writer – Peepal Media

ಜಾಗತಿಕ ಸಾಹಿತ್ಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಮಮತಾ ಜಿ ಸಾಗರ ಆಯ್ಕೆ
ಬೆಂಗಳೂರು: ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡಮಾಡುವ ಜಾಗತಿಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಖ್ಯಾತ ಸಾಹಿತಿ ಮಮತಾ ಜಿ ಸಾಗರ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ.

ಸಾಹಿತಿಗಳ ಜಾಗತಿಕ ಸಂಘಟನೆ ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (ಡಬ್ಲ್ಯುಒಡಬ್ಲ್ಯು) ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೆ ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ ಪ್ರದಾನ ಮಾಡಲಾಗುತ್ತಿದೆ ಎಂದು ಸಂಘಟನೆ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಬರುವ ದಿನಗಳಲ್ಲಿ ಸಂಸ್ಕೃತಿ, ಸಾಹಿತ್ಯ ಹಾಗೂ ಆದ್ಯಾತ್ಮಿಕ ಮೌಲ್ಯಗಳನ್ನು ಮಾನವೀಯತೆಯ ಬುನಾದಿಯ ಮೇಲೆ ಸ್ಥಾಪಿಸಿ ಶಾಂತಿ ಹಾಗೂ ಸೌಹಾರ್ದತೆಯನ್ನು ಬೇಡುವ ಜಗತ್ತಿನ ಬರಹಗಾರರ ಕ್ರಿಯಾಶೀಲ ಪ್ರಯತ್ನಗಳನ್ನು ಕಲೆಹಾಕುವುದು ನಮ್ಮ ಪ್ರಯತ್ನ. ಈ ಸಲುವಾಗಿ ಸಾಹಿತಿಗಳ ಜಾಗತಿಕ ಸಂಘಟನೆಯೂ ಶ್ರಮಿಸುತ್ತಿದ್ದು ಇದೇ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಗೌರವಿಸಲು ‘ಡಬ್ಲ್ಯುಒ ಡಬ್ಲ್ಯು- ಜಾಗತಿಕ ಸಾಹಿತ್ಯ ಪ್ರಶಸ್ತಿ’ಯನ್ನು ಸ್ಥಾಪಿಸಿದೆ ಈ ಪ್ರಶಸ್ತಿ ಸಮಾರಂಭವನ್ನು ಪ್ಯಾನ್ ಆಫ್ರಿಕನ್ ಕಂಟ್ರೀಸ್ ಅಸೋಸಿಯೇಶನ್ ಆಫ್ ರೈಟರ್ಸ್, ಅಸೆಂಬ್ಲಿ ಆಫ್ ಯುರೇಷಿಯನ್ ಪೀಪಲ್ಸ್, ರಷ್ಯನ್ ಅಕಾಡೆಮಿ ಆಫ್ ಆರ್ಟ್ಸ್ ಜಂಟಿಯಾಗಿ ಹಮ್ಮಿಕೊಂಡಿವೆ.

ಮಮತಾ ಸಾಗರ ಕನ್ನಡದ ಕವಿ, ಭಾಷಾಂತರಕಾರರು ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಪ್ರಸ್ತುತವಾಗಿ ಮಣಿಪಾಲ್ ವಿ. ವಿಯ ಸೃಷ್ಟಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸೃಜನಾತ್ಮಕ ಬರವಣಿಗೆ ಅಧ್ಯಯನ ಸಂಸ್ಥೆ “ಕಾವ್ಯಸಂಜೆ”ಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ‘ಕಾಡ ನವಿಲಿನ ಹೆಜ್ಜೆ’, ‘ನದಿಯ ನೀರಿನ ತೇವ’ ಮತ್ತು ‘ಹೀಗೆ ಹಳಿಯ ಮೇಲೆ ಹಾಡು’ ಕವನ ಸಂಕಲನಗಳು ಪ್ರಕಟಗೊಂಡಿವೆ. ‘ಹೈಡ್ ಅಂಡ್ ಸೀಕ್’ ಎಂಬ ಕವನಸಂಕಲನವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

‘ಚುಕ್ಕಿ ಚುಕ್ಕಿ ಚಂದಕ್ಕಿ’, ‘ಮೈಯ್ಯೇ ಭಾರ ಮನವೇ ಭಾರ’ ನಾಟಕ ರಚಿಸಿರುವ ಇವರು, ಸ್ವಿಂಗ್‌ ಆಫ್‌ ಡಿಸೈರ್‌ ಎಂಬ ನಾಟಕವನ್ನು ಭಾಷಾಂತರಿಸಿದ್ದಾರೆ.  ಇಲ್ಲಿ ಸಲ್ಲುವ ಮಾತು ಇವರ ಅಂಕಣ ಬರಹ. ಇವರು ಬರೆದ ಫಯಾಜ್ ಅಹಮದ್ ಫಯಾಜರ ‘ಹ್ಯಾಮ್ ದೇಖೇ೦ಗೆ’ ಕವಿತೆಯ ತರ್ಜುಮೆಯು CAA ಪ್ರತಿಭಟನೆಯ ಸಮಯದಲ್ಲಿ ವೈರಲ್ ಆಗಿತ್ತು.  ಸ್ಲೊವೇನಿಯನ್ ಕವಿತೆ ಮತ್ತು ಕಥೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.  ಡಾಂಟೆಯ ಡಿವೈನ್ ಕಾಮಿಡಿಯ ಕ್ಯಾಂಟೋಸ್ 15 ರ ಕನ್ನಡಾನುವಾದವನ್ನು ಇಟಲಿಯ ಲಿಟಲ್ ಮ್ಯೂಜಿಯಂ ನಲ್ಲಿ ಪ್ರಸ್ತುತ ಪಡಿಸಿದ್ದಾರೆ.

ಪ್ರಪಂಚದಾದ್ಯಂತ ಹಲವು ಭಾಷೆಗಳ ಹಲವಾರು ಕವಿಗಳ ಕವಿತೆಗಳನ್ನು ಇವರು ಕನ್ನಡಕ್ಕೆ ತರ್ಜುಮೆ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ.

ಕನ್ನಡದ ಕೆಲಸಕ್ಕಾಗಿ ಚಾರ್ಲ್ಸ್ ವಾಲೇಸ್ ಫೆಲೋಶಿಪ್ ಸಿಕ್ಕಿರುವ ಕನ್ನಡದ ಮೊದಲ ಅಭ್ಯರ್ಥಿ ಇವರು. ಈ ಫೆಲೋಶಿಪ್ ನಲ್ಲಿ ನೂರು ಪ್ರತಿರೋಧ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಮಲೇಷಿಯಾದಲ್ಲಿ ಕಾಮನ್ ವೆಲ್ತ್ ಫೌಂಡೇಶನ್ನಿನಲ್ಲಿ ಮ್ಯಾಂಚೆಸ್ಟರ್, ಹೆಲ್ಸಿಂಕಿ, ಕೊಲಂಬೋ, ಲಂಡನ್, ನಾರಿಚ್, ವೇಲ್ಸ್  ಮುಂತಾದ ಕಡೆಗಳಲ್ಲಿ ಇವರು ಅಂತರಾಷ್ಟ್ರೀಯ ಮಟ್ಟದ ಕಾವ್ಯಗಾರಗಳನ್ನು  ನಡೆಸಿಕೊಟ್ಟಿದ್ದಾರೆ. ಇವರ ಕವಿತೆಗಳು ಭಾರತೀಯ ಬಹುತೇಕ ಭಾಷೆಗಳಿಗೆ ತರ್ಜುಮೆಯಾಗಿರುವುದಲ್ಲದೆ, ಅಂತರರಾಷ್ಟ್ರೀಯ ಮಟ್ಟದಲ್ಲಿ  ವೆಲ್ಷ್, ಸ್ಪಾನಿಷ್, ಜರ್ಮನ್, ಇಟಾಲಿಯನ್, ಸ್ಲೊವೇನಿಯನ್, ಅರಾಬಿಕ್, ಫ್ರೆಂಚ್, ಗ್ಯಾಲೀಷಿಯನ್, ರುಮೇನಿಯನ್, ರಷ್ಯನ್, ಮಾಲ್ಟೀಸ್, ಸಿನ್ಹಳ,  ಸ್ವೀಡಿಷ್, ಇಂಗ್ಲೀಷ್, ಜಪನೀಸ್ , ಚೈನೀಸ್, ವಿಯೆಟ್ನಾಮೀಸ್ ಹೀಗೆ ಹಲವಾರು ಅಂತರಾಷ್ಟ್ರೀಯ ಭಾಷೆಗಳಿಗೂ ತರ್ಜುಮೆಯಾಗಿವೆ.

ಇವರು ‘ಕಾವ್ಯ ಸಂಜೆ’ ಎಂಬ ಸಾಮುದಾಯಿಕ ಕಾವ್ಯ ಗುಂಪನ್ನು ಹುಟ್ಟುಹಾಕಿ ಕನ್ನಡ ಕವಿತೆಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಮ್ಯೂಜ್ ಇಂಡಿಯಾ ಅನ್ಲೈನ್  ಪತ್ರಿಕೆಗೆ ಕನ್ನಡ ಸಂಪಾದಕರಾಗಿ ಹಲವಾರು ವರುಷಗಳಿಂದ ಕನ್ನಡ ಸಾಹಿತ್ಯ ಸಂಸ್ಕೃತಿಯ ಕುರಿತು ಇಂಗ್ಲಿಷಿನಲ್ಲಿ ಬರೆಯುತ್ತಿದ್ದಾರೆ.

ಗುಳೇ ಎದ್ದ ಹನುಮ (ಚಂದ್ರಪ್ರಭ ಕಠಾರಿಯವರ ಕಥೆ)
(ರವಿವಾರ 24.03.2024ರಂದು ಬೆಳಗ್ಗೆ 10.30ಕ್ಕೆ ಚಾಮರಾಜಪೇಟೆಯ ಕಸಾಪ ಭವನದಲ್ಲಿ ಹಿರಿಯ ಕಥೆಗಾರ ಚಂದ್ರಪ್ರಭ ಕಠಾರಿಯವರ ʼನಾಲಿಗೆ, ನೆತ್ತರು ಮತ್ತು ಬುದ್ಧʼ ಎಂಬ ಕಥಾಸಂಕಲನ ಬಿಡುಗಡೆಗೊಳ್ಳುತ್ತಿದೆ. ಆ ಕಥಾ ಸಂಕಲನದ ಆಯ್ದ ಕಥೆ ಇಲ್ಲಿ ನಿಮ್ಮ ಓದಿಗಾಗಿ… ಈ ಕಥೆಯು ಕೊರಾನಾ ಕಾಲಘಟ್ಟದಲ್ಲಿ ಗುಳೆಹೊರಟ ಕಾರ್ಮಿಕರ ಭವಣೆಯ ಬದುಕನ್ನು ನಿರ್ಲಿಪ್ತವಾಗಿ ನಿರೂಪಿಸುತ್ತಾ ಹೋಗುತ್ತದೆ.)

ಕತೆ ಬರೆದು ಮುಗಿಸಿದ ರಾಮಣ್ಣನಿಗೆ ಎದೆಭಾರ ಕಮ್ಮಿಯಾದಂತಾಯಿತು.

ರಿಮೋಟನ್ನು ಯಾಂತ್ರಿಕವಾಗಿ ಕೈಗೆತ್ತಿಕೊಂಡವನು ಮತ್ತೆ ಅದನ್ನು ಕೆಳಗಿಟ್ಟು, “ಕೊರೊನಾ ಮಹಾಮಾರಿ ಹಾವಳಿ: ಕೊರೊನಾ ರುದ್ರ ನರ್ತನ: ಕೊರೊನಾ ಸಾವಿನ ಕೇಕೆ: ಕೊರೊನಾ ಮರಣಮೃದಂಗ” ಎಂದು ಆರ್ಭಟಿಸುವ, ಬರೀ ಸಾವಿನ ಸಮಾಚಾರವನ್ನೇ ಉತ್ಪ್ರೇಕ್ಷಿಸಿ ಪ್ರಸಾರ ಮಾಡುತ್ತ ಭಯವನ್ನು ಹುಟ್ಟು ಹಾಕುವ ಟೀವಿಯ ಸುದ್ದಿಯನ್ನು ಇನ್ಮುಂದೆ ನೋಡಬಾರದೆಂದು ನಿರ್ಧಾರ ಮಾಡಿದ. ಹೊಟ್ಟೆ ಚುರುಗುಟ್ಟುತ್ತಿದ್ದು ಅಡುಗೆಮನೆಯಲ್ಲಿ ಮಧ್ಯಾಹ್ನ ಮಾಡಿದ್ದ ಅನ್ನ, ಸ್ವಲ್ಪ ಹುಳಿಗೊಜ್ಜು ಮಿಕ್ಕಿತ್ತು. ಮೊಸರು ಖಾಲಿಯಾಗಿ ತರೋಣವೆಂದರೆ ಆಲಸ್ಯ ಕಾಡಿ, ಅಲ್ಲದೆ ಇಷ್ಟೊತ್ತಲ್ಲಿ ಕಿಟ್ಟಪ್ಪನ ಅಂಗಡಿ ತೆರೆದಿರುತ್ತದೊ ಇಲ್ಲವೋ ಎಂದುಕೊಂಡು ಅನ್ನಕ್ಕೆ ಗೊಜ್ಜು ಕಲಸಿಕೊಂಡು ತಿಂದು ಊಟದ ಶಾಸ್ತ್ರ ಮುಗಿಸಿದ. ಬರೆದ ಕತೆಯನ್ನು ಮತ್ತೊಮ್ಮೆ ಓದುತ್ತ ಕೂತಾಗ ಕಣ್ಣಿಗೆ ನಿದ್ದೆಹತ್ತಿ ಹಾಗೆ ಹಾಸಿಗೆಗೆ ಹೊರಳಿದ.

ಆ ನಟ್ಟಿರುಳು – ಮುಖ ಮುಚ್ಚಿ, ಗುಬರ ಹಾಕಿಕೊಂಡು ಗಡದ್ದಾಗಿ ಮಲಗಿದ್ದ ರಾಮಣ್ಣನಿಗೆ ಯಾರೋ ಕೂಗಿದಂತಾಗಿ ತನ್ನನ್ನು ಅಲುಗಾಡಿಸಿದಂತೆ ಭಾಸವಾಯಿತು. ಗಾಬರಿಯಿಂದ ಗುಬರ ತೆಗೆದು ಅರೆನಿದ್ದೆಯಲ್ಲಿ ಎಚ್ಚೆತ್ತು ನೋಡಿದರೆ ರೂಮಲ್ಲಿ ಏನು ವಿಶೇಷ ಕಾಣಲಿಲ್ಲ. ತುಸು ಹೊತ್ತು ಕುಳಿತವನು ಭ್ರಮೆಯಿರಬೇಕೆಂದು ಮತ್ತೆ ನಿದ್ದೆಗೆ ಜಾರಿದ. ಅರೆತಾಸು ಕಳೆದಿರಬಹುದು. ಮತ್ತದೇ ಅನುಭವ. ಈಗ ಯಾರೋ ಪಾದವನ್ನು ಮುಟ್ಟಿದಂತಾಯಿತು. ಸರಕ್ಕೆಂದು ಕಾಲನ್ನು ಎಳೆದುಕೊಂಡು ಮುಸುಕು ಸರಿಸಿ ಎದ್ದವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಎದುರಿಗೆ ಕುಕ್ಕರಗಾಲಿನಲ್ಲಿ ಹನುಮ ಕುಳಿತಿದ್ದಾನೆ. ಅಳು ಮುಖ ಹೊತ್ತು “ನೀವು ಹೀಗೆ ಮಾಡಬಾರದಿತ್ತು…ಸಾರ್” ಅಂದ. ರಾಮಣ್ಣ ನಖಶಿಖಾಂತ ಬೆವೆತುಹೋಗಿದ್ದ.

ರಾತ್ರಿಯೆಲ್ಲ ಹನುಮನ ಕನವರಿಕೆಯಲ್ಲಿ ಏಳುವುದು, ಮಲಗುವುದು ಮಾಡುತ್ತಿದ್ದವನಿಗೆ ಮುಂಜಾನೆ ಹೊತ್ತಿಗೆ ಚೆನ್ನಾಗಿ ನಿದ್ದೆ ಹತ್ತಿತ್ತು. ಏನನ್ನೋ ನೆನಪಿಸಿಕೊಂಡವನಂತೆ ಗಡಬಡಿಸಿ ಎದ್ದು ನೋಡಿದರೆ ಗೋಡೆ ಗಡಿಯಾರ ಆಗಲೇ ಸಮಯ ಒಂಭತ್ತುವರೆಯಾದದ್ದನ್ನು ತೋರುತ್ತಿತ್ತು. ಹಾಸಿಗೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದ ಲುಂಗಿಯನ್ನು ಸುತ್ತಿಕೊಂಡು, ಕೈಚೀಲ ಹಿಡಿದು ಅವಸರದಲ್ಲಿ ರಾಮಣ್ಣ ತರಕಾರಿ ಮಾರ್ಕೆಟ್ಟಿಗೆ ನಡೆದ. ಕರ್ಫ್ಯೂಗೆ ಕೇವಲ ಇನ್ನರ್ಧ ಗಂಟೆ ಬಾಕಿಯಿತ್ತು. ಅಷ್ಟರಲ್ಲಿ ಹಾಲು, ಮೊಸರು, ತರಕಾರಿ ಕೊಂಡು ಮನೆ ಸೇರಬೇಕಿತ್ತು.

ಮಾರ್ಕೆಟ್ಟಿಗೆ ಬಂದರೆ ಅಲ್ಲಿ ಎಲ್ಲೆಲ್ಲೂ ಜನವೋ, ಜನ. ಕೆಲವರು ಭಂಡಧೈರ್ಯದವರು ಮಾಸ್ಕನ್ನೇ ತೊಟ್ಟಿರಲಿಲ್ಲ. ಇನ್ನೂ ಕೆಲವರು ನೆಪ ಮಾತ್ರಕ್ಕೆ ತೊಟ್ಟಿದ್ದರೂ ಅದು ಕುತ್ತಿಗೆಯಲ್ಲಿ ನೇತಾಡುತ್ತಿತ್ತು. ಜನಜಂಗುಳಿಯಲ್ಲಿ ದಾರಿ ಮಾಡಿಕೊಂಡು ತನ್ನ ವರ್ತನೆಯ ಕಿಟ್ಟಪ್ಪನ ಅಂಗಡಿಯತ್ತ ಮುನ್ನುಗ್ಗುತ್ತಿದ್ದವನಿಗೆ “ಸಾರ್…ನಿಲ್ಲಿ!” ಎಂದು ಯಾರೋ ಜೋರಾಗಿ ಕೂಗಿದಂತಾಯಿತು. ಹಿಂತಿರುಗಿ ನೋಡಿದರೆ ಅಷ್ಟು ಜನರಲ್ಲಿ ಕೂಗಿದ್ದು ಯಾರು, ಯಾರಿಗೆಂದು ತಿಳಿಯಲಿಲ್ಲ. ಮುಂದಕ್ಕೆ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಮತ್ತದೇ ಕೂಗು ಕೇಳಿ ಬಂತಾದರೂ ತನ್ನನ್ನು ಕರೆದದ್ದು ಅಲ್ಲವೆಂದು ಎಣಿಸಿ ಮುನ್ನೆಡೆದ.

ಹಾಳಾದರೂ ಪರವಾಗಿಲ್ಲ ವಾರಕ್ಕೆ ಬೇಕಾಗೊವಷ್ಟು ತರಕಾರಿ ಕೊಳ್ಳಬೇಕು. ಇಲ್ಲದಿದ್ರೆ ಈ ಜನರ ಮಧ್ಯೆ ಸೇರಿ ಸೋಂಕು ಅಂಟಿಸಿಕೊಳ್ಳೊದು ಗ್ಯಾರಂಟಿ ಅಂದುಕೊಂಡು ಅಂಗಡಿಯಲ್ಲಿ ತರಕಾರಿ ಆರಿಸುತ್ತಿರುವಾಗ, ನೆಲದ ಮೇಲೆ ನಿಧಾನವಾಗಿ ಸರಿದ ನೆರಳನ್ನು ನೋಡಿ, ಹಿಂದಕ್ಕೆ ತಿರುಗಿದರೆ ದುಗುಡದಿಂದ ಹನುಮ ಕೈಮುಗಿದು ನಿಂತಿದ್ದ. “ಸಾರ್…ಏನಾದರೂ ಮಾಡಿ ಅಪ್ಪನನ್ನು ಉಳಿಸಿ” ಎಂದು ಗೋಗರೆಯುತಲ್ಲಿದ್ದ. ಕಲ್ಲಿನ ಹಾಗೆ ನಿಂತ ರಾಮಣ್ಣ ಅದೆಷ್ಟು ಹೊತ್ತು ಹಾಗೆ ನಿಂತನೋ! ಅಂಗಡಿ ಮಾಲೀಕ ಕಿಟ್ಟಪ್ಪ “ಏನಾಯ್ತ ಸ್ವಾಮಿ? ಹಂಗೆ ನಿಂತ್ಬುಟ್ರಿ…ಬ್ಯಾಗ್ ಹಿಡೀರಿ…ಟೈಮ್ ಆಗುತ್ತೆ” ಅಂದ. ತನಗೇನಾಗುತ್ತಿದೆ? ಎರಡು ಕೈಲಿ ಬ್ಯಾಗಿಡಿದು ರಾಮಣ್ಣ ಅಲ್ಲಿಂದ ಮನೆಯತ್ತ ಓಡಿದ.

ಮಕ್ಕಳಿಗೆ ಮೊಬೈಲಲ್ಲೇ ಪಾಠ ಮಾಡೋದು ಅಂತಾದರೆ, ಸ್ಕೂಲಿಗೆ ಯಾಕೆ ಹೋಗಬೇಕು? ಮನೆಯಲ್ಲೇ ಮಾಡಬಹುದಿತ್ತು. ಆದರೆ, ಜಿಗುಟು ಆಸಾಮಿ ಹೆಡ್ ಮಾಸ್ಟರ್ ಶಾಲೆಯ ವೇಳೆಯಂತೆ ತರಗತಿಯಲ್ಲೇ ಪಾಠ ಮಾಡಬೇಕೆಂದು ಆಜ್ಞೆಮಾಡಿದ್ದ.

ಕ್ಲಾಸ್ ರೂಮಿಗೆ ಬಂದ ರಾಮಣ್ಣ ಬ್ಲಾಕ್ ಬೋರ್ಡ್ ಒರೆಸಿ, ಆರನೇ ತರಗತಿಗೆ ರೇಖಾಗಣಿತ ಪಾಠ ಮಾಡಲು ಜ್ಯಾಮಿತಿ ಚಿತ್ರಿಸಿದ. ವಿದ್ಯಾರ್ಥಿಗಳಿಲ್ಲದೆ ಖಾಲಿ ಬೆಂಚುಗಳಿದ್ದ ಕೋಣೆಯಲ್ಲಿ ಒಬ್ಬನೇ, ಟ್ರೈಪಾಡಿಗೆ ಸಿಗಿಸಿದ್ದ ಮೊಬೈಲ್ ಫೋನನ್ನು ನೋಡುತ್ತ ಗೋಡೆಗಳಿಗೆ ಪಾಠ ಮಾಡುವುದು ಹಿಂಸೆಯೆನಿಸುತ್ತಿತ್ತು. ಹಾಗೆ ಬೋರ್ಡಿನ ಮೇಲೆ ಚಿತ್ರಿಸಿದ ಜ್ಯಾಮಿತಿ ಚಿತ್ರವನ್ನು ತೋರುತ್ತ, ಪಟಪಟಾಂತ ಲೆಕ್ಕ ಹೇಳುತ್ತ ಪ್ರಮೇಯಗಳನ್ನು ಬಿಡಿಸುತ್ತಿರಬೇಕಾದರೆ, ಕೊಠಡಿಯ ಹೊರಗಡೆ ಯಾರೋ ಬಂದು ನಿಂತಂತಾಯಿತು.

“ಮಕ್ಕಳೇ, ಒಂದು ನಿಮಿಷ ಬಂದೆ” ಎಂದು ಮೊಬೈಲ್ ಕ್ಯಾಮೆರಾಗೆ ಹೇಳಿ ಹೊರಗೆ ಬಂದ. ಹಳೇ ಮಾಸಲು ಪ್ಯಾಂಟು, ಶರಟು ತೊಟ್ಟು ಯುವಕನೊಬ್ಬ ನಿಂತಿದ್ದ. “ಯಾರು? ಏನು ಬೇಕಿತ್ತು?” ಅನ್ನುವಾಗ್ಗೆ, ಬೆನ್ನನ್ನು ತೋರಿ ನಿಂತಿದ್ದ ಹನುಮ ತಿರುಗಿದ. “ಸಾರ್..ನೀವು ಭಾಳ ಅನ್ಯಾಯ ಮಾಡುದ್ರಿ” ಅಂದು, ಕಣ್ಣೀರು ಹಾಕತೊಡಗಿದ. ತನಗರಿಯದಂತೆ ರಾಮಣ್ಣ ಕೈಲಿದ್ದ ಚಾಕ್ ಪೀಸನ್ನು ತುಂಡುತುಂಡು ಮಾಡುತ್ತ ನಿರುತ್ತರನಾಗಿ ನಿಂತ.

ಕತೆ ಬರೆದು ನಿರುಮ್ಮಳನಾದೆನೆಂದು ಕೊಂಡರೆ, ಹನುಮನ ಪಾತ್ರ – ಪ್ರಾಥಮಿಕ ಶಾಲೆಯ ಅಧ್ಯಾಪಕ ರಾಮಣ್ಣನನ್ನು ಬಹುವಾಗಿ ಆವರಿಸಿ, ಕಾಡತೊಡಗಿತ್ತು. ನಿಂತಲ್ಲಿ, ಕುಂತಲ್ಲಿ,  ಹೋದೆಡೆಲೆಲ್ಲ – ಬೆಳಗಿನ ಹೊತ್ತು ಸಾಲದೆಂದು ರಾತ್ರಿ ನೆಮ್ಮದಿಯ ನಿದ್ರೆಯಲ್ಲೂ ಹೊಕ್ಕು ಪರಿಪರಿಯಾಗಿ ಹನುಮ ಬೆನ್ನು ಹತ್ತಿದ್ದ.

ಬೆಂಗಳೂರಿನ ಹೊಸೂರ್ ರೋಡಲ್ಲಿ ಸಿವಿಲ್ ಕಂಟ್ರಾಕ್ಟರೊಬ್ಬರ ಬಳಿ, ಗಗನಚುಂಬಿ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಹನುಮ. ಎಲ್ಲೆಡೆ ಕೊರೊನಾ ಕಾಯಿಲೆ ಹೆಚ್ಚಾಗಿ ಹಠಾತ್ತಾಗಿ ಲಾಕ್ ಡೌನ್ ಆಗಿ, ದಿನರಾತ್ರಿ ಪಾದರಸದಂತಿದ್ದ ಇಡೀ ನಗರ ಕಾಲು ಮುರಿದುಕೊಂಡು ಅನಾಥವಾಗಿ ಬಿದ್ದಾಗ, ರೂಮೊಳಗೆ ಬಂಧಿಯಾಗಿ ಮುಂದೇನು? ಎಂದು ಕಂಗಾಲಾಗಿದ್ದ. ಮೂರು ಕಾಸು ಇಲ್ಲದೆ ಮೂರೊತ್ತಿನ ಕೂಳಿಗೆ ಏನು ಮಾಡೋದೆಂದು ಚಿಂತಿತನಾಗಿದ್ದಾಗ, ಉತ್ತರಭಾರತದ ಬಿಹಾರದಿಂದ ಬಂದು ಹನುಮನೊಡನೆ ಕೆಲಸ ಮಾಡುತ್ತಿದ್ದ, ಅವನಿದ್ದ ರೂಮನ್ನು ಹಂಚಿ ಕೊಂಡಿದ್ದ ಅನ್ಸರ್ ಮತ್ತು ರಂಜೀತರಿದ್ದಕ್ಕಾಗಿ ಸದ್ಯಕ್ಕೆ ಹೊಟ್ಟೆಗೇನು ತೊಂದರೆಯಿರಲಿಲ್ಲ. ತನ್ನಲ್ಲಿದ್ದ ಅಕ್ಕಿ, ಜೋಳದ ಹಿಟ್ಟು ಇತ್ಯಾದಿ ರೇಷನ್ನು ದಿನಕಳೆದಂತೆ ಖಾಲಿಯಾಗಿ ಅಡುಗೆ ಸ್ಟೋವ್ ತಣ್ಣಗಾದಾಗ, ಅವರು ಮಾಡಿಕೊಂಡ ರೋಟಿ ಪೂರಿಯನ್ನು ಇವನೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದರು. ಆದರೆಷ್ಟು ದಿನ ಅವರ ಬಳಿ ಇರುವ ಸಾಮಗ್ರಿ ಅಡುಗೆಗೆ ಬಂದೀತು ಅಥವಾ ಹರಕುಮುರುಕು ಹಿಂದಿಯಲ್ಲಿ ತಾನೆಷ್ಟು ದಿನ ನಾಚಿಕೆಯಿಲ್ಲದೆ ಊಟ, ತಿಂಡಿಗೆ ಕೈಯೊಡ್ಡುವುದು?

