ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ರೋಲ್ಕಾಲ್ ಪತ್ರಕರ್ತರ ಕಾಟ, ಕಲಾವಿದರಿಗೆ ಪೀಕಲಾಟ

PPeepal Media

Peepal Media ಮೀಡಿಯಾ

• 4 ನಿಮಿಷದ ಓದು

ರೋಲ್ಕಾಲ್ ಪತ್ರಕರ್ತರ ಕಾಟ, ಕಲಾವಿದರಿಗೆ ಪೀಕಲಾಟ

ಕಾಸು ಕೇಳುವವರು ನಿಜವಾದ ಪತ್ರಕರ್ತರು ಅಲ್ಲ. ಆದ್ದರಿಂದ ಕಲಾವಿದರು, ಸಂಘಟಕರುಗಳು ಸ್ವಯಂ ನಿಯಂತ್ರಣ ಮಾಡಿಕೊಂಡು ರೋಲ್ಕಾಲಿಗರನ್ನು ನಿಷೇಧಿಸುವುದೇ ಇಂತವರ ಹಾವಳಿ ತಡೆಗಟ್ಟಲು ಇರುವ ಮಾರ್ಗ. ಹೆಚ್ಚು ಪೀಡಿಸಿದರೆ ಪೊಲೀಸ್ ದೂರು ಕೊಡುವುದಾಗಿ ಹೇಳಿ ದೂರ ಓಡಿಸುವ ಕೆಲಸ ಮಾಡಬೇಕಿದೆ. ಇಂತಹ ರೋಲ್ಕಾಲಿಗರನ್ನು ಗುರುತಿಸಿ ನಿಷೇಧಿಸುವ ಕೆಲಸವನ್ನು ಕಲಾಕ್ಷೇತ್ರ ಹಾಗೂ ನಯನದ ನಿರ್ವಹಣಾಧಿಕಾರಿಗಳು ಮಾಡಬೇಕಿದೆ– ಶಶಿಕಾಂತ ಯಡಹಳ್ಳಿ

ಪತ್ರಿಕೋದ್ಯಮದಲ್ಲಿ ರೋಲ್ಕಾಲ್ ಎನ್ನುವುದು ಹೊಸದೇನಲ್ಲ. ಎಲ್ಲಾ ಪತ್ರಕರ್ತರೂ ಹೀಗೇ ಎನ್ನುವುದೂ ಸರಿಯಲ್ಲ. ಸರಕಾರಿ ನೌಕರರು ಹಾಗೂ ವ್ಯಾಪಾರಿಗಳನ್ನು ಪತ್ರಿಕೆ ಇಲ್ಲವೇ ಚಾನೆಲ್ ಹೆಸರಲ್ಲಿ ರೋಲ್ಕಾಲ್ ಮಾಡಿ ಹಣ ಮಾಡುವವರು ಬೇಕಾದಷ್ಟಿದ್ದಾರೆ. ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನೇ ಟಾರ್ಗೆಟ್ ಮಾಡಿ ದೊಡ್ಡ ಮಟ್ಟದಲ್ಲಿ ಹಣ ಮಾಡುವ ದಂಧೆಕೋರರೂ ಇದ್ದಾರೆ. ಪತ್ರಿಕೋದ್ಯಮದ ಜೊತೆಜೊತೆಗೇ ಈ ರೋಲ್ಕಾಲ್‌ ಉದ್ಯಮವೂ ಬೆಳೆದು ಬಂದಿದೆ. ಪತ್ರಿಕಾ ವೃತ್ತಿ ಧರ್ಮವನ್ನು ಮರೆತವರು, ನೈತಿಕ ಪ್ರಜ್ಞೆ ಇಲ್ಲದವರು, ಹಣ ಮಾಡಲೆಂದೇ ಪತ್ರಕರ್ತರ ಸೋಗು ಹಾಕಿದವರ ಸಂಖ್ಯೆ ಕಡಿಮೆ ಏನಿಲ್ಲ.  ಭ್ರಷ್ಟರನ್ನು ರೋಲ್ಕಾಲ್ ಮಾಡಿದರೆ ಮಾಡಿಕೊಳ್ಳಲಿ, ಲೂಟಿಕೋರರಿಂದ ಹಣ ಪಡೆದರೆ ಪಡೆದುಕೊಳ್ಳಲಿ, ಸಮಾಜವಿರೋಧಿ ಕಾರ್ಯದಲ್ಲಿ ತೊಡಗಿಕೊಂಡವರ ಹತ್ತಿರ ಕಿತ್ತು ತಿಂದುಕೊಳ್ಳಲಿ ಎಂದು ಈ ರೋಲ್ಕಾಲಿಗರನ್ನು ಜನತೆ ನಿರ್ಲಕ್ಷಿಸಿದ್ದೇ ಹೆಚ್ಚು.

