yogi adhityanatha – Peepal Media

185 ವರ್ಷಗಳ ಹಳೆಯ ಮಸೀದಿಯ ಒಂದು ಭಾಗವನ್ನು ಕೆಡವಿದ ಉತ್ತರ ಪ್ರದೇಶ ಆಡಳಿತ
“ಅಕ್ರಮ ಕಟ್ಟಡ” ಹೆದ್ದಾರಿಯ ಅಗಲೀಕರಣಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಆಡಳಿತವು ಡಿಸೆಂಬರ್ 10 ರಂದು ಫತೇಪುರ್‌ನಲ್ಲಿರುವ 185 ವರ್ಷಗಳಷ್ಟು ಹಳೆಯದಾದ ಮಸೀದಿಯ ಒಂದು ಭಾಗವನ್ನು ಕೆಡವಿದೆ. ನೂರಿ ಮಸೀದಿಯ ಒಂದು ಭಾಗವನ್ನು ಕೆಡವಲು ಫತೇಪುರ್ ಆಡಳಿತ ತೆಗೆದುಕೊಂಡಿರುವ ಈ ನಿರ್ಧಾರವು ಅಲಹಾಬಾದ್ ಉಚ್ಚ ನ್ಯಾಯಾಲಯವು ಧ್ವಂಸಗೊಳಿಸುವ ಉದ್ದೇಶಿತ ಯೋಜನೆಗಳನ್ನು ಪ್ರಶ್ನಿಸಿ ಮಸೀದಿಯ ಉಸ್ತುವಾರಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಕೇವಲ ಮೂರು ದಿನಗಳ ಮೊದಲು ನಡೆದಿದೆ.

ಈ “ಅತಿಕ್ರಮಣ” ವನ್ನು ಕೆಡವಿಹಾಕುವ ಮೊದಲು ಮಸೀದಿಗೆ ಮುಂಚಿತವಾಗಿ ನೋಟಿಸ್ ನೀಡಿದ್ದೇವೆ ಎಂದು ಫತೇಪುರ್ ಆಡಳಿತ ತಿಳಿಸಿದೆ.

“ನಾವು ಮಸೀದಿಯನ್ನು ಕೆಡವಲಿಲ್ಲ,” ರಸ್ತೆ ವಿಸ್ತರಣೆಗೆ “ಅಡಚಣೆ”ಯಾಗಿದ್ದ ಕಟ್ಟಡದ ಒಂದು ಭಾಗವನ್ನು ಮಾತ್ರ ಕೆಡವಲಾಗಿದೆ ಎಂದು ಫತೇಪುರ್‌ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ತ್ರಿಪಾಠಿ ಹೇಳಿದ್ದಾರೆ.

ಈ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ನೋಟಿಸ್ ಪಡೆದ ನಂತರ ಮಸೀದಿಯ ಆಡಳಿತ ಮಂಡಳಿ ಕೆಲವು ಅಂಗಡಿಗಳನ್ನು ಸ್ಥಳದಿಂದ ತೆಗೆದುಹಾಕಿದೆ ಎಂದು ಅವರು ಹೇಳಿದರು.

“ಇದನ್ನುಕೆಡವುದು ಅನಿವಾರ್ಯವಾಗಿತ್ತು. ಏಕೆಂದರೆ ಇದು ರಸ್ತೆಯ ಜೋಡಣೆಯ ಮಧ್ಯೆ ಬರುತ್ತಿತ್ತು ಮತ್ತು ಇತ್ತೀಚಿನ ವರ್ಷಗಳಲ್ಲಿ ಈ ನಿರ್ಮಾಣವನ್ನು ಕೈಗೊಳ್ಳಲಾಯಿತು, ”ಎಂದು ತ್ರಿಪಾಠಿ ಹೇಳಿದ್ದಾರೆ.

ಕಟ್ಟಡವನ್ನು ಏಕಾಏಕಿ ಕೆಡವಲಾಗಿದೆ ಎಂದು ಮಸೀದಿಯವರು ಆರೋಪ ಮಾಡಿದ್ದು, ಆಗಸ್ಟ್‌ನಲ್ಲಿ ಪಿಡಬ್ಲ್ಯೂಡಿ ಇಲಾಖೆ ತಮಗೆ ನೋಟಿಸ್ ನೀಡಿತ್ತು ಎಂದು ಆಡಳಿತ ತಿಳಿಸಿದೆ. ರಸ್ತೆಯ ಅಲೈನ್‌ಮೆಂಟ್‌ನಲ್ಲಿ ಬಿದ್ದಿರುವ “ಅಕ್ರಮ ಕಟ್ಟಡದ” ಕಾಮಗಾರಿಯನ್ನು ತೆಗೆದುಹಾಕುವಂತೆ 139 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ತ್ರಿಪಾಠಿ ಹೇಳಿದರು.

ಸೆಪ್ಟೆಂಬರ್‌ನಲ್ಲಿ ಅವರು ರಸ್ತೆ ಬದಿಯಲ್ಲಿ ಬಂದಿರುವ ಅಂಗಡಿಗಳು ಮತ್ತು ಮನೆಗಳನ್ನು ತೆಗೆದುಹಾಕುವ ಕಾರ್ಯಾಚರಣೆಯನ್ನು ನಡೆಸಿದ್ದರು ಎಂದು ಅಧಿಕಾರಿ ಹೇಳಿದರು. ತಮ್ಮ ಆಕ್ಷೇಪಣೆಗಳನ್ನು ಹೈಕೋರ್ಟ್‌ನಲ್ಲಿ ವಿಚಾರಣೆ ಆಗುವ ಮೊದಲೇ ಆಡಳಿತವು ನಿರ್ಮಾಣವನ್ನು ಕೆಡವಲು ಬಂದಿತು ಎಂದು ಮಸೀದಿ ಮಾಡಿರುವ ಆರೋಪಗಳಿಗೆ ಎಡಿಎಂ ತ್ರಿಪಾಠಿ, “ನೋಟಿಸ್ ನೀಡಿದ ನಂತರ ಅವರಿಗೆ ಸಾಕಷ್ಟು ಸಮಯವನ್ನು ನೀಡಲಾಗಿದೆ,” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನೂರಿ ಮಸೀದಿ ಸಲ್ಲಿಸಿದ ಅರ್ಜಿಯು ಡಿಸೆಂಬರ್ 6 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ಆಗಬೇಕಿತ್ತು ಆದರೆ ನಂತರ ಅದನ್ನು ಡಿಸೆಂಬರ್ 13 ಕ್ಕೆ ಪಟ್ಟಿ ಮಾಡಲಾಯಿತು.

