Sunday, June 30, 2024

ಸತ್ಯ | ನ್ಯಾಯ |ಧರ್ಮ

10 ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳನ್ನು ನೀಡುವಂತೆ ಭರವಸೆ: ಬಿಹಾರ ಸಿಎಂ

ಬಿಹಾರ: ರಾಜ್ಯದಲ್ಲಿನ ನಿರುದ್ಯೋಗ ಯುವಕರಿಗೆ 10ಲಕ್ಷಕ್ಕಿಂತ ಹೆಚ್ಚು ಉದ್ಯೋಗ ಅವಕಾಶಗಳನ್ನು ನೀಡುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಇದೊಂದು ಐತಿಹಾಸಿಕ ದಿನ ಮತ್ತು ಐತಿಹಾಸಿಕ ಸ್ಥಳದಿಂದ ಸಿಎಂ ಘೋಷಿಸಿದ್ದಾರೆ. ನಾವು 10 ಲಕ್ಷ ಉದ್ಯೋಗಗಳನ್ನು ನೀಡುತ್ತೇವೆ ಮತ್ತು ಅದನ್ನು 20 ಲಕ್ಷಕ್ಕೆ ಹೆಚ್ಚಿಸಲು ಬಯಸುತ್ತೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ,  ನಾವು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡುತ್ತೇವೆ. ಈ ವಿಷಯವಾಗಿ ನಾವು ನಿತೀಶ್‌ ಅವರಿಗೆ ಧನ್ಯವಾದ ಹೇಳುತ್ತೇವೆ. ಇದು ಯುವಕರ ಗೆಲುವು ಮತ್ತು ಬಿಹಾರದ ಗೆಲುವು ಕೂಡ ಹೌದು ಎಂದು ಹೇಳಿದರು.

 

Related Articles

ಇತ್ತೀಚಿನ ಸುದ್ದಿಗಳು