ಮೊದಲಾದರೆ ರೋಲ್ಕಾಲ್ಗೋಸ್ಕರಾನೇ ಚಿಕ್ಕ ಪುಟ್ಟ ಪತ್ರಿಕೆ ತರುವವರಿದ್ದರು. ಆದರೆ ಈಗ ತಂತ್ರಜ್ಞಾನ ಮುಂದುವರಿದಿದೆ. ಡಿಜಿಟಲ್ ಜರ್ನಲಿಸಂ ಮುಂಚೂಣಿಯಲ್ಲಿದೆ. ಇದರ ಭಾಗವಾಗಿ ಶುರುವಾಗಿದ್ದೇ ಯುಟ್ಯೂಬ್ ಚಾನೆಲ್ ಜರ್ನಲಿಸಂ. ಇದಕ್ಕೇನೂ ಹೆಚ್ಚು ಬಂಡವಾಳವೂ ಬೇಕಿಲ್ಲ, ಪರಿಶ್ರಮವೂ ಅಗತ್ಯವಿಲ್ಲ. ಒಂದು ವಿಡಿಯೋ ಕ್ಯಾಮರಾ ಹಾಗೂ ಎಡಿಟ್ ಮಾಡಲು ಲ್ಯಾಪ್ ಟಾಪ್ ಇದ್ರೆ ಸಾಕು. ಯಾವುದೋ ಒಂದು ಹೆಸರಿನ ಯುಟ್ಯೂಬ್ ಚಾನೆಲ್ ಆರಂಭಿಸಬಹುದು. ಹಲವಾರು ಜನ ಈ ಮಾಧ್ಯಮವನ್ನು ಉತ್ತಮವಾಗಿಯೇ ಬಳಸುತ್ತಿದ್ದಾರೆ. ಆದರೆ ಈ ರೋಲ್ಕಾಲಿಗರ ಕಣ್ಣು ಈಗ ಈ ಯುಟ್ಯೂಬ್ ಚಾನೆಲ್ ಮೇಲೂ ಬಿದ್ದಿದೆ. ಅದನ್ನು ಬಳಸಿಕೊಂಡು ಕಲಾವಿದರನ್ನು ಸುಲಿಗೆ ಮಾಡುವ ನೀಚತನ ಆತಂಕಕಾರಿಯಾಗಿದೆ. 

