Zimbabwe – Peepal Media

ಟಿ-20 ವಿಶ್ವಕಪ್ 2022ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ ICC
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ್ದು, ಪಂದ್ಯಗಳಲ್ಲಿ ರೋಚಕ ಕ್ಷಣ, ಸೋಲು, ಗೆಲುವು ಮತ್ತು ದಾಖಲೆ ಸೃಷ್ಟಿಸಿದನ್ನು ಸಹ ಪಟ್ಟಿಯಲ್ಲಿ ಕಾಣಬಹುದಾಗಿದೆ.

ಪಟ್ಟಿಯಲ್ಲಿರುವ ಆ ಎಂಟು ಪಂದ್ಯಗಳಲ್ಲಿ, ಪ್ರಮುಖವಾಗಿ ಬಲಿಷ್ಟ ಕ್ರಿಕೆಟ್‌ ತಂಡ ಎಂದೆನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್‌ ಜಯಗಳಿಸಿದ್ದು. ಈ ಪಂದ್ಯದಲ್ಲಿ ನೆದರ್ಲೆಂಡ್‌ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಈ ಗೆಲುವು ನೆದರ್ಲೆಂಡ್‌ ತಂಡದಿಂದ ದಾಖಲೆ ಸೃಷ್ಟಿಸಲು ಕಾರಣವಾಯಿತು.

ಇನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಕುತೂಹಲ, ಅದರಲ್ಲೂ ಪಾಕಿಸ್ತಾನ ವಿರುದ್ಧದ ಕೊನೆಯ ಎಸೆತದಲ್ಲಿ ಭಾರತದ ಗೆಲುವು, ಕ್ರಿಕೆಟ್‌ ನೋಡುಗರಿಗೆ ಕುತೂಹಲದ ಮೇಲೆ ಕುತೂಹಲ ಸೃಷ್ಟಿಸಿತ್ತು. ಕೊನೆಯ ಎರೆಡು ಎಸೆತಗಳಲ್ಲಿ ಭಾರತ ತಂಡಕ್ಕೆ ಎರೆಡು ರನ್‌ ಬೇಕಾಗಿದ್ದಾಗ, ದಿನೇಶ್‌ ಕಾರ್ತಿಕ್‌ ಬೌಂಡರಿ ಹೊಡೆಯಲು ಹೋಗಿ ಸ್ಟಂಪ್‌ ಔಟ್‌ ಆಗಿದ್ದರು. ನಂತರ ಸ್ಕ್ರೀಜ್‌ಗೆ ಬಂದ ರವಿಚಂದ್ರನ್‌ ಅಶ್ವಿನ್‌ ಮೇಲೆ ಪಂದ್ಯದ ಗೆಲುವು ನಿರ್ಧಾರವಾಗಿತ್ತು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಪಾಕಿಸ್ತಾನಿ ಬೌಲರ್‌ ಮೊಹಮದ್‌ ನವಾಜ್‌ ಒಂದು ವೈಡ್‌ ಎಸೆದರು. ಆಗ ಪಂದ್ಯ ಇನ್ನು ಕುತೂಹಲಕ್ಕೆ ಕಾರಣವಾಯಿತು. ನಂತರದ ಎಸೆತ ಏನಾಗುತ್ತದೆ? ಭಾರತ ಗೆಲ್ಲುತ್ತಾ, ಅಥವಾ ಪಂದ್ಯ ಸಮಬಲವಾಗುತ್ತಾ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡುವಂತೆ ಮಾಡಿತ್ತು. ಕೊನೆಗೂ ಅಶ್ವಿನ್‌ ಕೊನೆಯ ಎಸೆತದಲ್ಲಿ ಒಂದು ರನ್‌ ಗಳಿಸುವ ಮೂಲಕ ಭಾರತ ತಂಡ ಗೆಲುವು ಸಾಧಿಸಿತು. ನಂತರ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಕೂಡ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಭಾರತ ಪಾಕಿಸ್ತಾನ ಪಂದ್ಯದಂತೆ, ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಯ ಒಂದು ರನ್ ಗೆಲುವು ಕೂಡ  ಎಲ್ಲರಲ್ಲೂ ಕುತೂಹಲ ಮೂಡಿದ್ದು, ಜಿಂಬಾಬ್ವೆ ತಂಡ ಗೆಲುವು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಹಿನ್ನೆಯಲ್ಲಿ ಈ ಪಂದ್ಯವು ಕೂಡ ಪಟ್ಟಿಯಲ್ಲಿ ಸೇರಿದೆ.

