅಲ್ಲಿ ಕನ್ನಡದ ಮುಸ್ಲಿಂ ಸಾಹಿತಿಗಳು ಸಿಗುವುದಿಲ್ಲ. ಅದಕ್ಕೆ ಅದರದೇ ಆದ ಐತಿಹಾಸಿಕ ಕಾರಣಗಳಿವೆ. ಒಬ್ಬ ಲೇಖಕ ತಾನು ಬಯಸಿದರೂ ಬಯಸದೇ ಇದ್ದರೂ ಸಹ ಯಾವುದಾದರೂ ಒಂದು ಧರ್ಮದಲ್ಲಿ ಹುಟ್ಟುವುದು ಅನಿವಾರ್ಯವಾಗಿದೆ. ಆದರೆ ಅವರು ಆ ಧರ್ಮದ ಚೌಕಟ್ಟುಗಳನ್ನು ಮೀರುವ ಕ್ರಿಯೆಯಿಂದ ಸಾರ್ವಜನಿಕ, ಮತ್ತು ಸಾರ್ವತ್ರಿಕ ವ್ಯಕ್ತಿಗಳಾಗುತ್ತಾರೆ.

ಇಪ್ಪತ್ತನೆಯ ಶತಮಾನದಲ್ಲಿ  ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯ  ಘಟ್ಟಗಳು ಮತ್ತು ಚಳುವಳಿಗಳು ನಡೆದವು. ಆದರೆ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಸಂವೇದನೆಗಳು ದಾಖಲಾಗಲು ಆರಂಭಿಸಿದ್ದು ದಲಿತ ಬಂಡಾಯದ ಕಾಲದಲ್ಲಿ ಎಂದು ಹೇಳಬಹುದು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಮುಸ್ಲಿಂ ಲೇಖಕರು ಕನ್ನಡದಲ್ಲಿ ಕಥೆ, ಕವನ, ಕಾದಂಬರಿ, ಲೇಖನ, ನಾಟಕ, ವಿಮರ್ಶೆ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸುತ್ತ ಕನ್ನಡ ಸಾಹಿತ್ಯ ಲೋಕವನ್ನು ಮುಸ್ಲಿಂ ಸಂವೇದನೆಗಳ ತೊರೆಯನ್ನು ಹರಿಸುತ್ತ ಶ್ರೀಮಂತಗೊಳಿಸಿದ್ದಾರೆ.

ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂಕಟಗಳನ್ನು, ದಲಿತ ಬಂಡಾಯ ಸಂದರ್ಭದಲ್ಲಿ ಬಂದ ಈ ಸಮುದಾಯದ ಸಾಹಿತಿಗಳು ಈ ಧರ್ಮದೊಳಗಿನ ಕುಟುಂಬ, ಲಿಂಗತಾರತಮ್ಯ, ಬಹುಪತ್ನಿತ್ವ, ತಲ್ಲಾಕ್, ಇದ್ದತ್, ಖುಲಾಹ್, ಕೋಮುವಾದ, ಮೂಲಭೂತವಾದ, ಮತಾಂತರ, ಮೆಹರ್, ವಸ್ತ್ರಸಂಹಿತೆ, ವರ್ಗನೆಲೆ, ಪುರುಷಾಧಿಪತ್ಯ, ಅವಳ ಚಲನವಲನದ ಮೇಲೆ ನಿಯಂತ್ರಣ, ಹೀಗೆ ಹಲವಾರು ವಿಷಯಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆದಾಗ್ಯೂ ಅವರ ಅನುಭವಕ್ಕೆ ದಕ್ಕಿದ ಸೀಮಿತ ವಿಷಯಗಳು ಮಾತ್ರ ಸಾಹಿತ್ಯದಲ್ಲಿ ದಾಖಲಾಗಿವೆ. ಒಂದು ಜನಸಮುದಾಯದ ಹೋರಾಟಗಳು ಲೇಖನಿಗಿಂತ ಹರಿತವಾದವುಗಳು. ಬರಹವು ಇಂತಹ ಚಳುವಳಿ ಹೋರಾಟಗಳ ಮೂಲಕವೇ ಯಾವುದೇ ಧರ್ಮದಡಿಯ ಅಧರ್ಮವನ್ನು ಪ್ರಶ್ನಿಸುವ ಕಸುವು ಪಡೆಯುತ್ತದೆ. ಈ ಲೇಖಕರು ಧರ್ಮದ ಒಳಗಿನ ಮತ್ತು ಹೊರಗಿನ ವಿರೋಧಿ ಶಕ್ತಿಗಳನ್ನು ತೆರೆದು ತೋರಿದರು. ಈ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆಗಿನ ಕಾಲದಲ್ಲಿ ದಲಿತ ಚಳುವಳಿಯಿಂದ ಬಂದ ಲೇಖಕರು ಪುರೋಹಿತಶಾಹಿಯನ್ನು ವಿರೋಧಿಸಿ ಬರೆದಂತೆ ಮುಸ್ಲಿಂ ಸಮುದಾಯದ ಸಾಹಿತಿಗಳು ತಮ್ಮ ಧರ್ಮದ ಒಳಗಿನ ಶತ್ರು ಮತ್ತು ಹೊರಗಿನ ಶತ್ರುಗಳನ್ನು ಏಕಕಾಲಕ್ಕೆ ಗುರುತಿಸಿದರು. ಮೂಲಭೂತವಾದವನ್ನು ಪ್ರಶ್ನಿಸುತ್ತಲೇ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಮುಖಾಮುಖಿ ಮಾಡಿದರು. ಬೊಳುವಾರು ಮಹಮ್ಮದ್ ಕುಂಞಯವರು “ಇಡೀ ಜಗತ್ತಿನಲ್ಲಿ ಮುಸ್ಲಿಂ ಗೆಳತಿಯರು ಒಟ್ಟಾರೆ ಕಾಲದ ಅಗತ್ಯಕ್ಕೆ ಸ್ಪಂದಿಸಲಾರದಂತಹ ಸಂಕ್ರಮಣ ಕಾಲ ಒದಗಿ ಬಂದಿದೆ. ಇಂಡಿಯಾದ ಅಲ್ಪಸಂಖ್ಯಾತರ ಬರವಣಿಗೆಗೆ ವಿಶಿಷ್ಟ  ಆರ್ಥವಿದೆ” ಎನ್ನುತ್ತಾರೆ. ಅದಷ್ಟೇ ಅಲ್ಲದೇ ಮುಂದುವರಿಯುತ್ತಾ “ದಲಿತ ಪ್ರಜ್ಞಾವಂತನೊಬ್ಬ ತನ್ನ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ತನ್ನ ಕೋಮಿನ ಮೇಲುವರ್ಗದವನನ್ನಷ್ಟೇ ವಿರೋಧಿಸಿದರೆ ಸಾಕಾಗುತ್ತದೆ. ಆದರೆ ಮುಸ್ಲಿಂ ಪ್ರಜ್ಞಾವಂತನೊಬ್ಬ ತನ್ನ ಕೋಮಿನ ಮೇಲುವರ್ಗದ ವಿರುದ್ಧ ಧ್ವನಿಯೆತ್ತುವುದರ ಜತೆಯಲ್ಲೇ ಮುಸ್ಲಿಂ ವಿರೋಧಿ ಧೋರಣೆಗಳನ್ನು ತಳೆಯುವ ಮುಸ್ಲಿಮೇತರ ಕೋಮುಶಕ್ತಿಯನ್ನೂ ಸಹ ವಿರೋಧಿಸ ಬೇಕಾಗುತ್ತದೆ” ಎನ್ನುತ್ತಾರೆ.