ಆದರೆ, ಈಗ ಇಂತಹ ಪತ್ರಕರ್ತರ ವೇಷದ ವಸೂಲಿ ಗಿರಾಕಿಗಳು ಕಲಾವಿದರಿಗೂ ರೋಲ್ಕಾಲ್ ಮಾಡುತ್ತಿರುವುದು ಅಸಹನೀಯ ಮತ್ತು ಖಂಡನೀಯ. ಈ ಯುಟ್ಯೂಬ್ ರೋಲ್ಕಾಲಿಗರ ಕೆಲಸ ಏನಂದ್ರೆ, ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆಗಳ ʼನಗರದಲ್ಲಿ ಇಂದುʼ ಕಾರ್ಯಕ್ರಮಗಳ ಪಟ್ಟಿ ನೋಡುವುದು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದನ್ನು ಗುರುತು ಹಾಕಿಕೊಳ್ಳುವುದು. ಪ್ರತಿ ನಿತ್ಯ ಕನಿಷ್ಟ ಹತ್ತಾದರೂ ಕಾರ್ಯಕ್ರಮಗಳ ಲಿಸ್ಟ್ ರೆಡಿಮಾಡಿಕೊಂಡು ಕ್ಯಾಮರಾ ಮುಂದೆ ಆಯಾ ಯುಟ್ಯೂಬ್ ಚಾನೆಲ್ ಹೆಸರಿನ ತ್ರಿಕೋಣಾಕಾರದ ಲೋಗೋ ಇರುವ ಮೈಕನ್ನು ಸಿಕ್ಕಿಸಿಕೊಂಡು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹಾಜರಾಗುವುದು. ನಂತರ ಕಾರ್ಯಕ್ರಮದ ಆಯೋಜಕರು ಅಂದರೆ ಸಂಘಟಕರನ್ನು ಪರಿಚಯಿಸಿಕೊಂಡು ಕಾರ್ಯಕ್ರಮದ ವಿವರ ಹಾಗೂ ಆಹ್ವಾನ ಪತ್ರಿಕೆ ಪಡೆದುಕೊಳ್ಳುವುದು. ನಂತರ ಶುರುವಾಗುತ್ತದೆ ರೋಲ್ಕಾಲ್. ಹೀಗೀಗೆ ..ನಮ್ಮದು ಅಷ್ಟೊಂದು ಸಬ್ ಸ್ಕ್ರೈಬರ್ ಇರುವ ಜನಪ್ರಿಯ ಚಾನೆಲ್ ,ನಿಮ್ಮ ಕಾರ್ಯಕ್ರಮದ ಬಗ್ಗೆ ವಿಡಿಯೋ ಸಮೇತ ಪ್ರಚಾರ ಮಾಡುತ್ತೇವೆ. ಜಗತ್ತಿನಾದ್ಯಂತ ಜನ ನೋಡುವ ಹಾಗೆ ಮಾಡುತ್ತೇವೆ. ಹಾಗೆ ಹೀಗೆ ಎಂದು ಮಾತಲ್ಲೇ ಮರಳು ಮಾಡುವುದು. ತಮ್ಮ ಗಿಲೀಟಿನ ಮಾತಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದ ಕೂಡಲೇ  ಕಾರ್ಯಕ್ರಮದ ಒಂದೆರಡು ದೃಶ್ಯಗಳನ್ನು ಶೂಟ್ ಮಾಡುವುದು, ಸಂಘಟಕರ ಬೈಟ್ ತೆಗೆದುಕೊಳ್ಳುವುದು ನಂತರ ನಾಜೂಕಾಗಿ ವ್ಯವಹಾರಕ್ಕೆ ಇಳಿಯುವುದು. “ಇದೆಲ್ಲವನ್ನೂ ಎಡಿಟ್ ಮಾಡಿ ಪ್ರಚಾರ ಮಾಡಲು ಐದು ಸಾವಿರದಷ್ಟು ಖರ್ಚಾಗುತ್ತದೆ. ಅಷ್ಟನ್ನು ನೀವು ಕೊಟ್ಟರೆ ನಾಳೆ ಬೆಳಿಗ್ಗೆ ಒಳಗೆ ನಿಮ್ಮ ಕಾರ್ಯಕ್ರಮ ಅಪ್ಲೋಡ್ ಮಾಡಲಾಗುತ್ತದೆ. ನಿಮಗೂ ಲಿಂಕ್ ಕಳಿಸಲಾಗುತ್ತದೆ. ಅದನ್ನು ನಿಮಗೆ ಬೇಕಾದವರಿಗೆ ನೀವು ಹಂಚಿಕೊಳ್ಳಬಹುದು” ಎಂದು ಹಣಕ್ಕಾಗಿ ಬೇಡಿಕೆ ಇಡಲಾಗುತ್ತದೆ. ಅದೇನೋ ಕಷ್ಟ ಪಟ್ಟು, ರಂಗಮಂದಿರದ ದುಬಾರಿ ಬಾಡಿಗೆ ಕಟ್ಟಿ ಇಷ್ಟವಾದ ಕಾರ್ಯಕ್ರಮವನ್ನು ಆಯೋಜಿಸುವ ಚಿಕ್ಕಪುಟ್ಟ ಸಂಘಟಕರಿಗೆ ಇಷ್ಟೊಂದು ಹಣ ಕೊಡಬೇಕಲ್ಲಾ ಎಂದು ಸಂಕಟವಾಗುತ್ತದೆ. ಆದರೂ ಪಟ್ಟ ಶ್ರಮಕ್ಕೆ ಪ್ರಚಾರವಾದರೂ ಸಿಗಲಿ ಎಂದು ಚೌಕಾಸಿ ಶುರುವಾಗುತ್ತದೆ. ಐದು ಸಾವಿರ ನಾಲ್ಕಕ್ಕಿಳಿದು, ನಾಲ್ಕು ಎರಡಾಗಿ ಕೊನೆಗೆ ಕನಿಷ್ಟ ಸಾವಿರ ರೂಪಾಯಿಗೆ ಡೀಲ್ ಕುದುರುತ್ತದೆ. ಹಣಕಾಸು ಇರುವ ಸಂಘಟಕರು ದೂಸ್ರಾ ಮಾತಾಡದೇ ಚಾನೆಲ್ ನವರು ಎನ್ನುವ ಗೌರವದಿಂದ ಕೇಳಿದಷ್ಟು ಹಣ ಕೊಟ್ಟು ಕಳಿಸುತ್ತಾರೆ. ಇಲ್ಲದವರು ಚೌಕಾಸಿಗೆ ಇಳಿಯುತ್ತಾರೆ. ಈಗ ಹಣ ಇಲ್ಲವಾದರೆ ಇದ್ದಷ್ಟು ಕೊಡಿ, ನಾಳೆ ವಿಡಿಯೊ ಲಿಂಕ್ ಕಳಿಸಿದ ನಂತರ ಗೂಗಲ್ ಪೇ ಮಾಡಿ ಎನ್ನುವ ಭಂಡ ರೋಲ್ಕಾಲಿಗರೂ ಇದ್ದಾರೆ. 