ICC ಹೊರಡಿಸಿರುವ ಪಟ್ಟಿಯಲ್ಲಿರುವ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳು

ಮೊದಲನೆಯದಾಗಿ ನೆದರ್ಲಾಂಡ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 13 ರನ್‌ಗಳ ಗೆಲುವು ಸಾದಿಸಿದ್ದು, ಎರಡನೆಯದಾಗಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿದ್ದು. ಪಟ್ಟಿಯ ಮೂರನೆ ಸ್ಥಾನದಲ್ಲಿ ಐರ್ಲ್ಯಾಂಡ್‌ ತಂಡವು ಇಂಗ್ಲೇಂಡ್‌ ತಂಡದ ವಿರುದ್ಧ ಡಿಎಲ್‌ಎಸ್‌ ನಿಯಮದ ಪ್ರಕಾರ 5ರನ್‌ ಗಳಿಂದ ಗೆಲುವು ಸಾದಿಸಿದ್ದು. ಇನ್ನು ನಾಲ್ಕನೆ ಸ್ಥಾನದಲ್ಲಿ ಜಿಂಬಾಬ್ವೆ ತಂಡವು ಪಾಕಿಸ್ತಾನದ ವಿರುದ್ಧ ಒಂದು ರನ್‌ಗಳ ಜಯ. 5ನೇಯದಾಗಿ ಬಾಂಗ್ಲಾದೇಶ, ಜಿಂಬಾಬ್ವೆ ವಿರುದ್ಧ 3 ರನ್‌ಗಳಿಂದ ಜಯಗಳಿಸಿದ್ದು. ಇನ್ನೂ 6 ನೇ ಸ್ಥಾನದಲ್ಲಿ ಆಷ್ಟ್ರೇಲಿಯಾ ತಂಡ ಅಫ್ಘಾನಿಸ್ಥಾನದ ವಿರುದ್ಧ ರನ್‌ಗಳಿಂದ ಜಯ. ಏಳನೆಯದಾಗಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ಪಡೆದುಕೊಂಡಿದ್ದು. ಕೊನೆಯದಾಗಿ ನ್ಯೂಜಿಲ್ಯಾಂಡ್‌ ತಂಡ ಆಷ್ಟ್ರೇಲಿಯಾ ವಿರುದ್ಧ 89 ರನ್‌ಗಳ ಜಯ.

ICC ಹೊರಡಿಸಿರುವ ಪಟ್ಟಿಯಲ್ಲಿರು ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳ ಪಟ್ಟಿ

ವರ್ಲ್ಡ್ ಕಪ್ T20 ವೆಸ್ಟ್ ಇಂಡೀಸ್ ಗೆ ನಿರಾಯಾಸದ ಜಯ
ಬೆಲ್ಲೆರಿವೆ: ಇಂದು ನಡೆದ ICC ವರ್ಲ್ಟ್ ಕಪ್ T20ಯ ವೆಸ್ಟ್ ಇಂಡೀಸ್ ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸುಲಭವಾಗಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 153 ರನ್‌ಗಳನ್ನ ಪಡೆಯಿತು. ಉತ್ತಮವಾಗಿ ಆಟ ಪ್ರದರ್ಶಿಸಿದ ಜಾನ್ಸನ್ ಚಾರ್ಲ್ಸ್ ವೈಯಕ್ತಿಕ 45 ರನ್ ಪಡೆದದ್ದು ತಂಡಕ್ಕೆ ಉತ್ತಮ‌ಕೊಡುಗೆ ಎನ್ನಬಹುದು.