ಪಿಡಬ್ಲ್ಯುಡಿ ಅಧಿಕಾರಿಗಳು ನೋಟಿಸ್ ನೀಡಿದ ನಂತರ ಮಸೀದಿಯ ಉಸ್ತುವಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ತ್ರಿಪಾಠಿ ಹೇಳಿದರು. ”ಜಿಲ್ಲಾಡಳಿತವು ಸಾಕಷ್ಟು ಸಮಯಾವಕಾಶದೊಂದಿಗೆ ಅವರಿಗೆ ಪೂರ್ವ ಸೂಚನೆ ನೀಡಿದೆ. ಅವರಿಗೆ ಮೊದಲಿನಿಂದಲೂ ಈ ವಿಷಯದ ಸಂಪೂರ್ಣ ಅರಿವಿತ್ತು,” ಎಂದಿದ್ದಾರೆ.

ಮಸೀದಿಯ ಐತಿಹಾಸಿಕ ಉಪಗ್ರಹ ಚಿತ್ರಗಳ ವಿಶ್ಲೇಷಣೆಯು ಕಳೆದ ಎರಡು-ಮೂರು ವರ್ಷಗಳಲ್ಲಿ ಹೆಚ್ಚುವರಿ ನಿರ್ಮಾಣಕ್ಕೆ ಬಂದು ರಸ್ತೆಯನ್ನು ಅತಿಕ್ರಮಿಸಿರುವುದು ಕಂಡುಬಂದಿದೆ ಎಂದು ತ್ರಿಪಾಠಿ ಹೇಳಿದರು.

ಭಾರೀ ಪೊಲೀಸ್ ಪಡೆ ನಿಯೋಜನೆಯ ನಡುವೆ ಧ್ವಂಸಗೊಳಿಸಲಾಗಿದೆ ಎಂದು ಫತೇಪುರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಶಂಕರ್ ಮಿಶ್ರಾ ಹೇಳಿದ್ದಾರೆ. ಐದು ವೃತ್ತ ಅಧಿಕಾರಿಗಳು, 10 ಠಾಣಾಧಿಕಾರಿಗಳು, 200 ಕಾನ್‌ಸ್ಟೆಬಲ್‌ಗಳು, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿಯ ಒಂದು ಕಂಪನಿ ಮತ್ತು ಗಲಭೆ ನಿಗ್ರಹ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸಂಭಾಲ್‌ ಸುತ್ತ ಕಟ್ಟಿದ ಸುಳ್ಳುಗಳು!
ಸಂಭಾಲ್‌ ಮಸೀದಿಯ ಮುಂದೆ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರೂ ಭಾರತೀಯರು, ಆದರೆ ನಾಲ್ಕು ಮುಸ್ಲಿಮರು. ಬಹುಶಃ ಪೊಲೀಸರು ಅವರನ್ನೂ ಹಿಂದೂಗಳನ್ನು ನಡೆಸಿಕೊಂಡಂತೆ ನಡೆಸಿಕೊಂಡಿದ್ದರೆ ಬದುಕಿರುತ್ತಿದ್ದರೋ ಏನೋ!

ಹಿಂದೂಗಳು ಕೋಮುದ್ರಿಕ್ತರಾಗಿ ನಡೆದುಕೊಂಡರೆ ಪೊಲೀಸರ ಗುಂಡು ಕೆಲಸ ಮಾಡುವುದಿಲ್ಲ, ಮಾಡಿದರೂ ಪಟಾಕಿ ಬೆಂಕಿಕೊಟ್ಟು ಎಸೆದಂತೆ ಗಾಳಿಯಲ್ಲಿ ಹಾರುತ್ತವೆ. ಹಿಂದೂವಿನ ಎದೆಯನ್ನು ಅದು ಸೀಳುವುದಿಲ್ಲ. ಹಿಂದೂಗಳು ಇತರರ ಮನೆಗಳು , ವಾಹನಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚುವ ಮತ್ತು ದಾಳಿ ಮಾಡುವ ಸುದ್ದಿಯನ್ನು ನೀವು ಓದಿರುತ್ತೀರಿ. ಅನೇಕ ಕಡೆ ಹಿಂದುತ್ವದವರು ದಲಿತ-ಮುಸಲ್ಮಾನರ ಮೇಲೆ ಗುಂಪುದಾಳಿ ನಡೆಸಿದ್ದಾರೆ. ಆದರೆ ಅವರ್ಯಾರ ಮೇಲೂ ಪೊಲೀಸರು ಸಂಭಾಲ್‌ನಲ್ಲಿ ಮಾಡಿದಂತೆ ಪೊಲೀಸರು ನಡೆದುಕೊಂಡ ಸುದ್ದಿ ಇಲ್ಲ.

ಹಿಂದೂ ಕನ್ವಾರಿಯಾಗಳು ಜನರನ್ನು ಮಾತ್ರವಲ್ಲದೆ ಪೊಲೀಸರ ಮೇಲೂ ಹಲ್ಲೆ ನಡೆಸಿರುವ ವೀಡಿಯೊಗಳನ್ನು ನೀವು ನೋಡಿರುತ್ತೀರಿ , ಆದರೂ ಪೊಲೀಸರು ಮೂಕರಾಗಿ ನೋಡುತ್ತಿದ್ದರು. ಪ್ರಶ್ನೆ ಎಂದರೆ, ಪ್ರಕ್ಷುಬ್ಧ ಹಿಂದುತ್ವವಾದಿ ಗುಂಪು ಕಲ್ಲು ತೂರಾಟದ ಮಾಡಿದರೆ ಅವರ ಜೊತೆಗೂ ಪೊಲೀಸರು ಹೀಗೆ ನಡೆದುಕೊಳ್ಳುತ್ತಾರಾ?

ಪೊಲೀಸರು ಹೇಳುತ್ತಾರೆ, ತಾವು ಯಾವುದೇ ಮುಸ್ಲಿಮರನ್ನು ಕೊಂದಿಲ್ಲ ಎಂದು. ಅವರ ಪ್ರಕಾರ, ಮುಸ್ಲಿಮರೇ ಗುಂಡು ಹಾರಿಸಿಕೊಂಡು ನಾಲ್ವರನ್ನು ಕೊಂದರು. ಇದೊಂದು ಹೊಸ ಬದಲಾವಣೆ: ಮುಸ್ಲೀಮರ ಸಾವಿಗೆ ಅವರನ್ನೇ ದೂಷಿಸುವುದು. ಡಿಸೆಂಬರ್ 2019 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ 21 ಮುಸ್ಲಿಮರು ಕೊಲ್ಲಲ್ಪಟ್ಟಾಗ ಪೊಲೀಸರು ಇದೇ ಮಾತನ್ನು ಹೇಳಿದ್ದರು. ಮುಸ್ಲಿಮರನ್ನು ಕೊಂದ ಆ ಗುಂಡುಗಳು ಅವರ ಅಧಿಕೃತ ಬಂದೂಕುಗಳಿಗೆ ಸೇರಿದ್ದಲ್ಲ ಎಂದು ಪೊಲೀಸರು ಹೇಳಿದ್ದರು. ದೆಹಲಿ ಹಿಂಸಾಚಾರವನ್ನು ಮುಸ್ಲಿಂ ಕಾರ್ಯಕರ್ತರ ಮೇಲೆ ಆರೋಪಿಸಲಾಗಿದೆ ಮತ್ತು ಎಲ್ಗರ್ ಪರಿಷತ್ ಹಿಂಸಾಚಾರದಲ್ಲೂ ಮುಸಲ್ಮಾನರ ಮೇಲೆ ಗೂಬೆ ಕೂರಿಸಲಾಗಿದೆ.

ಮುಸ್ಲಿಮರನ್ನು ಪ್ರಚೋದಿಸಿ, ಹಿಂಸಾಚಾರಕ್ಕೆ ಕಾರಣನಾಗಿದ್ದಾನೆ ಎಂದು ಸಂಭಾಲ್ ಸಂಸದ ಮತ್ತು ಸ್ಥಳೀಯ ಶಾಸಕರ ಪುತ್ರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಸ್ಲಿಮರ ಹಿಂಸಾಚಾರ ಮತ್ತು ಹತ್ಯೆಯ ನಂತರ ಪೊಲೀಸರು ಧ್ವಜ ಮೆರವಣಿಗೆಗಳನ್ನು ನಡೆಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ!

ಮುಸ್ಲಿಮರ ಸಾವಿಗೆ ಪೊಲೀಸ್ ಅಧಿಕಾರಿಗಳು ವಿಷಾದ ಕೂಡ ವ್ಯಕ್ತಪಡಿಸಲಿಲ್ಲ. ಬದಲಾಗಿ, ಮೃತರಾದವರ ಕುಟುಂಬದವರಿಗೆ, “ಆಪಾದನೆಗಳನ್ನು ಮಾಡುವ ಮೊದಲು, ಅವರು [ಮೃತರ ಕುಟುಂಬ] ತಮ್ಮ ಮಕ್ಕಳು ಕಲ್ಲೆಸೆಯಲು ಏಕೆ ಅಲ್ಲಿಗೆ ಬಂದರು ಎಂದು ಕೇಳಬೇಕು. ಅವರು ಯಾವುದೇ ಧಾರ್ಮಿಕ ಕೆಲಸ, ಪವಿತ್ರ ಕಾರ್ಯ ಅಥವಾ ಉದ್ಯೀಗ ಮಾಡಲು ಹೋಗಿದ್ದಲ್ಲ,” ಎಂದು ಹೇಳುತ್ತಾರೆ. ಜನಸಮೂಹ ನಡೆಸಿದ ಈ ಕಲ್ಲು ತೂರಾಟ ಮತ್ತು ಗುಂಪುಗೂಡುವಿಕೆಯು ‘ಪ್ರಚೋದಿತ’ ಕೃತ್ಯವಾಗಿ ಕಂಡುಬಂದಿದೆ ಎಂದು ಪೊಲೀಸರು ಹೇಳುತ್ತಾರೆ.

ಸ್ಥಳೀಯ ಸಂಸದ ಮತ್ತು ಶಾಸಕನ ಪುತ್ರನ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ. ಮುಸಲ್ಮಾನರ ಮೇಲೆ ಪೊಲೀಸರು ಹೇಳುತ್ತಿರುವ ಮಾತುಗಳನ್ನು ಸಾಬೀತು ಮಾಡಲು- ಸಮೀಕ್ಷಾ ತಂಡವು ಮಸೀದಿಯನ್ನು ತಲುಪಿದ ನಂತರ ನೆರೆದಿದ್ದ ಮುಸ್ಲಿಮರು ಹಿಂಸಾಚಾರಕ್ಕೆ ಸಂಚುಕೋರರಿಂದ ಸನ್ನದ್ಧರಾಗಿದ್ದರು ಮತ್ತು ಪ್ರಚೋದಿತರಾಗಿದ್ದರು ಎಂದು ಹೇಳುತ್ತಿದ್ದಾರೆ.  ಮಸೀದಿ ಬಳಿ ಹಿಂಸಾಚಾರ ನಡೆಸಲು ಸ್ವಯಂಪ್ರೇರಿತವಾಗಿ ಜನರು ಬರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇವರು ಜೈಶ್ರೀರಾಮ್‌ ಘೋಷಣೆಯ ಕೂಗುವುದನ್ನು ಕೇಳಿ ಆಕ್ರೋಶಿತರಾಗಿದ್ದರು ಎಂದು ಪೊಲೀಸರು ಹೇಳುತ್ತಾರೆ.

ಅಂದರೆ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಗಲಭೆ ಎಬ್ಬಿಸಲು ಪ್ರಚೋದನೆ ಮಾಡಿದ್ದು ಮುಸಲ್ಮಾನರೇ?

ನ್ಯಾಯಾಲಯದಿಂದ ನೇಮಿಸಲ್ಪಟ್ಟ ವ್ಯಕ್ತಿಯೊಂದಿಗೆ ಜನಸಂದಣಿಯನ್ನು ಮಸೀದಿಗೆ ಬರದಂತೆ ತಡೆಯುವುದು ಮತ್ತು ಪ್ರಚೋದನಕಾರಿ ಘೋಷಣೆಗಳನ್ನು ನಿಲ್ಲಿಸುವುದು ಆಡಳಿತ ಮತ್ತು ಪೊಲೀಸರ ಕರ್ತವ್ಯವಲ್ಲವೇ? ಸರ್ವೆ ಮುಗಿಸಿ ಅಧಿಕಾರಿಗಳು ತೆರಳುವಾಗ ಜೈ ಶ್ರೀರಾಮ್ ಘೋಷಣೆಗಳು ಕೇಳಿ ಬಂದವು. ಸಮೀಕ್ಷೆ ಆಗಬೇಕಿದ್ದರೆ ಅಲ್ಲಿ ಜನಜಂಗುಳಿ ಏಕೆ ಬೇಕು? ‘ಜೈ ಶ್ರೀರಾಮ್’ ಘೋಷಣೆಗಳು ಹೇಗೆ ಬಂದವು? ಈ ರೀತಿ ಪ್ರಚೋದನೆ ನೀಡಲು ಅಧಿಕಾರಿಗಳು ಹೇಗೆ ಬಿಟ್ಟರು?

ಈ ಇಡೀ ಕೇಸ್‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದು ನಿರ್ದಿಷ್ಟ ದೇವಾಲಯವು ಮೊದಲು ಮಸೀದಿಯಾಗಿತ್ತು ಎಂದು ಮುಸ್ಲಿಂ ಫಿರ್ಯಾದಿ ಕೋರ್ಟ್‌ಗೆ ಹೋಗುವ ಸನ್ನಿವೇಶವನ್ನು ಊಹಿಸಿ ಅಥವಾ ಬೌದ್ಧರು ನಿರ್ದಿಷ್ಟ ದೇವಾಲಯವು ಮೊದಲು ಬೌದ್ಧ ದೇವಾಲಯವಾಗಿತ್ತು ಎಂದು ಪ್ರತಿಪಾದಿಸಿ ಕೋರ್ಟ್‌ನ ಸಹಾಯ ಕೇಳುವ ಸನ್ನಿವೇಶವನ್ನು ಯೋಚಿಸಿ. ಈ ಅರ್ಜಿಗಳಿಗೆ ಆದ್ಯತೆ ನೀಡಿ ನ್ಯಾಯಾಲಯ ಪರಿಗಣಿಸುತ್ತದೆಯೇ? ದೇವಾಲಯ ಬರುವ ಮೊದಲು ಅಲ್ಲಿ ಬೌದ್ಧ ಚೈತ್ಯ ಅಥವಾ ಸ್ತೂಫ ಇತ್ತೇ ಎಂಬುದನ್ನು ಪತ್ತೆ ಮಾಡಲು ಸಮೀಕ್ಷೆಗೆ ಕೋರ್ಟ್‌ ಅನುಮತಿ ನೀಡುತ್ತದೆಯೇ? ಎಲ್ಲರಿಗೂ ಉತ್ತರ ಗೊತ್ತೇ ಇದೆ. ಒಂದೋ ಆ ಅರ್ಜಿಗಳು ವಜಾ ಆಗುತ್ತವೆ, ಇಲ್ಲವೇ ಅರ್ಜಿ ಹಾಕಿದವನಿಗೆ ದಂಡ ವಿಧಿಸುತ್ತಾರೆ.

ಸಂಭಾಲ್‌ನಲ್ಲಿ ಮಾಡಿದ ರೀತಿಯಲ್ಲಿಯೇ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಸಮೀಕ್ಷೆಗಳನ್ನು ನಡೆಸಲು ಬಿಡುತ್ತವೆಯೇ ಎಂದು ನಾವು ಕೇಳಬೇಕಾಗಿದೆ. ಅರ್ಜಿ ಸಲ್ಲಿಕೆಯಾದ ತಕ್ಷಣ ಕ್ರಮಕ್ಕೆ ಆದೇಶ ನೀಡುವಷ್ಟು ನಮ್ಮ ನ್ಯಾಯಾಲಯಗಳು ಯಾವಾಗಿನಿಂದ ದಕ್ಷವಾಗಿ ಕೆಲಸ ಮಾಡಲು ಆರಂಭ ಮಾಡಿದವು? ಈ ಆದೇಶವನ್ನು ತಕ್ಷಣವೇ ಕಾರ್ಯಗತಗೊಳಿಸಲು ತನ್ನ ಎಲ್ಲಾ ಸಂಪನ್ಮೂಲಗಳನ್ನು ನೀಡುವ ಆಡಳಿತ ವ್ಯವಸ್ಥೆ ಇಷ್ಟು ಚುರುಕಾಗಿದ್ದು ಯಾವಾಗ?

