ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪ್ರಾಪ್ತ ಬಾಲಕಿಯ ವಿರುದ್ಧ ಇಸ್ಲಾಂ ವಿರೋಧಿ ಮತ್ತು ಲೈಂಗಿಕ ನಿಂದನಾತ್ಮಕ ಕಾಮೆಂಟ್‌: ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನಕರ್ನಾಟಕ ವಿಧಾನ ಪರಿಷತ್ ಚುನಾವಣೆ: ನಾಲ್ಕೂ ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು, ಕಾಂಗ್ರೆಸ್‌ಗೆ ಹಿನ್ನಡೆಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌

ಮುಸಲ್ಮಾನರ ಚಿಹ್ನೆಯಾಗಿ ಪಾಕೀಸ್ತಾನದ ಬಾವುಟ ಪ್ರದರ್ಶನ ; ಸ್ಪಷ್ಟನೆ ನೀಡಿದ “ಸುವರ್ಣ ನ್ಯೂಸ್”

PPeepal Media Desk

Peepal Media Desk ಮೀಡಿಯಾ

• 1 ನಿಮಿಷದ ಓದು

ಮುಸಲ್ಮಾನರ ಚಿಹ್ನೆಯಾಗಿ ಪಾಕೀಸ್ತಾನದ ಬಾವುಟ ಪ್ರದರ್ಶನ ; ಸ್ಪಷ್ಟನೆ ನೀಡಿದ  “ಸುವರ್ಣ ನ್ಯೂಸ್”

ಹಿಂದೂ ಮತ್ತು ಮುಸಲ್ಮಾನರ ಜನಸಂಖ್ಯೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದ ವೇಳೆ ಮುಸಲ್ಮಾನರ ಚಿಹ್ನೆಯಾಗಿ ಪಾಕೀಸ್ತಾನದ ಬಾವುಟ ಪ್ರದರ್ಶನ ಮಾಡಿದ ಸುವರ್ಣ ನ್ಯೂಸ್ ಈಗ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದೆ. ಆದರೆ ಇದು ದುರುದ್ದೇಶಪೂರ್ವಕ ಅಲ್ಲ, ಕಣ್ತಪ್ಪಿನಿಂದಾದ ತಪ್ಪು ಎಂದು ತಿಳಿಸಿದೆ.

ಎರಡು ದಿನಗಳ ಹಿಂದೆ ಸುವರ್ಣ ನ್ಯೂಸ್ ಪಾಕೀಸ್ತಾನ ಮತ್ತು ಭಾರತದ ಜನಸಂಖ್ಯೆ, ಅಲ್ಲಿನ ಬಹುಸಂಖ್ಯಾತರ ಪ್ರಮಾಣ, ಅಲ್ಪಸಂಖ್ಯಾತರ ಏರಿಕೆ ಹಾಗೂ ಕೆಲವು ಧಾರ್ಮಿಕ ವಿಚಾರಗಳ ಕುರಿತಾಗಿ ಕಾರ್ಯಕ್ರಮ ನಡೆಸಿತ್ತು. ಇದರಲ್ಲಿ ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಚಿಹ್ನೆ ಬಳಸುವ ಜಾಗದಲ್ಲಿ ಹಿಂದೂಗಳ ತೋರಿಸುವ ಜಾಗದಲ್ಲಿ ಭಾರತದ ಬಾವುಟ ಮತ್ತು ಮುಸಲ್ಮಾನರ ಉಲ್ಲೇಖಿಸುವ ಜಾಗದಲ್ಲಿ ಪಾಕೀಸ್ತಾನದ ಬಾವುಟ ಪ್ರದರ್ಶಿಸಲಾಗಿತ್ತು.

ಇದು ಪ್ರಸಾರವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸರ್ಕಾರ ಸುವರ್ಣ ನ್ಯೂಸ್ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸರ್ಕಾರವನ್ನು ಆಗ್ರಹಿಸುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ತಕ್ಷಣ ಎಚ್ಚೆತ್ತುಕೊಂಡ ಸುವರ್ಣ ನ್ಯೂಸ್ ಇದು ತಿಳಿಯದೇ ಆದ ಪ್ರಮಾದ ಎಂದು ವಿಷಾದ ವ್ಯಕ್ತಪಡಿಸಿದೆ.

