world cup 2023 – Peepal Media

ಪನೌತಿ ಮೋದಿ: ಮೋದಿ ದುರಾದೃಷ್ಟದ ಸಂಕೇತ ಎಂದ ರಾಹುಲ್‌ ಗಾಂಧಿ
ಬೆಂಗಳೂರು: ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿನ ಹಿನ್ನಲೆಯಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವೆಂಬರ್‌ 21, ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಪನೌತಿ (ದುರದೃಷ್ಟದ ಸಂಕೇತ) ಎಂದು ಕರೆಯುವ ಮೂಲಕ ವಿಧಾನಸಭಾ ಚುನಾವಣೆಯ ಪ್ರಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದಕ್ಕೆ  ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ಚುನಾವಣಾ ಸೋಲಿನ ಹತಾಶೆಯಿಂದ ರಾಹುಲ್ ಗಾಂಧಿಯವರು ಪ್ರಧಾನಿ ವಿರುದ್ಧ ನಿಂದನೀಯ ಪದಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದೆ.

“ಪನೌಟಿ… ಪನೌಟಿ… ಅಚ್ಛಾ ಭಲಾ ಹಮಾರೆ ಲಡ್ಕೆ ವಹಾನ್ ವರ್ಲ್ಡ್ ಕಪ್ ಜೀತ್ನೆ ವಾಲೆ ಥೆ, ಪರ್ ಪನೌತಿ ಹರ್ವಾ ದಿಯಾ. ಟಿವಿ ವಾಲೇ ಯೇ ನಹೀಂ ಕಹೆಂಗೆ ಮಗರ್ ಜನತಾ ಜಾನ್‌ತಿ ಹೈ (ನಮ್ಮ ಹುಡುಗರು ವಿಶ್ವಕಪ್ ಗೆಲ್ಲುವವರಿದ್ದರು, ಆದರೆ ಪನೌಟಿಯಿಂದಾಗಿ ಸೋತರು. ಟಿವಿ ಚಾನೆಲ್‌ಗಳು ಇದನ್ನು ಹೇಳುವುದಿಲ್ಲ, ಆದರೆ ಜನರಿಗೆ ಇದು ತಿಳಿದಿದೆ) ”ಎಂದು ಗಾಂಧಿ ರಾಜಸ್ಥಾನದ ಬಲೋತ್ರಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಹೇಳಿದ್ದಾರೆ.

पनौती 😉 pic.twitter.com/kVTgt0ZCTs
— Congress (@INCIndia) November 21, 2023

ಒಂದು ವಾರದ ಹಿಂದೆ, ಭಾರತದಲ್ಲಿ ಪ್ರತಿಯೊಬ್ಬರ ಬಳಿ ಚೀನಾ ಮೊಬೈಲ್ ಹ್ಯಾಂಡ್‌ಸೆಟ್‌ಗಳು ಮಾತ್ರ ಇವೆ ಎಂದು ರಾಹುಲ್ ಗಾಂಧಿ ಹೇಳಿದಾಗ, ಮೋದಿಯವರು ರಾಹುಲ್‌ರನ್ನು ಮೂರ್ಖೋನ್ ಕಾ ಸರ್ದಾರ್ (ಮೂರ್ಖರ ನಾಯಕ) ಎಂದು ಕರೆದಿದ್ದರು. “ಕಾಂಗ್ರೆಸ್ ನಾಯಕರು ಭಾರತದ ಸಾಧನೆಗಳನ್ನು ಒಪ್ಪಿಕೊಳ್ಳದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದಾರೆ” ಎಂದು ಮಧ್ಯಪ್ರದೇಶದಲ್ಲಿ ಕಾಂಗ್ರೇಸನ್ನು ಟೀಕಿಸಿದ ಮೋದಿ, ಭಾರತವು ಮೊಬೈಲ್ ಉತ್ಪಾದನೆಯಲ್ಲಿ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದರು.

ಈ ವರ್ಷಾರಂಭದಲ್ಲಿ ಮೋದಿ ಎಂಬ ಉಪನಾಮದ ಬಗ್ಗೆ ಮಾಡಿದ ಹೇಳಿಕೆಗಾಗಿ ಸೂರತ್ ನ್ಯಾಯಾಲಯವು ಎರಡು ವರ್ಷಗಳ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅಮಾನತುಗೊಳಿಸಿತ್ತು. ಸುಪ್ರೀಂ ಕೋರ್ಟ್ ಈ ಶಿಕ್ಷೆಗೆ ತಡೆ ನೀಡಿ, ರಾಹುಲ್‌ ಮತ್ತೆ ಸಂಸತ್‌ ಪ್ರವೇಶಿಸಿದ್ದರು.

ಗಾಂಧಿಯವರ ಈ ಹೇಳಿಕೆಗೆ ಕ್ಷಮೆಕೋರುವಂತೆ ಒತ್ತಾಯಿಸಿರುವ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, “ರಾಹುಲ್ ಗಾಂಧಿ ನಿಮಗೆ ಏನಾಗಿದೆ? ಸೋಲಿನ ಹತಾಶೆಯಿಂದ ನೀವು ತುಂಬಾ ತೊಂದರೆಗೀಡಾಗಿದ್ದೀರಿ, ನೀವು ದೇಶದ ಪ್ರಧಾನಿ ವಿರುದ್ಧ ನಿಂದನೀಯ ಭಾಷೆ ಬಳಸುತ್ತಿದ್ದೀರಿ. ನಮ್ಮ ಪ್ರಧಾನಿಯವರು ನಮ್ಮ ಆಟಗಾರರನ್ನು ಪ್ರೀತಿಸುತ್ತಾರೆ ಮತ್ತು ಅವರ ನೈತಿಕ ಬಲವನ್ನು ಹೆಚ್ಚಲು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಏಷ್ಯಾಡ್, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ನಮ್ಮ ಆಟಗಾರರು ಚೆನ್ನಾಗಿ ಆಡಿದ್ದರು. ಸೋಲು ಮತ್ತು ಗೆಲುವು ಇದ್ದದ್ದೇ. ರಾಹುಲ್ ಗಾಂಧಿ ತಕ್ಷಣ ಕ್ಷಮೆ ಕೇಳಬೇಕು,” ಎಂದು ಹೇಳಿದ್ದಾರೆ.

Why is Narendra Modi getting annoyed at being called #Panauti
We have not spent crores of rupees to tarnish his name .

The word PANAUTI is a gift from the people of India, so sit back quietly and accept whatever the people have given you .