ಊರಲ್ಲಿ – ಹಳೇ ಕಂತು ಕಟ್ಟದೆ ವ್ಯವಸಾಯಕ್ಕೆಂದು ಬ್ಯಾಂಕಲ್ಲಿ ಸಾಲ ಸಿಗದಾಗ, ಮೀಟರ್ ಬಡ್ಡಿ ಲೆಕ್ಕಾಚಾರದಲ್ಲಿ ಸಾಲ ಮಾಡಿ ಹಾಕಿದ್ದ ಮೆಕ್ಕೆ ಜೋಳ, ಮೋಡ ಮುನಿಸಿಕೊಂಡು ಮಳೆ ಕೈಕೊಟ್ಟು, ಅಂದುಕೊಂಡಷ್ಟು ಫಸಲು ಕೈಗೆ ಬಾರದೆ ಬರಬಾದಾಗುವ ಪರಿಸ್ಥಿತಿ ಹನುಮನ ಅಪ್ಪನಿಗೆ ಬಂದಿತ್ತು. ಸಾಲ ಕೊಟ್ಟ ದಲ್ಲಾಳಿ ದಿನಾ ಮನೆಯ ಮುಂಬಾಗಿಲಿಗೆ ನಿಂತು ಕೂಗಾಡುವುದು ದಿನಂಪ್ರತಿ ಸಾಗಿ, ಹಳ್ಳಿಯಲ್ಲಿ ತಲೆಯೆತ್ತಿ ಓಡಾಡದಂತಾಗಿ ಹನುಮನ ಅಪ್ಪ ಕಂಗೆಟ್ಟು ಹಣ ಕಳುಹಿಸಲು ಕೇಳಿದ್ದ. ಭೂತಾಯಿಯನ್ನು ಅಪಾರ ನಂಬುವ ಅಪ್ಪನ ಎಂದೂ ಮುಗಿಯದ ಗೋಳಿನ ಕತೆಗೆ ಕೊನೆಯೇ ಇಲ್ಲವೇ? ಎಂದು ನಿಟ್ಟುಸಿರಿಟ್ಟು, ಖರ್ಚಿಗೂ ಉಳಿಸಿಕೊಳ್ಳದೆ ಬ್ಯಾಂಕಲ್ಲಿದ್ದ, ಟ್ರಂಕಿನ ತಳದಲ್ಲಿ ಬಟ್ಟೆಗಳ ಮಧ್ಯೆ ತುರ್ತು ಕಾಲದಲ್ಲಿ ಸಿಗಲಿ ಎಂದಿಟ್ಟಿದ್ದ, ಕೊನೆಗೆ ಜೇಬಲ್ಲಿ ಇದ್ದ ಎಲ್ಲಾ ದುಡ್ಡನ್ನು ಅಪ್ಪನ ಬ್ಯಾಂಕಿನ ಅಕೌಂಟಿಗೆ ಹಾಕಿ ಬಂದಿದ್ದ ಹನುಮ. ಆದರೆ, ಸಹ ಕೆಲಸಗಾರರೊಂದಿಗೆ ಹಂಚಿಕೊಂಡಿದ್ದ ಮನೆಬಾಡಿಗೆ ಕಟ್ಟದೆ ಆಗಲೇ ಮೂರು ತಿಂಗಳಾಗಿದ್ದು ಆ ಹೊತ್ತಿಗೆ ಅವನಿಗೆ ಮರೆತೇ ಹೋಗಿತ್ತು.

ಲೋಕಲ್ ಪೊಲಿಟಿಶಿಯನ್ ಕಮ್ – ಅನಾಮಧೇಯ ಸೈಟುಗಳಲ್ಲಿ ಕಟ್ಟಿಸಿದ್ದ ಹಲವು ಶೆಡ್ ಗಳ, ಮುಟ್ಟಿದರೆ ಬೀಳುವಂತಿದ್ದ ಮನೆಯ ಓನರ್, ಆ ದಿನ ಬೆಳಿಗ್ಗೆ ಸೂರ್ಯ ಕಣ್ಣು ಬಿಡುವ ಹೊತ್ತಿಗೆ ಪ್ರತ್ಯಕ್ಷನಾಗಿ “ಪರದೇಶಿ ನನ್ಮಗನೇ! ಬಾಡಿಗೆ ಕೊಡ್ದೆ ಇರೋಕೆ ಇದೇನು ತೋಂಟದಪ್ಪನ ಛತ್ರನಾ? ಕೈಗೆ ಸಿಕ್ದೆ ತಲೆ ಮರೆಸಿಕೊಂಡು ಓಡಾಡ್ತೀಯಾ? ದುಡ್ಡು ಮಡಗು ಇಲ್ಲಾ ಮನೆ ಖಾಲಿ ಮಾಡು” ಎಂದು ಗಲಾಟೆ ಮಾಡಿದ್ದ. ಆಗಲೂ ಅನ್ಸರ್, ರಂಜೀತ್ – ಹನುಮನ ಬಾಡಿಗೆಯ ಭಾಗವನ್ನು ತಾವೇ ಕೊಟ್ಟು ಉಪಕರಿಸಿದ್ದರು. ಈಗ ಲಾಕ್ ಡೌನ್ ಆಗಿ ಕೆಲಸವಿಲ್ಲ. ಮುಂದೆ ಎಷ್ಟು ತಿಂಗಳಿಗೆ ಮತ್ತೆ ಕೆಲಸ ಆರಂಭವಾಗುತ್ತೆ, ಗೊತ್ತಿಲ್ಲ? ಹುಷಾರಿ ಕಂಟ್ರಾಕ್ಟರ್, ಅರ್ಧದಲ್ಲಿ ಕೆಲಸಕ್ಕೆ ಕೈಕೊಟ್ಟು ಓಡಿಹೋಗುತ್ತಾರೆಂದು ಎರಡು ತಿಂಗಳ ಕೂಲಿಯನ್ನು ತನ್ನಲ್ಲೇ ಇರಿಸಿಕೊಂಡಿದ್ದಾನೆ. ಊಟಕ್ಕೆ, ಬಾಡಿಗೆಗೆ ತೊಂದರೆಯಾಗಿದೆಯೆಂದು ದುಡ್ಡು ಕೇಳಿದರೆ “ಮಾಡಿದ ಕೆಲಸದ ಬಿಲ್ಲು ಇನ್ನು ಪಾಸಾಗಿಲ್ಲ. ಬಂದಾಗ ನೋಡೋಣ” ಎಂದು ಇಲ್ಲದ ಸಬೂಬನ್ನು ಹೇಳಿ ತಾರಮ್ಮಯ್ಯ ಕೈ ಆಡಿಸಿದ್ದ.

ಪ್ಲಾಸ್ಟರ್ ಅಲ್ಲಲ್ಲಿ ಕಿತ್ತು ತೊನ್ನು ಬಂದಂತಿದ್ದ ಗೋಡೆಗಳ, ಹಂದಿಗೂಡಿನಂತಿದ್ದ ಆ ಅರಮನೆಯಲ್ಲಿ ಬಹಳಷ್ಟು ದಿನ ಇರಲಾಗದು. ನೋಡು ನೋಡುತ್ತಿದ್ದಂತೆ ತಿಂಗಳ ಕೊನೇ ದಿನ ಬಂದು ಕ್ಯಾಲೆಂಡರ್ ಮುಗುಚಿಕೊಳ್ಳುತ್ತದೆ. ಲಾಕ್ ಡೌನ್ ಆಗಿ ರೂಮಲ್ಲೇ ಲಾಕಾಗಿ ಕೆಲಸವಿಲ್ಲದೆ, ಕೂಲಿಯೂ ಇಲ್ಲದ್ದಕ್ಕೆ ಕನಿಕರ ತೋರುವ ಆಸಾಮಿಯೇ ಮನೆಓನರ್? ತಾರೀಖು ಒಂದಕ್ಕೆ ಕರಗದ ಕುಣಿತ ಮಾಡುತ್ತ ವಕ್ಕರಿಸುತ್ತಾನೆ. ಆದಷ್ಟು ಬೇಗ ತನ್ನೂರಿಗೆ ಹೊರಟು ಬಿಡಬೇಕೆಂದು ಹನುಮ ನಿರ್ಧರಿಸಿದ.

ಟೀವಿಯಲ್ಲಿ, ಪೇಪರಿನಲ್ಲಿ ಹೇಗೊ ಜನರು ಬಸ್ಸು, ರೈಲಿನ ವ್ಯವಸ್ಥೆಯಿಲ್ಲದೆ ಕಾಲ್ನಡಿಗೆಯಲ್ಲೇ ತಮ್ಮೂರಿಗೆ ಹೆಜ್ಜೆ ಹಾಕುತ್ತ ಬೀಳುತ್ತಿದ್ದ ಪಡಿಪಾಟಲ ಬಗ್ಗೆ ಸುದ್ದಿ  ನಿರಂತರವಾಗಿ ಬರುತ್ತಿದ್ದದ್ದು, ಅವರೊಂದಿಗೆ ತಾನೂ ಒಬ್ಬನಾದೇನೆಂಬುದು ಒಂದು ಸಮಾಧಾನ. ಮಲಗುವ ಚಾಪೆ, ಚಾದರ, ಅಡುಗೆ ಸಾಮಾನುಗಳನ್ನು ಒಂದು ಮೂಲೆಗೆ ಕಟ್ಟಿಟ್ಟು, ಬ್ಯಾಗಿಗೆ ಒಂದಷ್ಟು ಬಟ್ಟೆ ತುರುಕಿ, ಪೂರಾ ಚಾರ್ಜ್ ಮಾಡಿದ ಮೊಬೈಲ್ ಹಿಡಿದು, ಸಹವಾಸಿಗಳು ಕೊಟ್ಟ ಉದ್ರಿ ಹಣವನ್ನು ಒಳನಿಕ್ಕರ್ ಜೇಬಿನಲ್ಲಿಟ್ಟ ಹನುಮ, “ಭಯ್ಯಾ…ಅಭಿ ಕ್ಯಾಕರೇಗ..ಮೇ ಗಾಂವ್ ಕು ಜಾತಾ ಹು. ತುಮಾರ ಪೈಸಾ ವಾಪಸ್ ಬಂದಾಗ ದೂಂಗಾ” ಎಂದು, ಅವರಿಗೂ ಅವರೂರಿಗೆ ಹೋಗಲು ಹೇಳಿದ. ರೈಲು ಸಂಚಾರ ಶುರುವಾಗದೇ ಅವರಾದರೂ ಹೇಗೆ ಹೋದಾರು? “ಹಮಾರ ಪೈಸಾ ಕ ಚಿಂತಾ ನಾ ಕರ್. ಬಾದ್ ಮೆ ದೇಸಕ್ತೆ. ಒಶಿಯರ್ ರೆಹೆನಾ. ಮಾಸ್ಕ್ ಮತ್ ನಿಕಲೊ…ಪೊಲೀಸ್ ಕೆ ಪಾಸ್ ಮತ್ ಜಾನಾ” ಎಂದು ರೂಮಿನಿಂದ ಭಯದ ಹಾರ ಹಾಕಿ ಬೀಳ್ಕೊಟ್ಟರು.

ತನ್ನೂರು ಬೆಂಗಳೂರಿನ ಪಕ್ಕದಲ್ಲಿದೆಯೇ? ಹಾವೇರಿಯ ಸಮೀಪ ಬೆಂಚಿಹಳ್ಳಿ. ಸರಿಸುಮಾರು ನಾಲ್ಕುನೂರು ಕಿಲೋಮೀಟರ್ ದೂರದ್ದು. ದಿನಕ್ಕೆ ಎಷ್ಟು ದೂರ ನಡೆಯಬಹುದು? ಎಷ್ಟು ದಿನ…ಅಲ್ಲ…ಎಷ್ಟು ತಿಂಗಳಿಗೆ ಹಳ್ಳಿ ತಲುಪುವುದು? ದಾರಿಯಲ್ಲಿ ಊಟತಿಂಡಿಗೇನು ಮಾಡುವುದು? ಯಾವ ಚಿಂತೆಯನ್ನು ಮಾಡದೇ ಬೆನ್ನಿಗೆ ಬ್ಯಾಗನ್ನು ಅಂಟಿಸಿ ಹನುಮ ರಸ್ತೆಗಿಳಿದಿದ್ದ. ಅವನಿಗಿದ್ದ ಒಂದು ಧೈರ್ಯ- ದೂರದ ಊರಿಂದ ಬೇರೆ ಬೇರೆ ಕೆಲಸವನರಸಿ ಬಂದು, ನೆಲೆ ನಿಂತು, ತುತ್ತಿನ ಚೀಲ ತುಂಬಿಸಿಕೊಂಡವರು ಅಪ್ಪಿಕೊಂಡ ಬೆಂಗಳೂರಿನ ಕರುಳು ಬಳ್ಳಿಯನ್ನು ಏಕಾಏಕಿ ಕತ್ತರಿಸಿ ಈಗಾಗಲೇ ಗುಳೇ ಹೊರಟಿದ್ದಾರೆಂಬುದು. ಹೇಗೊ ತನ್ನೂರು ತಲುಪಿದರೆ, ಅಲ್ಲಿ ಉಪವಾಸವೊ, ವನವಾಸವೊ – ಮನೆಯವರೊಟ್ಟಿಗೆ ಹೇಗಿದ್ದರೂ ಸಂತೋಷವೆ!

ತಾನಿದ್ದ ಅಷ್ಟ ದಾರಿದ್ರ್ಯದ – ರಸ್ತೆಯಲ್ಲೇ ಕೊಚ್ಚೆ ಹರಿಯುವ, ಬೆಳಗಲ್ಲೇ ಗುಯ್ ಗುಡುವ ಸೊಳ್ಳೆ ಸಾಮ್ರಾಜ್ಯದ, ಗಬ್ಬುನಾರುವ  ಜಾಗವನ್ನು, ಸಂದಿಗೊಂದಿಗಳನ್ನು ದಾಟಿ, ದುಡಿಮೆಯ ನೆನಪುಗಳನ್ನು ಹಿಂದೆ ಬಿಟ್ಟು ಮೇನ್ ರೋಡಿಗೆ ಬಂದಾಗ ಹನುಮನ ಕೈಕಾಲು ಮರಗಟ್ಟಿ ಗಕ್ಕನೆ ನಿಂತ. ನರಪಿಳ್ಳೆ, ನಾಯಿಗಳಿಲ್ಲದೆ ಬಿಕೋ ಎನ್ನುತ್ತ ಉದ್ದುದ್ದ ತಣ್ಣಗೆ ಮಲಗಿದ್ದ ರಸ್ತೆಗಳು. ಲೋಕದ ವ್ಯಾಪಾರವೆಲ್ಲ ಸ್ತಬ್ಧವಾಗಿ ಭೂಮಿ ಸುತ್ತುವುದು ನಿಂತಿತೊ ಎಂಬಂತೆ ಎಲ್ಲೆಲ್ಲೂ ಸ್ಮಶಾನ ಮೌನ! ರೂಮಿನಲ್ಲಿ ಅನ್ಸರ್, ರಂಜೀತರ ಜೊತೆ ಅರ್ಧಂಬರ್ಧ ಅರ್ಥವಾಗುತ್ತಿದ್ದ ಅವರೂರಿನ ಕತೆ, ಹರಟೆ – ಏನನ್ನೋ ಹೇಳಿ ಬಿದ್ದು ಬಿದ್ದು ಅವರು ನಗುತ್ತಿದ್ದಾಗ ಪೆಕರನಂತೆ ತಾನು ಸುಮ್ಮನೆ ನಗುತ್ತಿದ್ದದ್ದು ನೆನಪಾಗಿ, ರೂಮು ಅಸಹನೀಯವೆಂದು ಕೊಂಡಿದ್ದರೆ ಹೊರ ಜಗತ್ತು ರೌರವ ನರಕವೆನಿಸಿತು.