ಅಷ್ಟಕ್ಕೂ ಈ ರೀತಿಯ ಚರ್ಚೆ ಅಪ್ರಸ್ತುತವಾದರೂ ಬಿಜೆಪಿ ಪಕ್ಷದ ಟ್ರೋಲ್ ಪೇಜುಗಳು ಹಾಗೂ RSS ಸಂಘಟನೆ ಹಿನ್ನೆಲೆಯ ವ್ಯಕ್ತಿಗಳ ಹೊಸ ಟೂಲ್ ಕಿಟ್ ಇದಾಗಿರುವ ಬಗ್ಗೆಯೂ ಮಾತುಗಳು ಕೇಳಿ ಬಂದಿದೆ. ಸುವರ್ಣ ನ್ಯೂಸ್ ಇಂತಹ ಸುದ್ದಿಯನ್ನೇ ಮುನ್ನೆಲೆಗೆ ತಂದು ಇನ್ಯಾವುದೋ ವಿಚಾರವನ್ನು ಮರೆಮಾಚುವ ತಂತ್ರ ನಡೆಸಿದೆ ಎಂದೂ ಸಹ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಅಷ್ಟಕ್ಕೂ ಕೇಂದ್ರ ಸರ್ಕಾರ ಕಳೆದ 14 ವರ್ಷಗಳಿಂದಲೂ ಜಾತಿ ಗಣತಿ ನಡೆಸಿಲ್ಲ. 2021 ರಲ್ಲೇ ನಡೆಯಬೇಕಿದ್ದ ಜಾತಿಯಾಧಾರಿತ ಜನಸಂಖ್ಯಾ ಗಣತಿಯನ್ನು ನಡೆಸದೇ ಇರುವ ಬಗ್ಗೆ ವಿರೋಧ ಪಕ್ಷಗಳೂ ಸಹ ಹಲವು ಬಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ ಎಳ್ಳಷ್ಟು ಚಕಾರವೆತ್ತದ ಹಾಗೂ ಜಾತಿ, ಧರ್ಮಾಧಾರಿತ ಗಣತಿಯನ್ನು ದೂರವೇ ಇಟ್ಟಂತಹ ಬಿಜೆಪಿ ಇದ್ದಕ್ಕಿದ್ದಂತೆಯೇ ಮುಸಲ್ಮಾನರ ಜನಸಂಖ್ಯೆಯನ್ನು ಅದ್ಯಾವ ಆಧಾರದ ಮೇಲೆ ಹೆಚ್ಚಾಗಿದೆ ಎಂದು ಪರಿಗಣಿಸಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಸಧ್ಯಕ್ಕೆ ಇಂತದ್ದೊಂದು ಚರ್ಚೆ ಮುನ್ನೆಲೆಗೆ ತರುವ ಹಂತದಲ್ಲಿ ಸುವರ್ಣ ನ್ಯೂಸ್ ಮುಸಲ್ಮಾನರಿಗೆ ಅವಮಾನ ಆಗುವಂತೆ ನಡೆದುಕೊಂಡಿದೆ. ಅದು ಬೇಕಂತಲೇ ಮಾಡಿದೆಯೋ ಅಥವಾ ಕಣ್ತಪ್ಪಿನಿಂದಾದ ಯಡವಟ್ಟೋ ಗೊತ್ತಿಲ್ಲ. ಈ ಸನ್ನಿವೇಶದಲ್ಲಿ ಆದ ತಪ್ಪಿಗೆ ವಿಷಾದ ವ್ಯಕ್ತಪಡಿಸಿ, ಸರ್ಕಾರದ ಕಡೆಯಿಂದಲೋ ಅಥವಾ ಇನ್ನಾವುದೇ ಸಂಘಟನೆ ಕಡೆಯಿಂದ ಬೀಳಬಹುದಾದ ಕೇಸಿನಿಂದ ಸುವರ್ಣ ನ್ಯೂಸ್ ಬಚಾವಾಗಿದೆ ಅಷ್ಟೆ.

PPeepal Media Desk

Peepal Media Desk

Peepal Media · ಮೀಡಿಯಾ ವಿಭಾಗ

ಸಂಬಂಧಿತ ಸುದ್ದಿಗಳು