A befitting rebuttal given by… pic.twitter.com/RYnqHLNNdh
— Ravinder Kapur. (@RavinderKapur2) November 22, 2023

ರಾಹುಲ್‌ ಗಾಂಧಿಯವರನ್ನು ಸಮರ್ಥಿಸಿರುವ ಕಾಂಗ್ರೆಸ್‌ನ ಕೆಸಿ ವೇಣುಗೋಪಾಲ್ “2 ದಿನಗಳಿಂದ ಅನೇಕರು ಯೋಚಿಸುತ್ತಿರುವುದನ್ನೇ ರಾಹುಲ್ ಜೀ ಹೇಳಿದ್ದಾರೆ! ವಿಶ್ವಕಪ್ ಫೈನಲ್ಸ್ 140 ಕೋಟಿ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿತ್ತು ಮತ್ತು ನಾವೆಲ್ಲರೂ ಈ ಐತಿಹಾಸಿಕ ಸಂದರ್ಭಕ್ಕಾಗಿ ಎದುರು ನೋಡುತ್ತಿದ್ದೆವು, ಆದರೆ ಅವರು ತಮ್ಮ ರಾಜಕೀಯ ಮೈಲೇಜ್‌ಗಾಗಿ ಅದನ್ನು ಹೈಜಾಕ್ ಮಾಡಲು ಹೋಗಿ ಹತಾಶರಾಗಿದ್ದಾರೆ. ರಾಜಕೀಯ ಸರಿ-ತಪ್ಪುಗಳ ಬಗ್ಗೆ ಮಾತನಾಡಲು ಬಿಜೆಪಿ ಕೊನೆಯಲ್ಲಿ ನಿಲ್ಲಬೇಕು. ಪಂಡಿತ್ ನೆಹರೂ, ಇಂದಿರಾಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಅತ್ಯಂತ ಕೆಟ್ಟ ನಿಂದನೆಗಳಿಂದ ಅವಮಾನಿಸುತ್ತಿರುವ ಪ್ರಧಾನಿ ಮೋದಿ ಸೇರಿದಂತೆ ಈ ಗೋಡ್ಸೆ ಭಕ್ತರು ಕಟುಸತ್ಯವನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ” ಎಂದು X ನಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿಯವರನ್ನು “ವಿಷಪೂರಿತ ಹಾವು” ಎಂದು ಹೇಳುವ ಮೂಲಕ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದರು. ಕಳೆದ ವರ್ಷದ ಗುಜರಾತ್ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಖರ್ಗೆಯವರು ಅಹಮದಾಬಾದ್‌ನ ಸಾರ್ವಜನಿಕ ಸಭೆಯಲ್ಲಿ “ ಕಾರ್ಪೋರೇಷನ್ ಚುನಾವಣೆಗಳಲ್ಲಿ, ಎಂಎಲ್ಎ – ಎಂಪಿ ಚುನಾವಣೆಗಳಲ್ಲಿ ನಿಮ್ಮ (ಮೋದಿ) ಮುಖವನ್ನೇ ಎಲ್ಲೆಡೆ ನೋಡುತ್ತಿದ್ದೇವೆ… ನಿಮಗೆ ರಾವಣನಂತೆ 100 ತಲೆಗಳಿವೆಯೇ?” ಎಂದು ಟೀಕಿಸಿದ್ದರು.

ಮಾರ್ಚ್‌ 2, 2019ರಂದು ನರೇಂದ್ರ ಮೋದಿಯವರು ʼಸ್ಮಾರ್ಟ್‌ ಇಂಡಿಯಾ ಹಾಕ್‌ಥಾನ್-‌2019’ರ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಪರೆನ್ಸ್‌ ಮೂಲಕ ಇಂಜಿನೀಯರಿಂಗ್‌ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ ರಾಹುಲ್‌ ಗಾಂಧಿಯವರನ್ನು “40-50 ವರ್ಷ ಪ್ರಾಯದ ಡಿಸ್ಲಕ್ಸಿಯಾ (dyslexia) ಇರುವ ಮಗು” ಎಂದು ಅಮಾನವೀಯವಾದ ಟೀಕಿಯನ್ನು ಮಾಡಿದ್ದರು. ಮಾನಸಿಕ ಆರೋಗ್ಯದ ಸಮಸ್ಯೆಯಾಗಿರುವ ಡಿಸ್ಲೆಕ್ಸಿಯಾವನ್ನು ಸಂವೇದನಾರಹಿತವಾಗಿ ಟೀಕೆಗೆ ಬಳಸಿರುವ ಮೋದಿಯವರ ಹೇಳಿಕೆಗೆ ಮಾನಸಿಕ ತಜ್ಞರು, ಪಕ್ಷಾತೀತವಾಗಿ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.

ಡಿಸೆಂಬರ್‌ 2017 ರ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್, ಮೋದಿಯವರನ್ನು “ನೀಚ್ ಕಿಸಂ ಕಾ ಆದ್ಮಿ” ಎಂದು ಟೀಕಿಸಿದ ಹಿರಿಯ ಕಾಂಗ್ರೇಸ್‌ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.

ವಿಶ್ವಕಪ್- 2023: ಆಸ್ಟ್ರೇಲಿಯಾ ಎದುರು ಸಾಧಾರಣ ಸವಾಲು ಒಡ್ಡಿದ ಭಾರತ
ಅಹಮದಾಬಾದ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್ ಗಳಲ್ಲಿ ಕೇವಲ 240 ರನ್ ಗಳಿಸಿ ಸರ್ವಪತನ ಕಂಡಿತು. ಆರನೇ ಬಾರಿ ವಿಶ್ವಕಪ್ ಕಿರೀಟ ಧರಿಸಲು ಆಸ್ಟ್ರೇಲಿಯಾ 241 ರನ್ ಗಳಿಸಬೇಕಿದೆ.

ಬ್ಯಾಟಿಂಗ್ ಗೆ ಅನುಕೂಲಕರವಾಗಿಲ್ಲದ ಪಿಚ್ ನಲ್ಲಿ ಚೆಂಡು ನಿಧಾನಗತಿಯಲ್ಲಿ ಬ್ಯಾಟ್ ಗೆ ಬರುತ್ತಿದ್ದು, ಆಸ್ಟ್ರೇಲಿಯಾದ ಬೌಲರ್ಗಳ ದಾಳಿ ಎದುರು ಭಾರತೀಯ ಬ್ಯಾಟ್ಸ್ಮನ್ ಗಳು ಪರದಾಡಿದರು. ಚೆಂಡು ತಿರುವು ಪಡೆಯುತ್ತಿದ್ದು, ಪಿಚ್ ನ ಲಾಭವನ್ನು ಪಡೆದುಕೊಂಡು ಭಾರತೀಯ ಬ್ಯಾಟರ್ ಗಳನ್ನು ಕಟ್ಟಿಹಾಕಲು ಆಸ್ಟ್ರೇಲಿಯಾ ಬೌಲರ್ ಗಳು ಯಶಸ್ವಿಯಾದರು.