ಸಂಭಾಲ್‌ನಲ್ಲಿ ನಡೆದಿರುವುದು ಇದೇ.

ಮಸೀದಿಯ ಮೊದಲು ದೇವಸ್ಥಾನವಿತ್ತು ಎಂಬುದಾಗಿ ಅದರ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಲಾಯಿತು. ನ್ಯಾಯಾಧೀಶರು ತಕ್ಷಣವೇ ಆಡಳಿತ ಮತ್ತು ಮಸೀದಿ ಸಮಿತಿಗೆ ನೋಟಿಸ್ ಜಾರಿ ಮಾಡದೆ, ಸಮೀಕ್ಷೆಗೆ ಆದೇಶಿಸಿದರು ಮತ್ತು ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿದರು. ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಆಡಳಿತವು ಸರ್ವೆಗೆ ಬೇಕಾದ ವ್ಯವಸ್ಥೆ ನೀಡಿತು. ಇದು ಸ್ಥಳೀಯ ಮುಸ್ಲಿಂ ಜನರಲ್ಲಿ ಅಸಮಾಧಾನ ಮೂಡಿಸಿತು.

ಆದರೆ ಅದಾದ ಎರಡು ದಿನಗಳ ನಂತರ ಯಾವುದೇ ಪೂರ್ವ ಮಾಹಿತಿ ಇಲ್ಲದೆ ತಂಡ ಮತ್ತೆ ದೇವಸ್ಥಾನಕ್ಕೆ ಬಂತು. ಆಡಳಿತವು ಜನರ ಗುಂಪಿನ ಜೊತೆಗೂಡಿ ಮಸೀದಿಯನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಸಮೀಕ್ಷೆ ನಡೆಸಲು ಬಂದಿದ್ದ ತಂಡದ ಜೊತೆಗಿದ್ದ ಕೆಲವರು ಹೊರಹೋಗುವಾಗ ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದರು. ಇದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿತು. ಅವರು ಕಲ್ಲುಗಳನ್ನು ಎಸೆದರು. ಧರಣಿ ನಿರತ ಜನರ ಮೇಲೆ ನೇರವಾಗಿ ಗುಂಡು ಹಾರಿಸುತ್ತಿರುವುದನ್ನು ಪೊಲೀಸರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ನಾಲ್ವರು ಕೊಲ್ಲಲ್ಪಟ್ಟರು.

ಈಗ ಪೊಲೀಸರು ಈ ಹತ್ಯೆಯ ಹೊಣೆಯನ್ನು ಹೊತ್ತುಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಹತ್ಯೆಗಳಿಗೆ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಡೀ ಪ್ರತಿಭಟನೆಯನ್ನು ಪಿತೂರಿ ಎಂದು ಕರೆದರು. ಮುಸ್ಲಿಂ ಮುಖಂಡರ ಮೇಲೆ ಕೇಸು ಹಾಕಿದರು.

ಮುಸ್ಲಿಮರು ಸದ್ಯ ಸರ್ಕಾರ ತಮ್ಮ ವಿರುದ್ಧವಾಗಿದೆ ಎಂದು ನಂಬಿದ್ದಾರೆ. ನ್ಯಾಯಾಂಗವೂ ಅವರನ್ನು ಮೂಲೆಗೆ ತಳ್ಳುವ ಪ್ರಕ್ರಿಯೆಗಳನ್ನು ತಣ್ಣಗಾಗಿಸುತ್ತಿದೆ. ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಲಾಗುತ್ತಿದೆ. ಮುಸ್ಲಿಮರು ಪ್ರತಿಭಟಿಸಲು ಸಾಧ್ಯವಿಲ್ಲ, ಮಾಡಿದರೆ ಅವರು ದೇಶದ ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸುತ್ತಾರೆ.

ಈ ನೆಲದ ಕಾನೂನಿಗೆ ಏನಾಯಿತು?- 1991 ರ ಪೂಜಾ ಸ್ಥಳಗಳ ಕಾಯಿದೆಗೆ ಏನಾಯಿತು? ಈ ಪ್ರಶ್ನೆಯನ್ನು ಬದಿಗಿಟ್ಟು ಒಂದು ರಚನೆಯ ಬಗ್ಗೆ ತಮ್ಮ ಕುತೂಹಲವನ್ನು ತಣಸಿಕೊಳ್ಳಲು ಹಿಂದೂಗಳಿಗೆ ಎಲ್ಲ ಹಕ್ಕಿದೆ ಎಂದು ಹೇಳಿದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ಇದರ ಅರ್ಥ, ಒಬ್ಬ ಹಿಂದು ತಾನು ಕಂಡ ಮಸೀದಿಯ ಅಡಿಯಲ್ಲಿ ದೇವಾಲಯ ಇದ್ಯಾ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ, ಕಂಡ ಕಂಡ ಅನ್ಯರ ಧಾರ್ಮಿಕ ಕೇಂದ್ರಗಳಿಗೆ ಕನ್ನ ಹಾಕಬಹುದು ಎಂದೆ? ಇದಾದ ನಂತರ, ಹಿಂದುತ್ವದವರು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಭಾರತದಾದ್ಯಂತ ಮಸೀದಿಗಳು, ದರ್ಗಾಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಬಗ್ಗೆ ಕುತೂಹಲವನ್ನು ಬೆಳೆಸಲು ಪ್ರಾರಂಭಿಸಿದರು. ಚಂದ್ರಚೂಡ್ ತೋರಿದ ಉದಾಸೀನವನ್ನು, ನಿರಾಳತೆಯನ್ನು ಈಗ ಎಲ್ಲ ಪ್ರಾಥಮಿಕ ನ್ಯಾಯಾಲಯಗಳು ತೋರಿಸುತ್ತಿವೆ. ಮುಸ್ಲಿಮರು ಪ್ರತಿಭಟಿಸಲು ಮತ್ತು ವಿರೋಧಿಸಲು ಹೋದರೆ ಬಲಿಕೊಡಬೇಕಾಗಿ ಬರುವುದು ಅರ ಜೀವವನ್ನು ಮಾತ್ರ.

