ಬೆಂಗಳೂರು: ಗುರುವಾರ ರಾಜ್ಯಾದಾದ್ಯಂತ ʼಹೆಡ್ ಬುಷ್ʼ ಸಿನಿಮಾದ ಪ್ರೀಮಿಯರ್ ಶೋ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾಕಡೆ ಬೆಂಗಳೂರಿನ ಭೂಗತ ದೊರೆ ಎಂ.ಪಿ. ಜಯರಾಜ್ ಎನ್ನುವ ಕೂಗು ಕೇಳಿಬರುತ್ತಿದೆ.
ʼನಟ ರಾಕ್ಷಸʼ ಡಾಲಿ ಧನಂಜಯ ನಾಯಕನಾಗಿ ಅಭಿನಯಿಸಿರುವ ʼಹೆಡ್ ಬುಷ್ʼ ಸಿನಿಮಾದ ಪ್ರೀಮಿಯರ್ ಶೋ ಗುರುವಾರ ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಮಾ ಸಂದರ್ಶಕರಿಂದ ಮತ್ತು ಅಭಿಮಾನಿಗಳಿಂದ ಮೆಚ್ಚುಗೆ ಪಡದುಕೊಂಡಿದೆ.
1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಪರಿಚಯಿಸಲಿರುವ ಈ ಚಿತ್ರ, ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಸಿನಿಮಾದ ಪ್ರೀಮಿಯರ್ ಶೂ ಬಿಡುಗಡೆ ನಂತರ ಭೂಗತ ಲೋಕದ ಕಥೆಯನ್ನು ಸಿನಿಮಾ ಮಾಡಬೇಕು ಎಂದೆನಿಸಿದ್ದು ಏಕೆ? ಎಂದು ಪೀಪಲ್ ಟಿವಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಗ್ನಿ ಶ್ರೀಧರ್ ಅವರು, ಇದು ಆತ್ಮ ಕಥೆಯಲ್ಲಾ, ಇದು ಬದುಕಿನ ಕಥೆ. ನಾನು ಜೀವನದಲ್ಲಿ ಸಂಚಾರಿಸಿದ ರೀತಿಯ ಕಥೆ. ಹಾಗಾಗಿ ಸಿನಿಮಾ ಮಾಡಬೇಕು ಎಂದೆನಿಸಿದ್ದು ಎಂದರು.
ಇದನ್ನು ನೋಡಿ: ಇದು ಸಿನಿಮಾ ಅಲ್ಲ, ಬದುಕಿನ ಕಥೆ ಎಂದು ಅಗ್ನಿ ಶ್ರೀಧರ್ ಹೇಳಿದ್ಯಾಕೆ?
ಬದುಕಿನಲ್ಲಿ, ಒಳ್ಳೆಯವರು, ಕೆಟ್ಟವರು, ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಸಮಾನ್ಯ ಜನರು ಎಲ್ಲಾರು ಇದ್ದಾರೆ, ಹಾಗೆ ಒಂದು ಸಾಹಿತ್ಯ ಹೇಗೂ ಸಿನಿಮಾನು ಅದೇ ರೀತಿಯಾದಂತದ್ದು, ಆ ಸಿನಿಮಾ ಒಂದು ಬದುಕನ್ನು ಹಿಡಿದಿಟ್ಟಾಗ ತುಂಬಾ ಸಂತೋಷವಾಗುತ್ತೆ. ಆ ದೃಷ್ಟಿಕೋನದಿಂದ ಈ ಸಿನಿಮಾ ನಿರ್ಮಾಣವಾಗಿರೋದು, ಹೀಗಾಗಿ ಹೆಡ್ ಬುಷ್ ಒಂದು ಮ್ಯಾಜಿಕಲ್ ನಿನಿಮಾ, ಜನರು ಈ ಸಿನಿಮಾವನ್ನು ಇಷ್ಟಪಡುತ್ತಾರೆ ಮತ್ತು ಇದು ಕಂಡಿತವಾಗಿ ಯಶಸ್ವಿಯಾಗುತ್ತೆ ಎಂದರು.
ಅಗ್ನಿ ಶ್ರೀಧರ್ ಅವರ ಕಥೆ-ಚಿತ್ರ ಕಥೆ- ಸಂಭಾಷಣೆ ಮತ್ತು ಶೂನ್ಯ ಅವರ ನಿರ್ದೇಶನದ ಈ ಸಿನಿಮಾವನ್ನು, ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಇಂದು ಹೆಡ್ ಬುಷ್ ನಿನಿಮಾ ರಾಜ್ಯಾದಾದ್ಯಂತ ತೆರೆಕಾಣಲಿದ್ದು, ಯಶಸ್ವಿ ಪ್ರದರ್ಶನ ಕಾಣಲಿ ಎಂದು ಪೀಪಲ್ ಟಿವಿ ಶುಭ ಹಾರೈಸುತ್ತದೆ.