ಟೂರ್ನಿಯುದ್ದಕ್ಕೂ ಸ್ಫೋಟಕ ಆರಂಭ ನೀಡುತ್ತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಬಿರುಸಿನ ಆಟವಾಡಿ 31 ಎಸೆತಗಳಲ್ಲಿ 47 ರನ್ ಗಳಿಸಿ, ಮ್ಯಾಕ್ಸ್ ವೆಲ್ ಬೌಲಿಂಗ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಲು ಹೋಗಿ ಟ್ರಾವಿಸ್ ಹೆಡ್ ಗೆ ಕ್ಯಾಚಿತ್ತು ಔಟಾದರು. ಇದಕ್ಕೂ ಮುನ್ನ ಯುವ ಆಟಗಾರ ಶುಭಮನ್ ಗಿಲ್ ಕೆಟ್ಟ ಆಡಂ ಜಾಂಪಾ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ಅವರಿಗೆ ಕ್ಯಾಚ್ ನೀಡಿ ಔಟಾದರು. ರೋಹಿತ್ ಔಟಾದ ನಂತರ ಬಂದ ಶ್ರೇಯಸ್ ಐಯ್ಯರ್ ಹೆಚ್ಚು ಕಾಲ ಬಾಳಲಿಲ್ಲ. ಪ್ಯಾಟ್ ಕಮಿನ್ಸ್ ಎಸೆತವನ್ನು ಗ್ರಹಿಸಲು ಸಾಧ್ಯವಾಗದೆ ವಿಕೆಟ್ ಕೀಪರ್ ಇಂಗ್ಲಿಸ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ತೆರಳಿದರು.

ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ವಿರಾಟ್ ಕೊಹ್ಲಿ ಮತ್ತು ಐದನೇ ಕ್ರಮಾಂಕದಲ್ಲಿ ಆಡಲು ಬಂದ ಕೆ.ಎಲ್.ರಾಹುಲ್ ಭಾರತ ತಂಡದ ಕುಸಿತ ತಪ್ಪಿಸಿದರು. ನಿಧಾನಗತಿಯಲ್ಲಿ ಆಡಿದ ಈ ಜೋಡಿ ಇನ್ನೇನು ಸ್ಕೋರಿಂಗ್ ರೇಟ್ ಹೆಚ್ಚಿಸಬಹುದು ಎನ್ನುವಷ್ಟರಲ್ಲಿ ವಿರಾಟ್ ಕೊಹ್ಲಿ ಪ್ಯಾಟ್ ಕಮಿನ್ಸ್ ಅವರ ಶಾರ್ಟ್ ಬಾಲನ್ನು ವಿಕೆಟ್ ಮೇಲೆ ಎಳೆದುಕೊಂಡು ಔಟಾದರು.

ಏಕಾಂಗಿ ಹೋರಾಟ ಮುಂದುವರೆಸಿದ ಕೆ.ಎಲ್.ರಾಹುಲ್ ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ರಿವರ್ಸ್ ಸ್ವಿಂಗ್ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ಔಟಾದರು. ಬಿರುಸಿನ ಆಟಕ್ಕೆ ಹೆಸರಾದ ಸೂರ್ಯಕುಮಾರ್ ಯಾದವ್ ಅವರ ಆಟವೂ ಆಸ್ಟ್ರೇಲಿಯಾದ ಸಂಘಟಿತ ಬೌಲಿಂಗ್ ಪರಾಕ್ರಮದೆದುರು ನಡೆಯಲಿಲ್ಲ. ಸೂರ್ಯ 28 ಎಸೆತಗಳನ್ನು ಎದುರಿಸಿ ಕೇವಲ 18 ರನ್ ಗಳಿಸಿ ನಿರಾಶೆ ಮೂಡಿಸಿದರು.

ಇನ್ನಿಂಗ್ಸ್ ಕೊನೆಯಲ್ಲಿ ಮಹಮದ್ ಶಮಿ 6, ಜಸ್ಪೀತ್ ಬೂಮ್ರಾ 1, ಕುಲದೀಪ್ ಯಾದವ್ 10, ಮಹಮದ್ ಸಿರಾಜ್ 9 ರನ್ ಗಳಿಸಿದರು.
ಬೌಲಿಂಗ್ ನಲ್ಲಿ ಪದೇಪದೇ ಬದಲಾವಣೆ ಮಾಡಿದ ನಾಯಕ ಪ್ಯಾಟ್ ಕಮಿನ್ಸ್ ಏಳು ಬೌಲರ್ ಗಳನ್ನು ಬಳಸಿದರು. ಮಿಚೆಲ್ ಸ್ಟಾರ್ಕ್ 55 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ ಕೇವಲ 30 ರನ್ ನೀಡಿ ಎರಡು ವಿಕೆಟ್ ಪಡೆದರೆ ಹೇಜಲ್ ವುಡ್ 60ರನ್ ನೀಡಿ ಎರಡು ವಿಕೆಟ್ ಪಡೆದರು.

ವಿಶ್ವಕಪ್ ಫೈನಲ್: ಟಾಸ್ ಗೆದ್ದ ಆಸ್ಟ್ರೇಲಿಯಾದಿಂದ ಫೀಲ್ಡಿಂಗ್ ಆಯ್ಕೆ
ಅಹಮದಾಬಾದ್: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

ಮೊದಲು ಭಾರತವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿ, ನಂತರ ಚೇಸ್ ಮಾಡುವುದು ಆಸ್ಟ್ರೇಲಿಯಾದ ಯೋಜನೆ ಎಂದು ಪ್ಯಾಟ್ ಕಮಿನ್ಸ್ ಹೇಳಿದರು. ವಿಶೇಷವೆಂದರೆ ತಾವು ಟಾಸ್ ಗೆದ್ದಿದ್ದರೂ ಬ್ಯಾಟಿಂಗ್ ಮಾಡುತ್ತಿದ್ದೆವು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಪವರ್ ಪ್ಲೇ ಹಂತದಲ್ಲೇ ಭರ್ಜರಿ ಬೌಲಿಂಗ್ ಪ್ರದರ್ಶನ ಮಾಡಿ ಹೆಡೆಮುರಿ ಕಟ್ಟಿದ ಆಸ್ಟ್ರೇಲಿಯಾ ಬೌಲರ್ ಗಳು ಈ ಪಂದ್ಯದಲ್ಲೂ ಅದೇ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.

ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿರುವ ಭಾರತ ಮೊದಲು ಬ್ಯಾಟ್ ಮಾಡಿದಾಗಲೂ ದೊಡ್ಡ ಅಂತರಗಳಿಂದ ಗೆದ್ದಿದೆ, ಮೊದಲು ಫೀಲ್ಡಿಂಗ್ ಮಾಡಿದಾಗಲೂ ದೊಡ್ಡ ಗೆಲುವುಗಳನ್ನೇ ದಾಖಲಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 14ರಂದು ನಡೆದ ಲೀಗ್ ಹಂತದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ದೊಡ್ಡ ಅಂತರದಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಉತ್ತಮ ಆರಂಭ ಪಡೆದರೂ ನಂತರ ದಿಢೀರನೆ ಕುಸಿತ ಕಂಡು 191 ರನ್ ಗಳಿಗೆ ಆಲ್ ಔಟ್ ಆಗಿತ್ತು. ಈ ಸುಲಭ ಟಾರ್ಗೆಟ್ ಬೆನ್ನತ್ತಿದ್ದ ಭಾರತ 117 ಎಸೆಗಳು ಬಾಕಿ ಇರುವಂತೆಯೇ ಕೇವಲ 30.3 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ದಡ ತಲುಪಿತ್ತು. ಭಾರತ-ಪಾಕಿಸ್ತಾನ ನಡುವೆ ನಡೆದ ಪಿಚ್ ನಲ್ಲೇ ಭಾರತ- ಆಸ್ಟ್ರೇಲಿಯಾ ನಡುವಿನ ಪೈನಲ್ ಪಂದ್ಯ ನಡೆಯುತ್ತಿರುವುದು ವಿಶೇಷ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿದ್ದು, ಎಲ್ಲ ತಂಡಗಳ ವಿರುದ್ಧವೂ ಗೆಲುವು ಸಾಧಿಸಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ್ದ ಭಾರತ ಫೈನಲ್ ನಲ್ಲೂ ಆಸ್ಟ್ರೇಲಿಯಾವನ್ನು ಸೋಲಿಸಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಭಾರತದ ಬ್ಯಾಟಿಂಗ್ ಪಡೆ ಈಗಾಗಲೇ ʻಕ್ರಿಕೆಟ್ ದಂತಕಥೆʼಯಾಗಿರುವ ವಿರಾಟ್ ಕೊಹ್ಲಿಯವರ ಅದ್ಭುತ ಪ್ರದರ್ಶನದಿಂದ ಎದುರಾಳಿಗಳಲ್ಲಿ ಎದೆನಡುಕ ಹುಟ್ಟಿಸಿದ್ದು, ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಐಯ್ಯರ್, ಕೆ.ಎಲ್.ರಾಹುಲ್ ಅವರ ಅಮೋಘ ಆಟದಿಂದ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತ ಬಂದಿದೆ. ಭಾರತದ ಬೌಲಿಂಗ್ ಪಡೆ ಮಹಮದ್ ಶಮಿ, ಜಸ್ ಪ್ರೀತ್ ಬುಮ್ರಾ, ಮಹಮದ್ ಸಿರಾಜ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅವರ ಉತ್ಕೃಷ್ಟ ಪ್ರದರ್ಶನಗಳಿಂದ ಎಲ್ಲ ಪಂದ್ಯಗಳಲ್ಲೂ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದೆ.

ಫೈನಲ್ ಪಂದ್ಯವನ್ನು ನೋಡಲು ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ನೀಲಿಸಾಗರವೇ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಹರಿದು ಬಂದಿದೆ.

ವಿಶ್ವಕಪ್- 2023: ಈ ದಾಖಲೆಗಳು ಪುಡಿಪುಡಿಯಾಗಲಿವೇ?
ಅಹಮದಾಬಾದ್: ಪುರುಷರ ವಿಶ್ವಕಪ್ ಕ್ರಿಕೆಟ್ ಫೈನಲ್ ಇಂದು ಮಧ್ಯಾಹ್ನ ಆರಂಭವಾಗಲಿದ್ದು, ಭಾರತ ಮತ್ತು ಆಸ್ಪ್ಟ್ರೇಲಿಯಾಗಳ ನಡುವಿನ ಐತಿಹಾಸಿಕ ಹಣಾಹಣಿಯಲ್ಲಿ ಹಲವು ದಾಖಲೆಗಳು ಮುರಿಯಲ್ಪಡುವ ಸಂಭವವಿದೆ.

ಭಾರತದ ರನ್ ಮಿಷಿನ್ ವಿರಾಟ್ ಕೊಹ್ಲಿ ಈ ಪಂದ್ಯಾವಳಿಯಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದಾರೆ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 49 ಶತಕಗಳನ್ನು ಸಿಡಿಸಿದ್ದ ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಮುಂದೆ ಸಾಗಿರುವ ವಿರಾಟ್ ಕೊಹ್ಲಿ ಈಗಾಗಲೇ 50 ಶತಕಗಳನ್ನು ದಾಖಲಿಸಿದ್ದಾರೆ. ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯೂ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 2003ರ ವಿಶ್ವಕಪ್ ನಲ್ಲಿ ಒಟ್ಟು 673 ರನ್ ಪೇರಿಸಿದ್ದರು. ಈ ದಾಖಲೆಯನ್ನು ವಿರಾಟ್ ಕೊಹ್ಲಿ ಈಗಾಗಲೇ ಮುರಿದಿದ್ದು, 711 ರನ್ ಗಳಿಸಿದ್ದಾರೆ. ಇವತ್ತಿನ ಪಂದ್ಯದಲ್ಲಿ 89 ರನ್ ಗಳಿಸಿದರೆ ಒಂದು ವಿಶ್ವಕಪ್ ಟೂರ್ನಿಯಲ್ಲಿ 800 ರನ್ ಗಳಿಸಿದ ಮೊಟ್ಟಮೊದಲ ಆಟಗಾರ ಎಂಬ ಶ್ರೇಯಸ್ಸು ವಿರಾಟ್ ಕೊಹ್ಲಿ ಪಾಲಾಗಲಿದೆ.