153 ರನ್ ಗಳ ಗುರಿಯನ್ನ ಬೆನ್ನು ಹತ್ತಿದ ಜಿಂಬಾಬ್ವೆ ತಂಡ 18.3 ಓವರ್ ಗಳಿಗೆ ತನ್ನೆಲ್ಲಾ ವಿಕೇಟ್ ಗಳನ್ನ ಕಳೆದುಕೊಂಡು ಕೇವಲ 122 ರನ್ ಪಡೆಯಲಷ್ಟೇ ಶಕ್ತವಾಯಿತು.

ಇಡೀ ಜಿಂಬಾಬ್ವೆ ತಂಡದ ಯಾವುದೇ ಆಟಗಾರ 30 ರನ್ ಗಳ ಗಡಿಯನ್ನು ದಾಟದೆ ಹೋದದ್ದು ಇವರ ಸೋಲಿಗೆ ಪ್ರಮುಖ ಕಾರಣ. ಮೊದಲ ಐದು ಓವರ್ ತನಕ ಉತ್ತಮ ಪ್ರದರ್ಶನವನ್ನೇ ನೀಡಿದ್ದರಾದರೂ ಮೂರು ವಿಕೇಟ್ ಗಳನ್ನು ಕಳೆದುಕೊಂಡ ನಂತರ ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು. ಇದರೊಂದಿಗೆ ತಂಡ ಸೋಲನ್ನ ಅನುಭವಿಸಬೇಕಾಯಿತು.

ವಿಶ್ವಕಪ್‌ ಕ್ರಿಕೆಟ್: ಐರ್ಲೆಂಡ್‌ ಮಣಿಸಿದ ಜಿಂಬಾಬ್ವೆ
ಹೊಬಾರ್ಟ್‌ (ಆಸ್ಟ್ರೇಲಿಯಾ): ಟಿಟ್ವೆಂಟಿ ವಿಶ್ವಕಪ್-2022ರ ನಾಲ್ಕನೇ ಪಂದ್ಯದಲ್ಲಿ ಐರ್ಲೆಂಡ್‌ ತಂಡವನ್ನು 31 ರನ್‌ ಗಳಿಂದ ಮಣಿಸಿದ ಜಿಂಬಾಬ್ವೆ ಮಹತ್ವದ ಅಂಕಗಳನ್ನು ಸಂಗ್ರಹಿಸಿತು.

ಗೆಲ್ಲಲು 175 ರನ್‌ ಗಳಿಸಬೇಕಿದ್ದ ಐರ್ಲೆಂಡ್‌ ತಂಡ, ಜಿಂಬಾಬ್ವೆ ಬೌಲರ್‌ಗಳ ಮಾರಕ ಬೌಲಿಂಗ್‌ ಎದುರಿಸಲಾಗದೆ ಪರದಾಡಿದರು. ಮಧ್ಯಮ ಕ್ರಮಾಂಕದಲ್ಲಿ ಆಡಲು ಬಂದ ಕರ್ಟೀಸ್‌ ಕ್ಯಾಂಪರ್‌, ಜಾರ್ಜ್‌ ಡಾಕ್ರೆಲ್‌, ಗೆರೇತ್‌ ಡಿಲೇನಿ ಉತ್ತಮ ಆರಂಭ ಗಳಿಸಿದರೂ ಬೇಗನೇ ಔಟಾಗಿ ಪೆವಿಲಿಯನ್‌ಗೆ ತೆರಳಿದರು. ಜಿಂಬಾಬ್ವೆಯ ಬ್ಲೆಸ್ಸಿಂಗ್‌ ಮುಜರಾಬಾನಿ ಮೂರು ವಿಕೆಟ್‌ ಗಳಿಸಿ ಗಮನ ಸೆಳೆದರು.

ಟಾಸ್‌ ಗೆದ್ದ ಐರ್ಲೆಂಡ್‌ ತಂಡ, ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಜಿಂಬಾಬ್ವೆ ಸಿಕಂದರ್‌ ರಾಜಾ ಅವರ ಭರ್ಜರಿ ಬ್ಯಾಟಿಂಗ್‌ ನಿಂದಾಗಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿತು.

