ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
●ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮ●ಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?●ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್●ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರ●ಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆ●ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರ●ರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈ●ಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌●ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿ●ಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕ●ಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶ●ಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್●ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆ●ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪ●ಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹ●ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ●ಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯ●ನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌●300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿ●ತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಆರೆಸ್ಸೆಸ್ ನಂಟಿರುವ ಅಮೆರಿಕದ ಎರಡು ದತ್ತಿ ಸಂಸ್ಥೆಗಳಿಂದ ಐದು ವರ್ಷಗಳಲ್ಲಿ ₹926 ಕೋಟಿ ಸಂಗ್ರಹ: ತನಿಖಾ ವರದಿ ಬಹಿರಂಗ

P

Peepal Media • ವಿದೇಶ

• 1 ನಿಮಿಷದ ಓದು

ಆರೆಸ್ಸೆಸ್ ನಂಟಿರುವ ಅಮೆರಿಕದ ಎರಡು ದತ್ತಿ ಸಂಸ್ಥೆಗಳಿಂದ ಐದು ವರ್ಷಗಳಲ್ಲಿ ₹926 ಕೋಟಿ ಸಂಗ್ರಹ: ತನಿಖಾ ವರದಿ ಬಹಿರಂಗ

ಹ್ಯೂಸ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಜಾಲದೊಂದಿಗೆ ಗುರುತಿಸಿಕೊಂಡಿರುವ ಅಮೆರಿಕ ಮೂಲದ ಎರಡು ಪ್ರಮುಖ ದತ್ತಿ ಸಂಸ್ಥೆಗಳು 2020 ರಿಂದ 2024ರ ಅವಧಿಯಲ್ಲಿ ಒಟ್ಟಾಗಿ ಬರೋಬ್ಬರಿ 117.8 ಮಿಲಿಯನ್ ಡಾಲರ್ (ಅಂದಾಜು ₹926 ಕೋಟಿ) ದೇಣಿಗೆ ಹಾಗೂ ಅನುದಾನಗಳನ್ನು ಸಂಗ್ರಹಿಸಿವೆ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆ ಬೆಲ್ಲಿಂಗ್‌ಕ್ಯಾಟ್ (Bellingcat) ನಡೆಸಿದ ತನಿಖಾ ವರದಿ ತಿಳಿಸಿದೆ.

ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಏಕಲ್ ವಿದ್ಯಾಲಯ ಫೌಂಡೇಶನ್ ಆಫ್ ಯುಎಸ್‌ಎ’ (ಏಕಲ್ ಯುಎಸ್‌ಎ) ಮತ್ತು ‘ಸೇವಾ ಇಂಟರ್‌ನ್ಯಾಷನಲ್ ಇಂಕ್’ (ಸೇವಾ ಯುಎಸ್‌ಎ) ಸಂಸ್ಥೆಗಳ ತೆರಿಗೆ ಸಲ್ಲಿಕೆ ದಾಖಲೆಗಳನ್ನು ಆಧರಿಸಿ ಈ ವಿವರಗಳನ್ನು ಬಿಡುಗಡೆ ಮಾಡಲಾಗಿದೆ.

ದಾಖಲೆಗಳ ಪ್ರಕಾರ, ಏಕಲ್ ಯುಎಸ್‌ಎ ಐದು ವರ್ಷಗಳಲ್ಲಿ 48.4 ಮಿಲಿಯನ್ ಡಾಲರ್‌ಗಿಂತಲೂ (ಸುಮಾರು ₹380 ಕೋಟಿ) ಹೆಚ್ಚಿನ ಹಣ ಸಂಗ್ರಹಿಸಿದ್ದು, ಅದರಲ್ಲಿ 33.7 ಮಿಲಿಯನ್ ಡಾಲರ್ (ಸುಮಾರು ₹265 ಕೋಟಿ) ಮೊತ್ತವನ್ನು ಭಾರತದ ಏಕಲ್ ವಿದ್ಯಾಲಯಕ್ಕೆ ಕಳುಹಿಸಿದೆ.

ಮತ್ತೊಂದೆಡೆ, ಸೇವಾ ಯುಎಸ್‌ಎ ಸುಮಾರು 69.4 ಮಿಲಿಯನ್ ಡಾಲರ್ (ಸುಮಾರು ₹545 ಕೋಟಿ) ಸಂಗ್ರಹಿಸಿದ್ದು, ಭಾರತ ಹಾಗೂ ದಕ್ಷಿಣ ಏಷ್ಯಾದ ವಿವಿಧ ಯೋಜನೆಗಳಿಗೆ 29.7 ಮಿಲಿಯನ್ ಡಾಲರ್ (ಸುಮಾರು ₹233 ಕೋಟಿ) ವರ್ಗಾಯಿಸಿದೆ.

ಈ ಹಣಕಾಸು ವಹಿವಾಟಿನಲ್ಲಿ ‘ಡೋನರ್-ಅಡ್ವೈಸ್ಡ್ ಫಂಡ್ಸ್’ (ದಾನಿಗಳ ಹೆಸರನ್ನು ಬಹಿರಂಗಪಡಿಸದೆ ಅನುದಾನ ನೀಡುವ ವ್ಯವಸ್ಥೆ) ಪಾತ್ರ ಪ್ರಮುಖವಾಗಿದ್ದು, ಇಂತಹ ನಿಧಿಗಳ ಮೂಲಕವೇ ಎರಡೂ ಸಂಸ್ಥೆಗಳು ಒಟ್ಟು ಆದಾಯದ ಶೇಕಡಾ 20.7 ರಷ್ಟು ಅಂದರೆ ಕನಿಷ್ಠ 24.4 ಮಿಲಿಯನ್ ಡಾಲರ್ ಪಡೆದಿವೆ ಎಂದು ವರದಿ ಬೆಟ್ಟುಮಾಡಿದೆ.

ಏಕಲ್ ವಿದ್ಯಾಲಯವು 1990ರ ದಶಕದ ಕೊನೆಯಲ್ಲಿ ವಿಶ್ವ ಹಿಂದೂ ಪರಿಷತ್ ಆಫ್ ಅಮೆರಿಕ (VHPA) ಯೋಜನೆಯಾಗಿ ಪ್ರಾರಂಭವಾಗಿ ನಂತರ ಸ್ವತಂತ್ರ ಸಂಸ್ಥೆಯಾಗಿ ಬೆಳೆದಿದೆ. ಭಾರತದಲ್ಲಿ ನಡೆಯುವ ಏಕಲ್ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವು ನಾಯಕರು ಭಾಗವಹಿಸುತ್ತಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಸೇವಾ ಯುಎಸ್‌ಎ ತಾನು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಲ್ಲ ಮತ್ತು ಆರೆಸ್ಸೆಸ್‌ನ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತದಲ್ಲಿ ವಿದೇಶಿ ದೇಣಿಗೆ ಹಾಗೂ ಎಫ್‌ಸಿಆರ್‌ಎ ನಿಯಮಗಳ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ರಾಜಕೀಯ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ ಈ ತನಿಖಾ ವರದಿ ಪ್ರಕಟವಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

P

Peepal Media

Peepal Media · ವಿದೇಶ ವಿಭಾಗ

ಸಂಬಂಧಿತ ಸುದ್ದಿಗಳು

Exit mobile version