Monday, July 28, 2025

ಸತ್ಯ | ನ್ಯಾಯ |ಧರ್ಮ

ವಂದೇ ಭಾರತ್ ರೈಲು ಮತ್ತೆ ಜಾನುವಾರಿಗೆ ಡಿಕ್ಕಿ ; ಮುಂಭಾಗಕ್ಕೆ ಹಾನಿ

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ವಂದೇ ಭಾರತ್ ಹೈ ಸ್ಪೀಡ್ ರೈಲು ತಮಿಳುನಾಡಿನ ಅರಕೋಣಂ ನಲ್ಲಿ ಜಾನುವಾರಿಗೆ ಗುದ್ದಿ ಜಾನುವಾರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಹಾಗೆಯೇ ರೈಲಿನ ಮುಂಭಾಗಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು‌.

ಚೆನ್ನೈ ಮೈಸೂರು ಬೆಂಗಳೂರು ಭಾಗದಲ್ಲಿ ಸಂಚರಿಸುವ ಈ ರೈಲನ್ನು ಕಳೆದ ಒಂದು ವಾರದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ ಲೋಕಾರ್ಪಣೆ ಮಾಡಿದ್ದರು. ಲೋಕಾರ್ಪಣೆ ಮಾಡಿದ ಒಂದೇ ವಾರಕ್ಕೆ ಈ ಅಪಘಾತ ಸಂಭವಿಸಿದೆ. ಈ ದಾರಿಯಲ್ಲಿ ಘಟ್ಟ ಪ್ರದೇಶ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದರ ವೇಗದ ಮಿತಿಯನ್ನು 75 ರಿಂದ 77 ಕಿಲೋಮೀಟರ್ ಗೆ ಮಿತಿಗೊಳಿಸಲಾಗಿತ್ತು. ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲುಗಳ ಪೈಕಿ ಚೆನ್ನೈ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಚಲಿಸುವ ರೈಲೇ ನಿಧಾನಗತಿಯದ್ದು ಎಂದು ಪರಿಗಣಿಸಲಾಗಿದೆ.

ಅಕ್ಟೋಬರ್ ತಿಂಗಳ ಬಳಿಕ ದೇಶದಲ್ಲಿ ಸಂಭವಿಸಿದ ವಂದೇ ಭಾರತ್​​ ಎಕ್ಸ್​ಪ್ರೆಸ್ ರೈಲು ಅಪಘಾತದ ಐದನೇ ಪ್ರಕರಣ ಇದು ಎನ್ನಲಾಗಿದೆ. ಇದರಲ್ಲಿ ಒಂದು ಬಾರಿ ಮನುಷ್ಯರಿಗೆ ಮತ್ತೆ ಉಳಿದ ಎಲ್ಲಾ ಬಾರಿಯೂ ಜಾನುವಾರುಗಳಿಗೆ ಗುದ್ದಿವೆ. ದುರಂತ ಎಂದರೆ ಪ್ರತೀ ಬಾರಿಯೂ ಜಾನುವಾರು ಕಳೆದುಕೊಂಡ ರೈತನಿಗೇ ದಂಡ ವಿಧಿಸಲಾಗಿದೆ. ಈ ಬಾರಿ ಅತಿ ಹೆಚ್ಚು ಮೊತ್ತದ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೈತರು ಜಾನುವಾರುನ್ನು ರೈಲ್ವೆ ಹಳಿಗಳ ಬಳಿ ಬರದಂತೆ ತಡೆಗಟ್ಟಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ವಂದೇ ಮಾತರಂ ರೈಲಿಗೆ ಆಗುತ್ತಿರುವ ನಿರಂತರ ಹಾನಿಯ ಕಾರಣಕ್ಕೆ ಈಗ ಸುಮಾರು 1,000 ಕಿಲೋಮೀಟರ್ ಉದ್ದಕ್ಕೂ ಕಾಂಪೌಂಡ್ ನಿರ್ಮಿಸುವ ಚಿಂತನೆ ನಡೆದಿದೆ. ನಿರಂತರವಾಗಿ ವಂದೇ ಭಾರತ್ ರೈಲಿಗೆ ಆಗುತ್ತಿರುವ ಹಾನಿ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಜಾಲತಾಣಗಳಲ್ಲಿ ಟ್ರೋಲ್ ಗೂ ಕಾರಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page