ಮುಸ್ಲಿಂ ಸಮುದಾಯ ಕನ್ನಡದಲ್ಲಿ ಬರೆಯಲು ಆರಂಭಿಸಿದ ಕಾಲವೆಂದರೆ ಅದು ಶಿಶುನಾಳ ಷರೀಫರಿಂದಲೇ ಆರಂಭವಾಗುತ್ತದೆ.  ಆನಂತರದಲ್ಲಿ ಈ ಸಮುದಾಯದಿಂದ ಬಂದ ಮೊದಲ ತಲೆಮಾರಿನ ಬರಹಗಾರರಾದ ಎಸ್.ಕೆ.ಕರಿಂಖಾನ್, ಎಂ.ಜೀವನ, ಎಂ.ಅಕಬರಲಿ, ಬಿ.ಎ.ಸನದಿ, ಅಬ್ದುಲ್ ಮಜೀದ್‍ಖಾನ್, ಎಂ.ದಸ್ತಗೀರ್, ಕೆ.ಎಸ್.ನಿಸಾರ್ ಅಹಮದ್ ಮೊದಲಾದ ಸಾಹಿತಿಗಳು ಬಂದರು. ಎರಡನೇ ತಲೆಮಾರಿನ ಲೇಖಕರಾದ ಫಕೀರ್ ಮಹಮದ್ ಕಟ್ಪಾಡಿ, ಬೊಳುವಾರು ಮಹಮದ್ ಕುಂಙ್ಞ , ಸಾರಾ ಅಬೂಬಕರ್‌, ಮುಮ್ತಾಜ್ ಬೇಗಂ (ಮುಲ್ಕಿ) ಕೆ.ಷರೀಫಾ, ಅಬ್ದುಲ್ ರಶೀದ್,  ರಂಜಾನ್ ದರ್ಗಾ, ರಹಮತ್ ತರೀಕೆರೆ, ಅಬ್ಬಾಸ್ ಮೇಲಿನಮನಿ, ಡಿ.ಬಿ.ರಜಿಯಾ, ಪೀರಬಾಷಾ, ಬಾನು ಮುಷ್ತಾಕ್, ನಜೀರ್ ಚಂದಾವರ, ಸಬೀಹಾ, ಹಸನ್ ನಯಿಂ ಸುರಕೋಡ, ಎನ್.ಎಮ್. ಇಸ್ಮಾಯಿಲ್, ಎಲ್. ಕೆ.ಅತೀಕ್‌, ಮುಜಫರ್ ಅಸ್ಸಾದಿ, ಅದಿಬ್ ಅಖ್ತರ್, ದಸ್ತಗೀರಸಾಬ ದಿನ್ನಿ, (ಕೊಪ್ಪಳದ) ಮುಮ್ತಾಜ ಬೇಗಂ, ರಜಿಯಾ ಬಳಬಟ್ಟಿ, ಎಂ.ಷಹನಾಜ್ ಮುಂತಾದ ಮುಸ್ಲಿಂ ಸಮಾಜದ ಲೇಖಕರು ಮುನ್ನೆಲೆಗೆ ಬಂದರು.