ಬಿಳಿ ಹೆಬ್ಬಾವಿನಂತೆ ಮಲಗಿದ್ದ ವೈಟ್ ಟಾಪಿಂಗ್ ರಸ್ತೆಯಲ್ಲಿ ಒಬ್ಬಂಟಿಯಾಗಿ ಸಾಗಿದಾಗ, ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಇಟ್ಟಿದ್ದ ಬ್ಯಾರಿಕೇಡುಗಳು. ಮಾಸ್ಕ್ ಹಾಕಿ, ಉಸಿರುಗಟ್ಟಿ ಹಾಗೆ ತೂಕಡಿಸುತ್ತಿದ್ದ ಪೋಲಿಸರು. ಆಗಾಗ್ಗೆ, ಅಶರೀರವಾಣಿಯಂತೆ ಶೂನ್ಯದಲ್ಲಿ ಕೇಳುತ್ತಿದ್ದ ಸೈರನ್ ಧ್ವನಿಯು ಹತ್ತಿರವಾಗುತ್ತ ಎದೆಗೂಡು ಚೂರಾಗುವಂತೆ ಚೀರಿ, ಪಕ್ಕದಲ್ಲೇ ಮಿಂಚಿನಂತೆ ಸರಿದು ಹೋಗುವ ಆಂಬುಲೆನ್ಸುಗಳು. ಅದ್ಯಾವ ಕಾಡಲ್ಲಿ ತಣ್ಣಗಿದ್ದ ಆ ಸೂಕ್ಷ್ಮಜೀವಿ, ನಗರ ಹೊಕ್ಕು, ವಿಶ್ವವ್ಯಾಪ್ತಿಯಾಗಿ ರಕ್ತಬೀಜಾಸುರನಾಗಿ ಹರಡಿ ಅದ್ಯಾವ ಆಮಾಯಕನ ಮೈಯಲ್ಲಿ ಹೊಕ್ಕಿದೆಯೊ? ಅವನು ಬದುಕುತ್ತಾನೊ, ಸಾಯುತ್ತಾನೊ? ಅಯ್ಯೋ…!

ಗಿಜಗುಡುತ್ತಿದ್ದ ರಸ್ತೆಯು ಖಾಲಿ ಖಾಲಿ ಇರುವಾಗಲೂ ಸಲೀಸಾಗಿ ನಡೆಯಲಾಗದೆ, ಕಳ್ಳಹೆಜ್ಜೆಗಳು ಭಾರವಾಗಿ ಸಾಗುತ್ತ ಆಸರೆ ಕೊಟ್ಟ ಬೆಂಗಳೂರಿಂದ ಆಚೆಗೆ ಬಿದ್ದರೆ ಸಾಕೆಂದು ನೋಡುವಾಗ್ಗೆ ದೂರದಲ್ಲಿ ಪೊಲೀಸರು ಆಟೊವೊಂದನ್ನು ಅಡ್ಡಹಾಕಿ ನಿಲ್ಲಿಸಿದ್ದರು. ದಾಡಿ ಬಿಟ್ಟ ಆಟೋ ಡ್ರೈವರ್ ಪೊಲೀಸರಲ್ಲಿ ಕೈಮುಗಿದು ಗೋಗರೆಯುತಲ್ಲಿದ್ದ. ಆಟೋದಲ್ಲಿ ಬಸುರಿ ಮಹಿಳೆಯೊಬ್ಬಳು ನರಳಾಡುತ್ತಿದ್ದಳು. ಹನುಮ, ಒಮ್ಮೆ ಮುಖದ ಮೇಲೆ ಮಾಸ್ಕ್ ಇದೆಯೋ ಎಂದು ಮುಟ್ಟಿ ನೋಡಿಕೊಂಡ. ಪೊಲೀಸರ ಕೈಲಿ ಸಿಕ್ಕಿಕೊಂಡರೆ ಊರು ತಲುಪಿದಂತೆ!

ವಿರುದ್ಧ ದಿಕ್ಕಿಗೆ ನಡೆದು, ಸರ್ವೀಸ್ ರಸ್ತೆ ಬಿಟ್ಟು ಹಿಂತಿರುಗಿ ಫ್ಲೈಒವರ್ ಹತ್ತಿ ಏರುರಸ್ತೆಯಲ್ಲಿ ನಡೆದ…ನಡೆದೇ ನಡೆದ. ಉರಿಬಿಸಿಲು ತಲೆ ಸುಡುವಾಗ, ತನ್ನ ಸೋಲಿಸುವ ಮಾತು ಬೇಡ. ತನ್ನೂರಿನ ಕೆಂಡದ ಮಳೆಯಂಥ ಬಿಸಿಲಿನ ಮುಂದೆ ಇದ್ಯಾವ ಧಗೆಯೆಂದು ನಕ್ಕ.

ನೆಲಮಂಗಲ – ಮಾದಾವಾರ ಹತ್ತಿರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಮೈದಾನದ ಬಳಿ ಬರುತ್ತಿದ್ದಂತೆ, ಪೊಲೀಸರು ಕಾಲ್ನಡಿಗೆಯಲ್ಲಿ ಬರುತ್ತಿದ್ದ ನೂರಾರು ಜನರನ್ನು ಅಡ್ಡಗಟ್ಟಿ, ನುಸುಳಿ ಹೋಗಲು ಯತ್ನಿಸುತ್ತಿದ್ದವರಿಗೆ ಲಾಠಿ ಬೀಸುತ್ತಿದ್ದನ್ನು ನೋಡಿ ಒಮ್ಮೆಗೆ ಬೆದರಿದ. ತನ್ನನ್ನು ಸೇರಿದಂತೆ ಹೆದ್ದಾರಿಯಲ್ಲಿ ಎಲ್ಲರನ್ನೂ ಕುಕ್ಕರಗಾಲಿನಲ್ಲಿ ಕೂರಿಸಿ, ಮೈಮೇಲೆಲ್ಲ ತಮಗೆ ಕೋವಿಡ್ ವೈರಸ್ ಅಂಟಿದೆಯೆಂಬಂತೆ ಆಂಟಿ ವೈರಸ್ ದ್ರಾವಣ ಸಿಂಪರಣೆ ಮಾಡಿದರು. ನಂತರ, ತಿಂಡಿ ಪೊಟ್ಟಣಗಳನ್ನು ತಿನ್ನಲು ಕೊಟ್ಟು ಅಲ್ಲೇ ಹಾಕಿದ್ದ ಬೃಹತ್ ಶೆಡ್ಡಿನಲಿ ಕ್ವಾರೆಂಟೈನ್ ಆಗಿ ಉಳಿಯಲು ಹೇಳಿದರು.

“ಸಾರ್…ನಮ್ಮೂರಿಗೆ ನಾನು ಹೋಗ್ಲೇ ಬೇಕು. ದಯವಿಟ್ಟು ಬಿಟ್ಬಿಡಿ”

“ಅಂತಾದ್ದೇನಯ್ಯ ನಿಮ್ಮೂರಲ್ಲಿ ಕೊಳ್ಳೇ ಹೋಗೋದು…ಜನ್ರು ತುಪತುಪನೆ ಸಾಯ್ತಿದ್ದಾರೆ…ಎರಡು ವಾರ ಇದ್ದೋಗು”

“ಇಲ್ಲಾ…ಸಾರ್…ನಮ್ಮಪ್ಪನಿಗೆ ಮೈ ಚೆನ್ನಾಗಿಲ್ಲ…ಇವತ್ತೋ…ನಾಳೆಯೋ…”

ಅರಿವಿಲ್ಲದೆ, ಆಕಸ್ಮಿಕವಾಗಿ ನಾಲಿಗೆಗೆ ಬಂದ ಒಂದು ಸುಳ್ಳನ್ನು ನುಡಿದದ್ದಕ್ಕೆ “ಹೌದಾ…ಆಗಲಿ…ಹೋಗು” ಎಂದು, ಟೂ ಸ್ಟಾರ್ ಹೆಗಲಿಗೆ ಅಂಟಿಸಿದ್ದ ಪೊಲೀಸ್ ಅಧಿಕಾರಿ ಕರುಣೆ ತೋರಿದ.

ತನ್ನಂತೆ ನೂರಾರು ಜನರು – ಹೆಂಡತಿಯೊಡನೆ, ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಹೊತ್ತು, ಕೈಲಿ ಭಾರದ ಸಂಸಾರದ ಬ್ಯಾಗನ್ನಿಡಿದು ಹೆದ್ದಾರಿಯಲ್ಲಿ ಸಾಗಿದ್ದರು. ಕೆಲವರು ಸುಸ್ತಾಗಿ, ಕುಡಿಯಲು ನೀರಿಲ್ಲದೆ ಕುಸಿದು ಬಿದ್ದರೆ, ಕೆಲವು ಕನಿಕರದ ಮಾನವೀಯತೆಯ ಕೈಗಳು ತಮ್ಮ ಪ್ಲಾಸ್ಟಿಕ್ ಬಾಟಲಿಯಲ್ಲಿ ಉಳಿದಿದ್ದ ತೊಟ್ಟು ನೀರನ್ನು ಹನಿಸಲು ಮುಂದಾಗುತ್ತಿದ್ದವು. ಆದರೆ, ಕೆಲವರ ಬಾಯಲ್ಲಿ ನೀರು ಹೋಗದೆ ತುಟಿಗಳ ಮಧ್ಯೆ ಹೊರ ಚೆಲ್ಲುತ್ತಿತ್ತು. ಅದ ನೋಡಿದ ಹನುಮ, ಕಾಂಕ್ರೀಟು ರಸ್ತೆಯ ಬದಿಗಿನ ಪುಟ್ ಪಾತಲ್ಲಿ ಕೂತು ಬಳಬಳನೆ ಅಳಲು ಆರಂಭಿಸಿದ.

ತಾನೇಕೆ ಅಳುತ್ತಿದ್ದೇನೆ?  ರಸ್ತೆಗೆ ಬಿದ್ದು ಮೂರಾಬಟ್ಟೆಯಾದವರ ಬದುಕಿಗೊ ಅಥವಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಪ್ಪನಿಗೆ ಆಪತ್ತಾಗಿದೆ ಎಂದು ಸುಳ್ಳು ನುಡಿದದ್ದಕ್ಕೊ? ಅಥವಾ ನಡಿಗೆಯಲ್ಲೇ ಊರು ಸೇರಬೇಕಾದ ಸಂಕಟಕ್ಕೊ?

ಬೆಂಗಳೂರಲ್ಲಿ ರಸ್ತೆಗೆ ಬಿದ್ದಾಗ, ತಾನು ನಡೆಯುತ್ತಲೇ ಊರಿಗೆ ಬರುತ್ತೇನೆಂದು ಹನುಮ ತನ್ನಪ್ಪನಿಗೆ ಫೋನು ಮಾಡಿದ್ದ. ದಾರಿ ಮಧ್ಯೆ ಅವನ ಅಮ್ಮ, ಅಣ್ಣಅತ್ತಿಗೆ ಆಗಾಗ್ಗೆ ಫೋನು ಮಾಡಿ ಎಲ್ಲಿದ್ದಿಯೆಂದು ವಿಚಾರಿಸುತ್ತಿದ್ದರು. ದಾವಣಗೆರೆ, ಹರಿಹರ ದಾಟಿ ರಾಣೆಬೆನ್ನೂರಿನ ಹತ್ರ ಇರಬೇಕು. ಸುಸ್ತಾಗಿ ಫ್ಲೈಓವರ್ ಮೇಲೆ ದಣಿವಾರಿಸಿಕೊಳ್ಳಲು ಕೂತು, ಮನೆಗೆ ಫೋನು ಮಾಡಿದರೆ ಬ್ಯಾಟರಿ ರೀಚಾರ್ಜ್ ಆಗದೆ ಸ್ವಿಚ್ಚಾಫಾಗಿತ್ತು. ಸಿಟ್ಟಿನಿಂದ ಮೊಬೈಲನ್ನು ಸೇತುವೆ ಕೆಳಗೆ ಎಸೆದು ಬಿಟ್ಟ.

ಹೆದ್ದಾರಿಯಲ್ಲಿ – ಹಾವೇರಿ ಬಲಭಾಗಕ್ಕೆ ಇದ್ದು ಅದ ದಾಟಿ ಮುಂದಕ್ಕೆ ಸಾಗಿ, ಎಡಕ್ಕೆ ಸರ್ವೀಸ್ ರಸ್ತೆಗೆ ಹೊರಳಿ ಹನುಮ ತನ್ನೂರಿನ ಕಡೆ ನಡೆದ. ತಾಯಿಯಂತೆ ಪೊರೆದ ನಗರ – ಇರುಳು ಕಳೆದು ಬೆಳಗಾಗುವುದರೊಳಗೆ ರಾಕ್ಷಸನ ರೂಪ ತಾಳಿ ಬಂದಾಗ, ಪಾರಾದೆನೆಂಬ ಖುಷಿಯಲ್ಲಿ ಸೋತ ಕಾಲುಗಳನ್ನು ಎಳೆಯುತ್ತ ತನ್ನ ಮನೆಯ ಕಡೆ ಹೆಜ್ಜೆ ಹಾಕಿದ.