ವಿರಾಟ್ ಕೊಹ್ಲಿ ಒಟ್ಟು ನಾಲ್ಕು ವಿಶ್ವಕಪ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಾಲ್ಕೂ ಪಂದ್ಯಾವಳಿಗಳಿಂದ ಅವರು ಒಟ್ಟು 1741 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ರಿಕಿ ಪಾಂಟಿಂಗ್ ತಾವು ಆಡಿದ ಎಲ್ಲ ವಿಶ್ವಕಪ್ ಪಂದ್ಯಗಳಿಂದ ಒಟ್ಟು 1743 ರನ್ ಗಳಿಸಿದ್ದು ಕೊಹ್ಲಿಗೆ ಈ ದಾಖಲೆ ಮೀರಲು ಕೇವಲ ಮೂರು ರನ್ ಗಳು ಮಾತ್ರವೇ ಬೇಕಿದೆ. ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇದ್ದು, ಸಚಿನ್ 2278 ರನ್ ಗಳಿಸಿದ್ದು, ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ವೇಗದ ಬೌಲರ್ ಮಹಮದ್ ಶಮಿ ವಿಶ್ವಕಪ್ ಪಂದ್ಯಗಳಲ್ಲಿ ಸೂಪರ್ ನ್ಯಾಚುರಲ್ ಪವರ್ ಆವಾಹಿಸಿಕೊಂಡಂತೆ ಆಡುತ್ತಾರೆ. ಮೂರು ವಿಶ್ವಕಪ್ ಗಳನ್ನು ಆಡಿರುವ ಶಮಿ, ಮೂರರಲ್ಲೂ ಭಾರತದ ಪರವಾಗಿ ಅತಿಹೆಚ್ಚು ವಿಕೆಟ್ ಗಳನ್ನು ಪಡೆದ ಬೌಲರ್ ಆಗಿದ್ದು, ಈಗಾಗಲೇ 54 ವಿಕೆಟ್ ಗಳಿಸಿದ್ದಾರೆ. ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಗ್ರಾಥ್ ಅಗ್ರಸ್ಥಾನದಲ್ಲಿದ್ದು 71 ವಿಕೆಟ್ ಪಡೆದಿದ್ದಾರೆ, ನಂತರದ ಸ್ಥಾನಗಳಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (68), ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (58), ಶ್ರೀಲಂಕಾದ ಲಸಿತ್ ಮಲಿಂಗಾ (56), ಪಾಕಿಸ್ತಾನದ ವಸೀಂ ಅಕ್ರಂ (55) ಇದ್ದಾರೆ. ಈ ಪೈಕಿ ವಸೀಂ ಅಕ್ರಂ ಮತ್ತು ಲಸಿತ್ ಮಲಿಂಗಾ ದಾಖಲೆಗಳನ್ನು ಪುಡಿಗಟ್ಟುವ ಅವಕಾಶ ಮಹಮದ್ ಶಮಿ ಅವರಿಗಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ)ಯಲ್ಲಿ 2015ರ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಮುಖಾಮುಖಿಯನ್ನು ಸುಮಾರು 93,000 ಪ್ರೇಕ್ಷಕರು ವೀಕ್ಷಿಸಿದ್ದರು. ಈ ಬಾರಿ ಈ ದಾಖಲೆ ಮುರಿಯಲಿದ್ದು, ಒಟ್ಟು 1,30,000 ಪ್ರೇಕ್ಷಕರು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆಯಲಿದ್ದಾರೆ.

ಈ ಪಂದ್ಯಾವಳಿಯಲ್ಲಿ ಸಾಕಷ್ಟು ಹೈಸ್ಕೋರಿಂಗ್ ಗೇಮ್ ಗಳನ್ನು ನಾವು ನೋಡಿದ್ದೇವೆ. ಇದುವರೆಗೆ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿಹೆಚ್ಚು ರನ್ ಗಳಿಸಿದ್ದು ಆಸ್ಟ್ರೇಲಿಯಾ ತಂಡ, ಜೋಹನ್ಸ್ ಬರ್ಗ್ನನಲ್ಲಿ. 2003ರ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಎರಡು ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತ್ತು. ಈ ದಾಖಲೆ ಈ ಬಾರಿ ಮುರಿಯಲ್ಪಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ವಿಶ್ವಕಪ್- 2023: ವಿಶ್ವಕಿರೀಟಕ್ಕಾಗಿ ಹಣಾಹಣಿ, ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭ
ಅಹಮದಾಬಾದ್: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿರುವ 2023 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪೈಪೋಟಿ ನೀಡಲಿವೆ.

ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ತಂಡವನ್ನು, ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಗೆದ್ದು ಫೈನಲ್ ಗೇರಿವೆ. ಉಭಯ ತಂಡಗಳು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1,30,000 ಪ್ರೇಕ್ಷಕರ ಮುಂದೆ ಕೊನೆಯ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿವೆ.

ಭಾರತ ತಂಡವು ಈ ಪಂದ್ಯಾವಳಿಯಲ್ಲಿ ಇದುವರೆಗೆ ಅಜೇಯವಾಗಿಯೇ ಉಳಿದಿದೆ. ನ್ಯೂಜಿಲೆಂಡ್ ತಂಡವನ್ನು ಹೊರತುಪಡಿಸಿ ಇನ್ಯಾವುದೇ ತಂಡವೂ ಸಹ ಭಾರತದ ಎದುರು ತಕ್ಕ ಸ್ಪರ್ಧೆ ನೀಡಲು ವಿಫಲವಾದವು. ಬಹುತೇಕ ಪಂದ್ಯಗಳನ್ನು ಭಾರತ ಅಧಿಕಾರಯುತವಾಗಿ ಗೆದ್ದು ಫೈನಲ್ ವರೆಗೆ ಸಾಗಿ ಬಂದಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಬೆಳೆದುನಿಂತಿದ್ದು, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಆತ್ಮವಿಶ್ವಾಸದಲ್ಲಿದೆ.