ಲೇಖನ: ಚರಣ್‌ ಐವರ್ನಾಡು

ಉತ್ತರ ಪ್ರದೇಶದಲ್ಲೊಂದು ಹೇಯ ಕ್ರೌರ್ಯ… ಮುಸ್ಲಿಂ ವಿದ್ಯಾರ್ಥಿಗೆ ತರಗತಿಯ ವಿದ್ಯಾರ್ಥಿಗಳಿಂದ ಹೊಡೆಸಿದ ಶಿಕ್ಷಕಿ
ಲಕ್ನೋ: ಯುಪಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಸಹ ವಿದ್ಯಾರ್ಥಿಗಳ ಬಳಿ ಹೊಡೆಸಿದ ಘಟನೆ ಸಂಚಲನ ಮೂಡಿಸಿದೆ. ವಿದ್ಯಾರ್ಥಿಯನ್ನು ಥಳಿಸಿದ್ದಲ್ಲದೆ, ಆಕೆಯ ದ್ವೇಷದ ಮಾತುಗಳನ್ನು ಆಡಿರುವುದು ಈಗ ವಿವಾದವನ್ನು ಇನ್ನಷ್ಟು ದೊಡ್ಡದಾಗಿಸಿದೆ.

ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿದ್ದು ರಾಜಕೀಯ ವಲಯದಲ್ಲಿ ಕಿಚ್ಚು ಹೊತ್ತಿಸಿದೆ.

ಉತ್ತರ ಪ್ರದೇಶದ ಮುಜಾಫರ್‌ನಗರದ ಖಾಸಗಿ ಶಾಲೆಯೊಂದರಲ್ಲಿ ಪಾಠ ಹೇಳಬೇಕಿದ್ದ ಶಿಕ್ಷಕಿ ಅಮಾನವೀಯವಾಗಿ ವರ್ತಿಸಿ ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ದ್ವೇಷ ತುಂಬಲು ಯತ್ನಿಸಿದ್ದಾಳೆ ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ. ವೀಡಿಯೋ ಆಧರಿಸಿ ಯುಪಿ ಪೊಲೀಸರು ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

How humiliating for a small child to be put through this at a young age.

Making the Muslim boy stand in front of the whole class and getting the Hindu kids to come and slap him.

That teacher needs a slap tbh pic.twitter.com/n1KDWtTTwQ
— Abu Hafsah (@AbuHafsah1) August 25, 2023

ಪೊಲೀಸರ ಪ್ರಕಾರ ಶಿಕ್ಷಕರಿಂದ ಥಳಿಸಿದ ಬಾಲಕ ಮುಸ್ಲಿಂ. ಶಿಕ್ಷಕಿ ಧರ್ಮ ದೂಷಣೆ ಎಸಗಿರುವುದು ವೀಡಿಯೋದಲ್ಲಿ ಸ್ಪಷ್ಟವಾಗಿದ್ದು, ಆಕೆಯ ಧರ್ಮ ಯಾವುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಗಣಿತ ಟೇಬಲ್ ಕಲಿಯದಿದ್ದಕ್ಕೆ ಧಾರ್ಮಿಕ ನಿಂದನೆ ಮಾಡುವದರ ಜೊತೆಗೆ ಮುಸ್ಲಿಂ ವಿದ್ಯಾರ್ಥಿಯ ಮೇಲೆ ತನ್ನ ಸಹವರ್ತಿ ವಿದ್ಯಾರ್ಥಿಗಳನ್ನು ಬಾಲಕನ ಮೇಲೆ ಹಲ್ಲೆಗೆ ಪ್ರೇರೇಪಿಸಿದ್ದಾಳೆ ಎನ್ನಲಾಗಿದೆ. ಮಕ್ಕಳ ಹಕ್ಕುಗಳ ಸಂಘಟನೆಯೂ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

मासूम बच्चों के मन में भेदभाव का ज़हर घोलना, स्कूल जैसे पवित्र स्थान को नफ़रत का बाज़ार बनाना – एक शिक्षक देश के लिए इससे बुरा कुछ नहीं कर सकता।

ये भाजपा का फैलाया वही केरोसिन है जिसने भारत के कोने-कोने में आग लगा रखी है।

बच्चे भारत का भविष्य हैं – उनको नफ़रत नहीं, हम सबको मिल…
— Rahul Gandhi (@RahulGandhi) August 25, 2023

ಶಾಲಾ ಆಡಳಿತ ಮಂಡಳಿ ರಾಜಿ ಸಂಧಾನಕ್ಕೆ ಬಂದಿದ್ದು, ತಾವು ಕಟ್ಟಿಸಿಕೊಂಡಿದ್ದ ಶುಲ್ಕವನ್ನೂ ವಾಪಸ್ ನೀಡಿದ್ದು, ಇನ್ನು ಮುಂದೆ ತಮ್ಮ ಮಗುವನ್ನು ಆ ಶಾಲೆಗೆ ಕಳುಹಿಸುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಬಾಲಕನ ತಂದೆ ತಿಳಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸುವ ಮನಸ್ಸಿಲ್ಲದ ಕಾರಣ ವಿಷಯವನ್ನು ಇಲ್ಲಿಗೆ ಬಿಡುವಂತೆ ಅವರು ಕೋರಿದರು.