ಒಂದು ಕಾರ್ಯಕ್ರಮದಿಂದ ಐದು ಸಾವಿರ ಹೋಗಲಿ ಕನಿಷ್ಟ ಎರಡು ಸಾವಿರ ರೂಪಾಯಿ ದಕ್ಕಿದರೂ ಬೇರೆ ಬೇರೆ ಸಭಾಂಗಣಗಳಲ್ಲಿ ದಿನದಲ್ಲಾಗುವ ಕನಿಷ್ಟ ಐದು ಕಾರ್ಯಕ್ರಮಗಳಿಂದ ಹತ್ತು ಸಾವಿರ ಗ್ಯಾರಂಟಿ. ಶನಿವಾರ ಭಾನುವಾರಗಳಂದು ಹೆಚ್ಚು ಕಾರ್ಯಕ್ರಮಗಳು ಇರುವುದರಿಂದ ಅವತ್ತು ಇವರ ಕಲೆಕ್ಷನ್ ಇನ್ನೂ ಹೆಚ್ಚು. ಹೀಗಾಗಿ ಯಾವುದೇ ಬಂಡವಾಳವಿಲ್ಲದೇ, ಕಚೇರಿ ಸಿಬ್ಬಂದಿಗಳ ಅಗತ್ಯವಿಲ್ಲದೇ ಗೌರವಾನ್ವಿತವಾಗಿ ದಿನಕ್ಕೆ ಹತ್ತು ಸಾವಿರ ಸಂಪಾದಿಸುವ ದಾರಿ ಬೇರೆ ಏನಿದೆ?. ಸುಲಭದ ಸಂಪಾದನೆಯಾದ್ದರಿಂದ ಈಗ ಯುಟ್ಯೂಬ್ ಚಾನಲ್ ನವರಲ್ಲಿಯೇ ಕಾಂಪಿಟೇಶನ್ ಶುರುವಾಗಿದೆ. ಅವರೇ ಒಂದು ಗುಂಪು ಮಾಡಿಕೊಂಡು ನಾವು ಇಷ್ಟು ಜನ ಚಾನೆಲ್ ನವರು ಇದ್ದೇವೆ. ಟೋಟಲ್ ಆಗಿ ಇಷ್ಟು ಹಣ ಕೊಟ್ಟು ಬಿಡಿ, ನಾವೇ ಹಂಚಿಕೊಳ್ಳುತ್ತೇವೆ ಹಾಗೂ ನಮ್ಮೆಲ್ಲಾ ಚಾನೆಲ್ ಗಳ ಮೂಲಕ ಕಾರ್ಯಕ್ರಮಕ್ಕೆ ಪ್ರಚಾರ ಕೊಡುತ್ತೇವೆ ಎನ್ನುವ ಸಂಘಟಿತ ರೋಲ್ಕಾಲಿಗರೂ ಇದ್ದಾರೆ. ಇವರೆಲ್ಲಾ ಟಿಪ್ ಟಾಪ್ ಡ್ರೆಸ್ ಹಾಕಿಕೊಂಡು ದೊಡ್ಡ ಟಿವಿ ಚಾನೆಲ್ ವರದಿಗಾರರಂತೆಯೇ ಪೋಸ್ ಕೊಡುತ್ತಾ ವಸೂಲಿ ಕೆಲಸಕ್ಕೆ ಸಿದ್ದವಾಗಿಯೇ ಬಂದಿರುತ್ತಾರೆ. ಇಂತವರಲ್ಲಿ ಮಹಿಳಾಮಣಿಯರು ಸಹ ಇರುವುದು ರೋಲ್ಕಾಲಿಗೆ ಲಿಂಗಬೇಧವಿಲ್ಲ ಎನ್ನುವುದಕ್ಕೆ ಸಾಕ್ಷಿ.