ಲೀಗ್ ಹಂತದ ಮೊದಲ ಎರಡು ಪಂದ್ಯಗಳನ್ನು ಸೋತರೂ ನಂತರ ಚೇತರಿಸಿಕೊಂಡ ಆಸ್ಟ್ರೇಲಿಯಾ ಸತತ ಗೆಲುವನ್ನು ಸಾಧಿಸುತ್ತ ಫೈನಲ್ ತಲುಪಿಕೊಂಡಿದೆ. ಒಟ್ಟು ಐದು ವಿಶ್ವಕಪ್ ಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 1999, 2003, 2007ರ ವಿಶ್ವಕಪ್ ಪಂದ್ಯಾವಳಿಗಳನ್ನು ಸತತ ಗೆದ್ದು ಹ್ಯಾಟ್ರಿಕ್ ಸಾಧಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ತನ್ನ ಪಾರಮ್ಯವನ್ನು ಸ್ಥಾಪಿಸಿತ್ತು. ಆದರೆ ಆಗಿನ ಆಸ್ಟ್ರೇಲಿಯಾ ತಂಡದಷ್ಟು ಪ್ರಬಲವಾಗಿಲ್ಲ ಇಂದಿನ ತಂಡ. ಆದರೂ ಅದು ದುರ್ಬಲವಾಗಿಯೂ ಇಲ್ಲ. ಡೇವಿಡ್ ವಾರ್ನರ್, ಮಿಚಲ್ ಮಾರ್ಶ್, ಮಾನಸ್ ಲಾಬುಶೇನ್ ಎಂಥ ಸಂದರ್ಭದಲ್ಲೂ ಸ್ಫೋಟಕ ಆಟ ನಡೆಸಬಲ್ಲರು. ವಿರಾಟ್ ಕೊಹ್ಲಿಗೆ ಪ್ರತಿಯಾಗಿ ಆಸ್ಟ್ರೇಲಿಯಾ ಬಳಿ ಸ್ಟೀವ್ ಸ್ಮಿತ್ ಇದ್ದಾರೆ. ಈ ಪಂದ್ಯಾವಳಿಯಲ್ಲಿ ಅಷ್ಟೇನು ದೊಡ್ಡ ಕೊಡುಗೆ ನೀಡದ ಸ್ಮಿತ್ ಫೈನಲ್ ನಲ್ಲಿ ಸಿಡಿದರೆ ಆಶ್ಚರ್ಯವಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ಅಫಘಾನಿಸ್ತಾನ ವಿರುದ್ಧ ಹೊಡೆ ಡಬಲ್ ಸೆಂಚುರಿ ಕಂಡು ಜಗತ್ತೇ ಬೆರಗಾಗಿದೆ. ಇನ್ನು ಟ್ರಾವಿಸ್ ಹೆಡ್ ಕೆಲವು ಪಂದ್ಯಗಳ ನಂತರ ಬಂದು ತಂಡವನ್ನು ಕೂಡಿದರೂ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್ ಅಪ್ ಗೆ ಬಲ ತುಂಬಿದ್ದಾರೆ.

ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಜೊತೆಗೆ ಮಿಚೆಲ್ ಸ್ಟಾಕ್, ಹೇಜಲ್ ವುಡ್ ವೇಗದ ಬೌಲಿಂಗ್ ನಲ್ಲಿ ಎದುರಾಳಿ ತಂಡಗಳು ಪರದಾಡಿವೆ. ಸ್ಪಿನ್ನರ್ ಆಡಂ ಜಂಪಾ ಕೂಡ ತಿರುಗುವ ಪಿಚ್ ನಲ್ಲಿ ಅಪಾಯಕಾರಿಯಾಗಬಲ್ಲರು.

ಭಾರತ ತಂಡದ ಇದುವರೆಗಿನ ಯಶಸ್ಸು ನೋಡಿದರೆ, ನಿಸ್ಸಂಶಯವಾಗಿ ಅದು ಆಸ್ಟ್ರೇಲಿಯಾಗಿಂದ ಬಲಶಾಲಿಯಾಗಿದೆ. ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಫೋಟಕ ಆರಂಭ ನೀಡುತ್ತಿದ್ದಾರೆ. ಇವರಿಬ್ಬರು ಹಾಕಿಕೊಟ್ಟ ಬುನಾದಿಯ ಮೇಲೆ ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಕೆ.ಎಲ್ ರಾಹುಲ್ ಭರ್ಜರಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಟೀಂ ಮ್ಯಾನೇಜ್ ಮೆಂಟ್ ಎಲ್ಲ ಆಟಗಾರರಿಗೂ ಭಿನ್ನ ಭಿನ್ನ ಟಾಸ್ಕ್ ಕೊಟ್ಟಿದ್ದು, ಅದೇ ಪ್ರಕಾರವಾಗಿ ಎಲ್ಲರೂ ಆಡಿ ಸಫಲರಾಗಿದ್ದಾರೆ. ಈ ಐದೂ ಆಟಗಾರರ ನಂತರ ರವೀಂದ್ರ ಜಡೇಜಾ ಕೂಡ ಉಪಯುಕ್ತ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.

ಬ್ಯಾಟಿಂಗ್ ಗಿಂತಲೂ ಭಾರತದ ಬೌಲಿಂಗ್ ಪಡೆ ಎದುರಾಳಿಗಳ ನಿದ್ದೆಗೆಡಿಸಿದೆ. ಜಸ್ಪಿತ್ ಬುಮ್ರಾ ಎಂದೂ ಲಯ ಕಳೆದುಕೊಂಡಿದ್ದೇ ಇಲ್ಲ. ಈ ಟೂರ್ನಿಯಲ್ಲೂ ಅವರ ನಿಖರ ಬೌಲಿಂಗ್ ಮುಂದುವರೆದಿದೆ. ಮಹಮದ್ ಸಿರಾಜ್ ಸ್ವಿಂಗ್ ಮತ್ತು ಸೀಮ್ ಗಿಂತಲೂ ತನ್ನ ವಿಭಿನ್ನ ಲೈನ್ ಗಳ ಮೂಲಕ ಬ್ಯಾಟ್ಸ್ಮನ್ ಗಳ ಏಕಾಗ್ರತೆಯನ್ನು ಕದಡುತ್ತಿದ್ದಾರೆ. ಇವರಿಬ್ಬರೂ ಹೊಸ ಚೆಂಡ್ ನಲ್ಲಿ ಬೌಲ್ ಮಾಡುತ್ತಿದ್ದರೆ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಇನ್ನು ಮಹಮದ್ ಶಮಿ ಈ ಪಂದ್ಯಾವಳಿಯಲ್ಲಿ ಸುನಾಮಿಯಂತೆ ಅಬ್ಬರಿಸಿದ್ದಾರೆ. ಮೊದಲ ನಾಲ್ಕು ಪಂದ್ಯಗಳನ್ನು ಆಡದೇ ಇದ್ದರೂ ಈ ಪಂದ್ಯಾವಳಿಯಲ್ಲಿ ಮಹಮದ್ ಶಮಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವುದೇ ಇದಕ್ಕೆ ಸಾಕ್ಷಿ. ಈಗಾಗಲೇ ಮೂರು ಬಾರಿ ಪಂದ್ಯ ಪುರುಷ ಪ್ರಶಸ್ತಿ ಪಡೆದಿರುವ ಶಮಿ ಫೈನಲ್ ನಲ್ಲೂ ಅದೇ ಪ್ರದರ್ಶನ ಮುಂದುವರೆಸುತ್ತಾರಾ ಎಂದು ಕಾದುನೋಡಬೇಕಿದೆ. ಭಾರತದ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ ಎಂಥ ಸಂದರ್ಭದಲ್ಲೂ ವಿಕೆಟ್ ಗಳಿಸುವ ಶಕ್ತಿ ಹೊಂದಿದ್ದಾರೆ. ಇಬ್ಬರೂ ಭಿನ್ನ ಬಗೆಯ ಸ್ಪಿನ್ನರ್ ಗಳಾದ್ದರಿಂದ ಇಪ್ಪತ್ತರಿಂದ ನಲವತ್ತನೇ ಓವರ್ ಗಳಲ್ಲಿ ಎದುರಾಳಿ ತಂಡ ರನ್ ಗಳಿಸುವುದು ಕಷ್ಟ.