ಈ ವಿಚಾರವಾಗಿ ಕಾಂಗ್ರೆಸ್ ಸಂಸದ ರಾಜೀವ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.. ಪವಿತ್ರ ಶಾಲೆಯಲ್ಲಿ ಮಕ್ಕಳ ಮನಸ್ಸಿನಲ್ಲಿ ದ್ವೇಷ ಬಿತ್ತುವುದಕ್ಕಿಂತ ದೇಶದ್ರೋಹ ಮತ್ತೊಂದಿಲ್ಲ. ಇದು ಬಿಜೆಪಿ ಸರಕಾರವೇ ಪೋಷಿಸಿದ ದ್ವೇಷದ ಪರಿಣಾಮವಾಗಿದೆ. ಚಿಕ್ಕ ಮಕ್ಕಳು ದೇಶದ ಭವಿಷ್ಯ. ಅವರನ್ನು ದ್ವೇಷಿಸುವ ಬದಲು ಪ್ರೀತಿಸುವುದನ್ನು ಕಲಿಸಬೇಕು ಎಂದರು.

पुलिस द्वारा मामला संज्ञान में ले लिया गया है और अध्यापिका पर विभागीय कार्यवाही की जा रही है pic.twitter.com/QtpzrOik6R
— रेखा तिवारी (@_Prayagraj) August 25, 2023

ಮತ್ತೋರ್ವ ಸಂಸದ ಜಯಂತ್ ಸಿಂಗ್ ಪ್ರತಿಕ್ರಿಯಿಸಿದ್ದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಲ್ಪಸಂಖ್ಯಾತರ ವಿರುದ್ಧ ಕೋಮುದ್ವೇಷ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ಥಳೀಯ ಶಾಸಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಯ ಭವಿಷ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು.ಪೊಲೀಸರು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಬೇಕು ಎಂದಿದ್ದಾರೆ.

Muzaffarnagar school video is a painful warning of how deep rooted religious divides can trigger violence against the marginalised, minority communities. Our MLAs from Muzzafarnagar will ensure that UP Police files a case suomoto & the child’s education is not disrupted!
— Jayant Singh (@jayantrld) August 25, 2023

ವಾಹನಗಳ ಮೇಲೆ ಜಾತಿ ಹೆಸರು ಪ್ರದರ್ಶಿಸಬೇಡಿ – ಯೋಗಿ ಆದಿತ್ಯನಾಥ್‌ ಸ್ಟ್ರಾಂಗ್‌ ವಾರ್ನಿಂಗ್
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜಾತಿಗಳ ಪ್ರಭಾವ ಹೆಚ್ಚಿರುವ ಉತ್ತರ ಪ್ರದೇಶದಲ್ಲಿ ಅಧಿಕಾರಿಗಳಿಗೆ ಮಹತ್ವದ ಆದೇಶ ನೀಡಿದ್ದಾರೆ. ವಾರಣಾಸಿಯಲ್ಲಿ ಇತ್ತೀಚೆಗೆ ನಡೆದ ಶಾಂತಿ ಮತ್ತು ಭದ್ರತೆಯ ಪರಿಶೀಲನೆಯಲ್ಲಿ ಯೋಗಿ ಆದಿತ್ಯನಾಥ್ ಅವರು ಸಂಚಾರ ನಿರ್ವಹಣೆ ಮತ್ತು ವಾಹನಗಳ ಕುರಿತು ಅಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ.