ಹೇಗಾದರೂ ಸರಿ ತಮ್ಮ ಕಾರ್ಯಕ್ರಮದ ಸುದ್ದಿ ಬಂದರೆ ಸಾಕು ಎನ್ನುವ ಸಾಂಸ್ಕೃತಿಕ ಸಂಘಟಕರೂ ಇದ್ದಾರೆ. ಚಾನೆಲ್ ನಲ್ಲಿ ಬಂದ ವಿಡಿಯೋ ತುಣುಕುಗಳನ್ನೇ ತಮ್ಮ ಫೇಸ್ಬುಕ್ ಹಾಗೂ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡು ಖುಷಿಪಡುವವರೂ ಇದ್ದಾರೆ. ಅಂತವರ ಆಸೆಯನ್ನು ತಮ್ಮ ದುರಾಸೆಗೆ ಬಳಸಿಕೊಳ್ಳುವ ಈ ಡಿಜಿಟಲ್ ಮೀಡಿಯಾ ರೋಲ್ಕಾಲಿಗರು ಅನೈತಿಕವಾಗಿ ಬದುಕು ಕಟ್ಟಿಕೊಂಡಿದ್ದಾರೆ. 

ಇಂತವರನ್ನ ನೋಡಬೇಕೆಂದರೆ ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದಾಗ ಹೋಗಿ ನೋಡಬಹುದು. ಎಂದೂ ಕೇಳರಿಯದ ಚಾನೆಲ್ ಹೆಸರಿನ ಲೋಗೋ ಇರುವ ಮೈಕ್ ಕ್ಯಾಮರಾಗಳನ್ನು ನೋಡಬಹುದು. ಯಾವುದೇ ಆತಂಕವಿಲ್ಲದೇ ಹಾಡು ಹಗಲೇ ಮೀಡಿಯಾ ಹೆಸರಲ್ಲಿ ಸುಲಿಗೆ ಮಾಡುವ ರೋಲ್ಕಾಲಿಗರನ್ನು ಭೇಟಿಯಾಗಬಹುದು. ಅದರಲ್ಲೂ ನೃತ್ಯ ಕಾರ್ಯಕ್ರಮಗಳಿದ್ದಲ್ಲಿ ಈ ಗುಂಪು ಹಾಜರಿದ್ದೇ ಇರುತ್ತದೆ. ಒಬ್ಬರೇ ಒಂದಕ್ಕಿಂತ ಹೆಚ್ಚು ಯುಟ್ಯೂಬ್ ಚಾನೆಲ್ ಆರಂಭಿಸಿರುತ್ತಾರೆ. ಯಾಕೆಂದರೆ ಯಾರು ಎಷ್ಟೇ ಚಾನೆಲ್ ಗಳನ್ನು ಸೃಷ್ಟಿಸಿಕೊಂಡರೂ ಯುಟ್ಯೂಬ್ ಫ್ರೀ. ಹೀಗಾಗಿ ಕಾರ್ಯಕ್ರಮದ ಆಯೋಜಕರಿಗೆ ಮರುದಿನ ಬೇರೆ ಬೇರೆ ಮೊಬೈಲ್ ನಂಬರಿನಿಂದ ಕಾಲ್ ಮಾಡುವ ಈ ರೋಲ್ಕಾಲಿಗರು ಲಿಂಕ್ ಕಳಿಸಿ ಹಣಕ್ಕೆ ಡಿಮಾಂಡ್ ಇಡುತ್ತಾರೆ. ಸಂಘಟಕರು ಗೂಗಲ್ ಪೇ ಮಾಡಿದರೆ ಸರಿ, ಮಾಡದೇ ಇದ್ದರೆ  ಕ್ಷಣಮಾತ್ರದಲ್ಲಿ ವಿಡಿಯೋ ಲಿಂಕ್ ಡಿಲೀಟ್ ಮಾಡಿಬಿಡಲಾಗುತ್ತದೆ. 

ಈ ರೋಲ್ಕಾಲಿಗರನ್ನು ನಿಯಂತ್ರಿಸುವುದು ಹೇಗೆ? ಜರ್ನಲಿಸ್ಟ್ ವೇಷದಲ್ಲಿ ಸಂಭಾಂಗಣಕ್ಕೆ ಬರುವ ಇವರನ್ನು ಬಾರದಂತೆ ತಡೆಯುವುದಾದರೂ ಹೇಗೆ? ಇಂತವರನ್ನು ದೂರವಿಡಲು ಇರುವುದೊಂದೇ ದಾರಿ. ಯಾರೇ ಬಂದು ಚಾನೆಲ್ ಹೆಸರಲ್ಲಿ ಹಣ ಕೇಳಿದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸಿ ಉಗಿದು ಕಳಿಸಬೇಕು. ಹಣ ವಸೂಲಿಗೆ ಕಲಾವಿದರೇ ಆಗಬೇಕಾ ಅಂತಾ ಪ್ರಶ್ನಿಸಬೇಕು. ನಿಜವಾದ ಸಾಂಸ್ಕೃತಿಕ ಕಾಳಜಿ ಇರುವ ಯಾವುದೇ ಡಿಜಿಟಲ್ ಮಾಧ್ಯಮಗಳ ಪ್ರತಿನಿಧಿಗಳು ಎಂದೂ ಹಣ ಕೇಳುವುದಿಲ್ಲ. ಕಾಸು ಕೇಳುವವರು ನಿಜವಾದ ಪತ್ರಕರ್ತರೂ ಅಲ್ಲ. ಆದ್ದರಿಂದ ಕಲಾವಿದರು, ಸಂಘಟಕರುಗಳು ಸ್ವಯಂ ನಿಯಂತ್ರಣ ಮಾಡಿಕೊಂಡು ರೋಲ್ಕಾಲಿಗರನ್ನು ನಿಷೇಧಿಸುವುದೇ ಇಂತವರ ಹಾವಳಿ ತಡೆಗಟ್ಟಲು ಇರುವ ಮಾರ್ಗ. ಹೆಚ್ಚು ಪೀಡಿಸಿದರೆ ಪೊಲೀಸ್ ದೂರು ಕೊಡುವುದಾಗಿ ಹೇಳಿ ದೂರ ಓಡಿಸುವ ಕೆಲಸ ಮಾಡಬೇಕಿದೆ. ಇಂತಹ ರೋಲ್ಕಾಲಿಗರನ್ನು ಗುರುತಿಸಿ ನಿಷೇಧಿಸುವ ಕೆಲಸವನ್ನು ಕಲಾಕ್ಷೇತ್ರ ಹಾಗೂ ನಯನದ ನಿರ್ವಹಣಾಧಿಕಾರಿಗಳು ಮಾಡಬೇಕಿದೆ. 

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತರು

ಇದನ್ನು ಓದಿದ್ದೀರಾ?:ಅಧಿಕಾರಿಗಳ ಅನಪೇಕ್ಷಿತ ಆದೇಶ; ಕಲೆ ಸಂಸ್ಕೃತಿಗೆ ಮಾರಕ

ವಿಷಯಗಳು: #india #kannada #karnataka #peepal #peepalmedia
PPeepal Media

Peepal Media

Peepal Media · ಮೀಡಿಯಾ ವಿಭಾಗ

ಸಂಬಂಧಿತ ಸುದ್ದಿಗಳು