ಭಾರತ-ಆಸ್ಟ್ರೇಲಿಯಾ ಫೈನಲ್ ಹಣಾಹಣಿ ಭಾರತೀಯ ಕಾಲಮಾನ 2 ಗಂಟೆಗೆ ಆರಂಭವಾಗಲಿದ್ದು, ಭಾರತ ಮಾತ್ರವಲ್ಲದೇ ಜಗತ್ತಿನ ಕೋಟ್ಯಂತರ ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕಾದುನಿಂತಿದ್ದಾರೆ.

ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?
ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ಫೈನಲ್‌ ಗೇರಿದೆ. ಎಲ್ಲರ ಬಾಯಲ್ಲೂ ಕೊಹ್ಲಿ-ರೋಹಿತ್‌, ಬುಮ್ರಾ-ಶಮಿ, ರಾಹುಲ್-ಶ್ರೇಯಸ್‌ ಹೆಸರುಗಳು ಕೇಳಿಬರುತ್ತಿವೆ. ನಿಜ, ಈ ಬಾರಿಯ ಭಾರತ ಕ್ರಿಕೆಟ್‌ ತಂಡದ ಪ್ರತಿಯೊಬ್ಬ ಆಟಗಾರನೂ ಎಲ್ಲರ ಮನಗೆದ್ದಿದ್ದಾರೆ. ಅವರೆಲ್ಲರೂ ಒಂದು ತಂಡವಾಗಿ ಆಡಿದ್ದಾರೆ. ಅಸಾಧ್ಯಗಳನ್ನು ಸಾಧಿಸಿದ್ದಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗೆದ್ದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ಹತ್ತು ಗೆಲುವುಗಳು ಅಷ್ಟು ಸುಲಭವಲ್ಲ. ಎಲ್ಲ ವಿಭಾಗಗಳಲ್ಲೂ ಬಲಶಾಲಿಯಾಗಿರುವ ತಂಡವಷ್ಟೇ ಹೀಗೆ ಗೆಲ್ಲಲು ಸಾಧ್ಯ

ಆದರೆ ಕೇವಲ ಆಡುವ ಹನ್ನೊಂದು ಆಟಗಾರರಿಂದ ಇದೆಲ್ಲ ಸಾಧನೆ ಸಾಧ್ಯವೇ? ಭಾರತ ತಂಡ ಇವತ್ತು ಎದುರಾಳಿಗಳಿಗೆ ನಡುಕ ಹುಟ್ಟಿಸುವ ಪಡೆಯಾಗಿ ನಿಲ್ಲಲು ಮುಖ್ಯಕಾರಣ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್.‌ ಹೀಗಾಗಿ ಭಾರತ ತಂಡದ ಸಾಧನೆಯನ್ನು ದ್ರಾವಿಡ್‌ ಹೆಸರು ಹೇಳದೇ ಶ್ಲಾಘಿಸುವುದು ಅನ್ಯಾಯ. ಹಾಗೆ ನೋಡಿದರೆ ದ್ರಾವಿಡ್‌ ಎಂದೂ ತನ್ನ ಬಗ್ಗೆ ತಾನು ಕೊಚ್ಚಿಕೊಂಡು ಮಾತನಾಡಿದ್ದಿಲ್ಲ. ತಂಡದ ನಾಯಕನನ್ನು ಹಿಂದೆ ಸರಿಸಿ ಎಲ್ಲ ತನ್ನಿಂದನೇ ಆಗುತ್ತಿದೆ ಎಂಬಂತೆ ಫೋಜು ಕೊಟ್ಟವರೂ ಅಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ, ತಂಡದ ಗೆಲುವಿಗೆ ಏನೇನು ಸ್ಟ್ರಾಟರ್ಜಿಗಳನ್ನು ಮಾಡಬೇಕೋ ಮಾಡುತ್ತ, ಆಟಗಾರರನ್ನು ತಿದ್ದುತ್ತ ವಿಶ್ವಕಪ್‌ ಗೆಲ್ಲುವ ಹಂತಕ್ಕೆ ತಂದುನಿಲ್ಲಿಸಿರುವ ದ್ರಾವಿಡ್‌ ನಿಜವಾದ ಅರ್ಥದಲ್ಲಿ ನಿಸ್ವಾರ್ಥಿ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಕಾಲಕ್ಕೆ ದ್ರಾವಿಡ್‌ ʻದಿ ವಾಲ್‌ʼ (ಗೋಡೆ) ಎಂದೇ ಹೆಸರಾದವರು. ಸಾಧಾರಣವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ದ್ರಾವಿಡ್‌ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡುತ್ತಿದ್ದವರು. ಯಾರನ್ನು ಬೇಕಾದರೂ ಔಟ್‌ ಮಾಡಬಹುದು, ಆದರೆ ರಾಹುಲ್‌ ಅವರನ್ನಲ್ಲ ಎಂದು ಇತರೆ ದೇಶಗಳ ಬೌಲರ್‌ ಗಳು ಪರಿತಪಿಸುವಷ್ಟು ಅವರು ಕ್ರೀಜ್‌ ಗೆ ಅಂಟಿ ನಿಲ್ಲುತ್ತಿದ್ದರು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಾಗ ಅತ್ಯಂತ ಹೀನಾಯವಾಗಿ 4-0 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು. ಆದರೆ ರಾಹುಲ್‌ ದ್ರಾವಿಡ್‌ ಆ ಸರಣಿಯಲ್ಲಿ ಗಳಿಸಿದ ರನ್‌ ಗಳ ಸಂಖ್ಯೆ 602! ಛಲ ಬಿಡದೆ ಹೋರಾಡುವುದು ರಾಹುಲ್‌ ಸ್ವಭಾವ.