ವಾಹನಗಳ ಮೇಲೆ ಜಾತಿ ಹೆಸರು ಕಾಣಿಸಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇವುಗಳನ್ನು ತಕ್ಷಣವೇ ನಿಲ್ಲಿಸುವಂತೆ ಅವರಿಗೆ ಆದೇಶ ನೀಡಲಾಯಿತು. ಇದರೊಂದಿಗೆ ಇದೀಗ ವಾಹನಗಳಿಗೆ ಜಾತಿ ಹೆಸರು ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಯುಪಿಯಲ್ಲಿ ಜನರು ತಮ್ಮ ಜಾತಿಯನ್ನು ತಮ್ಮ ವಾಹನಗಳಲ್ಲಿ ಪ್ರದರ್ಶಿಸುವುದನ್ನು ತಡೆಯುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಎರಡು ದಿನಗಳ ಭೇಟಿಗಾಗಿ ಗುರುವಾರ ವಾರಣಾಸಿಗೆ ಆಗಮಿಸಿದ್ದ ಆದಿತ್ಯನಾಥ್, ಇಂತಹ ನೀತಿಯನ್ನು ನಿಷೇಧಿಸುವ ಅಗತ್ಯವಿದೆ ಎಂದು ಶಾಂತಿ ಮತ್ತು ಭದ್ರತೆ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಕೆಲವೊಮ್ಮೆ ಜನರು ತಮ್ಮ ಜಾತಿಯನ್ನು ಪ್ರದರ್ಶಿಸಲು ತಮ್ಮ ವಾಹನಗಳ ಮುಂಭಾಗದಲ್ಲಿ ಹೆಚ್ಚುವರಿ ಬೋರ್ಡುಗಳನ್ನು ಹಾಕುತ್ತಾರೆ, ಪರಿಶೀಲನೆಯ ನಂತರ, ಅಂತಹ ಬೋರ್ಡುಗಳನ್ನು ತೆಗೆಸಬೇಕೆಂದು ಮುಖ್ಯಮಂತ್ರಿ ಆದೇಶಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದರು. ಕಾನೂನು ಸುವ್ಯವಸ್ಥೆ ಪರಿಶೀಲನೆ ವೇಳೆ ಮುಖ್ಯಮಂತ್ರಿ ಯೋಗಿ ಅವರು ಸಂಚಾರ ನಿರ್ವಹಣಾ ವ್ಯವಸ್ಥೆಯಲ್ಲಿ ಗೃಹ ರಕ್ಷಕರು ಮತ್ತು ಪಿಆರ್‌ಡಿ ಸಿಬ್ಬಂದಿಗೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಟ್ರಕ್‌ಗೆ ಡಿಕ್ಕಿ ಹೊಡೆದ ಬಸ್‌: 15 ಜನ ಕಾರ್ಮಿಕರು ಸಾವು 40 ಮಂದಿಗೆ ಗಾಯ
ರೇವಾ: ಟ್ರಕ್‌ಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ 15 ಜನ ಕಾರ್ಮಿಕರು ಸಾವನ್ನಪ್ಪಿದ್ದು, 40 ಮಂದಿಗೆ ಗಂಭೀರ ಗಾಯವಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಹೆದ್ದಾರಿಯಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಸುಮಾರು 100 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್‌, ನಿನ್ನೆ ತಡರಾತ್ರಿ ರೇವಾದ ಸುಹಾಗಿ ಪಹಾರಿ ಬಳಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಬಸ್‌ ಟ್ರಕ್‌ ಹಿಂಭಾಗದಲ್ಲಿ ಡಿಕ್ಕಿ ಹೊಡೆದಿದ್ದು, ಟ್ರಕ್ ಹೆದ್ದಾರಿಯಲ್ಲಿ ಸಿಲುಕಿಕೊಂಡಿದೆ. ಸದ್ಯಕ್ಕೆ ಗಾಯಾಳುಗಳನ್ನು ಸುಹಗಿಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅವಘಡದ ಕುರಿತು, ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಮಾತನಾಡಿ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೆಚ್ಚಿನ ಜನರು ಉತ್ತರ ಪ್ರದೇಶದ ಕಾರ್ಮಿಕರಾಗಿದ್ದು, ಮಧ್ಯಪ್ರದೇಶದ ಕಟ್ನಿಯಿಂದ ಬಸ್ ಹತ್ತಿ ದೀಪಾವಳಿಗೆಂದು ಮನೆಗೆ ತೆರಳುತ್ತಿದ್ದರು ಎಂದು ಬಸ್‌ನಲ್ಲಿದ್ದ ಕೆಲವರಿಂದ ಮಾಹಿತಿ ತಿಳಿದುಬಂದಿದೆ ಎಂದು ತಿಳಿಸಿದರು.

ಮುಂದುವರೆದು ಮಾತನಾಡಿದ ಅವರು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಘಾತದ ಬಗ್ಗೆ ಮದ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ದುಃಖ ವ್ಯಕ್ತಪಡಿಸಿದ್ದಾರೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಮೃತದೇಹಗಳನ್ನು ಉತ್ತರ ಪ್ರದೇಶದಲ್ಲಿರುವ ಅವರ ಕುಟುಂಬ ಸದಸ್ಯರಿಗೆ ಕಳುಹಿಸುವಂತೆ ವ್ಯವಸ್ಥೆ ಮಾಡಲು ವಿನಂತಿಸಿಕೊಂಡಿದ್ದಾರೆ.

ಬಸ್‌ ಮತ್ತು ಟ್ರಕ್‌ ಡಿಕ್ಕಿ: 8 ಮಂದಿ ಸಾವು, 25 ಕ್ಕೂ ಹೆಚ್ಚು ಜನರಿಗೆ ಗಾಯ
ಉತ್ತರ ಪ್ರದೇಶ: ಉತ್ತರಪ್ರದೇಶದ ಜಿಲ್ಲೆ ಲಖಿಂಪುರ ಖೇರಿಯಲ್ಲಿ ಖಾಸಗಿ ಬಸ್ ಮತ್ತು ಟ್ರಕ್ ಡಿಕ್ಕಿಯಾಗಿ 8 ಮಂದಿ ಸಾವನ್ನಪ್ಪಿದ್ದು, 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಲಖಿಂಪುರ ಖೇರಿ ಎಡಿಎಂ ಸಂಜಯ್ ಕುಮಾರ್, ಲಖನೌಗೆ ತೆರಳುತ್ತಿದ್ದ ಟ್ರಕ್ ಮತ್ತು ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದರು.

ಈ ಹಿನ್ನಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಮರಣಹೊಂದಿದವರಿಗೆ ಸಂತಾಪ ಸೂಚಿಸಿದ್ದಾರೆ ಮತ್ತು  ತಕ್ಷಣ ಅಪಘಾತವಾಗಿರುವ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಮೃತರ  ಕುಟುಂಬಗಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF ) ಯಿಂದ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು. ಇನ್ನು ಅಪಘಾತದಲ್ಲಿ ಗಾಯಾಗೊಂಡಿರುವವರಿಗೆ ಮುಂದಿನ ಚಿಕಿತ್ಸೆಗಾಗಿ 50,000 ರೂಪಾಯಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Prime Minister Narendra Modi announces a compensation of Rs 2 lakhs from PMNRF to be given to the next of kin of each deceased. The injured would be given Rs 50,000: PMO

8 people died & over 25 people were injured in a private bus-truck collision in Lakhimpur Kheri https://t.co/tspDWvM6BF pic.twitter.com/rpa9H0ynr4
— ANI (@ANI) September 28, 2022