ಅದೆಷ್ಟು ದಿನಗಳು ಹೊಟ್ಟೆಗೆ ಅನ್ನ, ನೀರಿಲ್ಲದೆ ಕಳೆದವೋ? ಇಡೀ ದೇಹವಿಲ್ಲವಾಗಿ ಚೈತನ್ಯ ಮಾತ್ರ ಉಳಿದಿದೆಯೊ? ಅಂತೂ ದೂರದಲ್ಲಿ ಬಯಲಲ್ಲಿ ಒಂಟಿಯಾಗಿದ್ದ ಮನೆಯ ಕಂಡು ಹನುಮನ ಮುಖವರಳಿತು. ಅವಸರದಿಂದ ಊದಿದ ಪಾದಗಳನ್ನು ಎತ್ತಿಡುತ್ತ ಮನೆಯತ್ತ ಸಾಗಿದಾಗ, ಜಗಲಿಯ ಮೇಲೆ ಯಾರೋ ಬೀಡಿ ಸೇದುತ್ತ ಕುಳಿತಂತೆ ಕಂಡಿತು. ಅದು ಅಣ್ಣನಿರಬಹುದು. ಊರ ಹೊರಗೆ ಕದ್ದುಮುಚ್ಚಿ ಬೀಡಿ ಸೇದುವುದು ತನಗೆ ಗೊತ್ತಿದ್ದೇ! ಆದರೆ, ಅಪ್ಪನಿರುವ ಮನೆಯ ಮುಂದೆ ಬೀಡಿ ಸೇದೊ ಧೈರ್ಯ, ಅಹಂಕಾರ ಅವನಿಗೆಲ್ಲಿಂದ ಬಂತು?

ಮುಂಬಾಗಿಲ ದಾಟಿ ಹಜಾರಕ್ಕೆ ಬಂದರೆ, ಗೋಡೆಗೆ ನೇತು ಹಾಕಿದ್ದ ಅಪ್ಪನ ಫೋಟೊಕ್ಕೆ ಹಣೆಗೆ ಕುಂಕುಮವಿಟ್ಟು, ಹೂವಿನಹಾರ ಹಾಕಿದ್ದರು. ಅದನ್ನು ನೋಡಿ ಅನಾಮತ್ತಾಗಿ ಹನುಮ ನೆಲಕ್ಕೆ ಕುಸಿದ. ಮನೆಮಂದಿಯೆಲ್ಲ ಅವನ ಸುತ್ತಲೂ ಕೂತು ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. “ಅದೇನಾತೊ! ಒಂದೇ ಸಮ ಕೆಮ್ಮು ಶುರುವಾತು. ಆಮೇಲೆ ಜ್ವರ! ಮೈಯೆಲ್ಲ ಬೆಂಕಿಯಾಗಿ ಸುಡುತ್ತಿತ್ತು. ಜಿಲ್ಲಾಸ್ಪತ್ರೆಗೆ ಫೋನು ಮಾಡಿದರೆ ಆಂಬುಲೆನ್ಸಲ್ಲಿ ಕರ್ಕೊಂಡು ಹೋದ್ರು. ಆಸ್ಪತ್ರೆಲೀ ಉಸಿರು ಕಟ್ಟಿದಾಗ, ಇರೋ ಎರಡೇ ಐಸಿಯುನಲ್ಲಿ ಜಾಗ ಸಿಗ್ಲಿಲ್ಲ. ಆಸ್ಪತ್ರೆಲೀ ಆಕ್ಸಿಜೆನ್ನೂ ಇರ್ಲಿಲ್ಲ. ಮೂರೇ ದಿನ…ಉಸಿರು ತಗೊಳೋಕು ಆಗ್ದೆ…ಬಿಡೋಕು ಆಗ್ದೆ ನಿಮ್ಮಪ್ಪ ಪ್ರಾಣ ಬಿಟ್ರಂತೆ ಕಣಪ…” ಎಂದ ಹನುಮನ ಅಮ್ಮ, ಅಳುತ್ತಿದ್ದವನನ್ನು ಎದೆಗಪ್ಪಿಗೊಂಡು ತಲೆನೇವರಿಸುತ್ತ ರೋದಿಸತೊಡಗಿದಳು.

ರಜಾದಿನ. ಮನೆಯಲ್ಲಿ ಒಬ್ಬನೇ ಇದ್ದು, ಶಾಲೆಯಿಲ್ಲದೆ, ಕರ್ಫ್ಯೂಯೆಂದು ಹೊರ ಹೋಗಲಾಗದೆ ರಾಮಣ್ಣ ಒಂಟಿ ಉಳಿದ. ಟೀವಿಯಲ್ಲಿ, ಪತ್ರಿಕೆಗಳಲ್ಲಿ ಬರುತ್ತಿದ್ದ – ಐಸಿಯು ಸಿಗದೆ, ಆಕ್ಸಿಜೆನ್ ಇಲ್ಲದೆ ಸಾಲುಸಾಲು ಸಾಯುತ್ತಿದ್ದವರ ಸುದ್ದಿಗಳು, ನೂರಾರು ಮೈಲಿ ನಡೆದುಕೊಂಡೇ ಗುಳೇ ಹೊರಟ ಅಮಾಯಕ ವಲಸಿಗರ ನೋವು, ಸಂಕಷ್ಟಗಳು ರಾಮಣ್ಣನನ್ನು ಬಹುವಾಗಿ ಕಾಡಿತ್ತು. ಹೊಟ್ಟೆಗೆ ಬೆಂಕಿ ಬಿದ್ದಿತ್ತು. ಆ ಬಗ್ಗೆ ಬರೆದು ನಿರುಮ್ಮಳನಾಗಬೇಕೆಂದು ಹನುಮನ ಕತೆ ಬರೆದ. ಆದರೆ ನೆಮ್ಮದಿ ಇರಲಿಲ್ಲ. ಏನೋ ಆತಂಕ! ಕಣ್ಣು ಮುಚ್ಚಿದರೆ ಸಾಕು, ಹನುಮ ಬಂದು ʼನನ್ನಪ್ಪನನ್ನು ಸಾಯಿಸಬಾರದಿತ್ತುʼ ಎಂದು ಗೋಳಿಡುತ್ತಿದ್ದಂತೆ ಭಾಸವಾಗುತ್ತಿತ್ತು.

ಅವನಪ್ಪನನ್ನು ಸಾಯಿಸಿದ್ದು…ನಾನೇ? ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದೆ ಆಳುವ ಸರ್ಕಾರ ಆ ಅಸಹಾಯಕ ರೈತನನ್ನು ಸಾಯಿಸಿದ್ದು! ಅದನ್ನೇ ಕತೆಯಲ್ಲಿ ಬರೆದಿದ್ದೇನೆ. ಆದರೆ, ಹನುಮ ತಾನು ತಪ್ಪಾಡಿದ ಮಾತಿನಿಂದ ಅಪ್ಪ ತೀರಿಕೊಂಡನೆಂದು ಭಾವಿಸಿ ಪಾಪಪ್ರಜ್ಞೆಯಿಂದ ಬೇಯುತ್ತಿದ್ದಾನೆ.

ಬಹಳ ಚಿಂತಿಸಿ – ಒಲ್ಲದ ಮನಸ್ಸಿಂದ ಬರೆದ ಕತೆಯ ಕೊನೆಯ ಸಾಲುಗಳಿಗೆ ಕಾಟು ಹಾಕಿ, ಕೆಮ್ಮುಜ್ವರದಿಂದ ವಿಪರೀತ ನರಳುತ್ತಿದ್ದ ಹನುಮನ ಅಪ್ಪನನ್ನು ಆಸ್ಪತ್ರೆಗೆ ಸೇರಿಸಿದರು. ಸಕಲ ಸೌಲಭ್ಯವಿದ್ದ ಜಿಲ್ಲಾಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿ, ಆಕ್ಸಿಜೆನ್ನಿಗೆ ಯಾವ ಕೊರತೆಯು ಇಲ್ಲದ್ದರಿಂದ, ಸಕಾಲದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತು ಅವನು ಪ್ರಾಣಾಪಾಯದಿಂದ ಪಾರಾದ. ಹುಷಾರಾಗಿ ಡಿಸ್ಚಾರ್ಜ್ ಆಗುವಾಗ ತನ್ನ ಜೀವ ಉಳಿಸಿದ ವೈದ್ಯರಿಗು, ಆಳುವ ಸರ್ಕಾರಕ್ಕು

ಕೃತಜ್ಞತೆಯಿಂದ ಕಣ್ಣೀರು ಹಾಕುತ್ತ ಕೈಮುಗಿದ…ಎಂದು ಕತೆಯಲ್ಲಿ ರಾಮಣ್ಣ ಬದಲಾವಣೆ ಮಾಡಿದ.

ಅತ್ಯದ್ಭುತವಾದ ಸಂಗತಿಯೆಂದರೆ ಸ್ವತಂತ್ರ ಸ್ತ್ರೀಯಾಗಿರುವುದು: ಅರುಂಧತಿ ರಾಯ್‌ ಭಾಷಣದ ಪೂರ್ಣಪಾಠ
ಖ್ಯಾತ ಚಿಂತಕಿ, ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ, ಒಬ್ಬ ಲೋಕಚಿಂತಕಿ, ನೇರ- ನಿಷ್ಠೂರ ಮಾತುಗಾರ್ತಿ ಅರುಂಧತಿ ರಾಯ್‌ ನೆನ್ನೆ (ಸೆ.05.2022) ಬೆಂಗಳೂರಿನಲ್ಲಿದ್ದರು. ಐದು ವರ್ಷಗಳ ಹಿಂದೆ ಸನಾತನವಾದಿ ಭಯೋತ್ಪಾದಕರಿಂದ ಹತ್ಯೆಯಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ತುಂಬಿದ ಸಭಾಂಗಣದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಭಾಷಣ- ಸಂವಾದ ನಡೆಸಿದರು. ಹಿರಿಯ ವಿದ್ವಾಂಸರಾದ ಗಣೇಶ್‌ ಎನ್‌ ದೇವಿ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್‌, ಕವಿತಾ ಲಂಕೇಶ್‌, ಬಹುಭಾಷಾ ನಟ ಪ್ರಕಾಶ್‌ ರಾಜ್‌, ಪ್ರೊ.ವಿ ಎಸ್‌ ಶ್ರೀಧರ್‌, ಹಿರಿಯ ಪತ್ರಕರ್ತ ಡಿ.ಉಮಾಪತಿ, ಪೆಡೆಸ್ಟ್ರಿಯನ್‌ ಪಿಕ್ಚರ್ಸ್‌ನ ದೀಪು ಜೊತೆ ಸೇರಿ ನಡೆಸಿದ ಸಂವಾದ ಮತ್ತು ಅರುಂಧತಿ ರಾಯ್‌ ಅವರ ಭಾಷಣದ ಪೂರ್ಣಪಾಠ ಇಲ್ಲಿದೆ. ಜನಶಕ್ತಿಯ ಮಲ್ಲಿಗೆ ಸಿರಿಮನೆ ಸ್ಥಳದಲ್ಲೇ ಅನುವಾದಿಸಿ ಅಕ್ಷರರೂಪಕ್ಕೆ ಮಾರ್ಪಡಿಸಿದ ಈ ಪಠ್ಯವನ್ನು ಪೀಪಲ್‌ ಮೀಡಿಯಾ ಓದುಗರಿಗಾಗಿ ಇಲ್ಲಿ ಪ್ರಕಟಿಸಿದ್ದೇವೆ.

ಪ್ರಿಯರೆ

ಇಂದು ಇಲ್ಲಿರುವುದು ನನ್ನ ಪಾಲಿಗೆ ಒಂದು ಗೌರವ, ನಾನು ಗೌರವಿಸುವವರೊಂದಿಗೆ, ಮೂರು ದಿನಗಳ ಹಿಂದೆ ನನ್ನ ತಾಯಿಯವರನ್ನು ನಾನು ಮಣ್ಣು ಮಾಡಬೇಕಾಗಿ ಬಂತು, ನನ್ನ ಹೃದಯ ನನಗೆ ಅವಕಾಶ ಕೊಡುತ್ತಿತ್ತೋ ಇಲ್ಲವೋ ಆದರೆ ನನ್ನ ತಾಯಿ ನಾನು ಇಲ್ಲಿಗೆ ಬರದಿದ್ದರೆ ನನ್ನ ಬಗ್ಗೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಎಂದು ಬಂದೆ.

ಗೌರಿ ಪ್ರತಿ ಸಲ ನಾನು ಏನಾದರೂ ಬರೆದಾಗ ನಾನು ಅನುವಾದ ಮಾಡಲೇ ಎಂದು ಉತ್ಸಾಹದಿಂದ ಫೋನ್ ಮಾಡುತ್ತಿದ್ದರು. ಅವರು ಈಗ ನಮ್ಮ ಜೊತೆಗಿಲ್ಲ, ತೀಸ್ತಾ ಸೆಟಲ್ವಾದ್‌ ಜೈಲಿಗೆ ಹೋಗಬೇಕಾಗಿ ಬಂತು. ಅವರು ಜೈಲಿನಲ್ಲಿ ಇರುವಾಗ ನಾಗರೀಕರ ವೇದಿಕೆ ಗುಜರಾತ್ ಗಲಭೆಗಳ ಕುರಿತು ಹೊರತಂದ ಬರಹಗಳನ್ನು ಬಹಳ ಗಮನ ಇಟ್ಟು ಓದಿದೆ,  ತೀಸ್ತಾ ಮಾಡಿರುವುದು ನಿಜಕ್ಕೂ ಅದ್ಭುತವಾದ ಕೆಲಸ. ನಾನು ಫ್ಯಾಸಿಸಂ ಕಾಲದಲ್ಲಿ ನ್ಯಾಯಾಂಗದಂತಹ ಸಂಸ್ಥೆಗಳು ಕೆಲಸ ಮಾಡುತ್ತವಾ ಎಂಬ ಬಗ್ಗೆ ಅನುಮಾನ ಹೊಂದಿದವರಲ್ಲಿ ಒಬ್ಬಳು, ಆದರೆ ತೀಸ್ತಾ ಮತ್ತು ಅವರ ಸಂಘಟನೆಯ ಕೆಲಸ ಅಗಾಧ. ಅವರು ಮಾಡಿದಂತಹ ಅಗಾಧವಾದ ದಾಖಲೀಕರಣ ಎಂದಾದರೂ ಒಂದು ದಿನ ನ್ಯಾಯಕ್ಕೆ ದಾರಿಮಾಡಲೇಬೇಕು. ಮುಂದೊಮ್ಮೆ ಯುದ್ಧಾಪರಾಧಗಳಿಗೆ ತೀಸ್ತಾ ಅವರ ದಾಖಲೆಗಳು ಗಟ್ಟಿಯಾದ ದಾಖಲೆ ಒದಗಿಸುವುದು ಖಚಿತ.