ಒಂದೆಡೆ ವಿಕೆಟ್‌ ಗಳು ಕುಸಿಯುತ್ತಿದ್ದರೂ, ನೆಲಕಚ್ಚಿ ಆಡಿದ ಸಿಕಂದರ್‌ ರಾಜಾ ಕೇವಲ 48 ಎಸೆತಗಳಲ್ಲಿ 82 ರನ್‌ ಗಳಿಸಿದರು. ಐದು ಬೌಂಡರಿ ಬಾರಿಸಿದ ಅವರು ಐದು ಭರ್ಜರಿ ಸಿಕ್ಸರ್‌ ಗಳನ್ನು ಸಿಡಿಸಿದರು.

ಐರಿಷ್‌ ವೇಗದ ಬೌಲರ್‌ ಜೋಷ್‌ ಲಿಟ್ಲ್‌ ಮೂರು ವಿಕೆಟ್‌ ಪಡೆದು ಮಿಂಚಿದರು. ಮಾರ್ಕ್‌ ಅಡೇರ್‌, ಸಿಮಿ ಸಿಂಗ್‌ ತಲಾ ಎರಡು ವಿಕೆಟ್‌ ಗಳಿಸಿದರು.

ಸ್ಕೋರ್ ಕಾರ್ಡ್

ಜಿಂಬಾಬ್ವೆ : 174/7 (20)

ರೆಗಿನ್ಸ್ ಚಕಬ್ವಾ : 0(2), ಕ್ರೈಗ್ ಎರ್ವಿನ್ : 9(12), ವೆಸ್ಲೆ ಮದೆವೆರೆ : 22(19), ಸೀನ್ ವಿಲಿಯಮ್ಸ್ : 12(11), ಸಿಕಂದರ್, ರಾಜ಼ಾ : 82(48), ಮಿಲ್ಟೊನ್ ಶುಂಬಾ : 16(14), ರ‌್ಯಾನ್ ಬುರಿ : 1(4), ಲುಕ್ ಜೊಂಗ್ವೆ : 20(10), ಇತರೆ : 12

ಬೌಲಿಂಗ್

ಜೋಸುವ ಲಿಟ್ಲ್ : 4-0-24-3, ಮಾರ್ಕ್ ಅದೈರ್ : 4-0-39-2, ಬೆರ್ರಿ ಮೆಕ್‌ಕಾರ್ಥಿ : 4-0-24-0, ಕರ್ಟೀಸ್ ಕ್ಯಾಂಪೆರ್ : 3-0-29-0, ಸಿಮಿ ಸಿಂಗ್ : 3-0-31-2, ಗ್ಯಾರೆತ್ ಡೆಲಾನಿ : 2-0-21-0

ಐರ್ಲೆಂಡ್ 143/9(20)

ಪಾಲ್ ಸ್ಟಿರ್ಲಿಂಗ್ : 0(2), ಅ್ಯಂಡ್ರ್ಯೂ ಬಾಲ್ಬಿರ್ನಿ : 3(4), ಲೋರ್ಕೆನ್ ಟುಕರ್ : 11(11), ಹ್ಯಾರಿ ಟೆಕ್ಟರ್ : 1(4), ಕರ್ಟೀಸ್ ಕ್ಯಾಂಪರ್ : 27(22), ಜಾರ್ಜ್ ಡೋಕ್ರೆಲ್ : 24(20), ಮಾರ್ಕ್ ಅದೈರ್ : 9(10), ಸಿಮಿ ಸಿಂಗ್ : 0(1), ಬ್ಯಾರಿ ಮೆಕ್‌ಕಾರ್ಥಿ : 22(16), ಜೋಸುವ ಲಿಟ್ಲ್ : 7(11), ಇತರೆ : 15

ಬೌಲಿಂಗ್
ರಿಚರ್ಡ್ ನಾಗರವ : 4-0-22-2, ಟೆಂಡೈ ಚಟರ : 4-0-22-2, ಬ್ಲೆಸಿಂಗ್ ಮುಜಾರಬಾನಿ : 4-0-23-3, ಲುಕ್ ಜೋಗ್ವೆ : 2-0-24-0, ಸೀನ್ ವಿಲಿಯಮ್ಸ್ : 3-0-20-1, ಸಿಕಂದರ್ ರಾಜ಼ಾ : 3-0-22-1