ಶತಶತಮಾನಗಳಿಂದ ಮೌನವಾಗಿದ್ದ ಈ ಜನಾಂಗದ ಮಹಿಳಾ ಸಾಂಸ್ಕೃತಿಕ ಜಗತ್ತು ಅನಾವರಣಗೊಂಡು ದಾಖಲಿಸಿಕೊಂಡು, ಜನಮನ್ನಣೆ ಪಡೆಯಿತು. ಕನ್ನಡದಲ್ಲಿ ರಚಿತವಾದ ಮೊದಲ ಮಹಿಳಾ ಕಾದಂಬರಿ, 1908 ರಲ್ಲಿ ಶಾಂತಾಬಾಯಿ ನೀಲಗಾರರವರು ಬರೆದ “ಸದ್ಗುಣಿ ಕೃಷ್ಣಾಬಾಯಿ” ಪ್ರಕಟವಾಯಿತು. ಆದರೆ ಸಾರಾ ಅಬೂಬಕರವರು ಬರೆದ “ಚಂದ್ರಗಿರಿಯ ತೀರದಲ್ಲಿ” 1984ರಲ್ಲಿ ಪ್ರಕಟವಾಯಿತು. ಹಿಂದೂ ಮಹಿಳೆಯೊಬ್ಬಳು ಕನ್ನಡದಲ್ಲಿ ಕಾದಂಬರಿ ರಚಿಸಿದ 75 ವರ್ಷಗಳ ಬಳಿಕ ಒಬ್ಬ ಮುಸ್ಲಿಂ ಮಹಿಳೆ ಕನ್ನಡದಲ್ಲಿ ಮೊದಲ ಕಾದಂಬರಿಯೊಂದು ಬರೆಯುತ್ತಾಳೆಂದರೆ ಅದಕ್ಕೆ ಅದರದೇ ಆದ ಸಾಂಸ್ಕೃತಿಕ  ಚಾರಿತ್ರಿಕ, ಮತ್ತು ರಾಜಕೀಯ ಕಾರಣಗಳಿರುತ್ತವೆ. ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂವೇದನೆಯ ಮೊದಲ ಕಾದಂಬರಿ ಸಾರಾ ಅಬೂಬಕ್ಕರ್‌ ರವರದು 1984ರಲ್ಲಿ ಪ್ರಕಟವಾದರೆ, ಕನ್ನಡದ ಮೊದಲ ಮುಸ್ಲಿಂ ಕಥೆಗಾರ್ತಿ ಮುಮ್ತಾಜ ಬೇಗಂ ರವರ ಮೊದಲ ಕಥಾ ಸಂಕಲನ ‘ಅವ್ಯಕ್ತ’ 1985ರಲ್ಲಿ ಪ್ರಕಟವಾಯಿತು. 1975ರಿಂದಲೂ ಕವಿತೆಗಳನ್ನು ಬರೆಯುತ್ತಿರುವ ಡಾ.ಕೆ.ಷರೀಫಾರವರು ಮುಸ್ಲಿಂ ಸಮಾಜದಿಂದ ಬಂದ ಕನ್ನಡದ ಮೊದಲ ಕವಯಿತ್ರಿಯಾದರು.ಮುಂದೆ ಹಲವಾರು ಬರಹಗಾರ್ತಿಯರು ಈ ಸಮುದಾಯದಿಂದ ಬಂದರು

ಮುಂದೆ ಶಾಬಾನುವಿನ ಜೀವನಾಂಶದ ತಲ್ಲಾಕಿನ ವಿಷಯ ಬಂದಾಗ ಮುಸ್ಲಿಂ ಮೂಲಭೂತವಾದಿಗಳು “ಇದು ನಮ್ಮ ಸಮಾಜದ ಆಂತರಿಕ ವಿಷಯ”ವೆಂದು ಇತರರ ಪ್ರವೇಶವನ್ನು ನಿರಾಕರಿಸಿದವು. ಅಕ್ರಮಣಕಾರಿ “ದೇಶಭಕ್ತಿ” ಸಾಬೀತುಪಡಿಸುವಂತಹ ಮಾದರಿಗಳು ನಂತರದ ಕಾಲಘಟ್ಟದಲ್ಲಿ ಸೃಷ್ಟಿಯಾದವು. ಅನಂತರದಲ್ಲಿ ಭಾರತೀಯ ಮುಸ್ಲಿಮರಲ್ಲಿ ಅಭದ್ರತೆ, ಅನಾಥಪ್ರಜ್ಞೆ ಕಾಡತೊಡಗಿದವು. ಅಲ್ಲದೇ ಹಿಂದೂ ಮುಸ್ಲಿಂ ಎರಡೂ ಧರ್ಮದ ಮಹಿಳೆಯರ ಮೇಲೆ ಧರ್ಮಾಚರಣೆಯ ಒತ್ತಡಗಳೂ ಹೆಚ್ಚಾದವು. ರೂಪ್ ಕನ್ವರಳ ಸತಿಯಾದುದು, ಬಾಬ್ರಿ ಮಸೀದಿ ಧ್ವಂಸವಾದುದು ಇಡೀ ಜನಶಕ್ತಿಯನ್ನು ಕೋಮುವಾದಿಗಳನ್ನಾಗಿಸಿತು. ಆಗಲೇ ಸಾಹಿತ್ಯ ಚಳುವಳಿಗಳು ಮತ್ತು ಸಾಂಸ್ಕೃತಿಕ ಚಳುವಳಿಗಳಿಗೆ ಹಿನ್ನಡೆಯಾಯಿತು. ಯಾವ ಧರ್ಮದ ಕೋಮುವಾದವೇ ಇರಲಿ ಅದು ಆಯಾ ಧರ್ಮದ ಮಹಿಳೆಯರನ್ನು ಹಿಂಸೆ, ಕ್ರೌರ್ಯಗಳಿಗೆ ಬಲಿಯಾಗಿಸಿತು. ಇಂತಹ ನಿರ್ಭಂಧಗಳು ಅವಳ ಬದುಕಿನ ನೆಲೆಗಳನ್ನು ಕಿತ್ತುಕೊಳ್ಳತೊಡಗಿತು. ಅವಳ ಪ್ರಗತಿಗೆ ಮಾರಕವಾಗತೊಡಗಿದ್ದಂತೂ ಸತ್ಯ. ಶಾಹೀನ್‍ಬಾಗ್‍ನ ಎನ್.ಆರ್.ಸಿ., ಸಿಎಎ, ಕುರಿತು ಹೋರಾಟ ಮಾಡಿದ ದಾದಿಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ. ಅವರು ತಮ್ಮ ಪರ್ಯಾಯಗಳನ್ನು ರೂಪಿಸಿಕೊಳ್ಳುತ್ತಲೇ ಹಕ್ಕು ಸ್ಥಾಪನೆಯತ್ತ ಸಾಗಿದ ಧೀಮಂತ ಮಹಿಳೆಯರಾಗಿದ್ದಾರೆ.

ಅನಂತರ ಬರುವ ಮೂರನೇ ತಲೆಮಾರಿನ ಬರಹಗಾರರಾದ, ಸಂತೆಬೆನ್ನೂರ ಫೈಜ್ ನಟರಾಜ, ಇಸ್ಮತ್ ಫಜೀರ್, ಚಾಂದ್‌ ಪಾಷ, ದಾದಾಪೀರ್ ಜೈಮನ್, ನಜ್ಮಾ ನಜೀರ್, ಮಿಸ್ರಿಯಾ, ತಾಜುಮಾ, ಮುಮ್ತಾಜ್ ಬಿರಾದಾರ್, ಯು.ಟಿ.ಫರ್ಜಾನಾ, ಮುಹಮ್ಮದ್ ಮುಸ್ತಫಾ, ಫಾತಿಮಾ ರಲಿಯಾ, ಬಿ.ಎಂ ಸಿಹಾನ ಮುಂತಾದ ಮುಸ್ಲಿಂ ಸಮುದಾಯದಿಂದ ಮೂರು ತಲೆಮಾರುಗಳಿಂದಲೂ ಬಂದ ಇಷ್ಟೆಲ್ಲ ಸಾಹಿತಿಗಳಿರಬೇಕಾದರೆ ಹಾಗೂ ಇವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿರುವಾಗಲೂ ಅವರನ್ನು ದೂರ ಮಾಡುವುದು ಸರಿಯೇ? ಹುಟ್ಟಿದ ಮನೆಯಂಗಳದಿಂದ, ವ್ಯಾಪಾರದಿಂದ, ಹಲಾಲ್ಕಟ್, ಜಟ್ಕಾಕಟ್, ತಲೆ ಮೇಲಿನ ತುಂಡು ಬಟ್ಟೆಯಿಂದ, ಈಗ ಪರಿಷತ್ತಿನ ಸಮ್ಮೇಳನದಿಂದಲೇ ಹೊರಗು ಮಾಡುತ್ತಿದ್ದಾರಲ್ಲ ಇದು ನ್ಯಾಯವೇ?. ಪರಿಷತ್ತಿನಂತಹ ಮಹತ್ತ್ವದ ಸಂಸ್ಥೆಯೊಂದು ಕೋಮುವಾದಿಗಳ ಕೈಗೆ ಸಿಕ್ಕು ಯಾವ ರೀತಿ ಅಂಗವಿಕಲವಾಗುತ್ತಿದೆ ಎಂಬುದರ ಬಗ್ಗೆ ಕನ್ನಡಿಗರು ಗಮನಿಸುತ್ತಿದ್ದಾರೆ. ಮಹಿಳೆಯರು, ದಲಿತರು ಮತ್ತು ಮುಸ್ಲಿಮರನ್ನು ದೂರವಿಟ್ಟು ಇವರು ಏನನ್ನು ಸಾಧಿಸುವವರಿದ್ದಾರೆ? ಒಟ್ಟು 86 ಜನ ಸನ್ಮಾನಿತರಲ್ಲಿ ದೊಡ್ಡಮನಿ ಮತ್ತು ನದಾಫ್ ಇಬ್ಬರನ್ನು ಬಿಟ್ಟರೆ ಬೇರಾರೂ ಮುಸ್ಲಿಮರಿಲ್ಲ. ಒಟ್ಟು ಮೂರು ಬೇರೆ, ಬೇರೆ ವೇದಿಕೆಗಳಿದ್ದು, ಮೊದಲ ವೇದಿಕೆಯಲ್ಲಿ 9 ಗೋಷ್ಟಿಗಳಿದ್ದು ಅದರಲ್ಲಿ ಒಬ್ಬ ಭಾಷಣಕಾರರೂ ಮುಸ್ಲಿಮರಿಲ್ಲ. ಅದರಲ್ಲಿ ಒಬ್ಬ ಕವಿಯೂ ಮುಸ್ಲಿಮನಿಲ್ಲ. ಎರಡನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು, ಅದರಲ್ಲಿ ಕವನ ಓದುವುದಕ್ಕೆ ಮಾತ್ರ ಒಬ್ಬ ಮುಸ್ಲಿಂ ಮಹಿಳೆಯಿದ್ದಾರೆ. ಮೂರನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು ಅದರಲ್ಲಿ ಕವಿಗೋಷ್ಟಿಗೊಬ್ಬರು ಮತ್ತು ಗೋಷ್ಠಿಯಲ್ಲಿ ಒಬ್ಬರನ್ನು ಬಿಟ್ಟರೆ ಇನ್ನುಳಿದವರನ್ನು ಸ್ವಾಗತಕ್ಕೆ, ವಂದನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪರಿಷತ್ ಅಧ್ಯಕ್ಷರು ರಥ ಕೆತ್ತಿದವರನ್ನು, ಹೂ ಹೆಣೆದವರನ್ನು, ಕಸ ಗುಡಿಸಿದವರನ್ನು, ಷಾಮಿಯಾನಾ ಕಟ್ಟಿದವರನ್ನೆಲ್ಲ ಮುಸ್ಲಿಮರೆಂದು ಹೇಳಿ ದಿಕ್ಕು ತಪ್ಪಿಸುವುದೆಂದರೆ ಏನು?.

ಇಲ್ಲಿ ಪ್ರಶ್ನೆಯಿರುವುದು ಸಾಹಿತಿಗಳದು. ಜೋಶಿಯವರು ಇಂತಹ ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ.

ಡಾ.ಕೆ.ಷರೀಫಾ

ಸಮಾಜ ಮತ್ತು ಸಂಸ್ಕೃತಿ ಚಿಂತಕರು.