ಇಂದು ಇಲ್ಲಿ ನಾವು ಬದುಕಿರುವ ಸಮಾಜದಲ್ಲಿ ಬಿಲ್ಕೀಸ್ ಅವರ ಪೂರ್ತಿ ಕುಟುಂಬ ಕೊಲೆಯಾಯಿತು, ಪುಟ್ಟ ಮಗಳೂ ಕೂಡಾ- ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು, ಆದರೆ ನ್ಯಾಯ ಕೊಡಬೇಕಾದ ಎಲ್ಲರೂ ಶಾಮೀಲಾದರು, ಅಪರಾಧಿಗಳ ರಕ್ಷಣೆಗಾಗಿ, ಕೊನೆಗೆ ಕಾನೂನಿನ ಪ್ರಕ್ರಿಯೆಯ ಮೇಲೆಯೇ ಈ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು, ಆ ಸಮಿತಿಯಲ್ಲಿ ಇದ್ದವರು ಹೆಚ್ಚಿನವರು ಬಿಜೆಪಿಯವರು. ಒಬ್ಬರಂತೂ ಅವರೆಲ್ಲಾ ಬ್ರಾಹ್ಮಣರಾದ್ದರಿಂದ ಅಂತಹ ಕೃತ್ಯವೆಸಗಿರಲು ಸಾಧ್ಯವಿಲ್ಲ, ಯಾಕೆಂದರೆ ಅವರು ಸಂಸ್ಕಾರವಂತರು ಎಂದು ಹೇಳಿಕೆ ನೀಡುವಲ್ಲಿಗೆ ಪರಿಸ್ಥಿತಿ ತಲುಪಿದೆ.

ಅಂತರರಾಷ್ಟ್ರೀಯ ಕಾರಣಗಳಿಗಾಗಿ ಕಾನೂನಿನ ಸುಳಿವುಗಳನ್ನು ಅಳಿಸಲಾಗುತ್ತಿದೆ. ಇದು ಬಹಳ ಅಪಾಯಕಾರಿ, ನಾವು ಇಂದು ಭಾರತದಲ್ಲಿ ನೋಡುತ್ತಿರುವುದು ಪ್ರಭುತ್ವ, ಪ್ರಭುತ್ವದ ಯಂತ್ರಾಂಗ, ಮತ್ತು ಒಂದು ರಾಜಕೀಯ ಪಕ್ಷ ಎಲ್ಲವೂ ಸೇರಿ ಒಂದೇ ಆಗುತ್ತಿವೆ. ಒಂದು ಮತ್ತೊಂದರಿಂದ ಭಿನ್ನವಲ್ಲವೆಂಬಂತಾಗುತ್ತಿದೆ. ಇಲ್ಲಿ ಒಂದೇ ವಿರೋಧ ಪಕ್ಷವಿರುವುದು. ಆದರೆ ಈಗ ಇವರು ನಮಗೆ ವಿರೋಧ ಪಕ್ಷವೇ ಇಲ್ಲದ ಪ್ರಜಾತಂತ್ರ ಬೇಕು ಅಂತ ಹೇಳುತ್ತಾರೆ.  ಬಹಳ ಜನರು ಈ ಬಗ್ಗೆ ಚರ್ಚೆ ಮಾಡುವವರು ಇವರು ಫ್ಯಾಸಿಸ್ಟರು ಹೌದಾ ಅಲ್ಲವಾ ಎಂದು ಕೊನೆಯಿಲ್ಲದೆ ಚರ್ಚೆ ಮಾಡುತ್ತಲೇ ಇದ್ದಾರೆ. ಆದರೆ ಆದರೆ ಅವರು ಬಹಳ ಮಾತ್ರ ತಾವು ಏನು ಎಂಬ ಬಗ್ಗೆ ಬಹಳ ಸ್ಪಷ್ಟತೆ ಹೊಂದಿದ್ದಾರೆ.

ಬಿಜೆಪಿಯವರು ಕಳೆದ ಎರಡು ಚುನಾವಣೆಗಳಲ್ಲಿ ಮುಸ್ಲಿಂ ಮತಗಳಿಲ್ಲದೆ ಗೆಲ್ಲಬಲ್ಲೆವು ಎಂದು ತೋರಿಸಿದ್ದಾರೆ. ಇವತ್ತಿನ ಸನ್ನಿವೇಶ ಏನೆಂದರೆ ನಮಗೆ ಒಂದು ಸಂವಿಧಾನವಿದೆ, ಕಾನೂನು ಇದೆಯಾದರೂ ಅವುಗಳ ಜಾರಿ ಮಾತ್ರ ವ್ಯಕ್ತಿಗಳ ಧರ್ಮ, ಲಿಂಗವನ್ನು ಆಧರಿಸಿ ಇರುತ್ತದೆ.  ಬಿಲ್ಕಿಸ್‌ ಪ್ರಕರಣವೇ ಇದಕ್ಕೆ ನಿದರ್ಶನ.

ನಾವು ಪ್ರಪಂಚದಲ್ಲೇ ಅತ್ಯಂತ ಶ್ರೀಮಂತವಾದ ರಾಜಕೀಯ ಪಕ್ಷವನ್ನು ನೋಡುತ್ತಿದ್ದೇವೆ, ಅದು ಬಂದದ್ದು ನೋಟು ರದ್ದತಿ ಬಾಂಡ್ಗಳು ಮುಂತಾದವುಗಳಿಂದ. ನನ್ನ ಒಂದು ಸಲಹೆ ಏನೆಂದರೆ ಈಗ ಚುನಾಯಿತ ಪ್ರತಿನಿಧಿಗಳು ಯಾರಿದ್ದಾರೋ ಅವರೆಲ್ಲಾ ರೈತರು ತಮ್ಮ ಬೆಳೆಗಳ ವಿಷಯದಲ್ಲಿ ಮಾಡಿದಂತೆ ತಮ್ಮ ಖರೀದಿಗೆ ಕನಿಷ್ಟ ಬೆಂಬಲ ಬೆಲೆ (MSP) ನಿಗದಿ ಮಾಡಬೇಕು ಎಂದು ಕ್ಯಾಂಪೇನ್ ಮಾಡಬೇಕು, ನಂತರ ಅವರನ್ನೆಲ್ಲಾ ಖರೀದಿಸಿ ಅದಾನಿ ಗೋಡೌನ್ ಗಳಲ್ಲಿ ಇಡಬಹುದು. ರಾಜಕಾರಣಿಗಳು ಪಕ್ಷಾಂತರ ಆಗುತ್ತಿರುವ ರೀತಿ ನೋಡಿದರೆ ಇದನ್ನು ಪ್ರಜಾತಂತ್ರ ಎನ್ನಲು ಸಾದ್ಯವೇ?

ನನ್ನ ಹೃದಯ ಗೌರಿಗಾಗಿ ಮತ್ತು ನನ್ನ ತಾಯಿಗಾಗಿ ಸಂಕಟದಿಂದ ತುಂಬಿದೆ. ನನಗೆ ಬೆಳಿಗ್ಗೆ ಸಮಾಧಿ ಬಳಿ ಹೋದಾಗ ಇದು ಗೌರಿಯ ಸಮಾಧಿಯೋ ಅಥವಾ ನನ್ನ ತಾಯಿಯ ಸಮಾದಿಯೋ ಎಂದು ಒಂದು ಕ್ಷಣ ಗೊಂದಲವಾಯಿತು.

ಮಾತು ಮುಗಿಸುವ ಮೊದಲು, ಜನರು ಪ್ರತಿರೋಧ ಚಳವಳಿಯಲ್ಲಿರುವವರು, ತಮ್ಮ ಬಗ್ಗೆ ಚಿಂತಿಸದೆ ಜನರಿಗಾಗಿ ಕೆಲಸ ಮಾಡಿದವರಿಗೆ ಏನಾಗುತ್ತಿದೆ? 90ರ ದಶಕದಲ್ಲಿ ಎರಡು ಬಗೆಯ ಬೀಗಗಳನ್ನು ತೆರೆಯಲಾಯಿತು, ಒಂದು ಬಾಬರಿ ಮಸೀದಿಯದ್ದು ಇನೊಂದು ಮುಕ್ತ ಮಾರುಕಟ್ಟೆಯದ್ದು.  ಎರಡು ಬಗೆಯ ಮೂಲಭೂತವಾದ. ಪ್ರಭುತ್ವವನ್ನು ಬಹಳವೇ ದಮನಕಾರಿ ಮಾಡಲು ಪ್ರತಿಯೊಂದು ಘಟನೆಯೂ ಕಾರಣವಾಗುತ್ತಾ ಹೋಯಿತು.

ಉದ್ಯೋಗ ಇಲ್ಲದೆ, ಬೆಲೆಯೇರಿಕೆಯಿಂದ ದೌರ್ಜನ್ಯಗಳಿಂದ ನರಳುತ್ತಿರುವ ಜನರೇ ಮತ್ತೆ ತಮ್ಮ ಕಷ್ಟಗಳಿಗೆ ಕಾರಣರಾಗುವವರಿಗೇ ಮತ  ಹಾಕುತ್ತಿದ್ದಾರೆ. ಮುಸ್ಲಿಮರನ್ನು ಪೌರತ್ವದಿಂದ ವಂಚಿಸಿ ವೋಟಿನ ಹಕ್ಕಿಲ್ಲದಂತೆ ಮಾಡಲಾಗುತ್ತಿದೆ, ಇದು ಸಮಾಜದ ಅಮಾನವೀಕರಣ ಆಗುತ್ತಿರುವ ಪರಿಸ್ಥಿತಿ.  ಈ ವರ್ಷ ಭಾರತದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ವರ್ಷ. ದೇಶದ ರಾಜಧಾನಿ ದೆಹಲಿ ಬಹಳ ದೊಡ್ಡ ಬಡಜನರ ಪ್ರವಾಹದಲ್ಲಿ ತುಂಬಿಕೊಂಡಿದೆ. ಜನರು ತಮ್ಮ ಜನರನ್ನು ಮತ್ತಷ್ಟು ನರಕಮಯಗೊಳಿಸಿಕೊಳ್ಳಲು ಚುನಾವಣೆಗಳಲ್ಲಿ ವೋಟು ಹಾಕುತ್ತಿರುವಂತೆ ಭಾಸವಾಗುತ್ತಿದೆ. ಕ್ರೂರ ಜಾತಿ ವ್ಯವಸ್ಥೆಯಿಂದ ಶತಮಾನಗಳ ಕಾಲ ನರಳಿದವರು ದಮನಕ್ಕೊಳಗಾಗುತ್ತಿದ್ದಾರೆ. ಮತ್ತೆ ಯಾರು ಇಂತಹ ವ್ಯವಸ್ಥೆಯ ಪ್ರತಿಪಾದಕರೋ ಅವರನ್ನೇ ಆಯ್ಕೆ ಮಾಡುತ್ತಾರೆ ಕೂಡಾ. 50ರಲ್ಲಿ 60ರ ದಶಕದಲ್ಲಿ, 80ರಲ್ಲಿ ಚಳವಳಿಗಳು ಭೂಮಿಯ ಮೇಲೆ ಉಳುವವರಿಗೆ ಹಕ್ಕಿಗಾಗಿ ಕೇಳುತ್ತಿದ್ದವು, ಅವುಗಳನ್ನು ತುಳಿಯಲಾಯಿತು.  ನಂತರ 90ರ ದಶಕದಲ್ಲಿ ನಮ್ಮನ್ನು ಸ್ಥಳಾಂತರಿಸಬೇಡಿ ಎಂದು ಕೇಳಿದರು, ಅವನ್ನೂ ತುಳಿಯಲಾಯಿತು, 2000ದ ಹೊತ್ತಿಗೆ ನರೇಗಾ (ಉದ್ಯೋಗ ಖಾತ್ರಿ) ಕೇಳುವುದೇ ಕ್ರಾಂತಿಕಾರಿ ಬೇಡಿಕೆಯಾಯಿತು. ಈಗ ಬಿಡಿ ಸರ್ಕಾರ 5 ಕೆಜಿ ಅಕ್ಕಿ ಉಪ್ಪು ಕೊಡುವುದೇ ದೊಡ್ಡ ಉಪಕಾರವಾಗಿದೆ! ಮೋದಿಯವರ ಉಪ್ಪು ತಿಂದರೆ ಅವರಿಗೇ ಓಟು ಹಾಕಿ ಎನ್ನುತ್ತಿದ್ದಾರೆ! ಎಂತಹ ವಿಪರ್ಯಾಸ!

ಭಾರತವು ಪೊಲೀಸ್ ರಾಜ್ಯವಾಗುತ್ತಿದೆ, 20 ಮಿಲಿಯನ್ ಜನರು ಕಾಶ್ಮೀರಲ್ಲಿ ಯಾವುದೇ ಸಂವಹನದ ಸಾಧ್ಯತೆಯಿಲ್ಲದೆ ಬದುಕಿದರು. ವಸಾಹತುಶಾಹಿ ಕಾಲದಲ್ಲಿ ನಾವು ಬೀದಿಗಳಲ್ಲಿ ಹೋರಾಡುತ್ತಿದ್ದೆವು. ಈಗ ನಾವು ರಸ್ತೆಗಳನ್ನೂ ಬಿಟ್ಟು ಅಡಿಯಲ್ಲಿ ಹೋಗಬೇಕಾಗಿದೆ, ಏಕೆಂದರೆ ಬೀದಿಗಳೂ ವಿಷಮಯವಾಗಿವೆ, ಮೀಡಿಯಾಗಳಲ್ಲಿ, ಸೀರಿಯಲ್ ಗಳ ಮೂಲಕ ಪ್ರತಿಕ್ಷಣ ತಲೆಗಳಲ್ಲಿ ವಿಷ ತುಂಬಲಾಗುತ್ತಿದೆ.

ಇಲ್ಲಿಂದಲೇ ಆರಂಭಿಸಬೇಕಾಗಿದೆ, ಪ್ರತಿಯೊಂದು ಸಣ್ಣ ಗೆಲುವನ್ನೂ ಗೆಲುವೆಂದು ಸಂಭ್ರಮಿಸುತ್ತಾ ಮುನ್ನಡೆಯಬೇಕಾಗಿದೆ. ಇದು ಮುಕ್ತಾಯವಾಗುತ್ತದೆ, ಈ ವ್ಯವಸ್ಥೆ ಕುಸಿದು ಹೋಗಿದೆ, ಹೊಸದು ಹುಟ್ಟಬೇಕಾಗಿದೆ. ಅದು ಭೌತಶಾಸ್ತçದ ನಿಯಮ, ಮುಗಿಯಲೇಬೇಕು, ನಾವು ಭರವಸೆ ಕಳೆದುಕೊಳ್ಲುವುದು ಬೇಡ, ಮುಂದುವರೆಯೋಣ.

