ಪ್ರಖ್ಯಾತ ಟೆನಿಸ್ ಲೋಕದ ದಂತಕಥೆ ಸ್ಪೇನ್’ನ ರಾಫೆಲ್ ನಡಾಲ್ ಗುರುವಾರ ತಮ್ಮ ವೃತ್ತಿಪರ ಟೆನಿಸ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಈಗ ನಡೆಯುತ್ತಿರುವ ಡೇವಿಸ್ ಕಪ್ ಫೈನಲ್ ಅವರ ಕೊನೆಯ ಪಂದ್ಯವಾಗಲಿದೆ ಎಂದು ವರದಿಯಾಗಿದೆ.
ಗುರುವಾರ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ, “ನಾನು ವೃತ್ತಿಪರ ಟೆನಿಸ್ನಿಂದ ನಿವೃತ್ತನಾಗುತ್ತಿದ್ದೇನೆ ಎಂದು ನಿಮಗೆ ತಿಳಿಸಲು ನಾನು ಇಲ್ಲಿದ್ದೇನೆ. ವಾಸ್ತವವೆಂದರೆ ಇದು ಕೆಲವು ಕಷ್ಟಕರ ವರ್ಷಗಳು, ವಿಶೇಷವಾಗಿ ಕಳೆದ ಎರಡು ವರ್ಷಗಳು, “ಇದು ನಿಸ್ಸಂಶಯವಾಗಿ ಕಠಿಣ ನಿರ್ಧಾರವಾಗಿದೆ, ಇದು ತೆಗೆದುಕೊಳ್ಳಲು ನನಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ಆದರೆ ಈ ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿದೆ.” ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಅತ್ಯಂತ ಭಾವುಕರಾದಂತೆ ಕಂಡುಬಂದ ನಡಾಲ್ ತುಂಬಾ ನೋವಿನಿಂದ ತಮ್ಮ ವೃತ್ತಿಪರ ಟೆನಿಸ್ ಜಗತ್ತಿಗೆ ವಿದಾಯ ಹೇಳಿದ್ದಾರೆ.
ನಡಾಲ್ ಅವರು 36 ಮಾಸ್ಟರ್ಸ್ ಪ್ರಶಸ್ತಿಗಳು ಮತ್ತು ಒಲಂಪಿಕ್ ಚಿನ್ನದ ಪದಕ ಸೇರಿದಂತೆ ಒಟ್ಟು 92 ATP ಸಿಂಗಲ್ಸ್ ಪ್ರಶಸ್ತಿಗಳನ್ನು ಹೊಂದಿದ್ದಾರೆ. ನಡಾಲ್ ಅವರು ಸಿಂಗಲ್ಸ್‌ನಲ್ಲಿ ವೃತ್ತಿಜೀವನದ ಗೋಲ್ಡನ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ ಮೂವರು ಪುರುಷ ಟೆನಿಸ್ ದಿಗ್ಗಜರಲ್ಲಿ ಒಬ್ಬರು ಎಂಬ ಅನನ್ಯ ದಾಖಲೆಯನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಮೂಲಕ ನಿವೃತ್ತಿ ಸುದ್ದಿ ಪ್ರಕಟಿಸಿದ್ದಾರೆ.
22 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ 2024 ಅವರ ಪ್ರವಾಸದ ಕೊನೆಯ ವರ್ಷವಾಗಿರಬಹುದು ಎಂದು ಈ ಹಿಂದೆ ಸುಳಿವು ನೀಡಿದ್ದರು.