ದ್ರಾವಿಡ್‌ ಕೋಚ್‌ ಹುದ್ದೆಗೆ ದಿಢೀರನೇ ಬರಲಿಲ್ಲ. ಅದಕ್ಕೆ ಅವರು ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು. ಮೊದಲು ಅವರು 2016ರಲ್ಲಿ ಅಂಡರ್‌-19 ಭಾರತ ತಂಡಕ್ಕೆ ಕೋಚ್‌ ಆದರು. ಆ ಹುದ್ದೆಗೆ ಅಂಥ ಡಿಮ್ಯಾಂಡೇನೂ ಇರಲಿಲ್ಲ. ಆದರೆ ದ್ರಾವಿಡ್‌ ಹೊಸ ತಲೆಮಾರಿನ ಕ್ರಿಕೆಟಿಗರನ್ನು ತಯಾರು ಮಾಡುವ ಕಾರ್ಯದಲ್ಲಿ ತಾವೇ ಆಸಕ್ತಿ ವಹಿಸಿ ಈ ಹುದ್ದೆಗೆ ಬಂದಿದ್ದರು. ಈಗ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಹಲವು ಆಟಗಾರರು ದ್ರಾವಿಡ್‌ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. ಮೂರು ವರ್ಷಗಳ ಕಾಲ ಹೊಸ ಹುಡುಗರಿಗೆ ತರಬೇತಿ ನೀಡಿದ ನಂತರ ದ್ರಾವಿಡ್‌ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (ಎನ್‌ ಸಿ ಎ) ನಿರ್ದೇಶಕರಾಗಿ ಬಂದರು. ಎನ್.ಸಿ.ಎ ಒಂದು ಬಗೆಯಲ್ಲಿ ಆಟಗಾರರಿಗೆ ಸಂಜೀವಿನಿ ಇದ್ದಂತೆ. ಗಾಯಗೊಂಡವರು, ಫಿಟ್ನೆಸ್‌ ಕಳೆದುಕೊಂಡವರು ಇಲ್ಲಿ ಬಂದು ಪರಿಪೂರ್ಣವಾಗಿ ಸಿದ್ಧರಾಗುತ್ತಾರೆ. ಎನ್‌.ಸಿ.ಎ ಯನ್ನು ಸಮರ್ಥವಾಗಿ ಕಟ್ಟುವಲ್ಲಿ ದ್ರಾವಿಡ್‌ ಯಶಸ್ವಿಯಾದರು.

ಇದಾದ ನಂತರವೇ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆದರು. ಅವರು ಕೋಚ್‌ ಆದಾಗ ವಿರಾಟ್‌ ಕೊಹ್ಲಿ ತಂಡದ ನಾಯಕರಾಗಿದ್ದರು. ಆದರೆ ಕೊಹ್ಲಿಯನ್ನು ಒಂದು ಬಗೆಯಲ್ಲಿ ಅಪಮಾನಿಸಿ ನಾಯಕತ್ವದಿಂದ ಇಳಿಯುವಂತೆ ಮಾಡಿತು ಬಿಸಿಸಿಐ. ರೋಹಿತ್‌ ಶರ್ಮಾ ನಾಯಕರಾದರು. ಇಂಥ ಸಂದರ್ಭದಲ್ಲಿ ತಂಡವನ್ನು ಕಟ್ಟುವುದು ಕಷ್ಟದ ಕೆಲಸ. ದ್ರಾವಿಡ್‌ ಸವಾಲಾಗಿ ತೆಗೆದುಕೊಂಡು ಸತತ ಶ್ರಮವಹಿಸಿ ತಂಡ ಕಟ್ಟುತ್ತ ಹೋದರು. ಹೊಸಹೊಸ ಪ್ರಯೋಗಗಳನ್ನು ಮಾಡಿದರು. ಫಾರ್ಮ್‌ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್‌ ಕೈಗೆ ಗ್ಲೌಸ್‌ ಕೊಟ್ಟು ವಿಕೆಟ್‌ ಕೀಪಿಂಗ್‌ ಗೆ ಹಚ್ಚಿದರು. ತಂಡದ ನಾಯಕ ರೋಹಿತ್‌ ಶರ್ಮಾ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡರು. ಭಾರತ ತಂಡದ ಡ್ರೆಸಿಂಗ್‌ ರೂಮ್‌ ಲವಲವಿಕೆಯಿಂದ ತುಂಬಿ ತುಳುಕಿತು. ದ್ರಾವಿಡ್‌ ಎಲ್ಲರಿಗೂ ಸ್ಪೂರ್ತಿಯಾಗಿ ನಿಂತರು.

ದ್ರಾವಿಡ್‌ ಎಂದರೆ ಹಾಗೆಯೇ. ಸದ್ದುಗದ್ದಲವಿಲ್ಲದೆ ತಮ್ಮ ಕೆಲಸ ತಾವು ಮಾಡುವವರು. ಅವರು ಜೋರಾಗಿ ಮಾತಾಡಿದ್ದನ್ನು ನೋಡಿದವರೇ ವಿರಳ. ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು ಎಂಬುದು ಅವರಿಗೆ ಗೊತ್ತು. ಅಷ್ಟೆಲ್ಲ ದೊಡ್ಡ ಸಾಧನೆ ಮಾಡಿಯೂ ಅವರು ಎಲೆಮರೆಯ ಕಾಯಿಯಂತೆ ಉಳಿದವರು. ಈಗಲೂ ಅಷ್ಟೆ. ಭಾರತ ವಿಶ್ವಕಪ್‌ ಗೆದ್ದು ನಿಂತಾಗ ಅವರು ಇದು ನನ್ನ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಮೀಡಿಯಾಗಳ ಕಣ್ಣಿಗೂ ಪದೇಪದೇ ಬೀಳುವುದಿಲ್ಲ. ಅವರು ಹಿನ್ನೆಲೆಯಲ್ಲೇ ನಿಂತು ಸಂಭ್ರಮಿಸುವ ಜೀವ. ದ್ರಾವಿಡ್‌ ಅಂದರೆ ಹಾಗೆಯೇ, ʻಕಾಣ್ತಿದೆ, ಆದರೆ ಕಾಣಾಕಿಲ್ಲʼ!