ಸಂವಾದ ಕಾರ್ಯಕ್ರಮದಲ್ಲಿ ತಮಗೆ ಕೇಳಲಾದ ಪ್ರಶ್ನೆಗಳಿಗೆ ಅರುಂಧತಿ ರಾಯ್‌ ಅವರ ಉತ್ತರಗಳು

ಅರುಂಧತಿ ರಾಯ್

ಸಂವಾದ:

ಡಿ. ಉಮಾಪತಿ:

ಎಲ್ಲರ ಪರವಾಗಿ ಕರ್ನಾಟಕದ ಜನರ ಪರವಾಗಿ ಅರುಂಧತಿ ರಾಯ್‌ ಅವರ ಅಮ್ಮ ಮೇರಿ ರಾಯ್ ಅವರಿಗೆ ನಮ್ಮ ಎದೆಯಾಳದ ಶ್ರದ್ಧಾಂಜಲಿಗಳು, ಅರುಂದತಿ ತಮ್ಮ ತಾಯಿಯ ಕುರಿತು ಇನ್ನಷ್ಟು ಹೇಳಿ ಎಂದು ಕೇಳಿಕೊಳ್ಳುತ್ತೇನೆ, ಯಾಕೆಂದರೆ ಅವರೂ ಕೂಡಾ ಮಾನವತಾವಾದಿ ಮತ್ತು ಹೋರಾಟಗಾರ್ತಿಯಾಗಿದ್ದರು.

ಅರುಂಧತಿ ರಾಯ್: ನನ್ನ ತಾಯಿ ಹಲವರಲ್ಲಿ ಒಬ್ಬರು ಅಲ್ಲ, ಬಹಳ ಮುಖ್ಯರಾಗಿದ್ದರು, ನನ್ನೊಳಗಿದ್ದ ಮಗಳು ಮತ್ತು ಲೇಖಕಿಯ ಪಾತ್ರಗಳು ಅವರ ಜೊತೆಗಿರುವುದ ಒಪ್ಪದೆ ನಾನು ಬಹಳ ಸಣ್ಣ ವಯಸ್ಸಿನಲ್ಲೇ ಅವರನ್ನು ಬಿಟ್ಟು ಹೊರಟೆ. ಅವರು ಸಿರಿಯನ್ ಕ್ರಿಶ್ಚಿಯನ್ ಆಗಿದ್ದರು, ಆದರೆ ಆ ಸಮುದಾಯದ ಕಟ್ಟುಪಾಡುಗಳನ್ನು ಒಪ್ಪಿದವರಲ್ಲ. ಶಾಲೆ ಆರಂಭಿಸಿದರು. ನನ್ನ ತಂದೆಯನ್ನು ಬಿಟ್ಟು ಬಂದಮೇಲೆ ಸಿರಿಯನ್ ಕ್ರಿಶ್ಚಿಯನ್ ರಲ್ಲಿ ಉತ್ತರಾಧಿಕಾರ ಕಾನೂನು ಬಹಳ ಮಹಿಳಾ ವಿರೋಧಿಯಾಗಿತ್ತು, ಅದನ್ನು ಬದಲಿಸಲು ಅಮ್ಮ ಹೋರಾಡಿದರು, ಅವರಿಂದಾಗಿ ಅದು ಬದಲಾಯಿತು. ಆದರೆ ಕಾನೂನು ಮಾತ್ರ ಬದಲಾಯಿತು, ಸಮಾಜದ ಇಂದಿಗೂ ಆ ಸಮುದಾಯದಲ್ಲಿ ಮನಸ್ಥಿತಿ ಬದಲಾಗಿಲ್ಲ.

ಮಹಿಳೆಯರು ತಮ್ಮ ಬುದ್ಧಿವಂತಿಕೆ ಆಕ್ರೋಶ ಪ್ರತಿಭೆ ಎಲ್ಲವನ್ನೂ ಬಳಸಿಕೊಳ್ಳಲು ಬಿಡುತ್ತಾರೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಹಳ ಆಳವಾಗಿ ಹಚ್ಚಿಕೊಂಡಿದ್ದೆವು. ಅವರು ನಾನು ಏನು ಬೇಕಾದರೂ ನಾನು ಬಯಸಿದ ಎಲ್ಲವೂ ಆಗಲು ಅವಕಾಶ ಮಾಡಿಕೊಟ್ಟರು. ಅವರು ಡಿವೋರ್ಸ್‌ ಆದಾಗ  ನಮಗೆ ಬಹಳ ಬಡತನ ಇತ್ತು, ನಾನು ಕಲಿತ ಶಾಲೆಯಲ್ಲಿ ಇದ್ದ ಒಬ್ಬ ಚರ್ ಪ್ರತಿದಿನ ನನಗೆ ನಿನ್ನ ಮುಖದಲ್ಲಿ ನನಗೆ ಭೂತ ಕಾಣುತ್ತದೆ ಎನ್ನುತ್ತಿದ್ದರು.

ನನಗೆ ತಾಯಿ ಒಂದು ಪುಸ್ತಕ ಕೊಟ್ಟು ನಿನಗೆ ಇಷ್ಟವಾದದ್ದು ಬರಿ ಅಂದಾಗ, ನಾನು ಆ ಟೀಚರ್ ನ್ನು ದ್ವೇಷಿಸುತ್ತೇನೆ ಎಂದು ಬರೆದಿದ್ದೆ.

ಪ್ರೊ.ಜಿ ಎನ್ ದೇವಿ:‌ ನೀವು ಬದುಕಿದ್ದು ಬಾಂಗ್ಲಾ ಮಲೆಯಾಳಂ ಹಿಂದಿ ಇಂಗಲೀಷ್ ಮುಂತಾದ ಭಾಷೆಗಳ ಬದುಕಿನಲ್ಲಿ, ನಾನು ಗುಜರಾತಿ ಮರಾಠಿ ಇತ್ಯಾದಿಗಳ ಜೊತೆ ಬದುಕಿರಬಹುದು. ನೀವು ಎಂಎಸ್‌ಪಿಯನ್ನು ರಾಜಕಾರಣಿಗಳಿಗೆ ತರಬೇಕು ಎಂದಿರಿ, ನಾನು ಅದನ್ನು ಕನಿಷ್ಟ ಮಾತನಾಡುವ ಬೆಲೆ ಎಂದು ಹೇಳುತ್ತೇನೆ. ಮಾತಿನ ಅರ್ಥವೂ ಕಳೆದು ಹೋಗುತ್ತಿದೆ. ನಾವಿಂದು ಭಾರತದಲ್ಲಿ ಕನಿಷ್ಟ ಮಾತನಾಡುವ ಬೆಲೆ ಹೊಂದಿದ್ದೇವೆ, 50 ಕೋಟಿ ಜನರು ಕೆಲವು ಪದಗಳನ್ನು ಬಳಸಬಹುದು, ಇನ್ನು 50 ಕೋಟಿ ಮಂದಿ ಇನ್ನೊಂದಷ್ಟು ಪದಗಳನ್ನು ಬಳಸಬಹುದು,

ಈಗ ನಿಮ್ಮ ಸರದಿ, ನಿಮ್ಮ ಬದುಕಿನ ಬಗ್ಗೆ ಎರಡು ಮೂರು ಪದಗಳನ್ನು ಮಾತಾಡಿ ಎಂದರೆ-ಎಲ್ಲರ ಬದುಕಿನ ಬಗ್ಗೆ- ಏನು ಹೇಳುತ್ತೀರಿ?

ಅರುಂಧತಿ ರಾಯ್: ಮೊದಲ ಎರಡು: ಸಮಾನತೆ ಮತ್ತು ನ್ಯಾಯ. ನನ್ನ ಮಟ್ಟಿಗೆ ಮೂರನೆಯದೆಂದರೆ ಸೌಂದರ್ಯ.

ಪ್ರೊ.ಜಿ ಎನ್ ದೇವಿ: ತೀಸ್ತಾ ಅವರ ದಾಖಲೀಕರಣದ ಸೌಂದರ್ಯ, ಜೈಲಿಗೆ ಹೋಗಲು ಧೈರ್ಯ ಮಾಡಿದ ಕಾರ್ಟೂನಿಸ್ಟನ ಧೀಮಂತಿಕೆಯ ಸೌಂಧರ್ಯ, ಸಾರ್ವಜನಿಕ ಬುದ್ಧಿಜೀವಿಯಾಗಿ ನಿಮ್ಮ ಧೈರ್ಯ, ಇವೆಲ್ಲದರ ಮೂಲವೇನು? ತೀಸ್ತಾ, ಗೌರಿ, ಅರುಂಧತಿ ಇವರೆಲ್ಲರ ಈ ಧೈರ್ಯದ ಅದರ ಸೌಂದರ್ಯದ ಮೂಲ ಏನು?

ಅರುಂಧತಿ ರಾಯ್: ಭಾಷೆಯ ಬದಲಾವಣೆ- ಯಾವುದು ಸ್ವೀಕಾರಾರ್ಹ ಅಥವಾ ಅಲ್ಲ ಎಂಬುದು- ಬದಲಾಗುತ್ತದೆ. ಅಣುಪರೀಕ್ಷೆ ನಡೆದಾಗ ನನಗೆ ಅನಿಸಿತು ಹೀಗೆಂದು.‌

ಇಲ್ಲಿ ಕಾಣುತ್ತಿರುವುದು ನಮ್ಮ ದೇಶದ ಬಗ್ಗೆ ಪ್ರೀತಿಯ ಬಗೆಗಲ್ಲ ಇನ್ನೊಂದು ದೇಶದ ಬಗೆಗಿನ ದ್ವೇಷದ ಬಗ್ಗೆ ಮಾತು.

ಅದರ ಕುರಿತು ಒಂದು ಲೇಖನ ಬರೆದು- ಅದರಲ್ಲಿ ಹೀಗಿದೆ.

ನಾವು ಬದುಕಿರುವ ಸಮಯದಲ್ಲಿ ಬದುಕುವ ಸತ್ತಾಗಲೇ ಸಾಯುವ ಅವಕಾಶ

ಪ್ರೀತಿಸುವುದು, ಪ್ರೀತಿಸಲ್ಪಡುವುದು

ನಮ್ಮ ಸುತ್ತಲಿನ ಅಸಮಾನತೆಗಳ ಬಗ್ಗೆ ಮಾತಾಡುವುದು

ಸುತ್ತಲಿನ ಸೌಂದರ್ಯವನ್ನು ಸವಿಯುವುದು

ಸರಳ ವಿಷಯಗಳನ್ನು ಸಂಕೀರ್ಣಗೊಳಿಸದಿರುವುದು ಸಂಕೀರ್ಣವಾದವನ್ನು ಸರಳಗೊಳಿಸದಿರುವುದು…

ಎಂದೆಂದಿಗೂ ಮರೆಯದಿರುವುದು

ಡಿ ಉಮಾಪತಿ: ನೀವು ನಿರಂತರವಾಗಿ ಆಶಾವಾದಿಯಾಗಿ ಕಾಣುತ್ತೀರಿ ನಿಮ್ಮ ಎಲ್ಲ ಬರಹಗಳಲ್ಲಿ. ಪ್ರತಿ ಸಲವೂ ಪ್ರಭುತ್ವ ಉಕ್ಕಿನ ಮುಷ್ಟಿಯೊಂದಿಗೆ ದಮನಿಸಲು ಬರುತ್ತದೆ. ನಿಮ್ಮ ಆಶಾವಾದದ ಮೂಲವೇನು?

ಅರುಂಧತಿ ರಾಯ್: ನನಗೆ ಅನಿಸುವಂತೆ ನಮ್ಮ ಸಮಸ್ಯೆ ಪ್ರಭುತ್ವ ಅಲ್ಲ, ನಿಜವಾದ ಸಮಸ್ಯೆ ಇರುವುದು ನಮ್ಮ ಸಮಾಜದಲ್ಲಿ. ಜಾತಿಯನ್ನು, ಶ್ರೇಣೀಕೃತ ಆಲೋಚನೆಯನ್ನು-ಮೇಲಿನಿಂದ ಮಾತ್ರವಲ್ಲ ಕೆಳಗಿನಿಂದಲೂ ಅಳವಡಿಸಿರುವ ರೀತಿಯಲ್ಲಿ. ಮಾವೋ ಸಣ್ಣದೊಂದು ಕಿಡಿ ಹುಲ್ಲಿನ ಗದ್ದೆಗೇ ಬೆಂಕಿ ಹಚ್ಚಬಲ್ಲದು ಎನ್ನುತ್ತಾರೆ, ಆದರೆ ನಮ್ಮ ದೇಶದಲ್ಲಿ ಇರುವುದು ಅಂತಹ ಹುಲ್ಲಿನ ಗದ್ದೆಯಲ್ಲ. ಇಲ್ಲಿ ಇರುವುದೇನಿದ್ದರೂ ಅಡ್ಡಡ್ಡ ಉದ್ದುದ್ದ ಸೀಳಿಕೊಂಡಿರುವ ಜಾತಿಯ ಜಾಲ. ಹಾಗೆ ನೋಡಿದರೆ ಪ್ರಪಂಚದ ಇತರೆ ಭಾಗಗಳಲ್ಲಿ ಜನರು ಅನುಭವಿಸಿರುವ ಸಂಕಷ್ಟಗಳನ್ನು ನೋಡಿದರೆ ನಮ್ಮಜನರು ಅಂತಹ ಸ್ಥಿತಿಗಳನ್ನು ಎದುರಿಸಿಲ್ಲ. ಬೇರೆ ದೇಶಗಳಲ್ಲಿ ಏನಾಯಿತು? ಯುರೋಪು ಎರಡನೇ ಪ್ರಪಂಚ ಯುದ್ಧದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳು, ಜಪಾನ್ ನ ಹಿರೋಷಿಮಾ ನಾಗಾಸಾಕಿಯಲ್ಲಿ  ಕೋಟಿಗಟ್ಟಲೆ ಜನರ ಕೊಲೆಗಳು, ಜರ್ಮನಿಯ ಜನಾಂಗ ಹತ್ಯೆಗಳು, ಆಫ್ರಿಕನ್ ಅಮೇರಿಕನ್ನರ ಕೊಲೆಗಳು ಇವೆಲ್ಲಾ ನೋಡಿದರೆ ನಾವಿನ್ನೂ ಯುದ್ಧ ಎಂದರೇನೆAದು ಅರ್ಥಮಾಡಿಕೊಳ್ಳಲು ಆರಂಭವೇ ಮಾಡಿಲ್ಲ. ಹಾಗಿರುವಾಗ ನಾವು ನಿರಾಶೆಗೊಳ್ಳಲು ನಮಗೆ ಏನು ಅಧಿಕಾರ ಇದೆ?

