ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಸೆಂಟರ್ ಗಳು, ಲಿಂಗಪತ್ತೆ ಸ್ಕಾನಿಂಗ್ ಸೆಂಟರ್ ಗಳು, ಗರ್ಭಪಾತ ಮಾಡುವ ಯಾವುದೇ ಆಸ್ಪತ್ರೆಗಳು, ಕ್ಲಿನಿಕ್ ಗಳು ಕಂಡುಬಂದರೆ ಗುಪ್ತ ಕಾರ್ಯಾಚರಣೆ ಮೂಲಕ ಮಾಹಿತಿ ನೀಡುವವರಿಗೆ ಆರೋಗ್ಯ ಇಲಾಖೆಯಿಂದ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಸರ್ಕಾರ ಆದೇಶಿಸಿದೆ.
ಈವರೆಗೆ ರಾಜ್ಯದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವವಾಗಿ ಭ್ರೂಣಲಿಂಗ ಪತ್ತೆ ಮಾಡುವ ಗುಪ್ತ ಕಾರ್ಯಾಚರಣೆ ಅಥವಾ ಮಾಹಿತಿ ನೀಡುವವರಿಗೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತಿತ್ತು. ಆದರೆ, ಈ ಬಹುಮಾನದ ಮೊತ್ತವನ್ನು ಸದರಿ 2024-25ನೇ ಆರ್ಥಿಕ ಸಾಲಿನಿಂದ 1,00,000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.
ಭ್ರೂಣಲಿಂಗ ಪತ್ತೆ ಬಗ್ಗೆ ಸಾಕ್ಷ್ಯ ಸಮೇತ ಮಾಹಿತಿ ನೀಡುವವರಿಗೆ ನೀಡುವ ಬಹುಮಾನ ರೂ. 50,000 ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೂ ಹಾಗೂ ಇನ್ನುಳಿದ ರೂ. 50,000 ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿ.ಸಿ & ಪಿ.ಎನ್.ಡಿ.ಟಿ. ಶುಲ್ಕದಿಂದ ನೀಡಲು ಆದೇಶಿಸಿದೆ.