210 ರನ್‌ಗಳ ಚೇಸ್ ಆರಂಭಿಸಿದ ರಾಜಸ್ಥಾನ ರಾಯಲ್ಸ್‌ಗೆ ಅಮೋಘ ಆರಂಭ ದೊರೆಯಿತು. ಅದರಲ್ಲೂ ವಿಶೇಷವಾಗಿ 14ರ ಹರೆಯದ ವೈಭವ್ ಸೂರ್ಯವಂಶಿ ಗುಜರಾತ್‌ನ ಬಲಿಷ್ಠ ಬೌಲಿಂಗ್ ಅಟ್ಯಾಕ್ ವಿರುದ್ಧ ಅಬ್ಬರಿಸಿದರು.
ಐಪಿಎಲ್‌ನಲ್ಲಿ ಹೊಸ ಸ್ಟಾರ್ ಉದಯವಾಗಿದೆ. ಯಾರೂ ನಿರೀಕ್ಷೆಯೇ ಮಾಡದಂಥ ಇನ್ನಿಂಗ್ಸ್ ಅಡಿದ 14 ವರ್ಷದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ವೈಭವ್ ಸೂರ್ಯವಂಶಿ ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದಿದ್ದಾರೆ.
ಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಇವರಾಗಿದ್ದಾರೆ. ಕೇವಲ 14 ವರ್ಷ 32 ದಿನದಲ್ಲಿ ಅವರು ಶತಕ ಬಾರಿಸಿದ್ದಾರೆ. 2013ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯನಲ್ಲಿ ಕ್ರಿಸ್‌ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದ್ದು ಐಪಿಎಲ್‌ನ ಅತಿವೇಗದ ಶತಕ ಎನಿಸಿದೆ. ವೈಭವ್ ಸೂರ್ಯವಂಶಿ ಸಿಕ್ಸರ್‌ನೊಂದಿಗೆ ಶತಕದ ಗಡಿ ಮುಟ್ಟಿದಾಗ ಸ್ವತಃ ರಾಹುಲ್ ದ್ರಾವಿಡ್ ವೀಲ್‌ಚೇರ್‌ನಿಂದ ಎದ್ದು ಸಂಭ್ರಮಿಸಿದ್ದಾರೆ.
ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಮಾತ್ರವಲ್ಲ, ಟಿ20 ಇತಿಹಾಸದಲ್ಲಿಯೇ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಇವರಾಗಿದ್ದಾರೆ. ಕೇವಲ 38 ಎಸೆತ ಆಟವಾಡಿದ ವೈಭವ್ ಸೂರ್ಯವಂಶಿ, 4 ಬೌಂಡರಿ ಹಾಗೂ 11 ಅಮೋಘ ಸಿಕ್ಸರ್ ಸಿಡಿಸಿ 101 ರನ್ ಬಾರಿಸಿದ್ದಾಗ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಔಟಾದರು.