2024 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸಿ ಭಾರತದ ಹೆಸರಾಂತ ಕುಸ್ತಿ ಪಟು ಒಲಿಂಪಿಕ್ಸ್ ಫೈನಲ್ ತಲುಪಿದ್ದಾರೆ.
ಆ ಮೂಲಕ ಒಲಿಂಪಿಕ್ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಫೋಗಟ್ ಮಂಗಳವಾರ ಇತಿಹಾಸ ಬರೆದಿದ್ದಾರೆ. ಭಾರತದ ಕೀರ್ತಿ ಪಥಾಕೆ ಜಗದೆತ್ತರಕೆ ಹಾರಿಸಿದ ವಿನೇಶ್ ಪೋಗಟ್ ಅವರಿಗೆ ಭಾರತದಾದ್ಯಂತ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ.
ಸೆಮಿಸ್‌ನಲ್ಲಿ ಗೆಲುವು ಸಾಧಿಸಿದ ವಿನೇಶ್‌ಗೆ ಬೆಳ್ಳಿ ಪದಕ ಖಾತ್ರಿಯಾಗಿದೆ, ಹಾಗೆಯೇ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಪೋಗಟ್ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಗಳಿಸುವ ಕನಸು ನನಸಾಗಿಸಲು ಇನ್ನೊಂದೇ ಮೆಟ್ಟಿಲು ಬಾಕಿಯಿದೆ.
ಫೋಗಾಟ್ ಈ ಹಿಂದೆ ಹಾಲಿ ಒಲಿಂಪಿಕ್ ಚಾಂಪಿಯನ್ ಯುಯಿ ಸುಸಾಕಿಯನ್ನು ಕ್ವಾರ್ಟರ್ ಫೈನಲ್ ನಲ್ಲಿ 3-2 ಅಂತರದಿಂದ ಸೋಲಿಸಿದ ನಂತರ ಸೆಮೀಸ್ ನಲ್ಲಿ ಅದ್ಭುತ ಪ್ರದರ್ಶನ ತೋರಿದರು.