ಅರುಂಧತಿ ರಾಯ್

ಆರೆಸ್ಸೆಸ್ 100 ವರ್ಷದಿಂದ ಕೆಲಸ ಮಾಡುತ್ತಿದೆ, ಒಂದೇ ದೃಷ್ಟಿ, ಒಂದೇ ಗುರಿ, ಒಂದೇ ದ್ವೇಷ ಇದ್ದವರು ಮಾತ್ರ ಹಾಗೆ ಕೆಲಸ ಮಾಡುತ್ತಾರೆ. ನಾವು ಮಹಾಸಾಗರದಂತೆ, ಹಾಗೇ ಇರಬೇಕೆಂಬುದು ನಮ್ಮ ದೃಷ್ಟಿ ಸಹ. ಜಗತ್ತಿನಲ್ಲಿ ಯಾವುದೂ ಕೂಡಾ ಶಾಶ್ವತವಾಗಿ ಒಂದು ಸಿದ್ಧಾಂತ ಒಂದು ಚಿಂತನೆಯಿಂದ ದಮನಿಸಲ್ಪಡಲು ಸಾಧ್ಯವಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಒಂದು ಕಡೆ ಭಾರತವನ್ನು ಹಿಂದೂ ರಾಷ್ಟçವಾಗಿ ಕಟ್ಟುವುದು ಇತ್ಯಾದಿಗಳನ್ನು ಘೋಷಿಲಾಗುತ್ತಿದೆ ಮತ್ತೊಂದು ಕಡೆ ಬಂಡವಾಳವಾದದ ನಡಿಗೆ ಇಡೀ ಗ್ರಹವನ್ನೇ ಕೊನೆಗೊಳಿಸಲಿದೆ ಎಂಬುದು ನಿಚ್ಚಳವಾಗುತ್ತಿದೆ.

ನನಗೆ ಇತ್ತೀಚೆಗೆ ನನ್ನ ಮುಸ್ಲಿಂ ಸ್ನೇಹಿತರೊಬ್ಬರು ಹೀಗೇ ಮಾತಾಡುತ್ತಾ ಇರುವಾಗ ಕೇಳಿದರು. ನನಗದು ಬಹಳ ನೋವು ತರಿಸಿದ ಮಾತು. ಅವರು ಏನೆಂದರೆಂದರೆ,  ಅರುಂಧತಿ, ಈಗ ನಮ್ಮನ್ನು ದಮನಿಸುವವರು ಬಯಸುತ್ತಿರುವಂತೆ ನಾವು ಅವರ ರೀತಿ ನೀಗೆ ಒಪ್ಪಿಕೊಂಡರೆ, ಅವರು ಕೇಳುವಂತೆ ನಾವು ಪೌರತ್ವ ಬಿಟ್ಟುಕೊಟ್ಟು ಎರಡನೇ ದರ್ಜೆಯ ಪ್ರಜೆಗಳಾಗಲು ಒಪ್ಪಿಕೊಂಡರೆ ಈ ಹಿಂಸೆ ಹಿಂಸೆ ನಿಲ್ಲಬಹುದೇ? ಎಂದರು. ಅದಕ್ಕೆ ನಾನು ಹೇಳಿದೆ ಖಂಡಿತಾ ಇಲ್ಲ. ಅಷ್ಟಾದರೂ ದಮನಕಾರರಿಗೆ ಸಮಾಧಾನವಾಗುವುದಿಲ್ಲ. ನಾವು ಸಂಪೂರ್ಣವಾಗಿ ನಾಶವಾಗುವ ತನಕ ಅವರು ಹಿಂಸೆ ನಿಲ್ಲಿಸುವುದಿಲ್ಲ. ಹೀಗಾಗಿ ಎದುರು ತಿರುಗಿ ನಿಲ್ಲುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ನಾವು ನಮ್ಮ ಕಾಲುಗಳ ಮೇಲೆ ಭದ್ರವಾಗಿ ನಿಲ್ಲಬೇಕಿದೆ. ಈಗ ನಾವು ಕಾಣುತ್ತಿರುವ ಈ ಎಲ್ಲಾ ಹಾರರ್ ಶೋ ಆರಂಭವಾದದ್ದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೇನಲ್ಲ. ಅದು ಬಹಳ ಹಿಂದೆಯೇ ಶುರುವಾಗಿದೆ. ಭಾರತ ರಾಷ್ಟ್ರವಾಗಿ ಇನ್ನೂ ರಚನೆಯಾಗುವ ಮೊದಲೇ ಶುರುವಾಗಿದೆಯಲ್ಲವೆ?

ನನ್ನ ತಾಯಿಗೆ ಆಕೆ ಜೀವನದಲ್ಲಿ ಒಬ್ಬ ಬಂಡಾಯಗಾರಳಾಗಿ ಬದುಕಿದ ಕಾರಣಕ್ಕೆ ಅವಳ ಶರೀರವನ್ನು ಹೂಳಲು ಸ್ಮಶಾನದಲ್ಲಿ ಜಾಗ ಕೊಡಲಿಲ್ಲ, ಅದಿನ್ನೂ ಮುಗಿದಿಲ್ಲ ನಾನು ವಾಪಾಸ್ ಹೋಗಿ ತಾಯಿಯ ಚಿತಾಭಸ್ಮವನ್ನು ನಾನು ಬೆಳೆದ ಪ್ರದೇಶದ ನದಿಯಲ್ಲಿ ಕಳಿಸುತ್ತೇನೆ. ನನ್ನ ತಾಯಿಗೆ ಅವರು ಜಾಗ ಕೊಡಲಿಲ್ಲ ಎಂಬುದರ ಬಗ್ಗೆ ನನಗೆ ಹೆಮ್ಮೆಯಿದೆ. ಯಾಕೆಂದರೆ ನನ್ನ ಅಮ್ಮ ಹಾಗೆ ಬದುಕಿದ್ದರು.

ಭಾರತದಲ್ಲಿ ಜಾತಿ ಮತ್ತು ಬಂಡವಾಳವಾದ ಒಂದು ವಿಚಿತ್ರ ಮಿಶ್ರಣವಾಗಿ ತಯಾರಾಗಿವೆ. ಇಂದು ಎಲ್ಲವನ್ನೂ ನಿಯಂತ್ರಿಸುತ್ತಿರುವವರು ಶೇಕಡಾ 2-3  ರಷ್ಟು ಜನಸಂಖ್ಯೆಯಲ್ಲಿರುವ ಬ್ರಾಹ್ಮಣ, ಬನಿಯಾ ಮುಂತಾದು ಮೇಲ್ಜಾತಿಯವರು. ಆದರೆ ಕಳೆದ ಸಾವಿರಾರು ವರ್ಷಗಳಿಂದಲೂ ಅವರು ಈ ದೇಶದ ಬಹುಸಂಖ್ಯಾತರನ್ನು ಹತೋಟಿಯಲ್ಲಿ ಹಿಡಿದುಕೊಳ್ಳುವ ಪ್ರಬಲ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

ಇಂದು ಅತಿ ಹೆಚ್ಚು ಧೈರ್ಯ ತೋರಿದವರು ಅತಿದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದು ಒಂದು ನಿಯಮದಂತೆ. ಯಾರಿಗೆ ಅತಿಹೆಚ್ಚು ಧೈರ್ಯ ತೋರಲು ಸಾಧ್ಯವಾಗುತ್ತದೋ ಅವರಿಗೆ ಸಮಾಜವನ್ನು ಬದಲಿಸಬೇಕೆಂಬ ಬಗ್ಗೆ ಅತಿಹೆಚ್ಚು ಕಾಳಜಿಯೂ ಇರುತ್ತದೆ ಯಾರೂ ಮಾತಾಡದಂತೆ ಪ್ರಶ್ನಿಸದಂತೆ ಕೇವಲ ಪ್ರಭುತ್ವ ಮಾತ್ರವಲ್ಲ, ಜಾತಿವಾದಿಗಳು, ಪಟ್ಟಭದ್ರ ಕಾರ್ಪೊರೇಶನ್ ಗಳು, ಬಲಪಂಥೀಯರು ಎಡಪಂಥೀಯರು ಎಲ್ಲರೂ ಇನ್ಯಾರನ್ನೋ ಮಾತಾಡದಂತೆ ಮಾಡಲು ನೋಡುತ್ತಿದ್ದಾರೆ. ಸೆನ್ಸಾರ್ ಶಿಪ್ ಗೆ ಹಲವು ಮುಖಗಳಿವೆ. ಹೈದ್ರಾಬಾದ್‌ನಲ್ಲಿ ಮುಸ್ಲಿಂ ಹಿಂದೂ ಮದುವೆಯ ಸಂದರ್ಭದಲ್ಲಿ ಮರ್ಯಾದೆಗೇಡು ಹತ್ಯೆ ಆದಾಗ, ದೊಡ್ಡ ಆಂದೋಲನ ಸರ್ ಸೆ ತನ್ ಜುದಾ (ತಲೆಯಿಂದ ದೇಹ ಬೇರೆ), ಪ್ರಶ್ನಿಸುವ ಸ್ಥಳವೇ ಇಲ್ಲವಾಗುವ ಬಗೆ.. ಇತ್ತೀಚೆಗೆ ಸಲ್ಮಾನ್ ರಶ್ದಿ ಅವರನ್ನಂತೂ ಹೆಚ್ಚೂ ಕಡಿಮೆ ಕೊಂದೇ ಹಾಕಿದ್ದರು. ಇರಾಕ್ ಮೇಲೆ ಬಾಂಬ್ ಹಾಕಿದ್ದಾಗ, ಅಫ್ಘಾನಿಸ್ಥಾನ ನಡೆದಾಗ ಪ್ಯಾಲೆಸ್ತೇನೆ ವಿಷಯದಲ್ಲಿ-ಎಲಿಯೂ ಮುಕ್ತ ಮಾತಿನ ವಾತಾವರಣ ಇಲ್ಲ, ಜೂಲಿಯನ್ ಅಸಾಂಜ್ ಇನ್ನೂ ಜೈಲಿನಲ್ಲಿದ್ದಾರೆ. ಇದೆಲ್ಲಾ ಏನು ತೋರಿಸುತ್ತದೆ ಹೇಳಿ. ‌

ಪ್ರಶ್ನೆ: (ಹರ್ಷಕುಮಾರ್‌ ಕುಗ್ವೆ)- ನೀವು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜಾತಿ ವಿನಾಶ ಪುಸ್ತಕಕ್ಕೆ ಡಾಕ್ಟರ್‌ ಅಂಡ್‌ ಸೈಂಟ್‌ ತಲೆಬರಹದ ಒಂದು ಸುದೀರ್ಘ ಮುನ್ನುಡಿ ಬರೆದಾಗ ಅಂಬೇಡ್ಕರ್‌ ವಾದಿಗಳಿಂದಲೂ ಟೀಕೆಗೆ ಒಳಗಾದಿರಿ. ಇದನ್ನು ಮೇಲ್ಜಾತಿ ಅಹಂ ಎಂದೇ ಅವರು ಪರಿಗಣಿಸಿ ಟೀಕೆ ಮಾಡಿದರು. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಅರುಂಧತಿ ರಾಯ್:‌ ನಿಜ. ಬಹಳ ಕಹಿಯಾದ ಟೀಕೆ ಆ ಸಂದರ್ಭದಲ್ಲಿ ಬಂತು. ಡಾ.ಬಿ.ಆರ್.‌ಅಂಬೇಡ್ಕರ್ ಅವರ ಕೃತಿ Anhilation of Caste ಏನಿದೆ, ಅದನ್ನು ಭಾರತದಲ್ಲಿ ಪ್ರಬಲ ಜಾತಿಗಳ ಬೌದ್ಧಿಕ ಲಾಭಿ ಯಾರಿಗೂ ತಲುಪದಂತೆ ಮಾಡಿದೆ. ಯಾಕೆಂದರೆ ಅದನ್ನು ಅಂಬೇಡ್ಕರ್‌ ಬರೆದಿರುವುದೇ ಬಲಾಡ್ಯ ಜಾತಿಗಳನ್ನು ಉದ್ದೇಶಿಸಿ. ಹೀಗಾಗಿ ಅದು ಇಂತಹ ಜಾತಿಗಳ ಜನರಿಗೆ ತಲುಪುವಂತೆ ಮಾಡಬೇಕು, ಬಲಾಢ್ಯ ಜಾತಿಗಳಿಗೆ ಇವನ್ನೆಲ್ಲ ಹೇಳಲೇಬೇಕಾದ ಅಗತ್ಯವಿತ್ತು. ಹೀಗಾಗಿ ನಾನು ಅಂತಹ ಮುನ್ನುಡೆ ಬರೆದೆ. ಆದರೆ ಅದಕ್ಕೆ ಬಂದ ಟೀಕೆಗಳ ಕಾರಣದಿಂದ ಈಗ ಆ ಮುನ್ನುಡಿಯನ್ನು ತೆಗೆದು ಕೇವಲ ಅಂಬೇಡ್ಕರ್‌ ಅವರ ಪ್ರಬಂಧವನ್ನು ಪ್ರಕಟಿಸಲಾಗುತ್ತಿದೆ. ನನ್ನ ಮುನ್ನುಡಿಯಲ್ಲಿ ನಾನು ಬರೆದಿರುವ ಅಭಿಪ್ರಾಯಗಳಿಗೆ ಈಗಲೂ ಬದ್ಧಳಾಗಿದ್ದೇನೆ. ಅದನ್ನು  ಪ್ರತ್ಯೇಕ ಪುಸ್ತಕವಾಗಿ ತರುತ್ತಿದ್ದೇವೆ.

ಪ್ರಶ್ನೆ: ಬಂಡವಾಳಶಾಹಿ ಮತ್ತು ಜಾತಿ ಬಗ್ಗೆ ಮಾತಾಡಿದಿರಿ, ಮಹಿಳಾ ವಿಮೋಚನೆ ಯಾವಾಗ?

ಕಾಯುವುದೇ ನಮ್ಮ ಸಮಸ್ಯೆಯಾಗಿದೆ ನೋಡಿ. ಆದರೆ ನನ್ನಮ್ಮ ಕಾಯಲಿಲ್ಲ, ನಾನು ಕಾಯಲಿಲ್ಲ, ಇಂತಹ ಎಷ್ಟೋ ಮಂದಿ ಕಾಯಲಿಲ್ಲ. ನಾವು ದಮನಕ್ಕೊಳಗಾಗಿರುವ ಬಗ್ಗೆ ಮಾತ್ರ ಮಾತಾಡುವುದಲ್ಲ ನಮಗಾಗಿ ಯಾರೂ ಬಂದು ಹೋರಾಡುವುದಿಲ್ಲ. ನನ್ನ ಪ್ರಕಾರ ಅತ್ಯದ್ಭುತವಾದ ಸಂಗತಿಯೆಂದರೆ ಸ್ವತಂತ್ರ ಸ್ತ್ರೀ ಆಗಿರುವುದು. ಈ ಸಂಪ್ರದಾಯ, ಮದುವೆ ಮುಂತಾದ  ಚೌಕಟ್ಟುಗಳನ್ನು ಮೀರಿ ಬದುಕುವುದು ʼಆವಾರಾʼ ಅನಿಸಿಕೊಳ್ಳುವುದು ನನ್ನ ಪ್ರಕಾರ ಅದ್ಭುತ.

ಅಕ್ಷರ ರೂಪ ಕೊಟ್ಟವರು: ಮಲ್ಲಿಗೆ ಸಿರಿಮನೆ, ಜನಶಕ್ತಿ