Friday, June 14, 2024

ಸತ್ಯ | ನ್ಯಾಯ |ಧರ್ಮ

ʼರಾಷ್ಟ್ರಪ್ರೇಮದ ಹೆಸರಿನಲ್ಲಿ ದೇಶ ಲೂಟಿʼ : ಸ್ಥಳೀಯರ ಆಕ್ರೋಶ

ಹಾಸನ : ಹಾಸನದಲ್ಲಿ ಹಾಕಿರುವ ಡಾಂಬರೀಕರಣ ಅತ್ಯಂತ ಕಳಪೆಯಾಗಿದ್ದು ಕೇವಲ 2 ದಿನಕ್ಕೆ ಕಿತ್ತುಬಂದಿದೆ. ಈ ಹಿನ್ನಲೆಯಲ್ಲಿ ಎಎಪಿ ಮುಖಂಡ ಅಗಿಲೆ ಯೋಗಿಶ್‌ ಅವರ ನೇತೃತ್ವದಲ್ಲಿ ಸರ್ಕಾರದ ಭ್ರಷ್ಟಾಚಾರ ವಿರೋಧವಾಗಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಹಾಸನಾಂಬೆ ಜಾತ್ರೆಯ ಸಲುವಾಗಿ ರಾಜ್ಯದ ಹಲವು ಕಡೆಯ ಭಕ್ತಾಧಿಗಳು ಹಾಸನಕ್ಕೆ ಹೊರಡುತ್ತಾರೆ. ಈ ನಿಟ್ಟಿನಲ್ಲಿ ಅಲ್ಲಿನ ರಸ್ತೆಗಳನ್ನು ಡಾಂಬರೀಕರಣ ಮಾಡಿಸಲಾಗಿತ್ತು. ಹಾಸನದ ಹಾಲಿನ ಡೈರಿಯಿಂದ ರೈಲ್ವೇ ಸ್ಟೇಷನ್‌ನ ರಸ್ತೆಯ ಟಾರ್‌ ಕೇವಲ ಎರಡೇ ದಿನಕ್ಕೆ ಕಿತ್ತು ಬಂದಿದೆ. ಈ ಮಟ್ಟಿಗಿನ ಕಳಪೆ ಕಾಮಗಾರಿಯಿಂದ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಸಾರ್ವಜನಿಕರು ಮತ್ತು ಆಮ್‌ ಆದ್ಮಿ ಪಕ್ಷದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕಾರಣ ಎಎಪಿ ಮುಖಂಡ ಅಗಿಲೆ ಯೋಗಿಶ್‌ ಅವರ ನೇತೃತ್ವದಲ್ಲಿ ಸರ್ಕಾರದ ಭ್ರಷ್ಷಾಚಾರ ವಿರುದ್ದ ಇಂದು ಬೆಳಗ್ಗೆಯಿಂದ ಪ್ರತಿಭಟನೆಗೆ ಕುಳಿತ್ತಿದ್ದು, ಆಮ್‌ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು , ಭ್ರಷ್ಟಾಚಾರದ  ವಿರುದ್ದ ಹೋರಾಟ ನಡೆಸುತ್ತಿರುವ ಸಂಘಟನೆ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ

ಈ ಕುರಿತು ಪೀಪಲ್‌ ಮೀಡಿಯಾದೊಂದಿಗೆ ಮಾತನಾಡಿದ  ಪ್ರತಿಭಟನಾಕಾರರೊಬ್ಬರು, ʼರಾಷ್ಟ್ರಪ್ರೇಮದ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳೇ ಈಗಿನ ಪ್ರತಿನಿಧಿಗಳಾಗಿದ್ದಾರೆ. ತಾಯಿ ಹಾಸನಾಂಬ ಜಾತ್ರೆಯ ಸಲುವಾಗಿ ನೆನ್ನೆ ಹಾಕಿದ ಡಾಂಬರ್‌ ರಸ್ತೆ ತೀರ ಕಳಪೆಯಾಗಿದ್ದು, ಇಂದು ಕಿತ್ತುಬಂದಿದೆ. ಈ ಮೊದಲು ಹಾಕಿಸಿದ್ದಂತಹ ರಸ್ತೆ ಚೆನ್ನಾಗಿತ್ತು. ಈಗಿನ ದಿನಗಳಲ್ಲಿ ಅಕ್ರಮವಾಗಿ ಹಣ ಗಳಿಸುವುದಕ್ಕೋಸ್ಕರ ಈ ರೀತಿಯಾಗಿ ಕಳಪೆ ರಸ್ತೆಗಳನ್ನು ಹಾಕಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಸರ್ಕಾರದ ಈ ರೀತಿಯ ಭ್ರಷ್ಟಾಚಾರದ ವಿರುದ್ಧ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಉತ್ತರ ನೀಡುವವರೆಗೂ ನಮ್ಮ ಈ ಪ್ರತಿಭಟನೆ ನಿಲ್ಲುವುದಿಲ್ಲʼ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು